ಮಣ್ಣಿನ ಮಡಿಕೆ ನೀರು ಬೇಸಿಗೆಯಲ್ಲಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಲೇಖನದಲ್ಲಿ ನಾವು ಈ ಮಡಿಕೆ ನೀರಿನ ಪ್ರಯೋಜನಗಳನ್ನು ತಿಳಿಯೋಣ. ಈಗಿನ ತಾಪಮಾನಕ್ಕೆ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯ, ದೇಹವನ್ನು ತಂಪಾಗಿಡುವುದು ತುಂಬಾ ಮುಖ್ಯ. ಬೇಸಿಗೆಯಲ್ಲಿ ಆರೋಗ್ಯದ ಹಿತ ದೃಷ್ಟಿಯಿಂದ ನಾವು ಈ ಮಡಿಕೆಯಲ್ಲಿ ಇಟ್ಟಂತಹ ನೀರನ್ನು ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಪ್ರತಿ ವರ್ಷಕ್ಕಿಂತ ಈ ವರ್ಷ ಬಿಸಿಲಿನ ತಾಪಮಾನ ಹೆಚ್ಚಾಗಿರುವುದರಿಂದ ದೇಹವನ್ನು ತಂಪಾದ ರೀತಿಯಲ್ಲಿ ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯ. ಇಲ್ಲದೆ ಹೋದರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರಬಹುದು ಅಂದರೆ ಅತಿಯಾದ ಬಿಸಿಲಿನ ತಾಪಮಾನಕ್ಕೆ ದೇಹ ಸರಿಯಾದ ರೀತಿಯಲ್ಲಿ ಆರೋಗ್ಯವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಅನಾರೋಗ್ಯ ಕ್ಕೆ ಕಾರಣವಾಗಬಹುದು.
ಬಾಯಾರಿಕೆ ತಣಿಸಲು ತಂಪಾದ ಪಾನೀಯಗಳ ಮೊರೆ ಹೋಗುವುದಕ್ಕಿಂತ ಈ ಮಡಿಕೆಯ ನೀರು ತುಂಬಾನೇ ಉಪಯುಕ್ತವಾಗಿದೆ. ಇದು ದೇಹವನ್ನು ತಂಪಾಗಿ ಇಡುವುದಲ್ಲದೆ, ಆರೋಗ್ಯವನ್ನು ಕಾಪಾಡುತ್ತದೆ. ಆದ್ದರಿಂದ ಬೇಸಿಗೆಯಲ್ಲಿ ನಿನ್ನ ಮಡಿಕೆಯಲ್ಲಿ ಇಟ್ಟ ನೀರು ಕುಡಿಯುವುದು ತುಂಬಾ ಆರೋಗ್ಯಕ್ಕೆ ಒಳ್ಳೆಯದು.
ಮಣ್ಣಿನ ಮಡಿಕೆಯ ಪರಿಚಯ.
ಮಣ್ಣಿನ ಮಡಿಕೆಯನ್ನು ಅನೇಕ ಹಿಂದಿನ ಕಾಲದಿಂದಲೂ ಬಳಸಲಾಗುತ್ತಿದೆ. ಇಂದಿನ ಕಾಲದಲ್ಲಿ ಯಾವುದೇ ಅಲ್ಯೂಮಿನಿಯಂ, ತಾಮ್ರ, ಸ್ಟೀಲ್, ಈ ತರಹದ ಯಾವುದೇ ಪಾತ್ರೆಗಳನ್ನು ಅಡುಗೆ ಮಾಡಲು ಉಪಯೋಗಿಸುತ್ತಿರಲಿಲ್ಲ. ಆದ್ದರಿಂದ ಇಂದಿನ ಕಾಲದಲ್ಲಿ ಆರೋಗ್ಯವು ತುಂಬಾ ಚೆನ್ನಾಗಿರುತ್ತಿತ್ತು.
ಪ್ರಕೃತಿದತ್ತ ವಾದಂತಹ, ನೈಸರ್ಗಿಕವಾದಂತಹ ಈ ಮಡಿಕೆಗಳಲ್ಲಿ ಅಡುಗೆ ಮಾಡುವ ಪದ್ಧತಿ ಇತ್ತು. ಇದರಿಂದ ಆರೋಗ್ಯವು ತುಂಬಾ ಚೆನ್ನಾಗಿರುತ್ತಿತ್ತು. ಈ ಮಡಿಕೆಯ ನೀರು ಕುಡಿಯುವುದರಿಂದ ನಮ್ಮ ದೇಹಕ್ಕೆ ಬೇಕಾಗುವಂತಹ ಪೋಷಕಾಂಶಗಳು ಸಿಗುತ್ತವೆ. ಇದು ಬಿಸಿಲಿನ ತಾಪಮಾನಕ್ಕೆ ನೀರನ್ನು ಬಿಸಿಯಾಗಿ ಮಾಡುವುದನ್ನು ತಡೆಯುತ್ತದೆ.
ನವೋದಯ ನೇಮಕಾತಿ 2024 ಇದನ್ನು ಓದಿ.
ಮಣ್ಣಿನ ಮಡಿಕೆಯ ಪ್ರಯೋಜನಗಳನ್ನು ತಿಳಿಯೋಣ.
ಮಣ್ಣಿನ ಮಡಿಕೆಯ ಪ್ರಯೋಜನಗಳನ್ನು ತಿಳಿಯೋಣ. ಈ ಮಡಿಕೆಯು ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು. ಮಣ್ಣಿನ ಮಡಿಕೆಯಲ್ಲಿದ್ದಂತಹ ನೀರು, ಮಾಡಿದಂತಹ ಅಡುಗೆ ಸೇವನೆ ಮಾಡುವುದರಿಂದ ನಮ್ಮ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ.
ದೇಹವನ್ನು ತಂಪಾಗಿಡಲು ಸಹಾಯಮಾಡುತ್ತದೆ : ಬೇಸಿಗೆಯಲ್ಲಿ ಈ ಮಡಿಕೆಯಲ್ಲಿ ಇಟ್ಟಂತಹ ನೀರು ಕುಡಿಯುವುದರಿಂದ ದೇಹ ತುಂಬಾನೇ ತಂಪಾಗಿ ಇರುತ್ತದೆ. ದೇಹವನ್ನು ಶಾಖದಿಂದ ರಕ್ಷಿಸುತ್ತದೆ. ಈ ಮಡಿಕೆಯಲ್ಲಿಟ್ಟಂತಹ ನೀರು ಯಾವುದೇ ಕಾರಣಕ್ಕೂ ಬಿಸಿಯಾಗುವುದಿಲ್ಲ.
ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ : ಈ ಮಡಿಕೆಯಲ್ಲಿ ಮಾಡಿದ ಅಡುಗೆ ಮತ್ತು ಶೇಖರಣೆ ಮಾಡಿಟ್ಟಂತಹ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಗೆ ತುಂಬಾನೇ ಸಹಾಯವಾಗುತ್ತದೆ. ದೇಹದಲ್ಲಿನ ಗ್ಲುಕೋಸ್ ಅಂಶವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.
ಉರಿಯುತವನ್ನು ಕಡಿಮೆ ಮಾಡುತ್ತದೆ : ಈ ಮಡಿಕೆಯಲ್ಲಿ ಇಟ್ಟಂತಹ ನೀರು ದೇಹದಲ್ಲಿ ಉಂಟಾಗುವಂತಹ ಉರಿಯುತವನ್ನು ಕಡಿಮೆ ಮಾಡುತ್ತದೆ. ದೇಹವನ್ನು ತಂಪಾಗಿ ಇಡುವುದರಿಂದ ದೇಹ ಅತಿಯಾದ ಉಷ್ಣ ಆಗುವುದನ್ನು ತಡೆಯುತ್ತದೆ.
ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ : ಈ ಬೇಸಿಗೆಯ ಬಿಸಿಲಿನಲ್ಲಿ ನಮ್ಮ ದೇಹದ ಚರ್ಮವು ಕಪ್ಪಾಗುತ್ತದೆ. ಈ ನೀರು ಕುಡಿಯುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ. ಚರ್ಮ ವನ್ನು ಬಿಸಿಲಿನಿಂದ ಕಾಪಾಡುತ್ತದೆ.
ಮಣ್ಣಿನ ಮಡಿಕೆಯಲ್ಲಿ ನೀರು ತಂಪಾಗಿರುವುದು ಹೇಗೆ?.
ಈ ಮಡಿಕೆ ಸಾಮಾನ್ಯವಾಗಿ ಖನಿಜ ಮತ್ತು ವಿದ್ಯುತ್ ಕಾಂತಿಯ ಶಕ್ತಿಯನ್ನು ಹೊಂದಿರುತ್ತದೆ. ಮಡಿಕೆ ತಯಾರಿಕೆಯಲ್ಲಿ ಜೇಡಿ ಮಣ್ಣನ್ನು ಬಳಸುವುದರಿಂದ ಅದು ಖನಿಜ ಮತ್ತು ವಿದ್ಯುತ್ ಕಾಂತಿಯ ಅಂಶವನ್ನು ಹೊಂದಿರುತ್ತದೆ.ಇದರಿಂದ ನೀರು ತುಂಬಾನೇ ತಂಪಾಗಿರಲು ಸಹಾಯ ಮಾಡುತ್ತದೆ. ಯಾವುದೇ ಫ್ರಿಡ್ಜ್ ರೆಫ್ರಿಜರೇಟರ್ ಅಲ್ಲಿ ಇರಿಸಿದ ನೀರು ಕುಡಿಯುವುದಕ್ಕಿಂತ ಈ ಮಡಿಕೆಯಲ್ಲಿ ಇಟ್ಟಂತಹ ನೀರು ಕುಡಿಯುವುದು ತುಂಬಾನೇ ಆರೋಗ್ಯಕ್ಕೆ ಒಳ್ಳೆಯದು.