Flipkart ಈಗ ಭಾರತದಲ್ಲಿ UPI (ಯುನೈಟೆಡ್ ಪೇಮೆಂಟ್ ಎಂಟರ್ಫೆಸ್ ) ಸೇವೆಯನ್ನು ಪ್ರಾರಂಭಿಸಿದೆ. ಫ್ಲಿಪ್ಕಾರ್ಟ್ ಒಂದು ಇ -ಕಾಮರ್ಸ್ ಸೈಟ್ ಆಗಿ ಕಾರ್ಯ ನಿರ್ವಹಿಸುತ್ತದೆ.ತುಂಬಾ ಜನಪ್ರಿಯತೆಯನ್ನು ಗಳಿಸಿದೆ. ಈಗ ಪಾವತಿ ಸೇವೆಗಳಿಗಾಗಿ ತನ್ನದೇ ಆದ UPI ಸೇವೆಯನ್ನು ಆಕ್ಸಿಸ್ ಬ್ಯಾಂಕ್ ಸಹಯೋಗದಲ್ಲಿ ಪ್ರಾರಂಭ ಮಾಡಿದೆ.
ಇದು ನೇರವಾಗಿ P2P ಹಣ ವರ್ಗಾವಣೆ ಮಾಡಲು ಅವಕಾಶ ಕಲ್ಪಿಸಿದ ಹಾಗೆ ಆಗಿದೆ.ಇದು ಫ್ಲಿಪ್ಕಾರ್ಟ್ ನ ಡಿಜಿಟಲ್ ಪಾವತಿ ಸೇವೆಗೆ ಸಹಾಯವಾಗಲಿದೆ.ಈಗಿನ ಡಿಜಿಟಲ್ ಯುಗದಲ್ಲಿ ಇದು ಒಂದು ಮಹತ್ವದ ನಿರ್ಧಾರವಾಗಿದೆ. ಬೇರೆ ಥರ್ಡ್ ಪಾರ್ಟಿ ಅಪ್ಲಿಕೇಶನ್ (Third ಪಾರ್ಟಿ application ) ಮೇಲೆ ಅವಲಂಬಿತ ಆಗುವುದನ್ನು ಕಡಿಮೆ ಮಾಡಲು ಇದು ಸಹಾಯವಾಗಿದೆ.
ಫ್ಲಿಪ್ಕಾರ್ಟ್ ಒಂದು ಇ -ಕಾಮರ್ಸ್ ಕಂಪನಿಯಾಗಿದ್ದು ಪ್ರಧಾನ ಕಚೇರಿಯನ್ನು ಬೆಂಗಳೂರುನಲ್ಲಿ ಹೊಂದಿದೆ. ಇ ಕಂಪನಿ ಗ್ರಾಹಕರಿಗೆ ಆನ್ಲೈನ್ ಮೂಲಕ ಎಲೆಕ್ಟ್ರಿಕಲ್ ವಸ್ತುಗಳು, ದಿನಸಿ ವಸ್ತುಗಳು, ಮೊಬೈಲ್ ಫೋನ್ಗಳು, ಬಟ್ಟೆ, ವಾಚ್, ಹಾಗೂ ಗೃಹ ಬಳಕೆ ವಸ್ತುಗಳು ಹೀಗೆ ಎಲ್ಲಾ ತರಹದ ವಸ್ತುಗಳನ್ನು ಆನ್ಲೈನ್ ಮೂಲಕ ತನ್ನ ಗ್ರಾಹಕರಿಗೆ ತಲುಪಿಸುವ ಕೆಲಸ ಮಾಡುತ್ತದೆ.
Table of Contents
ToggleFlipkart ನ ಪರಿಚಯ ಮತ್ತು ಬೆಳೆದು ಬಂದ ದಾರಿ.
Flipkart ಅನ್ನು ಬೆಂಗಳೂರುನಲ್ಲಿ 2007 ರಲ್ಲಿ ಪ್ರಾರಂಭ ಮಾಡಲಾಯಿತು. ಸಚಿನ್ ಬನ್ಸಲ್ ಮತ್ತು ಬನ್ನಿ ಬನ್ಸಲ್, ದೆಹಲಿಯ ಹಳೆಯ IIT ವಿದ್ಯಾರ್ಥಿಗಳು ಹಾಗೂ ಆಮೇಜಾನ್ ನ ಮಾಜಿ ಉದ್ಯೋಗಿಗಳು ಸೇರಿ ಫ್ಲಿಪ್ಕಾರ್ಟ್ ಇ -ಕಾಮರ್ಸ್ ಕಂಪನಿ ಪ್ರಾರಂಭಿಸಲಾಯಿತು. ಮೊದಲಿಗೆ ಆನ್ಲೈನ್ ನಲ್ಲಿ ಕೇವಲ ಪುಸ್ತಕ ಮಾರಾಟ ಮಾತ್ರ ಪ್ರಾರಂಭಿಸಲಾಯಿತು.ನಿಧಾನವಾಗಿ ಪ್ರಾಮುಖ್ಯತೆ ಹೊಂದಿತು.
ನಂತರ 2011 ರಲ್ಲಿ ಡಿಜಿಟಲ್ ವಿತರಣಾ ವ್ಯವಹಾರ ಪ್ರಾರಂಭವಾಯಿತು.ಹಾಗೆ ಅಭಿರುದ್ಧಿ ಹೊಂದುತ್ತಾ ಬೆಳೆದು ಈಗ ಒಂದು ದೊಡ್ಡ ಇ -ಕಾಮರ್ಸ್ ಕಂಪನಿಯಾಗಿ ಬೆಳೆದಿದೆ. 2021 ರಲ್ಲಿ ಫ್ಲಿಪ್ಕಾರ್ಟ್ Health+ ಸೇವೆ ಪ್ರಾರಂಭ ಮಾಡಿ ಆನ್ಲೈನ್ ಮೂಲಕ ಔಷಧಿಯನ್ನು ಗ್ರಾಹಕರಿಗೆ ತಲುಪಿಸುವ ಕಾರ್ಯ ಪ್ರಾರಂಭವಾಯಿತು. ಹೀಗೆ ಸಣ್ಣ ಪ್ರಮಾಣದಲ್ಲಿ ಪ್ರಾರಂಭವಾದ ಕಂಪನಿ ಈಗ ಬಹು ದೊಡ್ಡ ಇ – ಕಾಮರ್ಸ್ ಕಂಪನಿಯಾಗಿ ಬೆಳೆದಿದೆ. ಹೆಚ್ಚಿನ ಮಾಹಿತಿಗಾಗಿ ಫ್ಲಿಪ್ಕಾರ್ಟ್ ನ ಅಧಿಕೃತ ವೆಬ್ಸೈಟ್ https://www.flipkart.com ಗೆ ಭೇಟಿ ನೀಡಬಹುದು.
Flipkart UPI ಸೇವೆ ಪ್ರಾರಂಭಿಸುವುದು ಹೇಗೆ?.
Flipkart ನ ಅಧಿಕೃತ ವೆಬ್ಸೈಟ್ ಮೂಲಕ ಈ ಸೇವೆಯನ್ನು ಪ್ರಾರಂಭಿಸಬಹುದು.ಮೊದಲು ಫ್ಲಿಪ್ಕಾರ್ಟ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. ವೆಬ್ಸೈಟ್ ಲಿಂಕ್ https://www.flipkart.com ಆಗಿದೆ. ಮೊದಲಿಗೆ ಫ್ಲಿಪ್ಕಾರ್ಟ್ ವೆಬ್ಸೈಟ್ ಓಪನ್ ಮಾಡಿ, ನಂತರ ಸ್ಕ್ಯಾನ್ ಅಂಡ್ ಪೆ ಆಪ್ಷನ್ ಕ್ಲಿಕ್ ಮಾಡಿ.ಅಲ್ಲಿ ಕಾಣಿಸುವ My UPI ಬಟನ್ ಮೇಲೆ ಕ್ಲಿಕ್ ಮಾಡಬೇಕು.
ಮುಂದೆ ಅದು ತೆರೆದುಕೊಳ್ಳುತ್ತದೆ, ನಂತರ ನಿಮ್ಮ ಬ್ಯಾಂಕ್ ಯಾವುದೋ ಅದನ್ನು ಆಯ್ಕೆ ಮಾಡಿಕೊಳ್ಳಿ, ಆಗ ನಿಮಗೆ ಒಂದು ಮೆಸೇಜ್ ಬರುತ್ತದೆ, ಆಮೇಲೆ ಬ್ಯಾಂಕ್ ವೆರಿಫ್ಯ್ (verify ) ಆಗುತ್ತದೆ.SMS verify ಆದ ಮೇಲೆ ನಿಮ್ಮ ಖಾತೆ ಕಾರ್ಯ ನಿರ್ವಹಿಸಲು ತಯಾರಾಗುತ್ತದೆ.
ಇದರಲ್ಲಿ ಮೊಬೈಲ್ ರಿಚಾರ್ಜ್ ಮತ್ತು ಬಿಲ್ ಪೇಮೆಂಟ್ ಕೂಡಾ ಮಾಡಬಹುದು. ಯಾವುದೇ ಶುಲ್ಕ ಇರುವುದಿಲ್ಲ. ಉಚಿತವಾಗಿ ಮಾಡಬಹುದು.ಕ್ಯಾಶ್ ಬ್ಯಾಕ್ ಆಫರ್ಸ್ ಕೂಡಾ ಸಿಗುತ್ತವೆ.ಭಾರತದಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆ ತುಂಬಾ ವೇಗವಾಗಿ ದೊಡ್ಡ ಮಟ್ಟದಲ್ಲಿ ಬೆಳೆದಿದೆ.
ಹಲವಾರು ಕಂಪನಿಗಳು ಗ್ರಾಹಕರಿಗೆ UPI ಸೇವೆಯನ್ನು ನೀಡಿವೆ.ಆಮೇಜಾನ್ ಪೆ ಕೂಡಾ ಬಹಳ ಪ್ರಸಿದ್ಧಿ ಹೊಂದಿದೆ ಹಾಗೆಯೇ ಫ್ಲಿಪ್ಕಾರ್ಟ್ UPI ಸೇವೆ ಕೂಡಾ ಬೆಳೆದು ಜನಪ್ರಿಯತೆ ಹೊಂದಲಿ ಎಂದು ಹಾರೈಸೋಣ.
Flipkart ಅನ್ನು ಸಂಪರ್ಕಿಸುವುದು ಹೇಗೆ?.
Flipkart ಒಂದು ಬಹು ದೊಡ್ಡ ಇ -ಕಾಮರ್ಸ್ ಸಂಸ್ಥೆಯಾಗಿದ್ದು,ತನ್ನದೇ ಆದ ಗ್ರಾಹಕರನ್ನು ಹೊಂದಿದೆ.ಗ್ರಾಹಕರು ವ್ಯವಹಾರ ನಡೆಸುವಾಗ ಯಾವುದೇ ತೊಂದರೆ ಆದರೆ ಸುಲಭವಾಗಿ ಕಸ್ಟಮರ್ ಕೇರ್ ಅನ್ನು ಸಂಪರ್ಕಿಸಬಹುದು. ಫ್ಲಿಪ್ಕಾರ್ಟ್ ನ ಗ್ರಾಹಕರ ಸಹಾಯವಾಣಿ ಸಂಖ್ಯೆ 044-45614700 ಗೆ ಕರೆ ಮಾಡಬಹುದು ಆಗ ನಿಮ್ಮ ಸಮಸ್ಯೆಯನ್ನು ಬಹು ಬೇಗ ಪರಿಹರಿಸಿಕೊಳ್ಳಬಹುದು.
ಫ್ಲಿಪ್ಕಾರ್ಟ್ ನ ಅಧಿಕೃತ ವೆಬ್ಸೈಟ್ ಮೂಲಕ ಕೂಡಾ ಸಂಪರ್ಕಿಸಿ ಸಮಸ್ಯೆ ಪರಿಹರಿಸಿಕೊಳ್ಳಬಹುದು. ವೆಬ್ಸೈಟ್ ವಿಳಾಸ ಹೀಗಿದೆ. https://www.flipkart.com ಗೆ ಭೇಟಿ ನೀಡಿ.
Flipkart ಈಗ ಕನ್ನಡದಲ್ಲಿ ಸಹ ಲಭ್ಯ, ಸೇವೆ ಪ್ರಾರಂಭ.
Flipkart ಈಗ ತಮ್ಮ ಗ್ರಾಹಕರಿಗೆ ಅನುಕೂಲ ಮಾಡಿಕೊಡಲು ಕನ್ನಡದಲ್ಲಿ ಸಹ ತನ್ನ ಸೇವೆಯನ್ನು ಪ್ರಾರಂಭ ಮಾಡಿದೆ.ಗ್ರಾಹಕರು (ಕನ್ನಡ ಬಳಸುವ ) ತುಂಬಾ ಸಮಸ್ಯೆ ಎದುರಿಸುತ್ತಿದ್ದೂ ಅದಕ್ಕೆ ಪರಿಹಾರ ಒದಗಿಸಲು ಫ್ಲಿಪ್ಕಾರ್ಟ್ ಕಂಪನಿ ಕನ್ನಡದಲ್ಲಿ ವ್ಯವಹಾರ ಮಾಡಲು ಅವಕಾಶ ಮಾಡಿಕೊಟ್ಟಿದೆ.
ಪ್ರಾದೇಶಿಕ ಭಾಷೆಗೆ ಆದ್ಯತೆ ನೀಡಿದೆ,ಇದು ಭಾರತೀಯ ಗ್ರಾಹಕರಿಗೆ ತುಂಬಾ ಸಂತೋಷದ ವಿಷಯವಾಗಿದೆ. ಭಾರತದ ಗ್ರಾಮೀಣ ಪ್ರದೇಶದ ಜನರಿಗೆ ಸೇವೆ ಕಲ್ಪಿಸುವ ದೃಷ್ಟಿಯಿಂದ ಫ್ಲಿಪ್ಕಾರ್ಟ್ ಕನ್ನಡಕ್ಕೆ ಆದ್ಯತೆ ನೀಡಿದೆ. ಸ್ಥಳೀಯರಿಗೆ ಇದು ಸಂತೋಷದ ವಿಷಯವಾಗಿದೆ.
ಫ್ಲಿಪ್ಕಾರ್ಟ್ ನ ಎಲ್ಲಾ ಸೇವೆಗಳನ್ನು ಕನ್ನಡ ಭಾಷೆಯಲ್ಲಿ ಮಾಡಬಹುದು. ಇದು ಕನ್ನಡಿಗರಿಗೆ ಬಹಳ ಸಹಾಯವಾಗಿದೆ. ಈ ಮಹತ್ವದ ನಿರ್ಧಾರ ತುಂಬಾ ಗ್ರಾಹಕರಿಗೆ ಸಹಾಯವಾಗಿದೆ.
F&Qs.
- ಫ್ಲಿಪ್ಕಾರ್ಟ್ ನಲ್ಲಿ UPI ಮಿತಿ ಎಷ್ಟು? ಫ್ಲಿಪ್ಕಾರ್ಟ್ ನ UPI ಮಿತಿ ಒಂದು ಲಕ್ಷ ರೂಪಾಯಿಗಳು.
- ನಾನು ಫ್ಲಿಪ್ಕಾರ್ಟ್ ಮೂಲಕ ವಿದ್ಯುತ್ ಬಿಲ್ ಪಾವತಿಸಬಹುದೇ? ಹೌದು ಗ್ರಾಹಕರು ಫ್ಲಿಪ್ಕಾರ್ಟ್ UPI ಸೇವೆ ಮೂಲಕ ವಿದ್ಯುತ್ ಬಿಲ್ ಪಾವತಿ ಮಾಡಬಹುದು.
- ಮೊಬೈಲ್ ರಿಚಾರ್ಜ್ ಮಾಡಬಹುದೇ?. ಎಸ್ ಹೌದು ನೀವು ಫ್ಲಿಪ್ಕಾರ್ಟ್ UPI ಮೂಲಕ ಮೊಬೈಲ್ ರಿಚಾರ್ಜ್ ಸಹ ಮಾಡಬಹುದು.