Blogging 2024 ಬ್ಲಾಗಿಂಗ್ ಆನ್ಲೈನ್ ಮೂಲಕ ಹಣ ಮಾಡುವ ಒಂದು ಅತ್ಯುತ್ತಮ ವೇದಿಕೆಯಾಗಿದೆ.ಬ್ಲಾಗಿಂಗ್ (blogging) 2024 ರಲ್ಲಿ ಆನ್ಲೈನ್ ಮೂಲಕ ತಮ್ಮ ಲೇಖನವನ್ನು ಪ್ರಕಟಿಸಿ ಅದರ ಮೂಲಕ ಹಣ ಗಳಿಸಬಹುದು.
ಬ್ಲಾಗಿಂಗ್ (blogging) 2024 ರಲ್ಲಿ ಆನ್ಲೈನ್ ಮೂಲಕ ತಮ್ಮ ಲೇಖನವನ್ನು ಪ್ರಕಟಿಸಿ ಅದರ ಮೂಲಕ ಹಣ ಗಳಿಸಬಹುದು. ಒಂದು ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದಂತೆ ಲೇಖನಗಳನ್ನು ಬರೆದು, ಆನ್ಲೈನ್ ವೇದಿಕೆಗಳ ಮೂಲಕ ಲೇಖನಗಳನ್ನು ಪ್ರಕಟಿಸಿ, ಗೂಗಲ್ ಆಡ್ಸೆನ್ಸ್ (Google Adsense) ಮೂಲಕ ಹಣ ಗಳಿಸಬಹುದು. ಈಗಿನ ಕಾಲದಲ್ಲಿ ಸೋಶಿಯಲ್ ಮೀಡಿಯಾ (Social Media)ದ ಮೂಲಕ ತಮ್ಮ ವಿಷಯವನ್ನು ಪ್ರಕಟಿಸಿ, ಅದಕ್ಕೆ ಸಂಬಂಧಿಸಿದಂತೆ ವೀವ್ಸ್ (views)ಗಳನ್ನು ಪಡೆದು, ಗೂಗಲ್ ಆಡ್ಸೆನ್ಸ್ ಅನುಮೋದನೆ ಪಡೆದು, ನಮ್ಮ ವಿಷಯಕ್ಕೆ ಗೂಗಲ್ ಕಡೆಯಿಂದ ಜಾಹೀರಾತುಗಳನ್ನು ಪ್ರಕಟಿಸಿ, ಉತ್ತಮ ರೀತಿಯಲ್ಲಿ ಹಣವನ್ನು ಗಳಿಸಬಹುದು. ಈ ಲೇಖನದಲ್ಲಿ ನಾವು ಅತ್ಯುತ್ತಮವಾದ ಬ್ಲಾಗಿಂಗ್ ವಿಷಯವನ್ನು ಹೇಗೆ ರಕ್ಷಿಸುವುದು?., ಬ್ಲಾಗಿಂಗ್ ಎಂದರೇನು?. ಬ್ಲಾಗಿಂಗ್ ಮೂಲಕ ಹಣ ಹೇಗೆ ಗಳಿಸುವುದು?. ಮತ್ತು ಬ್ಲಾಗಿಂಗ್ ನ ಉಪಯೋಗಗಳೇನು?, ಬ್ಲಾಗಿಂಗ್ ನಲ್ಲಿ ಸಕ್ಸಸ್ ಪಡೆಯುವುದು ಹೇಗೆ ಎಂಬುದನ್ನು ತಿಳಿಯೋಣ.
Blogging : ಬ್ಲಾಗಿಂಗ್ ಎಂದರೇನು?.
ಮೊದಲಿಗೆ ನಾವು ಬ್ಲಾಗಿಂಗ್ ಎಂದರೇನು ಎಂಬುದನ್ನು ತಿಳಿಯೋಣ. ಒಂದು ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದಂತೆ ಲೇಖನಗಳನ್ನು ಬರೆದು, ವೆಬ್ಸೈಟ್ ಮೂಲಕ ಆನ್ಲೈನ್ ನಲ್ಲಿ ಪ್ರಕಟಿಸುವುದು. ನಮಗೆ ಆಸಕ್ತಿ ಇರುವ ಯಾವುದಾದರು ಒಂದು ವಿಷಯದ ಬಗ್ಗೆ ಸಂಕ್ಷಿಪ್ತವಾಗಿ ಒಂದು ಲೇಖನವನ್ನು ಬರೆದು, ಲೇಖನ ಓದುಗಾರರಿಗೆ ಸಂತೋಷಪಡಿಸುವ ಹಾಗೆ, ಮತ್ತೆ ಮತ್ತೆ ಲೇಖನವನ್ನು ಓದುವಂತೆ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ.
ಯಾವ ಯಾವ ವಿಷಯಗಳ ಬಗ್ಗೆ ಲೇಖನವನ್ನು ಪ್ರಕಟಿಸಬಹುದು. ಅದರಲ್ಲೂ ಪ್ರಮುಖವಾದಂತಹ ವಿಷಯಗಳು ಯಾವುವೆಂದರೆ,
- ಜೀವನ ಮತ್ತು ಫ್ಯಾಶನ್
- ತಂತ್ರಜ್ಞಾನ ಮತ್ತು ವಿಜಿಟ್ ಗಳು
- ಪ್ರವಾಸ ಮತ್ತು ಸಾಹಸ
- ಆಹಾರ
- ಆರೋಗ್ಯ ಮತ್ತು ಹೃದಯವಂತಿಕೆ.
- ಶಿಕ್ಷಣ ಮತ್ತು ಕಲಿಕೆ.
- ವ್ಯಾಪಾರ ಮತ್ತು ಉದ್ಯಮಶೀಲತೆ.
ಈ ಮೇಲಿನ ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದಂತೆ ಲೇಖನಗಳನ್ನು ಬರೆದು, ತಮ್ಮ ವೆಬ್ ಸೈಟ್ ಗಳ ಮೂಲಕ ಲೇಖನಗಳನ್ನು ಪ್ರಕಟಿಸಿ, ಆನ್ಲೈನ್ ಮೂಲಕ ಹಣವನ್ನು ಗಳಿಸಬಹುದು.
ಅತ್ಯುತ್ತಮವಾದ ಲೇಖನವನ್ನು ರಚಿಸುವುದು ಹೇಗೆ?.
ಯಾವುದೇ ಲೇಖನವನ್ನು ರಚಿಸುವ ಮೊದಲು ನಾವು, ಒಂದು ನಿರ್ದಿಷ್ಟ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ಆ ವಿಷಯಕ್ಕೆ ಸಂಬಂಧಿಸಿದಂತೆ, ಅತ್ಯುತ್ತಮವಾದ ಮಾಹಿತಿಗಳನ್ನು ಸಂಗ್ರಹಿಸಬೇಕು. ನಂತರ ಒಂದು ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದಂತೆ ಲೇಖನಗಳನ್ನು ಬರೆಯಬೇಕು. ನಾವು ಬರೆಯುವ ಲೇಖನಗಳು, ಅರ್ಥಗರ್ಭಿತವಾಗಿ, ಅತ್ಯುತ್ತಮವಾದ ವಿಷಯವನ್ನು ಹೊಂದಿರಬೇಕು. ಆಗ ಮಾತ್ರ ಓದುಗರಿಗೆ ಲೇಖನವು ಇಷ್ಟವಾಗುತ್ತದೆ.
Important Massages : ಪ್ರತಿ ದಿನ ಟ್ರೆಂಡಿಂಗ್ ನ್ಯೂಸ್ ಮತ್ತು ಸರ್ಕಾರಿ ಯೋಜನೆಗಳು ಹಾಗೂ ಹೊಸ ಉದ್ಯೋಗ ಮತ್ತು ಹೊಸ ಸಿನಿಮಾ ಬಗ್ಗೆ ಮಾಹಿತಿಯನ್ನು ಪಡೆಯಲು ದಯವಿಟ್ಟು ನಮ್ಮ “Tharak7star Whatsapp Group Join Now” ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
ಅತ್ಯುತ್ತಮವಾದ (blogging) ಲೇಖನವನ್ನು ರಚಿಸುವ ಮೊದಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಬೇಕು.
- Choose A Best Niche: ಅತ್ಯುತ್ತಮ ವಿಷಯವನ್ನು ಆರಿಸಿ : ನಾವು ಲೇಖನಗಳನ್ನು ರಚಿಸುವ ಮೊದಲು ಒಂದು ನಿರ್ದಿಷ್ಟವಾದ ಮತ್ತು ಅತ್ಯುತ್ತಮವಾದ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕು. ಈ ವಿಷಯಕ್ಕೆ ಸಂಬಂಧಿಸಿದಂತೆ ನಾವು ಲೇಖನಗಳನ್ನು ರಚಿಸಿದರೆ, ಅದು ಒಂದು ಉತ್ತಮ ರೀತಿಯಲ್ಲಿ ಓದುಗಾರರಿಗೆ ತಲುಪುತ್ತದೆ. ಈಗಿನ ಕಾಲದಲ್ಲಿ ಅತ್ಯುತ್ತಮವಾದ ವಿಷಯಗಳೆಂದರೆ, ಹಣ ಗಳಿಸುವ ವಿಧಾನ, ಆನ್ಲೈನ್ ಮೂಲಕ ಹಣ ಗಳಿಸುವುದು, ಹಣಕಾಸಿನ ವಿಷಯಗಳು, ಆಹಾರ ಪದಾರ್ಥಗಳನ್ನು ತಯಾರಿಸುವುದು ಹೇಗೆ, ಹೊಸ ಹೊಸ ರೆಸಿಪಿಗಳ ಬಗ್ಗೆ, ಆರೋಗ್ಯ ಮಾಹಿತಿಗಳು, ಫಿಟ್ನೆಸ್ ಗೆ ಸಂಬಂಧಿಸಿದ ಮಾಹಿತಿಗಳು, ಶಿಕ್ಷಣಕ್ಕೆ ಸಂಬಂಧಿಸಿದ ಮಾಹಿತಿಗಳು ಮತ್ತು ಉದ್ಯೋಗಗಳ ಮಾಹಿತಿ ಈ ವಿಷಯಕ್ಕೆ ಸಂಬಂಧಿಸಿದಂತೆ ಲೇಖನಗಳನ್ನು ಪ್ರಕಟಿಸುವುದು ಉತ್ತಮವಾಗಿದೆ.
- ಉತ್ತಮ ವೇದಿಕೆಗಳನ್ನು ಆಯ್ಕೆ ಮಾಡಿ : Choose A Best Platforms :
ನಾವು ರಚಿಸಿದ ಲೇಖನಗಳನ್ನು ಪ್ರಕಟಿಸಲು, ನಾವು ಮೊದಲು ಉತ್ತಮವಾದ ವೇದಿಕೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಅಂದರೆ ವರ್ಡ್ ಪ್ರೆಸ್ (WordPress), ಬ್ಲಾಗರ್ (Blogger), ಮೀಡಿಯಂ (Medium) ಈ ರೀತಿಯ ಹೆಚ್ಚಿನ ಟ್ರಾಫಿಕ್ ಹೊಂದಿರುವ ಉತ್ತಮ ವೇದಿಕೆಯನ್ನು ಆಯ್ಕೆ ಮಾಡಿಕೊಳ್ಳಬೇಕು.
- Domain : ಉತ್ತಮ ಡೊಮೈನ್ ಆಯ್ಕೆ ಮಾಡಿ:
ನಾವು ಒಂದು ವಿಷಯವನ್ನು ಪ್ರಕಟಿಸುವ ಮೊದಲು, ಆ ವಿಷಯಕ್ಕೆ ಹೋಲಿಕೆಯಾಗುವಂತಹ ಒಂದು ಉತ್ತಮ ಡೊಮೈನ್ ಹೆಸರನ್ನು ಆಯ್ಕೆ ಮಾಡಿಕೊಳ್ಳಬೇಕು. ಇದು ನೀವು ಪ್ರಕಟಿಸುವ ವಿಷಯಕ್ಕೆ ಸಂಬಂಧಿಸಿದ, ಹೋಲಿಕೆಯಾಗುವಂತಹ Domain Name ಆಗಿರಬೇಕು.
- Web Hosting : ಉತ್ತಮ ವೆಬ್ ಪೋಸ್ಟಿಂಗ್ ಅನ್ನು ಆಯ್ಕೆ ಮಾಡಿ :
ನಾವು ಪ್ರಕಟಿಸುವ ಲೇಖನಗಳು ಒಂದು ನಿರ್ದಿಷ್ಟ ಜಾಗದಲ್ಲಿ ಸ್ಟೋರೇಜ್ ಮಾಡಲು ಒಂದು ಉತ್ತಮ ವೆಬ್ ಹೋಸ್ಟಿಂಗ್ ವೇದಿಕೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಇದರಿಂದ ನಮ್ಮ ಲೇಖನಗಳು ಸುರಕ್ಷಿತವಾಗಿ ಇರುತ್ತವೆ ಮತ್ತು ಬಹುಬೇಗ ಲೇಖನಗಳು ತೆರೆದುಕೊಳ್ಳಲು ಸಹಾಯವಾಗುತ್ತದೆ. ಇದರಿಂದಾಗಿ ಓದುಗರಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ.
- Website Design : ವೆಬ್ಸೈಟ್ ಡಿಸೈನ್ :
ನಮ್ಮ ವೆಬ್ ಸೈಟನ್ನು ಉತ್ತಮ ರೀತಿಯಲ್ಲಿ ಡಿಸೈನ್ ಮಾಡಿಕೊಳ್ಳಬೇಕು. ಓದುಗರಿಗೆ ಮತ್ತು ವೀಕ್ಷಕರಿಗೆ ಯಾವುದೇ ತೊಂದರೆಯಾಗದಂತೆ, ನಾವು ಪ್ರಕಟಿಸುವ ಲೇಖನಗಳು ಬಹುಬೇಗ ತೆರೆದುಕೊಳ್ಳಬೇಕು.
ಉತ್ತಮ ಗುಣಮಟ್ಟದ ಮತ್ತು ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದಂತೆ, ಒಂದು ಉತ್ತಮ ರೀತಿಯಲ್ಲಿ ಲೇಖನಗಳನ್ನು ಪ್ರಕಟಿಸಿ. ಇದರಿಂದ ನಿಮ್ಮ ವೆಬ್ಸೈಟ್ಗೆ ವೀಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಇದರಿಂದ ನಿಮಗೆ ಹೆಚ್ಚಿನ ಹಣ ಗಳಿಸಲು ಸಹಾಯವಾಗುತ್ತದೆ. ಗುಣಮಟ್ಟದ ಲೇಖನಗಳನ್ನು ಪ್ರಕಟಿಸಿ, ಆಕರ್ಷಿತವಾಗಿರುವಂತಹ, ಆ ವಿಷಯಕ್ಕೆ ಸಂಬಂಧಿಸಿದಂತಹ, ಉತ್ತಮ ಕ್ವಾಲಿಟಿ ಇರುವ ಫೋಟೋಗಳನ್ನು ಅಪ್ಲೋಡ್ ಮಾಡಿ.
ಬ್ಲಾಗಿಂಗ್ (Blogging)ಮೂಲಕ ಹಣ ಗಳಿಸುವುದು ಹೇಗೆ?.
ಆನ್ಲೈನ್ ಮೂಲಕ ಹಣ ಗಳಿಸಲು ಬ್ಲಾಗಿಂಗ್ ಒಂದು ಉತ್ತಮ ವೇದಿಕೆಯಾಗಿದೆ. ನಾವು ಒಂದು ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದಂತೆ ಉತ್ತಮ ಲೇಖನಗಳನ್ನು ಬರೆದು ಪ್ರಕಟಿಸಿ ಹಣವನ್ನು ಗಳಿಸಬಹುದು.
ಬ್ಲಾಗಿಂಗ್ ಮೂಲಕ ಹಣ ಗಳಿಸುವ ವಿಧಾನಗಳನ್ನು ತಿಳಿದುಕೊಳ್ಳೋಣ.
- “Advertising”= Google Adsense : ಗೂಗಲ್ ಆಡ್ಸೆನ್ಸ್ :
ಗೂಗಲ್ ಮೂಲಕ ನಾವು ಉತ್ತಮ ರೀತಿಯಲ್ಲಿ ಹಣವನ್ನು ಗಳಿಸಬಹುದು. ನಾವು ರಚಿಸುವ ಲೇಖನಗಳು, ನಮ್ಮ ವೆಬ್ ಸೈಟ್ ಅಲ್ಲಿ ಪ್ರಕಟಿಸಿದ ನಂತರ, ಗೂಗಲ್ ಆಡ್ಸೆನ್ಸ್ ನವರ ಎಲ್ಲಾ ರೀತಿಯ ನಿಬಂಧನೆಗಳಿಗೆ ಹೊಂದಿಕೆಯಾಗುವಂತೆ ನಮ್ಮ ವೆಬ್ಸೈಟ್ ಇದ್ದರೆ, ಗೂಗಲ್ ಕಡೆಯಿಂದ ನಮ್ಮ ಲೇಖನಗಳ ಮೇಲೆ ಜಾಹೀರಾತುಗಳನ್ನು ಪ್ರಕಟಿಸಿ, ಜಾಹೀರಾತುಗಳಿಂದ ಬರುವ ಹಣದಲ್ಲೇ ಸ್ವಲ್ಪ ಹಣವನ್ನು ಗೂಗಲ್ ಇಟ್ಟುಕೊಂಡು, ಉಳಿದ ಹಣವನ್ನು ನಮಗೆ ನೀಡುತ್ತದೆ. ಮೊದಲಿಗೆ ನಾವು ನಮ್ಮ ವೆಬ್ಸೈಟ್ ಅನ್ನು ಗೂಗಲ್ ಅಡಸೆನ್ಸ್ ನವರ ನಿಯಮ ಮತ್ತು ನಿಬಂಧನೆಗಳಿಗೆ ಸರಿಹೊಂದುವ ರೀತಿಯಲ್ಲಿ ರಚಿಸಬೇಕು.
- ಆಫಿಲೆಟ್ ಮಾರ್ಕೆಟಿಂಗ್ (Affiliate marketing ):
ಈ ಮಾರ್ಕೆಟಿಂಗ್ ಮೂಲಕ ನಾವು ಉತ್ತಮ ರೀತಿಯಲ್ಲಿ ಹಣವನ್ನು ಗಳಿಸಬಹುದು. ನಾವು ಯಾವುದೇ ರೀತಿಯ ಒಂದು ಉತ್ತಮ ವೇದಿಕೆಯಿಂದ, ಒಂದು ಉತ್ತಮ ಪ್ರಾಡಕ್ಟ್ ಅನ್ನು ಮಾರಾಟ ಮಾಡುವ ಮೂಲಕ ಹಣವನ್ನು ಗಳಿಸಬಹುದು.
- “Sponsored Posts”=ಪ್ರಯೋಜಿತ ಪೋಸ್ಟ್ ಗಳು :
ಪೋಷಕ ವಿಷಯಕ್ಕಾಗಿ ಬ್ರಾಂಡ್ ಗಳೊಂದಿಗೆ ಪಾಲುದಾರರಾಗಿ, ಬ್ರಾಂಡ್ ಪ್ರಮೋಷನ್ ಮಾಡುವ ಮೂಲಕ ಹಣ ಗಳಿಸಬಹುದು.
- “Product Deals”=ಉತ್ಪನ್ನ ಡೀಲ್ ಗಳು :
ಡಿಜಿಟಲ್ ಉತ್ಪನ್ನ ಮಾರಾಟ ಮಾಡುವ ಮೂಲಕ ಹಣ ಗಳಿಸಬಹುದು. ಉದಾಹರಣೆಗೆ ಡಿಜಿಟಲ್ ಬುಕ್, ಕೋರ್ಸ್ ಗಳು ಇತ್ಯಾದಿ.
- “Classes and Subscription”=Grounded models :
ಆನ್ಲೈನ್ ಮೂಲಕ ತರಬೇತಿ ನೀಡುವ ಮೂಲಕ ಹಣ ಗಳಿಸಬಹುದು.
ವಿಶೇಷ ಸೂಚನೆ : “Tharak7star” ವೆಬ್ಸೈಟ್ ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ. ಅಧಿಕೃತ, ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುವುದು. ವಂದನೆಗಳು.