Tharak7star

How To Apply Manaswini Yojane In Kannada 2024.

Manaswini yojane

How To Apply Manaswini Yojane In Kannada 2024. ಈ ಲೇಖನದಲ್ಲಿ ನಾವು ” ಮನಸ್ವಿನಿ ಯೋಜನೆ”ಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ. ಮಾಶಾಸನ ಯೋಜನೆ.

 “ಮನಸ್ವಿನಿ ಯೋಜನೆ “ ಸರ್ಕಾರ ಜಾರಿಗೆ ತಂದಿರುವ ಒಂದು ಮಹತ್ವದ ಯೋಜನೆಯಾಗಿದೆ. ಈ ಯೋಚನೆಯು ಅವಿವಾಹಿತ ಮತ್ತು ವಿಚ್ಛೇದಿತ ಮಹಿಳೆಯರಿಗೆ ಮಾಸಿಕ ವೇತನ ನೀಡುವ ಯೋಜನೆಯಾಗಿದೆ. ಇದರಿಂದ ಅವಿವಾಹಿತ ಮತ್ತು ವಿಚ್ಛೇದಿತ ಮಹಿಳೆಯರಿಗೆ ಜೀವನ ನಡೆಸಲು ಹಣಕಾಸಿನ ಸಹಾಯ ನೀಡಿದಂತಾಗಿದೆ. ಬಡತನದಲ್ಲಿ ವಾಸಿಸುವಂತಹ ಮಹಿಳೆಯರಿಗೆ ಇದು ಸ್ವಲ್ಪಮಟ್ಟಿಗೆ ಆರ್ಥಿಕ ಸಂಕಷ್ಟದಿಂದ ದೂರ ಉಳಿಯಲು ಸಹಾಯವಾಗಿದೆ.

ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಅವಿವಾಹಿತ ಮತ್ತು ವಿಚ್ಛೇದಿತ ಮಹಿಳೆಯರಿಗೆ ಆರ್ಥಿಕ ಭದ್ರತೆ ಒದಗಿಸಲು ಕರ್ನಾಟಕ ಸರ್ಕಾರ “ಮನಸ್ವಿನಿ ಯೋಜನೆ “ ಯನ್ನು  ಜಾರಿಗೆ ತಂದಿದೆ. ಈ ಯೋಜನೆ ಅಡಿಯಲ್ಲಿ ಅವಿವಹಿತ ಮತ್ತು ವಿಚ್ಛೇದನ ಪಡೆದಿರುವ ಮಹಿಳೆಯರಿಗೆ ಮಾಸಿಕ ರೂ.500 ವೇತನ ನೀಡಲಾಗುವುದು. ಈ ಲೇಖನದಲ್ಲಿ ನಾವು ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?, ಯಾರು ಅರ್ಜಿ ಸಲ್ಲಿಸಬಹುದು, ಯಾವ ಯಾವ ದಾಖಲೆಗಳು ಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ನೋಡೋಣ.

 Manaswini Yojane : ಮನಸ್ವಿನಿ ಯೋಜನೆ ಗೆ ಅರ್ಜಿ ಸಲ್ಲಿಸುವುದು ಎಲ್ಲಿ,ಹೇಗೆ ಮತ್ತು ಅರ್ಹತೆಗಳು.

Manaswini yojane

Manaswini yojane : ಮನಸ್ವಿನಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಎಲ್ಲಿ ಹಾಗೂ ಯಾವ ಅರ್ಹತೆಗಳನ್ನು ಹೊಂದಿರಬೇಕು ಎಂಬುದನ್ನು ನೋಡೋಣ.

ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಮನಸ್ವಿನಿ ಯೋಜನೆ ಗೆ ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರದ ಅಟಲ್ ಜಿ ಕೇಂದ್ರ ಅಥವಾ ಕರ್ನಾಟಕ ಒನ್, ಬೆಂಗಳೂರು ಒನ್, ಸಿ ಎಸ್ ಸಿ ಸಾಮಾನ್ಯ ಸೇವಾ ಕೇಂದ್ರ ಮತ್ತು ಬಾಪೂಜಿ ಕೇಂದ್ರದ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.

ಮನಸ್ವಿನಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಎಂದರೆ ನಿಮ್ಮ ಹತ್ತಿರದ ಇ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ. ಬೇಕಾಗಿರುವಾ ಅಗತ್ಯ ಮಾಹಿತಿಗಳನ್ನು ಮತ್ತು ದಾಖಲೆಗಳನ್ನು  ನೀಡಿ ಅರ್ಜಿ ಸಲ್ಲಿಸಬೇಕು.

ಮನಸ್ಸಿನ ಯೋಜನೆಯ ಅರ್ಹತೆಗಳು:

  •  ಅವಿವಾಹಿತ ಮತ್ತು ವಿಚ್ಛೇದಿತ ಮಹಿಳೆಯರು ಕರ್ನಾಟಕದಲ್ಲಿ ವಾಸವಿರಬೇಕು.
  • BPL ರೇಷನ್ ಕಾರ್ಡ್ ಹೊಂದಿರಬೇಕು ಅಥವಾ ಅಂತ್ಯೋದಯ  ರೇಷನ್ ಕಾರ್ಡ್ ಹೊಂದಿರಬೇಕು.
  •  ಮಹಿಳೆಯರ ವಯಸ್ಸು 40 ರಿಂದ 64 ವರ್ಷದ ಒಳಗೆ ಇರಬೇಕು.
  •  ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ವಾರ್ಷಿಕ ಆದಾಯ 12 ಸಾವಿರ ದಾಟಿರಬಾರದು.
  •  ನಗರ ಪ್ರದೇಶದ ಮಹಿಳೆಯರು ಬಡತನ ರೇಖೆಗಿಂತ ಕೆಳಗಿರುವ ಕುಟುಂಬದಲ್ಲಿ ಇರಬೇಕು ಅಂದರೆ ಬಿಪಿಎಲ್ ಪಡಿತರ ಕಾರ್ಡ್ ಹೊಂದಿರಬೇಕು.
  •  ಯಾವುದೇ ಸಾಮಾಜಿಕ ಭದ್ರತೆ ಯೋಜನೆ ಅಡಿಯಲ್ಲಿ  ಮಾಸಿಕ  ವೇತನ ಪಡೆಯುತ್ತಿರಬಾರದು.

ಈ ಎಲ್ಲಾ ಅರ್ಹತೆಯನ್ನು ಹೊಂದಿರುವ ಮಹಿಳೆಯರು ಮನಸ್ವಿನಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ನಂತರ ಸಂಬಂಧಪಟ್ಟ ಇಲಾಖೆಯಲ್ಲಿ ಅರ್ಜಿಯನ್ನು ಪರಿಶೀಲನೆ ಮಾಡಿ. ಅರ್ಹ  ಫಲಾನುಭವಿಗಳಿಗೆ ಮಾಸಿಕ ವೇತನವನ್ನು ನೀಡಲಾಗುವುದು.

ಮನಸ್ವಿನಿ ಯೋಜನೆಯ ಫಲಾನುಭವಿಗಳಿಗೆ ಮಾಶಾಸನವನ್ನು ಅವರು ನೀಡಿರುವ ಬ್ಯಾಂಕ್ ಖಾತೆ ಅಥವಾ ಅಂಚೆ ಕಚೇರಿಯ ಖಾತೆಗೆ ನೇರವಾಗಿ ಹಣವನ್ನು ವರ್ಗಾವಣೆ ಮಾಡಲಾಗುವುದು. ಮಾಸಿಕ ವೇತನ ಪಡೆಯುವ  ಫಲಾನುಭವಿಗಳು ಮುಂದಿನ ದಿನಗಳಲ್ಲಿ ವಿವಾಹವಾಗಲು ಇಚ್ಚಿಸಿದರೆ ಅಥವಾ ವಿವಾಹವಾದರೆ ಈ ಮಾಸಿಕ ವೇತನವನ್ನು ಸ್ವಯಂ ಪ್ರೇರಿತವಾಗಿ ರದ್ದುಗೊಳಿಸಬೇಕು.

ಹಾಗೆ ಈ ಯೋಜನೆಯಿಂದ ಮಾಜಿಕ ವೇತನ ಪಡೆಯುತ್ತಿರುವ ಮಹಿಳೆಯರು ಯಾವುದಾದರೂ ಉದ್ಯೋಗಕ್ಕೆ ಸೇರಿದರೆ, ಅವರ ಕುಟುಂಬದ ವಾರ್ಷಿಕ ಆದಾಯವು ಹೆಚ್ಚಾದರೆ, ಅಂತಹ ಮಹಿಳೆಯರು ಈ ಮಾಸಿಕ ವೇತನವನ್ನು  ಪಡೆಯಬಾರದು. 65 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ವೃದ್ಧಾಪ್ಯ ವೇತನ ಪಡೆಯುವುದರಿಂದ ಈ ಮನಸ್ವಿನಿ ಯೋಜನೆಯ ಮಾಸಿಕ ವೇತನ ಪಡೆಯಲು ಅರ್ಹತೆ ಇರುವುದಿಲ್ಲ.

ಮನಸ್ವಿನಿ ಯೋಜನೆ

Manaswini yojane : ಮನಸ್ವಿನಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು.

Manaswini yojane : ಮನಸ್ವಿನಿ ಯೋಜನೆಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ದಾಖಲೆಗಳು ಇರಬೇಕು. ಕರ್ನಾಟಕ ಸರ್ಕಾರ ಮನಸ್ವಿನಿ ಯೋಜನೆಯ ಸೌಲಭ್ಯ ಪಡೆಯಲು ಅವಿವಾಹಿತ ಮತ್ತು ವಿಚ್ಛೇದಿತ ಮಹಿಳೆಯರು ಈ ದಾಖಲೆಗಳನ್ನು ಹೊಂದಿರಬೇಕು.

1. ಆಧಾರ್ ಕಾರ್ಡ್: Aadhaar Card.

2. ಚುನಾವಣಾ ಗುರುತಿನ ಚೀಟಿ : Voter Card.

3.BPL ರೇಷನ್ ಕಾರ್ಡ್.

4. ಆದಾಯ ಮತ್ತು ಜಾತಿ ಪ್ರಮಾಣ ಪತ್ರ.

5.ಬ್ಯಾಂಕ್ ಖಾತೆಯ ವಿವರ ಅಥವಾ ಅಂಚೆ ಕಚೇರಿ ಖಾತೆಯ ವಿವರ.

6. ವೈವಾಹಿಕ ಜೀವನದ ಬಗ್ಗೆ ಸ್ವಯಂ ಘೋಷಣೆ ಪತ್ರ.

ಕರ್ನಾಟಕ ಸರ್ಕಾರವು ಅವಿವಾಹಿತ ಮತ್ತು ವಿಚ್ಛೇದಿತ ಮಹಿಳೆಯರ ಸಾಮಾಜಿಕ ಮತ್ತು ಆರ್ಥಿಕ ಭದ್ರತೆಗೆ ಜಾರಿಗೆ ತಂದಿರುವ ಈ ಯೋಜನೆಯನ್ನು ಪಡೆಯಲು ಮಹಿಳೆಯರು ಈ ಮೇಲಿನ ಎಲ್ಲಾ ದಾಖಲೆಗಳನ್ನು ಹೊಂದಿರಬೇಕು.

ಕರ್ನಾಟಕ ಸರ್ಕಾರವು ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಹೆಚ್ಚಿನ ಗಮನ ಕೊಟ್ಟಿರುವುದು ಮತ್ತು ಮಹಿಳೆಯರ ಅಭಿವೃದ್ಧಿಗೆ ಶ್ರಮಿಸಿರುವುದು ಈ ಯೋಜನೆಯಿಂದ ಗೊತ್ತಾಗುತ್ತದೆ. ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯ ನಿಷೇಧದಿಂದ ಬಳಲುತ್ತಿರುವ ಗ್ರಾಮೀಣ ಪ್ರದೇಶದ ಬಡ ಅವಿವಾಹಿತ ಹಾಗೂ ಬೇರ್ಪಟ್ಟ ಮತ್ತು ವಿಚ್ಛೇದಿತ ಮಹಿಳೆಯರು ಸ್ವತಂತ್ರವಾಗಿ ತಮ್ಮ ಜೀವನವನ್ನು ನಡೆಸಲು ಸಹಾಯ ಮಾಡುವ ಉದ್ದೇಶದಿಂದ ಮನಸ್ವಿನಿ ಯೋಜನೆಯನ್ನು ಜಾರಿಗೆ ತರಲಾಗಿದೆ.

ಮಹಿಳೆಯರ ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ಈ ಮನಸ್ವಿನಿ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಅರ್ಹತೆಯನ್ನು ಹೊಂದಿರುವ ಎಲ್ಲಾ ಫಲಾನುಭವಿಗಳಿಗೆ ಮಾಸಿಕ 500 ರೂಪಾಯಿ ಮಾಶಾಸನವನ್ನು ನೀಡಲಾಗುವುದು. ಅವರು ನೀಡಿರುವ ಬ ಬ್ಯಾಂಕ್ ಖಾತೆ ಅಥವಾ ಅಂಚೆ ಕಚೇರಿ ಖಾತೆಗೆ ಹಣವನ್ನು ನೇರವಾಗಿ ವರ್ಗಾವಣೆ ಮಾಡಲಾಗುವುದು.

ಮನಸ್ವಿನಿ ಯೋಜನೆಯನ್ನು ಕರ್ನಾಟಕ ಸರ್ಕಾರವು 2013ರಲ್ಲಿ ಪ್ರಾರಂಭ ಮಾಡಲಾಯಿತು. ಇದು ಬಡ ಮಹಿಳೆಯರಿಗೆ ಸಾಂತ್ವನ ನೀಡುವ ಯೋಜನೆಯಾಗಿದೆ ಮತ್ತು ಆರ್ಥಿಕ ಭದ್ರತೆ ಒದಗಿಸುವ ಯೋಜನೆಯಾಗಿದೆ. ಅವಿವಹಿತ, ಗಂಡನಿಂದ ಬೇರ್ಪಟ್ಟ ಮತ್ತು ವಿಚ್ಛೇದನ  ಪಡೆದ ಮಹಿಳೆಯರು ಸ್ವತಂತ್ರವಾಗಿ ತಮ್ಮ ಜೀವನ ನಿರ್ವಹಣೆ ಮಾಡಿಕೊಳ್ಳಲು ಸಹಾಯ ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಈ ಮಹಿಳೆಯರಿಗೆ ಕುಟುಂಬದಿಂದ ಯಾವುದೇ ರೀತಿಯ ಆರ್ಥಿಕ ಮತ್ತು ಸಾಮಾಜಿಕ ನೆರವು ಇರುವುದಿಲ್ಲ. ಹಾಗಾಗಿ ಜೀವನ ನಿರ್ವಹಣೆ ಮಾಡಿಕೊಳ್ಳಲು  ಆರ್ಥಿಕ ಸಹಾಯ  ನೀಡುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ” ಮನಸ್ವಿನಿ “ ಎಂಬ ಮಹತ್ವದ ಯೋಜನೆಯನ್ನು ಜಾರಿಗೆ ತಂದಿದೆ. ಇದು ಬಡ ಕುಟುಂಬದಲ್ಲಿ ಇರುವಂತಹ ಮಹಿಳೆಯರಿಗೆ ಜೀವನ ನಡೆಸಲು ಸಹಾಯವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಈ ಯೋಚನೆಯು ಒಂದು ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ನೀಡುವ ಯೋಜನೆಯಾಗಿದ್ದು, ಯೋಜನೆಯ  ಲಾಭವನ್ನು ಪಡೆಯಲು ಮಹಿಳೆಯರು ಕಡ್ಡಾಯವಾಗಿ ಸ್ವಯಂ ಘೋಷಣೆ ಪತ್ರವನ್ನು ನೀಡಬೇಕು. ಅಂದರೆ ಅವಿವಾಹಿತ ಮಹಿಳೆಯರು ವಿವಾಹವಾಗಿಲ್ಲ ಎಂಬ ಸ್ವಯಂ ಘೋಷಣಾ ಪತ್ರ ನೀಡಬೇಕು.

ವಿಚ್ಛೇದಿತಾ ಮಹಿಳೆಯರು ವಿಚ್ಛೇದನ ಪಡೆದಿರುವ ಬಗ್ಗೆ ಸ್ವಯಂ ಘೋಷಣಾ ಪತ್ರವನ್ನು ನೀಡಬೇಕು. ಯಾವುದೇ ರೀತಿಯ ಸುಳ್ಳು ಹೇಳಿಕೆ ಕಂಡುಬಂದಲ್ಲಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಮಹಿಳೆಯರ ಆರ್ಥಿಕ ಅಭಿವೃದ್ಧಿಯೇ ಈ ಯೋಜನೆಯ ಪ್ರಮುಖ ಉದ್ದೇಶವಾಗಿರುತ್ತದೆ. ಜೀವನ ನಿರ್ವಹಣೆಗೆ ಹಾರ್ದಿಕ ಸಹಾಯವನ್ನು ನೀಡುವುದು ಮುಖ್ಯ ಉದ್ದೇಶವಾಗಿದೆ.

 

Leave a Reply

Your email address will not be published. Required fields are marked *