Tharak7star

Importance of Ragi ( millet) : ರಾಗಿಯ ಮಹತ್ವ.

Importance of Ragi ( millet)

Importance of Ragi ( millet) : ರಾಗಿಯ ಮಹತ್ವ ಮತ್ತು ಪ್ರಯೋಜನಗಳ ಬಗ್ಗೆ ಈ ಲೇಖನದಲ್ಲಿ  ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.

ಬೇಸಿಗೆಯ ಬಿಸಿಲಿನ ತಾಪಮಾನಕ್ಕೆ ರಾಗಿಯ ಪದಾರ್ಥಗಳ ಸೇವನೆಯೂ ತುಂಬಾನೇ ಒಳ್ಳೆಯದು. ದೇಹಕ್ಕೆ ತಂಪು ನೀಡುವ ಜೊತೆಗೆ ಅನೇಕ ಪೌಷ್ಟಿಕ ಅಂಶಗಳನ್ನು ನೀಡುತ್ತದೆ. ಒಂದು ಜನಪ್ರಿಯ ಆಹಾರ ಧಾನ್ಯ. ರಾಗಿಯಿಂದ ಹಲವು ರೀತಿಯ ಪದಾರ್ಥಗಳನ್ನು ತಯಾರಿಸಬಹುದು. ರಾಗಿಯೂ ಅತ್ಯಂತ ಪೌಷ್ಟಿಕಾಂಶ ಇರುವಂತ ಆಹಾರ ಪದಾರ್ಥವಾಗಿದೆ. ರಾಗಿಯೂ ಉಷ್ಣವಲಯದ ಆಹಾರ ಬೆಳೆಗಳಲ್ಲಿ ಒಂದಾಗಿದೆ.

ರಾಕಿ ಬೆಳೆಯನ್ನು ಬೆಳೆಯಲು ಸ್ವಲ್ಪ ಪ್ರಮಾಣದ ನೀರಿನ ಅವಶ್ಯಕತೆ ಇದೆ. ಬೇರೆ ಬೆಳೆಗಳ ತರಹ ಹೆಚ್ಚು ನೀರಿನ ಅವಶ್ಯಕತೆ ಇರುವುದಿಲ್ಲ. ಬೇಸಿಗೆಯ ತಾಪಮಾನಕ್ಕೆ ರಾಗಿಯ ಪಾನೀಯಗಳು ದೇಹಕ್ಕೆ ತಂಪು ನೀಡುತ್ತವೆ. ಮತ್ತು ದೇಹವನ್ನು ಧಣಿಯಲು ಬಿಡುವುದಿಲ್ಲ. ದೇಹವನ್ನು ಆರೋಗ್ಯಕರವಾಗಿ ಇರಿಸುತ್ತವೆ. ಈಗಿನ ಬೇಸಿಗೆ ಬಿಸಿಲಿಗೆ ರಾಗಿ ಗಂಜಿ ಕುಡಿಯುವುದು ತುಂಬಾನೇ ಒಳ್ಳೆಯದು. ರಾಗಿಯಲ್ಲಿ ಅತ್ಯಂತ ಹೆಚ್ಚಿನದಾಗಿ ಕ್ಯಾಲ್ಸಿಯಂ, ನಾರಿನ ಅಂಶ, ಆಮಿನೊ ಆಮ್ಲ, ವಿಟಮಿನ್ ಸಿ ಇನ್ನೂ ಮುಂತಾದ ಖನಿಜಾಂಶಗಳು ಮತ್ತು ಪೋಷಕಾಂಶಗಳು ಸಮೃದ್ಧವಾಗಿದೆ.

Importance of Ragi ( millet) : ರಾಗಿಯ ಮಹತ್ವ.

Importance of Ragi ( millet)

Importance of Ragi ( millet) : ರಾಗಿಯ ಮಹತ್ವವನ್ನು ತಿಳಿದುಕೊಳ್ಳೋಣ. ರಾಗಿಯು ಒಂದು ಅತ್ಯಂತ ಪೌಷ್ಟಿಕಾಂಶ ಮತ್ತು ಖನಿಜಾಂಶಗಳನ್ನು ಹೊಂದಿದ ಆಹಾರ ಪದಾರ್ಥವಾಗಿದೆ.

ರಾಗಿಯನ್ನು ಬೆಳೆಯಲು ಅತ್ಯಂತ ಕಡಿಮೆ ನೀರು ಸಾಕಾಗುತ್ತದೆ.  ರಾಗಿ ಒಂದು ಪೌಷ್ಟಿಕ ಆಹಾರ ಪದಾರ್ಥವಾಗಿದೆ. ರಾಗಿಯಲ್ಲಿ ಅನೇಕ ರೀತಿಯ ಖನಿಜಾಂಶಗಳು, ಲವಣಗಳು, ಪೌಷ್ಟಿಕಾಂಶಗಳು ಅಡಗಿದೆ. ರಾಗಿಯಲ್ಲಿ ಅತ್ಯಂತ ಹೆಚ್ಚಿನದಾಗಿ ರೋಗನಿರೋಧಕ ಶಕ್ತಿ ಇದೆ. ಫೈಬರ್, ಕ್ಯಾಲ್ಸಿಯಂ, ನಾರಿನಾಂಶ  ಅಧಿಕವಾಗಿದೆ. ವಿಟಮಿನ್ ಗಳು ಸಮೃದ್ಧವಾಗಿದೆ. ಅನೇಕ ರೀತಿಯ ಜೀವಸತ್ವಗಳಿಂದ ಕೂಡಿದೆ.

ರಾಗಿ ಸೇವನೆಯಿಂದ ಮಕ್ಕಳ ಆರೋಗ್ಯದಲ್ಲಿ ಉತ್ತಮ ರೀತಿಯ ಪ್ರಗತಿಯನ್ನು ಕಾಣಬಹುದು. ಮಕ್ಕಳ ಬೆಳವಣಿಗೆಯಲ್ಲಿ ಪೌಷ್ಟಿಕಾಂಶದ ಅವಶ್ಯಕತೆ ಇರುತ್ತದೆ. ರಾಗಿ ಪದಾರ್ಥಗಳ ಸೇವನೆಯಿಂದ ಮಕ್ಕಳ ಬೆಳವಣಿಗೆಗೆ ಬೇಕಾಗುವಂತಹ ಪೌಷ್ಟಿಕಾಂಶಗಳು, ವಿಟಮಿನ್ ಗಳು ಖನಿಜಾಂಶಗಳು ದೊರಕುತ್ತವೆ. ಮಕ್ಕಳ ದೈಹಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳು ಆರೋಗ್ಯವಿತವಾಗಿರಲು ಸಹಾಯ ಮಾಡುತ್ತದೆ.

ಎಲ್ಲಾ ವಯಸ್ಕರೂ ಸಹ ರಾಗಿಯ ಪದಾರ್ಥಗಳನ್ನು ಸೇವಿಸಬಹುದು. ಇದರಿಂದ ರೋಗನಿರೋಧಕ ಶಕ್ತಿ, ಪೌಷ್ಟಿಕತೆ ಸಿಗುತ್ತದೆ. ದೇಹವನ್ನು ಅನೇಕ ಆರೋಗ್ಯ ಸಮಸ್ಯೆಗಳಿಂದ ತಡೆಯುತ್ತದೆ. ರಾಗಿಯೂ ಒಂದು ಆರೋಗ್ಯದಾಯಕ ಆಹಾರ ಪದಾರ್ಥವಾಗಿದೆ ಎಂದರೆ ತಪ್ಪಾಗಲಾರದು. ರಾಜ್ಯ ಸೇವನೆಯಿಂದ ಮೂಳೆಗಳು ಬಲಗೊಳ್ಳುತ್ತವೆ. ರಾಗಿಯಲ್ಲಿರುವಂತಹ ಕ್ಯಾಲ್ಸಿಯಂ ಅಂಶ, ಕಬ್ಬಿಣದ ಅಂಶ ಮೂಳೆಗಳ ಬೆಳವಣಿಗೆಗೆ ಸಹಕರಿಸುತ್ತವೆ.

ರಾಗಿ ಬೆಳೆ ಬೆಳೆಯುವ ವಿಧಾನ.

Importance of Ragi ( millet) : ರಾಗಿಯ ಪ್ರಯೋಜನಗಳು.

Importance of Ragi ( millet)

Importance of Ragi ( millet) : ರಾಗಿಯ ಪ್ರಯೋಜನಗಳು ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ.

1. ಮೂಲಿಗಳ ಬೆಳವಣಿಗೆ : ರಾಗಿ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ಮೂಳೆಗಳು ಅತ್ಯಂತ ಬಲಿಷ್ಠವಾಗಿ ಬೆಳೆಯುತ್ತವೆ. ಮತ್ತು ಗಟ್ಟಿಯಾಗುತ್ತವೆ. ರಾಗಿಯಲ್ಲಿ ಅತ್ಯಂತ ಹೆಚ್ಚಿನ ಕ್ಯಾಲ್ಸಿಯಂ ಅಂಶ ಮತ್ತು ಕಬ್ಬಿಣದ ಅಂಶ ಇರುವುದರಿಂದ ಈ ಅಂಶಗಳು ಮೂಳೆಗಳ ಬಲ ವರ್ತನೆಗೆ ಕಾರಣವಾಗುತ್ತದೆ.

2. ಮಕ್ಕಳಿಗೆ ಪೌಷ್ಟಿಕ ಆಹಾರವಾಗಿದೆ : ರಾಗಿಯೂ ಮಕ್ಕಳ ಬೆಳವಣಿಗೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿನಿತ್ಯ ರಾಗಿಯ ಪದಾರ್ಥಗಳನ್ನು ಮಕ್ಕಳಿಗೆ ತಿನಿಸುತ್ತಾ ಬಂದರೆ, ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯಲ್ಲಿ ಅತ್ಯಂತ ಉತ್ತಮ ರೀತಿಯ ಪ್ರಯೋಜನವನ್ನು ಪಡೆಯಬಹುದು.

3. ಜೀರ್ಣಕ್ರಿಯೆಗೆ ಸಹಕಾರಿ : ರಾಗಿಯ ಸೇವನೆಯಿಂದ ಜೀರ್ಣಕ್ರಿಯೆ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು. ರಾಗಿಯಲ್ಲಿ ಅಧಿಕ ನಾರಿನ ಅಂಶ ಇರುವುದರಿಂದ ಜೀರ್ಣಕ್ರಿಯೆಗೆ ಸಹಕರಿಸುತ್ತದೆ. ಬೇರೆ ಆಹಾರ ಪದಾರ್ಥಗಳಿಗೂ ಹೋಲಿಸಿದರೆ ರಾಗಿಯಲ್ಲಿ ಅಧಿಕ ಸಂಖ್ಯೆಯಲ್ಲಿ ನಾರಿನಂಶ ಇರುತ್ತದೆ.

4. ಮಧುಮೇಹಿಗಳಿಗೆ ಅತ್ಯಂತ ಒಳ್ಳೆಯ ಆಹಾರವಾಗಿದೆ:  ರಾಗಿ ಪದಾರ್ಥಗಳ ಸೇವನೆಯಿಂದ ಮಧುಮೇಹಿಗಳು ತಮ್ಮ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಬಹುದು. ಇದರಿಂದ ಮಧುಮೇಹ ನಿಯಂತ್ರಣ ಗೊಳ್ಳುತ್ತದೆ. ಪ್ರತಿನಿತ್ಯ ರಾಗಿಮುದ್ದೆ ರಾಗಿ ಗಂಜಿ ಸೇವನೆ ಮಾಡುವುದರಿಂದ ಆರೋಗ್ಯವು ಸಮತೋಲನದಲ್ಲಿ ಇಟ್ಟುಕೊಳ್ಳಬಹುದು.

5. ತೂಕ ಕಡಿಮೆ ಮಾಡುವಲ್ಲಿ ಸಹಕಾರಿ : ರಾಗಿಯ ಸೇವನೆಯಿಂದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ರಾಗಿಯಲ್ಲಿ ಲಸಿಥಿನ್ ಮತ್ತು ಮೆಥಿಲೋನಿನ್ ಎಂಬ ಆಮ್ಲಗಳು ಇರುತ್ತವೆ. ಇವು ಪದೇ ಪದೇ ಹಸಿವಾಗುವುದನ್ನು ನಿಯಂತ್ರಣ ಮಾಡುತ್ತವೆ. ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತವೆ. ಹೀಗಾಗಿ ದೇಹದ ತೂಕವನ್ನು ಕಡಿಮೆಗೊಳ್ಳುತ್ತದೆ.

6. ಕೆಟ್ಟ ಕೊಬ್ಬಿನ ಅಂಶವನ್ನು ಕಡಿಮೆ ಮಾಡುತ್ತದೆ : ರಾಜ್ಯ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಅಡಗಿರುವ ಕೆಟ್ಟ ಕೊಬ್ಬಿನ ಅಂಶವನ್ನು ಕರಗಿಸುವಲ್ಲಿ ಸಹಕಾರಿಯಾಗುತ್ತದೆ.

7. ರಕ್ತ ಹೀನತೆ ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ : ಪ್ರತಿನಿತ್ಯ ರಾಗಿಯ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ರಕ್ತ ಹೀನತೆ ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ. ರಾಗಿಯಲ್ಲಿರುವ ಕಬ್ಬಿಣದ ಅಂಶ ಹೋಯಿದಕ್ಕೆ ಸಹಕಾರಿಯಾಗಿದೆ.

8. ಹಿಮೋಗ್ಲೋಬಿನ್ ಮಟ್ಟವನ್ನು ಸುಧಾರಣೆ ಮಾಡುತ್ತದೆ : ರಾಗಿಯ ಸೇವನೆಯಿಂದ ರಕ್ತದಲ್ಲಿರುವ ಹಿಮೋಗ್ಲೋಬಿನ್ ಮಟ್ಟ ಸುಧಾರಣೆಗೊಳ್ಳುತ್ತದೆ.

9. ನಿದ್ರಾಹೀನತೆ ಕಡಿಮೆಯಾಗುತ್ತದೆ : ಪ್ರತಿನಿತ್ಯ ರಾಗಿ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ನಿದ್ರಾಹೀನತೆಯು ಕಡಿಮೆಯಾಗುತ್ತದೆ. ಚೆನ್ನಾಗಿ ನಿದ್ರೆ ಬರುತ್ತದೆ. ಆರೋಗ್ಯವೇ ಸುಧಾರಣೆಗೊಳ್ಳುತ್ತದೆ. ಮನುಷ್ಯನ ಆರೋಗ್ಯ ಸ್ಥಿತಿಯಲ್ಲಿ, ಏರುಪೇರು ಆಗುವ ಪ್ರಕ್ರಿಯೆಯಲ್ಲಿ ನಿದ್ರೆಯ ಪಾತ್ರ ತುಂಬಾನೇ ಮುಖ್ಯ ಇರುತ್ತದೆ. ಚೆನ್ನಾಗಿ ನಿದ್ರೆ ಮಾಡದಿದ್ದರೆ, ಮನುಷ್ಯನ ಆರೋಗ್ಯದಲ್ಲಿ ಏರುಪೇರುಗಳು ಸಂಭವಿಸುತ್ತವೆ. ರಾಗಿ ಪದಾರ್ಥಗಳ ಸೇವನೆಯಿಂದ ಇದನ್ನು ಸುಧಾರಣೆ ಮಾಡಿಕೊಳ್ಳಬಹುದು.

10. ಪೌಷ್ಟಿಕಾಂಶಯುಕ್ತ ಆಹಾರವಾಗಿದೆ : ರಾಗಿಯೂ ಅತ್ಯಂತ ಪೌಷ್ಟಿಕಾಂಶಯುತ ಆಹಾರವಾಗಿದೆ. ಪ್ರತಿನಿತ್ಯ ಮಕ್ಕಳಿಗೆ ಸೇವನೆ ಮಾಡಿಸುವ ಬೆಳವಣಿಗೆ ಮಾಡಿದರೆ, ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯಲ್ಲಿ ಮೂಳೆಗಳ ಬಲವರ್ಧನೆಯಲ್ಲಿ, ತೂಕ ಹೆಚ್ಚಿಸುವಲ್ಲಿ ಸಹ ಸಹಕಾರಿಯಾಗಿದೆ.

ರಾಗಿ ಮುದ್ದೆ ಮಾಡುವ ವಿಧಾನ : ರೆಸಿಪಿಗಳು.

11. ನೆನಪಿನ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ : ರಾಗಿಯಲ್ಲಿ ಟ್ರೈಪೋಸ್ಟ್ಫನ್ ಎಂಬ ಅಮಿನೋ ಆಮ್ಲವು ರಾಗಿಯಲ್ಲಿ ಅಧಿಕ ಪ್ರಮಾಣದಲ್ಲಿದ್ದು, ಇದು ನರ ವ್ಯವಸ್ಥೆಯನ್ನು ಉತ್ತಮಪಡಿಸಿ, ನೆನಪಿನ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಮತ್ತು ಮನಸ್ಸನ್ನು ಶಾಂತಿಯುತವಾಗಿ ಇರಿಸುತ್ತದೆ.

ಹೀಗೆ ರಾಗಿಯೂ ಅತ್ಯಂತ ಪೌಷ್ಠಿಕ ಆಹಾರ ಪದಾರ್ಥ ಆಗಿದೆ. ಬಹು ಮುಖ್ಯ ಪೌಷ್ಟಿಕ ಆಹಾರ ಎಂದರೆ ತಪ್ಪಾಗಲಾರದು. ರಾಗಿಯೂ ಸಮೃದ್ಧಪೂರ್ತಿಕ ಅಂಶ ಮತ್ತು ಖನಿಜಾಂಶವನ್ನು ಹೊಂದಿರುವ ಆಹಾರ ಪದಾರ್ಥವಾಗಿದೆ. ಇದರಲ್ಲಿ ಅನೇಕ ರೀತಿಯ ವಿಟಮಿನ್ ಗಳು ಖನಿಜಾಂಶಗಳು, ಪೌಷ್ಟಿಕಾಂಶಗಳು ಇರುತ್ತವೆ.

ರಾಗಿಯಲ್ಲಿ ಅತ್ಯಧಿಕ ರೋಗ ನಿರೋಧಕ ಶಕ್ತಿ ಇರುತ್ತದೆ. ಇದರ ಜವನೆಯಿಂದ ದೇಹವು ಆರೋಗ್ಯಯುತವಾಗಿ ಇರುತ್ತದೆ. ಅತಿ ಬೇಗ ಯಾವುದೇ ರೀತಿಯ ಅನಾರೋಗ್ಯಕ್ಕೆ ಸಹಕರಿಸುವುದಿಲ್ಲ. ಅನಾರೋಗ್ಯದ ವಿರುದ್ಧ ಹೋರಾಡುವ ಶಕ್ತಿಯನ್ನು ನೀಡುತ್ತದೆ. ಶಕ್ತಿಯುತ ಆಹಾರವಾಗಿರುವುದರಿಂದ ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ನೀಡುತ್ತದೆ.

ಇದರಲ್ಲಿ ಇರುವಂತಹ ಕಬ್ಬಿಣದ ಅಂಶ ಮತ್ತು ಕ್ಯಾಲ್ಸಿಯಂ ಅಂಶ ಮುಳಿಗಳನ್ನು ಗಟ್ಟಿ ಮಾಡುವ ಜೊತೆಗೆ ಶಕ್ತಿಯುತವಾಗಿ ಮಾಡುತ್ತವೆ. ಫೈಬರ್ ಅಂಶ ಇರುತ್ತದೆ. ನಾರಿನ ಅಂಶವೂ ಇರುವುದರಿಂದ ಜೀರ್ಣಕ್ರಿಯೆ ಮತ್ತು ಮಲಬದ್ಧತೆಯನ್ನು ಕಡಿಮೆ ಮಾಡುವಲ್ಲಿ ಸಹಕರಿಸುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ, ರಾಗಿಯೂ ಒಂದು ಪೌಷ್ಟಿಕ ಆಹಾರವಾಗಿ, ರೋಗನಿರೋಧಕವಾಗಿ, ಶಕ್ತಿಯುತ ಆಹಾರವಾಗಿ, ನೈಸರ್ಗಿಕವಾಗಿ ಸಿಗುವಂತಹ ಒಂದು ಉತ್ತಮ ಆಹಾರವಾಗಿ ಕೆಲಸ ನಿರ್ವಹಿಸುತ್ತದೆ. ರಾಗಿಯ ಸೇವನೆಯೂ ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು.

 

Leave a Reply

Your email address will not be published. Required fields are marked *