Tharak7star

Bele parihara : ಬೆಳೆ ಪರಿಹಾರ ಹಣ ಚೆಕ್ ಮಾಡೋದು ಹೇಗೆ?.

Bele parihara

ರೈತರು Bele parihara ಹೇಗೆ ಚೆಕ್ ಮಾಡಿಕೊಳ್ಳಬಹುದು. ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.

ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (NDRF) ನ ಮಾರ್ಗಸೂಚಿಗಳ ಪ್ರಕಾರ, 4860 ಕೋಟಿ ಪರಿಹಾರದ ಬೇಡಿಕೆಯನ್ನು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದು, ರೈತರ ಹಿತ ದೃಷ್ಟಿಯಿಂದ ಕೇಂದ್ರ ಸರ್ಕಾರವು 3454 ಕೋಟಿ ರೂ ಬರ ಪರಿಹಾರವನ್ನು ಬಿಡುಗಡೆ ಮಾಡಿದೆ. ರೈತರ ಸಂಕಷ್ಟಗಳನ್ನು ಮನಗಂಡ ಕೇಂದ್ರ ಸರ್ಕಾರವು ಬೆಳೆ ಪರಿಹಾರವನ್ನು ಬಿಡುಗಡೆ ಮಾಡಿದೆ. ಇದರಿಂದ ಬರಗಾಲದಿಂದ ಕಂಗೆಟ್ಟ ರೈತರು ನಿಟ್ಟುಸಿರು ಬಿಡುವಂತಾಗಿದೆ. ತಮ್ಮ ಜಮೀನಿನಲ್ಲಿ ಬಿತ್ತಿದ ಬೆಳೆಗಳನ್ನು ಕಳೆದುಕೊಂಡ ರೈತರಿಗೆ ಬರ ಪರಿಹಾರದಿಂದ ಅನುಕೂಲವಾಗಿದೆ.ರೈತರು ಬೆಳೆ ಪರಿಹಾರ ಹೇಗೆ ಚೆಕ್ ಮಾಡೋದು. ರಾಜ್ಯದಲ್ಲಿ ಅನೇಕ ಜನ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಯನ್ನು ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ನೀರಿನ ಸಮಸ್ಯೆಯಿಂದ ರೈತರು ಕಂಗಾಲಾಗಿದ್ದಾರೆ. ಬೆಳೆಗಳು ನಾಶವಾಗಿವೆ. ರೈತರ ಜೀವನ ಸಂಕಷ್ಟದಲ್ಲಿ ಸಿಲುಕಿದೆ.ಪರಿಹಾರ ಹಣ ಜಮಾ ಆಗಿರುವುದು ರೈತರಿಗೆ ಸಂತೋಷ ತಂದಿದೆ.ಈ ಲೇಖನದಲ್ಲಿ  ಬೆಳೆ ಪರಿಹಾರ ಹಣ ಬಿಡುಗಡೆಯಾಗಿದೆ.ರೈತರು ಹೇಗೆ ಚೆಕ್ ಮಾಡಿಕೊಳ್ಳಬಹುದು. ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.

Bele parihara : ಬೆಳೆ ಪರಿಹಾರ ಹಣ ರೈತರಿಗೆ ಯಾವಾಗ ಸಿಗಲಿದೆ.

Bele parihara
Bele parihara

Bele parihara : ಕೇಂದ್ರ ಸರ್ಕಾರವು ಈಗಾಗಲೇ ಈ ಹಿಂದೆ, ಮೊದಲ ಕಂತಿನ ಪರ ಪರಿಹಾರ ಹಣವನ್ನು ಬಿಡುಗಡೆ ಮಾಡಿತ್ತು. ರಾಜ್ಯದ ರೈತರ ಹಿತ ದೃಷ್ಟಿಯಿಂದ ಈಗ ಎರಡನೇ ಕಂತಿನ ಬರ ಪರಿಹಾರ ಹಣವನ್ನು ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರವು ಎರಡನೇ ಕಂತಿನಲ್ಲಿ 3454 ಕೋಟಿ ರೂಪಾಯಿಗಳ ಬೆಳೆ ಪರಿಹಾರವನ್ನು ನೀಡಿದೆ. ಈ ಹಣವನ್ನು ರೈತರಿಗೆ ನೀಡಲು, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಆದ್ದರಿಂದ ಸರ್ಕಾರವು ಬರ ಪರಿಹಾರವನ್ನು ನೀಡಲು ಚುನಾವಣಾ ಆಯೋಗದ ಒಪ್ಪಿಗೆಯನ್ನು ಪಡೆಯಬೇಕಿದೆ.

ಬೆಳೆ ಪರಿಹಾರವನ್ನು ನೀಡಲು ಚುನಾವಣಾ ಆಯೋಗವು ಒಪ್ಪಿಗೆ ಸೂಚಿಸಿದ ನಂತರ ರೈತರ ಖಾತೆಗಳಿಗೆ ಬರ ಪರಿಹಾರವನ್ನು ನೀಡಲಾಗುವುದು. ಲೋಕಸಭಾ ಚುನಾವಣೆ ನಡೆಯುತ್ತಿರುವುದರಿಂದ, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಹಾಗಾಗಿ ಯಾವುದೇ ರೀತಿಯ ಪರಿಹಾರವನ್ನು ನೀಡುವಂತಿಲ್ಲ. ಸರಿಯಾದ ಎಲ್ಲಾ ದಾಖಲೆಗಳನ್ನು ನೀಡಿ, ಚುನಾವಣಾ ಆಯೋಗವು ಒಪ್ಪಿಗೆ ಸೂಚಿಸಿದ ನಂತರ, ಬರ ಪರಿಹಾರವನ್ನು ರೈತರ ಖಾತೆಗಳಿಗೆ ಜಮಾ ಮಾಡಲಾಗುವುದು.

ಈಗಾಗಲೇ ಕರ್ನಾಟಕ ರಾಜ್ಯ ಸರ್ಕಾರವು ಮೊದಲನೇ ಕಂತಿನ ಬರ ಪರಿಹಾರ ಹಣವನ್ನು ರೈತರ ಖಾತೆಗಳಿಗೆ ಜಮಾ ಮಾಡಲಾಗಿದೆ. ಕೃಷಿ ಇಲಾಖೆ ನೀಡಿರುವ ಮಾಹಿತಿಯ ಮೇರೆಗೆ ಮಳೆ ಪರಿಹಾರವನ್ನು ನೀಡಲಾಗಿದೆ. ರೈತರು ತಮ್ಮ ಬೆಳೆ ಪರಿಹಾರದ ಬಗ್ಗೆ ಕೃಷಿ ಇಲಾಖೆಯ ಅಧಿಕೃತ ವೆಬ್ ಸೈಟ್ ನಲ್ಲಿ ವಿವರಗಳನ್ನು ನೋಡಿಕೊಳ್ಳಬಹುದು. ಬರ ಪರಿಹಾರದ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ, ಇಲ್ಲವೇ ಎಂಬುದನ್ನು ಕೃಷಿ ಇಲಾಖೆಯ ಅಧಿಕೃತ ವೆಬ್ಸೈಟ್ನ ಮೂಲಕ ತಿಳಿದುಕೊಳ್ಳಬಹುದು.

Bele parihara : ಬೆಳೆ ಪರಿಹಾರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಹೇಗೆ ಚೆಕ್ ಮಾಡಿಕೊಳ್ಳಬಹುದು.

Bele parihara : ಬೆಳೆ ಪರಿಹಾರ ಪಟ್ಟಿಯನ್ನು ಈಗಾಗಲೇ ಕೃಷಿ ಇಲಾಖೆಯಲ್ಲಿ, ಬೆಳೆ ಸಮೀಕ್ಷೆಯನ್ನು ನಡೆಸಿ, ಸಂಗ್ರಹಿಸಲಾಗಿದೆ. ಕೃಷಿ ಇಲಾಖೆಯ ಅಧಿಕಾರಿಗಳು ಬರ ಪರಿಹಾರದ ಬಗ್ಗೆ, ರೈತರು ಬೆಳೆದಿರುವ ಬೆಳೆಗಳ ಬಗ್ಗೆ, ರೈತರಿಗೆ ಆಗಿರುವ ಬೆಳೆ ನಷ್ಟದ ಬಗ್ಗೆ, ಪ್ರತಿ ಗ್ರಾಮಮಟ್ಟದಲ್ಲಿಯೂ, ಸಮೀಕ್ಷೆಯನ್ನು ನಡೆಸಿ, ಸಂಕ್ಷಿಪ್ತವಾದ ಮಾಹಿತಿಯನ್ನು ಈಗಾಗಲೇ ಪಡೆದುಕೊಂಡಿದ್ದಾರೆ.

ಕೃಷಿ ಇಲಾಖೆಯ ಸಮೀಕ್ಷೆಯ ಆಧಾರದ ಮೇಲೆ, ಬೆಳೆ ನಷ್ಟವಾಗಿರುವ ರೈತರ ಪಟ್ಟಿಯನ್ನು ಸರ್ಕಾರಕ್ಕೆ ನೀಡಲಾಗಿದೆ. ಈ ಮಾಹಿತಿಯ ಮೇರೆಗೆ ಸರ್ಕಾರವು ಬೆಳೆ ನಷ್ಟ ಪರಿಹಾರವನ್ನು ರೈತರ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುವುದು. ಈಗಾಗಲೇ ಕೃಷಿ ಇಲಾಖೆಯು ರೈತರಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಸರ್ಕಾರಕ್ಕೆ ನೀಡಿದೆ. ಅಂದರೆ ರೈತರ ಹೆಸರು, ಗ್ರಾಮ, ಸಂಪೂರ್ಣ ವಿವರ, ಬೆಳೆಯ ವಿವರ, ಬೆಳೆ ನಷ್ಟವಾಗಿರುವ ವಿವರ, ರೈತರ ಬ್ಯಾಂಕ್ ಖಾತೆಯ ವಿವರ, ಮುಂತಾದ ಎಲ್ಲಾ ವಿವರಗಳನ್ನು ಕೃಷಿ ಇಲಾಖೆಯು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿದೆ. ಈ ಮಾಹಿತಿಯನ್ನು ಆಧಾರವಾಗಿಟ್ಟುಕೊಂಡು ಬರ ಪರಿಹಾರವನ್ನು ನೀಡಲಾಗುವುದು.

ಬೆಳೆ ಪರಿಹಾರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಹೇಗೆ ಚೆಕ್ ಮಾಡಿಕೊಳ್ಳಬಹುದು ಎಂಬುದನ್ನು ನೋಡೋಣ. ಈ ಕೆಳಗಿನ ಕ್ರಮಗಳನ್ನು ಅನುಸರಿಸಿ ನಿಮ್ಮ ಹೆಸರು ಬೆಳೆ ಪರಿಹಾರ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ತಿಳಿದುಕೊಳ್ಳಬಹುದು.

  • ಮೊದಲಿಗೆ ರೈತರು ಸರ್ಕಾರದ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು. ಬೆಳೆ ಪರಿಹಾರಕ್ಕೆ ಸಂಬಂಧಿಸಿ ದ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಬೇಕು.
  • ಬೆಳೆ ಪರಿಹಾರ ವೆಬ್ಸೈಟ್ 
  • ಮುಖಪುಟ ತೆರೆದ ನಂತರ, ವರ್ಷವನ್ನು ನಮೂದಿಸಬೇಕು. ಸರಿಯಾದ ವರ್ಷವನ್ನು ಎಂಟ್ರಿ ಮಾಡಬೇಕು.
  •  ನಂತರ Season ಯಾವುದು ಎಂದು ಎಂಟ್ರಿ ಮಾಡಬೇಕು.
  •  ನಂತರ ವಿಪತ್ತಿನ ಪ್ರಕಾರವನ್ನು ಎಂಟ್ರಿ ಮಾಡಬೇಕು. ಅಂದರೆ ಬರ ಪರಿಹಾರ ಎಂಬುದನ್ನು ಎಂಟ್ರಿ ಮಾಡಬೇಕು.
  •  ನಂತರ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಬೇಕು.
  •  ನಂತರ ನಿಮ್ಮ ತಾಲೂಕು ಯಾವುದು ಎಂಬುದನ್ನು ನಮೂದಿಸಬೇಕು.
  •  ನಂತರ ತಾಲೂಕಿನಲ್ಲಿ ನಿಮ್ಮ ಹೋಬಳಿ ಯಾವುದು ಎಂಬುದನ್ನು ಎಂಟ್ರಿ ಮಾಡಬೇಕು.
  •  ನಂತರ ನಿಮ್ಮ ಗ್ರಾಮವನ್ನು ಎಂಟ್ರಿ ಮಾಡಬೇಕು. ನಂತರ ನಿಮ್ಮ ಹಳ್ಳಿಯ ಹೆಸರನ್ನು ಎಂಟ್ರಿ ಮಾಡಬೇಕು.
  •  ನಂತರ ನೀವು ಭರ್ತಿ ಮಾಡಿದ ಮಾಹಿತಿಯನ್ನು ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ. ನಂತರ ನಿಮಗೆ ಪಟ್ಟಿಯು ದೊರೆಯುತ್ತದೆ.
  •  ಇಲಾಖೆಯಿಂದ ನೀಡಿರುವ ಬರ ಪರಿಹಾರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂದು ತಿಳಿದುಕೊಳ್ಳಬಹುದು.
  •  ಬರ ಪರಿಹಾರ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ, ನಿಮ್ಮಕ್ಕೆ ಬೆಳೆ ಪರಿಹಾರವು ಸಿಗುತ್ತದೆ.
  •  ನಿಮ್ಮ ಹೆಸರು ಇಲ್ಲದಿದ್ದರೆ, ನೀವು ಖುಷಿ ಇಲಾಖೆಯನ್ನು ಸಂಪರ್ಕಿಸಬಹುದು.ಅಥವಾ ನಿಮ್ಮ ಗ್ರಾಮ ಲೆಕ್ಕಾಧಿಕಾರಿಗಳನ್ನು ಸಂಪರ್ಕಿಸಬಹುದು.

ಈ ಮೇಲಿನ ಕ್ರಮಗಳನ್ನು ಅನುಸರಿಸಿ, ಬರ ಪರಿಹಾರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂಬುದನ್ನು ತಿಳಿದುಕೊಳ್ಳಬಹುದು. ಕೃಷಿ ಇಲಾಖೆಯ ಸಮೀಕ್ಷೆಯು, ಸರಿಯಾದ ರೀತಿಯಲ್ಲಿ ನಡೆಸುವುದರಿಂದ ಪಕ್ಕ ಮಾಹಿತಿಯು ದೊರೆಯುತ್ತದೆ.

Bele parihara : ಬೆಳೆ ಪರಿಹಾರ ಹಣ ಬಿಡುಗಡೆ.

Bele parihara : ಕೇಂದ್ರ ಸರ್ಕಾರದಿಂದ 3454 ಕೋಟಿ ರೂ ಬರ ಪರಿಹಾರವನ್ನು ಬಿಡುಗಡೆ ಮಾಡಲಾಗಿದೆ. ಇದರಿಂದ ಬರಗಾಲದಿಂದ ಸಂಕಷ್ಟಕ್ಕೆ ಇಡಾಗಿರುವ ರೈತರಿಗೆ ಅನುಕೂಲವಾಗಿದೆ. ರೈತರ ಸಹಾಯಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರವು ಬೆಳೆ ಪರಿಹಾರವನ್ನು ಬಿಡುಗಡೆ ಮಾಡಿದೆ. 3454 ಕೋಟಿ ರೂಪಾಯಿಗಳ ಬರ ಪರಿಹಾರವನ್ನು ಕರ್ನಾಟಕ ರಾಜ್ಯಕ್ಕೆ ಬಿಡುಗಡೆ ಮಾಡಿದೆ. ಇದರಿಂದ ರಾಜ್ಯದ ರೈತರು, ಬರಗಾಲದಿಂದ ಕಂಗೆಟ್ಟ ರೈತರಿಗೆ ತುಂಬಾನೇ ಸಹಾಯವಾಗಿದೆ.

ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಬರ ಪರಿಹಾರ ಹಣ ರೈತರಿಗೆ ಹೇಗೆ ಸಿಗಲಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮುಂದಿನ ಭಾಗದಲ್ಲಿ ತಿಳಿಸಲಾಗಿದೆ. ಸಂಪೂರ್ಣ ಲೇಖನವನ್ನು ಓದಿ, ಸಂಪೂರ್ಣ ವಿಷಯವನ್ನು ತಿಳಿದುಕೊಳ್ಳಿ.

ಕರ್ನಾಟಕ ರಾಜ್ಯದ ಬರಪೀಡಿತ ರೈತರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ ದೊರಕಿದೆ. ಬೆಳೆ ಪರಿಹಾರದ ಹಣ ಬಿಡುಗಡೆಯಾಗಿದೆ. ಕರ್ನಾಟಕ ರಾಜ್ಯದಲ್ಲಿದ್ದ ಭೀಕರ ಬರಗಾಲದ ಪರಿಸ್ಥಿತಿಗೆ ಸ್ವಲ್ಪ ಪ್ರಮಾಣದಲ್ಲಿ ಪರಿಹಾರ ದೊರಕಿದೆ.ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (NDRF) ಮಾರ್ಗಸೂಚಿಗಳ ಪ್ರಕಾರ, ಕೇಂದ್ರ ಸರ್ಕಾರವು ಬರ ಪರಿಹಾರವನ್ನು ಬಿಡುಗಡೆ ಮಾಡಿದೆ. ಇದರಿಂದ ರಾಜ್ಯದಲ್ಲಿ ಭೀಕರ ಬರಗಾಲಕ್ಕೆ ತುತ್ತಾಗಿರುವ ರೈತರು ಸಂಕಷ್ಟದಿಂದ ಪಾರಾಗಿದ್ದಾರೆ.ಬೆಳೆಯನ್ನು ಕಳೆದುಕೊಂಡ ರೈತರಿಗೆ ಬೆಳೆ ಪರಿಹಾರ ಹಣ ಸಿಗಲಿ ಎಂದು ಹಾರೈಸೋಣ.

 

 

 

 

 

 

Leave a Reply

Your email address will not be published. Required fields are marked *