PM Svanidhi Yojane In Kannada : ಪ್ರಧಾನಮಂತ್ರಿ ಸ್ವ ನಿಧಿ ಯೋಜನೆ ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರಕ್ಕಾಗಿ ಸಾಲ ನೀಡುವ ಯೋಜನೆಯಾಗಿದೆ.
ಈ ಲೇಖನದಲ್ಲಿ ನಾವು ಪ್ರಧಾನಮಂತ್ರಿ ಸ್ವ ನಿಧಿ ಯೋಜನೆ ಎಂದರೇನು?, ಯಾರು ಈ ಯೋಜನೆಯ ಲಾಭವನ್ನು ಪಡೆಯಬಹುದು, ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?, ಈ ಯೋಜನೆಯ ಪ್ರಮುಖ ಉದ್ದೇಶ ಏನು, ಎಂಬ ಸಂಪೂರ್ಣ ಮಾಹಿತಿಯನ್ನು ವಿವರಿಸಲಾಗಿದೆ.
ಕೇಂದ್ರ ಸರ್ಕಾರದ ಯೋvನೆಗಳಲ್ಲಿ ಪ್ರಧಾನಮಂತ್ರಿ ಸ್ವನಿಧಿ ಯೋಜನೆಯ ಒಂದು. ಇದು ಬೀದಿ ಬದಿ ವ್ಯಾಪಾರಿಗಳಿಗೆ ಯಾವುದೇ ಆಧಾರವಿಲ್ಲದೆ ಸಾಲ ನೀಡುವ ಯೋಜನೆಯಾಗಿದೆ.ಕೇಂದ್ರ ಸರ್ಕಾರ 2020ರಲ್ಲಿ ಯೋಜನೆಯನ್ನು ಜಾರಿಗೆ ತಂದಿದೆ. ಕೊರೋನಾ ವೈರಸ್ ಬಂದ ಸಮಯದಲ್ಲಿ ಬೀದಿ ವ್ಯಾಪಾರಿಗಳು ತುಂಬಾ ತೊಂದರೆಯನ್ನು ಅನುಭವಿಸಿದರು. ತೊಂದರೆಗೀಡಾದ ಬೀದಿ ಬದಿ ವ್ಯಾಪಾರಿಗಳಿಗೆ ಆರ್ಥಿಕ ಸಹಾಯ ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಯಿತು. ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ ನಿಧಿ ಯೋಜನೆ ಆಗಿದೆ. ಇದು ಕೇಂದ್ರ ವಲಯದ ಯೋಜನೆಯಾಗಿದ್ದು ಬೀದಿಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯವನ್ನು ನೀಡುತ್ತದೆ.
PM Svanidhi Yojane : ಪಿಎಂ ಸ್ವ ನಿಧಿ ಯೋಜನೆ ಎಂದರೇನು ಮತ್ತು ಮಾಹಿತಿ.
PM Svanidhi Yojane : ಪಿ ಎಂ ಸ್ವ ನಿಧಿ ಯೋಜನೆ ಎಂದರೇನು ಮತ್ತು ಅದರ ಬಗ್ಗೆ ಮಾಹಿತಿಯನ್ನು ನೋಡೋಣ. ಪ್ರಧಾನಮಂತ್ರಿ ಸ್ವ ನಿಧಿ ಯೋಜನೆ ಎಂದರೆ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ನೀಡುವ ಒಂದು ಯೋಜನೆಯಾಗಿದೆ. ಬೀದಿ ವ್ಯಾಪಾರಿಗಳಿಗೆ ಆರ್ಥಿಕ ಸಹಾಯ ನೀಡುವ ಯೋಜನೆಯಾಗಿದೆ. ಮೊದಲಿಗೆ ಹತ್ತು ಸಾವಿರದವರೆಗೆ ಸಾಲ ನೀಡಲಾಗುತ್ತದೆ. ಈ ಸಾಲವನ್ನು ಒಂದು ವರ್ಷದ ಒಳಗೆ ಮರುಪಾವತಿ ಮಾಡಬೇಕು. ಮರುಪಾವತಿ ಮಾಡಿದ ಬೀದಿ ವ್ಯಾಪಾರಿಗಳಿಗೆ 20 ಸಾವಿರದವರೆಗೆ ಸಾಲವನ್ನು ನೀಡಲಾಗುತ್ತದೆ.
ಈ ಯೋಜನೆಯನ್ನು 2020ರಲ್ಲಿ ಜಾರಿಗೆ ತರಲಾಯಿತು. ಇದು ಕೇಂದ್ರ ವಲಯದ ಒಂದು ಯೋಜನೆಯಾಗಿದೆ. ಯಾವುದೇ ಅಡಮಾನ ಇಲ್ಲದೆ ಸಾಲ ನೀಡುವ ಯೋಜನೆಯಾಗಿದೆ. ಈ ಯೋಜನೆ ವಸತಿ ಮತ್ತು ನಗರ ಯೋಜನೆಗಳ ಸಚಿವಲಾದ ಅಡಿಯಲ್ಲಿ ಬರುತ್ತದೆ. ಈ ಯೋಜನೆಯಲ್ಲಿ ನಗರ ಪ್ರದೇಶ, ಅರೆ ನಗರ ಪ್ರದೇಶ, ಗ್ರಾಮೀಣ ಪ್ರದೇಶದ ಬೀದಿಬದಿ ವ್ಯಾಪಾರಿಗಳಿಗೆ ಸಾಲವನ್ನು ನೀಡಲಾಗುತ್ತದೆ.
ಈ ಯೋಜನೆಯಿಂದ ಸಾಲ ಪಡೆದ ವ್ಯಾಪಾರಿಗಳು ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡಿದರೆ ಕ್ಯಾಶ್ ಬ್ಯಾಕ್ ಪ್ರೋತ್ಸಾಹ ನೀಡಲಾಗುವುದು ಮತ್ತು ಹೆಚ್ಚುವರಿ ಸೌಲಭ್ಯವನ್ನು ನೀಡಲಾಗುವುದು. ಡಿಜಿಟಲ್ ಪಾವತಿಯ ಮೂಲಕ ತಿಂಗಳಲ್ಲಿ ಸಾಲ ಮರುಪಾವತಿ ಮಾಡುವ ವ್ಯಾಪಾರಿಗಳಿಗೆ ಕ್ಯಾಶ್ ಬ್ಯಾಕ್ ಕೂಡ ದೊರೆಯುತ್ತದೆ.
PM Svanidhi Yojane : ಅರ್ಜಿ ಸಲ್ಲಿಸುವುದು ಹೇಗೆ?.
PM Svanidhi Yojane : ಪ್ರಧಾನ ಮಂತ್ರಿ ಸ್ವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?, ಎಂಬ ಮಾಹಿತಿಯನ್ನು ನೋಡೋಣ. ಪ್ರಧಾನ ಮಂತ್ರಿ ಸ್ವ ನಿಧಿ ಯೋಚನೆಯಿಂದ ಸಾಲ ಪಡೆಯುವ ಬೀದಿ ಬದಿ ವ್ಯಾಪಾರಿಗಳು ಈ ಯೋಜನೆಗೆ ಸಂಬಂಧಿಸಿದ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
- ಮೊದಲಿಗೆ ನೀವು ಅಧಿಕೃತ ವೆಬ್ ಸೈಟನ್ನು ಭೇಟಿ ಮಾಡಬೇಕು.
- ಅಧಿಕೃತ ವೆಬ್ಸೈಟ್ ವಿಳಾಸ
- ನಂತರ ಸ್ವ ನಿಧಿ ಯೋಜನೆಯ ಅಪ್ಲಿಕೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
- ಅಪ್ಲಿಕೇಶನ್ ತೆರೆದ ನಂತರ ನಿಮ್ಮ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ನೀಡಬೇಕು
- ಮೊಬೈಲ್ ನಂಬರ್ ನಮೂದಿಸಿದ ನಂತರ ನಿಮ್ಮ ಮೊಬೈಲ್ ನಂಬರಿಗೆ ಒಂದು ಓಟಿಪಿ ಬರುತ್ತದೆ. ಅದನ್ನು ಎಂಟ್ರಿ ಮಾಡಬೇಕು.
- ಲಿಂಕ್ ತೆರೆದುಕೊಂಡ ನಂತರ ಅಪ್ಲಿಕೇಶನ್ ನಲ್ಲಿ ಕೇಳಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಬೇಕು.
- ನಂತರ ನೀವು ಅಗತ್ಯ ಇರುವ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು.
- ನಂತರ ನೀವು ಭರ್ತಿ ಮಾಡಿದ ಎಲ್ಲಾ ಮಾಹಿತಿಗಳು ಸರಿ ಇದೆಯೇ ಎಂದು ಖಚಿತಪಡಿಸಿಕೊಂಡು, ಅರ್ಜಿಯನ್ನು ಸಲ್ಲಿಸಬೇಕು.
ಯೋಜನೆಯಿಂದ ಸಾಲ ಪಡೆಯಲು ಯಾವುದೇ ಅಡಮಾನ ಇದುವ ಅವಶ್ಯಕತೆ ಇರುವುದಿಲ್ಲ. ಸುಲಭವಾಗಿ ತಮ್ಮ ವ್ಯಾಪಾರಕ್ಕೆ ಸಾಲವನ್ನು ಪಡೆಯಬಹುದು. ವ್ಯಾಪಾರಸ್ಥರ ಆರ್ಥಿಕ ಅಭಿವೃದ್ಧಿಗೆ ಇದು ಸಹಾಯವಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇಂಜಿನಿಯರಿಂಗ್ ಹುದ್ದೆಗಳು
PM svanidhi Yojane : ಪ್ರಧಾನ ಮಂತ್ರಿ ಸ್ವ ನಿಧಿ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು ಮತ್ತು ಅಗತ್ಯ ದಾಖಲೆಗಳು.
PM svanidhi Yojane : ಪ್ರಧಾನ ಮಂತ್ರಿ ಸ್ವ ನಿಧಿ ಯೋಜನೆಯಿಂದ ಸಾಲ ಪಡೆಯಲು ಯಾರು ಅರ್ಜಿ ಸಲ್ಲಿಸಬಹುದು ಮತ್ತು ಸಾಲ ಪಡೆಯಲು ಯಾವ ಯಾವ ದಾಖಲೆಗಳು ಕಡ್ಡಾಯವಾಗಿ ಬೇಕು ಎಂಬ ಮಾಹಿತಿಯನ್ನು ನೋಡೋಣ.
ಯಾರು ಅರ್ಜಿ ಸಲ್ಲಿಸಲು ಅರ್ಹರು : ಪ್ರಧಾನಮಂತ್ರಿ ಸ್ವ ನಿಧಿ ಯೋಜನೆಯಿಂದ ಸಾಲ ಪಡೆಯಲು, ರಸ್ತೆ ಬದಿಯಲ್ಲಿ ಅಥವಾ ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿರುವವರು ಅರ್ಜಿಯನ್ನು ಸಲ್ಲಿಸಬಹುದು. ಬೀದಿ ಬದಿ ವ್ಯಾಪಾರಿಗಳು, ಮೊಟ್ಟೆ ವ್ಯಾಪಾರಿಗಳು, ಹಣ್ಣು ವ್ಯಾಪಾರಿಗಳು, ತರಕಾರಿ ವ್ಯಾಪಾರಿಗಳು, ಒಟ್ಟಾರೆಯಾಗಿ ಬೀದಿ ಬದಿಯಲ್ಲಿ, ತಮ್ಮ ಜೀವನ ನಿರ್ವಹಣೆಗಾಗಿ,ವ್ಯಾಪಾರವನ್ನು ಮಾಡುತ್ತಿರುವವರು ಈ ಯೋಜನೆಯ ಸಾಲಕ್ಕಾಗಿ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು : ಈ ಯೋಜನೆಯಿಂದ ಸಾಲ ಸೌಲಭ್ಯವನ್ನು ಪಡೆಯಲು ಅರ್ಜಿ ಸಲ್ಲಿಸುವ ವ್ಯಾಪಾರಿಗಳು ಕೆಲವು ದಾಖಲೆಗಳು ಹೊಂದಿರಬೇಕು.
- ಆಧಾರ್ ಕಾರ್ಡ್.
- ಮೊಬೈಲ್ ಸಂಖ್ಯೆ.
- ಚುನಾವಣೆ ಗುರುತಿನ ಚೀಟಿ.
- ಬ್ಯಾಂಕ್ ಖಾತೆ ಸಂಖ್ಯೆ ಮತ್ತು ವಿವರ.
- ವ್ಯಾಪಾರಸ್ಥ ಅಥವಾ ಮಾರಾಟಗಾರರ ಗುರುತಿನ ಚೀಟಿ. ಈ ಗ್ರೂಪಿನ ಚೀಟಿಯನ್ನು ನಗರ, ಸ್ಥಳೀಯ ಸಂಸ್ಥೆಗಳಿಂದ ಪಡೆದಿರಬೇಕು,
ಈ ಯೋಜನೆಯಿಂದ ಸಾಲ ಪಡೆಯಲು ವ್ಯಾಪಾರಸ್ಥರ ಗುರುತಿನ ಚೀಟಿ ಕಡ್ಡಾಯವಾಗಿರಬೇಕು. ಇದನ್ನು ನೀವು ಮಹಾನಗರ ಪಾಲಿಕೆಗಳಿಂದ, ನಗರಸಭೆಗಳಿಂದ, ಪಟ್ಟಣ ಪಂಚಾಯಿತಿಗಳಿಂದ, ಗ್ರಾಮ ಪಂಚಾಯಿತಿಗಳಿಂದ, ಆ ವ್ಯಾಪ್ತಿಯಲ್ಲಿ ವ್ಯಾಪಾರ ಮಾಡುವ ಬಗ್ಗೆ ಗುರುತಿನ ಚೀಟಿಯನ್ನು ಪಡೆದಿರಬೇಕು. ವ್ಯಾಪಾರಸ್ಥರು ವ್ಯಾಪಾರಕ್ಕಾಗಿ ಈ ಯೋಚನೆಯಿಂದ ಸಾಲ ಸೌಲಭ್ಯವನ್ನು ಪಡೆಯಬಹುದು. ಇದು ಕೇಂದ್ರ ಸರ್ಕಾರದ ಒಂದು ಮಹತ್ವದ ಯೋಚನೆಯಾಗಿದ್ದು, ವ್ಯಾಪಾರಿಗಳಿಗೆ ಆರ್ಥಿಕ ಸಹಾಯ ನೀಡುತ್ತದೆ.
PM Svanidhi Yojane : ಪ್ರಧಾನಮಂತ್ರಿ ಸ್ವನಿಧಿ ಯೋಜನೆಯ ಉದ್ದೇಶಗಳು.
PM Svanidhi Yojane : ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯ ಪ್ರಮುಖ ಉದ್ದೇಶಗಳನ್ನು ನೋಡೋಣ.
1. ಆರ್ಥಿಕ ಸಹಾಯವನ್ನು ಒದಗಿಸುವುದು : ಬೀದಿ ಬದಿ ವ್ಯಾಪಾರಿಗಳಿಗೆ / ರಸ್ತೆ ಬದಿ ವ್ಯಾಪಾರಿಗಳಿಗೆ ತಮ್ಮ ವ್ಯಾಪಾರಕ್ಕಾಗಿ ಆರ್ಥಿಕ ಸಹಾಯವನ್ನು ನೀಡುವುದು.ಹಣಕಾಸಿನ ನೆರವು ನೀಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
2. ಸ್ವಾವಲಂಬನೆ : ವ್ಯಾಪಾರಿಗಳು ಸ್ವಾವಲಂಬನೆಯಿಂದ ಬದುಕಲು ಸಹಾಯ ಮಾಡುವುದು. ಹಣಕಾಸಿನ ಸೌಲಭ್ಯ ನೀಡುವುದರ ಜೊತೆಗೆ ಸ್ವಾವಲಂಬಿಯಾಗಿ ಬದುಕಲು ಸಹಾಯ ಮಾಡುವುದು.
3. ಅಡಮಾನವಿಲ್ಲದ ಸಾಲ : ಬೀದಿಬದಿ ವ್ಯಾಪಾರಿಗಳಿಗೆ ಯಾವುದೇ ಅಡಮಾನವಿಲ್ಲದೆ 10,000ಗಳವರೆಗೆ ಸಾಲ ನೀಡುವುದು.
4. ಕಡಿಮೆ ಬಡ್ಡಿ : ಬೀದಿಬದಿ ವ್ಯಾಪಾರಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀಡುವುದು.
5. ಹೆಚ್ಚುವರಿ ಸಾಲ ನೀಡುವುದು : ಮೊದಲ ಕಂತಿನಲ್ಲಿ ಪಡೆದ ಸಾಲವನ್ನು ಸರಿಯಾದ ರೀತಿಯಲ್ಲಿ ಮರುಪಾವತಿ ಮಾಡುವುದರ ಜೊತೆಗೆ ಹೆಚ್ಚುವರಿ ಸಾಲವನ್ನು ಸಹ ಪಡೆಯಬಹುದು.
6. ಡಿಜಿಟಲ್ ಪಾವತಿಗೆ ಪ್ರೋತ್ಸಾಹಿಸುವುದು : ವ್ಯಾಪಾರಸ್ಥರು ಡಿಜಿಟಲ್ ಪಾವತಿ ವ್ಯವಸ್ಥೆಯ ಮೂಲಕ ಶಾಲಾ ಮರುಪಾವತಿ ಮಾಡಲು ಪ್ರೋತ್ಸಾಹಿಸುವುದು. ಡಿಜಿಟಲ್ ಪಾವತಿಯ ಮೂಲಕ ಸಾಲ ಮರುಪಾವತಿ ಮಾಡುವ ವ್ಯಾಪಾರಸ್ಥರಿಗೆ ಕ್ಯಾಶ್ ಬ್ಯಾಕ್ ನೀಡುವುದು.
ಒಟ್ಟಾರೆಯಾಗಿ ಈ ಯೋಜನೆಯ ಒಂದು ಮಹತ್ವದ ಯೋಜನೆಯಾಗಿ, ಬೀದಿಬದಿ ವ್ಯಾಪಾರಸ್ಥರಿಗೆ ಆರ್ಥಿಕ ನೆರವನ್ನು ನೀಡುತ್ತದೆ. ಇದು ಕೇಂದ್ರವಲಯದ ಒಂದು ಯೋಜನೆಯಾಗಿದೆ. ಕರೋನ ಸಾಂಕ್ರಾಮಿಕ ರೋಗ ಬಂದಂತಹ ಸಂದರ್ಭದಲ್ಲಿ ಬೀದಿಬದಿ ವ್ಯಾಪಾರಿಗಳು, ಅವರ ಜೀವನ ನಿರ್ವಹಣೆ, ವ್ಯಾಪಾರಗಳಿಗೆ ತುಂಬಾ ತೊಂದರೆಯಾಗಿತ್ತು. ಇದನ್ನು ಪರಿಗಣನೆಗೆ ತೆಗೆದುಕೊಂಡ ಕೇಂದ್ರ ಸರ್ಕಾರ, ಬೀದಿ ಬದಿ ವ್ಯಾಪಾರಿಗಳಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತಂದಿತು. ಯೋಚನೆಯಿಂದ ಅನೇಕ ಬೀದಿಬದಿ ವ್ಯಾಪಾರಿಗಳು ಆರ್ಥಿಕ ನೆರವನ್ನು ಪಡೆದು ತಮ್ಮ ವ್ಯಾಪಾರದಲ್ಲಿ ಪ್ರಗತಿಯನ್ನು ಸಾಧಿಸಿದ್ದಾರೆ. ಹಣಕಾಸಿನ ನೆರವು ಪಡೆದ ವ್ಯಾಪಾರಿಗಳು ಆರ್ಥಿಕ ಸದೃಢತೆಯನ್ನು ಹೊಂದಿದ್ದಾರೆ. ಇದರಿಂದ ಅವರ ಜೀವನ ನಿರ್ವಹಣೆಯ ಯಾವುದೇ ತೊಂದರೆ ಇಲ್ಲದೆ ನಡೆಯುವಂತಾಗಿದೆ. ಯಾವುದೇ ಅಡಮಾನ ಇಟ್ಟುಕೊಳ್ಳದೆ ಸಾಲ ನೀಡುವ ಯೋಜನೆ ಇದಾಗಿದ್ದು, ಇದರಿಂದ ವ್ಯಾಪಾರಿಗಳಿಗೆ ತುಂಬಾನೇ ಅನುಕೂಲವಾಗಿದೆ.