Tharak7star

Sukanya Samruddhi yojane : ಸುಕನ್ಯಾ ಸಮೃದ್ಧಿ ಯೋಜನೆ ಸಂಪೂರ್ಣ ಮಾಹಿತಿ.

Sukanya Samruddhi yojane

ESukanya Samruddhi yojane : ಸುಕನ್ಯಾ ಸಮೃದ್ಧಿ ಯೋಜನೆ ಸಂಪೂರ್ಣ ಮಾಹಿತಿ. ಈ ಲೇಖನದಲ್ಲಿ ನಾವು ಸುಕನ್ಯಾ ಸಮೃದ್ಧಿ ಯೋಜನೆ ಯ ಬಗ್ಗೆ, ಅರ್ಜಿ ಸಲ್ಲಿಕೆ, ಅರ್ಹತೆ,ಪ್ರಯೋಜನ ಮತ್ತು ಬೇಕಾಗುವ ದಾಖಲಾತಿಗಳ ಬಗ್ಗೆ ತಿಳಿಯೋಣ. ಈ ಯೋಜನೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಒಂದು ಮಹತ್ವದ ಯೋಜನೆಯಾಗಿದೆ. ಹೆಣ್ಣು ಮಗುವಿಗೆ ಒಂದು ಆರ್ಥಿಕ ಸ್ವಾವಲಂಬನೆ ನೀಡುವಂತಹ ಯೋಜನೆಯಾಗಿದೆ.

ಈ ಯೋಜನೆಯನ್ನು ಮಾನ್ಯ ಪ್ರಧಾನಮಂತ್ರಿಯವರು 22ನೇ ಜನವರಿ 2015 ರಂದು ಪ್ರಾರಂಭಿಸಲಾಯಿತು. ಯೋಜನೆಯ ಪ್ರಮುಖ ಉದ್ದೇಶ ಒಂದು ಹೆಣ್ಣು ಮಗುವಿನ ಶಿಕ್ಷಣ ಮತ್ತು ಮದುವೆಯ ವೆಚ್ಚವನ್ನು ಭರಿಸುವುದಾಗಿದೆ. ಹೆಣ್ಣು ಮಗುವಿಗೆ ಆರ್ಥಿಕ ಸಹಾಯ ನೀಡುವುದಾಗಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಅಂಚೆ ಕಚೇರಿಯ ಮೂಲಕ, ರಾಷ್ಟ್ರೀಕೃತ ಬ್ಯಾಂಕ್ ಗಳ ಮೂಲಕ ಅಥವಾ ಖಾಸಗಿ ವಲಯದ ಬ್ಯಾಂಕ್ ಗಳ ಮೂಲಕ ಅರ್ಜಿ ಸಲ್ಲಿಸಬಹುದು.

SSY ಯೋಜನೆಯ ಖಾತೆ ತೆರೆಯಲು ಹೆಣ್ಣು ಮಗುವಿನ ವಯಸ್ಸು 10 ವರ್ಷಕ್ಕಿಂತ ಕಡಿಮೆ ಇರಬೇಕು. ಕನಿಷ್ಠ ಹೂಡಿಕೆ ರೂ.250ರಿಂದ 1.50 ಲಕ್ಷದವರೆಗೆ ಹೂಡಿಕೆ ಮಾಡಬಹುದು. ಒಂದು ಕುಟುಂಬವು ಕೇವಲ ಎರಡು SSY ಖಾತೆಯನ್ನು ತೆರೆಯಬಹುದು. ಈ ಯೋಜನೆಯ ಮೆಚುರಿಟಿ ಅವಧಿಯೋ 21 ವರ್ಷಗಳು.

Sukanya Samruddhi yojane : ಸುಕನ್ಯಾ ಸಮೃದ್ಧಿ ಯೋಜನೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಎಲ್ಲಿ?.

Sukanya Samruddhi yojane : ಸುಕನ್ಯಾ ಸಮೃದ್ಧಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಎಲ್ಲಿ ಎಂಬುದನ್ನು ತಿಳಿಯೋಣ.ಈ SSY ಖಾತೆಯನ್ನು ಯಾವುದೇ ಬ್ಯಾಂಕ್ ಗಳಲ್ಲಿ ಮತ್ತು ಭಾರತೀಯ ಅಂಚೆ ಕಚೇರಿಗಳಲ್ಲಿ ತೆರೆಯಬಹುದು.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಹೆಣ್ಣು ಮಗುವಿನ ಪೋಷಕರು ಮೊದಲು ನೀವು ಖಾತೆ ತೆರೆಯುವ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ಗೆ ಹೋಗಬೇಕು.

ಅರ್ಜಿ ಸಲ್ಲಿಸುವ ಮೊದಲು ಬೇಕಾಗಿರುವ ದಾಖಲೆಗಳ ಎಲ್ಲಾ  ಮಾಹಿತಿಗಳನ್ನು ತಿಳಿದುಕೊಳ್ಳಬೇಕು. ಬೇಕಾಗಿರುವ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಅಂಚೆ ಕಚೇರಿ ಅಥವಾ ಬ್ಯಾಂಕ್ ಗಳಿಗೆ ಹೋಗಿ ಅರ್ಜಿ ಸಲ್ಲಿಸಬಹುದು.

ಅಗತ್ಯ ಮಾಹಿತಿಗಳೊಂದಿಗೆ ಅರ್ಜಿಯನ್ನು ಭರ್ತಿ ಮಾಡಿ. ಎಲ್ಲಾ ಬೇಕಾಗಿರುವ ಮಾಹಿತಿ ದಾಖಲೆಗಳನ್ನು ಲಗತ್ತಿಸಿ. ಮೊದಲ ಠೇವಣಿಯನ್ನು ನಗದು (ಕ್ಯಾಶ್) ಅಥವಾ ಚೆಕ್ ಮೂಲಕ ನೀಡಬಹುದು.

ನಂತರ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ನವರು ನೀವು ಸಲ್ಲಿಸಿದ ಅರ್ಜಿ ಮತ್ತು ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಖಾತೆಯನ್ನು ತೆರೆದು, ಖಾತೆಗೆ ಸಂಬಂಧಿಸಿದ ಎಲ್ಲಾ ವಿವರಗಳ ಪಾಸ್ ಬುಕ್ ಗಳನ್ನು ನಿಮಗೆ ನೀಡಲಾಗುವುದು.

ಈ ಖಾತೆಯನ್ನು ಹೆಣ್ಣು ಮಗುವಿಗೆ 21 ವರ್ಷ ಆದ ನಂತರ ಮೆಚುರಿಟಿಯಾಗಿ ಹಣವನ್ನು ಪಡೆಯಬಹುದು. ಇದು ಒಂದು ಮಹತ್ವದ ಯೋಜನೆಯಾಗಿದ್ದು, ಭವಿಷ್ಯದಲ್ಲಿ  ಹೆಣ್ಣು ಮಗುವಿನ ಶಿಕ್ಷಣ ಮತ್ತು ಮದುವೆಗೆ ಒಂದು ಹಣಕಾಸಿನ ನೆರವು ನೀಡುವಲ್ಲೂ ಸಹಕಾರಿಯಾಗಲಿದೆ.

Sukanya Samruddhi yojane : ಸುಕನ್ಯಾ ಸಮೃದ್ಧಿ ಯೋಜನೆಗೆ ಬೇಕಾಗಿರುವ ದಾಖಲೆಗಳು.

Sukanya Samruddhi yojane : ಸುಕನ್ಯಾ ಸಮೃದ್ಧಿ ಯೋಜನೆಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ದಾಖಲೆಗಳು ಬೇಕಾಗುತ್ತವೆ.

1. ಹೆಣ್ಣು ಮಗುವಿನ ಜನನ ಪ್ರಮಾಣ ಪತ್ರ : SSY ಯೋಜನೆಗೆ ಅರ್ಜಿ ಸಲ್ಲಿಸಲು ಕಡ್ಡಾಯವಾಗಿ ಹೆಣ್ಣು ಮಗುವಿನ ಜನನ ಪ್ರಮಾಣ ಪತ್ರ ಇರಬೇಕು.

2. ಹೆಣ್ಣು ಮಗುವಿನ ಪೋಷಕರ ಐಡಿ ಕಾರ್ಡ್ : ಹೆಣ್ಣು ಮಗುವಿನ ಪೋಷಕರ ಯಾವುದೇ ರೀತಿಯ ಐಡಿ ಕಾರ್ಡ್ ಅಂದರೆ ಆಧಾರ್ ಕಾರ್ಡ್,  ಚುನಾವಣೆ ಗುರುತಿನ ಚೀಟಿ, ರೇಷನ್ ಕಾರ್ಡ್, ವಾಹನ ಪರವಾನಿಗೆ ಪತ್ರ ಏಕೆ ಯಾವುದಾದರೂ ಒಂದು ದಾಖಲೆಗಳು.

3.KYC ಪುರಾವೆಗಳು: ಹೆಣ್ಣು ಮಗು ಅಥವಾ ಪೋಷಕರು ವಾಸ ಮಾಡುವಂತ ವಿಳಾಸ ಕ್ಕೆ ಸಂಬಂಧಿಸಿದ ಯಾವುದೇ ದಾಖಲೆ.

4. ಬ್ಯಾಂಕ್ ಅಥವಾ ಅಂಚೆ ಕಚೇರಿ ಕೇಳಿರುವ ಯಾವುದಾದರೂ ಇತರೆ ದಾಖಲೆಗಳು ಇದ್ದರೆ ಅದನ್ನು ಸಲ್ಲಿಸಬೇಕು.

ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ 

Sukanya Samruddhi yojane : ಸುಕನ್ಯಾ ಸಮೃದ್ಧಿ ಯೋಜನೆಗೆ ಈ ಅರ್ಹತೆಗಳು ಬೇಕು.

Sukanya Samruddhi yojane : ಸುಕನ್ಯಾ ಸಮೃದ್ಧಿ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವವರು ಈ ಕೆಳಗಿನ ಅರ್ಹತೆಗಳನ್ನು  ಹೊಂದಿರಬೇಕು.

  •  ಹೆಣ್ಣು ಮಗುವಿನ ವಯಸ್ಸು 10 ವರ್ಷ ದಾಟಿರಬಾರದು : ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಹೆಣ್ಣು ಮಗುವಿನ ವಯಸ್ಸು 10 ವರ್ಷಕ್ಕಿಂತ ಕಡಿಮೆ ಇರಬೇಕು.
  •  ಒಂದು ಹೆಣ್ಣು ಮಗುವಿನ ಹೆಸರಿನಲ್ಲಿ ಒಂದೇ ಖಾತೆ ತೆರೆಯಬಹುದು.
  •  ಒಂದು ಕುಟುಂಬಕ್ಕೆ ಎರಡು SSY ಖಾತೆಗಳು ಮಾತ್ರ ತೆರೆಯಬಹುದು : ಒಂದು ಕುಟುಂಬದಲ್ಲಿ ಎರಡಕ್ಕಿಂತ ಹೆಚ್ಚು ಹೆಣ್ಣು ಮಗು ಇದ್ದರೂ ಸಹ ಒಂದು ಕುಟುಂಬಕ್ಕೆ ಎರಡು ಹೆಣ್ಣು ಮಕ್ಕಳ ಹೆಸರಿನಲ್ಲಿ ಮಾತ್ರ SSY ಖಾತೆಯನ್ನು ತೆರೆಯಬಹುದು.
Sukanya Samruddhi yojane : ಸುಕನ್ಯಾ ಸಮೃದ್ಧಿ ಯೋಜನೆಯ ಪ್ರಯೋಜನಗಳು.

Sukanya Samruddhi yojane

ಈ ಸುಕನ್ಯಾ ಸಮೃದ್ಧಿ ಯೋಜನೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಒಂದು ಮಹತ್ವದ ಯೋಜನೆಯಾಗಿದ್ದು. ಒಂದು ಹೆಣ್ಣು ಮಗುವಿನ ಉತ್ನತ ಶಿಕ್ಷಣ ಮತ್ತು ಮದುವೆಯ ವೆಚ್ಚ ಭರಿಸಲು ಯೋಜನೆಯು ಸಹಾಯವಾಗಿದೆ.

1. ಈ ಯೋಜನೆಯ ಕನಿಷ್ಠ ಹೂಡಿಕೆ 250 ರೂಪಾಯಿ.

2. ಗರಿಷ್ಠ ಹೂಡಿಕೆ ಒಂದುವರೆ ಲಕ್ಷ ರೂಪಾಯಿ.

3. ಮೆಚುರಿಟಿ ಅವಧಿಯೋ 21 ವರ್ಷಗಳು.

4. SSY ಖಾತೆ ತೆರೆಯುವುದರಿಂದ ತೆರಿಗೆ ವಿನಾಯಿತಿ ಪಡೆಯಬಹುದು.

5. ಸಣ್ಣ ಹೂಡಿಕೆ ಮಾಡಿ ಅತ್ಯಧಿಕ ಬಡ್ಡಿ ದರವನ್ನು ಪಡೆಯಬಹುದು.

6. ಈ ಖಾತೆಯನ್ನು ಸುಲಭವಾಗಿ, ಒಂದು ಬ್ಯಾಂಕಿಂದ ಇನ್ನೊಂದು ಬ್ಯಾಂಕಿಗೆ ಅಥವಾ ಒಂದು ಅಂಚೆ ಕಚೇರಿಯಿಂದ ಇನ್ನೊಂದು ಅಂಚೆ ಕಚೇರಿಗೆ ವರ್ಗಾಯಿಸಬಹುದು.

7. ಮೆಚುರಿಟಿ ಅವಧಿ ಮುಗಿದ ಮೇಲೆ ಹೆಣ್ಣು ಮಗು ಮದುವೆಯಾಗದಿದ್ದರೆ 50 ಪರ್ಸೆಂಟ್ ಹಣವನ್ನು ಪಡೆದುಕೊಳ್ಳಬಹುದು.

ಹೀಗೆ ಈ ಸುಕನ್ಯಾ ಸಮೃದ್ಧಿ ಯೋಜನೆ ತುಂಬಾ ಸಹಕಾರಿಯದ ಯೋಜನೆಯಾಗಿದ್ದು, ಒಂದು ಕುಟುಂಬದಲ್ಲಿ ಅನೇಕ ಜನ ಹೆಣ್ಣು ಮಕ್ಕಳು ಜನಿಸಿದರೆ ಕುಟುಂಬವು ಅವರ ಜೀವನ ನಿರ್ವಹಣೆಗೆ ತುಂಬಾ ಶ್ರಮವನ್ನು ಪಡಬೇಕಾಗಿತ್ತು, ಆದರೆ ಈ ಯೋಚನೆಯು ಒಂದು ಹೆಣ್ಣು ಮಗುವಿನ ಮುಂದಿನ ಉನ್ನತ ಶಿಕ್ಷಣ ಮತ್ತು ಮದುವೆಯ ವೆಚ್ಚಪಡಿಸಲು ತುಂಬಾ ಸಹಾಯವಾಗಲಿದೆ.

ಯೋಜನೆ ಅಡಿಯಲ್ಲಿ ಖಾತೆ ತೆರೆದಿರುವ ಹೆಣ್ಣು ಮಗುವಿಗೆ ಶೇಕಡ 8.0 ಬಡ್ಡಿ ನೀಡಲಾಗುವುದು. ಠೇವಣಿ ಮಾಡಿದ ಸಂಪೂರ್ಣ ಅಸಲು ಮೊತ್ತ ಮತ್ತು ಈ ಖಾತೆಯ ಅವಧಿ ಮುಗಿಯುವವರೆಗೆ ಗಳಿಸಿರುವ ಬಡ್ಡಿ ಹಾಗೂ ಮೆಚುರಿಟಿಯ ಪ್ರಯೋಜನಗಳು ತೆರಿಗೆ ವಿನಾಯಿತಿಯನ್ನು ಹೊಂದಿವೆ.

ಈ ಯೋಜನೆಯ ಅಡಿಯಲ್ಲಿ ಸುಮಾರು 2.75 ಕೋಟಿ ಖಾತೆಗಳನ್ನು ತೆರೆಯಲಾಗಿದೆ. ಇದರಿಂದ ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಉನ್ನತ ಶಿಕ್ಷಣಕ್ಕೆ ಸಹಾಯವಾಗಿದೆ. ಶಿಕ್ಷಣ ಮುಗಿದ ನಂತರ  ಹೆಣ್ಣು ಮಗುವಿನ ಮದುವೆ ಖರ್ಚು ಸಹ ಬರಿಸಲು ಅತ್ಯಂತ ಸಹಕಾರಿಯಾಗಿದೆ.

FAQs ಪದೇ ಪದೇ ಕೇಳಲಾದ ಪ್ರಶ್ನೆಗಳು.

1. SSY ಖಾತೆಯನ್ನು ಎಲ್ಲಿ ತೆರೆಯಬಹುದು?.

SSY ಖಾತೆಯನ್ನು ಭಾರತದ ಯಾವುದೇ ಬ್ಯಾಂಕ್ ಮತ್ತು ಅಂಚೆ ಕಚೇರಿಗಳಲ್ಲಿ ತೆರೆಯಬಹುದು.

2. SSY ಖಾತೆ ತೆರೆಯಲು ಹೆಣ್ಣು ಮಗುವಿನ ಗರಿಷ್ಠ ವಯಸ್ಸು ಎಷ್ಟು?.

SSY ಅದೇ ತೆರೆಯಲು ಒಂದು ಹೆಣ್ಣು ಮಗುವಿನ ಗರಿಷ್ಠ ವಯಸ್ಸು 10 ವರ್ಷ ದಾಟಿರಬಾರದು. 10  ವರ್ಷಕ್ಕಿಂತ ಕಡಿಮೆ ಇರುವ ಹೆಣ್ಣು ಮಗು, ಖಾತೆಯನ್ನು ತೆರೆಯಬಹುದು.

3. SSY ಕತೆಯ ಮೆಚುರಿಟಿ ಅವಧಿ ಎಷ್ಟು?.

SSY ಖಾತೆಯ ಮೆಚುರಿಟಿ ಅವಧಿಯೋ 21 ವರ್ಷಗಳು.

5. ಸುಕನ್ಯಾ ಸಮೃದ್ಧಿ ಯೋಜನೆ  ಭಾರತದ ಎಲ್ಲಾ ಕಡೆಗಳಲ್ಲೂ ಲಭ್ಯವಿದೆಯೇ?.

SSY ಯೋಚನೆ ಭಾರತದ ಎಲ್ಲಾ ಕಡೆಗಳಲ್ಲೂ ಲಭ್ಯವಿದೆ.

6. SSY ಖಾತೆ ತೆರೆಯಲು ಹೆಣ್ಣು ಮಗುವಿನ ಜನನ ಪತ್ರ ಕಡ್ಡಾಯವೇ?.

ಹೌದು SSY ಖಾತೆಯನ್ನು ತೆರೆಯಲು ಹೆಣ್ಣು ಮಗುವಿನ ಜನನ ಪ್ರಮಾಣ ಪತ್ರ ಕಡ್ಡಾಯವಾಗಿ ಬೇಕು. ಇದರ ಆಧಾರದ ಮೇಲೆ ಹೆಣ್ಣು ಮಗುವಿನ ವಯಸ್ಸನ್ನು ನಿರ್ಧಾರ ಮಾಡಲಾಗುವುದು.

ಈ SSY ಯೋಚನೆಯು ಹೆಣ್ಣು ಮಕ್ಕಳ ಪಾಲಿಗೆ ಆಶಾದಾಯಕ ವಾದಂತಹ ಯೋಜನೆಯಾಗಿದೆ.

Leave a Reply

Your email address will not be published. Required fields are marked *