RTE Right To Education : RTE ಎಂದರೇನು?, ಅರ್ಜಿ ಸಲ್ಲಿಸುವ ವಿಧಾನ, ಅರ್ಹತೆ, ಬೇಕಾಗುವ ದಾಖಲೆಗಳು ಮತ್ತು ಕೊನೆಯ ದಿನಾಂಕದ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ.
ಭಾರತ ಸರ್ಕಾರವು RTE ಉಚಿತ ಶಿಕ್ಷಣ ಕಾಯ್ದೆಯನ್ನು 04 ಆಗಸ್ಟ್ 2009 ರಂದು ಜಾರಿಗೆ ತರಲಾಯಿತು. ಭಾರತದಲ್ಲಿ ವಾಸಿಸುವಂತಹ ಆರು ವರ್ಷದಿಂದ 14 ವರ್ಷದ ಒಳಗಿನ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಗುರಿಯನ್ನು ಈ ಯೋಜನೆಯ ಹೊಂದಿದೆ. ಈ ಕಾಯ್ದೆಯು ಪ್ರತಿ ಮಗುವಿಗೆ ಶಿಕ್ಷಣದ ಹಕ್ಕನ್ನು ತನ್ನ ಮೂಲಭೂತ ಹಕ್ಕನ್ನಾಗಿ ಮಾಡಿದೆ.
ಬಹುತೇಕ ಪೋಷಕರಿಗೆ ತನ್ನ ಮಗುವನ್ನು ಉತ್ತಮ ಖಾಸಗಿ ಶಾಲೆಯಲ್ಲಿ ಓದಿಸಲು,ಪ್ರವೇಶ ಶುಲ್ಕ ಧರಿಸಲು ಆಗುವುದಿಲ್ಲ. ಅಂದರೆ ಪ್ರವೇಶ ಶುಲ್ಕ ದುಬಾರಿಯಾಗಿರುವುದರಿಂದ ಪ್ರವೇಶ ಮಾಡಿಸಲು ಸಾಧ್ಯವಾಗದೇ ಇರಬಹುದು. ಇಂತಹ ಸಮಸ್ಯೆಗಳಿಂದ ಪರಿಹಾರ ಪಡೆಯಲು RTE ಕಾಯ್ದೆ ಅನುಕೂಲವಾಗಿದೆ. ಈ ಲೇಖನದಲ್ಲಿ ನಾವು ಆರ್‌ಟಿಇ ಕಾಯ್ದೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು. 2024ರ RTE ಉಚಿತ ಶಿಕ್ಷಣಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಒಂದು ತಿಂಗಳುಗಳ ಕಾಲ ಮುಂದೂಡಲಾಗಿದೆ. ಪೋಷಕರು ಸಂಪೂರ್ಣ ಮಾಹಿತಿಯನ್ನು ಲೇಖನದ ಮುಂದಿನ ಭಾಗದಲ್ಲಿ ತಿಳಿದುಕೊಳ್ಳಬಹುದು.
RTE Right To Education : RTE ಎಂದರೇನು?.
RTE Right To Education : RTE ಎಂದರೇನು ಎಂಬುದನ್ನು ನೋಡೋಣ. ರೈಟ್ ಟು ಎಜುಕೇಶನ್ (Right To Education ) ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡುವ ಮುಖ್ಯ ಉದ್ದೇಶದಿಂದ ಈ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಉನ್ನತ ಮಟ್ಟದ ಖಾಸಗಿ ಶಾಲೆಗಳಲ್ಲಿ ಸಾಮಾನ್ಯ ವರ್ಗದವರಿಗೆ ಶೇಕಡ 25% ರಷ್ಟು ಸೀಟುಗಳನ್ನು ನೀಡುವಂತೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಬಡತನ ರೇಖೆಗಿಂತ ಕೆಳಗೆ ವಾಸಿಸುವಂತಹ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ದುರ್ಬಲತೆ ಹೊಂದಿರುವ ಮಕ್ಕಳಿಗೆ ಉನ್ನತ ಉಚಿತ ಶಿಕ್ಷಣ ನೀಡುವುದು ಮತ್ತು ಕಡ್ಡಾಯ ಶಿಕ್ಷಣ ನೀಡುವುದು ಹಾಗೂ ಮೂಲಭೂತ ಶಿಕ್ಷಣ ನೀಡುವುದು ಈ ಯೋಜನೆಯ ಪ್ರಮುಖ ಗುರಿಯಾಗಿದೆ.ಒಟ್ಟಾರೆಯಾಗಿ ಹೇಳುವುದಾದರೆ ಆಯ್ತು ಎಜುಕೇಶನ್ ಎಂದರೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡುವ ಒಂದು ಯೋಜನೆ.
ಈ ಯೋಚನೆಯಿಂದ ಅರ್ಜಿ ಸಲ್ಲಿಸಿ,ಪ್ರವೇಶ ಪಡೆಯಲು, ಅರ್ಹತೆ ಹೊಂದಲು ಏಪ್ರಿಲ್ 22,2024 ಕೊನೆಯ ದಿನವಾಗಿತ್ತು. ಆದರೆ ಬಹುತೇಕ ಜನರ ಮತ್ತು ಶಿಕ್ಷಣ ಇಲಾಖೆಯ ಮನವಿಯ ಮೇರೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು 20-05.2024 ರವರೆಗೆ ವಿಸ್ತರಿಸಲಾಗಿದೆ. ಆಸಕ್ತ ಪೋಷಕರು ಶಿಕ್ಷಣ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು.
ಶಿಕ್ಷಣ ಇಲಾಖೆಯ ಅಧಿಕೃತ ವೆಬ್ಸೈಟ್ ವಿಳಾಸ
RTE ಗೆ ಅರ್ಜಿ ಸಲ್ಲಿಸುವ ವಿಧಾನ ಮತ್ತು ಅರ್ಹತೆಗಳು.
RTE ಕಾಯ್ದೆಯಡಿಯಲ್ಲಿ ಉಚಿತ ಶಿಕ್ಷಣ ಮತ್ತು ಕಡ್ಡಾಯ ಶಿಕ್ಷಣ ಪಡೆಯಲು ಕೆಲವು ಅರ್ಹತೆಗಳನ್ನು ಹೊಂದಿರಬೇಕು. ಮೊದಲಿಗೆ ಆರ್ ಟಿ ಇ ಆರ್ ಟಿ ಇಗೆ ಅರ್ಜಿ ಸಲ್ಲಿಸುವ ವಿಧಾನವನ್ನು ತಿಳಿಯೋಣ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಗಳಲ್ಲಿ ಆರ್ ಟಿ ಇ ಅರ್ಜಿಗಳನ್ನು ಉಚಿತವಾಗಿ ಸಲ್ಲಿಸಬಹುದು. ಅಥವಾ ಆನ್ಲೈನ್ ಮೂಲಕವೂ ಸಹ ಅರ್ಜಿಗಳನ್ನು ಸಲ್ಲಿಸಬಹುದು. ಸಿ ಎಸ್ ಸಿ ಸೇವ ಕೇಂದ್ರದ ಮೂಲಕ, ಬೆಂಗಳೂರು ಒನ್, ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರ, ಗ್ರಾಮ 1 ಸೇವಾ ಕೇಂದ್ರ ದ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಮತ್ತು ಮೊಬೈಲ್ ನಲ್ಲಿಯೂ ಸಹ ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.
ಶಿಕ್ಷಣ ಇಲಾಖೆಯ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.
- ಮೊದಲಿಗೆ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
- ನಂತರ ಆರ್ ಟಿ ಇ ಪ್ರವೇಶ ಫಾರಂ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
- ಅರ್ಜಿ ನಮೂನೆ ತೆರೆದ ನಂತರ ಅಗತ್ಯವಿರುವ ಎಲ್ಲಾ ದಾಖಲೆ ಮತ್ತು ಮಾಹಿತಿಗಳನ್ನು ಸಲ್ಲಿಸಬೇಕು.
- ಅರ್ಜಿ ಸಲ್ಲಿಸುವಾಗ ಅಗತ್ಯವಾದ ದಾಖಲೆಗಳನ್ನು ಬ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
- ಅರ್ಜಿಗಳನ್ನು ಸಂಪೂರ್ಣ ಭರ್ತಿ ಮಾಡಿದ ಮೇಲೆ ವಿವರಗಳು ಸರಿಯಾಗಿದೆಯೇ ಎಂಬುದನ್ನು ತಿಳಿದುಕೊಳ್ಳಬೇಕು. ನಂತರ ಸಬ್ಮಿಟ್ ಮಾಡಬೇಕು.
- ಕೊನೆಯದಾಗಿ ಸಲ್ಲಿಸಿದ ಅರ್ಜಿ ನಮೂನೆಯನ್ನು ಪ್ರಿಂಟ್ ಔಟ್ ತೆಗೆದುಕೊಳ್ಳಬೇಕು.
ಅರ್ಹತೆಗಳು:
1. ಹಿಂದುಳಿದ ಮತ್ತು ದುರ್ಬಲ ವರ್ಗದ ಮಕ್ಕಳು : ಈ ವರ್ಗದ ಮಕ್ಕಳು ಆರ್ ಟಿ ಇ ಮುಖಾಂತರ ಅರ್ಜಿ ಸಲ್ಲಿಸಿ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಪಡೆಯಬಹುದು.
2.ಕಡ್ಡಾಯವಾಗಿ ರಾಜ್ಯದಲ್ಲಿ ವಾಸಿಸುತ್ತಿರಬೇಕು: ಕರ್ನಾಟಕ ರಾಜ್ಯದಲ್ಲಿ ಕಡ್ಡಾಯವಾಗಿ ವಾಸಿಸುತ್ತಿರಬೇಕು.
3. ಎಲ್ ಕೆ ಜಿ ಗೆ ಪ್ರವೇಶ ಪಡೆಯುವ ವಿದ್ಯಾರ್ಥಿಯ ವಯಸ್ಸು ಮೂರು ವರ್ಷ ಐದು ತಿಂಗಳಿಂದ ಐದು ವರ್ಷದ ಒಳಗೆ ಇರಬೇಕು.
4. ಒಂದನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳು ಐದು ವರ್ಷದಿಂದ ಏಳು ವರ್ಷದ ಒಳಗೆ ಇರಬೇಕು.
5. ಕುಟುಂಬದ ವಾರ್ಷಿಕ ಆದಾಯವು ಮೂರುವರೆ ಲಕ್ಷಕ್ಕಿಂತ ದಾಟಿರಬಾರದು.
6. ದುರ್ಬಲ ವರ್ಗದ ಮಕ್ಕಳಿಗೆ ಆದ್ಯತೆ ನೀಡಲಾಗುವುದು. ಉದಾಹರಣೆಗೆ ಅನಾಥ ಮಕ್ಕಳು, ವಿಕಲಚೇತನ ಮಕ್ಕಳು, ಟ್ರಾನ್ಸ್ ಜೆಂಡರ್ ಮಕ್ಕಳು, ಎಚ್ಐವಿ ಸೋಂಕಿತ ಮಕ್ಕಳು ಇತ್ಯಾದಿ.
ಆರ್ ಟಿ ಇ ಮೂಲಕ ಪ್ರವೇಶ ಪಡೆಯುವ ಮಕ್ಕಳಿಗೆ ಈ ಮೇಲಿನ ರಥಮಾನ ತಂಡಗಳನ್ನು ನೀಡಲಾಗಿದೆ.
RTE ಮೂಲಕ ಪ್ರವೇಶ ಪಡೆಯಲು ಬೇಕಾಗಿರುವ ದಾಖಲೆಗಳು.
RTE ಮೂಲಕ ಅರ್ಜಿ ಸಲ್ಲಿಸಿ ಉಚಿತ ಶಿಕ್ಷಣ ಮತ್ತು ಕಡ್ಡಾಯ ಶಿಕ್ಷಣವನ್ನು ಪಡೆಯಲು ವಿದ್ಯಾರ್ಥಿಗಳು ಈ ಕೆಳಗಿನ ದಾಖಲೆಗಳನ್ನು ಹೊಂದಿರಬೇಕು.
- ವಿದ್ಯಾರ್ಥಿಯ ಜನನ ಪ್ರಮಾಣ ಪತ್ರ : ಆರ್ ಟಿ ಇ ಮೂಲಕ ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯಲು ವಿದ್ಯಾರ್ಥಿಯ ಜನನ ಪ್ರಮಾಣ ಪತ್ರ ಕಡ್ಡಾಯವಾಗಿ ಇರಬೇಕು.
- ಆದಾಯ ಪ್ರಮಾಣ ಪತ್ರ: ಆದಾಯವು ಮೂರುವರೆ ಲಕ್ಷಕ್ಕಿಂತ ಹೆಚ್ಚಿಗೆ ಇರಬಾರದು.
- ವಿದ್ಯಾರ್ಥಿಯ ಆಧಾರ್ ಕಾರ್ಡ್.
- ಜಾತಿ ಪ್ರಮಾಣ ಪತ್ರ.
- ಪೋಷಕರ ಆಧಾರ್ ಕಾರ್ಡುಗಳು (ತಂದೆ -ತಾಯಿ) ಅಥವಾ ಗಾರ್ಡಿಯನ್ಸ್ ( ನೋಡಿಕೊಳ್ಳುತ್ತಿರುವ ಪೋಷಕರು ).
ಈ ಮೇಲಿನ ದಾಖಲೆಗಳು ಕಡ್ಡಾಯವಾಗಿ ಇರಬೇಕು. ಹೆಚ್ಚಿನ ಮಾಹಿತಿಯನ್ನು ಪಡೆಯಲು ಶಿಕ್ಷಣ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬಹುದು. ಮತ್ತು ಈ ಕೆಳಗಿನ ಸಹಾಯವಾಣಿಗಳನ್ನು ಸಂಪರ್ಕಿಸಬಹುದು. ಸಹಾಯವಾಣಿ ಸಂಖ್ಯೆ. 1800-425-34567 ಅಥವಾ 080- 2248716.
ಆರ್ ಟಿ ಇ ಉಚಿತ ಶಿಕ್ಷಣ ಕಾಯ್ತೆಯ ಪ್ರಮುಖ ಉದ್ದೇಶ ಎಲ್ಲರಿಗೂ ಕಡ್ಡಾಯ ಮತ್ತು ಉಚಿತ ಶಿಕ್ಷಣ ನೀಡುವುದು. ಕಡ್ಡಾಯ ಮತ್ತು ಉಚಿತ ಶಿಕ್ಷಣ ಪ್ರಾಥಮಿಕ ಶಿಕ್ಷಣವನ್ನು ನೀಡುವುದು. ಹೆಣ್ಣು ಮಗುವಿನ ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುವುದು. ಸಾಮಾನ್ಯ ವರ್ಗದವರ ಆರ್ಥಿಕ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ, ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಉಚಿತವಾಗಿ ನೀಡುವುದು ಈ ಕಾಯ್ದೆಯ ಮುಖ್ಯ ಉದ್ದೇಶವಾಗಿದೆ.
ಎಲ್ಲಾ ಖಾಸಗಿ ಶಾಲೆಗಳಲ್ಲಿ, ಅನುದಾನ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಶೇಕಡ 25% ನಷ್ಟು ಸೀಟುಗಳನ್ನು ಕಡ್ಡಾಯವಾಗಿ ಆರ್ ಟಿ ಇ ಮೂಲಕ ಅರ್ಜಿ ಸಲ್ಲಿಸಿದ ಮಕ್ಕಳಿಗೆ ನೀಡಬೇಕು. ನೀಡುವ ಮೂಲಕ ಆ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ನೀಡಬೇಕು. ಈ ಕಾಯ್ದೆಯಿಂದ ಅನೇಕ ಮಕ್ಕಳಿಗೆ ಮತ್ತು ಪೋಷಕರಿಗೆ ಅನುಕೂಲವಾಗಿದೆ. ಉತ್ತಮ ಶಿಕ್ಷಣ ಪಡೆಯುವಲ್ಲಿಯು ಸಹ ಸಹಕಾರಿ ಆಗಿದೆ.
RTE ಶಿಕ್ಷಣ ಹಕ್ಕು ಕಾಯ್ದೆಯ ಪ್ರಕಾರ ಎಲ್ಲಾ ಖಾಸಗಿ ಶಾಲೆಗಳು ಸಾಮಾಜಿಕವಾಗಿ ಹಿಂದುಳಿದ ಮತ್ತು ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಶೇಕಡ 25ರಷ್ಟು ಸೀಟ್ ಅನ್ನು ಮೀಸಲು ಇಟ್ಟು ಉಚಿತ ಶಿಕ್ಷಣ ನೀಡಬೇಕು.