Tharak7star

Gruhalakshmi : ಗೃಹ ಲಕ್ಷ್ಮೀ 9 ನೇ ಕಂತಿನ ಹಣ ಜಮಾ.DBT ಚೆಕ್ ಮಾಡುವ ಸುಲಭ ವಿಧಾನ.

gruhalakshmi

ಗೃಹಲಕ್ಷ್ಮಿ (gruhalakshmi) ಯೋಜನೆಯ 9 ನೇ ಕಂತಿನ ಹಣ ಜಮಾ ಆಗಿದೆ. DBT ಮೂಲಕ ಹಣ ಚೆಕ್ ಮಾಡಿ, ನಿಮ್ಮ ಮೊಬೈಲ್ ನಲ್ಲಿ.

ಕರ್ನಾಟಕ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಈಗಾಗಲೇ ಸರ್ಕಾರ ಬಿಡುಗಡೆ ಮಾಡಿದೆ. ಗೃಹಲಕ್ಷ್ಮಿ ಯೋಜನೆಯ 9ನೇ ಕಂತಿನ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. ನಿಮ್ಮ ಹಣ ಜಮಾ ಆಗಿದೆಯೇ ಎಂದು ಚೆಕ್ ಮಾಡಿಕೊಳ್ಳುವ ಸುಲಭ ವಿಧಾನವನ್ನು ಮತ್ತು ಗೃಹಲಕ್ಷ್ಮಿ ಯೋಜನೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.ಕರ್ನಾಟಕ ಕಾಂಗ್ರೆಸ್ ಸರ್ಕಾರ ಚುನಾವಣೆ ಪೂರ್ವ ನೀಡಿದ 5 ಗ್ಯಾರಂಟಿ ಯೋಜನೆಯನ್ನು ಜಾರಿಗೆ ತಂದಿದೆ. ಕುಟುಂಬದ ಯಜಮಾನಿ ಮಹಿಳೆಗೆ ರೂ.2000 ಗಳ ಸಹಾಯಧನ ನೀಡುವ ಗೃಹಲಕ್ಷ್ಮಿ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಪ್ರತಿ ತಿಂಗಳು ಕುಟುಂಬದ ಯಜಮಾನಿ ಮಹಿಳೆಗೆ ಸರ್ಕಾರದ ಈ ಯೋಜನೆಯಿಂದ 2000 ರೂಪಾಯಿ ಸಹಾಯಧನ ನೀಡಲಾಗುವುದು.ಈ ಲೇಖನದಲ್ಲಿ ನಾವು DBT ಮೂಲಕ ಹಣ ಚೆಕ್ ಮಾಡುವ ಸುಲಭ ವಿಧಾನ,ಗೃಹಲಕ್ಷ್ಮಿ ಹಣ ಬರದೆ ಇರುವುದಕ್ಕೆ ಕಾರಣ ಏನು,ಗೃಹಲಕ್ಷ್ಮಿ ಯೋಜನೆ ಎಂದರೇನು?. ಯಾರು ಅರ್ಜಿ ಸಲ್ಲಿಸಬಹುದು, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಸಲ್ಲಿಸಲು ಯಾವ ಯಾವ ದಾಖಲೆಗಳು ಬೇಕು, ಎಂಬ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ.

Gruhalakshmi : ಗೃಹಲಕ್ಷ್ಮಿ ಯೋಜನೆ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗದೇ ಇರುವುದಕ್ಕೆ ಕಾರಣ ಇಲ್ಲಿದೆ.

gruhalakshmi
gruhalakshmi

ಗೃಹ ಲಕ್ಷ್ಮೀ ಯೋಜನೆಯ ಹಣ ನಿಮ್ಮ ಬ್ಯಾಂಕ್ ಖಾತೆಗೆ ಯಾಕೆ ಬಂದಿಲ್ಲ ಎಂಬುದಕ್ಕೆ ಈ ಕಾರಣಗಳು ಇರಬಹುದು.

  • ನಿಮ್ಮ ಬ್ಯಾಂಕ್ ಖಾತೆಗೆ ನಿಮ್ಮ ಆಧಾರ್ ಕಾರ್ಡ್ ನಂಬರ್ ಲಿಂಕ್ ಆಗದೇ ಇರುವುದು.
  • ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಲಿಂಕ್ ಆಗದೇ ಇರುವುದು.
  • ನೀವು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಸರಿಯಾದ ಮಾಹಿತಿಯನ್ನು ನೀಡದೇ ಇರುವುದು.
  • ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ನಂಬರ್ ಲಿಂಕ್ ಮಾಡದೇ ಇರುವುದು.

ಈ ಎಲ್ಲಾ ಕಾರಣಗಳಿಂದ ನಿಮ್ಮ ಗೃಹಲಕ್ಷ್ಮಿ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಿರುವುದಿಲ್ಲ. ಹಾಗಾಗಿ ನೀವು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಕಡ್ಡಾಯವಾಗಿ ಮಾಡಬೇಕು. ಆಗ ಮಾತ್ರ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಆಗುತ್ತದೆ.

Important Massages : ಪ್ರತಿ ದಿನ ಟ್ರೆಂಡಿಂಗ್ ನ್ಯೂಸ್ ಮತ್ತು ಸರ್ಕಾರಿ ಯೋಜನೆಗಳು ಹಾಗೂ ಹೊಸ ಉದ್ಯೋಗದ ಬಗ್ಗೆ ಮಾಹಿತಿಯನ್ನು ಪಡೆಯಲು ದಯವಿಟ್ಟು ನಮ್ಮ “Tharak7star Whatsapp Group Join Now” ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

Gruhalakshmi : ಗೃಹಲಕ್ಷ್ಮಿ ಯೋಜನೆ ಗೆ ಯಾರು ಅರ್ಜಿ ಸಲ್ಲಿಸಬಹುದು.

ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆ ಗೆ ಯಾರು ಅರ್ಜಿ ಸಲ್ಲಿಸಲು ಅರ್ಹರು ಎಂಬುದನ್ನು ನೋಡೋಣ. ಕುಟುಂಬದ ಯಜಮಾನಿ ಮಹಿಳೆ ಅರ್ಜಿ ಸಲ್ಲಿಸಬಹುದು. ಮಹಿಳೆಯರ ಆರ್ಥಿಕ ಅಭಿರುದ್ಧಿಗೋಸ್ಕರ ಜಾರಿಗೆ ತರಲಾಗಿದೆ. ಪಡಿತರ ಚೀಟಿ ಹೊಂದಿರಬೇಕು.

ಗೃಹಲಕ್ಷ್ಮಿ ಯೋಜನೆ ಎಂದರೇನು?.

ಕುಟುಂಬದ ಯಜಮಾನಿ ಮಹಿಳೆಗೆ ಅವರ ಜೀವನ ನಿರ್ವಹಣೆ ಗೆ ಸಹಾಯವಾಗಲು ಸರ್ಕಾರದಿಂದ ಸಹಾಯಧನ ನೀಡುವ ಯೋಜನೆಯಾಗಿದೆ. ಕರ್ನಾಟಕ ಸರ್ಕಾರದಿಂದ ಪ್ರತಿ ತಿಂಗಳು 2000 ರೂ ಸಹಾಯಧನ ನೀಡಲಾಗುವುದು.ಮಹಿಳೆಯರಿಗೆ ಆರ್ಥಿಕ ಸಹಾಯ ನೀಡುವುದು ಈ ಯೋಜನೆ ಮುಖ್ಯ ಉದ್ದೇಶವಾಗಿದೆ. ಕರ್ನಾಟಕ ಕಾಂಗ್ರೆಸ್ ಸರ್ಕಾರ ಚುನಾವಣೆ ಪೂರ್ವ ಘೋಷಿಸಿದ 5 ಗ್ಯಾರಂಟಿ ಯೋಜನೆಗಳಲ್ಲಿ ಇದು ಒಂದು. ಮಹಿಳೆಯರಿಗೋಸ್ಕರ ನೀಡಿದ ಮಹತ್ವದ ಯೋಜನೆಯಾಗಿದೆ. ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

Gruhalakshmi : ಗೃಹಲಕ್ಷ್ಮಿ ಯೋಜನೆ ಹಣ ಚೆಕ್ ಮಾಡುವ ವಿಧಾನ.

ಕರ್ನಾಟಕ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ 5 ಗ್ಯಾರಂಟಿ ಯೋಜನೆಗಲ್ಲಿ ಗೃಹಲಕ್ಷ್ಮಿ ಯೋಜನೆಯ ಒಂದಾಗಿದೆ. ಪ್ರತಿ ತಿಂಗಳು ಕುಟುಂಬದ ಯಜಮಾನಿ ಮಹಿಳೆಗೆ 2000ಗಳ ಸಹಾಯಧನ ನೀಡಲಾಗುವುದು. ಪ್ರತಿ ತಿಂಗಳು ಹಣವನ್ನು ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುವುದು. ಫಲಾನುಭವಿಯು ಮುಖ್ಯವಾಗಿ ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಲಿಂಕ್ ಮಾಡಿರಬೇಕು. ಸರಿಯಾದ ಬ್ಯಾಂಕ್ ವಿವರಗಳನ್ನು ಸಲ್ಲಿಸಿರಬೇಕು. ಪಡಿತರ ಚೀಟಿಯನ್ನು ಸಲ್ಲಿಸಬೇಕು.

ಗೃಹಲಕ್ಷ್ಮಿ ಹಣ ಜಮಾ ಆಗಿರುವ ವಿವರವನ್ನು ಪಡೆಯುವುದು ಹೇಗೆ ಎಂಬುದನ್ನು ನೋಡೋಣ. ಬ್ಯಾಂಕ್ ಖಾತೆಗೆ ಬಿದ್ದಿರುವ ಹಣವನ್ನು ಚೆಕ್ ಮಾಡುವ ವಿಧಾನ.

  1.  ಮೊದಲಿಗೆ ಆನ್ಲೈನ್ ಸೆಂಟರ್ ನಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು.
  2.  ನಂತರ ವರ್ಷವನ್ನು ಸೆಲೆಕ್ಟ್ ಮಾಡಬೇಕು
  3.  ನಂತರ ಯಾವ ತಿಂಗಳು ಎಂಬುದನ್ನು ಆಯ್ಕೆ ಮಾಡಬೇಕು.
  4.  ನಂತರ ಪಡಿತರ ಚೀಟಿಯ ಸಂಖ್ಯೆಯನ್ನು ಎಂಟ್ರಿ ಮಾಡಬೇಕು.
  5.  ನಂತರ ಕ್ಯಾಪ್ಚರ್ ಕೋಡ್ ಅನ್ನು ಎಂಟ್ರಿ ಮಾಡಬೇಕು.
  6.  ನಂತರ ಗೋ ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು.

ನಂತರ ನಿಮ್ಮ ಗೃಹಲಕ್ಷ್ಮಿ ಹಣದ ವಿವರದ ಮುಖಪುಟ ತೆರೆಯುತ್ತದೆ. ವಿವರವನ್ನು ಚೆಕ್ ಮಾಡಿಕೊಳ್ಳಬಹುದು.

Gruhalakshmi : ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ.

ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನವನ್ನು ನೋಡೋಣ. ಮಹಿಳೆಯರ ಆರ್ಥಿಕ ಅಭಿವೃದ್ಧಿಗೋಸ್ಕರ ಸರ್ಕಾರ ಜಾರಿಗೆ ತಂದಿರುವ ಈ ಯೋಜನೆಯಾಗಿದೆ. ಪ್ರತಿ ತಿಂಗಳು 2000 ರೂಪಾಯಿಗಳ ಸಹಾಯ ಧನ ನೀಡಲಾಗುವುದು. ಈ ಯೋಜನೆ ಗೆ ಅರ್ಜಿ ಸಲ್ಲಿಸುವ ವಿಧಾನ ವನ್ನು ನೋಡೋಣ.

  • Gruhalakshmi ಯೋಜನೆ ಗೆ ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರದ ಯಾವುದೇ online ಸೆಂಟರ್ ಗೆ ಭೇಟಿ ನೀಡಿ.
  • ಗ್ರಾಮ ಒನ್ ಕೇಂದ್ರದ ಮೂಲಕ ಅರ್ಜಿ ಸಲ್ಲಿಸಬಹುದು.
  • ಬೆಂಗಳೂರು ಒನ್ ಕೇಂದ್ರದ ಮೂಲಕ ಅರ್ಜಿ ಸಲ್ಲಿಸಬಹುದು.
  • CSC ಸೇವಾ ಕೇಂದ್ರದ ಮೂಲಕ ಅರ್ಜಿಗಳನ್ನು ಸಲ್ಲಿಸಿ.
  • ಅರ್ಜಿಗಳನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು.

ಹೀಗೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು. ಸರ್ಕಾರದ ಅಧಿಕೃತ ಆನ್ಲೈನ್ ಸೇವೆ ಸೆಂಟರ್ ಗಳನ್ನು ಮಾತ್ರ ಭೇಟಿ ನೀಡಿ. ಎಲ್ಲಾ ದಾಖಲೆಗಳನ್ನು ಸರಿಯಾದ ಕ್ರಮದಲ್ಲಿ ನೀಡಿ. ಅರ್ಜಿ ಸಲ್ಲಿಸುವ ಅರ್ಜಿದಾರರು ಆಧಾರ್ ಸಂಖ್ಯೆಯನ್ನು  ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ಲಿಂಕ್ ಮಾಡಿರಬೇಕು. ಮೊಬೈಲ್ ನಂಬರನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡಿರಬೇಕು.

Gruhalakshmi : ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾವ ಯಾವ ದಾಖಲೆಗಳು ಬೇಕು?.

Gruhalakshmi ಯೋಜನೆ ಗೆ ಅರ್ಜಿ ಸಲ್ಲಿಸಲು ಯಾವ ಯಾವ ದಾಖಲೆಗಳು ಬೇಕು ಎಂಬುದನ್ನು ನೋಡೋಣ.

  1. ಆಧಾರ್ ಕಾರ್ಡ್
  2. ಪಡಿತರ ಚೀಟಿ
  3. ಚುನಾವಣಾ ಗುರುತಿನ ಚೀಟಿ
  4. ಬ್ಯಾಂಕ್ ಖಾತೆಯ ವಿವರ.
  5. ಮೊಬೈಲ್ ನಂಬರ್
  6. ಆದಾಯ ಪ್ರಮಾಣ ಪತ್ರ
  7. ಸ್ವಯಂ ಘೋಷಣ ಪತ್ರ.

ಈ ಮೇಲಿನ ದಾಖಲೆ ಹೊಂದಿರುವ ಕುಟುಂಬದ ಯಜಮಾನಿ ಮಹಿಳೆ ಅರ್ಜಿ ಸಲ್ಲಿಸಬಹುದು.ಪ್ರತಿ ತಿಂಗಳು ಕುಟುಂಬದ ಯಜಮಾನಿ ಮಹಿಳೆಗೆ ಸರ್ಕಾರದ ಈ ಯೋಜನೆಯಿಂದ 2000 ರೂಪಾಯಿ ಸಹಾಯಧನ ನೀಡಲಾಗುವುದು.

ವಿಶೇಷ ಸೂಚನೆ : “Tharak7star” ವೆಬ್ಸೈಟ್ ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ. ಅಧಿಕೃತ, ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುವುದು. ವಂದನೆಗಳು.

 

 

Leave a Reply

Your email address will not be published. Required fields are marked *