Tharak7star

ugadi 2024 : ಯುಗಾದಿ 2024, ಹಿನ್ನೆಲೆ, ಮಹತ್ವ ಮತ್ತು ಆಚರಣೆ.

ugadi 2024

ugadi 2024 : ಯುಗಾದಿ 2024, ಹಿನ್ನೆಲೆ, ಮಹತ್ವ ಮತ್ತು ಆಚರಣೆಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಹೊಸ ವರ್ಷದ ಮೊದಲ ಹಬ್ಬವೇ ಯುಗಾದಿ. ಯುಗಾದಿ ಎಂದರೆ ” ಯುಗದ ಆರಂಭ” ಹೊಸಯುಗದ ಆರಂಭ ಎಂದು ಕರೆಯಬಹುದು.

ಚೈತ್ರ ಮಾಸದ ಮೊದಲ ದಿನದಂದು ಯುಗಾದಿಯನ್ನು ಆಚರಿಸಲಾಗುತ್ತದೆ. ಈ ವರ್ಷ ಏಪ್ರಿಲ್ ಒಂಬತ್ತರಂದು ಯುಗಾದಿಯನ್ನು ಆಚರಿಸಲಾಗುತ್ತದೆ.

ದಕ್ಷಿಣ ಭಾರತದಲ್ಲಿ ಕರ್ನಾಟಕ, ಆಂಧ್ರಪ್ರದೇಶ,ಮಹಾರಾಷ್ಟ್ರ, ತೆಲಂಗಾಣ, ಮಧ್ಯ ಪ್ರದೇಶ ಮುಂತಾದ ರಾಜ್ಯಗಳಲ್ಲಿ ಯುಗಾದಿ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಹಬ್ಬವನ್ನು ” ಗುಡಿ ಪಾಡ್ವ” ಎಂಬ ಹೆಸರಿನಿಂದ ಆಚರಿಸಲಾಗುತ್ತದೆ. ಹಾಗೆಯೇ  ರಾಜಸ್ಥಾನದಲ್ಲಿ “ಥಾಪನಾ ” ಎಂಬ ಹೆಸರಿನಲ್ಲಿ ಯುಗಾದಿ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಕೆಲವು ರಾಜ್ಯಗಳಲ್ಲಿ ಯುಗಾದಿ ಹಬ್ಬವನ್ನು ಬೇರೆ ಬೇರೆ ಹೆಸರಿನಲ್ಲಿ ಆಚರಣೆ ಮಾಡಲಾಗುತ್ತದೆ.

2024 ರ ಯುಗಾದಿ ಚೈತ್ರ ಮಾಸ ಶುಕ್ಲ ಪಕ್ಷದ ಪ್ರತಿಪದ ತಿಥಿ ಆರಂಭ ವಾಗುವುದು ಏಪ್ರಿಲ್ ಎಂಟನೇ ತಾರೀಖಿನ ಮಧ್ಯಾಹ್ನ 3:00 ಗಂಟೆ  20 ನಿಮಿಷಕ್ಕೆ, ಮುಕ್ತಾಯ ಏಪ್ರಿಲ್ ಒಂಬತ್ತನೇ ತಾರೀಕು ಮಧ್ಯಾಹ್ನ 12:00 ಗಂಟೆಗೆ. ಹಿಂದೂ ಧರ್ಮದ ಸಂಪ್ರದಾಯದ ಪ್ರಕಾರ ಈ ದಿನದಂದು ಯುಗಾದಿಯನ್ನು ಆಚರಣೆ ಮಾಡಲಾಗುತ್ತದೆ.

ugadi 2024 : ಯುಗಾದಿ 2024, ಹಬ್ಬದ ಹಿನ್ನೆಲೆ ಮತ್ತು ಇತಿಹಾಸ.

ugadi 2024

ugadi 2024 ಅನ್ನು ಏಪ್ರಿಲ್ ಒಂಬತ್ತರಂದು ಆಚರಣೆ ಮಾಡಲಾಗುತ್ತದೆ. ಈ ದಿನ ಚೈತ್ರ ಮಾಸದ ಮೊದಲ ದಿನವಾಗಿದೆ. ಹಿಂದೂ ಸಂಪ್ರದಾಯ ಮತ್ತು ಹಿಂದೂ ಧರ್ಮ ಗ್ರಂಥಗಳ ಪ್ರಕಾರ ಯುಗಾದಿ ಹಬ್ಬವೇ ವರ್ಷದ ಮೊದಲ ಹಬ್ಬ.

ಯುಗಾದಿ ದಿನದಂದು ಬ್ರಹ್ಮದೇವರು ಬ್ರಹ್ಮಾಂಡವನ್ನು ಸೃಷ್ಟಿ ಮಾಡಲು ಪ್ರಾರಂಭಿಸಿದರು ಎಂದು ತಿಳಿಸಲಾಗಿದೆ. ನಂತರ ಬ್ರಹ್ಮದೇವರು ಸಮಯವನ್ನು ತಿಳಿಯಲು ವರ್ಷ,ತಿಂಗಳು, ವಾರಗಳನ್ನು ಸೃಷ್ಟಿ ಮಾಡಿದರು.

ನಾಡಿನಾದ್ಯಂತ ಯುಗಾದಿ ಹಬ್ಬವನ್ನು ಸಂಭ್ರಮಣೆಯಿಂದ ಆಚರಣೆ ಮಾಡಲಾಗುತ್ತದೆ. ಯುಗಾದಿ ಎಂದರೆ “ಯುಗ + ಆದಿ ” ಅಂದರೆ ಯುಗದ ಆರಂಭ, ಹೊಸ ಯುಗದ ಆರಂಭ ಎಂದು ಆಗುತ್ತದೆ. ದುರ್ಗಾದೇವಿಯ 9 ರೂಪಗಳನ್ನು ಆಚರಿಸುವ ಮೊದಲ ದಿನ ಚೈತ್ರನವರಾತ್ರಿಯೂ ಈ ದಿನದಂದು ಆರಂಭವಾಗುತ್ತದೆ.

ಬ್ರಹ್ಮ ದೇವರು ಮಾನವ ಕುಲದ ಸೃಷ್ಟಿಯನ್ನು ಪ್ರಾರಂಭಿಸಿದ ದಿನ. ಹೊಸ ಯುಗವನ್ನು ಪ್ರಾರಂಭಿಸಿದ ದಿನ ಆಗಿರುವುದರಿಂದ ಈ ದಿನವನ್ನು ಯುಗಾದಿ ಹಬ್ಬ ಎಂದು ಆಚರಣೆ ಮಾಡಲಾಗುತ್ತದೆ. ಮಾನವ ಸಮಾಜದ ಸುಖ-ದುಃಖ, ಸಿಹಿ ಕಹಿ ಘಟನೆಗಳ ಸಂಕೇತವಾಗಿ ಬೇವು ಬೆಲ್ಲವನ್ನು ಯುಗಾದಿ ಹಬ್ಬದ ದಿನದಂದು ಸೇವಿಸಲಾಗುತ್ತದೆ.

ಅಶ್ವಿನಿ ನಕ್ಷತ್ರಕ್ಕೆ ರವಿಯು ಪ್ರವೇಶಿಸುವ ಕಾಲವನ್ನು ಹೊಸ ವರ್ಷ ಎಂದು ಕರೆಯಲಾಗುತ್ತದೆ. ಇದನ್ನೇ ಸೌರಮಾನ ಯುಗಾದಿ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಇದು ಏಪ್ರಿಲ್ ತಿಂಗಳಲ್ಲಿ ಬರುತ್ತದೆ. ರವಿ ಮತ್ತು ಚಂದ್ರರ ಗತಿಯನ್ನು ಅವಲಂಬಿಸಿ 12 ರಿಂದ 13 ಪೌಣಿಮೆ ಅಥವಾ ಅಮಾವಾಸ್ಯೆಗೆ ಒಂದು ಚಂದ್ರಮಾನ ಯುಗಾದಿ ಆಗುತ್ತದೆ.

ಯುಗಾದಿಯ ಇತಿಹಾಸ 

ugadi 2024 : ಯುಗಾದಿ ರ ಮಹತ್ವ ಮತ್ತು ಆಚರಣೆ.

ugadi 2024

ugadi 2024 ಯ ಮಹತ್ವ ಮತ್ತು ಆಚರಣೆಯ ಬಗ್ಗೆ ತಿಳಿಯೋಣ. ಹಿಂದೂ ಸಂಪ್ರದಾಯದ ಮೊದಲ ಹಬ್ಬವಾದ ಯುಗಾದಿಯನ್ನು ಈ ವರ್ಷ ಏಪ್ರಿಲ್ ತಿಂಗಳಿನ 9ನೇ ತಾರೀಕಿನಂದು  ಆಚರಣೆ ಮಾಡಲಾಗುತ್ತದೆ. ಚೈತ್ರ ಮಾಸದ ಮೊದಲ ದಿನವಾಗಿರುವುದರಿಂದ ಈ ದಿನದಲ್ಲಿ ಯುಗಾದಿಯನ್ನು ಆಚರಣೆ ಮಾಡಲಾಗುತ್ತದೆ.

ಹಿಂದೂ ಸಂಪ್ರದಾಯ, ಧರ್ಮ ಗ್ರಂಥಗಳು ಮತ್ತು ಪುರಾಣಗಳ ಪ್ರಕಾರ ಯುಗಾದಿಯನ್ನು ಹಿಂದೂ ಧರ್ಮದ ಮೊದಲ ಹಬ್ಬ ಎಂದು ಆಚರಣೆ ಮಾಡಲಾಗುತ್ತದೆ. ಬ್ರಹ್ಮದೇವನು ಮನುಕುಲವನ್ನು ಸೃಷ್ಟಿ ಮಾಡಿದ ದಿನ ಎಂದು ಕರೆಯಲಾಗುತ್ತದೆ. ದುರ್ಗಾದೇವಿಯ 9 ರೂಪಗಳ ಆರಾಧನೆಯನ್ನು ಪ್ರಾರಂಭಿಸುವ ದಿನ. ಎಂದು ಸಹ ಕರೆಯಲಾಗುತ್ತದೆ. ಈ ಹಬ್ಬವನ್ನು ಅತ್ಯಂತ ವಿಜ್ರಂಬಣೆಯಿಂದ ಮತ್ತು ಸಂತೋಷದಿಂದ ಆಚರಣೆ ಮಾಡಲಾಗುತ್ತದೆ.

ಯುಗಾದಿ ಎಂದರೆ ಒಂದು ವರ್ಷದ ಆರಂಭ ಅಥವಾ ಒಂದು ಯುಗದ ಆರಂಭ ಎಂದರ್ಥ. ವಸಂತ ಕಾಲದ ಆರಂಭ. ವಸಂತ ಋತುವನ್ನು ಸಂತೋಷದಿಂದ ಆಹ್ವಾನಿಸುವ ದಿನವಾಗಿದೆ. ಇನ್ನು ಈ ಹಬ್ಬದ ಆಚರಣೆಯ ಬಗ್ಗೆ ತಿಳಿಯುವುದಾದರೆ ಜನರು ಅತ್ಯಂತ ಸಂಭ್ರಮಣೆಯಿಂದ,ಸಂತೋಷದಿಂದ ಯುಗಾದಿ ಹಬ್ಬವನ್ನು ಆಚರಣೆ ಮಾಡುತ್ತಾರೆ.

ತಮ್ಮ ತಮ್ಮ ಮನೆಗಳನ್ನು ಶುದ್ಧಿ ಮತ್ತು ಸ್ವಚ್ಛ ಮಾಡಿಕೊಂಡು ಸಗಣಿ ಬಳಿದು, ಮನೆಯ ಮುಂದೆ ತೋರಣವನ್ನು ಕಟ್ಟಿ, ರಂಗೋಲಿ ಬಿಡಿಸಿ, ಹೂವುಗಳನ್ನು ಇಟ್ಟು ಅತ್ಯಂತ ಸಂಭ್ರಮದಿಂದ ಯುಗಾದಿ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಮನೆಯಲ್ಲಿ ಹೊಸ ತರಹದ ಅಡಿಗೆ ಆಹಾರಗಳನ್ನು ತಯಾರಿಸಿ, ಸಿಹಿ ಪದಾರ್ಥಗಳನ್ನು ಮಾಡಿ, ಬೇವು ಬೆಲ್ಲಗಳನ್ನು ಎಲ್ಲರಿಗೂ ಹಂಚಿ,  ಹಬ್ಬವನ್ನು ಆಚರಣೆ ಮಾಡಲಾಗುತ್ತದೆ.

ugadi 2024 : ಯುಗಾದಿಯನ್ನು ಹಿಂದುಗಳ ಸೃಷ್ಟಿಯ ಆರಂಭ ಮತ್ತು ಹೊಸ ವರ್ಷದ ಆರಂಭ ಹಾಗೂ ವಸಂತ ಋತುವಿನ ಆಗಮನ, ಇವೆಲ್ಲವುಗಳ ಮೂಲವಾಗಿ ಯುಗಾದಿ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹಬ್ಬದ ಆಚರಣೆಯಲ್ಲಿ ವಿಭಿನ್ನತೆ ಇದ್ದರೂ ಸಹ, ಸಾಮಾನ್ಯವಾಗಿ ಎಲ್ಲಾ ಕಡೆಗಳಲ್ಲಿಯೂ  ಮನೆಗಳನ್ನು ಸ್ವಚ್ಛಗೊಳಿಸಿ, ಮನೆಯ ಮುಂದೆ ರಂಗೋಲಿ  ಬಿಡಿಸಿ, ಮನೆಯ ಮುಂದೆ ತೋರಣಗಳನ್ನು ಕಟ್ಟಿ, ಹಲವಾರು ರೀತಿಯ ಸಿಹಿ ಪದಾರ್ಥಗಳನ್ನು ತಯಾರಿಸಿ, ಬೇವು ಬೆಲ್ಲವನ್ನು ಹಂಚಿ ಹಬ್ಬವನ್ನು ಆಚರಿಸಲಾಗುತ್ತದೆ.

ಹಿಂದೂ ಸಂಪ್ರದಾಯದ ಪ್ರಕಾರ, ಬೆಳಿಗ್ಗೆ ಎದ್ದು ಸ್ನಾನ ಮಡಿಗಳನ್ನು ಮಾಡಿಕೊಂಡು, ಸೂರ್ಯ ನಮಸ್ಕಾರವನ್ನು ಮಾಡಿ, ಜೀವನದ ಸುಖ-ದುಃಖಗಳು ಕಹಿ ಸಿಹಿಗಳು ಎಲ್ಲವನ್ನು ನೆನಪಿಸುವ ದೃಷ್ಟಿಯಿಂದ ಬೇವು ಬೆಲ್ಲಗಳನ್ನು ಮನೆಯ ಎಲ್ಲರಿಗೂ ಹಂಚಿ, ಅತ್ಯಂತ ಸಂಭ್ರಮದಿಂದ ಯುಗಾದಿಯನ್ನು ಆಚರಣೆ ಮಾಡುತ್ತಾರೆ.

ಸೌರಮಾನ ಮತ್ತು ಚಂದ್ರಮಾನ ಎಂದು ಎರಡು ಪ್ರಭೇದಗಳಿದ್ದು. ಹಿಂದೂ ಧರ್ಮದ ಪ್ರಕಾರ, ಸಂಪ್ರದಾಯದ ಪ್ರಕಾರ ಹಾಗೂ ಪುರಾಣಗಳ ಪ್ರಕಾರ ಚಂದ್ರನ ಚಲನೆಯನ್ನು ಆಧರಿಸಿ ದಿನಗಣನೆ ಮಾಡುವುದನ್ನು ಚಂದ್ರಮಾನ ಎಂದು ಮತ್ತು ಸೂರ್ಯನ ದಿನಗಣನೆ ಮಾಡುವುದನ್ನು ಸೌರಮಾನ ಎಂದು ಕರೆಯುತ್ತಾರೆ. ಕರ್ನಾಟಕದಲ್ಲಿ ಮೊದಲಿನಿಂದಲೂ ಚಂದ್ರಮಾನ ಪದ್ಧತಿ ಜಾರಿಯಲ್ಲಿದ್ದು, ಯುಗಾದಿಯನ್ನು ಚಂದ್ರಮಾನ ಯುಗಾದಿ ಎಂದು ಆಚರಣೆ ಮಾಡುತ್ತಾರೆ.

ಅಶ್ವಿನಿ ನಕ್ಷತ್ರಕ್ಕೆ ರವಿಯು ಪ್ರವೇಶಿಸುವ ಕಾಲವನ್ನು ಹೊಸ ವರ್ಷ ಎಂದು ಕರೆಯುತ್ತಾರೆ ಇದನ್ನೇ ಸೌರಮಾನ ಯುಗಾದಿ ಎಂದು ಸಹ ಕರೆಯುತ್ತಾರೆ. ಹೊಸ ವರ್ಷದ ಆರಂಭದಲ್ಲಿ ಈ ಹಬ್ಬವನ್ನು ಆಚರಣೆ ಮಾಡುವುದರಿಂದ, ದೇವಸ್ಥಾನಗಳಿಗೆ ಹೋಗಿ ದೇವರ ಪೂಜೆಗಳನ್ನು ಸಹ ಅತ್ಯಂತ ಸಂಭ್ರಮಣೆಯಿಂದ ಮಾಡುತ್ತಾರೆ. ದೇವಸ್ಥಾನಗಳನ್ನು ಸ್ವಚ್ಛ ಮಾಡಿ, ಶುದ್ದಿ ಮಾಡಿ, ದೇವಸ್ಥಾನದ ಮುಂದೆ ಸಗಣಿ ಬಳಿದು, ರಂಗೋಲಿ ಹಾಕಿ, ತಳಿರು ತೋರಣಗಳನ್ನು ಕಟ್ಟಿ, ಪೂಜೆ ಮಾಡಿ ಯುಗಾದಿ ಹಬ್ಬವನ್ನು ಆಚರಣೆ ಮಾಡುತ್ತಾರೆ.

ಯುಗಾದಿಯ ದಿನ ಸುಖದ ಸಂಕೇತವಾಗಿ ಬೆಲ್ಲವನ್ನು ಮತ್ತು ದುಃಖದ ಸಂಕೇತವಾಗಿ ಬೇವಿನ ಎಲೆಗಳನ್ನು ಸಮನಾಗಿ ಸೇವಿಸುತ್ತಾರೆ. ಅಂದರೆ ಜೀವನದಲ್ಲಿ ಸುಖ ದುಃಖ, ಕಹಿ ಸಿಹಿ ಘಟನೆಗಳು ಸರಿಸಮವಾಗಿ ಇರಲೆಂದು, ಎಲ್ಲಾ ಕಾಲದಲ್ಲೂ ಎಲ್ಲರೂ ಸಹ ಸಹಕಾರ ಮನೋಭಾವನೆಯಿಂದ ಇರಲೆಂದು ಈ ರೀತಿ ಆಚರಣೆ ಮಾಡುತ್ತಾರೆ.

ಹೀಗೆ ಯುಗಾದಿ ಹಬ್ಬವನ್ನು ಹೊಸ ವರ್ಷದ ಆರಂಭ ಎಂದು ಮತ್ತು ಹೊಸಯುಗದ ಆರಂಭ ಎಂದು ಹಾಗೂ ಬ್ರಹ್ಮದೇವನು ಮನುಕುಲವನ್ನು ಸೃಷ್ಟಿ ಮಾಡಿದ ದಿನವೆಂದು, ಹಿಂದೂ ಧರ್ಮದ ಸಂಪ್ರದಾಯಗಳ ಪ್ರಕಾರ  ಚೈತ್ರ ಮಾಸದ ಮೊದಲ ದಿನದಂದು ಯುಗಾದಿ ಹಬ್ಬವನ್ನು ಆಚರಣೆ ಮಾಡುತ್ತಾರೆ.

ಈ ಹಬ್ಬದ ದಿನದಂದು ಅನೇಕ ರೀತಿಯ ಹೋಳಿಗೆಗಳನ್ನು ಮಾಡುತ್ತಾರೆ ಹಾಗೂ ಸಿಹಿ ಪದಾರ್ಥಗಳನ್ನು ಮಾಡುತ್ತಾರೆ. ಉದಾಹರಣೆಗೆ ಮಾವಿನ ಕಾಯಿ ಹೋಳಿಗೆ, ತೆಂಗಿನಕಾಯಿ ಹೋಳಿಗೆ, ಸೇಬು ಹಣ್ಣಿನ ಹೋಳಿಗೆ, ಸ್ಟ್ರಾಬೆರಿ ಹೋಳಿಗೆ, ಕ್ಯಾರೆಟ್ ಹೋಳಿಗೆ, ಕಡಲೆ ಹೋಳಿಗೆ  ಇನ್ನು ಮುಂತಾದ ತರದ ಹೋಳಿಗೆಗಳನ್ನು ಮಾಡುತ್ತಾರೆ.

ಪ್ರಪಂಚದಾದ್ಯಂತ ಸಾಮಾನ್ಯವಾಗಿ ಯುಗಾದಿ ಹಬ್ಬದಲ್ಲಿ ಬೇವು ಬೆಲ್ಲವನ್ನು ಸೇವನೆ ಮಾಡುವುದು ಇಂದಿನ ಕಾಲದಿಂದಲೂ ರೂಡಿಯಲ್ಲಿದ್ದಂತಹ ಪದ್ಧತಿಯಾಗಿದೆ. ಹೊಸ ಹೊಸ ಕಾಲಮಾನಕ್ಕೆ ತಕ್ಕಂತೆ, ಅವರವರ ಅಭಿರುಚಿಗೆ ತಕ್ಕಂತೆ, ಹಬ್ಬದ ಆಚರಣೆಯನ್ನು ಮಾಡುತ್ತಾರೆ.

ugadi 2024 ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.

Leave a Reply

Your email address will not be published. Required fields are marked *