Tharak7star

Fastag : ಫಾಸ್ಟಗ್ ಎಂದರೇನು?. ಹೇಗೆ ಕೆಲಸ ನಿರ್ವಹಿಸುತ್ತದೆ ಮತ್ತು ಅದರ ಪ್ರಯೋಜನಗಳು.

FASTag : ಫಾಸ್ಟಗ್

Fastag : ಫಾಸ್ಟಗ್ ಎಂದರೇನು?. ಹೇಗೆ ಕೆಲಸ ನಿರ್ವಹಿಸುತ್ತದೆ ಮತ್ತು ಅದರ ಪ್ರಯೋಜನಗಳ ಹಾಗೂ ಬೇಕಾಗುವ ದಾಖಲೆಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ. ಇದು ಒಂದು ಟೋಲ್ ಸಂಗ್ರಹಣೆ ಮಾಡುವ ಆನ್ಲೈನ್ ವಿಧಾನ. ಭಾರತ ಸರ್ಕಾರದ ಸಾರಿಗೆ ಇಲಾಖೆಯಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಯ್ದರ ಸಂಪೂರ್ಣ ಜವಾಬ್ದಾರಿಯನ್ನು ಹೊಂದಿದೆ.

NHAI ಫಾಸ್ಟ್ ಟ್ಯಾಗ್ನ ಪರಿಚಯ ಮಾಡಿದ್ದು ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಿಸಲು ಸಹಕಾರಿಯಾಗಿದೆ. ಈ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹಣ ವ್ಯವಸ್ಥೆಯು ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದೆ ಮತ್ತು ನಮ್ಮ ಸಮಯವನ್ನು ಉಳಿಸುತ್ತದೆ. ಎಲ್ಲಾ ಆನ್ಲೈನ್ ಮೂಲಕ ಪಾವತಿ ಆಗಿರುವುದರಿಂದ ಸಮಯ ತುಂಬಾ ಉಳಿಯುತ್ತದೆ. ನಗದು ಪ್ರಕಾರದಲ್ಲಿ ಟೋಲ್ ಸಂಗ್ರಹಣೆ  ಮಾಡುವುದು ತುಂಬಾ ಸಮಯ ತೆಗೆದುಕೊಳ್ಳುತ್ತದೆ.

ಈ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹಣ ವ್ಯವಸ್ಥೆಯಿಂದ ಟ್ರಾಫಿಕ್ ತೊಂದರೆ ನಿವಾರಣೆಗೊಳ್ಳುತ್ತದೆ. ಸುಗಮವಾಗಿ ಸಂಚಾರ ಮಾಡಲು ಅವಕಾಶವಾಗುತ್ತದೆ. ಈಗಿನ ಕಾಲದಲ್ಲಿ ಎಲ್ಲಾ ನಗದು ರಹಿತ ವ್ಯವಹಾರವಾಗಿದೆ. ದಿನನಿತ್ಯದ ವಸ್ತುಗಳು,ದಿನಸಿ, ಆನ್ಲೈನ್ ಶಾಪಿಂಗ್, ಹೀಗೆ ಎಲ್ಲಾ ವ್ಯವಹಾರಗಳು ಆನ್ಲೈನ್ ನಲ್ಲಿ ಮಾಡುವುದರಿಂದ ನಗದು ವ್ಯವಹಾರಕ್ಕೆ ಅವಕಾಶ ಇರುವುದಿಲ್ಲ.

Fastag : ಫಾಸ್ಟಗ್ ನ ಪರಿಚಯ.

FASTag : ಫಾಸ್ಟಗ್  ಒಂದು ಎಲೆಕ್ಟ್ರಾನಿಕ್ ಟೋಲ್ ಸಂಗ್ರಹಣ ವ್ಯವಸ್ಥೆಯಾಗಿದೆ. ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು  ಈ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು ಸಂಪೂರ್ಣ ಜವಾಬ್ದಾರಿಯನ್ನು ಹೊಂದಿರುತ್ತದೆ. ಈ ವ್ಯವಸ್ಥೆಯಿಂದ ಪ್ರಯಾಣಿಕರು ತುಂಬಾ ಅನುಕೂಲವನ್ನು ಪಡೆದಿದ್ದಾರೆ. ಟೋಲ್ ಗೇಟ್ ನಲ್ಲಿ ಟೋಲ್ ಸಂಗ್ರಹಣೆ ಆನ್ಲೈನ್ ಮೂಲಕ ಆಗುವುದರಿಂದ ಪ್ರಯಾಣಿಕರಿಗೆ ತುಂಬಾ ಅನುಕೂಲವಾಗಿದೆ.

ಡಿಜಿಟಲೀಕರಣವನ್ನು ಮುಂದುವರಿಸಲು ಭಾರತ ಸರ್ಕಾರವು ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಣೆ ಮಾಡಲು ಈ ಎಲೆಕ್ಟ್ರಾನಿಕ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಫಾಸ್ಟ್ ಟ್ರ್ಯಾಕ್ ಅನ್ನು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI), ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ನಿರ್ವಹಿಸುತ್ತವೆ. ಜನರ ಸಮಯ ಮತ್ತು ಶ್ರಮವನ್ನು ಉಳಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

ಫಾಸ್ಟ್ ಟ್ರ್ಯಾಗನ್ನು ಹೇಗೆ ಪಡೆಯುವುದು, ಏಕೆ ಬಳಸಬೇಕು ಮತ್ತು ಅದರ  ಪ್ರಯೋಜನಗಳು ಹಾಗೂ ಫಾಸ್ಟ್ ಟ್ಯಾಗ್ ಪಡೆಯಲು ಬೇಕಾಗುವ ದಾಖಲಾತಿಗಳು ಇವೆಲ್ಲ ಮಾಹಿತಿಗಳನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

Fastag : ಫಾಸ್ಟಗ್ ಹೇಗೆ ಕೆಲಸ ನಿರ್ವಹಿಸುತ್ತದೆ ಮತ್ತು ಅದರ ಪ್ರಯೋಜನಗಳು.

FASTag : ಫಾಸ್ಟಗ್

FASTag : ಫಾಸ್ಟಗ್ ಹೇಗೆ ಕೆಲಸ ನಿರ್ವಹಿಸುತ್ತದೆ ಮತ್ತು ಅದರ ಪ್ರಯೋಜನಗಳನ್ನು ತಿಳಿದುಕೊಳ್ಳೋಣ. ಫಾಸ್ಟ್ ಟ್ಯಾಗ್ ವ್ಯವಸ್ಥೆಯು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಜಾರಿಗೆ ತಂದಿರುವ ಒಂದು ವ್ಯವಸ್ಥೆಯಾಗಿದೆ. ಇದು ಟೋಲ್ ಸಂಗ್ರಹಣೆ ಮಾಡುವ ಕೆಲಸವನ್ನು ಮಾಡುತ್ತದೆ. ಇದರಲ್ಲಿ ನೀಡಲಾಗಿರುವ QR  ಕೋಡ್ ಮೂಲಕ ಆನ್ಲೈನ್ನಲ್ಲಿ  ಟೋಲ್ ಸಂಗ್ರಹಣೆಯಾಗುತ್ತದೆ. ಅಂದರೆ ವಾಹನವು ಟೋಲ್ ಗೇಟ್ ಗೆ ಬಂದ ತಕ್ಷಣ ಅಲ್ಲಿರುವ ಸಿಸಿ ಕ್ಯಾಮೆರಾ ಅದನ್ನು ಟ್ರ್ಯಾಕ್ ಮಾಡುತ್ತದೆ.

ಹೀಗೆ ಆನ್ಲೈನ್ ಮೂಲಕ ಟೋಲ್ ಸಂಗ್ರಹಣೆ ಮಾಡುವುದರಿಂದ ವಾಹನ ಮಾಲೀಕರ ಮತ್ತು ಪ್ರಯಾಣಿಕರ ತಮ್ಮಯ್ಯ ತುಂಬಾನೇ ಉಳಿಯುತ್ತದೆ. ತುಂಬಾ ಸಮಯ ಕಾಯುವ ಹಾಗೆ ಇರುವುದಿಲ್ಲ. ಇದು ತುಂಬಾ ಸಹಕಾರಿಯಾಗಿದೆ.

ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ಟ್ರಾಫಿಕ್ ಜಾಮ್ ಸಮಸ್ಯೆಯನ್ನು ನಿವಾರಿಸಲು ಇದು ಸಹಕಾರಿಯಾಗಿದೆ. ಇದು ನಗದು ರಹಿತ ವ್ಯವಹಾರವಾಗಿರುವುದರಿಂದ ಬಹುಬೇಗ ಟೋಲ್ ಸಂಗ್ರಹಣೆಯಾಗುತ್ತದೆ ಇದರಿಂದ ವಾಹನ ಸಂಚಾರಕ್ಕೆ ತುಂಬಾನೇ ಅನುಕೂಲವಾಗಿದೆ.

ಭಾರತ ಸರ್ಕಾರವು ಎಲ್ಲಾ ವಾಹನ ಮಾಲೀಕರು ಮತ್ತು ಪ್ರಯಾಣಿಕರಿಗೆ ಈ ಎಲೆಕ್ಟ್ರಾನಿಕ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಿದೆ. ಈ ವ್ಯವಸ್ಥೆ ಬಳಸುವುದರಿಂದ ನಿಮ್ಮ ವಾಹನವು ಸುಲಭವಾಗಿ ಟೋಲ್ ಅನ್ನು ಕ್ರಾಸ್ ಮಾಡಬಹುದು.

FASTag ನ ಪ್ರಯೋಜನಗಳು.

1. ಸಮಯ ಉಳಿಯುತ್ತದೆ : ವಾಹನ ಸವಾರರಿಗೆ ಟೋಲ್ ಗೇಟ್ ನಲ್ಲಿ ನಿಲ್ಲುವ ಸಮಯ ಉಳಿಯುತ್ತದೆ. ಆನ್ಲೈನ್ ಮೂಲಕ ಈ ವ್ಯವಸ್ಥೆಯಿಂದ ನಿಮ್ಮ ಟೋಲ್ ಸಂಗ್ರಹಣೆ ಆಗುವುದರಿಂದ ಟೋಲ್ ಗೇಟ್ ನಲ್ಲಿ ತುಂಬಾ ಸಮಯ ಕಾಯುವ ಹಾಗೆ ಇರುವುದಿಲ್ಲ.

2. ನಗದು ರಹಿತ  ವ್ಯವಸ್ಥೆ : ಎಲೆಕ್ಟ್ರಾನಿಕ್ ವ್ಯವಸ್ಥೆಯು ಆನ್ಲೈನ್ ಮೂಲಕ ಟೋಲ್ ಸಂಗ್ರಹಣೆ ಮಾಡುವುದರಿಂದ ನಗದು ರಹಿತ ವ್ಯವಸ್ಥೆಗೆ ಅನುವು ಮಾಡಿಕೊಟ್ಟಿದೆ. ನಗದು ವ್ಯವಹಾರವಾಗಿದ್ದರೆ, ಚಿಲ್ಲರೆ ಸಮಸ್ಯೆ ಎದುರಾಗುತ್ತಿತ್ತು. ಇದನ್ನು ಪರಿಹರಿಸಲು ಈ ಎಲೆಕ್ಟ್ರಾನಿಕ್ ವ್ಯವಸ್ಥೆ  ಸಹಾಯವಾಗಿದೆ.

3. ಟೋಲ್ ವೆಚ್ಚಗಳ ಬಗ್ಗೆ ಮಾಹಿತಿ ಎಸ್ಎಮ್ಎಸ್ ಮೂಲಕ ಬರುತ್ತದೆ. ನಿಮ್ಮ ವಾಹನ ಟೋಲ್ ಗೇಟ್ ದಾಟಿದ ತಕ್ಷಣ ನಿಮ್ಮ ಮೊಬೈಲ್ ನಂಬರ್ ಗೆ ಎಸ್ಎಂಎಸ್ ಮೂಲಕ ಸಂಗ್ರಹಣೆಯಾದ ಟೋಲ್ ಮಾಹಿತಿ ಸಿಗುತ್ತದೆ.

4.  ಇಂಧನ ಉಳಿತಾಯವಾಗುತ್ತದೆ : ಟೋಲ್ ನಲ್ಲಿ ಸಂಗ್ರಹಣೆ ಮಾಡಲಾಗುವ ಟೋಲ್ ವೆಚ್ಚ ಆನ್ಲೈನ್ ಮೂಲಕ ಸಂಗ್ರಹಣೆಯಾಗುವುದರಿಂದ, ನಿಮ್ಮ ಸಮಯ ಮತ್ತು ಇಂಧನ ಉಳಿಯುತ್ತದೆ.

5. ಮಾಸಿಕ ಪ್ರಯಾಣದ ಪಾಸ್ : ಪ್ರತಿನಿತ್ಯ ಸಂಚರಿಸುವ ವಾಹನಗಳಿಗೆ ಮಾಸಿಕ ಪಾಸ್ ಸಹ ದೊರೆಯುತ್ತದೆ. ಇದರಿಂದ ತುಂಬಾನೇ ಅನುಕೂಲವಾಗಿದೆ. ಸಮಯ ತುಂಬಾನೇ ಉಳಿಯುತ್ತದೆ.

6. ಐದು ವರ್ಷ ಮಾನ್ಯತೆ ಹೊಂದಿರುತ್ತದೆ : ನಿಮ್ಮ ಪಾಸ್ಟ್ಯಾಗ್  ಐದು ವರ್ಷದ ಅವಧಿಯವರೆಗೆ ಚಾಲ್ತಿಯಲ್ಲಿರುತ್ತದೆ.

FASTag : ಫಾಸ್ಟಗ್ ಪಡೆಯಲು ಬೇಕಾಗುವ ದಾಖಲಾತಿಗಳು.

FASTag : ಫಾಸ್ಟಗ್

FASTag : ಫಾಸ್ಟಗ್ ಪಡೆಯಲು ಬೇಕಾಗುವ ದಾಖಲಾತಿಗಳನ್ನು ನೋಡೋಣ.

  •  ವಾಹನ ನೋಂದಣಿ ಪತ್ರ : RC Card.
  •  ಆಧಾರ್ ಕಾರ್ಡ್: Aadhaar Card.
  •  ಚುನಾವಣಾ ಗುರುತಿನ ಚೀಟಿ : Voter ID.
  •  ಪಾಸ್ ಪೋರ್ಟ್ : Passport.
  •  ಪಾನ್ ಕಾರ್ಡ್ : Pancard.
  •  ಪಬ್ಲಿಕ್ ಲಿಮಿಟೆಡ್/ ಪ್ರೈವೇಟ್ ಲಿಮಿಟೆಡ್ / ಏಕೈಕ ಮಾಲೀಕತ್ವ ಪತ್ರ.
  •  ಸಂಸ್ಥೆಯ ನೊಂದಣಿ ಪತ್ರ : Registration certitificate.
  •  ಸಂಸ್ಥೆ ಹೆಸರಿನ ಪಾನ್ ಕಾರ್ಡ್.
  •  ಸಂಸ್ಥೆಯ  ನಿರ್ದೇಶಕರ ಹೆಸರು ಮತ್ತು ಪಟ್ಟಿ.

ಹೀಗೆ ಫಾಸ್ಟ್ ಟ್ಯಾಗ್  ರಿಜಿಸ್ಟ್ರೇಷನ್ ಮಾಡಿಸಲು ವಾಹನ ಮಾಲೀಕರು ಮತ್ತು ಕಾರ್ಪೊರೇಟರ್ ಸಂಸ್ಥೆಯವರು ಈ ದಾಖಲಾತಿಗಳನ್ನು ಹೊಂದಿರಬೇಕು.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

FAQs ಪ್ರಶ್ನೆಗಳು.

1. Fastag ಎಂದರೇನು?.

ಫಾಸ್ಟ್ ಟ್ಯಾಗ್ ಎಂದರೆ ಇದು ಒಂದು ಎಲೆಕ್ಟ್ರಾನಿಕ್ ವ್ಯವಸ್ಥೆ. ಅಂದರೆ ಆನ್ಲೈನ್ ಮೂಲಕ ಟೋಲ್ ಸಂಗ್ರಹಣೆ ಮಾಡುವ ವ್ಯವಸ್ಥೆ.

2. ಫಾಸ್ಟ್ ಟ್ಯಾಗ್ ಹೊಂದುವುದು ಕಡ್ಡಾಯವೇ?.

ಹೌದು, ಭಾರತ ಸರ್ಕಾರವು ಕಡ್ಡಾಯವಾಗಿ ಇದನ್ನು ಜಾರಿಗೊಳಿಸಿರುವುದರಿಂದ ಫಾಸ್ಟ್ ಟ್ಯಾಗ್ ಹೊಂದುವುದು ವಾಹನ ಮಾಲೀಕರಿಗೆ ಕಡ್ಡಾಯವಾಗಿದೆ.

3. ಫಾಸ್ಟ್ ಟ್ಯಾಗ್ ಬಳಸುವುದರಿಂದ ಆಗುವ ಪ್ರಯೋಜನಗಳು?.

ಪಾಸ್ ಟ್ಯಾಗ್ ಬಳಸುವುದರಿಂದ ಸಮಯ ಉಳಿಯುತ್ತದೆ. ಟ್ರಾಫಿಕ್. ಜಾಮ್ ಕಡಿಮೆಯಾಗುತ್ತದೆ. ಇದರಿಂದ ತುಂಬಾ ಸಮಯ ಕಾಯುವ ಅವಶ್ಯಕತೆ ಇರುವುದಿಲ್ಲ. ಆನಂದನವು ಸಹ ಉಳಿಯುತ್ತದೆ.

4. ಫಾಸ್ಟ್ ಟ್ಯಾಗ್ ಮಾಡಿಸಲು RC Card ಕಡ್ಡಾಯವೇ?.

ವಾಹನ ಮಾಲೀಕರಿಗೆ ಫಾಸ್ಟ್ ಟ್ಯಾಗ್ ಮಾಡಿಸಲು ವಾಹನದ ನೊಂದಣಿ ಪತ್ರ ಕಡ್ಡಾಯವಾಗಿ ಬೇಕು.

5. ಫಾಸ್ಟ್ ಟ್ಯಾಗ್ ಅನ್ನು ಏಕೆ ಬಳಸಬೇಕು?.

ಫಾಸ್ಟ್ ಟ್ಯಾಗ್  ಅನ್ನು ನಗದು ರಹಿತ ವ್ಯವಹಾರಕ್ಕಾಗಿ ಬಳಸಬೇಕು. ಅಂದರೆ ಆನ್ಲೈನ್ ಮೂಲಕ ನಿಮ್ಮ ಟೋಲ್ ಸಂಗ್ರಹಣೆ ಮಾಡುವ ವ್ಯವಸ್ಥೆ ಇದಾಗಿರುವುದರಿಂದ ನಿಮ್ಮ ಸಮಯ ಉಳಿಯುತ್ತದೆ. ಮತ್ತು ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿಕೊಳ್ಳುವ ಅವಶ್ಯಕತೆ ಇರುವುದಿಲ್ಲ.

ಹೀಗೆ ಆನ್ಲೈನ್ ಮೂಲಕ  ಟೋಲ್ ತೆರಿಗೆ ಸಂಗ್ರಹಣೆ ಮಾಡುವ ವ್ಯವಸ್ಥೆ ಜಾರಿಗೆ ತಂದಿರುವುದರಿಂದ ವಾಹನ ಸವಾರರಿಗೆ ಸಮಯ ಮತ್ತು ಟ್ರಾಫಿಕ್ ಜಾಮ್ ಸಮಸ್ಯೆ ಇಂದ ಮುಕ್ತಿ ದೊರಕಿದಂತಾಗಿದೆ.

 

Leave a Reply

Your email address will not be published. Required fields are marked *