How to check EPF Balance in Mobile : ಮೊಬೈಲ್ ನಲ್ಲಿ ಪಿಎಫ್ (PF) ಹಣ ಚೆಕ್ ಮಾಡೋದು ಹೇಗೆ?, ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
EPF : ನೌಕರರ ಭವಿಷ್ಯ ನಿಧಿ ಅಥವಾ ಎಂಪ್ಲಾಯೇ ಪ್ರಾವಿಜನ್ ಫಂಡ್,ಗೆ ಸಂಬಂಧಿಸಿದಂತೆ, ನೌಕರರು ಅತಿ ಸುಲಭ ವಾಗಿ ಮೊಬೈಲ್ ಮೂಲಕ ತಮ್ಮ ಭವಿಷ್ಯ ನಿಧಿ (EPF) ಹಣವನ್ನು ಹೇಗೆ ಚೆಕ್ ಮಾಡಿಕೊಳ್ಳಬಹುದು,ಪ್ರಯೋಜನಗಳು ಅಥವಾ ಲಾಭಗಳು ಮತ್ತು ಅರ್ಹತೆಗಳು ಹಾಗೂ ಯಾವಾಗ ನೌಕರರು ಭವಿಷ್ಯ ನಿಧಿಯಿಂದ ಹಣವನ್ನು ಹಿಂಪಡೆಯಬಹುದು. ಇದಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.
ಭಾರತ ದೇಶದಲ್ಲಿ ನೌಕರರ ಭವಿಷ್ಯ ನಿಧಿ (EPF), ಉಳಿತಾಯ ಮತ್ತು ನಿವೃತ್ತಿ ನಿಧಿಯಾಗಿದೆ. ಉದ್ಯೋಗಿಗಳ ಭವಿಷ್ಯ ಜೀವನಕ್ಕೆ ಇದು ಸಹಕಾರಿಯಾಗಿದೆ. ಕೆಲಸ ಮಾಡುತ್ತಿರುವ ನೌಕರರು ತಮ್ಮ ಮುಂದಿನ ಜೀವನ ನಿರ್ವಹಣೆಗಾಗಿ ಸ್ವಲ್ಪ ಪ್ರಮಾಣದ ಉಳಿತಾಯವನ್ನು ಈ ಮೂಲಕ ಮಾಡಬಹುದು. ಉದ್ಯೋಗಿಗಳ ನಿವೃತ್ತ ಜೀವನಕ್ಕೆ ಭವಿಷ್ಯ ನಿಧಿ (PF) ಆರ್ಥಿಕ ಭದ್ರತೆಯನ್ನು ಒದಗಿಸಿದೆ. ಇದರಿಂದ ನಿವೃತ್ತಿ ಜೀವನವನ್ನು ಆರಾಮದಾಯಕವಾಗಿ, ಸಂತೋಷದಾಯಕವಾಗಿ, ಕಳೆಯಲು ಸಹಕಾರಿಯಾಗಿದೆ.
How to check EPF Balance in Mobile : ಮೊಬೈಲ್ ನಲ್ಲಿ ಪಿಎಫ್ (PF) ಹಣ ಚೆಕ್ ಮಾಡೋದು ಹೇಗೆ?.
How to check EPF Balance in Mobile : ಮೊಬೈಲ್ ನಲ್ಲಿ ಪಿಎಫ್ (PF) ಹಣ ಚೆಕ್ ಮಾಡೋದು ಹೇಗೆ?, ಎಂಬ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಅವರ ನಿವೃತ್ತಿ ಜೀವನಕ್ಕೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ. ಇದು ಒಂದು ಭವಿಷ್ಯದ ಉಳಿತಾಯ ಯೋಜನೆ ಆಗಿದೆ.
ಉದ್ಯೋಗಿಗಳು ದುಡಿಯುವ ಸಮಯದಲ್ಲಿ, ಭವಿಷ್ಯ ನಿಧಿಗೆ, ಅವರ ವೇತನದ ಆಧಾರದ ಮೇಲೆ ಸ್ವಲ್ಪ ಪ್ರಮಾಣದ ಹಣವನ್ನು ನೀಡಿರುತ್ತಾರೆ. ಅದಕ್ಕೆ ಸರ್ಕಾರದಿಂದ ಸ್ವಲ್ಪ ಪ್ರಮಾಣದ ಹಣವನ್ನು ಹಾಕಲಾಗುತ್ತದೆ. ಎರಡು ಕಡೆಯಿಂದ ಬಂದ ಹಣವನ್ನು ಉದ್ಯೋಗಿಯ ಭವಿಷ್ಯ ನಿಧಿ ಖಾತೆಯಲ್ಲಿ ಇಡಲಾಗುತ್ತದೆ. ಇದರಿಂದ ಉದ್ಯೋಗಿಗೆ ನಿವೃತ್ತಿ ಜೀವನಕ್ಕೆ ಸಹಾಯವಾಗುತ್ತದೆ. ನಿವೃತ್ತಿ ಜೀವನದಲ್ಲಿ ಹಣಕಾಸಿನ ಸಮಸ್ಯೆ ಉಂಟಾಗದಂತೆ ಜೀವನ ನಿರ್ವಹಿಸಲು ಇದು ಸಹಕಾರಿಯಾಗಿದೆ.
ಭವಿಷ್ಯ ನಿಧಿಯನ್ನು ಮೊಬೈಲ್ ಮೂಲಕ ಚೆಕ್ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಯೋಣ.
- EPFO ದ ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಬೇಕು.
- ಅಧಿಕೃತ ವೆಬ್ಸೈಟ್ ವಿಳಾಸ
- ಅಧಿಕೃತ ವೆಬ್ ಸೈಟ್ ಲಿಂಕನ್ನು ಕ್ಲಿಕ್ ಮಾಡಿದ ಮೇಲೆ ಮುಖಪುಟ ತೆರೆದುಕೊಳ್ಳುತ್ತದೆ.
- ನಂತರ ನೀವು ಅಲ್ಲಿ ಕಾಣುವ “our service ” ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು.
- ಆ ಪರದೇ ಓಪನ್ ಆದ ನಂತರ “For employee” ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು.
- ಆ ಪರದೆಯ ಮುಖಪುಟ ( ಓಪನ್) ತೆರೆದ ನಂತರ, ನೀವು ” Members passbook” ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು.
- ನಿಮಗೆ ನೀಡಲಾಗಿರುವ “UAN” 12 ಅಂಕೆಗಳ ಖಾತೆ ನಂಬರನ್ನು ಎಂಟ್ರಿ ಮಾಡಬೇಕು.
- UAN ನಂಬರ್ ಎಂಟ್ರಿ ಮಾಡಿದ ನಂತರ, ಪಾಸ್ವರ್ಡ್ ಅನ್ನು ಎಂಟ್ರಿ ಮಾಡಿ, ನೀಡಿರುವ ಕ್ಯಾಪ್ಚರ್ ಎಂಟ್ರಿ ಮಾಡಬೇಕು. ನಂತರ ಲಾಗಿನ್ ಬಟನ್ ಕೇಕ್ ಮಾಡಬೇಕು.
- ಆಗ ನಿಮ್ಮ ಭವಿಷ್ಯ ನಿಧಿಯ ಪರದೆಯ ಮೇಲೆ ಕಾಣಿಸುತ್ತದೆ.
- ಅದನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
ಹೀಗೆ ನೀವು ನಿಮ್ಮ ಭವಿಷ್ಯ ನಿಧಿಯ ಒಟ್ಟು ಮೊತ್ತವನ್ನು ಚೆಕ್ ಮಾಡಿಕೊಳ್ಳಬಹುದು.. ನಿಮ್ಮ ಭವಿಷ್ಯ ನಿಧಿಯಲ್ಲಿರುವ ಒಟ್ಟು ಮೊತ್ತ, ನೀವು ಯಾವಾಗ ಹಣವನ್ನು ವಿಥ್ ಡ್ರಾ ಮಾಡಿಕೊಂಡಿದ್ದೀರಿ, ಎಂಬ ಎಲ್ಲಾ ಮಾಹಿತಿಯನ್ನು ನೀಡುತ್ತದೆ.
EPF ನ ಅರ್ಹತೆ ಮತ್ತು ಪ್ರಯೋಜನಗಳು.
EPF : ಉದ್ಯೋಗಿಯ ಅಥವಾ ನೌಕರರ ಭವಿಷ್ಯ ನಿಧಿ. ಒಂದು ಆರ್ಥಿಕ ಭದ್ರತೆ ನೀಡುವ ಯೋಜನೆಯಾಗಿದೆ. ಉದ್ಯೋಗದಾತರು ತಮ್ಮ ನಿವೃತ್ತಿ ಜೀವನವನ್ನು ಯಾವುದೇ ಹಣಕಾಸಿನ ತೊಂದರೆ ಅನುಭವಿಸದೆ, ಸಂತೋಷದಾಯಕವಾಗಿ ಕಳೆಯಬಹುದು. ಎಲ್ಲಾ ನೌಕರರು ಭವಿಷ್ಯ ನಿಧಿಗೆ ಅರ್ಜಿಯನ್ನು ಸಲ್ಲಿಸಬಹುದು.
ನೌಕರರ ನಿವೃತ್ತಿ ಜೀವನಕ್ಕೆ ಆರ್ಥಿಕ ಸ್ಥಿರತೆ ಮತ್ತು ಭದ್ರತೆಯನ್ನು ಭವಿಷ್ಯ ನಿಧಿ ಯೋಜನೆ ಒದಗಿಸುತ್ತದೆ. ಈ ಭವಿಷ್ಯನದಿಂದ ದೊರಕುವ ಪ್ರಯೋಜನಗಳು ಮತ್ತು ಲಾಭಗಳನ್ನು ನೋಡೋಣ.
1. ಆರ್ಥಿಕ ಭದ್ರತೆ : ಉದ್ಯೋಗಿಯ ನಿವೃತ್ತ ಜೀವನಕ್ಕೆ ಪರೀಕ್ಷೆ ನಿಧಿ ಯೋಜನೆ ಆರ್ಥಿಕ ಭದ್ರತೆಯನ್ನು ಒದಗಿಸಿದೆ. ನಿವೃತ್ತಿ ಜೀವನವನ್ನು ಯಾವುದೇ ಹಣಕಾಸಿನ ತೊಂದರೆ ಇಲ್ಲದೆ ನಡೆಸಬಹುದು.
2. ತುರ್ತು ಹಣಕಾಸಿಗೆ ಸಹಾಯ : ಉದ್ಯೋಗಿಯ ಯಾವುದೇ ರೀತಿಯ ಜೀವನದ ಹಣಕಾಸಿನ ತೊಂದರೆಗೆ ಸಹಾಯವಾಗುತ್ತದೆ. ಯಾವುದೇ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಭವಿಷ್ಯ ನಿಧಿಯ ಹಣವನ್ನು ಹಿಂದಕ್ಕೆ ಪಡೆಯಬಹುದು. ಇದು ಹಣಕಾಸಿನ ತೊಂದರೆಯನ್ನು ನಿವಾರಿಸುತ್ತದೆ.
3. ತೆರಿಗೆ ಉಳಿತಾಯ : ನೌಕರರು ತಮ್ಮ ಭವಿಷ್ಯ ನಿಧಿಗೆ ನೀಡುವ ಹಣವು ಆದಾಯ ತೆರಿಗೆಯಿಂದ ವಿನಾಯಿತಿಯನ್ನು ಹೊಂದಿದೆ. ಭವಿಷ್ಯ ನಿತ್ಯ ಮೂಲಕ ಬರುವ ಆದಾಯವನ್ನು ತೆರಿಗೆ ವಿನಾಯಿತಿ ಪಡೆಯಬಹುದು.. ಆದಾಯ ತೆರಿಗೆ ಕಾಯ್ದೆ 80 c ಅಡಿಯಲ್ಲಿ ತೆರಿಗೆ ವಿನಾಯತಿಯನ್ನು ಪಡೆಯಬಹುದು.
4. ಉನ್ನತ ಶಿಕ್ಷಣ ಪಡೆಯುವುದು, ಮನೆ ನಿರ್ಮಿಸುವುದು, ಮದುವೆಯ ಖರ್ಚಿಗೆ, ಹಾಗೂ ವೈದ್ಯಕೀಯ ಖರ್ಚಿಗೆ ಇದು ಸಹಾಯವಾಗಿದೆ.
ಹೀಗೆ ಭವಿಷ್ಯ ನಿಧಿಯಿಂದ ನಿವೃತ್ತಿ ಹೊಂದಿದ ನೌಕರರು ಮತ್ತು ಉದ್ಯೋಗಿಯು ಪಡೆಯಬಹುದು. ನಿವೃತ್ತಿ ಹೊಂದದ ನೌಕರರು ಸಹ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಇದರ ಪ್ರಯೋಜನವನ್ನು ಪಡೆಯಬಹುದು.
EPF ಯಾವ ಸಂದರ್ಭದಲ್ಲಿ ಹಿಂದಕ್ಕೆ ಪಡೆಯಬಹುದು.
EPF : ಭವಿಷ್ಯ ನಿಧಿ ಹಣವನ್ನು ಉದ್ಯೋಗಿಯ ನಿವೃತ್ತಿಯ ಮೇಲೆ ಪಡೆಯಬಹುದು ಅಥವಾ ತುರ್ತು ಪರಿಸ್ಥಿತಿಗೆ ಸಂದರ್ಭದಲ್ಲಿ ಯಾವಾಗ ಬೇಕಾದರೂ ಪಡೆದುಕೊಳ್ಳಬಹುದು. ಸಂಪೂರ್ಣವಾಗಿ ಹಣವನ್ನು ನಿವೃತ್ತಿಯ ನಂತರ ಪಡೆದುಕೊಳ್ಳಬಹುದು. ಕೆಲಸವಿಲ್ಲದ ಅವಧಿ ಎರಡು ತಿಂಗಳಿಗಿಂತ ಹೆಚ್ಚಿನದಾಗಿದ್ದರೆ ಆಗ ಭವಿಷ್ಯ ನಿಧಿಯಿಂದ ಸಂಪೂರ್ಣ ಹಣವನ್ನು ಹಿಂದಕ್ಕೆ ಪಡೆಯಬಹುದು.
ಹಾಗೆ ಹಣಕಾಸಿನ ತುರ್ತು ಅಭಾವದ ಸಂದರ್ಭದಲ್ಲಿ, ಅಂದರೆ ಮದುವೆ ಕಾರ್ಯಗಳಿಗೆ, ಹೊಸ ಭೂಮಿ ಅಥವಾ ಮನೆಯನ್ನು ಖರೀದಿಸಲು, ವಾಹನಗಳನ್ನು ಖರೀದಿಸಲು, ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ, ಮಕ್ಕಳ ಸ್ವಂತ ಉದ್ಯೋಗ ಪ್ರಾರಂಭಿಸುವುದಕ್ಕಾಗಿ, ಗೃಹ ಸಾಲವನ್ನು ಮರುಪಾವತಿ ಮಾಡಲು, ಹಾಗೂ ಯಾವುದೇ ರೀತಿಯ ವೈದ್ಯಕೀಯ ಸೌಲಭ್ಯವನ್ನು ಪಡೆಯಲು ಭವಿಷ್ಯ ನಿತ್ಯ ಹಣವನ್ನು ತೆಗೆದುಕೊಳ್ಳಬಹುದು.
ಭವಿಷ್ಯ ನಿಧಿಯ ಸೌಲಭ್ಯವನ್ನು ಪಡೆಯಲು ಕಡ್ಡಾಯವಾಗಿ “UAN ” ಖಾತೆ ನಂಬರ್ ಇರಬೇಕು. ಈ ನಂಬರ್ ನಿಮಗೆ ನಿಮ್ಮ ಭವಿಷ್ಯ ನೀತಿಯಲ್ಲಿ ಮಾಡುವ ತಿದ್ದುಪಡಿ ಮತ್ತು ಹಣದ ವ್ಯವಹಾರದ ಬಗ್ಗೆ ತಿಳಿಯಲು, ಹಣವನ್ನು ಹಿಂದಕ್ಕೆ ಪಡೆಯಲು ಸಹಾಯ ಮಾಡುತ್ತದೆ. ಕಡ್ಡಾಯವಾಗಿ (UAN ) ಯುನಿವರ್ಸಲ್ ಅಕೌಂಟ್ ನಂಬರ್ ಇರಲೇಬೇಕು. ಜೊತೆಗೆ ಈ ನಂಬರನ್ನು ನಿಮ್ಮ ಮೊಬೈಲ್ ನಂಬರ್ ಜೊತೆಗೆ ಲಿಂಕ್ ಮಾಡಿಕೊಂಡಿರಬೇಕು.
ಆಧಾರ್ ಕಾರ್ಡ್ ನೊಂದಿಗೆ UAN ನಂಬರನ್ನು ಲಿಂಕ್ ಮಾಡಿಕೊಂಡಿರಬೇಕು ಮತ್ತು ಮೊಬೈಲ್ ನಂಬರ್ ಅನ್ನು ಲಿಂಕ್ ಮಾಡಿಕೊಂಡಿರಬೇಕು. ಇದರಿಂದ ಯಾವುದೇ ರೀತಿಯ ಸೌಲಭ್ಯಗಳು, ಮಾಹಿತಿಗಳು ನಿಮಗೆ SMS ಮೂಲಕ ದೊರೆಯುತ್ತವೆ. ಹಾಗೂ ಯಾವುದೇ ರೀತಿಯ ತಿದ್ದುಪಡಿ ಮಾಡಬೇಕಾದರೆ ಮೊಬೈಲ್ ಸಂಖ್ಯೆ ಮತ್ತು ಯುನಿವರ್ಸಲ್ ಅಕೌಂಟ್ ನಂಬರ್ ಕಡ್ಡಾಯವಾಗಿ ಬೇಕು.