Tharak7star

Daibetes : ಮಧುಮೇಹ ಎಂದರೇನು?. ಲಕ್ಷಣಗಳು, ಕಾರಣಗಳು ಮತ್ತು ಪರಿಹಾರ.

Daibetes

Daibetes : ಮಧುಮೇಹ ಎಂದರೇನು?. ಲಕ್ಷಣಗಳು, ಕಾರಣಗಳು ಮತ್ತು ಪರಿಹಾರಗಳ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ. ಈಗಿನ ಕಾಲದಲ್ಲಿ ಬಹುತೇಕ ಜನರನ್ನು ಕಾಡುವ ಒಂದು ಸಮಸ್ಯೆ ಎಂದರೆ ಅದು ಮಧುಮೇಹ. ಈಗಿನ ಕಾಲದ ಆಹಾರ ಪದ್ಧತಿ ಇದಕ್ಕೆ ಕಾರಣ. ಆಹಾರ ಪದ್ಧತಿಯಲ್ಲಿ ಸಮತೋಲನ ಇಲ್ಲದೆ ಇರುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶವು ಅಧಿಕಗೊಂಡು ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಬರುತ್ತದೆ.

ಮಧುಮೇಹ ಒಂದು ಗಂಭೀರ ಕಾಯಿಲೆಯಾಗಿದ್ದು ನಿಯಂತ್ರಣ ಮಾಡಿಕೊಳ್ಳದಿದ್ದರೆ ಆರೋಗ್ಯಕ್ಕೆ ತುಂಬಾ ತೊಂದರೆ ನೀಡುತ್ತದೆ. ದೇಹದ ಅಸ್ವಸ್ಥತೆ ಸಮಸ್ಯೆಗೆ ಕಾರಣವಾಗುತ್ತದೆ. ರಕ್ತದಲ್ಲಿ ನಾ ಸಕ್ಕರೆ ಅಂಶ ಅಧಿಕಗೊಂಡಾಗ ಈ ರೋಗ ಸಂಭವಿಸುತ್ತದೆ. ಇದಕ್ಕೆ ಮುಖ್ಯ ಕಾರಣ ನಮ್ಮ ಆಹಾರ ಪದ್ಧತಿ. ಸರಿಯಾಗಿದೆ ಬೇಕಾಗುವಂತಹ ಪೌಷ್ಟಿಕಾಂಶವನ್ನು ತೆಗೆದುಕೊಳ್ಳದೆ ಇರುವುದರಿಂದ ಅನೇಕ ರೋಗಗಳು ಸಂಭವಿಸುತ್ತದೆ.

ಮಧುಮೇಹ ಇರುವಂತಹ ಜನರಲ್ಲಿ ದೇಹದ ಶಕ್ತಿ ಕಡಿಮೆಯಾಗಿ ದೇಹ ಸ್ಪೂರ್ತಿದಾಯಕ ಮತ್ತು ಆಕ್ಟಿವ್ ಆಗಿರುವುದಿಲ್ಲ. ಈ ಕಾಯಿಲೆ ಇರುವಂತಹ ಜನರಲ್ಲಿ ತುಂಬಾ ಸುಸ್ತು, ಆಯಾಸ ಮತ್ತು ಯಾವುದೇ ರೀತಿಯ ಗಾಯಗಳಾದಲ್ಲಿ ಬಹುಬೇಗ ಗುಣಪಡಿಸಲು ಸಾಧ್ಯವಾಗುವುದಿಲ್ಲ.

Daibetes : ಮಧುಮೇಹ ಎಂದರೇನು?.

Daibetes : ಮಧುಮೇಹ ಎಂದರೆ ಮಾನವನ ದೇಹದಲ್ಲಿ, ರಕ್ತದ ಪ್ರಮಾಣದಲ್ಲಿ ಅಧಿಕವಾದ ಅಂತಹ ಸಕ್ಕರೆ ಪ್ರಮಾಣ ಇರುವುದು ಅಂದರೆ ಮಾನವನ ರಕ್ತದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಗ್ಲುಕೋಸ್ ( ಸಕ್ಕರೆ ಅಂಶ ) ಇರುವುದು ಇದರ ಪ್ರಮುಖ ಲಕ್ಷಣವಾಗಿದೆ.

ಈಗಿನ ಕಾಲದಲ್ಲಿ ನಾವು ಸೇವಿಸುವಂತಹ ಆಹಾರವು ಸಕ್ಕರೆ ಅಂಶ ಮಿಶ್ರಿತವಾಗಿರುತ್ತದೆ. ಸರಿಯಾದ ಪ್ರಮಾಣದಲ್ಲಿ ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಮಾಡಿದೆ ಇರುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶ ಅಧಿಕಗೊಂಡು ಮಧುಮೇಹ ಬರುತ್ತದೆ. ನಮ್ಮ ದೇಹವು  ಇನ್ಸುಲಿನ್ ಎಂಬ ಹಾರ್ಮೋನನ್ನು ತಯಾರಿಸಬೇಕಾಗುತ್ತದೆ. ಕೆಲವೊಮ್ಮೆ ಇದು ಸಾಧ್ಯವಾಗುವುದಿಲ್ಲ.

ದೇಹದಲ್ಲಿ ಇನ್ಸುಲಿನ್ ಉತ್ಪಾದನೆ ಕಡಿಮೆಯಾಗುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶ ಹಾಗೆಯೇ ಉಳಿಯುತ್ತದೆ. ಸಕ್ಕರೆ ಅಂಶ ಹಾಗೆ ಶೇಖರಣೆಗೊಂಡು ಮುಂದಿನ ದಿನದಲ್ಲಿ ಆರೋಗ್ಯ ಸಮಸ್ಯೆಯನ್ನು ಉಂಟುಮಾಡುತ್ತದೆ. ಹಾಗಾಗಿಯೇ ಅನೇಕ ಜನರಲ್ಲಿ ಸಕ್ಕರೆ ಅಂಶ ಅಧಿಕಗೊಂಡು ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಬರುತ್ತದೆ.

Daibetes : ಮಧುಮೇಹದ ವಿಧಗಳು.

Daibetes

Daibetes : ಮಧುಮೇಹ ವನ್ನು ಎರಡು ವಿಧಗಳಲ್ಲಿ ಕಾಣಬಹುದು ಟೈಪ್ -1 ಮತ್ತು ಟೈಪ್ -2 ಮಧುಮೇಹ.

1. ಟೈಪ್ -1 ಮಧುಮೇಹ : ಟೈಪ್ ಒನ್ ಮಧುಮೇಹದಿಂದ ಬಳಲುತ್ತಿರುವ ಜನರಲ್ಲಿ, ದೇಹವು ಸಾಕಷ್ಟು ಪ್ರಮಾಣದಲ್ಲಿ ಇನ್ಸುಲಿನ್ ಅನ್ನು ಉತ್ಪಾದನೆ ಮಾಡುವುದಿಲ್ಲ. ಇದು ಮಕ್ಕಳಲ್ಲಿ ಮತ್ತು ಯುವ ಜನರಲ್ಲಿ ಸಾಮಾನ್ಯವಾಗಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ. ಆದರೂ ಬೇರೆ ವಯಸ್ಕರಲ್ಲಿಯೂ ಸಹ ಕಾಣಿಸಿಕೊಳ್ಳಬಹುದು. ಈ ಲಕ್ಷಣ ಇರುವಂತಹ ಜನರು ಸಾಮಾನ್ಯವಾಗಿ ಇನ್ಸುಲಿನ್ ಅನ್ನು ತೆಗೆದುಕೊಳ್ಳಬೇಕಾಗುತ್ತದೆ.

2. ಟೈಪ್ -2 ಮಧುಮೇಹ: ಮಧುಮೇಹದ ಎಲ್ಲಾ ಪ್ರಕಾರಗಳಲ್ಲಿ 90 ರಿಂದ 95% ಟೈಪ್-2 ಮಧುಮೇಹ ಕಂಡುಬರುತ್ತದೆ.. ದೇಹವು ಸಾಕಷ್ಟು ಪ್ರಮಾಣದಲ್ಲಿ ಇನ್ಸುಲಿನ್ ಹಾರ್ಮೋನನ್ನು ಉತ್ಪಾದನೆ ಮಾಡಲು ಸಾಧ್ಯವಾಗದೇ ಇದ್ದಾಗ ತದಲ್ಲಿ ಸಕ್ಕರೆ ಅಂಶ ಅಧಿಕಗೊಂಡಾಗ ಇದು ಸಂಭವಿಸುತ್ತದೆ. ಮುಖ್ಯವಾಗಿ ಸರಿಯಾದ ಕ್ರಮದಲ್ಲಿ ಆಹಾರ ಪದ್ಧತಿಯ ಆಹಾರ ಸೇವನೆ ಮಾಡದೇ ಇರುವುದರಿಂದ ಅಧಿಕ ಪ್ರಮಾಣದಲ್ಲಿ ಈ ಕಾಯಿಲೆ ಬರುತ್ತದೆ.

ಅಪೌಷ್ಟಿಕ ಆಹಾರ ಪದ್ಧತಿ, ಧೂಮಪಾನ, ಮದ್ಯಪಾನ ವಂಶಪಾರಂಪರಿಕವಾಗಿ ಸಕ್ಕರೆ ಕಾಯಿಲೆ ಅಥವಾ ಮಧುಮೇಹ ಸಂಭವಿಸಬಹುದು.

Daibetes : ಮಧುಮೇಹದ ಲಕ್ಷಣಗಳು.

Daibetes: ಮಧುಮೇಹದ ಲಕ್ಷಣಗಳನ್ನು ತಿಳಿಯೋಣ.

  •  ಅತಿಯಾದ ಮೂತ್ರ ವಿಸರ್ಜನೆ : ಇದರ ಪ್ರಮುಖ ಲಕ್ಷಣವೆಂದರೆ ಅತಿಯಾದಂತಹ ಮೂತ್ರ ವಿಸರ್ಜನೆ. ಪದೇ ಪದೇ ಮೂತ್ರವೇಸರ್ಜನೆ ಮಾಡುವುದು.
  •  ಅತಿಯಾದ ಬಾಯಾರಿಕೆ : ಅತಿಯಾದ ಬಾಯಾರಿಕೆ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುವುದು. ಪದೇ ಪದೇ ಬಾಯಾರಿಕೆ ಯಾಗುವುದು.
  •  ಅತಿಯಾದ ಹಸಿವು : ಪದೇ ಪದೇ ಹಸಿವು ಆಗುವುದು.
  •  ಅತಿಯಾದ ಸುಸ್ತು, ಆಯಾಸ : ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗಿ  ಸುಸ್ತು ಮತ್ತು ಆಯಾಸ ಉಂಟಾಗುವುದು.
  •  ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗುವುದು,
  •  ದೇಹದಲ್ಲಿ ಉತ್ಪಾದನೆ ಆಗುವ ಶಕ್ತಿ ಕಡಿಮೆಯಾಗಿ ದೇಹವು ಅತಿಯಾದ ಸುಸ್ತು ಮತ್ತು ನಿದ್ರೆಗೆ ಜಾರುವುದು.
  •  ಒಣ ಚರ್ಮ : ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ಚರ್ಮವು ಅತಿಯಾಗಿ ಒಣಗುವುದು.
  •  ಫಂಗಲ್ ಇನ್ಫೆಕ್ಷನ್ : ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗಿ ಅನೇಕ ರೀತಿಯ ಫಂಗಲ್ ಇನ್ಫೆಕ್ಷನ್ ಉಂಟಾಗುವುದು.
  •  ಗಾಯಗಳು: ದೇಹದಲ್ಲಿ ಯಾವುದೇ ರೀತಿಯ ಗಾಯಗಳು ಆದಲ್ಲಿ ಬಹುಬೇಗ ಗುಣಪಡಿಸಲು ಸಾಧ್ಯವಾಗದೇ ಇರುವುದು.
  •  ಕೈ ಕಾಲುಗಳು ಮರಗಟ್ಟುವುದು : ಸ್ವಲ್ಪ ಸಮಯದಲ್ಲಿ ಕೈಕಾಲುಗಳು ಜಾಸ್ತಿಯಾಗಿ ಮರ ಕಟ್ಟುವುದು.
  •  ರಕ್ತ ಸಂಚಾರ ಸರಿಯಾಗಿ ಆಗದೆ ಇರುವುದು.

ಹೀಗೆ ದೇಹದಲ್ಲಿ ಉಂಟಾಗುವಂತಹ ಅತಿಯಾದಂತಹ ಸುಸ್ತು, ಆಯಾಸ,ಹಸಿವು, ಬಾಯಾರಿಕೆ, ಇತ್ಯಾದಿ ಅಂಶಗಳು ಇದರ ಪ್ರಮುಖ ಲಕ್ಷಣಗಳಾಗಿವೆ.

ಹೆಚ್ಚಿನ ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

Daibetes: ಮಧುಮೇಹಕ್ಕೆ ಕಾರಣಗಳು.

Daibetes

Daibetes: ಮಧುಮೇಹ ಬರಲು ಪ್ರಮುಖ ಕಾರಣಗಳನ್ನು ತಿಳಿದುಕೊಳ್ಳೋಣ.

1. ಇನ್ಸುಲಿನ್ ಕೊರತೆ : ನಮ್ಮ ದೇಹವು ದೇಹಕ್ಕೆ ಬೇಕಾಗುವಷ್ಟು ಇನ್ ಸುಲಿನ್ ಹಾರ್ಮೋನನ್ನು  ಉತ್ಪಾದನೆ ಮಾಡದೆ ಇರುವುದು ಮಧುಮೇಹ  ಬರಲು ಪ್ರಮುಖ ಕಾರಣವಾಗಿದೆ. ಇದು ರಕ್ತದಲ್ಲಿನ ಸಕ್ಕರೆ ಅಂಶ ಅಧಿಕಗೊಳ್ಳಲು ಕಾರಣವಾಗುತ್ತದೆ.

2. ಆಹಾರ ಪದ್ಧತಿ : ನಾವು ದಿನನಿತ್ಯ ಸೇವಿಸುವಂತಹ ಆಹಾರ ಪದ್ಧತಿಯು ಇದಕ್ಕೆ ಮುಖ್ಯ ಕಾರಣವಾಗಿದೆ. ನಾವು ಸೇವಿಸುವಂತಹ ಆಹಾರವು ಪೌಷ್ಟಿಕಾಂಶದ ಕೊರತೆಯಿಂದ ಕೂಡಿರುತ್ತದೆ. ಆಹಾರ ಸೇವನೆಯಿಂದ ದೇಹಕ್ಕೆ ಬೇಕಾಗುವ ಯಾವುದೇ ಪೌಷ್ಟಿಕಾಂಶ ಮತ್ತು ವಿಟಮಿನ್ ಗಳು ದೊರೆಕತೆ ಇರುವುದು ಇದಕ್ಕೆ ಮುಖ್ಯ ಕಾರಣವಾಗುತ್ತಿದೆ.

3. ಅತಿಯಾದಂತಹ ಮಧ್ಯಪಾನ ಧೂಮಪಾನ ಮಾಡುವುದು : ಅತಿಯಾದಂತಹ ಧೂಮಪಾನ ಮಧ್ಯಪಾನ ಮಾಡುವುದರಿಂದ ಮದುವೆಯ ಸಂಭವಿಸುವ ಸಾಧ್ಯತೆ ಹೆಚ್ಚಿನದಾಗಿರುತ್ತದೆ.

4. ಅತಿಯಾದ ಜಡತ್ವ : ಈಗಿನ ಕಾಲದಲ್ಲಿ ಮನುಷ್ಯರು ಯಾವುದೇ ರೀತಿಯ ಯೋಗ ಅಭ್ಯಾಸಗಳು ಮಾಡದೆ ಇರುವುದು. ಸುಮ್ಮನೆ ಟೈಮ್ ಪಾಸ್ ಮಾಡುವುದು. ಅತಿಯಾಗಿ ಮಲಗುವುದು.

5. ದೇಹವು ದಣಿಯದೆ ಇರುವುದು : ಪ್ರತಿದಿನ ಬೆಳಿಗ್ಗೆ ವಾಕಿಂಗ್ ಮಾಡುವುದರಿಂದ ದೇಹವು ದಣಿಯುತ್ತದೆ, ಆದರೆ ಅಧಿಕ ಸಂಖ್ಯೆಯ ಜನರು ವಾಕಿಂಗ್ ಮಾಡದೇ ಇರುವುದು ದೇಹದಿಂದ ಬೆವರು ಉತ್ಪಾದನೆ ಆಗದೆ ಇರುವುದು ಇದಕ್ಕೆ ಕಾರಣವಾಗಿದೆ.

6. ಅತಿಯಾದ ತೂಕ ಹೆಚ್ಚಿನ ಬೊಜ್ಜು : ಮಧುಮೇಹ ಬರಲು ಮುಖ್ಯ ಕಾರಣವೆಂದರೆ ಅತಿಯಾದ ತೂಕ. ಕೊಲೆಸ್ಟ್ರಾಲ್ ಬೊಜ್ಜು ಹೆಚ್ಚಿನದಾಗಿರುವುದರಿಂದ, ದೇಹವು ತುಂಬಾ ದಪ್ಪವಾಗಿರುವುದು.

Daibetes : ಮಧುಮೇಹಕ್ಕೆ ಪರಿಹಾರಗಳು.

Daibetes : ಮಧುಮೇಹ ಕ್ಕೆ ಯಾವುದೇ ಚಿಕಿತ್ಸೆ ಗಳಿಲ್ಲದಿದ್ದರೂ ಸಹ ಕಡಿಮೆ ಮಾಡಿಕೊಳ್ಳಲು  ಕೆಲವು ಪ್ರಮುಖ ಪರಿಹಾರಗಳು ತಿಳಿಯಬಹುದು.

  •  ಆಹಾರ ಪದ್ಧತಿಯನ್ನು ಬದಲಾವಣೆ ಮಾಡುವುದು : ಸರಿಯಾದ ರೀತಿಯಲ್ಲಿ ಪೌಷ್ಟಿಕತೆಯುತ ಆಹಾರವನ್ನು ಸೇವಿಸುವುದು.
  •  ವ್ಯಾಯಾಮ ಮಾಡುವುದು : ಪ್ರತಿನಿತ್ಯ ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ಶೇಖರಣೆ ಆಗುವಂತಹ ಅತಿಯಾದಂತಹ ಬೊಜ್ಜು ಕಡಿಮೆ ಮಾಡಿಕೊಳ್ಳಬಹುದು.
  •  ತೂಕ ಕಡಿಮೆ ಮಾಡಿಕೊಳ್ಳುವುದು : ನಮ್ಮ ದೇಹಕ್ಕೆ ಎಷ್ಟು ಬೇಕೋ ಅಷ್ಟು ಆಹಾರವನ್ನು ಸೇವಿಸುವುದು. ಅತಿಯಾದ ಆಹಾರ ಸೇವನೆಯನ್ನು ಕಡಿಮೆ ಮಾಡುವುದು.
  •  ಧೂಮಪಾನ ಮದ್ಯಪಾನದಿಂದ ದೂರ ಇರುವುದು.
  •  ನಮ್ಮ ದೇಹವನ್ನು ಆಕ್ಟಿವ್ ಮಾಡಿಕೊಂಡಿರುವುದು.
  •  ಆರೋಗ್ಯಕರವಾದಂತಹ ಆಹಾರ ಸೇವನೆ ಮಾಡುವುದು. ಅಂದರೆ ಅತಿಯಾದಂತಹ ಕೊಬ್ಬು ಇರುವಂತಹ ಎಣ್ಣೆ ಪದಾರ್ಥಗಳನ್ನು ಸೇವನೆ ಮಾಡದೆ ಇರುವುದು.
  •  ನ್ಯಾಚುರಲ್ಲಾಗಿ ಬರುವಂತಹ ಅಡಿಗೆ ಎಣ್ಣೆಗಳನ್ನು ಬಳಸುವುದು.
  •  ಬೇಕರಿ ಉತ್ಪನ್ನಗಳನ್ನು ಕಡಿಮೆ ಮಾಡುವುದು.
  •  ಸಿರಿಧಾನ್ಯದ ಹಿಟ್ಟುಗಳನ್ನು ಬಳಸುವುದು.
  •  ಹಣ್ಣುಗಳು, ತರಕಾರಿಗಳು ಸೇವನೆ ಮಾಡುವುದು.
  •  ಡ್ರೈ ಫ್ರೂಟ್ಸ್ ಗಳ ಸೇವನೆ ಮಾಡುವುದು : ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡುವುದು.

ಹೀಗೆ ಮಧುಮೇಹಕ್ಕೆ ಯಾವುದೇ ರೀತಿಯ ಔಷಧ ಇಲ್ಲದಿದ್ದರೂ ಸಹ ನಾವು ನಮ್ಮ ಆರೋಗ್ಯ ಕ್ರಮಗಳನ್ನು ಬದಲಿಸುವುದರಿಂದ, ಪ್ರತಿನಿತ್ಯ ವ್ಯಾಯಾಮ ಮಾಡುವುದರಿಂದ, ಆರೋಗ್ಯಕರವಾದ ಅಂತಹ ಆಹಾರಗಳನ್ನು ಸೇವನೆ ಮಾಡುವುದರಿಂದ, ಜಪಾನ ಧೂಮಪಾನಗಳಿಂದ ದೂರವಿರುವುದರಿಂದ ಮದುವೆಯನ್ನು ಕಡಿಮೆ ಮಾಡಿಕೊಳ್ಳಬಹುದು.

Leave a Reply

Your email address will not be published. Required fields are marked *