How can i check my UAN details : ನನ್ನ ಯುನಿವರ್ಸಲ್ ಅಕೌಂಟ್ ನಂಬರ್ ನ ವಿವರಗಳನ್ನು ನಾನು ಹೇಗೆ ಪರಿಶೀಲಿಸಬಹುದು ಎಂಬುದನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.
UAN ಎಂದರೆ ಯುನಿವರ್ಸಲ್ ಅಕೌಂಟ್ ನಂಬರ್. ಇದು ನಿಮ್ಮ EPF ಉದ್ಯೋಗಿಯ ಭವಿಷ್ಯ ನಿಧಿ ಗೆ ಸಂಬಂಧಪಟ್ಟ ಅಕೌಂಟ್ ನಂಬರ್ ಆಗಿರುತ್ತದೆ. ಪ್ರತಿ ಉದ್ಯೋಗಿಗೆ ಈ ಯುನಿವರ್ಸಲ್ ಅಕೌಂಟ್ ನಂಬರನ್ನು ಭಾರತ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ EPFO ಈ ನಂಬರ್ ಅನ್ನು ನೀಡುತ್ತದೆ. ಭಾರತ ಸರ್ಕಾರದ ಉದ್ಯೋಗ ಮತ್ತು ಕಾರ್ಮಿಕ ಸಚಿವಾಲಯದ ಅಡಿಯಲ್ಲಿ ಈ ಸಂಸ್ಥೆಯು ಕಾರ್ಯನಿರ್ವಹಿಸುತ್ತದೆ.
ಒಮ್ಮೆ ಪಡೆದುಕೊಂಡ ಯುನಿವರ್ಸಲ್ ಅಕೌಂಟ್ ನಂಬರ್ ನಂಬರನ್ನು ನೀವು ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ಉದ್ಯೋಗ ಕ್ಕೆ ಸೇರಿಕೊಂಡಾಗಲೂ ಸಹ, ಆ ಕಂಪನಿಯಲ್ಲಿಯೂ ಸಹ ಅದೇ ಯುಎನ್ಎ ನಂಬರನ್ನು ನಿಮ್ಮ ಭವಿಷ್ಯ ನಿಧಿ (PF) ಯಲ್ಲಿ ಮುಂದುವರಿಸಬಹುದು.
ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆಯಿಂದ ಪಡೆದ ಯುನಿವರ್ಸಲ್ ಅಕೌಂಟ್ ನಂಬರ್ ಯು ನಿಮ್ಮ ಭವಿಷ್ಯ ನಿಧಿ ಸಂಗ್ರಹಿಸಲು ಸಹಾಯ ಮಾಡುತ್ತದೆ. ಮತ್ತು ಸರ್ಕಾರದಿಂದ ದೊರೆಯುವ ಭವಿಷ್ಯನಿಧಿಯನ್ನು ಪಡೆಯಲು ಸಹ ಸಹಕಾರಿಯಾಗಿದೆ. ಈ ಲೇಖನದಲ್ಲಿ ನಾವು ಯೂನಿವರ್ಸಲ್ ಅಕೌಂಟ್ ನಂಬರ್ ಬಗ್ಗೆ ಎಲ್ಲಾ ವಿವರಗಳನ್ನು ನೀಡಿದ್ದೇವೆ.
UAN ಸಂಖ್ಯೆಯನ್ನು ಪಡೆಯಲು ಬೇಕಾಗುವ ದಾಖಲೆಗಳು.
UAN ಸಂಖ್ಯೆಯನ್ನು ಪಡೆಯಲು ಬೇಕಾಗಿರುವ ದಾಖಲೆಗಳನ್ನು ಈ ಕೆಳಕಂಡಂತೆ ನೀಡಲಾಗಿದೆ. ಯುನಿವರ್ಸಲ್ ಅಕೌಂಟ್ ನಂಬರ್ ಅನ್ನು ಭಾರತ ಸರ್ಕಾರದ ಉದ್ಯೋಗ ಮತ್ತು ಕಾರ್ಮಿಕ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ( EPFO ) ಉದ್ಯೋಗಿಯ ಭವಿಷ್ಯ ನಿಧಿ ಸಂಸ್ಥೆ ಇಂದ ಪಡೆಯಲು ಕೆಲವು ದಾಖಲೆಗಳು ಬೇಕು. ಅವುಗಳನ್ನು ಕೆಳಗೆ ನೀಡಲಾಗಿದೆ.
1. ನಿಮ್ಮ ಆಧಾರ್ ಸಂಖ್ಯೆ.( ಕಡ್ಡಾಯವಾಗಿ ಬೇಕು ).
2. ನಿಮ್ಮ ಬ್ಯಾಂಕಿನ ವಿವರ : ನಿಮ್ಮ ಬ್ಯಾಂಕ್ ಖಾತೆಯ ಸಂಪೂರ್ಣ ವಿವರವನ್ನು ನೀಡಬೇಕು. ಅಂದರೆ ಬ್ಯಾಂಕ್ ಖಾತೆಯ ಸಂಖ್ಯೆ, ಬ್ಯಾಂಕಿನ ಐ ಎಫ್ ಎಸ್ ಸಿ ಕೋಡ್, ಮತ್ತು ನಿಮ್ಮ ಖಾತೆ ಸಂಖ್ಯೆ ಹೊಂದಿರುವ ಬ್ಯಾಂಕಿನ ಹೆಸರು.
3. ವಾಹನ ಪರವಾನಿಗೆ ಪತ್ರ ( ಡ್ರೈವಿಂಗ್ ಲೈಸನ್ಸ್ ).
4. ಚುನಾವಣಾ ಗುರುತಿನ ಚೀಟಿ.
5. ಪಾಸ್ ಪೋರ್ಟ್.
6. ರೇಷನ್ ಕಾರ್ಡ್.
7. ಪ್ಯಾನ್ ಕಾರ್ಡ್ ( ಅಗತ್ಯವಾಗಿ ಬೇಕು ).
ಹೀಗೆ ನೀವು ಯುನಿವರ್ಸಲ್ ಅಕೌಂಟ್ ನಂಬರ್ ಪಡೆಯಲು ಈ ಮೇಲಿನ ದಾಖಲೆಗಳಲ್ಲಿ ನಿಮ್ಮ ವಿಳಾಸಕ್ಕೆ ಸಂಬಂಧಿಸಿದ ಒಂದು ದಾಖಲೆ ಮತ್ತು ಗುರುತಿನ ಚೀಟಿಗೆ ಸಂಬಂಧಿಸಿದ ಒಂದು ದಾಖಲೆ ಪ್ಯಾನ್ ಕಾರ್ಡ್ ಕಡ್ಡಾಯವಾಗಿ ಬೇಕು.
How can i check my UAN details : ನನ್ನ UAN ವಿವರಗಳನ್ನು ನಾನು ಹೇಗೆ ಪರಿಶೀಲಿಸಬಹುದು.
How can i check my UAN details : ನನ್ನ UAN ವಿವರಗಳನ್ನು ನಾನು ಹೇಗೆ ಪರಿಶೀಲಿಸಬಹುದು ಎಂಬುದನ್ನು ಈ ಕೆಳಗೆ ವಿವರಿಸಲಾಗಿದೆ. EPFO ಸಂಸ್ಥೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ನಿಮ್ಮ ಯುಎನ್ಎ ನಂಬರನ್ನು ಪಡೆಯಬಹುದು.
ನೀವು ಕೆಲಸ ಮಾಡುವ ಕಂಪನಿಯಲ್ಲಿ, ನಿಮಗೆ ನೀಡುವ ಪೇಮೆಂಟ್ ಸ್ಲಿಪ್ ನಲ್ಲಿ ನಿಮ್ಮ ಯುಎನ್ಎ ನಂಬರ್ ಇರುತ್ತದೆ. ಆ ಸಂಖ್ಯೆಯನ್ನು ತೆಗೆದುಕೊಂಡು ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು.
- ಮೊದಲಿಗೆ ನೀವು EPFO ಸಂಸ್ಥೆಯ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಬೇಕು.https://www.epfindia.gov.in/site_en/index.php.
- ಭೇಟಿ ನೀಡಿದ ನಂತರ ನಿಮಗೆ ಉದ್ಯೋಗಿಯ ಭವಿಷ್ಯ ನಿಧಿ ಸಂಸ್ಥೆಯ ಮುಖಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ನನ್ನ ಸೇವೆಗಳು ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನಂತರ ಆ ಮುಖಪುಟ ತೆರೆದ ಮೇಲೆ, ಅಲ್ಲಿ ಇರುವ ಉದ್ಯೋಗಿಗಾಗಿ ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನಂತರ “ಸದಸ್ಯನ UAN ” ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಪ್ರಮುಖ ಲಿಂಕ್ ಗಳ ವಿಭಾಗದಲ್ಲಿ ” ನಿಮ್ಮ UAN ಚೆಕ್ ” ಎಂಬ ಲಿಂಕ್ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಮೊಬೈಲ್ ನಂಬರ್ ಅನ್ನು ಎಂಟ್ರಿ ಮಾಡಿ.
- ನಂತರ ಓಟಿಪಿ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ. ಅದನ್ನು ಎಂಟ್ರಿ ಮಾಡಿ.
- ನಂತರ ನಿಮ್ಮ ಮೊಬೈಲ್ ನಂಬರ್ ಗೆ ನಿಮ್ಮ ಯುನಿವರ್ಸಲ್ ಅಕೌಂಟ್ ಸಂಖ್ಯೆಯ ಸಂಪೂರ್ಣ ವಿವರವನ್ನು ಕಳಿಸಲಾಗುತ್ತದೆ.
ಹೀಗೆ ಉದ್ಯೋಗ ಭವಿಷ್ಯ ನಿಧಿ ಸಂಸ್ಥೆಯ ಅಧಿಕೃತ ವೆಬ್ಸೈಟ್ ಮೂಲಕ ಎಲ್ಲಾ ಸಂಪೂರ್ಣ ಮಾಹಿತಿಗಳನ್ನು ಪಡೆಯಬಹುದು. ಹಾಗೆ ನಿಮ್ಮ ಯುನಿವರ್ಸಲ್ ಅಕೌಂಟ್ ನಂಬರ್ ಪಡೆಯುವಾಗ ನೀಡಲಾಗಿರುವ ಮೊಬೈಲ್ ಸಂಖ್ಯೆಯಿಂದ ಸಹ ಎಸ್ಎಂಎಸ್ ಮೂಲಕ ಯುನಿವರ್ಸಲ್ ಅಕೌಂಟು ನಂಬರ್ ವಿವರಗಳನ್ನು ಪಡೆದುಕೊಳ್ಳಬಹುದು..
UAN ವಿವರವನ್ನು SMS ಮೂಲಕ ಪಡೆಯುವುದು ಹೇಗೆ?.
UAN ವಿವರಗಳನ್ನು ಎಸ್ಎಂಎಸ್ (SMS) ಮೂಲಕವೂ ಸಹ ಪಡೆದುಕೊಳ್ಳಬಹುದು. SMS ಮೂಲಕ ಹೇಗೆ ಯುನಿವರ್ಸಲ್ ಅಕೌಂಟ್ ನಂಬರ್ ನ ಸಂಪೂರ್ಣ ವಿವರವನ್ನು ತಿಳಿಯಬಹುದು ಎಂಬುದನ್ನು ನೋಡೋಣ.
- ಮೊದಲಿಗೆ ನೀವು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 7738299899 ಸಂಖ್ಯೆಗೆ SMS ಕಳುಹಿಸಬೇಕು.
- ನಂತರ ನಿಮಗೆ SMS ಮುಖಾಂತರ ನಿಮ್ಮ ಖಾತೆಯ ವಿವರಗಳನ್ನು ತಿಳಿಸಲಾಗುವುದು.
- ನೀವು ಅನೇಕ ಭಾಷೆಗಳಲ್ಲಿ ಎಸ್ಎಂಎಸ್ ಗಳನ್ನು ಕಳಿಸಬಹುದು. ಕನ್ನಡ ಮತ್ತು ಇಂಗ್ಲೀಷ್ ಹಾಗೂ ಹಿಂದಿ, ತೆಲುಗು, ಗುಜರಾತಿ, ತಮಿಳು, ಮಲಯಾಳಂ, ಬೆಂಗಾಲಿ, ಪಂಜಾಬಿ, ಮರಾಠಿ ಹೀಗೆ ಯಾವುದೇ ಭಾಷೆಗಳಲ್ಲಿ ಎಸ್ಎಮ್ಎಸ್ ಅನ್ನು ಕಳಿಸಬಹುದು.
- ಯಾವ ಭಾಷೆಯಲ್ಲಿ ಎಸ್ಎಮ್ಎಸ್(SMS) ಕಳಿಸುತ್ತಿರೋ ಆ ಭಾಷೆಯ ಮೊದಲ ಮೂರು ಅಕ್ಷರಗಳನ್ನು ಎಸ್ಎಂಎಸ್ ನಲ್ಲಿ ಸೇರಿಸಬೇಕು.
- ಉದಾಹರಣೆಗೆ ನೀವು ಇಂಗ್ಲೀಷ್ ನಲ್ಲಿ ಎಸ್ಎಮ್ಎಸ್ ಕಳುಹಿಸುವುದಾದರೆ ” EPFOHO UAN ENG” ಎಂದು SMS ಅನ್ನು 7738299899 ಗೆ ಕಳುಹಿಸಬೇಕು.
ಹೀಗೆ ಎಸ್ ಎಮ್ ಎಸ್ ಮೂಲಕ್ಕೂ ಸಹ ಸಂಪೂರ್ಣ ವಿವರವನ್ನು ಪಡೆಯಬಹುದು.
UAN ಪ್ರಯೋಜನಗಳು.
UAN ಯುನಿವರ್ಸಲ್ ಅಕೌಂಟ್ ನಂಬರ್ ನಿಂದ ಉದ್ಯೋಗದಾತರಿಗೆ ತಮ್ಮ ಭವಿಷ್ಯ ನಿಧಿಯ ಎಲ್ಲಾ ವಿವರಗಳನ್ನು ಪಡೆಯಲು ಸಹಕಾರಿಯಾಗಿದೆ. ತಮ್ಮ ಇಪಿಎಫ್ (EPF) ಖಾತೆಯಲ್ಲಿ ಇರುವ ಹಣದ ಮೊತ್ತವನ್ನು ತಿಳಿದುಕೊಳ್ಳಬಹುದು. ಹಣವನ್ನು ವಿತ್ ಡ್ರಾ ಮಾಡಿಕೊಳ್ಳುವ ಸಂದರ್ಭದಲ್ಲಿ ಯುನಿವರ್ಸಲ್ ಅಕೌಂಟ್ ನಂಬರ್ ಮುಖ್ಯ ಪಾತ್ರ ವಹಿಸುತ್ತದೆ.
ನಿಮ್ಮ ಯೂನಿವರ್ಸಲ್ ಅಕೌಂಟ್ ನಂಬರ್ ಅನ್ನು ಬಳಸಿ, ನೀವು ಯಾವಾಗ ಬೇಕಾದರೂ ನಿಮ್ಮ ಪಿಎಫ್ ಅಮೌಂಟ್ ಅನ್ನು ಪಡೆದುಕೊಳ್ಳಬಹುದು.
ಹೀಗೆ ಯುನಿವರ್ಸಲ್ ಅಕೌಂಟ್ ನಂಬರ್ ಒಂದು ಉದ್ಯೋಗದಾತರಿಗೆ ತಮ್ಮ ಭವಿಷ್ಯ ನಿಧಿಯ ಬಗ್ಗೆ ತಿಳಿದುಕೊಳ್ಳಲು ಮುಖ್ಯ ಆಧಾರವಾಗಿದೆ. ನಿಮ್ಮ ಭವಿಷ್ಯ ನಿಧಿ ಸುರಕ್ಷಿತವಾಗಿರಲು ಈ ನಂಬರ್ ಸಹಾಯ ಮಾಡುತ್ತದೆ.SMS ಮೂಲಕವೂ ಸಹ ನಿಮ್ಮ ಭವಿಷ್ಯ ನದಿಯ ಹಣವನ್ನು ಚೆಕ್ ಮಾಡಿಕೊಳ್ಳಬಹುದು. ನಿಮ್ಮ ಆಧಾರ್ ಸಂಖ್ಯೆಯನ್ನು ಯುನಿವರ್ಸಲ್ ಅಕೌಂಟ್ ನಂಬರ್ ಗೆ ಲಿಂಕ್ ಮಾಡಿಕೊಳ್ಳುವುದನ್ನು ಭಾರತ ಸರ್ಕಾರವು ಕಡ್ಡಾಯಗೊಳಿಸಿದೆ. ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿಕೊಳ್ಳುವುದರಿಂದ, ಆದರ್ ಸಂಖ್ಯೆಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ನ ಮೂಲಕ ನೀವು ಪ್ರತಿ ತಿಂಗಳು ನಿಮ್ಮ ಭವಿಷ್ಯ ನಿಧಿಯ ಸಂಪೂರ್ಣ ವಿವರಗಳನ್ನು ಎಸ್ಎಂಎಸ್ ಮೂಲಕ ಪಡೆಯಬಹುದು.
UAN ಬಗ್ಗೆ ಕುಂದು ಕೊರತೆಗಳನ್ನು ಇ-ಮೇಲ್ ಅಥವಾ ಟೋಲ್ ಫ್ರೀ ನಂಬರ್ನ ಮೂಲಕ ಪರಿಹರಿಸಿಕೊಳ್ಳಬಹುದು.
- ಸಹಾಯವಾಣಿ ಸಂಖ್ಯೆ : 1800-118-005.
- ಇಮೈಲ್ ವಿಳಾಸ : employeefeedback@epfindia.gov.in ಮೂಲಕ ಇಮೇಲ್ ಮಾಡುವ ಮೂಲಕ ನಿಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು.