Tharak7star

KCET 2024 : ಮರು ಪರೀಕ್ಷೆ ಇಲ್ಲ KEA ಸ್ಪಷ್ಟಪಡಿಸಿದೆ 

KCET 2024

KCET 2024 : ಮರು ಪರೀಕ್ಷೆ ಇಲ್ಲ KEA ಸ್ಪಷ್ಟಪಡಿಸಿದೆ. ಪಠ್ಯ ಕ್ರಮದಲ್ಲಿ ಇಲ್ಲದ ಪ್ರಶ್ನೆ ಬಿಟ್ಟು ಮೌಲ್ಯಮಾಪನ.ಎರಡು ಕೃಪಾಂಕ ನೀಡಲು ತೀರ್ಮಾನ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ KCET 2024 ರ ಪರೀಕ್ಷೆಯಲ್ಲಿ, ಪಠ್ಯ ಕ್ರಮದಲ್ಲಿ ಇಲ್ಲದ ಪ್ರಶ್ನೆಗಳನ್ನು ಕೇಳಲಾಗಿತ್ತು. ಹಾಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮರು ಪರೀಕ್ಷೆ ನಡೆಸಬೇಕು ಎಂದು ಹಲವು ಕಡೆಗಳಿಂದ ಒತ್ತಡ ಹಾಕಲಾಗಿತ್ತು. ಆದರೆ ಸರ್ಕಾರ ತಜ್ಞರ ಅಭಿಪ್ರಾಯ ಸಂಗ್ರಹಿಸಿ, ಮರು ಪರೀಕ್ಷೆ ನಡೆಸದೇ, ಪಠ್ಯ ಕ್ರಮದಲ್ಲಿ ಇಲ್ಲದ ಪ್ರಶ್ನೆಗಳನ್ನು ಕೈ ಬಿಟ್ಟು ಮೌಲ್ಯಮಾಪನ ಮಾಡುವ ನಿರ್ಧಾರಕ್ಕೆ ಬಂದಿದೆ. ಹಾಗಾಗಿ ಯಾವುದೇ ಕಾರಣಕ್ಕೂ ಮರು ಪರೀಕ್ಷೆ ನಡೆಸಲಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ. ಇದರಿಂದ KCET ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆಆತಂಕ ಕಡಿಮೆಯಾಗಿದೆ. ವಿದ್ಯಾರ್ಥಿಗಳ ಪೋಷಕರು ಸಹ ನಿಟ್ಟುಸಿರುಬಿಡುವಂತಾಗಿದೆ.ಸರ್ಕಾರ ನೇಮಿಸಿದ್ದ ವಿಷಯ ತಜ್ಞರ ಸಮಿತಿ ನೀಡಿರುವ ಮಾಹಿತಿ ಮೇರೆಗೆ ಈ ತೀರ್ಮಾನ ಮಾಡಲಾಗಿದೆ. ನಾಲ್ಕು ವಿಷಯದಲ್ಲಿ 50 ಅಂಕಗಳ ಪ್ರಶ್ನೆಗಳು, ಪಠ್ಯ ಕ್ರಮದಲ್ಲಿ ಇಲ್ಲದ ಪ್ರಶ್ನೆಗಳನ್ನು ಕೇಳಲಾಗಿತ್ತು. ಇದು ವಿಷಯ ತಜ್ಞರ ಅಭಿಪ್ರಾಯವಾಗಿದೆ. ಇದರಿಂದ ಸರ್ಕಾರ ಮರು ಪರೀಕ್ಷೆ ಇಲ್ಲ ಎಂದು ಸ್ಪಷ್ಟಪಡಿಸಿದೆ.

KCET 2024 :  KEA ಮರು ಪರೀಕ್ಷೆ ಇಲ್ಲ.

KCET 2024
KCET 2024

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2024ರ ಏಪ್ರಿಲ್ 18 19 ಮತ್ತು 26ರಂದು KCET 2024 ರ ಪರೀಕ್ಷೆಯನ್ನು ನಡೆಸಿತ್ತು. ಆದರೆ ಈ ಪರೀಕ್ಷೆಯಲ್ಲಿ 2023 24ನೇ ಸಾಲಿನ  ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿ ಪಠ್ಯಕ್ರಮದಲ್ಲಿ ಇಲ್ಲದ  ಕೆಲವು ಪ್ರಶ್ನೆಗಳನ್ನು ಕೇಳಲಾಗಿತ್ತು. ಹಾಗಾಗಿ ವಿದ್ಯಾರ್ಥಿಗಳು ಮತ್ತು ಪೋಷಕರು ಗೊಂದಲಕೀಡಾಗಿದ್ದರು. ಈ ಎಡವಟ್ಟಿನಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮರು ಪರೀಕ್ಷೆ ನಡೆಸಬಹುದು ಎಂಬ ತೀರ್ಮಾನದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಇದ್ದರು. ಆದರೆ ಈಗ ಸರ್ಕಾರವು ಸ್ಪಷ್ಟಪಡಿಸಿದ ಮಾಹಿತಿಯ ಮೇರೆಗೆ  CET ಮರು ಪರೀಕ್ಷೆಯನ್ನು ಯಾವುದೇ ಕಾರಣಕ್ಕೂ ನಡೆಸಲಾಗುವುದಿಲ್ಲ.

2023 24ರ ಸಾಲಿನ ಪ್ರಥಮ ಮತ್ತು ದ್ವಿತೀಯ ಪಿಯುಸಿ ಪಠ್ಯಕ್ರಮದಲ್ಲಿ ಇಲ್ಲದ ಪ್ರಶ್ನೆಗಳನ್ನು ಕೇಳಲಾಗಿತ್ತು. ಆದರೆ ಆ ಪ್ರಶ್ನೆಗಳು 2022 ಮತ್ತು 23ನೇ ಸಾಲಿನ ಪ್ರಥಮ ಮತ್ತು ದ್ವಿತೀಯ ಪಿಯುಸಿ ಪಠ್ಯಕ್ರಮದಲ್ಲಿ ಇರುವ ಪ್ರಶ್ನೆಗಳಾಗಿದ್ದರಿಂದ ಸರ್ಕಾರವು, ವಿಷಯ ತಜ್ಞರ ಅಭಿಪ್ರಾಯದ ಮೇರೆಗೆ ಪಠ್ಯಕ್ರಮದಲ್ಲಿ ಇರದ ಪ್ರಶ್ನೆಗಳನ್ನು ಹೊರತುಪಡಿಸಿ, ಮೌಲ್ಯಮಾಪನವನ್ನು ಮಾಡಿ, ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ಸ್ಪಷ್ಟಪಡಿಸಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು  ಏಪ್ರಿಲ್ 18 19 ಮತ್ತು 26ರಂದು ನಡೆಸಿರುವ ಸಿಇಟಿ 2024ರ ಪರೀಕ್ಷೆಯು ಗೊಂದಲದಿಂದ ಮುಕ್ತಿಯನ್ನು ಹೊಂದಿದೆ. ಯಾವುದೇ ಕಾರಣಕ್ಕೂ ಮರು ಪರೀಕ್ಷೆಯನ್ನು ನಡೆಸುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಮೌಲ್ಯಮಾಪನವನ್ನು ನಡೆಸಿ ಮೇ ಅಂತ್ಯದ ವೇಳೆಗೆ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯದರ್ಶಿ ಅವರು ತಿಳಿಸಿದ್ದಾರೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸಿರುವ ಸಿಇಟಿ ಪರೀಕ್ಷೆಯಲ್ಲಿ, ಜೀವಶಾಸ್ತ್ರ ವಿಷಯದಲ್ಲಿ 11 ಪ್ರಶ್ನೆಗಳು, ಭೌತಶಾಸ್ತ್ರದಲ್ಲಿ ಒಂಬತ್ತು ಪ್ರಶ್ನೆಗಳು, ಗಣಿತ ವಿಷಯದಲ್ಲಿ 15 ಪ್ರಶ್ನೆಗಳು ಮತ್ತು ರಾಸಾಯನ ಶಾಸ್ತ್ರ ವಿಷಯದಲ್ಲಿ 15 ಪ್ರಶ್ನೆಗಳನ್ನು, ಔಟ್ ಆಫ್ ಸಿಲಬಸ್ ಪ್ರಶ್ನೆಗಳನ್ನು ಕೇಳಲಾಗಿತ್ತು. ಎಂಬುದು ವಿಷಯ ತಜ್ಞರ ಸಮಿತಿಯ ಅಭಿಪ್ರಾಯವಾಗಿದೆ. ಹಾಗಾಗಿ ಎರಡು ಕೃಪಾಂಕಗಳ ಆಧಾರದ ಮೇಲೆ ಮೌಲ್ಯಮಾಪನವನು ನಡೆಸಲಾಗುವುದು.ಭವಿಷ್ಯದಲ್ಲಿ ಈ ರೀತಿಯ ತಪ್ಪುಗಳು ನಡೆಯದಂತೆ ಕ್ರಮ ಕೈಗೊಳ್ಳಲು ವಿಷಯ ತಜ್ಞರ ಸಮಿತಿಯು ಸೂಚಿಸಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಲು, ನಿಗದಿತ ಮಾರ್ಗ ಸೂಚಿಗಳನ್ನು ಮತ್ತು ಮಾನದಂಡಗಳನ್ನು ಸಿದ್ಧಪಡಿಸಬೇಕು ಎಂಬುದು ವಿಷಯ ತಜ್ಞರ ಸಮಿತಿಯ ಅಭಿಪ್ರಾಯವಾಗಿದೆ. ಸಿ ಇ ಟಿ ವಿಷಯದ ಪ್ರಶ್ನೆ ಪತ್ರಿಕೆಗಳ ವಿಶ್ವಾಸದ ಹಿತದೃಷ್ಟಿಯಿಂದ ಮತ್ತು ಸಿಇಟಿ ವ್ಯವಸ್ಥೆಯ ವಿಶ್ವಾಸ ಮತ್ತು ಅರ್ಹತೆಯನ್ನು ಉಳಿಸುವ ದೃಷ್ಟಿಯಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆಯ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ ಸೈಟನ್ನು ಸಂಪರ್ಕಿಸಿ.

KCET 2024 : ಸಿಇಟಿ ಪರೀಕ್ಷೆಯ ಫಲಿತಾಂಶ ಯಾವಾಗ?.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸಿರುವ CET 2024 ರ ಪರೀಕ್ಷೆಯ ಫಲಿತಾಂಶವನ್ನು ಮೇ ತಿಂಗಳ ಅಂತ್ಯದೊಳಗೆ ಪ್ರಕಟಿಸಲಾಗುವುದು ಎಂದು KEA ಯ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ವಿಷಯ ತಜ್ಞರ ಸಮಿತಿಯ ಅಭಿಪ್ರಾಯದಂತೆ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು  ಏಪ್ರಿಲ್ 18 19 ಮತ್ತು 26ರಂದು, KCET ಪರೀಕ್ಷೆಯನ್ನು ನಡೆಸಲಾಗಿತ್ತು. ಆದರೆ ಈ ಪರೀಕ್ಷೆಯಲ್ಲಿ, ಕೆಲವು ಪ್ರಶ್ನೆಗಳು ಪಠ್ಯಕ್ರಮದಲ್ಲಿ ಇಲ್ಲದೆ ಇರುವುದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಗೊಂದಲಗಳಿಗೆ ಇಡಾಗಿದ್ದರು. ಇದನ್ನು ಪರಿಗಣಗನೆಗೆ ತೆಗೆದುಕೊಂಡ ಸರ್ಕಾರವು ಗೊಂದಲವನ್ನು ಬಗೆಹರಿಸುವಲ್ಲಿ ಯಶಸ್ವಿಯಾಗಿದೆ.

ಪಠ್ಯಕ್ರಮದಲ್ಲಿ ಇಲ್ಲದ ಪ್ರಶ್ನೆಗಳನ್ನು ಕೈ ಬಿಟ್ಟು ಮೌಲ್ಯಮಾಪನವನ್ನು ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದೆ. ಇದರಿಂದ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವುದು ಎಂದು ತಿಳಿಸಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ನಲ್ಲಿ ಫಲಿತಾಂಶವನ್ನು ಪ್ರಕಟಿಸಲಾಗುವುದು.

ಮೌಲ್ಯಮಾಪನವನ್ನು ಪಠ್ಯಕ್ರಮದಲ್ಲಿ ಇಲ್ಲದ ಪ್ರಶ್ನೆಗಳನ್ನು ಹೊರತುಪಡಿಸಿ ನಡೆಸಲಾಗುವುದು. ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಅಂಕಗಳ ಸಮಾನತೆಯನ್ನು ಕಾಪಾಡುವುದು ಕರ್ತವ್ಯವಾಗಿದೆ. ಕೊನೆಗೂ ಸಿಇಟಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ನಿಟ್ಟುಸಿರು ಬಿಡುವಂತಾಗಿದೆ.

Leave a Reply

Your email address will not be published. Required fields are marked *