Tharak7star

tender coconut water : ಎಳನೀರು ಅರೋಗ್ಯ ಪ್ರಯೋಜನಗಳು. ತೂಕ ಇಳಿಕೆಗೆ ಸಹಾಯ.

tender coconut water

tender coconut water : ಎಳನೀರು ಅರೋಗ್ಯ ಪ್ರಯೋಜನಗಳು. ತೂಕ ಇಳಿಕೆಗೆ ಸಹಾಯವಾಗಿದೆ. ಈ ಲೇಖನದಲ್ಲಿ ನಾವು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ. ಈಗಿನ ಬಿಸಿಲಿನ ತಾಪಮಾನಕ್ಕೆ ಎಳನೀರು ಕುಡಿಯುವುದರಿಂದ ಆರೋಗ್ಯ ತುಂಬಾನೇ ತಂಪಾಗುತ್ತದೆ. ಏಪ್ರಿಲ್ ತಿಂಗಳಿನಲ್ಲಿ ಅತಿ ಹೆಚ್ಚು ಬಿಸಿಲಿನ ಬೇಗೆ ಇರುವುದರಿಂದ ದೇಹವನ್ನು ತಂಪಾಗಿ ಇಡಲು ಎಳನೀರು ತುಂಬಾನೆ ಸಹಾಯವಾಗಿದೆ.

ಎಳನೀರು ಕುಡಿಯುವುದರಿಂದ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಗಳನ್ನು ಪಡೆಯಬಹುದು. ದೇಹವನ್ನು ತಂಪಾಗಿ ಇಡುತ್ತದೆ, ತೂಕ ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ, ದೇಹದಲ್ಲಿ ಇರುವಂತಹ ಕಲ್ಮಶಗಳನ್ನು ಹೊರಹಾಕುತ್ತದೆ, ಅಧಿಕ ರಕ್ತದೊತ್ತಡವನ್ನು  ಕಡಿಮೆ ಮಾಡುತ್ತದೆ. ಎಳನೀರು ಕುಡಿಯುವುದರಿಂದ ದೇಹ ತಂಪಾಗಿ ಇರಲು ಸಹಾಯ ಮಾಡುತ್ತದೆ ಇದರಿಂದ ಎದೆ ಉರಿ ಕಡಿಮೆಯಾಗುತ್ತದೆ. ಮಧುಮೇಹ ಅಥವಾ ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸಲು ಇದು ತುಂಬಾನೇ ಸಹಕಾರಿಯಾಗಿದೆ.

ಈಗಿನ ಏಪ್ರಿಲ್ ತಿಂಗಳಿನಲ್ಲಿ ಬೇಸಿಗೆಯ ಬಿಸಿಲು ತುಂಬಾನೇ ಇರುತ್ತದೆ ಹಾಗಾಗಿ ದೇಹವನ್ನು ತಂಪಾಗಿಡಲು ತಂಪು ಪಾನಿಗಳ ಮೊರೆ ಹೋಗುವುದು ಸಹಜ. ಆದರೆ ನೈಸರ್ಗಿಕವಾಗಿ ಸಿಗುವಂತಹ ಎಳನೀರಿನಲ್ಲಿ ಅನೇಕ ಆರೋಗ್ಯ ಪ್ರಯೋಜನಗಳು ಇರುವುದರಿಂದ ಇದನ್ನು ಸೇವಿಸುವುದು ತುಂಬಾನೇ ಒಳ್ಳೆಯದು. ಇದರಲ್ಲಿ ಯಾವುದೇ ರೀತಿಯ ಕೆಮಿಕಲ್ ಇರುವುದಿಲ್ಲ. ನೈಸರ್ಗಿಕವಾಗಿ ಸಿಗುವುದರಿಂದ ಆರೋಗ್ಯದ ಮೇಲೆ ಯಾವುದೇ ರೀತಿಯ ಅಡ್ಡ ಪರಿಣಾಮಗಳನ್ನು ಬೀರುವುದಿಲ್ಲ.

tender coconut water : ಎಳನೀರು ನ ಅರೋಗ್ಯ ಪ್ರಯೋಜನಗಳು.

tender coconut water

tender coconut water : ಎಳನೀರು ಅರೋಗ್ಯ ಪ್ರಯೋಜನಗಳನ್ನು ತಿಳಿದುಕೊಳ್ಳೋಣ. ಬೇಸಿಗೆಯಲ್ಲಿ ದೇಹವನ್ನು ತಂಪಾಗಿ ಇಡಲು ಮತ್ತು ಆರೋಗ್ಯಕರವಾಗಿ ಇಡಲು ಇದು ತುಂಬಾನೇ ಸಹಕಾರಿಯಾಗಿದೆ. ಎಳನೀರು ಕುಡಿಯುವುದರಿಂದ ಆಗುವ ಆರೋಗ್ಯ ಪ್ರಯೋಜನಗಳನ್ನು  ನೋಡೋಣ.

1. ದೇಹವನ್ನು ತಂಪಾಗಿ ಇಡುತ್ತದೆ : ಬಿಸಿಲಿನ ಬೇಗೆಯಿಂದ ದೇಹವನ್ನು ರಕ್ಷಿಸಲು ಮತ್ತು ದೇಹವನ್ನು ತಂಪಾಗಿಡಲು ಎಳನೀರು ತುಂಬಾನೆ ಸಹಕಾರಿಯಾಗಿದೆ. ಇದನ್ನು ಕುಡಿಯುವುದರಿಂದ ದೇಹವು ತುಂಬಾನೇ ತಂಪಾಗಿ  ಇಡುತ್ತದೆ. ಬಿಸಿಲಿಗೆ ದೇಹವೂ ತುಂಬಾನೇ ಬೆವರುವುದರಿಂದ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ಅತಿಯಾಗಿ ಬಯಾರಿಕೆಯಾಗುತ್ತದೆ ಇದರಿಂದ ಬಾಯಾರಿಕೆಯನ್ನು ಕಡಿಮೆ ಮಾಡಿಕೊಳ್ಳಲು ಎಳನೀರು ಕುಡಿಯುವುದು ತುಂಬಾನೇ ಸಹಕಾರಿ.

ಐಸ್ ಕ್ರೀಮ್, ತಂಪು ಪಾನೀಯಗಳ ಮೊರೆ ಹೋಗುವುದಕ್ಕಿಂತ ನೈಸರ್ಗಿಕವಾಗಿ ಸಿಗುವಂತಹ ಎಳನೀರು ಕುಡಿಯುವುದು ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಇದು ನೈಸರ್ಗಿಕವಾಗಿ ಸಿಗುವುದರಿಂದ  ಇದರಲ್ಲಿ ಯಾವುದೇ ರೀತಿಯ ಕೆಮಿಕಲ್ ಇರುವುದಿಲ್ಲ ಹಾಗಾಗಿ ಇದು ದೇಹವನ್ನು ಮತ್ತು ಆರೋಗ್ಯವನ್ನು ರಕ್ಷಿಸುತ್ತದೆ.

2.  ತೂಕ ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ : ಪ್ರತಿನಿತ್ಯ ಎಳನೀರು ಸೇವಿಸುವುದರಿಂದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ನೈಸರ್ಗಿಕವಾಗಿರುವುದರಿಂದ ತುಂಬಾನೇ ಕ್ಯಾಲೋರಿ ಇರುತ್ತದೆ. ಇದು ದೇಹದಲ್ಲಿ ಸಂಗ್ರಹವಾಗುವಂತಹ ಬೊಜ್ಜು. ಪ್ಯಾಟ್ ಕಡಿಮೆ ಮಾಡಿ ದೇಹದಾ ತೂಕ ಇಳಿಕೆಗೆ ಸಹಕರಿಸುತ್ತದೆ.

ಎಳನೀರಿನಲ್ಲಿ ಕಡಿಮೆ ಕ್ಯಾಲೋರಿಗಳು ಮತ್ತು ಹೆಚ್ಚಿನ ಪೋಷಕಾಂಶಗಳು ಇರುವುದರಿಂದ ಬೇಸಿಗೆ ಕಾಲಕ್ಕೆ ಇದನ್ನು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಬೇಸಿಗೆ ತಿಂಗಳುಗಳಲ್ಲಿ ತೂಕ ಕಡಿಮೆ ಮಾಡಿಕೊಳ್ಳುವುದು ತುಂಬಾನೇ ಸುಲಭ.ಏಕೆಂದರೆ ದೇಹದ ಛಾಯಾಪಚಾಯವು ಹೆಚ್ಚಾಗಿರುತ್ತದೆ ಮತ್ತು ಬೇಸಿಗೆ ಕಾಲದಲ್ಲಿ ದೇಹವು ಹೆಚ್ಚಿನ ಕ್ಯಾಲೋರಿ ಯುಕ್ತ ಆಹಾರಕ್ಕೆ ಆಸೆ ಪಡುವುದಿಲ್ಲ, ಹೀಗಾಗಿ ಈ ಕಾಲವು ದೇಹದ ತೂಕ ಕಡಿಮೆ ಮಾಡಿಕೊಳ್ಳಲು ತುಂಬಾನೇ ಸಹಕಾರಿಯಾಗಿದೆ.

3. ಕಲ್ಮಶವನ್ನು ಹೊರಹಾಕುತ್ತದೆ : ಎಳನೀರು ಕುಡಿಯುವುದರಿಂದ ದೇಹದಲ್ಲಿ ಸಂಗ್ರಹವಾಗಿರುವ ಅನೇಕ್ರೀತಿಯ ಕಲ್ಮಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದರಿಂದ ದೇಹವು ಶುದ್ಧಿಯಾಗುತ್ತದೆ. ಆರೋಗ್ಯವು ತುಂಬಾನೇ ಚೆನ್ನಾಗಿರುತ್ತದೆ ಯಾವುದೇ ರೀತಿಯ ಅನಾರೋಗ್ಯಕ್ಕೆ ಕಾರಣವಾಗುವುದಿಲ್ಲ.

4. ಅಧಿಕ ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ : ಎಳನೀರು ಕುಡಿಯುವುದರಿಂದ ಅಧಿಕ ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ. ದೇಹವು ತುಂಬಾನೇ ಆರೋಗ್ಯಕರವಾಗಿರುವುದರಿಂದ, ಯಾವುದೇ ರೀತಿಯ ಆಯಾಸ ಉಂಟಾಗುವುದಿಲ್ಲ, ತುಂಬಾನೇ ಸುಸ್ತು ಆಗುವುದಿಲ್ಲ, ದೇಹ ಆರೋಗ್ಯವಾಗಿ ಇರುತ್ತದೆ.

5. ಮಧುಮೇಹವನ್ನು ನಿಯಂತ್ರಿಸುತ್ತದೆ : ಎಳನೀರು ಒಂದು ನೈಸರ್ಗಿಕವಾದ ಉತ್ಪನ್ನವಾಗಿರುವುದರಿಂದ ಇದರಲ್ಲಿ ಕಡಿಮೆ ಕ್ಯಾಲೋರಿಗಳು ಇರುತ್ತವೆ. ಇದನ್ನು ಕುಡಿಯುವುದರಿಂದ ದೇಹದಲ್ಲಿ ಸಕ್ಕರೆಯ ಅಂಶ ಹೆಚ್ಚಾಗುವುದಿಲ್ಲ. ಇದರಿಂದ ಮಧುಮೇಹ ನಿಯಂತ್ರಣದಲ್ಲಿರುತ್ತದೆ.

6. ಕಿಡ್ನಿ ಆರೋಗ್ಯಕ್ಕೆ  ಒಳ್ಳೆಯದು : ಎಳನೀರು ಕುಡಿಯುವುದರಿಂದ ಕಿಡ್ನಿಯ ಆರೋಗ್ಯವು ಸುಧಾರಿಸುತ್ತದೆ. ಇದರಲ್ಲಿ ಹೆಚ್ಚಿನ ಪೋಷಕಾಂಶ ಇರುವುದರಿಂದ, ದೇಹದಲ್ಲಿ ಸಂಗ್ರಹ ವಾಗುವಂತಹ ಕಲ್ಮಶವನ್ನು ಹೊರ ಹಾಕುವುದರಿಂದ, ಕಿಡ್ನಿ ಆರೋಗ್ಯವೂ ತುಂಬಾನೇ ಚೆನ್ನಾಗಿರುತ್ತದೆ.

ಇದು ನೈಸರ್ಗಿಕ ವಾಗಿರುವುದರಿಂದ ಕಿಡ್ನಿಯಲ್ಲಿ ಸಂಗ್ರಹವಾಗುವಂತಹ ಕಲ್ಮಶ ಮತ್ತು ಕಲ್ಲನ್ನು ಹೊರಹಾಕುತ್ತದೆ. ಮೂತ್ರ ಕೋಶವನ್ನು ಶುದ್ಧೀಕರಿಸುತ್ತದೆ. ಮೂತ್ರನಾಳದ ರಕ್ಷಣೆ ಮಾಡುತ್ತದೆ. ಕಿಡ್ನಿಯಲ್ಲಿ ಯಾವುದೇ ಕಲ್ಮಶ ಉಳಿಯುವುದನ್ನು ತಡೆಯುವುದರಿಂದ ಕಿಡ್ನಿಯನ್ನು ಅನಾರೋಗ್ಯದಿಂದ ಕಾಪಾಡುತ್ತದೆ.ಕಿಡ್ನಿ ಸಮಸ್ಯೆ ಇರುವವರು ಎಳನೀರನ್ನು ಪ್ರತಿದಿನ ಕುಡಿಯುವುದರಿಂದ ತುಂಬಾನೇ ಸಹಕಾರಿಯಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

7. ಕಡಿಮೆ ಕ್ಯಾಲೋರಿಯನ್ನು ಹೊಂದಿರುತ್ತದೆ : ಎಳನೀರು ನೈಸರ್ಗಿಕವಾದ ಉತ್ಪನ್ನವಾಗಿರುವುದರಿಂದ ಕಡಿಮೆ ಕ್ಯಾಲರಿ ಮತ್ತು ಅತಿ ಹೆಚ್ಚಿನ ಪೋಷಕಾಂಶವನ್ನು ಹೊಂದಿರುತ್ತದೆ. ಹೊರಗಿನ ತಂಪು ಪಾನೀಯಗಳಿಗೆ ಹೋಲಿಸಿದರೆ ಇದರಲ್ಲಿ ಸಕ್ಕರೆಯ ಪ್ರಮಾಣವೋ ಇರುವುದಿಲ್ಲ. ಆದ್ದರಿಂದ ಆರೋಗ್ಯಕ್ಕೆ ತುಂಬಾನೆ ಸಹಕಾರಿಯಾಗಿದೆ.

ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಪೋಷಕಾಂಶ ಇರುವುದರಿಂದ ದೇಹದ ಆರೋಗ್ಯಕ್ಕೆ ಸಹಕಾರಿಯಾಗಿದೆ ಮತ್ತು ತೂಕ ಕಡಿಮೆ ಮಾಡಿಕೊಳ್ಳಲು ಸಹಕಾರಿಯಾಗಿದೆ.

8. ಹಸಿವನ್ನು ಕಡಿಮೆ ಮಾಡುತ್ತದೆ: ಎಳನೀರು ಕುಡಿಯುವುದರಿಂದ ಹಸಿವು ಕಡಿಮೆಯಾಗುತ್ತದೆ. ಬಾಯಾರಿಕೆ ಕಡಿಮೆಯಾಗುತ್ತದೆ. ಕಡಿಮೆ ಕ್ಯಾಲರಿ ಇರುವುದರಿಂದ, ಹೆಚ್ಚಿನ ಪೋಷಕಾಂಶಗಳು ಇರುವುದರಿಂದ  ದೇಹವನ್ನು ಸರಿಯಾದ ರೀತಿಯಲ್ಲಿ ಕಾಪಾಡುವುದರಿಂದ ಅತಿಯಾಗಿ ಹಸಿವಾಗುವುದನ್ನು ತಡೆಯುತ್ತದೆ.

ಹೀಗೆ ಎಳನೀರು ನೈಸರ್ಗಿಕವಾಗಿ ಸಿಗುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ಸಂಪೂರ್ಣ ಮಾಹಿತಿಯನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ 

tender coconut water : ಎಳನೀರು.

tender coconut water

tender coconut water : ಎಳನೀರು ನೈಸರ್ಗಿಕವಾದ ಉತ್ಪನ್ನವಾಗಿರುವುದರಿಂದ ಇದರಲ್ಲಿ ತುಂಬಾನೇ  ಅರೋಗ್ಯ ಪ್ರಯೋಜನಗಳು ಇದೆ. ಕಡಿಮೆ ಕ್ಯಾಲೋರಿ ಹೊಂದಿರುವುದರಿಂದ  ತೂಕ ಇಳಿಕೆಗೆ ಸಹಾಯ. ಹೆಚ್ಚಿನ ಪೋಷಕಾಂಶ ಹೊಂದಿರುವುದರಿಂದ ದೇಹಕ್ಕೆ ಬೇಕಾಗುವ ಶಕ್ತಿಯನ್ನು ನೀಡುತ್ತದೆ. ದೇಹವನ್ನು ಆಯಾಸಗೊಳ್ಳಲು ಬಿಡುವುದಿಲ್ಲ. ಅತಿ ಹೆಚ್ಚಿನ ಬಾಯಾರಿಕೆಯಾಗುವುದನ್ನು ತಡೆಯುತ್ತದೆ. ದೇಹಕ್ಕೆ ಬೇಕಾಗುವಂತಹ ಗ್ಲುಕೋಸ್ ಅಂಶವನ್ನು ನೀಡುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಎಳನೀರು ಒಂದು ನೈಸರ್ಗಿಕ ಉತ್ಪನ್ನವಾಗಿರುವುದರಿಂದ ಇದರಲ್ಲಿ ಯಾವುದೇ ರೀತಿಯ ಕೆಮಿಕಲ್ ಇರುವುದಿಲ್ಲ. ಇದು ದೇಹದ ಮೇಲೆ ಯಾವುದೇ ರೀತಿ ಅಡ್ಡ ಪರಿಣಾಮವನ್ನು ಬೀರುವುದಿಲ್ಲ. ಬೇಸಿಗೆ ಕಾಲದಲ್ಲಿ ದೇಹವನ್ನು ತಂಪಾಗಿಡಲು ಸಹಕಾರಿಯಾಗಿದೆ.

ಎಳನೀರು ನೀರಿನ ಅಂಶ ಇರುವ ಆಹಾರಗಳಲ್ಲಿ ಒಂದಾಗಿದೆ.ದೇಹಕ್ಕೆ ಬೇಕಾಗುವಷ್ಟು ನೀರು ಒದಗಿಸಲು ಇದು ಸಹಕಾರಿಯಾಗಿದೆ. ಬೇಸಿಗೆಯಲ್ಲಿ ದೇಹವು ತುಂಬಾನೇ ಬೆವರುವುದರಿಂದ ದೇಹದಲ್ಲಿರುವ ಲವಣಗಳು ಹೊರಬಂದು ತುಂಬಾನೇ ಬಾಯಾರಿಕೆಯಾಗುತ್ತದೆ. ಈ ಬಾಯಾರಿಕೆಯನ್ನು ಶಮನಗೊಳಿಸಲು ಎಳನೀರು ಸಹಕಾರಿಯಾಗಿದೆ.

100 ಗ್ರಾಂ ತೆಂಗಿನ ನೀರಿನಲ್ಲಿ 94% ನೀರಿನ ಅಂಶ ಇರುತ್ತದೆ.ದೇಹಕ್ಕೆ ಬೇಕಾಗುವ ಸೋಡಿಯಂ ಅಂಶವನ್ನು ನೀಡುತ್ತದೆ. ಇದರಿಂದ ದೇಹದ ಆರೋಗ್ಯವು ತುಂಬಾನೇ ಚೆನ್ನಾಗಿ ಇರುತ್ತದೆ. ಆರೋಗ್ಯದ ದೃಷ್ಟಿಯಿಂದ ಸಹ ಎಳನೀರು ಒಳ್ಳೆಯದು. ಬೇಸಿಗೆಯ ಬಿಸಿಲಿನಲ್ಲಿ ನೀರು ಯುಕ್ತವಾಗಿರುವಂತಹ ಆಹಾರಗಳನ್ನು ಹೆಚ್ಚಾಗಿ ಸೇವಿಸಬೇಕು. ಇದರಿಂದ ದೇಹದ ಆಯಾಸ ಮತ್ತು ಅತಿಯಾಗಿ ಸುಸ್ತಾಗುವುದನ್ನು ಕಡಿಮೆ ಮಾಡಿಕೊಳ್ಳಬಹುದು.

ಬೇಸಿಗೆಯ ಬಿಸಿಲಿನಿಂದ ದೇಹವನ್ನು ರಕ್ಷಿಸಲು ಮತ್ತು ದೇಹವನ್ನು ತಂಪಾಗಿ ಇಡಲು ಎಳನೀರನ್ನು ಕುದಿಯುವ ಅಭ್ಯಾಸ ಮಾಡಿಕೊಳ್ಳೋಣ. ಇದರಿಂದ ಆರೋಗ್ಯವು ಚೆನ್ನಾಗಿರುತ್ತದೆ. ಇತರ ತಂಪು ಪಾನೀಯಗಳಿಗಿಂತ ಎಳನೀರು ದೇಹಕ್ಕೆ ತಂಪು ನೀಡುತ್ತದೆ ಮತ್ತು ದೇಹವನ್ನು ಆರೋಗ್ಯಯುತವಾಗಿ ಇಡಲು ಸಹಕಾರಿಯಾಗಿದೆ.

ಬೇಸಿಗೆಯಲ್ಲಿ ಎಷ್ಟೇ ಬಿಸಿಲಿದ್ದರೂ ನಮ್ಮ ದೇಹಕ್ಕೆ ಬೇಕಾಗುವಷ್ಟು ನೀರು ಮತ್ತು ತೇವಾಂಶ ಹಾಗೂ ಪೌಷ್ಟಿಕಾಂಶ ದೊರಕುವಂತಹ ಆಹಾರಗಳನ್ನು ಸೇವನೆ ಮಾಡುವುದರಿಂದ ದೇಹವನ್ನು ತಂಪಾಗಿ ಮತ್ತು ಆರೋಗ್ಯಯುತವಾಗಿ ಇಟ್ಟುಕೊಳ್ಳಬಹುದು. ಯಾವುದೇ ರೀತಿಯ ಅನಾರೋಗ್ಯ ಉಂಟಾಗುವುದನ್ನು ತಡೆಯಬಹುದು.

ಬೇಸಿಗೆಯಲ್ಲಿ ಕೂಲ್ ಡ್ರಿಂಕ್ಸ್ ಮತ್ತು ಐಸ್ ಕ್ರೀಮ್ ಗಳ ಮೊರೆ ಹೋಗುವುದಕ್ಕಿಂತ, ನೈಸರ್ಗಿಕವಾಗಿ ಸಿಗುವಂತಹ ಎಳನೀರು ಹಣ್ಣು ಹಂಪಲುಗಳನ್ನು  ಸೇವಿಸುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

 

Leave a Reply

Your email address will not be published. Required fields are marked *