Tharak7star

HSRP ನಂಬರ್ ಪ್ಲೇಟ್ ಅಂದ್ರೆ ಏನು? ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಗಾಗಿ ನೋಂದಣಿ ಹೇಗೆ Free2024.

HSRP

ಏನಿದು ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್?

HSRP ಹೈ ಸೆಕ್ಯೂರಿಟಿ ರಿಜಿಸ್ಟ್ರೇರೇಷನ್ ಪ್ಲೇಟ್ ಇದು ಅತ್ಯಧಿಕ ಭದ್ರತೆಯ ನಂಬರ್ ಪ್ಲೇಟ್. ಇದು ಟೆಂಪರ್ ಫ್ರೂಫ್ ಹೊಂದಿದ್ದು,ನಂಬರ್ ಮಾರ್ಪಡು ಮಾಡಲಾಗದಂತಹ ಲಾಕ್ ಹೊಂದಿದೆ.ಅಂದರೆ ಒಮ್ಮೆ ಈ ನಂಬರ್ ಪ್ಲೇಟ್ ಅಳವಡಿಸಿದರೆ ಅದನ್ನು ಸುಲಭವಾಗಿ ತೆಗೆಯಲು ಸಾಧ್ಯವಿಲ್ಲ. ಎಲ್ಲಾ  ನಂಬರ್ ಪ್ಲೇಟ್ ಗಳು ಒಂದೇ ರೀತಿಯ ವಿನ್ಯಾಸ ಹೊಂದಿರುತ್ತವೆ. ಎಡ ಭಾಗದಲ್ಲಿ ನೀಲಿ ಬಣ್ಣದ ಚಕ್ರ ಇರುತ್ತದೆ. ವಾಹನದ ರೀತಿಗೆ ಹೊಂದುವ ಹಾಗೆ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಇರುತ್ತದೆ. ಇದರೊಂದಿಗೆ ಈ ನಂಬರ್ ಪ್ಲೇಟ್ ನಲ್ಲಿ ಇಂಡಿಯಾ ಎಂಬ ಸ್ಟ್ಯಾಂಪ್ ಇರುತ್ತದೆ. ಖಾಸಗಿ ವಾಹನಗಳ ನಂಬರ್ ಪ್ಲೇಟ್ ಕಪ್ಪು ಇರುತ್ತದೆ.

HSRP Number plate ಅಳವಡಿಕೆ ಕಡ್ಡಾಯವಾಗಿ ಮಾಡಬೇಕೆ?

ಹೌದು 1989 ರ ಸಿ ಎಂ ವಿ ಆರ್ ಕಾಯಿದೆಯ ನಿಯಮ 50 ರಡಿ ಎಲ್ಲಾ ವಾಹನಗಳು ಈ ಹೆಚ್ ಎಸ್ ಆರ್ ಪಿ  ನಂಬರ್ ಪ್ಲೇಟ್ ಅಳವಡಿಸುವುದು ಕಡ್ಡಾಯವಾಗಿದೆ. 2019 ಕ್ಕಿಂತ ಮೊದಲು ವಾಹನ ಖರೀದಿಸಿದವರು ತಮ್ಮ ಬೈಕ್, ಕಾರು ಹಾಗೂ ಇತರೆ ವಾಹನಗಳಿಗೆ HSRP (ಹೈ ಸೆಕ್ಯೂರಿಟಿ ರಿಜಿಸ್ಟ್ರೇರೇಷನ್ ಪ್ಲೇಟ್ ) ನಂಬರ್ ಪ್ಲೇಟ್ ಅಳವಡಿಸಬೇಕು. ಈ ಕುರಿತು ಕಳೆದ ವರ್ಷ ಸೂಚನೆ ನೀಡಲಾಗಿತ್ತು. ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸದೇ ಇದ್ದರೆ 500-1000 ರೂ ದಂಡ ವಿಧಿಸಬಹುದು.

HSRP (ಹೆಚ್ ಎಸ್ ಆರ್ ಪಿ ) ನಂಬರ್ ಪ್ಲೇಟ್ ಗೆ ಅರ್ಜಿ ಸಲ್ಲಿಸಲು ಯಾವ ದಾಖಲೆ ಗಳು ಬೇಕು?

HSRP ನಂಬರ್ ಪ್ಲೇಟ್ ಗೆ ಅರ್ಜಿ ಸಲ್ಲಿಸಲು ವಾಹನ ನೋಂದಣಿ ಸಂಖ್ಯೆ, ಛಾಸಿ ಸಂಖ್ಯೆ, ಎಂಜಿನ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ (Mobile number ) ಕಡ್ಡಾಯವಾಗಿ ಬೇಕು. ಈ ಎಲ್ಲಾ ಮಾಹಿತಿಗಳು ನಿಮ್ಮ ವಾಹನದ ರಿಜಿಸ್ಟ್ರೇಶನ್ ಸರ್ಟಿಫಿಕೇಟ್ ನಲ್ಲಿ ಇರುತ್ತದೆ. ಈ ಎಲ್ಲಾ ಮಾಹಿತಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

HSRP ನಂಬರ್ ಪ್ಲೇಟ್ ಕಡ್ಡಾಯವಾಗಿ ಅಳವಡಿಸದಿದ್ದರೆ ದಂಡ ಬೀಳುವುದು ಖಚಿತ.

HSRP ( ಹೆಚ್ ಎಸ್ ಆರ್ ಪಿ ) ನಂಬರ್ ಪ್ಲೇಟ್ ಕಡ್ಡಾಯವಾಗಿದೆ. ಹೈ ಸೆಕ್ಯೂರಿಟಿ ರಿಜಿಸ್ಟ್ರೇರೇಷನ್ ಪ್ಲೇಟ್  ಸರ್ಕಾರದ ಆದೇಶದಂತೆ 2019 ಕ್ಕಿಂತ ಮೊದಲು ವಾಹನ ಖಾರೀದಿಸಿದ ಎಲ್ಲರು ಕಡ್ಡಾಯವಾಗಿ ಈ ನಂಬರ್ ಪ್ಲೇಟ್ ಅಳವಡಿಸುವುದು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದಂಡ ಕಟ್ಟಬೇಕಾಗುತ್ತದೆ. ರಾಜ್ಯ ಸರ್ಕಾರ ಅನುಮತಿ ನೀಡಿರುವ ಅಧಿಕೃತ ಡೀಲರ್ ಬಳಿ ಮಾತ್ರವೇ ಈ ಹೆಚ್ ಎಸ್ ಆರ್ ಪಿ  ನಂಬರ್ ಪ್ಲೇಟ್ ಹಾಕಿಸಿ.

HSRP ನಂಬರ್ ಪ್ಲೇಟ್ ಅಳವಡಿಕೆ ಪ್ರಕ್ರಿಯೆ ಹೇಗೆ?

HSRP ನಂಬರ್ ಪ್ಲೇಟ್ ಅಳವಡಿಸಲು ವಾಹನದಾರರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಕರ್ನಾಟಕ ಸಾರಿಗೆ ಇಲಾಖೆಯ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಿ. ಕರ್ನಾಟಕ ಸಾರಿಗೆ ಇಲಾಖೆಯ ಅಧಿಕೃತ ವೆಬ್ಸೈಟ್ ವಿವರ ಹೀಗಿದೆ. https://transport.karnataka.gov.in ಗೆ ಭೇಟಿ ನೀಡಿ.

ನಂತರ ಬುಕ್  ಹೆಚ್ ಎಸ್ ಆರ್ ಪಿ  ಮೇಲೆ ಕ್ಲಿಕ್ ಮಾಡಿ. ನಿಮ್ಮ ವಾಹನದ ಉತ್ಪಾದಕ ಕಂಪನಿ ಆಯ್ಕೆ ಮಾಡಬೇಕು.

ನಂತರ ನಿಮ್ಮ ವಾಹನದ ಬೇಸಿಕ್ ಮಾಹಿತಿಯನ್ನು ನೀಡಬೇಕು. ಅರ್ಜಿ ಭರ್ತಿ ಮಾಡಬೇಕು.

ಅದಾದ ನಂತರ ನಿಮ್ಮ ಡೀಲರ್ ಲೊಕೇಶನ್ ಅನ್ನು, ನಿಮ್ಮ ಅನುಕೂಲಕ್ಕೆ ತಕ್ಕಂತೆ ಆಯ್ಕೆ ಮಾಡಬೇಕು. ಈ ನಂಬರ್ ಪ್ಲೇಟ್ ಫಿಕ್ಸ್ ಮಾಡುವುದಕ್ಕಾಗಿ ಡೀಲರ್ ಲೊಕೇಶನ್ ಆಯ್ಕೆ ಮಾಡಬೇಕು.

 ಈ Number plate ಶುಲ್ಕವನ್ನು ಆನ್ಲೈನ್ ಮೂಲಕವೇ ಪಾವತಿಸಬೇಕು.

ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸಲು ಅರ್ಜಿ ಸಲ್ಲಿಸಿದ ಬಳಿಕ ನಿಗದಿತ ದಿನಾಂಕ ನೀಡಲಾಗುವುದು. ಒಂದು ವೇಳೆ ನಿಗದಿ ಪಡಿಸಿದ ದಿನಾಂಕ ಕ್ಕೆ ಅಳವಡಿಸಲು ಆಗದಿದ್ದರೆ ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿ ಪಡೆಯಲು https://transport.Karnataka.gov. in

HSRP ನಂಬರ್ ಪ್ಲೇಟ್ ಯಾವೆಲ್ಲ ಅಂಶಗಳನ್ನು ಹೊಂದಿರುತ್ತದೆ.?

HSRP (ಹೈ ಸೆಕ್ಯೂರಿಟಿ ರಿಜಿಸ್ಟ್ರೇರೇಷನ್ ಪ್ಲೇಟ್) ನಂಬರ್ ಪ್ಲೇಟ್ ನಲ್ಲಿ ಈ ಕೆಳಗಿನ ಪ್ರಮುಖ ದಾಖಲೆ ಇರುತ್ತದೆ. ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಒಂದು ಸೆಕ್ಯೂರಿಟಿ ಸಂಖ್ಯೆಯಾಗಿದೆ. ಇದು ವಾಹನದ ಸುರಕ್ಷತೆ ಕಾಪಾಡುತ್ತದೆ. ಇದರಲ್ಲಿ ವಾಹನದ ಎಲ್ಲಾ ಮಾಹಿತಿ ಇರುತ್ತದೆ.

  1. ವಾಹನ ಸಂಖ್ಯೆ ಯನ್ನು ಹೊಂದಿರಿತ್ತದೆ.
  2. ವಾಹನದ ಛಾಸಿ ನಂಬರ್ ಇರುತ್ತದೆ.
  3. ವಾಹನದ ರಿಜಿಸ್ಟ್ರೇಷನ್ ನಂಬರ್ ಹೊಂದಿರುತ್ತದೆ.
  4. ವಾಹನ ಮಾಲೀಕರ ಮಾಹಿತಿ ಇರುತ್ತದೆ.
  5. ವಾಹನದ ಇನ್ಶೂರೆನ್ಸ್ ಮಾಹಿತಿಯನ್ನು ಹೊಂದಿರುತ್ತದೆ.
  6. ಕೋಮಿಯಂ ಚಿನ್ಹೆ ಹೊಂದಿರುತ್ತದೆ. ಅಂದರೆ ಅಶೋಕ ಚಕ್ರದ ಚಿನ್ಹೆ ಇರುತ್ತದೆ. ಒಟ್ಟಾರೆಯಾಗಿ ವಾಹನ ಮತ್ತು ವಾಹನದಾರರ ಸಂಪೂರ್ಣ ಮಾಹಿತಿಯನ್ನು ಈ  ನಂಬರ್ ಪ್ಲೇಟ್ ಹೊಂದಿರುತ್ತದೆ.

HSRP ನಂಬರ್ ಪ್ಲೇಟ್ ಶುಲ್ಕ ಎಷ್ಟು?

HSRP ನಂಬರ್ ಪ್ಲೇಟ್ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಪಡೆಯಲು ನಿಗದಿತ ಶುಲ್ಕ ಇದೆ. ಬೈಕ್ ವಾಹನದಾರರು ರೂ 472 ಪಾವತಿಸಬೇಕು.ಇದು ದ್ವಿಚಕ್ರ ವಾಹನದ ಜೋಡಿ ನಂಬರ್ ಪ್ಲೇಟ್ ನ ಶುಲ್ಕ ವಾಗಿರುತ್ತದೆ. ಹಾಗೆಯೇ ನಾಲ್ಕು ಚಕ್ರ ವಾಹನದಾರರು ರೂ 690 ಪಾವತಿಸಿ ಜೋಡಿ ಈ ನಂಬರ್ ಪ್ಲೇಟ್ ಪಡೆಯಬಹುದು. ವಾಹನದಾರರು ಸರ್ಕಾರ ನಿಗಧಿ ಪಡಿಸಿದ ಅಧಿಕೃತ ಡೀಲರ್ ಬಳಿ ತಮ್ಮ ವಾಹನಕ್ಕೆ ಹೆಚ್ ಎಸ್ ಆರ್ ಪಿ  ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು.

ಹೈ ಸೆಕ್ಯೂರಿಟಿ ರಿಜಿಸ್ಟ್ರೇರೇಷನ್ ಪ್ಲೇಟ್ ಒಂದು ಸುರಕ್ಷಿತ ವಾಹನ ಸಂಖ್ಯೆಯಾಗಿದೆ. ನಮ್ಮ ವಾಹನದ ಸುರಕ್ಷತೆ ಮುಖ್ಯವಾಗಿರುತ್ತದೆ. ಆದ್ದರಿಂದ ವಾಹನ ಮಾಲೀಕರು ಕಡ್ಡಾಯವಾಗಿ ಈ ನಂಬರ್ ಪ್ಲೇಟ್ ಅನ್ನು ಅಳವಡಿಸಿ ತಮ್ಮ ವಾಹನಕ್ಕೆ ಸೆಕ್ಯೂರಿಟಿ ಪಡೆಯಬಹುದು.

 ಒಂದು ಮಹತ್ವದ ಯೋಜನೆ. ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ವಾಹನದ ಸುರಕ್ಷತೆ ಕಾಪಾಡುತ್ತದೆ.

HSRP ನಂಬರ್ ಪ್ಲೇಟ್ ಕೊನೆಯ ದಿನಾಂಕ ಯಾವುದು?

HSRP ನಂಬರ್ ಪ್ಲೇಟ್ ಅಳವಡಿಸಲು ಸರ್ಕಾರ ನೀಡಿದ ಕೊನೆಯ ದಿನಾಂಕ ವನ್ನು ಮುಂದುಡಿದೆ. ಸರ್ಕಾರ ಈ ಹಿಂದೆ ನಿಗದಿ ಪಡಿಸಿದ ದಿನಾಂಕ ವನ್ನು 3 ತಿಂಗಳು ಮುಂದೂಡಿದೆ. ಇದರಿಂದ ವಾಹನ ಮಾಲೀಕರಿಗೆ ಟೆನ್ಷನ್ ಕಡಿಮೆಯಾಗಿದೆ. ಕರ್ನಾಟಕ ಸಾರಿಗೆ ಇಲಾಖೆ ವಾಹನಗಳಿಗೆ ಈ ನಂಬರ್ ಪ್ಲೇಟ್ ಅಳವಡಿಸಲು ನೀಡಿದ ಗಡುವು ಮೂರು ತಿಂಗಳು ಮುಂದೂದಿದೆ. ಈ ಹಿಂದೆ ಫೆಬ್ರವರಿ 17. 2024 ಕೊನೆಯ ದಿನಾಂಕ ನಿಗದಿ ಮಾಡಲಾಗಿತ್ತು. ಈಗ ಮುಂದಿನ 3 ತಿಂಗಳು ಅವಕಾಶ ಕಲ್ಪಿಸಲಾಗಿದೆ. ಇದರಿಂದ ವಾಹನ ಮಾಲೀಕರು ಸಂತೋಷ ಹೊಂದಿದ್ದಾರೆ. ಯಾವುದೇ ಅಂತಿಮ ದಿನಾಂಕ ವನ್ನು ಪ್ರಕಟಿಸಿಲ್ಲ. ಹೆಚ್ಚಿನ ಮಾಹಿತಿಯನ್ನು ಪಡೆಯಲು ಕರ್ನಾಟಕ ಸಾರಿಗೆ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಬಹುದು.

Leave a Reply

Your email address will not be published. Required fields are marked *