upi full form : ಯೂನಿಫಿಡ್ ಪೇಮೆಂಟ್ಸ್ ಇಂಟರ್ಫೆಸ್ (UPI). ಏಕೀಕೃತ ಪಾವತಿ ವ್ಯವಸ್ಥೆ. ಬಗೆಗಿನ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿಯೋಣ.
UPI ಎಂದರೆ Unified payments Interface. ಕನ್ನಡದಲ್ಲಿ ಏಕೀಕೃತ ಪಾವತಿ ವ್ಯವಸ್ಥೆ ತಿನ್ನಬಹುದು . ವ್ಯಾಪಾರ ವ್ಯವಹಾರಕ್ಕಾಗಿ, ಹಣಕಾಸಿನ ವರ್ಗಾವಣೆಗೆ ಬಳಸುವ ಒಂದು ಮುಖ್ಯ ವ್ಯವಸ್ಥೆ. ಅಂದರೆ ಒಬ್ಬರಿಂದ ಇನ್ನೊಬ್ಬರಿಗೆ ಅತಿ ಸುಲಭವಾಗಿ ಹಣವನ್ನು ವರ್ಗಾವಣೆ ಮಾಡುವ ವ್ಯವಸ್ಥೆ. ಉದಾಹರಣೆಗೆ ವ್ಯವಹಾರದಲ್ಲಿ, ಶಾಪಿಂಗ್ ಮಾಡುವಲ್ಲಿ, ಹೋಟೆಲ್ ಗಳಲ್ಲಿ, ದಿನಸಿ ವ್ಯಾಪಾರಿಗಳಲ್ಲಿ, ಕಾಫಿ ಶಾಪಗಳಲ್ಲಿ, ಆನ್ಲೈನ್ ಪಾವತಿ ಮಾಡುವಲ್ಲಿ, ಹಣವನ್ನು ವರ್ಗಾವಣೆ ಮಾಡಲು ಒಂದು ಸರಳವಾದ ವ್ಯವಸ್ಥೆ ಎಂದರೆ ಯುಪಿಐ (UPI).
ಇಂದಿನ ದಿನದಲ್ಲಿ ಎಲ್ಲಾ ಕಡೆಗಳಲ್ಲಿಯೂ ಸಹ ಈ ವ್ಯವಸ್ಥೆ ಜಾರಿಯಲ್ಲಿದೆ. ಎಲ್ಲಾ ಬ್ಯಾಂಕುಗಳು ಮತ್ತು ಫೈನಾನ್ಸ್ ಕಂಪನಿಗಳು UPI ಸೌಲಭ್ಯವನ್ನು ಜನರಿಗೆ ನೀಡಿವೆ. ಫೋನ್ ಪೇ, ಗೂಗಲ್ ಪೇ, ಅಮೆಜಾನ್ ಪೇ, ಪೇಟಿಎಂ, ಭಾರತ್ ಪೇ, ಹೀಗೇ ಅನೇಕ ಕಂಪನಿಗಳು ಯುಪಿಐ ಸೌಲಭ್ಯವನ್ನು ಜನರಿಗೆ ನೀಡಿವೆ. ಸುಲಭವಾಗಿ ಹಣಕಾಸಿನ ವ್ಯವಹಾರ ಮಾಡಲು ಇದು ಒಂದು ಉತ್ತಮ ವ್ಯವಸ್ಥೆಯಾಗಿದೆ.
upi full form : ವಿವರ ಹೀಗಿದೆ.
upi full form : unified payments interface. ಕನ್ನಡದಲ್ಲಿ ಇದನ್ನು ಏಕೀಕೃತ ಪಾವತಿ ವ್ಯವಸ್ಥೆಯೆಂದು ಕರೆಯುತ್ತಾರೆ. ಎಲ್ಲಾ ಬ್ಯಾಂಕ್ಗಳು ಸೇರಿ ಹಣ ವರ್ಗಾವಣೆಗೆ ಮತ್ತು ಪಾವತಿ ಮಾಡಲು ಒಂದು ವ್ಯವಸ್ಥೆಯನ್ನು ಜಾರಿಗೆ ತಂದರು ಅದೇ UPI ವ್ಯವಸ್ಥೆ. ಈ ವ್ಯವಸ್ಥೆಯಲ್ಲಿ ಹಣವನ್ನು ಅತಿ ಸುಲಭವಾಗಿ ಪಾವತಿ ಮತ್ತು ವರ್ಗಾವಣೆ ಮಾಡಬಹುದು.
ಈಗಿನ ಕಾಲದಲ್ಲಿ ಬಹುತೇಕ ಎಲ್ಲಾ ಕಡೆಗಳಲ್ಲಿ ನಗದು ವ್ಯವಹಾರ ಕಡಿಮೆಯಾಗಿದೆ. ಎಲ್ಲಾ ಕಡೆಗಳಲ್ಲಿಯೂ ಸಹ ಆನ್ಲೈನ್ ವ್ಯವಹಾರ ಜಾರಿಯಲ್ಲಿದೆ. ಹೀಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಆಯೋಗದಲ್ಲಿ ಎಲ್ಲಾ ಬ್ಯಾಂಕ್ಗಳು ಸೇರಿ ಯುಪಿಐ ವ್ಯವಸ್ಥೆಯನ್ನು ಜಾರಿಗೆ ತಂದಿವೆ. ಈಗಿನ ಕಾಲಕ್ಕೆ ಇದು ಅನಿವಾರ್ಯ. ಎಲ್ಲಾ ಕಡೆಗಳಲ್ಲಿ ಹೊಸ ಈ ವ್ಯವಸ್ಥೆ ಜಾರಿಯಲ್ಲಿದೆ. ಅತಿ ಸುಲಭವಾಗಿ ಹಣ ವರ್ಗಾವಣೆ ಮಾಡುವುದರಿಂದ ಈ ವ್ಯವಸ್ಥೆಗೆ ಜನರು ಹೊಂದಿಕೊಂಡಿದ್ದಾರೆ.
ಈಗಿನ ಕಾಲದಲ್ಲಿ ಎಲ್ಲರ ಕೈ ಅಲ್ಲಿಯೂ ಸಹ ಸ್ಮಾರ್ಟ್ ಫೋನ್ ಗಳು ಇದ್ದೇ ಇರುತ್ತದೆ. ಯುಪಿಐ ವ್ಯವಸ್ಥೆಯನ್ನು ಬಳಸಲು ಸ್ಮಾರ್ಟ್ ಫೋನ್ ಗಳ ಅವಶ್ಯಕತೆ ಇದೆ ಮತ್ತು ಇಂಟರ್ನೆಟ್ ಗಳ ಸಹಾಯ ಬೇಕಾಗುತ್ತದೆ. ಯುಪಿಐ ವ್ಯವಸ್ಥೆ ಯು ಆನ್ಲೈನ್ ಮೂಲಕ ಕಾರ್ಯನಿರ್ವಹಿಸುತ್ತದೆ. ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಯುಪಿಐಗೆ ಸಂಬಂಧಿಸಿದ ಆ್ಯಪನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.. ಅನೇಕ ಕಂಪನಿಗಳು ಯುಪಿಐ ಗೆ ಸಂಬಂಧಿಸಿದಂತೆ ಆಪ್ ಗಳನ್ನು ನೀಡಿವೆ. ಅದರಲ್ಲಿ ನಿಮಗೆ ಯಾವುದು ಇಷ್ಟವೋ ಆ ಕಂಪನಿಯ ಯುಪಿಐಯನ್ನು ಇನ್ಸ್ಟಾಲ್ ಮಾಡಿಕೊಳ್ಳಬಹುದು.
ಯುಪಿಐಗೆ ಸಂಬಂಧಿಸಿದ ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಂಡ ನಂತರ, ಮೊಬೈಲ್ ನಂಬರ್ ಮತ್ತು ಬ್ಯಾಂಕಿನ ವಿವರಗಳನ್ನು ಅಪ್ಲೋಡ್ ಮಾಡಬೇಕು. SMS ವ್ಯವಸ್ಥೆಯ ಮೂಲಕ ನಿಮ್ಮ ಯುಪಿಐ ವ್ಯವಸ್ಥೆಗೆ ಬ್ಯಾಂಕ್ ವ್ಯವಸ್ಥೆಯ ಲಿಂಕ್ ಆಗುತ್ತದೆ. ನಂತರ ನೀವು ಹಣಕಾಸಿನ ವ್ಯವಹಾರವನ್ನು ನಡೆಸಬಹುದು. ಉದಾಹರಣೆಗೆ ಗೂಗಲ್ ಪೇ, ಫೋನ್ ಪೇ, ಪೇಟಿಎಂ, ಅಮೆಜಾನ್ ಪೇ, ಇನ್ನು ಮುಂತಾದ ಅನೇಕ ಕಂಪನಿಗಳು ಯುಪಿಐ ವ್ಯವಸ್ಥೆಯನ್ನು ಜನರಿಗೆ ನೀಡಿವೆ.
ಏಕೀಕೃತ ಪಾವತಿ ವ್ಯವಸ್ಥೆಯು ಹಣಕಾಸಿನ ಸುಲಭ ವರ್ಗಾವಣೆ ಮತ್ತು ಪಾವತಿ ಮಾಡುವ ವಿಧಾನಕ್ಕೆ ಸಹಕಾರಿಯಾಗಿದೆ.ಒಂದೇ UPI ಅಪ್ಲಿಕೇಶನ್ ನಲ್ಲಿ ಹಲವು ಬ್ಯಾಂಕ್ ಖಾತೆಗಳನ್ನು ಲಿಂಕ್ ಮಾಡಿಕೊಳ್ಳಬಹುದು. ಇದು ಒಂದು ಉತ್ತಮ ಸೌಲಭ್ಯವಾಗಿದೆ.
upi full form : ಯೂನಿಫಿಡ್ ಪೇಮೆಂಟ್ಸ್ ಇಂಟರ್ಫೆಸ್ (UPI).ಉಪಯೋಗಗಳು.
upi full form : ಯೂನಿಫಿಡ್ ಪೇಮೆಂಟ್ಸ್ ಇಂಟರ್ಫೆಸ್ (UPI). ಯ ಉಪಯೋಗಗಳನ್ನು ತಿಳಿದುಕೊಳ್ಳೋಣ. ಇದು ಹಣವನ್ನು ಪಾವತಿ ಮತ್ತು ವರ್ಗಾವಣೆ ಮಾಡಲು ಇರುವ ಒಂದು ಉತ್ತಮ ವ್ಯವಸ್ಥೆಯಾಗಿದೆ. ಇದರಿಂದ ಜನರಿಗೆ ಅನೇಕ ಉಪಯೋಗಗಳು ಇದೆ.
1. ಸುಲಭವಾಗಿ ಹಣ ಪಾವತಿ ಮತ್ತು ವರ್ಗಾವಣೆ : ಯುಪಿಐನ ಮೂಲಕ ನೀವು ಅತಿ ಸುಲಭವಾಗಿ ಹಣ ಪಾವತಿ ಮತ್ತು ವರ್ಗಾವಣೆಯನ್ನು ಮಾಡಬಹುದು.
2. ಅತಿ ವೇಗ ಹಣ ವರ್ಗಾವಣೆ : ಯುಪಿಐ ಮುಖಾಂತರ ಒಬ್ಬರಿಂದ ಇನ್ನೊಬ್ಬರಿಗೆ ಅತಿ ಬೇಗವಾಗಿ ಹಣವನ್ನು ವರ್ಗಾವಣೆ ಮಾಡಬಹುದು.
3. ಎಲ್ಲಾ ಸಮಯದಲ್ಲೂ ಹಣ ವರ್ಗಾವಣೆ ಮಾಡಬಹುದು : ಯುಪಿಐ ಮೂಲಕ ಹಣ ವರ್ಗಾವಣೆ ಮಾಡಲು ಯಾವುದೇ ಸಮಯದ ಮಿತಿ ಇರುವುದಿಲ್ಲ. ಬ್ಯಾಂಕ್ ಗಳ ವ್ಯವಹಾರದ ಹಾಗೆ ಯಾವುದೇ ಸಮಯದ ಮಿತಿ ಇರುವುದಿಲ್ಲ. ದಿನದ 24 ಗಂಟೆಗಳಲ್ಲಿಯೂ ಸಹ ವ್ಯವಹಾರವನ್ನು ಮಾಡಬಹುದು.
4. ಆನ್ಲೈನ್ ವ್ಯವಹಾರಕ್ಕೆ ಅನುಕೂಲ: ಯುಪಿಐ ವ್ಯವಸ್ಥೆಯಿಂದ ಆನ್ಲೈನ್ ವ್ಯವಹಾರಕ್ಕೆ ತುಂಬಾನೇ ಅನುಕೂಲವಾಗಿದೆ. ಈಗಿನ ಕಾಲದಲ್ಲಿ ಎಲ್ಲಾ ಕಡೆಗಳಲ್ಲಿಯೂ ಆನ್ಲೈನ್ ವ್ಯವಸ್ಥೆ ಜಾರಿಯಲ್ಲಿ ಇರುವುದರಿಂದ, ಈ ಯುಪಿಐ ವ್ಯವಸ್ಥೆಯು ಅತ್ಯಂತ ಪ್ರಯೋಜನಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.
5. ಸುರಕ್ಷಿತ ವ್ಯವಹಾರ: ಯುಪಿಐ ನಿಂದ ಮಾಡುವ ವ್ಯವಹಾರವು ಸುರಕ್ಷತೆಯಿಂದ ಕೂಡಿರುತ್ತದೆ. ಯುಪಿಐ ಅಪ್ಲಿಕೇಶನ್ ನಲ್ಲಿ ನೀವು ಸೆಕ್ಯೂರಿಟಿ ಪಿನ್ನನ್ನು ಕ್ರಿಯೇಟ್ ಮಾಡಿರುವುದರಿಂದ ಸುರಕ್ಷಿತ ವ್ಯವಹಾರಕ್ಕೆ ಅನುಕೂಲವಾಗಿದೆ. ಬೇರೆ ಯಾರು ಸಹ ಹಣ ವರ್ಗಾವಣೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.
6. ಹೆಚ್ಚು ವಿವರಗಳ ಅಗತ್ಯ ಇರುವುದಿಲ್ಲ : ಬ್ಯಾಂಕ್ ಗಳಲ್ಲಿ ಹಣ ವರ್ಗಾವಣೆ ಮಾಡಬೇಕಾದರೆ, ಬ್ಯಾಂಕ್ ಖಾತೆಯ ಸಂಖ್ಯೆ, ಬ್ಯಾಂಕಿನ ಐಎಫ್‌ಎಸ್‌ಸಿ ಕೋಡ್, ಮೊಬೈಲ್ ಸಂಖ್ಯೆ, ಬ್ರಾಂಚ್ ವಿಳಾಸ, ಹೀಗೆ ಅನೇಕ ವಿವರಗಳನ್ನು ನೀಡಬೇಕಾಗುತ್ತದೆ. ಆದರೆ ಯುಪಿಐ ಮೂಲಕ ಮೊಬೈಲ್ ಸಂಖ್ಯೆ ಅಥವಾ ಕ್ಯೂಆರ್ ಕೋಡ್ ಮೂಲಕ ಹಣವನ್ನು ಪಾವತಿ ಮಾಡಬಹುದು.
7. ಶುಲ್ಕ ಇರುವುದಿಲ್ಲ : ಯುಪಿಐ ಮೂಲಕ ಹಣ ವರ್ಗಾವಣೆ ಮಾಡಲು ಯಾವುದೇ ಶುಲ್ಕ ಇರುವುದಿಲ್ಲ. ಇದು ಸಹ ಜನರಿಗೆ ತುಂಬಾ ಅನುಕೂಲವಾಗಿದೆ.
8. ಸುಲಭ ಬ್ಯಾಲೆನ್ಸ್ ಚೆಕ್ : ಅತಿ ಸುಲಭವಾಗಿ ನಿಮ್ಮ ಖಾತೆಯಲ್ಲಿರುವ ಹಣವನ್ನು ಚೆಕ್ ಮಾಡಿಕೊಳ್ಳಬಹುದು. ಅದಕ್ಕಾಗಿ ಎಟಿಎಂ ಅಥವಾ ಬ್ಯಾಂಕಿಗೆ ಹೋಗುವ ಅವಶ್ಯಕತೆ ಇರುವುದಿಲ್ಲ.
9. ವಹಿವಾಟು ಇತಿಹಾಸ: ಯುಪಿಐ ಮೂಲಕ ನೀವು ಅತಿ ಸುಲಭವಾಗಿ ನಿಮ್ಮ ವ್ಯವಹಾರದ ವಹಿವಾಟನ್ನು ತಿಳಿದುಕೊಳ್ಳಬಹುದು. ಯಾವ ತಿಂಗಳಿನಲ್ಲಿ ಯಾರಿಗೆ ಹಣ ವರ್ಗಾವಣೆ, ಎಷ್ಟು ವ್ಯವಹಾರ ಇತ್ಯಾದಿ ಮಾಹಿತಿಗಳನ್ನು ತಿಳಿದುಕೊಳ್ಳಬಹುದು.
10. ನಗದು ರಹಿತ ವ್ಯವಹಾರಕ್ಕೆ ಉತ್ತೇಜನ ನೀಡುತ್ತದೆ : ಯುಪಿಐ ಮೂಲಕ ಹಣ ವರ್ಗಾವಣೆ ಮಾಡುವುದರಿಂದ, ನಗದು ವ್ಯವಹಾರ ಕಡಿಮೆಯಾಗಿದೆ. ಇದರಿಂದ ಜನರಿಗೆ ತುಂಬಾ ಅನುಕೂಲವಾಗಿದೆ.
upi full form : UPI ಹೇಗೆ ಕಾರ್ಯ ನಿರ್ವಹಿಸುತ್ತದೆ ಮತ್ತು ವ್ಯವಹಾರದ ಮಿತಿ ಏನು?.
upi full form : UPI ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಅದರ ವ್ಯವಹಾರದ ಮಿತಿಯ ಬಗ್ಗೆ ತಿಳಿದುಕೊಳ್ಳೋಣ. ಯುಪಿಐ ಒಂದು ಪಾವತಿ ವ್ಯವಸ್ಥೆಯಾಗಿದೆ. ಆನ್ಲೈನ್ ಮೂಲಕ ಹಣ ವರ್ಗಾವಣೆ ಮತ್ತು ಪಾವತಿಯನ್ನು ಮಾಡಬಹುದಾಗಿದೆ. ಇದು ಆನ್ಲೈನ್ ವ್ಯವಹಾರಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತದೆ. ಹೆಚ್ಚಿನ ಅನುಕೂಲವನ್ನು ಮಾಡಿಕೊಟ್ಟಿದೆ.
- ಮೊದಲಿಗೆ ನೀವು ಯುಪಿಐ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಬೇಕು.
- ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡ ನಂತರ ನಿಮ್ಮ ಮೊಬೈಲ್ ನಂಬರ್ ಅನ್ನು ಎಂಟ್ರಿ ಮಾಡಬೇಕು.
- ನಂತರ SMS ಮೂಲಕ ನಿಮ್ಮ ಮೊಬೈಲ್ ನಂಬರ್ ವೆರಿಫೈ ಆಗುತ್ತದೆ.
- ನಂತರ ನಿಮ್ಮ ಬ್ಯಾಂಕಿನ ವಿವರವನ್ನು ಅಪ್ಲೋಡ್ ಮಾಡಬೇಕು. ಅಂದರೆ ನಿಮ್ಮ ಮೊಬೈಲ್ ನಂಬರ್ ಗೆ ಬ್ಯಾಂಕ್ ಖಾತೆ ಲಿಂಕ್ ಆಗಿರುವುದರಿಂದ ಬ್ಯಾಂಕ್ ನ ಹೆಸರನ್ನು ಸೆಲೆಕ್ಟ್ ಮಾಡಿದರೆ, ಅದು ನಿಮ್ಮ ಬ್ಯಾಂಕಿನ ಮಾಹಿತಿಯನ್ನು ತೆಗೆದುಕೊಳ್ಳುತ್ತದೆ.
- ನಂತರ ಪಾವತಿ ಮತ್ತು ಹಣಕಾಸಿನ ವರ್ಗಾವಣೆ ವಿಧಾನಕ್ಕಾಗಿ ನಿಮ್ಮ ಎಟಿಎಂಬಿನ ಕೊನೆಯ ಆರು ಅಂಕೆಗಳನ್ನು ಎಂಟ್ರಿ ಮಾಡಬೇಕು.
- ನಂತರ ವೆರಿಫೈ ಆಗಿ ನಿಮ್ಮ ಯುಪಿಐ ಅಪ್ಲಿಕೇಶನ್ ಗೆ ಬ್ಯಾಂಕ್ ಖಾತೆ ಲಿಂಕ್ ಆಗುತ್ತದೆ.
- ನಂತರ ನೀವು ಹಣ ವರ್ಗಾವಣೆ ಮಾಡಲು ಎಂಪಿನ್ ಕ್ರಿಯೇಟ್ ಮಾಡಬೇಕು. ಇದು ನಿಮ್ಮ ಹಣ ವ್ಯವಹಾರದ ಸುರಕ್ಷತೆಗಾಗಿ ಮಾಡುವ ಒಂದು ಸೆಕ್ಯೂರಿಟಿ ವ್ಯವಸ್ಥೆಯಾಗಿದೆ.
- ನಂತರ ನೀವು QR ಕೋಡ್ ಅಥವಾ ಮೊಬೈಲ್ ಸಂಖ್ಯೆಯ ಮೂಲಕ ಹಣವನ್ನು ವರ್ಗಾವಣೆ ಮಾಡಬಹುದು.
- ಆನ್ಲೈನ್ ವ್ಯವಹಾರದಲ್ಲಿ QR ಕೋಡ್ ಸ್ಕ್ಯಾನ್ ಮಾಡುವ ಮೂಲಕ ಹಣವನ್ನು ಪಾವತಿ ಮಾಡಬಹುದು.
ಭಾರತ ದೇಶದಲ್ಲಿ, ಈಗಿನ ಡಿಜಿಟಲ್ ಯುಗದಲ್ಲಿ, ನಗದು ವ್ಯವಹಾರ ಕಡಿಮೆಯಾಗಿ, ನಗದು ರಹಿತ ವ್ಯವಹಾರಕ್ಕೆ ಹೆಚ್ಚಿನ ಮಾನ್ಯತೆ ದೊರಕಿದೆ. ಹೀಗಾಗಿ ಯುಪಿಐ ವ್ಯವಸ್ಥೆಯು ಒಂದು ಉತ್ತಮ ವ್ಯವಸ್ಥೆಯಾಗಿದೆ. ಅತಿ ಸುಲಭವಾಗಿ ಹಣಕಾಸು ವರ್ಗಾವಣೆ ಮಾಡುವಲ್ಲಿ ಸಹಕಾರಿಯಾಗಿದೆ. ಆನ್ಲೈನ್ ವ್ಯವಹಾರಕ್ಕೆ, ಶಾಪಿಂಗ್ ಹೋಟೆಲ್, ದಿನಸಿ ವ್ಯಾಪಾರ, ಮೊಬೈಲ್ ರೀಚಾರ್ಜ್, ಬಿಲ್ ಪೇಮೆಂಟ್, ಹೀಗೆ ಅನೇಕ ನಗದು ರಹಿತ ವ್ಯವಹಾರಕ್ಕೆ ಯುಪಿಐ ವ್ಯವಸ್ಥೆಯಿಂದ ತುಂಬಾನೇ ಅನುಕೂಲವಾಗಿದೆ.