Tharak7star

Breast cancer : ಸ್ತನ ಕ್ಯಾನ್ಸರ್ ಇಂದ ಸಾವು ಎಚ್ಚರ.

Breast cancer

Breast cancer : ಸ್ತನ ಕ್ಯಾನ್ಸರ್ ಇಂದ ಸಾವು ಎಚ್ಚರ. ಲ್ಯಾನ್ಸೆಟ್ ಆಯೋಗದ ವರದಿಯ ಪ್ರಕಾರ 2046 ಹೊತ್ತಿಗೆ 10 ಲಕ್ಷ ಸಾವು ಸಂಭವಿಸಬಹುದು ಎಂದು ತಿಳಿಸಿದೆ.

ಸ್ತನ ಕ್ಯಾನ್ಸರ್ ಒಂದು ಮಾರಕ ರೋಗವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಈ ರೋಗಕ್ಕೆ ತುತ್ತಾಗುತ್ತಿದ್ದಾರೆ.2020 ರ ಅಂತ್ಯದಲ್ಲಿ 7.8  ಮಿಲಿಯನ್ ರಷ್ಟು ಮಹಿಳೆಯರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಮತ್ತು ಇದೇ ವರ್ಷ 6,85,000 ಮಹಿಳೆಯರು ಈ ಕಾಯಿಲೆಯಿಂದ ಸಾವನಪ್ಪಿದ್ದಾರೆ ಎಂದು ಆಯೋಗವು ವರದಿ ಮಾಡಿದೆ. 2040ರ ಹೊತ್ತಿಗೆ ಈ ರೋಗದಿಂದ ಸಾಯುವ ಮಹಿಳೆಯರ ಸಂಖ್ಯೆ ಒಂದು ಮಿಲಿಯನ್ ದಾಟಬಹುದು ಎಂದು ಆಯೋಗವು ವರದಿ ಮಾಡಿದೆ.

ಆಯೋಗವು ವರದಿ ಮಾಡಿರುವ ಪ್ರಕಾರ ರೋಗಿಗಳು ಮತ್ತು ಆರೋಗ್ಯ ಮೇಲ್ವಿಚಾರಕರ ನಡುವೆ ಉತ್ತಮ ಸಂವಹನ ಇರಬೇಕು. ಇದರಿಂದ ಜೀವನದ ಗುಣಮಟ್ಟ ಉತ್ತಮವಾಗಿರುತ್ತದೆ.ದೇಹದ ಚಿತ್ರಣ ಮತ್ತು ಚಿಕಿತ್ಸೆಯ ಅನುಕರಣೆಯನ್ನು ಸುಧಾರಿಸುತ್ತದೆ ಎಂದು ಆಯೋಗವು ವರದಿ ಮಾಡಿದೆ. ಜೊತೆಗೆ ಈ ವೃತ್ತಿ ಈ ರೀತಿ ಬಾಂಧವ್ಯದಿಂದ ಇರುವುದರಿಂದ ಬದುಕುವವರ ಸಂಖ್ಯೆ ಹೆಚ್ಚುತ್ತದೆ ಎಂದು ಆಯೋಗವು ತನ್ನ ವರದಿಯಲ್ಲಿ ತಿಳಿಸಿದೆ.

Breast cancer : ಸ್ತನ ಕ್ಯಾನ್ಸರ್ ಬಗ್ಗೆ ಮಾಹಿತಿ.

Breast cancer : ಸ್ತನ ಕ್ಯಾನ್ಸರ್ ಈಗಿನ ಕಾಲದಲ್ಲಿ ಮಹಿಳೆಯರನ್ನು ಕಾಡುತ್ತಿರುವ ಮಾರಕ ರೋಗವಾಗಿದ್ದು, ಅನೇಕ ಮಹಿಳೆಯರು ಇದಕ್ಕೆ ತುತ್ತಾಗುತ್ತಿದ್ದಾರೆ. ಇದರಲ್ಲಿ ಅಸಹಜ ಸ್ತನ ಕೋಶಗಳು ಸಣ್ಣ ಸಣ್ಣ ಗೆಡ್ಡೆಗಳಾಗಿ ಮಾರ್ಪಡುತ್ತವೆ. ಇದನ್ನು ಗಮನಿಸದೇ ಬಿಟ್ಟರೆ ದೇಹದ ತುಂಬೆಲ್ಲ ಹರಡುವ ಸಾಧ್ಯತೆ ಹೆಚ್ಚಿಗೆ ಇರುತ್ತದೆ. ಇದನ್ನು ಆರಂಭಿಕ ಹಂತದಲ್ಲಿ ಕಂಡು ಹಿಡಿಯಬಹುದು. ಇದರ ಆರಂಭಿಕ ಹಂತ ಜೀವಕ್ಕೆ ಯಾವುದೇ ತೊಂದರೆ ನೀಡುವುದಿಲ್ಲ. ಇದನ್ನು ಗಮನಿಸದೆ ಸಣ್ಣ ಗೆಡ್ಡೆಗಳನ್ನು ಹಾಗೆ ಬಿಟ್ಟರೆ, ಅವು ಮುಂದಿನ ದಿನಗಳಲ್ಲಿ ದೊಡ್ಡ ಗೆಡ್ಡೆಗಳಾಗಿ ಮಾರ್ಪಾಟು ಹೊಂದುತ್ತವೆ.

ಮೆಟಾಸ್ಟಾಸಿಸ್ ಜೀವಕ್ಕೆ ಅಪಾಯಕಾರಿ ಮತ್ತು ಮಾರಕ ಆಗಬಹುದು. ಇದಕ್ಕೆ ಶಸ್ತ್ರ ಚಿಕಿತ್ಸೆ, ವಿಕಿರಣ ಚಿಕಿತ್ಸೆಗಳು ಇವೆ. 2022 ರಲ್ಲಿ ಸುಮಾರು 3 ಮಿಲಿಯನ್ ನಷ್ಟು ಮಹಿಳೆಯರು ಈ ರೋಗದ ಬಗ್ಗೆ ನಿರ್ಣಯ ಮಾಡಿದರು. ಪ್ರೌಢಾವಸ್ಥೆಯ ನಂತರ ಯಾವುದೇ ಮಹಿಳೆಯರಲ್ಲಿ ಇದು ಸಂಭವಿಸಬಹುದು. ಮಾನವನ ಬೆಳವಣಿಗೆಯ ಮೇಲೆ ಅಸಮಾನತೆಗಳು ಇದನ್ನು ಬಹಿರಂಗಪಡಿಸುತ್ತವೆ. ಉದಾಹರಣೆಗೆ ಅತಿ ಹೆಚ್ಚು ಮಾನವ ಬೆಳವಣಿಗೆ ಹೊಂದಿರುವ ದೇಶಗಳಲ್ಲಿ ಸುಮಾರು 12 ಮಹಿಳೆಯರಲ್ಲಿ ಒಬ್ಬ ಮಹಿಳೆ ಈ ರೋಗಕ್ಕೆ ತುತ್ತಾಗುತ್ತಾರೆ. ಹಾಗೂ ಇದರಿಂದ ಸಾವನ್ನಪ್ಪುತ್ತಾರೆ.

Breast cancer : ಸ್ತನ ಕ್ಯಾನ್ಸರ್ ಯಾರಿಗೆ ಹೆಚ್ಚು ಅಪಾಯವಿದೆ.

Breast cancer

Breast cancer : ಸ್ತನ ಕ್ಯಾನ್ಸರ್ ಯಾರಿಗೆ ಹೆಚ್ಚು ಅಪಾಯವಿದೆ ಎಂಬುದನ್ನು ತಿಳಿಯೋಣ. ಸ್ತ್ರೀ ಲಿಂಗವು ಪ್ರಬಲವಾದ ಸ್ತನ ಕ್ಯಾನ್ಸರ್ ಅಪಾಯಕಾರಿ ಅಂಶವಾಗಿದೆ. ಸರಿಸುಮಾರು 99% ಮಹಿಳೆಯರಲ್ಲಿ ಈ ರೋಗವು ಕಾಣಿಸಿಕೊಳ್ಳುತ್ತದೆ .0.5% ರಷ್ಟು ಪುರುಷರಲ್ಲಿಯೂ ಕಾಣಿಸಿಕೊಳ್ಳುತ್ತದೆ.

ಯಾರಿಗೆ ಹೆಚ್ಚು ಅಪಾಯವಿದೆ ಎಂಬುದನ್ನು ನೋಡೋಣ.

  •  ಸ್ಥೂಲಕಾಯತೆ ಹೊಂದಿರುವವರು.
  •  ಮದ್ಯಪಾನ ಸೇವನೆ ಮಾಡುವವರು.
  •  ಕೌಟುಂಬಿಕ ಹಿನ್ನೆಲೆ.
  •  ಸಂತಾನೋತ್ಪತ್ತಿ ಇತಿಹಾಸ. ( ಉದಾಹರಣೆಗೆ ಮುಟ್ಟಿನ ಅವಧಿ ಪ್ರಾರಂಭವಾದ ವಯಸ್ಸು ಮತ್ತು ಮೊದಲ ಗರ್ಭಧಾರಣೆ ವಯಸ್ಸು)
  •  ಅತಿಯಾದ ತಂಬಾಕು ಸೇವನೆ ಮಾಡುವವರು.
  •  ಋತು ಬಂದ ಕೊಳಗಾದ ಹಾರ್ಮೋನ್ ಚಿಕಿತ್ಸೆ.
  •  ಅನುವಂಶಿಕವಾಗಿಯೂ ಬರುತ್ತದೆ.

Breast cancer : ಸ್ತನ ಕ್ಯಾನ್ಸರ್ ನ ರೋಗಲಕ್ಷಣಗಳು ಹೀಗಿವೆ.

Breast cancer : ಸ್ತನ ಕ್ಯಾನ್ಸರ್ ನ ರೋಗಲಕ್ಷಣಗಳನ್ನು ನೋಡೋಣ. ಆರಂಭಿಕ ಹಂತದಲ್ಲಿ ಪತ್ತೆ ಹಚ್ಚುವುದು ಉತ್ತಮವಾಗಿದೆ. ಏಕೆಂದರೆ ಆರಂಭಿಕ ಹಂತದಲ್ಲಿ ಯಾವುದೇ ಅಪಾಯಕಾರಿ ಆದಂತಹ ತೊಂದರೆ ಆಗುವುದಿಲ್ಲ. ಸರಳ ಮತ್ತು ಸುಲಭ ರೀತಿಯಲ್ಲಿ ಚಿಕಿತ್ಸೆಯನ್ನು ಪಡೆಯಬಹುದು.

1. ಸ್ತನ ದ ಉಂಡೆ ಅಥವಾ ದಪ್ಪವಾಗುವುದು.

2. ಸ್ತನ ದ ಆಕಾರ ಮತ್ತು ಗಾತ್ರ.

3. ಡಿಂಪ್ಲಿಂಗ, ಕೆಂಪು, ಹೀಗೆ ಚರ್ಮದಲ್ಲಿ ಆಗುವ ಬದಲಾವಣೆಗಳು.

4. ಸ್ತನ ದ ಸುತ್ತಲಿನ ಚರ್ಮದಲ್ಲಿ ಬದಲಾವಣೆ.

5. ಸ್ತನ ದ ಒಟ್ಟಿನಲ್ಲಿ ರಕ್ತ ಬರುವುದು.

ಸ್ತನ ದ ಸುತ್ತಲಿನಲ್ಲಿ ಸಣ್ಣ ಪ್ರಮಾಣದ ಗೆಡ್ಡೆಗಳಿದ್ದು, ಯಾವುದೇ ನೋವುಗಳು ಇಲ್ಲದಿದ್ದರೂ ಸಹ ವೈದ್ಯಕೀಯ ನೆರವು ಪಡೆಯುವುದು ಅಗತ್ಯ. ಏಕೆಂದರೆ ಅವು ಮುಂದಿನ ದಿನಗಳಲ್ಲಿ ಬೆಳವಣಿಗೆ ಹೊಂದಬಹುದು. ಹಾಗೆ ಬಿಟ್ಟರೆ ದೇಹದ ಇತರ ಭಾಗಗಳಿಗೂ ಹರಡುವುದು.

ಕಾಲ ನಂತರದಲ್ಲಿ ಸ್ವಾಶಕೋಶ ಮತ್ತು ಹೃದಯ, ಮೂಳೆಗಳು,ಮೆದುಳು ಹೀಗೆ ದೇಹದ ಯಾವ ಅಂಗಗಳಿಗೆ ಬೇಕಾದರೂ ಸೇರಿಕೊಳ್ಳಬಹುದು. ಇದರಿಂದ  ಆರೋಗ್ಯ ಸಮಸ್ಯೆ ಹೆಚ್ಚಾಗುತ್ತದೆ. ಇ ಅಂಗಗಳನ್ನು ಪ್ರವೇಶಿಸಿದ ನಂತರ ಆ ಅಂಗಾಂಗ ಗಳಲ್ಲಿ ನಿಮಗೆ ನೋವುಗಳು ಕಾಣಿಸಿಕೊಳ್ಳಬಹುದು. ಉದಾಹರಣೆಗೆ ಮೂಳೆ ನೋವು, ತಲೆನೋವು ಮುಂತಾದ ರೋಗ ಲಕ್ಷಣಗಳು ಕಾಣಬಹುದು.

 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

Breast cancer : ಸ್ತನ ಕ್ಯಾನ್ಸರ್ ಗೆ ಚಿಕಿಸ್ತೆ ಏನು?.

Breast cancer

Breast cancer : ಸ್ತನ ಕ್ಯಾನ್ಸರ್ ಗೆ ಚಿಕಿತ್ಸೆ ಇದೆ. ಯಾವ ಯಾವ ಚಿಕಿತ್ಸೆಗಳು ಇದೆ ಎಂಬುದನ್ನು ಈ ಮೂಲಕ ತಿಳಿದುಕೊಳ್ಳೋಣ.ಸ್ತನ ಕ್ಯಾನ್ಸರ್ ಗೆ ಚಿಕಿತ್ಸೆಯೂ ಕ್ಯಾನ್ಸರ್ ನ ಉಪ ಪ್ರಕಾರಗಳನ್ನು ಅವಲಂಬಿಸಿರುತ್ತದೆ. ರೋಗದ ಲಕ್ಷಣಗಳು ಹೇಗಿದೆ ಎಂಬುದರ ಮೇಲೆ ಚಿಕಿತ್ಸೆಯನ್ನು ಪಡೆಯಬಹುದು. ಕ್ಯಾನ್ಸರ್ ಮರಳಿ ಬಾರದಂತೆ ತಡೆಯಲು ವೈದ್ಯರು ಈ ಕೆಳಗಿನ ಚಿಕಿತ್ಸೆಗಳನ್ನು ಹೆಚ್ಚಿನದಾಗಿ ನೀಡುತ್ತಾರೆ.

  •  ಶಸ್ತ್ರಚಿಕಿತ್ಸೆಯ ಮೂಲಕ ಗೆಡ್ಡೆಯನ್ನು ತೆಗೆದು ಹಾಕುವುದು.
  •  ವಿಕಿರಣ ಚಿಕಿತ್ಸೆ : ವಿಕಿರಣ ಚಿಕಿತ್ಸೆಯನ್ನು ನೀಡುವುದರಿಂದ ಸ್ತನ ದ ಸುತ್ತಮುತ್ತಲಿನ ಅಂಗಾಂಶಗಳಲ್ಲಿ  ಗಡ್ಡೆ ಮತ್ತೆ ಮರುಕಳಿಸಿದಂತೆ ತಡೆಯಬಹುದು.
  •  ಕ್ಯಾನ್ಸರ್ ಕೋಶಗಳನ್ನು ಕೊಲ್ಲುವುದು, ಹಾರ್ಮೋನ್ ಚಿಕಿತ್ಸೆ.
  •  ಜೈವಿಕ ಚಿಕಿತ್ಸೆ.
  •  ಹರಡುವಿಕೆಯನ್ನು ತಡೆಯಲು ಔಷಧಿಗಳು.

ಹೀಗೆ ರೋಗ ಲಕ್ಷಣಗಳು ಮೊದಲ ಹಂತದಲ್ಲಿ ಕಂಡು ಬಂದಾಗ ಸುಲಭವಾಗಿ ಈ ಚಿಕಿತ್ಸೆಗಳ ಮೂಲಕ ಪರಿಹಾರವನ್ನು ಕಂಡುಕೊಳ್ಳಬಹುದು. ಮೊದಲ ಹಂತದಲ್ಲಿ ಗುರುತು ಮಾಡಿಕೊಳ್ಳದೆ, ಹಾಗೆ ಬಿಟ್ಟುಕೊಂಡು, ಅತಿಯಾಗಿ ಅಥವಾ ಹೆಚ್ಚಾಗಿ ನೋವು ಕಾಣಿಸಿಕೊಂಡ ನಂತರ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಾಗದೆ ಸಾವು ಸಂಭವಿಸಬಹುದು ಹಾಗಾಗಿ ಮೊದಲನೇ ಹಂತದಲ್ಲಿಯೇ ಸಹ ವೈದ್ಯರನ್ನು ಸಂಪರ್ಕಿಸಿ ಪರಿಹಾರವನ್ನು ಕಂಡುಕೊಳ್ಳಿ.

ಮೊದಲ ಹಂತದಲ್ಲಿಯೇ ಸ್ತನ ಕ್ಯಾನ್ಸರ್ ಕಡಿಮೆ ಮಾಡಿಕೊಳ್ಳುವುದು ಉತ್ತಮ. ಈ ಹಂತದಲ್ಲಿ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬಹುದು. ವೈದ್ಯರು ಅನೇಕ ರೀತಿಯ ಚಿಕಿತ್ಸೆಗಳನ್ನು ನೀಡುತ್ತಾರೆ. ಮತ್ತೆ ರೋಗ ಬಾರದಂತೆ ಇ ಚಿಕಿತ್ಸೆಗಳಿಂದ ತಡೆಯಬಹುದು.

ಕ್ಯಾನ್ಸರ್ ಗಳು ಮುಂದುವರೆದು ಚರ್ಮದ ಮೂಲಕ ತೆರೆದ ಹಣ್ಣುಗಳನ್ನು ಉಂಟುಮಾಡಬಹುದು. ಆದರೆ ಇವು ಯಾವುದೇ ನೋವಿನಿಂದ ಕೂಡಿರುವುದಿಲ್ಲ ಎಂದು ನೀವು ಅದರ ಕಡೆ ಗಮನ ಕೊಡದೆ ಹಾಗೆ ಬಿಟ್ಟುಕೊಳ್ಳುವುದು ಒಳ್ಳೆಯದಲ್ಲ. ವೈದ್ಯರ ಸಲಹೆ ಮೇರೆಗೆ ಕಿಸ್ತೆಯನ್ನು ಪಡೆಯಬೇಕು.

ಈ ರೋಗಗಳನ್ನು ತೆಗೆದುಹಾಕಲು ವೈದ್ಯಕೀಯ ಲೋಕವು ಅನೇಕ ರೀತಿಯ ಚಿಕಿತ್ಸೆಗಳನ್ನು ಕಂಡುಹಿಡಿದಿದ್ದೆ. ಶಾಸ್ತ್ರ ಚಿಕಿತ್ಸೆಯ ಮೂಲಕ ಮತ್ತೆ ಬಾರದಂತೆ ತಡೆಯಬಹುದು. ಗೆಡ್ಡೆಯನ್ನು ಸಂಪೂರ್ಣವಾಗಿ ಕಿತ್ತು ಹಾಕಬಹುದು. ಶಸ್ತ್ರ ಚಿಕಿತ್ಸೆಯ ಮೂಲಕ ದುಗ್ಧ ರಸ ಗ್ರಂಥಿಗಳನ್ನು ತೆಗೆದುಹಾಕಲಾಗುವುದು.ಹೀಗೆ ಯಾವುದೇ ಮಹಿಳೆಯರು ಈ ಮೇಲಿನ ರೋಗಲಕ್ಷಣಗಳು ಕಂಡು ಬಂದರೆ ಯಾವುದೇ ಯೋಚನೆ  ಮಾಡದೆ ವೈದ್ಯರನ್ನು ಸಂಪರ್ಕಿಸಿ ಪರಿಹಾರವನ್ನು ಕಂಡುಕೊಳ್ಳಬೇಕು. ಹಾಗೆ ಬಿಟ್ಟುಕೊಂಡರೆ ಜೀವವನ್ನು ಕಳೆದುಕೊಳ್ಳಬೇಕಾಗುತ್ತದೆ.

Leave a Reply

Your email address will not be published. Required fields are marked *