ಅನ್ನಭಾಗ್ಯ ಯೋಜನೆ ಸರ್ಕಾರ ಜಾರಿಗೆ ತಂದ ಒಂದು ಮಹತ್ವದ ಯೋಜನೆ ಇದಾಗಿದೆ. ಹಸಿವಿನಿಂದ ಯಾರು ಬಳಲಬಾರದು ಎಂಬ ಮಹತ್ವಕಾಂಷೆ ಈ ಯೋಜನೆಯಾದಗಿದೆ.ಆಹಾರ ಭದ್ರಾತಾ ಯೋಜನೆಯಡಿಯಲ್ಲಿ ಪ್ರತಿಯೊಂದು ಕುಟುಂಬಕ್ಕೂ 10 ಕೆಜಿ ಆಹಾರಧಾನ್ಯ ಒದಗಿಸುವ ಯೋಜನೆಯಾಗಿದೆ.ನೆಮ್ಮದಿಯಾಗಿ ಬದುಕಲು, ಹಸಿವು ನಿಗಿಸಲು ಅನ್ನ ಸಹಾಯವಾಗುತ್ತದೆ.
ಈ ಯೋಜನೆಯ ಪ್ರಮುಖ ಉದ್ದೇಶ ಹಸಿವು ಮತ್ತು ಆಹಾರದ ಕೊರತೆಯನ್ನು ನಿವಾರಿಸುವುದು.ಯಾರು ಕೂಡಾ ಹಸಿವಿನಿಂದ ಬಳಲಬಾರದು ಎಂಬುದು ಇದರ ನಿಲುವು. ಈ ಯೋಜನೆಯನ್ನು 2013 ರಲ್ಲಿ ಜಾರಿಗೆ ತರಲಾಯಿತು. BPL ಮತ್ತು ಅಂಥತ್ಯೋದಯ ಪಡಿತರಧಾರರಿಗೆ ಆಹಾರಧಾನ್ಯ ನೀಡುವ ಯೋಜನೆ.
ಈ ಲೇಖನದಲ್ಲಿ ನಾವು ಅನ್ನಭಾಗ್ಯ ಯೋಜನೆಯ ಉದ್ದೇಶ, ಪ್ರಯೋಜನ, ಅರ್ಹತೆ,ಅರ್ಜಿ ಸಲ್ಲಿಸುವ ವಿಧಾನ,ಯಾವ ಯಾವ ದಾಖಲೆಗಳು ಬೇಕು, ಈ ಯೋಜನೆಯ ಹಣ ಪಡೆಯೋದು ಹೇಗೆ, ಹಣ ಬಂದಿರುವುದನ್ನು ತಿಳಿಯೋದು ಹೇಗೆ ಎಂಬ ಎಲ್ಲಾ ಮಾಹಿತಿಯನ್ನು ತಿಳಿಯೋಣ. ಹೆಚ್ಚಿನ ಮಾಹಿತಿಯನ್ನು ಪಡೆಯಲು https://ahara.kar.nic.in ವೆಬ್ಸೈಟ್ ಗೆ ಭೇಟಿ ಮಾಡಬಹುದು.
Table of Contents
Toggleಅನ್ನಭಾಗ್ಯ ಯೋಜನೆ ಗೆ ಅರ್ಜಿ ಸಲ್ಲಿಸಲು ಯಾವ ಯಾವ ದಾಖಲೆಗಳು ಬೇಕು.
ಅನ್ನಭಾಗ್ಯ ಯೋಜನೆಗೆ ಅರ್ಜಿ ಸಲ್ಲಿಸಲು ಕೆಲವು ಪ್ರಮುಖ ದಾಖಲೆಗಳು ಬೇಕಾಗುತ್ತವೆ. ಈ ಯೋಜನೆಯ ಪ್ರಯೋಜನ ಪಡೆಯಲು ಈ ಕೆಳಗಿನ ದಾಖಲೆಗಳು ಬೇಕು.
1.BPL ರೇಷನ್ ಕಾರ್ಡ್ ಹೊಂದಿರಬೇಕು. (BPL Ration card).
2. ಆಧಾರ್ ಕಾರ್ಡ್ ಹೊಂದಿರಬೇಕು. (Aadhaar card).
3. ಆಧಾರ್ -ಮೊಬೈಲ್ ಲಿಂಕ್ ಕಡ್ಡಾಯವಾಗಿ ಆಗಿರಬೇಕು.
4. ಅಂಥತ್ಯೋದಯ ಕಾರ್ಡ್ ಹೊಂದಿರಬೇಕು.
5. ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಕಡ್ಡಾಯವಾಗಿ ಆಗಿರಬೇಕು.
ಈ ಮೇಲಿನ ಎಲ್ಲಾ ದಾಖಲೆಗಳನ್ನು ಹೊಂದಿರುವ ಕುಟುಂಬದ ಯಜಮಾನಿಗೆ ಸರ್ಕಾರ ಒಂದು ಕೆಜಿ ಅಕ್ಕಿಗೆ 34 ರೂಪಾಯಿಯಂತೆ 170 ರೂ ನಂತೆ ತಲಾ ಒಬ್ಬರಿಗೆ ಹಣ ಜಮಾ ಮಾಡಲಾಗುವುದು.
ಅನ್ನಭಾಗ್ಯ ಯೋಜನೆ ಗೆ ಅರ್ಜಿ ಸಲ್ಲಿಸುವ ವಿಧಾನ.
ಅನ್ನಭಾಗ್ಯ ಯೋಜನೆಗೆ ಅರ್ಜಿಗಳನ್ನು ಸಲ್ಲಿಸುವುದು ಹೇಗೆ ಎಂಬುದನ್ನು ತಿಳುದುಕೊಳ್ಳೋಣ. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಯ ಈ ಯೋಜನೆ ಗೆ ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಗಿನ ವಿಧಾನಗಳನ್ನು ಅನುಸರಿಸಬೇಕು.
BPL ಮತ್ತು ಅಂಥತ್ಯೋದಯ ಪಡಿತರ ಚೀಟಿ ಹೊಂದಿರುವ ಯಾವುದೇ ಕುಟುಂಬ ಈ ಯೋಜನೆಯ ಪ್ರಯೋಜನ ಪಡೆಯಬಹುದು.ನಿಮ್ಮ ರೇಷನ್ ಕಾರ್ಡ್ ತೆಗೆದುಕೊಂಡು ನಿಮ್ಮ ನ್ಯಾಯ ಬೆಲೆ ಅಂಗಡಿಗೆ ಹೋಗಿ ಬಯೋಮೆಟ್ರಿಕ್ ನೀಡುವ ಮೂಲಕ ದೃಡೀಕರಣ ಮಾಡಬಹುದು. ನಂತರ ನಿಮ್ಮ ಕುಟುಂಬದ ಎಲ್ಲಾ ಸದಸ್ಯರು ಕೂಡಾ ಬಯೋಮೆಟ್ರಿಕ್ ನೀಡಬೇಕು.
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಎಲ್ಲಾ ವಿವರಗಳನ್ನು ಪಡೆಯಬಹುದು. ವಿಳಾಸ https://ahara.kar.nic. in ಆಗಿದೆ. ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನು ಪಡೆಯಿರಿ.
ಅನ್ನಭಾಗ್ಯ ಯೋಜನೆ ಹಣ ಬಂದಿರುವುದನ್ನು ಚೆಕ್ ಮಾಡುವುದು ಹೇಗೆ?.
ಅನ್ನಭಾಗ್ಯ ಯೋಜನೆ ಹಣ ಜಮಾ ಆಗಿರುವುದನ್ನು ತಿಳಿದುಕೊಳ್ಳುವುದು ಹೇಗೆ ಎಂಬುದನ್ನು ನೋಡೋಣ. ಸರ್ಕಾರ ನೀಡುವ ಈ ಯೋಜನೆಯ ಹಣ ನಿಮ್ಮ ಖಾತೆಗೆ ಜಮಾ ಆಗಿರುವುದನ್ನು ನೀವು ನಿಮ್ಮ ಬ್ಯಾಂಕ್ ಮೂಲಕ ತಿಳಿಯಬಹುದು.
ರಾಜ್ಯ ಸರ್ಕಾರವು ಈ ಯೋಜನೆಯಡಿಯಲ್ಲಿ 5ಕೆಜಿ ಅಕ್ಕಿ ಬದಲಿಗೆ ಒಂದು ಕೆಜಿ ಅಕ್ಕಿಗೆ 34 ರೂಪಾಯಿಯಂತೆ 170 ರೂ ಒಬ್ಬ ಪಲಾನುಭವಿಗೆ ನೀಡಲಾಗುವುದು ಅದರಂತೆ ನಿಮ್ಮ ಪಡಿತರ ಚೀಟಿಯಲ್ಲಿ ಇರುವ ಸದಸ್ಯರ ಆಧಾರದ ಮೇಲೆ ಒಟ್ಟು ಎಷ್ಟು ಹಣ ಜಮಾ ಆಗಿದೆ ಎಂದು ತಿಳಿಯಬಹುದು.
ಮೊದಲು ನೀವು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅಧಿಕೃತ ವೆಬ್ಸೈಟ್ https://ahara.kar.nic.in ಗೆ ಭೇಟಿ ನೀಡಿ. ನಂತರ ಮುಖಪುಟದಲ್ಲಿ ಕಾಣುವ ಇ -ಸೇವೆಗಳು ಎಂಬ ಮೆನು ಮೇಲೆ ಕ್ಲಿಕ್ ಮಾಡಿ, ಅದು ತೆರೆದುಕೊಳ್ಳುತ್ತದೆ. ನಂತರ ಅಲ್ಲಿ ಕಾಣುವ DBT ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನೀವು ವರ್ಷ, ತಿಂಗಳು ಯಾವುದೆಂದು ಸರಿಯಾಗಿ ಎಂಟ್ರಿ ಮಾಡಬೇಕು. ನಂತರ ಅದು ತೆರೆದುಕೊಳ್ಳುತ್ತದೆ. ಆಮೇಲೆ ನಿಮ್ಮ ಪಡಿತರ ಚೀಟಿ ಸಂಖ್ಯೆ ನೀಡಬೇಕು, ಅಂದರೆ ನಿಮ್ಮ ರೇಷನ್ ಕಾರ್ಡ್ ನಂಬರ್ ಅನ್ನು ಎಂಟ್ರಿ ಮಾಡಬೇಕು. ಎಂಟ್ರಿ ಮಾಡಿದ ಮೇಲೆ ನಿಮ್ಮ DBT ಹಣ ಜಮಾ ಆದ ಬಗ್ಗೆ ಮಾಹಿತಿಯನ್ನು ಪಡೆಯಬಹುದು.
BPL ಮತ್ತು ಅಂಥತ್ಯೋದಯ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಈ ಯೋಜನೆಯ ಹಣ ನೀಡಲಾಗುತ್ತದೆ. ಕಡ್ಡಾಯವಾಗಿ ಬ್ಯಾಂಕ್ ಖಾತೆ ಸಂಖ್ಯೆಗೆ ಆಧಾರ್ ಸಂಖ್ಯೆ ಲಿಂಕ್ ಆಗಿರಬೇಕು. ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಲಿಂಕ್ ಕೂಡಾ ಕಡ್ಡಾಯವಾಗಿ ಆಗಿರಬೇಕು.
ಅನ್ನಭಾಗ್ಯ ಯೋಜನೆಯ ಪ್ರಯೋಜನಗಳು.
ಅನ್ನಭಾಗ್ಯ ಯೋಜನೆ ಯ ಪ್ರಮುಖ ಉದ್ದೇಶ ಹಸಿವು ಮುಕ್ತ ಮಾಡುವುದು, ಹಸಿವಿನಿಂದ ಯಾರು ಸಹ ಬಳಲಬಾರದು ಎಂಬುದು ಈ ಯೋಜನೆಯ ಪ್ರಮುಖ ಗುರಿಯಾಗಿದೆ. ಸರ್ಕಾರದ ಈ ಯೋಜನೆ BPL ಮತ್ತು ಅಂಥತ್ಯೋದಯ ಕುಟುಂಬಗಳಿಗೆ ವರಧಾನವಾಗಿದೆ. ಈ ಯೋಜನೆಯಿಂದ ಹಲವು ಕುಟುಂಬಗಳ ಹಸಿವು ನಿವಾರಣೆಗೊಂಡಿದೆ.
ಬಡ ಕುಟುಂಬಗಳಿಗೆ ಈ ಯೋಜನೆಯಿಂದ ತುಂಬಾ ಪ್ರಯೋಜನ ಆಗಿದೆ. ಈ ಯೋಜನೆಯ ಪ್ರಯೋಜನ ನೋಡುವುದಾದರೆ, ತಕ್ಷಣದ ಆಹಾರದ ಅಗತ್ಯತೆ ಯನ್ನು ನಿಗಿಸುತ್ತದೆ.ಸ್ಥಿರವಾದ ಅಕ್ಕಿ ಪೂರೈಕೆ ಈ ಕುಟುಂಬಗಳಿಗೆ ಸಹಾಯವಾಗಿದೆ
ಕುಟುಂಬದಲ್ಲಿ ತುಂಬಾ ಜನರಿದ್ದು, ದುಡಿಯುವ ಕೈ ಒಂದೇ ಇರುವ ಕುಟುಂಬಕ್ಕೆ ಈ ಯೋಜನೆಯಿಂದ ತುಂಬಾ ಸಹಾಯವಾಗಿದೆ.ಸ್ವಾವಲಂಬನೆ ಬದುಕಿಗೆ ದಾರಿ ಮಾಡಿಕೊಟ್ಟಿದೆ. ಕುಟುಂಬದ ನಿರ್ವಹಣೆಗೆ ಸಹಕರಿಯಾಗಿದೆ. ಹೇಗೋ ಹಸಿವು ಮುಕ್ತ ಆದರೆ ಸಾಕು.
ಪೌಷ್ಟಿಕ ಆಹಾರ ಕೊರತೆ ನಿವಾರಣೆಯಾಗಿದೆ. BPL ಮತ್ತು ಅಂಥತ್ಯೋದಯ ಕುಟುಂಬಕ್ಕೆ ಪೌಷ್ಟಿಕ ಆಹಾರಧಾನ್ಯ ನೀಡುವುದರಿಂದ ಅವರ ಹಸಿವು ನಿಗಿಸಿದಂತಾಗಿದೆ. ಇದರಿಂದ ಕುಟುಂಬಕ್ಕೆ ಪೌಷ್ಟಿಕ ಆಹಾರ ಕೊಟ್ಟಂತಾಗಿದೆ.
ಅನ್ನಭಾಗ್ಯ ಯೋಜನೆ ಯ (FAQs ) ಪ್ರಶ್ನೆಗಳು.
ಅನ್ನಭಾಗ್ಯ ಯೋಜನೆ ಬಗ್ಗೆ ತುಂಬಾ ಸಲ ಕೇಳಿದ ಪ್ರಶ್ನೆಗಳು ಇವು.
ಅನ್ನಭಾಗ್ಯ ಯೋಜನೆಯ ಲಾಭ ಯಾರು ಪಡೆಯಬಹುದು?.
ಸರ್ಕಾರ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಮೂಲಕ ಜಾರಿಗೆ ತಂದಿರುವ ಈ ಯೋಜನೆಯನ್ನು ಎಲ್ಲಾ BPL ಮತ್ತು ಅಂಥತ್ಯೋದಯ ಕುಟುಂಬದ ಪಲಾನುಭವಿಗಳು ಲಾಭ ಪಡೆಯಲು ಅರ್ಹತೆ ಹೊಂದಿರುತ್ತಾರೆ. ಈ ಯೋಜನೆಯ ಪ್ರಮುಖ ಉದ್ದೇಶವೇ ಹಸಿವು ಮುಕ್ತ ಮಾಡುವುದು. ಹಾಗಾಗಿ ಈ ಯೋಜನೆಯನ್ನು ಮೊದಲು ಇವರಿಗೆ ನೀಡಲಾಗಿದೆ.
ಅನ್ನಭಾಗ್ಯ ಯೋಜನೆ ಹಣ ಜಮಾ ತಿಳಿಯೋದು ಹೇಗೆ?.
ಈ ಯೋಜನೆ ಹಣ ಜಮಾ ಆಗಿರುವುದನ್ನು ನಿಮ್ಮ ಬ್ಯಾಂಕ್ ಖಾತೆ ಚೆಕ್ ಮಾಡುವ ಮೂಲಕ ತಿಳಿಯಬಹುದು ಅಥವಾ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅಧಿಕೃತ ವೆಬ್ಸೈಟ್ https://ahara.kar.nic.in ಗೆ ಭೇಟಿ ನೀಡಿ ತಿಳಿದುಕೊಳ್ಳಬಹುದು. ಭೇಟಿ ನೀಡಿ DBT ಬಟನ್ ಕ್ಲಿಕ್ ಮಾಡಿದರೆ ನಿಮ್ಮ ಹಣದ ಬಗ್ಗೆ ತಿಳಿಯಬಹುದು.
ಈ ಲೇಖನದಲ್ಲಿ ನಾವು ಅನ್ನಭಾಗ್ಯ ಯೋಜನೆಯ ಕೆಲವು ಮಾಹಿತಿಯನ್ನು ತಿಳಿದಿಕೊಂಡಿದ್ದೀವಿ. ಇನ್ನು ಹೆಚ್ಚಿನ ಮಾಹಿತಿ ಪಡೆಯಲು ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಿ.