Tharak7star

PMEGP LOAN : ಸ್ವಯಂ ಉದ್ಯೋಗಕ್ಕೆ ಸಾಲ ಯೋಜನೆ. ಅರ್ಜಿ ಸಲ್ಲಿಸುವ ವಿಧಾನ 2024.

PMEGP LOAN

PMEGP LOAN ಈ ಯೋಜನೆಯು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಯಾಗಿದೆ. ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಕಲ್ಪಿಸುವ ದೃಷ್ಟಿಯಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಸ್ವಂತ ಉದ್ಯೋಗ ಪ್ರಾರಂಭಿಸುವವರಿಗೆ ಕೇಂದ್ರ ಸರ್ಕಾರದಿಂದ ಸಬ್ಸಿಡಿ ರೂಪದಲ್ಲಿ ನೀಡುವ ಸಾಲ ಯೋಜನೆಯಾಗಿದೆ. ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ ಸ್ವಂತ ಉದ್ಯೋಗ ಪ್ರಾರಂಭಿಸುವವರಿಗೆ ಹಾರ್ದಿಕ ಸಹಾಯವನ್ನು ಮಾಡುತ್ತದೆ. ಇದು ಯುವಜನರ ಸ್ವಯಂ ಉದ್ಯೋಗ ಕನಸನ್ನು ನನಸು ಮಾಡಿದೆ. 

Pradhana Mantri Employment Generation Programme (PMEGP ) ಪಿ ಎಂ ಇ ಜಿ ಪಿ ಯೋಚನೆಯು ಸ್ವಂತ ಉದ್ಯೋಗ ಮಾಡುವವರಿಗೆ ಆಶಾದಾಯಕವಾದ ಯೋಜನೆಯಾಗಿದೆ. ಇದರಿಂದ ಎಷ್ಟೋ ಜನ ಯುವಕರು ಸ್ವಯಂ ಉದ್ಯೋಗ ಕೈಗೊಂಡು ಆರ್ಥಿಕ ಸ್ವಾವಲಂಬನೆಯನ್ನು ಪಡೆದಿದ್ದಾರೆ. ಈ ಯೋಚನೆಯು ಸಾಲ ನೀಡುವ ಜೊತೆಗೆ ಸಬ್ಸಿಡಿಯನ್ನು ನೀಡುತ್ತದೆ. ಇದು ಸರ್ಕಾರದ ಮಹತ್ವದ ಯೋಜನೆಯಾಗಿದೆ. ಯುವ ಜನತೆಗೆ ಸ್ವಂತ ದುಡಿಮೆ ಮಾಡಿ ತನ್ನ ಕಾಲ ಮೇಲೆ ತಾನು ನಿಲ್ಲಲು ಸಹಾಯ ಮಾಡುತ್ತದೆ.

ಈ ಲೇಖನದಲ್ಲಿ ನಾವು ಈ ಯೋಜನೆಯ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ. ಅಂದರೆ ಅರ್ಜಿ ಸಲ್ಲಿಸುವ ವಿಧಾನ, ಯಾರು ಅರ್ಜಿ ಸಲ್ಲಿಸಬಹುದು, ಯಾವ ಯಾವ ದಾಖಲೆಗಳು ಬೇಕು, ಎಷ್ಟು ಸಬ್ಸಿಡಿ ಸಿಗುತ್ತದೆ ಎಂಬ ಎಲ್ಲಾ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ.

PMEGP LOAN ಅರ್ಜಿ ಸಲ್ಲಿಸುವ ವಿಧಾನ.

PMEGP LOAN ಪಡೆಯಲು ಅರ್ಜಿ ಸಲ್ಲಿಸುವ ವಿಧಾನವನ್ನು ತಿಳಿಯೋಣ. ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ಸಹಾಯ ನೀಡುವ ಒಂದು ಯೋಜನೆಯಾಗಿದೆ. ಸಾಲ ನೀಡುವ ಜೊತೆಗೆ ಸಬ್ಸಿಡಿಯನ್ನು ಸಹ ನೀಡುತ್ತದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೇಂದ್ರ ಸರ್ಕಾರದ ಯೋಜನೆಯ ಅಧಿಕೃತ ವೆಬ್ ಸೈಟ್ https://www.kviconline.gov.in/pmegpeportal/pmegphome/index.jsp ಗೆ ಭೇಟಿ ನೀಡಬಹುದು.

ಹೊಸ ಹೊಸ ಉದ್ಯೋಗ ಸೃಷ್ಟಿಸುವ ಯುವ ಜನರಿಗೆ ಇದು ಆಶಾದಾಯಕವಾದ ಯೋಜನೆಯಾಗಿದೆ. ಹೊಸ ಉದ್ಯಮಗಳು ಆರಂಭವಾದಂತೆ ಉತ್ಪಾದನೆ ಗುಣಮಟ್ಟ ಹೆಚ್ಚುತ್ತದೆ, ಜನರ ಬೇಡಿಕೆಗಳು ಪೂರೈಕೆ ಮಾಡಿದಂತಾಗುತ್ತದೆ. ಇದರಿಂದ ಉದ್ಯೋಗ ಸೃಷ್ಟಿಯಾಗುತ್ತದೆ. ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಯೋಜನೆಯ ಅರ್ಜಿ ಸಲ್ಲಿಸುವುದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಯೋಜನೆಗೆ ನೀವು ಅರ್ಜಿ ಸಲ್ಲಿಸಿದ ಮೇಲೆ ಎಲ್ಲಾ ಅರ್ಜಿಯ ಪ್ರತಿಯನ್ನು ಪಿಡಿಎಫ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬೇಕು. ಎಲ್ಲಾ ಮಾಹಿತಿಯನ್ನು ಸರಿಯಾದ ರೀತಿಯಲ್ಲಿ ತುಂಬಬೇಕು. ನಂತರ ಅದನ್ನು ನಿಮ್ಮ ಹತ್ತಿರದ ಜಿಲ್ಲಾ ಮಟ್ಟದಲ್ಲಿ ಇರುವ KVIC /KVIB ಅಥವಾ DIC ಆಫೀಸ್ಗೆ ತಲುಪಿಸಬೇಕು.

ಹೆಚ್ಚಿನ ಮಾಹಿತಿಯನ್ನು ಪಡೆಯಲು https://www.kviconline.gov.in ಗೆ ಭೇಟಿ ಮಾಡಿ.

PMEGP LOAN ಗೆ ಅರ್ಜಿ ಸಲ್ಲಿಸಲು ಯಾವ ಯಾವ ದಾಖಲೆಗಳು ಬೇಕು.

PMEGP LOAN ಗೆ ಅರ್ಜಿ ಸಲ್ಲಿಸಲು ಯಾವ್ಯಾವ ದಾಖಲೆಗಳು ಬೇಕು ಎಂಬುದನ್ನು ತಿಳಿಯೋಣ. ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಯೋಜನೆಗೆ ಅರ್ಜಿ ಸಲ್ಲಿಸಿ ಸಾಲ ಪಡೆಯಲು ಮತ್ತು ಸಬ್ಸಿಡಿ ಪಡೆಯಲು ಈ ಕೆಳಗಿನ ದಾಖಲೆಗಳನ್ನು ಹೊಂದಿರಬೇಕು.

1. ಆಧಾರ್ ಕಾರ್ಡ್. (Aadhaar card ).

2. ಚುನಾವಣಾ ಗುರುತಿನ ಚೀಟಿ (Election card ).

3. ಪಾನ್ ಕಾರ್ಡ್ (Pan card ).

4.ಹೊಸದಾಗಿ ಪ್ರಾರಂಭ ಮಾಡುವ ಉದ್ಯಮದ ಸಂಪೂರ್ಣ ಪ್ರಾಜೆಕ್ಟ್ ರಿಪೋರ್ಟ್ ಬೇಕು.

5. ಆದಾಯ ಮತ್ತು ಜಾತಿ ದೃಢೀಕರಣ ಪತ್ರ.

ಈ ಹಿಂದೆ ಎಲ್ಲೂ ಸಾಲ ಪಡೆದಿಲ್ಲ ಎಂಬ ಕ್ಲಿಯರೆನ್ಸ್ ಸರ್ಟಿಫಿಕೇಟ್ ಬೇಕು. ಈ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಜಿಲ್ಲಾಮಟ್ಟದ ಜಿಲ್ಲಾ ಕೈಗಾರಿಕಾ ಕೇಂದ್ರಕ್ಕೆ ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು. ಅಥವಾ ಆನ್ಲೈನ್ ನಲ್ಲಿ ಸಂಸ್ಥೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬಹುದು. ಅಲ್ಲಿ ನಿಮಗೆ ಸಂಪೂರ್ಣ ಮಾಹಿತಿಯು ಸಿಗುತ್ತದೆ.

PMEGP LOAN ಅರ್ಹತೆ ಮತ್ತು ಮಾನದಂಡಗಳು.

PMEGP LOAN ಯೋಜನೆಗೆ ಅರ್ಜಿ ಸಲ್ಲಿಸಲು ಕೆಲವು ಅರ್ಹತೆ ಮತ್ತು ಮಾನದಂಡಗಳನ್ನು ಈ ಕೆಳಗಿನಂತೆ ನೀಡಲಾಗಿದೆ. ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಯೋಜನೆಗೆ ಅರ್ಜಿ ಸಲ್ಲಿಸಲು ಕೆಲವು ಅರ್ಹತಾ ಮಾನದಂಡಗಳನ್ನು ಹೊಂದಿರಬೇಕು. ಅವುಗಳೆಂದರೆ,

ಭಾರತದ ಪ್ರಜೆಯಾಗಿರಬೇಕು.

•ಸ್ವಯಂ ಉದ್ಯೋಗದಾರರು ಕನಿಷ್ಠ 18 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ನವರಾಗಿರಬೇಕು.

•ಕನಿಷ್ಠ ಪಕ್ಷ ವಿದ್ಯಾರ್ಹತೆ ಎಂಟನೇ ತರಗತಿ ಪಾಸ್ ಆಗಿರಬೇಕು.

•ಸ್ವಯಂ ಉದ್ಯೋಗದ ಬಗ್ಗೆ ತರಬೇತಿ ಹೊಂದಿದ ಯುವ ಜನರಿಗೆ ಮಾನ್ಯತೆ ನೀಡಲಾಗುವುದು. ಅಂದರೆ ಯುವಜನರು ಈಗಾಗಲೇ ಯಾವುದಾದರೂ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಿಂದ ತರಬೇತಿಯನ್ನು ಹೊಂದಿದ್ದರೆ ಅವರಿಗೆ ಮೊದಲ ಆದ್ಯತೆ ನೀಡಲಾಗುವುದು.

•ಈ ಹಿಂದೆ ಸರ್ಕಾರದ ಯಾವುದೇ ಸಬ್ಸಿಡಿ ಸಾಲ ಯೋಜನೆ ಯಿಂದ ಸಾಲವನ್ನು ಪಡೆದಿರಬಾರದು.

ಹೊಸ ಉದ್ಯಮ ಪ್ರಾರಂಭಿಸಲು ಪ್ರಾಜೆಕ್ಟ್ ರಿಪೋರ್ಟ್ ತಯಾರಿಸಿಕೊಂಡಿರಬೇಕು. ಅಂದರೆ ಏನು ಸ್ವಯಂ ಉದ್ಯೋಗ ಮಾಡುತ್ತೀರಿ ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಬೇಕು. ನಿಮ್ಮ ಉದ್ಯಮದಲ್ಲಿ ಎಷ್ಟು ಜನ ಕೆಲಸ ಮಾಡುತ್ತಾರೆ. ಎಷ್ಟು ವೆಚ್ಚದಲ್ಲಿ ಕೈಗಾರಿಕೆಯನ್ನು ಅಥವಾ ಉದ್ಯಮವನ್ನು ಪ್ರಾರಂಭ ಮಾಡುತ್ತೀರಿ, ತಯಾರಿಕಾ ಘಟಕ ಹೇಗೆ ಕೆಲಸ ನಿರ್ವಹಿಸುತ್ತದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪ್ರಾಜೆಕ್ಟ್ ರಿಪೋರ್ಟ್ ನಲ್ಲಿ ನೀಡಬೇಕು.

PMEGP LOAN ಯಾರಿಗೆ, ಎಷ್ಟು ಸಬ್ಸಿಡಿ ಸಿಗುತ್ತದೆ.

PMEGP LOAN ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ ಇಂದ ಯಾರಿಗೆ, ಎಷ್ಟು ಸಬ್ಸಿಡಿ ಸಿಗುತ್ತದೆ ಎಂಬುದನ್ನು ತಿಳಿಯೋಣ. ಅಂದರೆ ಯಾವ ಯಾವ ಕ್ಯಾಟಗರಿಯವರಿಗೆ ಯಾವ ಯಾವ ಸಬ್ಸಿಡಿ ಸಿಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. ಯೋಜನೆಯಡಿಯಲ್ಲಿ 25 ಲಕ್ಷದಿಂದ 50 ಲಕ್ಷಗಳವರೆಗೆ ಸಾಲ ಸಿಗುತ್ತದೆ.

ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಯೋಜನೆಯಡಿ ಸಾಲ ಸೌಲಭ್ಯ ಪಡೆಯುವ ಯುವಜನರಿಗೆ ಶೇಕಡಾ 15% ರಿಂದ 35% ವರೆಗೆ ಸಬ್ಸಿಡಿ ಸಿಗುತ್ತದೆ. ಯಾವ ಯಾವ ಕ್ಯಾಟೆಗರಿಯವರಿಗೆ ಎಷ್ಟು ಸಬ್ಸಿಡಿ ಸಿಗುತ್ತದೆ ಎಂದು ತಿಳಿಯೋಣ.

ಸಾಮಾನ್ಯ ಕ್ಯಾಟಗರಿಯವರಿಗೆ 15% ರಿಂದ 25 ಪರ್ಸೆಂಟ್ ಸಬ್ಸಿಡಿ ಸಿಗುತ್ತದೆ. ಇದನ್ನು ಗ್ರಾಮೀಣ ಮತ್ತು ನಗರ ಪ್ರದೇಶಕ್ಕೆ ಡಿವೈಡ್ ಮಾಡಲಾಗಿದೆ.

SC/ST, OBC, ಅಲ್ಪಸಂಖ್ಯಾತರು, ಮಹಿಳೆಯರು, ಮಾಜಿ ಸೈನಿಕರು, ವಿಶೇಷ ಚೇತನರು ಹಾಗೂ ಗುಡ್ಡಗಾಡು ಪ್ರದೇಶದ ವರಿಗೆ ಶೇಕಡ 25 ರಿಂದ 35 ಪರ್ಸೆಂಟ್ ಸಬ್ಸಿಡಿ ಸಿಗುತ್ತದೆ. ಯೋಜನೆಯ ಸಹಾಯವನ್ನು ಪಡೆದು ಸ್ವಯಂ ಉದ್ಯೋಗಿಗಳಾಗಲು ಸರಿಯಾದ ಮಾಹಿತಿಯನ್ನು ತಿಳಿದು ಅರ್ಜಿಯನ್ನು ಸಲ್ಲಿಸಿ ಸಾಲವನ್ನು ಪಡೆಯಿರಿ.

ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆಯ ಕೇಂದ್ರ ಸರ್ಕಾರದ ಎಂಎಸ್ಎಂಇ ಸಚಿವಾಲಯದ ಅಡಿಯಲ್ಲಿ ಕೆಲಸ ನಿರ್ವಹಿಸುತ್ತದೆ. ರಾಷ್ಟ್ರಮಟ್ಟದಲ್ಲಿ ಖಾದಿ ಗ್ರಾಮೋದ್ಯೋಗ ಆಯೋಗ ಮತ್ತು ರಾಜ್ಯ ಮಟ್ಟದಲ್ಲಿ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಹಾಗೂ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರ ಗಳು ಕೆಲಸ ನಿರ್ವಹಿಸುತ್ತವೆ.

ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆಯ ಸಂಪೂರ್ಣ ಮಾಹಿತಿಯನ್ನು ರಾಷ್ಟ್ರ ರಾಜ್ಯ ಮತ್ತು ಜಿಲ್ಲಾ ಮಟ್ಟದ ಕೈಗಾರಿಕಾ ಕೇಂದ್ರಗಳಿಂದ ಎಲ್ಲಾ ಮಾಹಿತಿಯನ್ನು ಪಡೆಯಬಹುದು.

Leave a Reply

Your email address will not be published. Required fields are marked *