ಕರ್ನಾಟಕ ಕಾಂಗ್ರೆಸ್ ಸರ್ಕಾರ ಚುನಾವಣ ಪೂರ್ವ ಘೋಷಣೆ ಮಾಡಿದ 5 ಗ್ಯಾರಂಟಿ ಯೋಜನೆಗಳಲ್ಲಿ ಈ ಗೃಹ ಲಕ್ಷ್ಮಿ ಯೋಜನೆಯು ಒಂದು. ಗೃಹ ಲಕ್ಷ್ಮಿ ಯೋಜನೆ ಸ್ತ್ರೀ ಸ್ವಾವಲಂಬನೆ ಯೋಜನೆಯಾಗಿದ್ದು, ಕರ್ನಾಟಕ ರಾಜ್ಯದ ಮಹಿಳೆಯರಿಗೆ ತುಂಬಾ ಅನುಕೂಲ ಮಾಡಿ ಕೊಟ್ಟಿದೆ.
ಈ ಗೃಹ ಲಕ್ಷ್ಮಿ ಯೋಜನೆಯಲ್ಲಿ ಕುಟುಂಬದ ಯಜಮಾನಿಗೆ ಮಾಸಿಕ 2000 ರೂಪಾಯಿ ನೀಡಲಾಗುವುದು. ಇದರಿಂದ ಮಹಿಳೆಯಾರಿಗೆ ಕುಟುಂಬದ ನಿರ್ವಹಣೆ ಗೆ ತುಂಬಾ ಸಹಕಾರಿಯಾಗಿದೆ. ಕುಟುಂಬದ ಆರ್ಥಿಕತೆ ಸುಧಾರಣೆಗೊಂಡಿದೆ. ಮಕ್ಕಳ ವಿದ್ಯಾಭ್ಯಾಸ ಕ್ಕೆ ನೇರವಾಗಿದೆ.
ಈ ಲೇಖನದಲ್ಲಿ ಗೃಹ ಲಕ್ಷ್ಮಿ ಯೋಜನೆ ಯ ಬಗೆಗಿನ ಸಂಪೂರ್ಣ ವಿವರವನ್ನು ನೀಡಲಾಗಿದೆ. ಅಂದರೆ ಗೃಹ ಲಕ್ಷ್ಮಿ ಯೋಜನೆ ಎಂದರೇನು?, ಈ ಯೋಜನೆಗೆ ಅರ್ಜಿಗಳನ್ನು ಸಲ್ಲಿಸುವುದು ಹೇಗೆ?, ಯಾವ ಯಾವ ದಾಖಲೆಗಳು ಬೇಕು, ಯಾರು ಅರ್ಜಿಗಳನ್ನು ಸಲ್ಲಿಸಬಹುದು, ಇವರೆಗೆ ಹಣ ಜಮಾ ಆಗದೆ ಇದ್ದವರು ಏನು ಮಾಡಬೇಕು, ಹಣ ಜಮಾ ಆಗಿರುವುದು ಹೇಗೆ ಚೆಕ್ ಮಾಡಬೇಕು ಎಂಬ ಮಾಹಿತಿಯನ್ನು ನೀಡಲಾಗಿದೆ.
ರಾಜ್ಯದ ಮಹಿಳೆಯರ ಸಬಲೀಕರಣ ದೃಷ್ಟಿಯಿಂದ ಈ ಯೋಜನೆ ಜಾರಿಗೆ ತರಲಾಗಿದೆ. ಕುಟುಂಬದ ನಿರ್ವಹಣೆಯಲ್ಲಿ ಮನೆಯ ಯಜಮಾನಿಯ ಪತ್ರ ಬಹು ಜವಾಬ್ದಾರಿಯುತ ವಾಗಿರುತ್ತದೆ.ಆದ್ದರಿಂದ ಕುಟುಂಬದ ಆರ್ಥಿಕ ಪರಿಸ್ಥಿತಿಗೆ ಅನುಕೂಲ ಆಗಲೆಂದು ಕರ್ನಾಟಕ ಕಾಂಗ್ರೆಸ್ ಸರ್ಕಾರ ಈ ಗೃಹ ಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದೆ.
ಕಾಂಗ್ರೆಸ್ ಘೋಷಿಸಿದ್ದ ಗ್ಯಾರಂಟಿ ಯೋಜನೆಯಲ್ಲಿ ಇದು ಒಂದಾಗಿದೆ
ಗೃಹ ಲಕ್ಷ್ಮಿ ಯೋಜನೆ (GRUHA LAKSHMI YOJANE)ಎಂದರೇನು?.
ಗೃಹ ಲಕ್ಷ್ಮಿ ಯೋಜನೆ ಎಂದರೆ ಕುಟುಂಬದ ಯಜಮಾನಿಗೆ ಅವರ ಕುಟುಂಬದ ಆರ್ಥಿಕ ಸ್ವಾವಲಂಬನೆ ಗಾಗಿ ಸಹಾಯ ಧನ ನೀಡುವುದು. ಈ ಯೋಜನೆಯನ್ನು ಕರ್ನಾಟಕ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದು, ರಾಜ್ಯದ ಮಹಿಳೆಯಾರಿಗೆ ತುಂಬಾ ಸಹಕಾರಿಯಾಗಿದೆ. ಕುಟುಂಬದ ಜವಾಬ್ದಾರಿ ಹೊತ್ತಿದ್ದ ಮಹಿಳೆಯರು ಈ ಯೋಜನೆಯಿಂದ ಆರ್ಥಿಕ ನೆರವು ಸಿಕ್ಕಂತಾಗಿದೆ.
ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ಈ ಯೋಜನೆ ( Gruha lakshmi yojane)ತುಂಬಾ ಸಹಕಾರಿಯಾಗಿದೆ.
ಚುನಾವಣೆ ಯ ಪೂರ್ವ ಘೋಷಣೆ ಮಾಡಿದ ಹಾಗೆ ಅಧಿಕಾರಕ್ಕೆ ಬಂದ ನಂತರ ಸರ್ಕಾರ ಈ ಯೋಜನೆ ಜಾರಿಗೆ ತರಲಾಯಿತು. ಇದರಿಂದ ಕುಟುಂಬದ ಆರ್ಥಿಕತೆ ಗೆ ಸಹಾಯವಾಗಿದೆ. ಮಹತ್ವಕಾಂಶೆ ಯೋಜನೆಯಲ್ಲಿ ಒಂದಾದ ಈ ಯೋಜನೆ ಗೆ ಅರ್ಜಿಗಳನ್ನು ಸಲ್ಲಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.
ಗೃಹ ಲಕ್ಷ್ಮಿ ಯೋಜನೆ ಗೆ ಅರ್ಜಿಗಳನ್ನು ಸಲ್ಲಿಸುವುದು ಹೇಗೆ?.
ಕರ್ನಾಟಕ ಕಾಂಗ್ರೆಸ್ ಸರ್ಕಾರದ ಈ ಯೋಜನೆ (Gruha Lakshmi Yojane )ಗೆ ಅರ್ಜಿಗಳನ್ನು ಸಲ್ಲಿಸುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಈ ಲೇಖನದಲ್ಲಿ ನೀಡಲಾಗಿದೆ. ಈ ಯೋಜನೆಯು ರಾಜ್ಯದ ಮಹಿಳೆಯರಿಗೆ ಆರ್ಥಿಕ ಸಹಾಯ ನೀಡಿದೆ. ಕುಟುಂಬದ ನಿರ್ವಹಣೆ ಗೆ ಸಹಕಾರಿಯಾಗಿದೆ.
ಈ ಯೋಜನೆಗೆ ಅರ್ಜಿಗಳನ್ನು ಸಲ್ಲಿಸುವುದು ಹೇಗೆ ಎಂದರೆ, ಸರ್ಕಾರದ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು. ವಿಳಾಸ ಹೀಗಿದೆ https://sevasindhuservices.karnataka.gov.in ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.
ಗ್ರಾಮ ಒನ್, ಕರ್ನಾಟಕ ಒನ್, ಬಪೂಜಿ ಸೇವಾ ಕೇಂದ್ರ, ಬೆಂಗಳೂರು ಒನ್ ಮೂಲಕ ಆನ್ಲೈನ್ ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು. ಅಗತ್ಯ ದಾಖಲೆಗಳನ್ನು ನೀಡಿ ಅರ್ಜಿಗಳನ್ನು ಸರಿಯಾದ ಕ್ರಮದಲ್ಲಿ ಸಲ್ಲಿಸಬೇಕು. ಬ್ಯಾಂಕ್ ಸಂಖ್ಯೆ ಗೆ ಆಧಾರ್ ಲಿಂಕ್ ಕಡ್ಡಾಯವಾಗಿ ಮಾಡಿರಬೇಕು. ಇಲ್ಲದಿದ್ದರೆ ಈ ಯೋಜನಯ ಹಣ ಜಮಾ ಆಗುವುದಿಲ್ಲ.
ಗೃಹ ಲಕ್ಷ್ಮಿ ಯೋಜನೆ ಗೆ ಅರ್ಜಿಗಳನ್ನು ಸಲ್ಲಿಸಲು ಯಾವ ದಾಖಲೆಗಳು ಬೇಕು.
ಸರ್ಕಾರದ ಗೃಹ ಲಕ್ಷ್ಮಿ ಯೋಜನೆ (gruha lakshmi yojane)ಗೆ ಅರ್ಜಿಗಳನ್ನು ಸಲ್ಲಿಸಲು ಕೆಲವು ದಾಖಲೆಗಳು ಬೇಕು. ಈ ಸೌಲಭ್ಯ ಪಡೆಯಲು ಮೇಲೆ ನೀಡಿರುವ ಸೇವಾ ಸಿಂಧು ನಲ್ಲಿ ಅರ್ಜಿಗಳನ್ನು ಸಲ್ಲಿಸಿ.
ರಾಜ್ಯದ ಮಹಿಳೆಯರ ಸಬಲೀಕರಣ ಕ್ಕಾಗಿ ಸರ್ಕಾರ ಈ ಯೋಜನೆ ಜಾರಿಗೆ ತಂದಿದ್ದು, ಅರ್ಜಿಗಳನ್ನುಸಲ್ಲಿಸಲು ಈ ಕೆಳಗಿನ ದಾಖಲೆಗಳು ಬೇಕು.
ಕುಟುಂಬದ ಮಹಿಳಾ ಯಜಮಾನಿಯಮ ಆಧಾರ್ ಕಾರ್ಡ್.
ಮೊಬೈಲ್ ಸಂಖ್ಯೆ
ಬ್ಯಾಂಕ್ ಅಕೌಂಟ್ ನಂಬರ್ ಮತ್ತು IFSC ಕೋಡ್.
ಆಧಾರ್ ಕಾರ್ಡ್ ಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿರಬೇಕು.
ಬ್ಯಾಂಕ್ ಖಾತೆಗೂ ಆಧಾರ್ ಸಂಖ್ಯೆ ಲಿಂಕ್ ಆಗಿರಬೇಕು.
ರೇಷನ್ ಕಾರ್ಡ್ ಸಂಖ್ಯೆ.
ಚುನಾವಣ ಗುರುತಿನ ಚೀಟಿ. ಈ ದಾಖಲೆಗಳನ್ನು ಹೊಂದಿರಬೇಕು. ಹಾಗಿದ್ದರೆ ಈ ಯೋಜನೆಯ ಸೌಲಭ್ಯ ಪಡೆಯಬಹುದು. ಹೆಚ್ಚಿನ ಮಾಹಿತಿಯನ್ನು ಪಡೆಯಲು https://sevasindhuservices.kar.nic. in ಲಿಂಕ್ ಕ್ಲಿಕ್ ಮಾಡಿ.
ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗೆ ತೆರಳಿ ಅರ್ಜಿಗಳನ್ನು ಸಲ್ಲಿಸಿ. ಸೇವಾಸಿಂಧು, ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಹಾಗೂ ಬಪೂಜಿ ಸೇವಾ ಕೇಂದ್ರಗಳಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು.
ಗೃಹ ಲಕ್ಷ್ಮಿ ಯೋಜನೆಗೆ (Gruha Lakshmi Yojane )ಯಾರು ಅರ್ಜಿ ಸಲ್ಲಿಸಬಹುದು.
ಕರ್ನಾಟಕ ಸರ್ಕಾರದ ಗೃಹ ಲಕ್ಷ್ಮಿ ಯೋಜನೆಗೆ (Gruha lakshmi yojane) ಯಾರು ಅರ್ಜಿಗಳನ್ನು ಸಲ್ಲಿಸಲು ಅರ್ಹತೆ ಹೊಂದಿದ್ದಾರೆ ಎಂಬ ಪ್ರಶ್ನೆ ಗೆ ಉತ್ತರ ಎಲ್ಲಿದೆ. ಕರ್ನಾಟಕ ರಾಜ್ಯದ ಮಹಿಳೆಯರು ಅರ್ಜಿಗಳನ್ನು ಸಲ್ಲಿಸಬಹುದು ಆದರೆ ಕೆಲವು ನಿಯಮಗಳು ಮತ್ತು ಷರತ್ತು ಇದೆ.
ಈ ಯೋಜನೆ ಗೆ ಅರ್ಜಿಗಳನ್ನು ಸಲ್ಲಿಸಲು ಕೆಲವು ನಿಯಮ ಮತ್ತು ಷರತ್ತುಗಳು ಹೀಗಿವೆ.
ಕುಟುಂಬ ಯಜಮಾನಿ ಯಾವುದೇ ಸರ್ಕಾರಿ ಕೆಲಸದಲ್ಲಿ ಇರಬಾರದು. ಮತ್ತು ಕುಟುಂದಲ್ಲಿ ಅವರ ಗಂಡ, ಮಕ್ಕಳು ಸಹ ಸರ್ಕಾರಿ ಕೆಲಸದಲ್ಲಿ ಇರಬಾರದು.
ಯಾವುದೇ ಸರ್ಕಾರಿ ಸೌಲಭ್ಯ ಪಡೆಯುತ್ತಿರಬಾರದು.
ಆದಾಯ 1.20 ಲಕ್ಷ ಮೀರಿರಬಾರದು.
ಯಾವುದೇ ಸರ್ಕಾರಿ ಪಿಂಚಣಿ ಪಡೆಯುವವರು. ಈ ಮೇಲಿನ ಸೌಲಭ್ಯ ಪಡೆಯದೇ ಇರುವ ಕುಟುಂಬದ ಮಹಿಳಾ ಯಜಮಾನಿ ಅರ್ಜಿಗಳನ್ನು ಸಲ್ಲಿಸಬಹುದು.
ಗೃಹ ಲಕ್ಷ್ಮಿ ಹಣ ಜಮಾ ಆಗಿರುವುದು ಹೇಗೆ ತಿಳಿಯಬಹುದು.
ಗೃಹ ಲಕ್ಷ್ಮಿ ಯೋಜನೆ ಗೆ ಅರ್ಜಿಗಳನ್ನು ಸಲ್ಲಿಸಿ. ಎಲ್ಲಾ ಪರಿಶೀಲನೆ ನಂತರ ಅರ್ಜಿ ಅನುಮೋದನೆ ಅದ ಮೇಲೆ ಹಣ ಜಮಾ ಆಗಿರುವುದು ಹೇಗೆ ತಿಳಿದುಕೊಳ್ಳುವುದು ಎಂಬ ಪ್ರಶ್ನೆಗೆ ಉತ್ತರ ಇಲ್ಲಿ ನೀಡಲಾಗಿದೆ.
ಸೇವಾ ಸಿಂಧು ಪೋರ್ಟಲ್ ನಲ್ಲಿ ತಿಳಿಯಬಹುದು. https://sevasindhuservices.kar.nic. ಇನ್
ಅಥವಾ ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್, ಬಪೂಜಿ ಸೇವಾ ಕೇಂದ್ರ ಗಳಲ್ಲಿಯೂ ಸಹ ತಿಳಿದುಕೊಳ್ಳಿ. ಅರ್ಜಿಗಳನ್ನು ಸಲ್ಲಿಸುವಾಗ ಸರಿಯಾಗದ ಬ್ಯಾಂಕ್ ಖಾತೆ ಸಂಖ್ಯೆ ನೀಡಿ.
ಈ ಯೋಜನೆ ಯ ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ನೀವು ನಿಮ್ಮ ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿರಬೇಕು. ಇಲ್ಲದಿದ್ದರೆ ಹಣ ಜಮಾ ಆಗುವುದಿಲ್ಲ.ಒಟ್ಟಾರೆಯಾಗಿ ಈ ಯೋಜನೆಯಿಂದ ಮಹಿಳೆಯರಿಗೆ ಆರ್ಥಿಕ ಸಹಾಯ ನೀಡಿದ ಹಾಗೆ ಆಗಿದೆ.