labour card and labour card scholarship. ಕಾರ್ಮಿಕರ ಕಾರ್ಡ್ ಮಾಹಿತಿ ಮತ್ತು ಕಾರ್ಮಿಕರ ವಿದ್ಯಾರ್ಥಿವೇತನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
ಕಾರ್ಮಿಕರ ಕಾರ್ಡ್ ಬಗೆಗಿನ ಸಂಪೂರ್ಣ ಮಾಹಿತಿ ಅಂದರೆ ಕಾರ್ಮಿಕರ ಕಾರ್ಡ್ ಪಡೆಯುವುದು ಹೇಗೆ, ಯಾವ ಯಾವ ದಾಖಲೆಗಳು ಬೇಕು, ಅರ್ಜಿ ಸಲ್ಲಿಸುವ ವಿಧಾನ ಮತ್ತು ಕಾರ್ಮಿಕ ಕಾರ್ಡ್ ನ ಪ್ರಯೋಜನಗಳು ಏನು ಎಂಬುದರ ಬಗೆಗಿನ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ನೀಡಲಾಗಿದೆ. ಮತ್ತು ಕಾರ್ಮಿಕರ ಕಾರ್ಡ್ ವಿದ್ಯಾರ್ಥಿವೇತನದ ಬಗ್ಗೆಯೂ ಸಹ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಕಾರ್ಮಿಕರ ಕಾರ್ಡ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ವಿಧಾನ, ಯಾರು ಅರ್ಹರು, ಯಾವ ದಾಖಲೆಗಳು ಬೇಕು ಎಂಬುದರ ಬಗೆಗಿನ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.
ಕಾರ್ಮಿಕ ಇಲಾಖೆಯಿಂದ ಕಾರ್ಮಿಕರ ಮತ್ತು ಕಾರ್ಮಿಕ ಕುಟುಂಬದವರ ಕ್ಷೇಮಾಭಿವೃದ್ಧಿಗೆ ಸಂಬಂಧಿಸಿದಂತೆ, ಕಾರ್ಮಿಕರ ಸುರಕ್ಷತೆಯ ಕಾರಣದಿಂದಾಗಿ ಸರ್ಕಾರವು ಕಟ್ಟಡ ಕಾರ್ಮಿಕರಿಗೆ ಮತ್ತು ಕೃಷಿ ಮತ್ತು ಕೃಷಿಯೇತರ ಕಾರ್ಮಿಕರಿಗೆ, ಕಾರ್ಮಿಕ ಕಾರ್ಡನ್ನು ನೀಡುವ ಯೋಜನೆಯನ್ನು ಜಾರಿಗೆ ತಂದಿದೆ. ಇದರಿಂದ ಕಾರ್ಮಿಕರಿಗೆ ಅನೇಕ ರೀತಿಯ ಪ್ರಯೋಜನವನ್ನು ನೀಡಿದಂತಾಗಿದೆ.
labour card ಮಾಹಿತಿ.
labour card ನ ಬಗೆಗಿನ ಸಂಪೂರ್ಣ ಮಾಹಿತಿಯನ್ನು ನೋಡೋಣ. ಕಾರ್ಮಿಕ ಇಲಾಖೆಯು ಕಾರ್ಮಿಕರ ಸುರಕ್ಷತೆ ಗೋಸ್ಕರ ಮತ್ತು ಅವರ ಅನುಕೂಲಕ್ಕೋಸ್ಕರ, ಸರ್ಕಾರದಿಂದ ಸೌಲಭ್ಯವನ್ನು ಪಡೆಯಲು ಕಾರ್ಮಿಕ ಕಾರ್ಡ್ ನೀಡುವ ಯೋಜನೆಯನ್ನು ಜಾರಿಗೆ ತಂದಿದೆ. ಈ ಕಾರ್ಡನ್ನು ಪಡೆದಿರುವ ಕಾರ್ಮಿಕರಿಗೆ ಮತ್ತು ಕಾರ್ಮಿಕ ಕುಟುಂಬಗಳಿಗೆ ಸರ್ಕಾರದಿಂದ ಅನೇಕ ಸೌಲಭ್ಯಗಳನ್ನು ನೀಡಲಾಗುತ್ತದೆ.
ಮುಖ್ಯವಾಗಿ ಲೇಬರ್ ಕಾರ್ಡನ್ನು ಪಡೆಯಲು ಕಾರ್ಮಿಕರು ಪರವಾನಿಗೆ ಪಡೆದಿರುವ ಗುತ್ತಿಗೆದಾರರ ಅಡಿಯಲ್ಲಿ ಕೆಲಸವನ್ನು ಮಾಡುತ್ತಿರಬೇಕು. ಇವರು ಲೇಬರ್ ಕಾರ್ಡನ್ನು ಪಡೆದುಕೊಳ್ಳಬಹುದು. ಕಾರ್ಮಿಕರ ಕಾರ್ಡನ್ನು ಪಡೆದಿರುವ ಕಾರ್ಮಿಕರಿಗೆ ಮತ್ತು ಕಾರ್ಮಿಕರ ಕುಟುಂಬಗಳಿಗೆ ಸರ್ಕಾರವು ಅನೇಕ ರೀತಿಯ ಸೌಲಭ್ಯಗಳನ್ನು ನೀಡಿದೆ. ಅವುಗಳೆಂದರೆ,
- ಕಾರ್ಮಿಕರಿಗೆ ಆರೋಗ್ಯ ವಿಮೆ ಯೋಜನೆ.
- ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ.
- ಕಾರ್ಮಿಕರ ಕುಟುಂಬಕ್ಕೆ ಜೀವನ ಸೌಲಭ್ಯಗಳು.
- ಗೃಹ ನಿರ್ಮಾಣಕ್ಕೆ ಸಾಲ ಯೋಜನೆ
ಹೀಗೆ ಸರ್ಕಾರವು ಅನೇಕ ಸೌಲಭ್ಯಗಳನ್ನು ನೀಡಿದೆ. ಕಾರ್ಮಿಕರು ಮತ್ತು ಕಾರ್ಮಿಕ ಕುಟುಂಬದವರ ಸುರಕ್ಷತೆ ಮತ್ತು ಅಭಿವೃದ್ಧಿಗೋಸ್ಕರ ಈ ಯೋಜನೆಗಳನ್ನು ಜಾರಿಗೆ ತಂದಿದೆ.
labour card ಪಡೆಯಲು ಅರ್ಜಿ ಸಲ್ಲಿಸುವ ವಿಧಾನ.
labour card ಗೆ ಅರ್ಜಿ ಸಲ್ಲಿಸುವ ವಿಧಾನವನ್ನು ನೋಡೋಣ. ಕಾರ್ಮಿಕರ ಕಾರ್ಡನ್ನು ಪಡೆಯಲು ಮೊದಲು ಪರವಾನಿಗೆ ಪಡೆದಿರುವ ಗುತ್ತಿಗೆದಾರರ ಅಡಿಯಲ್ಲಿ ಕಾರ್ಮಿಕರು ಕೆಲಸವನ್ನು ನಿರ್ವಹಿಸುತ್ತಿರಬೇಕು. ಅರ್ಜಿ ಸಲ್ಲಿಸುವ ವಿಧಾನವನ್ನು ನೋಡೋಣ.
- ಮೊದಲಿಗೆ ಕಾರ್ಮಿಕ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. ಅಧಿಕೃತ ವೆಬ್ಸೈಟ್ ವಿಳಾಸ
- ಮುಖಪುಟ ತೆರೆದ ನಂತರ ಹೊಸ ನೊಂದಣಿ ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
- ನಂತರ ಕೇಳಿರುವ ಎಲ್ಲಾ ಮಾಹಿತಿಗಳನ್ನು ಓದಿಕೊಂಡು ಅರ್ಜಿಗಳನ್ನು ಸಲ್ಲಿಸಬೇಕು.
- ಕೇಳಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಬೇಕು ಅಂದರೆ ಅರ್ಜಿದಾರರ ಹೆಸರು ಮತ್ತು ವಿಳಾಸ, ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿ, ಆಧಾರ್ ಕಾರ್ಡ್ ನಂಬರ್ ಹೀಗೆ ಮುಂತಾದ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಬೇಕು.
- ಭರ್ತಿ ಮಾಡಿರುವ ಎಲ್ಲಾ ವಿವರಗಳು ಸರಿಯಾಗಿದೆ ಎಂದು ಖಚಿತಪಡಿಸಿಕೊಂಡು, ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಬೇಕು.
- ನಂತರ ಕಾರ್ಮಿಕ ಇಲಾಖೆಯು ನಿಮ್ಮ ಎಲ್ಲಾ ಮಾಹಿತಿಗಳನ್ನು, ದಾಖಲೆಗಳನ್ನು ಪರಿಶೀಲನೆ ಮಾಡಿ, ಎಲ್ಲ ಮಾಹಿತಿಗಳು ಸರಿ ಇದ್ದರೆ, 15 ದಿನಗಳಲ್ಲಿ ನಿಮಗೆ ಕಾರ್ಮಿಕರ ಕಾರ್ಡನ್ನು ನೀಡುತ್ತದೆ.
labour card ಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು ಮತ್ತು ಅರ್ಹತೆಗಳು.
labour card ಗೆ ಅರ್ಜಿ ಸಲ್ಲಿಸಲೇ ಬೇಕಾಗಿರುವ ದಾಖಲೆಗಳನ್ನು ನೋಡೋಣ. ಕಾರ್ಮಿಕ ಇಲಾಖೆಯಿಂದ ಕಾರ್ಮಿಕರ ಕಾರ್ಡನ್ನು ಪಡೆಯಲು ಈ ಕೆಳಗಿನ ದಾಖಲೆಗಳನ್ನು ಹೊಂದಿರಬೇಕು.
- ಕಾರ್ಮಿಕರ ಆಧಾರ್ ಕಾರ್ಡ್.
- ಮೊಬೈಲ್ ನಂಬರ್.
- ಚುನಾವಣಾ ಗುರುತಿನ ಚೀಟಿ.
- ಬ್ಯಾಂಕ್ ಖಾತೆಯ ವಿವರ.
- ಭಾವಚಿತ್ರ.
- ಪರವಾನಿಗೆ ಹೊಂದಿರುವ ಗುತ್ತಿಗೆದಾರರ ಸಹಿ ಇರುವಂತಹ ಒಂದು ದೃಢೀಕರಣ ಪತ್ರ.
ಹೀಗೆ ಎಲ್ಲಾ ದಾಖಲೆಗಳನ್ನು ಹೊಂದಿರುವ ಕಾರ್ಮಿಕರು ಕಾರ್ಮಿಕ ಇಲಾಖೆಗೆ ಕಾರ್ಮಿಕ ಕಾರ್ಡನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಬಹುದು. ಲೇಬರ್ ಕಾರ್ಡನ್ನು ಪಡೆಯಲು ಈ ಕೆಳಗಿನ ಅರ್ಹತಾ ಮಾನದಂಡಗಳನ್ನು ಹೊಂದಿರಬೇಕು.
- ಕಾರ್ಮಿಕರು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು.
- ಗರಿಷ್ಠ ಅರವತ್ತು ವರ್ಷದ ಒಳಗಿರಬೇಕು.
- ಕರ್ನಾಟಕ ರಾಜ್ಯದಲ್ಲಿ ವಾಸವಿರಬೇಕು.
- ಜಿಲ್ಲಾ ಮಟ್ಟದ ಕಾರ್ಮಿಕ ಇಲಾಖೆಯಲ್ಲಿ ನೊಂದಾವಣಿ ಮಾಡಿರಬೇಕು.
- ಪರವನಿಗೆ ಪಡೆದಿರುವ ಗುತ್ತಿಗೆದಾರರ ಅಡಿಯಲ್ಲಿ ಕೆಲಸವನ್ನು ನಿರ್ವಹಿಸುತ್ತಿರಬೇಕು.
ಹೀಗೆ ಕಾರ್ಮಿಕರು ಈ ಅರ್ಹತಾ ಮಾನದಂಡಗಳನ್ನು ಹೊಂದಿರಬೇಕು.
labour card ನ ಪ್ರಯೋಜನಗಳು.
labour card : ಕಾರ್ಮಿಕರ ಕಾರ್ಡ್ ನ ಪ್ರಯೋಜನಗಳನ್ನು ನೋಡೋಣ. ಕಾರ್ಮಿಕ ಇಲಾಖೆಯಿಂದ ನೀಡಿರುವ ಲೇಬರ್ ಕಾರ್ಡನ್ನು ಹೊಂದಿರುವ ಕಾರ್ಮಿಕರು ಸರ್ಕಾರದಿಂದ ಅನೇಕ ಸೌಲಭ್ಯಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಸರ್ಕಾರದಿಂದ ಯಾವ ಯಾವ ಪ್ರಯೋಜನಗಳನ್ನು ಪಡೆಯಬಹುದು ಎಂಬುದನ್ನು ನೋಡೋಣ.
- ಕಾರ್ಮಿಕರಿಗೆ ಆರೋಗ್ಯ ವಿಮಾ ಯೋಜನೆ : ಕಾರ್ಮಿಕ ಇಲಾಖೆಯಿಂದ ಕಾರ್ಮಿಕ ಕಾರ್ಡನ್ನು ಪಡೆದಿರುವ ಕಾರ್ಮಿಕರಿಗೆ ಸರ್ಕಾರದಿಂದ ಆರೋಗ್ಯ ವಿಮಾ ಯೋಜನೆಯನ್ನು ನೀಡಲಾಗಿದೆ. ಕಾರ್ಮಿಕರಿಗೆ ಯಾವುದೇ ರೀತಿಯ ಅಪಘಾತ ಅಥವಾ ಸಾವು ಸಂಭವಿಸಿದ ಸಂದರ್ಭದಲ್ಲಿ ಸರ್ಕಾರದಿಂದ ಆರೋಗ್ಯ ವಿಮೆಯನ್ನು ನೀಡಲಾಗುವುದು.
- ಕಾರ್ಮಿಕರೆ ಮಕ್ಕಳಿಗೆ ವಿದ್ಯಾರ್ಥಿ ವೇತನ : ಲೇಬರ್ ಕಾರ್ಡನ್ನು ಹೊಂದಿರುವ ಕಾರ್ಮಿಕರ ಕುಟುಂಬದಲ್ಲಿ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ, ಸರ್ಕಾರದಿಂದ ವಿದ್ಯಾರ್ಥಿ ವೇತನವನ್ನು ನೀಡಲಾಗುವುದು. ಅವರ ವಿದ್ಯಾರ್ಹತೆಗೆ ಅನುಗುಣವಾಗಿ ವಿದ್ಯಾರ್ಥಿ ವೇತನವನ್ನು ನೀಡಲಾಗುವುದು.
- ಉಚಿತ ಸಾರಿಗೆ ಸೌಲಭ್ಯ: ಕಾರ್ಮಿಕರಿಗೆ ಕೆಲಸಕ್ಕೆ ತೆರಳಲು ಉಚಿತ ಸಾರಿಗೆ ಸೌಲಭ್ಯವನ್ನು ಒದಗಿಸಲಾಗುವುದು.
- ಕಾರ್ಮಿಕರಿಗೆ ಪಿಂಚಣಿ ಸೌಲಭ್ಯವನ್ನು ನೀಡಲಾಗುವುದು.
- ಮದುವೆ ಸಹಾಯಧನವನ್ನು ನೀಡಲಾಗುವುದು.
- ಅಂತ್ಯಕ್ರಿಯೆ ವೆಚ್ಚ : ಕಾರ್ಮಿಕರು ಕಟ್ಟಡ ಕೆಲಸಗಳ ಕಾರ್ಯಗಳಲ್ಲಿ ತೊಡಗಿರುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಸಾವು ಸಂಭವಿಸಿದರೆ ವಿಮಾ ಸೌಲಭ್ಯ ಮತ್ತು ಅಂತ್ಯಕ್ರಿಯ ವೆಚ್ಚವನ್ನು ಸರ್ಕಾರದಿಂದ ನೀಡಲಾಗುವುದು.
ಹೀಗೆ ಕಾರ್ಮಿಕ ಇಲಾಖೆಯಿಂದ ಲೇಬರ್ ಕಾರ್ಡನ್ನು ಹೊಂದಿರುವ ಕಾರ್ಮಿಕರು ಮತ್ತು ಕುಟುಂಬಗಳಿಗೆ ಸರ್ಕಾರದಿಂದ ಅನೇಕ ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಕಾರ್ಮಿಕರ ಸುರಕ್ಷತೆ ಮತ್ತು ಅಭಿವೃದ್ಧಿಯ ದೃಷ್ಟಿಯಿಂದ ಈ ಯೋಜನೆಗಳನ್ನು ಜಾರಿಗೆ ತರಲಾಗಿದೆ.
labour card scholarship : ಕಾರ್ಮಿಕ ಇಲಾಖೆಯ ವಿದ್ಯಾರ್ಥಿ ವೇತನ.
labour card scholarship : ಕಾರ್ಮಿಕರ ವಿದ್ಯಾರ್ಥಿ ವೇತನ. ಕಾರ್ಮಿಕ ಇಲಾಖೆಯಿಂದ ಕಾರ್ಮಿಕ ಕುಟುಂಬದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಕಾರ್ಮಿಕ ವಿದ್ಯಾರ್ಥಿ ವೇತನವನ್ನು ನೀಡಲಾಗುವುದು. ಈ ಯೋಜನೆಯ ಕಾರ್ಮಿಕ ಕುಟುಂಬದ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಒದಗಿಸುವ ಒಂದು ಯೋಜನೆಯಾಗಿದೆ.
ಕಾರ್ಮಿಕ ಕುಟುಂಬಗಳ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನವನ್ನು, ಕಟ್ಟಡ ಕಾರ್ಮಿಕರು, ಕಾರ್ಮಿಕ ಇಲಾಖೆಯಲ್ಲಿ ನೊಂದಾಯಿಸಿಕೊಂಡಿರುವ ಕಾರ್ಮಿಕರು ತಮ್ಮ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಸಹಾಯವಾಗುವ ದೃಷ್ಟಿಯಿಂದ ಪಡೆದುಕೊಳ್ಳಬಹುದು. ಈ ವಿದ್ಯಾರ್ಥಿ ವೇತನವೂ ಕಾರ್ಮಿಕ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವ ಮುಖ್ಯ ಉದ್ದೇಶವನ್ನು ಹೊಂದಿದೆ. ಕಾರ್ಮಿಕರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವ ದೃಷ್ಟಿಯಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.
ಕಾರ್ಮಿಕ ಇಲಾಖೆಯ ವಿದ್ಯಾರ್ಥಿವೇತನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ. ಅಂದರೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ, ಯಾವ ದಾಖಲೆಗಳು ಬೇಕು, ಯಾವ ಯಾವ ವಿದ್ಯಾಭ್ಯಾಸಕ್ಕೆ, ಎಷ್ಟು ವಿದ್ಯಾರ್ಥಿ ವೇತನ ನೀಡಲಾಗುವುದು, ಎಂಬ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.
labour card scholarship : ಕಾರ್ಮಿಕ ಇಲಾಖೆಯ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ವಿಧಾನ.
labour card scholarship : ಕಾರ್ಮಿಕ ಇಲಾಖೆಯಿಂದ ವಿದ್ಯಾರ್ಥಿ ವೇತನವನ್ನು ಪಡೆಯಲು ಅರ್ಜಿ ಸಲ್ಲಿಸುವ ವಿಧಾನವನ್ನು ನೋಡೋಣ.
- ಮೊದಲಿಗೆ ಕಾರ್ಮಿಕ ಇಲಾಖೆಯ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಬೇಕು.
- ಮುಖಪುಟ ತೆರೆದ ನಂತರ ಸ್ಟುಡೆಂಟ್ ಲಾಗಿನ್ ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
- ನಂತರ ವಿದ್ಯಾರ್ಥಿಯ ಹೆಸರು, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ಅನ್ನು ನೀಡಿ ರಿಜಿಸ್ಟರ್ ಮಾಡಬೇಕು.
- ಪಾಸ್ವರ್ಡ್ ಅನ್ನು ಕ್ರಿಯೇಟ್ ಮಾಡಿಕೊಳ್ಳಬೇಕು.
- ನಂತರ ನೀವು ಕ್ರಿಯೇಟ್ ಮಾಡಿರುವ ಲಾಗಿನ್ ಐಡಿ ಮತ್ತು ಪಾಸ್ವರ್ಡ್ ಅನ್ನು ಬಳಸಿ ಲಾಗಿನ್ ಆಗಬೇಕು.
- ಲಾಗಿನ್ ಆದ ನಂತರ ಅಪ್ಲೇ ಸ್ಕಾಲರ್ಶಿಪ್ ಎಂಬ ಬಟನ್ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು.
- ಆ ಲಿಂಕ್ ತೆರೆದ ಮೇಲೆ ಕೇಳಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಬೇಕು.
- ಅರ್ಜಿಯನ್ನು ಭರ್ತಿ ಮಾಡುವ ಮೊದಲು ಕೊಟ್ಟಿರುವ ಎಲ್ಲಾ ಮಾರ್ಗ ಸೂಚಿಗಳನ್ನು ಓದಿಕೊಂಡು. ಅರ್ಜಿಯನ್ನು ಸರಿಯಾದ ಮಾರ್ಗದಲ್ಲಿ ಸಲ್ಲಿಸಬೇಕು.
- ಅಗತ್ಯವಾಗಿ ಕೇಳಿರುವ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
- ಸಂಪೂರ್ಣವಾಗಿ ಅರ್ಜಿಯನ್ನು ಭರ್ತಿ ಮಾಡಿದ ನಂತರ ನೀಡಿರುವ ಎಲ್ಲಾ ಮಾಹಿತಿಗಳು ಸರಿಯಾಗಿದೆಯಾ ಎಂದು ಖಚಿತಪಡಿಸಿಕೊಂಡ ಮೇಲೆ ತಬ್ಬಿಟ್ ಬಟನ್ ಅನ್ನು ಕ್ಲಿಕ್ ಮಾಡಬೇಕು.
ಹೀಗೆ ಈ ಕ್ರಮದಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮೊದಲು ವೆಬ್ ಸೈಟ್ ನಲ್ಲಿ ನೀಡಿರುವ ಎಲ್ಲಾ ಮಾರ್ಗ ಸೂಚಿಗಳನ್ನು ಮಾಹಿತಿಗಳನ್ನು ಸರಿಯಾಗಿ ಓದಿಕೊಂಡು, ಸರಿಯಾದ ಕ್ರಮದಲ್ಲಿ ಅರ್ಜಿಯನ್ನು ಸಲ್ಲಿಸಬೇಕು.
labour card scholarship ಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು ಮತ್ತು ಅರ್ಹತೆಗಳು.
labour card scholarship : ಕಾರ್ಮಿಕ ಇಲಾಖೆಯ ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಗಿನ ದಾಖಲೆಗಳು ಮತ್ತು ಅರ್ಹತೆಗಳನ್ನು ಹೊಂದಿರಬೇಕು.
- ಕರ್ನಾಟಕದ ನಿವಾಸಿಗಳಾಗಿರಬೇಕು.
- ಆಧಾರ್ ಕಾರ್ಡ್ ಹೊಂದಿರಬೇಕು.
- ವಿದ್ಯಾರ್ಥಿಯ ಶೈಕ್ಷಣಿಕ ವಿವರಗಳು.
- ಕಾರ್ಮಿಕ ಇಲಾಖೆಯಿಂದ ನೀಡಿರುವ ಕಾರ್ಮಿಕರ ಕಾರ್ಡನ್ನು ಹೊಂದಿರುವ ಕುಟುಂಬದ ಮಕ್ಕಳು.
- 10ನೇ ತರಗತಿ ಓದುತ್ತಿರುವ ಕಾರ್ಮಿಕರ ಮಕ್ಕಳು.
- ಪಿಯುಸಿ ಓದುತ್ತಿರುವ ಕಾರ್ಮಿಕರ ಮಕ್ಕಳು.
- ಉನ್ನತ ಶಿಕ್ಷಣ ಪಡೆಯುತ್ತಿರುವ ಕಾರ್ಮಿಕರ ಮಕ್ಕಳು.
- ಕಾರ್ಮಿಕರ ಕುಟುಂಬದ ವಾರ್ಷಿಕ ಆದಾಯವು 8 ಲಕ್ಷಕ್ಕಿಂತ ಕಡಿಮೆ ಇರಬೇಕು.
ಹೀಗೆ ಈ ಮೇಲಿನ ದಾಖಲೆ ಮತ್ತು ಅರ್ಹತೆಗಳನ್ನು ಹೊಂದಿರುವ ಕಾರ್ಮಿಕರ ಕುಟುಂಬದ ಮಕ್ಕಳು ಕಾರ್ಮಿಕ ಇಲಾಖೆಯ ವಿದ್ಯಾರ್ಥಿ ವೇತನಕ್ಕೆ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ನಂತರ ಕಾರ್ಮಿಕ ಇಲಾಖೆಯು ಎಲ್ಲಾ ಮಾಹಿತಿಗಳನ್ನು ಪರಿಶೀಲನೆ ಮಾಡಿ ವಿದ್ಯಾರ್ಥಿ ವೇತನವನ್ನು ನೀಡಲಾಗುವುದು.
labour card scholarship : ಕಾರ್ಮಿಕ ಇಲಾಖೆಯ ವಿದ್ಯಾರ್ಥಿ ವೇತನದ ಮೊತ್ತದ ವಿವರ ಹೀಗಿದೆ.
labour card scholarship : ಕಾರ್ಮಿಕ ಇಲಾಖೆಯ ವಿದ್ಯಾರ್ಥಿ ವೇತನದ ಮೊತ್ತಗಳನ್ನು ಈ ಕೆಳಕಂಡಂತೆ ವಿಂಗಡಿಸಲಾಗಿದೆ.
- ಒಂದರಿಂದ ನಾಲ್ಕನೇ ತರಗತಿ : ವಿದ್ಯಾರ್ಥಿ ವೇತನ : ರೂ.1100.
- ಆದ್ದರಿಂದ ಎಂಟನೇ ತರಗತಿ : ವಿದ್ಯಾರ್ಥಿ ವೇತನ : ರೂ.1250.
- 9 ಮತ್ತು 10ನೇ ತರಗತಿ : ವಿದ್ಯಾರ್ಥಿ ವೇತನ : ರೂ.3000.
- ಪಿಯುಸಿ : ವಿದ್ಯಾರ್ಥಿ ವೇತನ : ರೂ.4600.
- ಡಿಗ್ರಿ : ವಿದ್ಯಾರ್ಥಿ ವೇತನ : ರೂ.6000.
- ಬಿ. ಈ ಮತ್ತು ಬಿ ಟೆಕ್ ಹಾಗೂ ಮಾಸ್ಟರ್ ಡಿಗ್ರಿ : ವಿದ್ಯಾರ್ಥಿ ವೇತನ : ರೂ. 10.000.
- ಡಿಪ್ಲೋಮೋ ಮತ್ತು ಐಟಿಐ : ವಿದ್ಯಾರ್ಥಿ ವೇತನ : ರೂ.4600.
- ಬಿಎಸ್ಸಿ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ : ರೂ.10.000.
- ಬಿ ಎಡ್ : ವಿದ್ಯಾರ್ಥಿ ವೇತನ: ರೂ.6000.
- ಮೆಡಿಕಲ್ : ರೂ.11000.
- ಎಲ್ ಎಲ್ ಬಿ : ರೂ.10000.
ಹೀಗೆ ವಿದ್ಯಾರ್ಹತೆಗೆ ಅನುಗುಣವಾಗಿ ವಿದ್ಯಾರ್ಥಿ ವೇತನವನ್ನು ನಿಗದಿ ಮಾಡಲಾಗಿದೆ. ಕಾರ್ಮಿಕರ ಮಕ್ಕಳು ಈ ವಿದ್ಯಾರ್ಥಿ ವೇತನವನ್ನು ಪಡೆಯಲು ಅರ್ಹರಾಗಿರುತ್ತಾರೆ. ಕಾರ್ಮಿಕರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವ ದೃಷ್ಟಿಯಿಂದ ಈ ಯೋಚನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಿಂದ ಕಾರ್ಮಿಕರ ಮಕ್ಕಳ ಉನ್ನತ ವಿದ್ಯಾಭ್ಯಾಸ ಮತ್ತು ವಿದ್ಯಾಭ್ಯಾಸವನ್ನು ಮಧ್ಯದಲ್ಲಿ ನಿಲ್ಲಿಸಿರುವ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯವನ್ನು ನೀಡಿದಂತಾಗಿದೆ. ಕಾರ್ಮಿಕ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಎಲ್ಲಾ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದು.
How can I check my labour card status?. ನನ್ನ ಲೇಬರ್ ಕಾರ್ಡ್ ನ ಸ್ಥಿತಿಯನ್ನು ಹೇಗೆ ಪರಿಶೀಲಿಸಬಹುದು.
ಲೇಬರ್ ಕಾರ್ಡ್ ನ ಸ್ಥಿತಿಯನ್ನು ಪರಿಶೀಲಿಸಲು ಮೊದಲಿಗೆ ಕಾರ್ಮಿಕ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು. ಮುಖಪುಟ ತೆರೆದ ನಂತರ ಹೊಸ ಲೇಬರ್ ಕಾರ್ಡ್ ನೋಂದಣಿ ಎಂಬ ಲಿಂಕ್ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು. ಕ್ಲಿಕ್ ಮಾಡಿದ ನಂತರ ಅದು ತೆರೆದುಕೊಳ್ಳುತ್ತದೆ. ನಂತರ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಬೇಕು. ಜಿಲ್ಲೆಯನ್ನು ಆಯ್ಕೆ ಮಾಡಿದ ನಂತರ ನಿಮ್ಮ ಎಲ್ಲಾ ವಿವರಗಳನ್ನು ಕೇಳುತ್ತದೆ. ನಿಮ್ಮ ಎಲ್ಲಾ ವಿವರಗಳನ್ನು ನೀಡಬೇಕು.ನೀಡಿದ ನಂತರ ಸಬ್ಮಿಟ್ ಮಾಡಬೇಕು. ಆಗ ನಿಮ್ಮ ಅಪ್ಲಿಕೇಶನ್ ಸ್ಥಿತಿ ತಿಳಿಯುತ್ತದೆ. ಹೀಗೆ ನೀವು ನಿಮ್ಮ ಲೇಬರ್ ಕಾರ್ಡ್ ನ ಸ್ಥಿತಿಯನ್ನು ತಿಳಿದುಕೊಳ್ಳಬಹುದು.