ಈ ಲೇಖನದಲ್ಲಿ ನಾವು ವಿವಾಹದ ಬಗೆಗಿನ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ. ವಿವಾಹ ಎಂದರೇನು?, ಎಷ್ಟು ವಿಧ, ವಿವಾಹ ನೋಂದಣಿಯನ್ನು ಎಲ್ಲಿ ಮಾಡಬೇಕು, ಹೇಗೆ ಮಾಡಬೇಕು, ಇದರ ಪ್ರಯೋಜನಗಳು, ಏಕೆ ಮಾಡಬೇಕು, ಎಷ್ಟು ಶುಲ್ಕ ಭರಿಸಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
ವೈಧಿಕ ಹಿಂದೂ ಸಂಪ್ರದಾಯಗಳ ಅಡಿಯಲ್ಲಿ ಮದುವೆಯನ್ನು ಒಂದು ಸಂಸ್ಕಾರ ಎಂದು ಕರೆಯಲಾಗಿದೆ. ಅಂದರೆ ಒಂದು ಗಂಡು ಮತ್ತು ಹೆಣ್ಣು ಒಟ್ಟಿಗೆ ಜೀವನ ಸಾಗಿಸುವ ಪದ್ಧತಿಯಾಗಿದೆ.
ಹಿಂದೂ ಧರ್ಮದಲ್ಲಿ ನಡೆಯುವ ವಿವಾಹ ಪದ್ಧತಿ ಸಂಪ್ರದಾಯ ಬದ್ದವಾದ ಕೆಲವು ನಿಯಮಗಳ ಪ್ರಕಾರ ನಡೆಯುತ್ತದೆ. ಆಚಾರ, ವಿಚಾರ, ಸಂಪ್ರದಾಯಗಳನ್ನು ಒಳಗೊಂದಿರುತ್ತದೆ. ಇದು ವಧು – ವರರ ಜೀವನದ ಒಂದು ಭಾಗವಾಗಿದೆ. ಹಿಂದೂ ಧರ್ಮದಲ್ಲಿ ನಾವು ತುಂಬಾ ರೀತಿಯ ವಿವಾಹ ಪದ್ದತಿಯನ್ನು ನೋಡಬಹುದು.
ವಿವಾಹದ (Marriage )ಪರಿಚಯ ಮತ್ತು ವಿಧಗಳು.
ಒಂದು ಗಂಡು ಮತ್ತು ಹೆಣ್ಣು ಒಟ್ಟಿಗೆ ಜೀವನ ನಡೆಸುವ ಪದ್ಧತಿ. ಸಮಾಜದಲ್ಲಿ ಸಂಪ್ರದಾಯದ ಪ್ರಕಾರ ಜೀವನ ನಡೆಸುವ ಪದ್ಧತಿಯಾಗಿದೆ. ಹಿಂದೂ ಧರ್ಮದಲ್ಲಿ ವಿವಾಹ ದಲ್ಲಿ 8 ಬಗೆಯನ್ನು ಕಾಣಬಹುದು. ಅವುಗಳೆಂದರೆ….
ಭ್ರಹ್ಮ ವಿವಾಹ, ವೈದಿಕ ವಿವಾಹ, ಆರ್ಷ ವಿವಾಹ,ಪ್ರಜಾಪತ್ಯ ವಿವಾಹ, ಅರಸು ವಿವಾಹ,ಗಂಧರ್ವ ವಿವಾಹ, ರಾಕ್ಷಸ ವಿವಾಹ ಈ ರೀತಿಯ ವಿವಾಹ ಪದ್ಧತಿ ಇವೆ.
ಈ ಮದುವೆಯ ವಿಧಗಳು ಹಿಂದೂ ಸಂಪ್ರದಾಯದ ವಿವಾಹ ಪದ್ಧತಿಗಲಾಗಿದ್ದು. ಹಿಂದಿನ ಕಾಲದಲ್ಲಿ ಈ ಪದ್ಧತಿಗಳು ಜಾರಿಯಲ್ಲಿದ್ದವು. ಸಮಾಜ ಪರಿವರ್ತನೆ ಆದಂತೆ ಈ ಪದ್ಧತಿಗಳು ಕಣ್ಮರೆ ಆದವು. ಪರಸ್ಪರ ಗಂಡು ಮತ್ತು ಹೆಣ್ಣು ಒಪ್ಪಿದರೆ ಮದುವೆಯಾಗಬಹುದು. ಎರಡು ಕುಟುಂಬದ ಒಪ್ಪಿಗೆ ಇರಬೇಕು.
ವಿವಾಹ ನೋಂದಣಿ ಮಾಡುವುದರಿಂದ ಆಗುವ ಪ್ರಯೋಜನಗಳು.
ವಿವಾಹ ನೊಂದಣಿ ಮಾಡುವುದರಿಂದ ಆಗುವ ಪ್ರಯೋಜನವನ್ನು ತಿಳಿಯೋಣ.
ವಿವಾಹ (ಮದುವೆ ) ಪ್ರಮಾಣ ಪತ್ರವು ಮದುವೆಯಾದ ಬಗ್ಗೆ ಅತ್ಯುತ್ತಮ ಸಾಕ್ಷಾಧಾರ ಹೊಂದಿದ ಸರ್ಕಾರಿ ದಾಖಲೆಯಾಗಿದೆ.
ಮದುವೆ ಪ್ರಮಾಣ ಪತ್ರವು ವಿಶೇಷವಾಗಿ ಮಹಿಳೆಯರಿಗೆ ಸಾಮಾಜಿಕ ಭದ್ರತೆ ನೀಡುವ ದಾಖಲೆಯಾಗಿದೆ.
ಈ ಪ್ರಮಾಣ ಪತ್ರವು ಮಹಿಳೆಯರಿಗೆ ಆತ್ಮಸಾಕ್ಷಿಯ ಭರವಸೆಯನ್ನು ನೀಡುವ ಸರ್ಕಾರಿ ದಾಖಲೆಯಾಗಿದೆ.
ವಿದೇಶಗಳಿಗೆ ಪತಿ / ಪತ್ನಿ ಯಾರನ್ನು ಕರೆದುಕೊಂಡು ಹೋಗುವಾಗ ಸಂದರ್ಭದಲ್ಲಿ ವೀಸಾ ಪಡೆಯುವಾಗ ಈ ಪ್ರಮಾಣಪತ್ರ ಸಹಾಯವಾಗುತ್ತದೆ.
ಪತಿ / ಪತ್ನಿ ಯಾರಾದರೂ ಒಬ್ಬರು ಬ್ಯಾಂಕ್ ನಲ್ಲಿ ಡಿಪಾಜಿತ್ ಇಡುವ ಸಂಧರ್ಭದಲ್ಲಿ ನಾಮ ನಿರ್ದೇಶನ ಮಾಡುವ ಸಂದರ್ಭದಲ್ಲಿ ಸಹಾಯವಾಗುತ್ತದೆ.
ಪತಿ/ ಪತ್ನಿಯಾರಲ್ಲಿ ಯಾರಾದರೂ ಮರಣ ಹೊಂದಿದಾಗ ಅವರ ಹೆಸರಿನಲ್ಲಿ ಇದ್ದಂತಹ ಆಸ್ತಿ ಮತ್ತು ಬ್ಯಾಂಕ್ ದೀಪಾಸಿಟ್ ಹಿಂಪಡೆಯಲು ಈ ದಾಖಲೆ ಕಡ್ಡಾಯವಾಗಿ ಬೇಕಾಗುತ್ತದೆ.
ವಿಮೆಯನ್ನು ಮಾಡುವಾಗ ನಾಮ ನಿರ್ದೇಶನ ಮಾಡಿದ್ದಲ್ಲಿ, ಒಬ್ಬರು ಮರಣ ಹೊಂದಿದರೆ ಹಣವನ್ನು ಹಿಂಪಡೆಯಲು ಈ ದಾಖಲೆ ಕಡ್ಡಾಯವಾಗಿ ಬೇಕು.
ಅಂತರ ಜಾತಿ ವಿವಾಹ ಆಗಿದ್ದಲ್ಲಿ ಸರ್ಕಾರದಿಂದ ಸಿಗುವ ಸಹಾಯಧನ ಪಡೆಯಲು ಮದುವೆ ಪ್ರಮಾಣ ಪತ್ರ ಕಡ್ಡಾಯವಾಗಿ ಇರಬೇಕು.
ಸರ್ಕಾರದಿಂದ ಸಿಗುವ ಸೌಲಭ್ಯ ಪಡೆಯಲು ಅಂದರೆ ನಿವೇಶನ, ಮನೆ, ಸಹಾಯ ಧನ ಪಡೆಯಲು ವಿವಾಹ ಸರ್ಟಿಫಿಕೇಟ್ ಬೇಕು. ಬಾಡಿಗೆ ಮನೆಯನ್ನು ಪಡೆದುಕೊಳ್ಳಲು ಸಹ ಗಂಡ ಹೆಂಡತಿ ಎಂಬ ದಾಖಲೆಯಾಗಿಯೂ ಈ ಪ್ರಮಾಣ ಪತ್ರ ಬೇಕಾಗುತ್ತದೆ. ಉದ್ಯೋಗಕ್ಕಾಗಿ ಬೇರೆ ನಗರಗಳಲ್ಲಿ ನೆಲೆಸಬೇಕು.
ಹೆಚ್ಚಿನ ಮಾಹಿತಿ ಪಡೆಯಲು ಸಂಪರ್ಕಿಸಿ.
ವಿವಾಹ ನೋಂದಣಿ ಕಾಯ್ದೆ ಮತ್ತು ಅಧಿನಿಯಮಗಳು ಯಾವುವು?.
ಯಾವುದೇ ವಿವಾಹ ವನ್ನು ನೋಂದಾಯಿಸಲು ಕೆಲವು ಅದೀನಿಯಮಗಳು ಮತ್ತು ಕಾಯ್ದೆಗಳು ಇವೆ. ಇವುಗಳ ಅಡಿಯಲ್ಲಿ ಮದುವೆ ನೋಂದಣಿ ಮಾಡಲಾಗುತ್ತದೆ.
ಹಿಂದೂ ವಿವಾಹ ಕಾಯ್ದೆ 1955.
ವಿಶೇಷ ವಿವಾಹ ಕಾಯ್ದೆ 1954.
ಪಾರ್ಸಿ ವಿವಾಹ ಮತ್ತು ವಿಚ್ಚೇಧನ ಕಾಯ್ದೆ 1936.
ವಿಶೇಷ ವಿವಾಹ ಅಧಿನಿಯಮ 1954.
ವಿಶೇಷ ವಿವಾಹ (ಕರ್ನಾಟಕ ) ಅಧಿನಿಯಮ 1961.
ಹಿಂದೂ ವಿವಾಹ ನೋಂದಣಿ (ಕರ್ನಾಟಕ )ಅಧಿನಿಯಮ 1966.
ಪಾರ್ಸಿ ವಿವಾಹ ಅಧಿನಿಯಮ 1961.
ವಿವಾಹ ನೋಂದಣಿಯನ್ನು ಎಲ್ಲಿ ಮಾಡಬೇಕು.
ವಿವಾಹ ನೋಂದಣಿ ಯನ್ನು ಮದುವೆ ನಡೆದ ಸ್ಥಳದ ವ್ಯಾಪ್ತಿ ಅಥವಾ ವಧು -ವರರ ವಾಸಸ್ಥಳದ ವ್ಯಾಪ್ತಿಯ ಮದುವೆ ನೋಂದಣಿ ಕಚೇರಿಯಲ್ಲಿ ಮಾಡಬೇಕು.
ತಾಲೂಕು ಅಥವಾ ಜಿಲ್ಲಾ ಮದುವೆ ನೋಂದಣಿ ಕಚೇರಿಯಲ್ಲಿ ಮಾಡಬಹುದು.
ಹಿಂದೂ ವಿವಾಹ ಮತ್ತು ವಿಶೇಷ ವಿವಾಹಗಳಿಗೋಸ್ಕರ, ಹೋಬಳಿ ಅಥವಾ ತಾಲೂಕು ಮಟ್ಟದಲ್ಲಿ ಇರುವ ಸಬ್ ರೆಜಿಸ್ಟರ್ ಕಚೇರಿ ಯೇ ಮದುವೆ ನೋಂದಣಿ ಕಚೇರಿಯಾಗಿರುತ್ತದೆ. ಎಲ್ಲಿ ನೋಂದಣಿ ಮಾಡಬಹುದು.
ವಿವಾಹ ನೋಂದಣಿಯ ನಿಯಮ ಮತ್ತು ನಿಭಂದನೆಗಳು.
ವಿವಾಹ ನೋಂದಣಿ ಗೆ ಕೆಲವು ನಿಯಮ ಮತ್ತು ನಿಭಂದನೆಗಳು ಇವೆ. ಅವುಗಳೆಂದರೆ,
ಮದುವೆಯಾದ ಇಬ್ಬರು ಒಟ್ಟಿಗೆ ವಾಸಿಸುತ್ತಿರಬೇಕು.
ವಧುವಿಗೆ 18 ವರ್ಷ ಆಗಿರಬೇಕು.
ವರನಿಗೆ 21 ವರ್ಷ ಆಗಿರಬೇಕು.
ವಿವಾಹವಾಗಲು ಇಚ್ಚಿಸುವ ವರ ಅಥವಾ ವಧುವಿಗೆ ಈ ಮುಂಚೆಯೇ ಮದುವೆಯಾದ ಪತಿ/ ಪತ್ನಿ ಇರಬಾರದು.
ಬುದ್ಧಿ ಭ್ರಮಣೆಯಿಂದಾಗಿ ವಧು ಮತ್ತು ವರ ಸ್ವ ಇಚ್ಛೆಯಿಂದ ಮದುವೆಗೆ ಒಪ್ಪಿಗೆ ನೀಡಲು ಅಸಮರ್ಥರಾಗಿದ್ದಾರೆ ಅವರು ನೋಂದಾಯಿಸುವಂತಿಲ್ಲ.
ಮದುವೆ ಗೆ ಸ್ವ ಇಚ್ಛೆಯಿಂದ ಒಪ್ಪಿಗೆ ಕೊಡಲು ಸಮರ್ಥರಿದ್ದು, ಮದುವೆ ಮಾಡಿಕೊಳ್ಳಲು ಮತ್ತು ಮದುವೆಯಾದ ನಂತರ ಮಕ್ಕಳನ್ನು ಪಡೆಯುವಷ್ಟರ ಮಟ್ಟಿಗೆ ಅಸಮರ್ಥ ಆಗಿರುವವರು ಅರ್ಹರಿರುವುದಿಲ್ಲ.
ವರನಿಗೆ 21 ಮತ್ತು ವಧುವಿಗೆ 18 ವರ್ಷ ತುಂಬಿದ್ದು, ಮದುವೆಯಾಗಲು ಇಚ್ಚಿಸುವವರು ಒಬ್ಬರಿಗೊಬ್ಬರು ನಿಷೇದಿ ಸಲ್ಪಟ್ಟ ಸಂಭಂದಿಕರು ಆಗಿದ್ದಲ್ಲಿ ವಿವಾಹ ಮಾಡುವಂತಿಲ್ಲ.
ವಿವಾಹ ನೋಂದಣಿಯನ್ನು ಹೇಗೆ ಮಾಡಬೇಕು.
ಹಿಂದೂ ವಿವಾಹ ಕಾಯ್ದೆಯಡಿ ಮದುವೆ ನೋಂದಣಿ ಮಾಡುವವರು ಈ ನಿಯಮಗಳನ್ನು ಪಾಲಿಸಬೇಕು.
ಆಯಾ ಸಾಮಾಜಿಕ ನಿಯಮಗಳ ಪ್ರಕಾರ ಮದುವೆಯಾದ ನಂತರ ಮದುವೆ ನೋಂದಣಿ ಅರ್ಜಿಗಳನ್ನು ಭರ್ತಿ ಮಾಡಬೇಕು.ವಧು – ವರ ಮತ್ತು ಮದುವೆಯ ಸಂದರ್ಭದಲ್ಲಿ ಹಾಜರಿದ್ದರು ಮೂರು ಜನ ಸಾಕ್ಷಿಗಳು ತಮ್ಮ ಹೆಸರು, ವಿಳಾಸ ಬರೆದು ಸಹಿ ಮಾಡಿ (ಮದುವೆ ವಧು – ವರ ಜೋಡಿ ಫೋಟೋ ಸಹಿತ ) ಅರ್ಜಿಗಳನ್ನು ಭರ್ತಿಮಾಡಿ, ಮದುವೆ ನೋಂದಣಿ ಅಧಿಕಾರಿಗಳಿಗೆ 2 ಪ್ರತಿಗಳಲ್ಲಿ ಸಲ್ಲಿಸಬೇಕು.
ಮದುವೆ ಅಧಿಕಾರಿಯು ಅರ್ಜಿಗಳನ್ನು ಪರಿಶೀಲನೆ ಮಾಡಿ, ಕಾನೂನು ಪ್ರಕಾರ ಸರಿಯಾಗಿದೆ ಎಂದು ಮಾನವರಿಕೆಯಾದ ನಂತರ ನೋಂದಾವಣೆ ಮಾಡಿ, ಮದುವೆ ಪ್ರಮಾಣ ಪತ್ರ ನೀಡುತ್ತಾರೆ.
ವಿವಾಹ ನೋಂದಣಿ ಶುಲ್ಕ ಎಷ್ಟು.
ಮದುವೆ ನೋಂದಣಿ ಗೆ ಈ ಕೆಳಕಂಡ ಶುಲ್ಕ ನೀಡಬೇಕು.
ಹಿಂದೂ ವಿವಾಹ ನೋಂದಣಿ ಶುಲ್ಕ ಇರುವುದಿಲ್ಲ. ಅರ್ಜಿ ಶುಲ್ಕ 5 ರೂಪಾಯಿ ಮತ್ತು ಮದುವೆ ಪ್ರಮಾಣ ಪತ್ರದ ಶುಲ್ಕ 1ರೂಪಾಯಿ ನೀಡಬೇಕು.
ವಿಶೇಷ ವಿವಾಹ ಕಾಯಿದೆ 1954 ರ ಅಡಿಯಲ್ಲಿ ಮದುವೆ ನೆರವೇರಿಸಲಿಕ್ಕೆ ರೂಪಾಯಿ 10. ಮದುವೆ ಬೇರೆ ಸ್ಥಳದಲ್ಲಿ ಮಾಡಲ್ಪಟ್ಟರೆ 15 ರೂಪಾಯಿ ನೀಡಬೇಕು. ಮದುವೆ ಪ್ರಮಾಣ ಪತ್ರ ಒಂದಕ್ಕೆ 2 ರೂಪಾಯಿ ಮತ್ತು ಮದುವೆ ನೋಟೀಸ್ ಶುಲ್ಕ 3ರೂಪಾಯಿ ನೀಡಬೇಕು.