Tharak7star

Employee self service : ESS.

Employee Self Service

ರಾಜ್ಯ ಸರ್ಕಾರಿ ನೌಕರರ ಅನುಕೂಲದ ದೃಷ್ಟಿಯಿಂದ ರಾಜ್ಯ ಸರ್ಕಾರದ HRMS ನಿರ್ದೇಶನಲಾಯವು ESS (employee self service) ಪೋರ್ಟಲ್ ಅನ್ನು ಸಿದ್ದ ಪಡಿಸಿದೆ.

ರಾಜ್ಯ ಸರ್ಕಾರದ ಎಲ್ಲಾ ನೌಕರರು HRMS ನ ಮೂಲಕ ಹೊಸದಾಗಿ ಸಿದ್ದಪಡಿಸಿದ ESS ( Employee Self Service) ಪೋರ್ಟಲ್ ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡುವ ಬಗ್ಗೆ ಸರ್ಕಾರ ಮಹತ್ವದ ಆದೇಶವನ್ನು ಹೊರಡಿಸಿದೆ.ಸರ್ಕಾರಿ ನೌಕರರಿಗೆ ಅನುಕೂಲ ಮಾಡಿಕೊಡಲು ಈ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಈ ಪೋರ್ಟಲ್ ಬಳಕೆದಾರರ ಸ್ನೇಹಿಯಾಗಿದೆ.ಇದರಿಂದ ಅನೇಕ ಸೌಲಭ್ಯಗಳನ್ನು ಸರ್ಕಾರಿ ನೌಕರರು ಪಡೆಯಬಹುದು. ಈ ಲೇಖನದಲ್ಲಿ ನಾವು ಹೊಸದಾಗಿ ಸಿದ್ದಪಡಿಸಿದ ESS ಪೋರ್ಟಲ್ ಬಗೆಗಿನ ಎಲ್ಲಾ ಮಾಹಿತಿಯನ್ನು ನೀಡಿದ್ದೇವೆ. ಮತ್ತು ಅದರ ಸೌಲಭ್ಯ ಹಾಗೂ ಪ್ರಯೋಜನಗಳನ್ನು ವಿವರಿಸಲಾಗಿದೆ.ರಾಜ್ಯ ಸರ್ಕಾರಿ ನೌಕರರು ಸ್ವತಹ ತಾವೇ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಬಹುದು.ಸರ್ಕಾರಿ ನೌಕರರು ತಮ್ಮ ಕೆ ಜಿ ಐ ಡಿ (KGID) ಮೂಲಕ ಲಾಗಿನ್ ಆಗಿ ತಮ್ಮ ವೇತನ ಚೀಟಿಯನ್ನು ( pay slip) ಪಡೆಯಬಹುದು. ಹೆಚ್ಚಿನ ಮಾಹಿತಿಯನ್ನು ಪಡೆಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ.

Employee self service : ESS. ನೌಕರರ ಸ್ವಯಂ ಸೇವಾ ಪೋರ್ಟಲ್ ಎಂದರೇನು?.

Employee Self Service
Employee Self Service

ರಾಜ್ಯ ಸರ್ಕಾರಿ ನೌಕರರ ಅನುಕೂಲದ ದೃಷ್ಟಿಯಿಂದ ರಾಜ್ಯ ಸರ್ಕಾರದ HRMS ನಿರ್ದೇಶನಲಾಯವು ESS (employee self service) ನೌಕರರ ಸ್ವಯಂ ಸೇವೆ ಎಂಬ ಪೋರ್ಟಲ್ ಅನ್ನು ಸಿದ್ದ ಪಡಿಸಿದೆ.ಈ ಪೋರ್ಟಲ್ ಬಳಕೆದಾರರ ಸ್ನೇಹಿಯಾಗಿದೆ.ಇದರಿಂದ ಅನೇಕ ಸೌಲಭ್ಯಗಳನ್ನು ಸರ್ಕಾರಿ ನೌಕರರು ಪಡೆಯಬಹುದು. ರಾಜ್ಯ ಸರ್ಕಾರಿ ನೌಕರರು, ಎಲ್ಲಾ ಸಿಬ್ಬಂದಿಗಳು ಸಹ ಈ ಪೋರ್ಟಲ್ ನಲ್ಲಿ ನೊಂದಣಿ ಮಾಡಿ, ತಮ್ಮ ಮಾಹಿತಿಯನ್ನು ಅಂದರೆ,ವೇತನ ಚೀಟಿ, ರಜೆ ವಿವರ, ಕಡಿತದ ಎಲ್ಲಾ ವಿವರಗಳನ್ನು ಚೆಕ್ ಮಾಡಿಕೊಳ್ಳಲು ಮತ್ತು ಡೌನ್ಲೋಡ್ ಮಾಡಿಕೊಳ್ಳಲು ಹೆಚ್ ಆರ್ ಎಂ ಎಸ್ ನ ನೌಕರರ ಸ್ವಯಂ ಸೇವಾ ಪೋರ್ಟಲ್ ನಿಂದ ಪಡೆಯಬಹುದು.

ಸರ್ಕಾರಿ ಸೇವೆಯಲ್ಲಿ ಇರುವ ಎಲ್ಲಾ ಕರ್ತವ್ಯ ನಿರತ ಸಿಬ್ಬಂದಿಗಳು ಪ್ರಧಾನಮಂತ್ರಿ ಜನ ಸುರಕ್ಷಾ ಯೋಜನೆ ಗೆ ಬರುವ ಪ್ರಧಾನಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ (PMJJBY) ಮತ್ತು ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ (PMSBY), ಈ ಯೋಜನೆಗಳ ಅಡಿಯಲ್ಲಿ ಮಾಡಿಸಿರುವ ವಿಮಾ ಪಾಲಿಸಿಗಳ ಮಾಹಿತಿಯನ್ನು HRMS ESS ( Employee Self Service) ಪೋರ್ಟಲ್ ನಲ್ಲಿ ಭರ್ತಿ ಮಾಡಬೇಕು ಎಂದು ತಿಳಿಸಲಾಗಿದೆ. ರಾಜ್ಯ ಸರ್ಕಾರಿ ನೌಕರರು, ಎಲ್ಲಾ ಸಿಬ್ಬಂದಿಗಳು ಸಹ ಈ ಪೋರ್ಟಲ್ ನಲ್ಲಿ ನೊಂದಣಿ ಮಾಡಿಕೊಳ್ಳಬೇಕು. ಸರ್ಕಾರಿ ನೌಕರರು ಈ ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಳ್ಳುವುದರಿಂದ ಹಲವಾರು ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಸರ್ಕಾರಿ ನೌಕರರು ಯಾವ ಯಾವ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂಬುದನ್ನು  ನೋಡೋಣ. ಹೆಚ್ಚಿನ ಮಾಹಿತಿಯನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

HRMS : Employee self service : ESS. ನೌಕರರ ಸ್ವಯಂ ಸೇವಾ ಪೋರ್ಟಲ್ ನ ಪ್ರಯೋಜನಗಳು.

Employee Self Service
Employee Self Service

HRMS : Employee self service : ESS. ನೌಕರರ ಸ್ವಯಂ ಸೇವಾ ಪೋರ್ಟಲ್ ನಿಂದ ಅನೇಕ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ರಾಜ್ಯ ಸರ್ಕಾರಿ ನೌಕರರ ಅನುಕೂಲದ ದೃಷ್ಟಿಯಿಂದ ರಾಜ್ಯ ಸರ್ಕಾರದ HRMS ನಿರ್ದೇಶನಲಾಯವು ESS (employee self service) ನೌಕರರ ಸ್ವಯಂ ಸೇವೆ ಎಂಬ ಪೋರ್ಟಲ್ ಅನ್ನು ಸಿದ್ದ ಪಡಿಸಿದೆ.ಈ ಪೋರ್ಟಲ್ ಬಳಕೆದಾರರ ಸ್ನೇಹಿಯಾಗಿದೆ.ಇದರಿಂದ ಅನೇಕ ಸೌಲಭ್ಯಗಳನ್ನು ಸರ್ಕಾರಿ ನೌಕರರು ಪಡೆಯಬಹುದು.

  • ವೇತನ ಚೀಟಿಯನ್ನು ಪಡೆಯಬಹುದು :

ಸರ್ಕಾರಿ ನೌಕರರು ತಮ್ಮ KGID ಸಂಖ್ಯೆ ಯ ಮೂಲಕ ಲಾಗಿನ್ ಆಗುವುದರಿಂದ ನೇರವಾಗಿ ತಮ್ಮ ವೇತನ ಚೀಟಿ (Pay Slip) ಯನ್ನು ಪಡೆಯಬಹುದು.

  • ರಜೆಯ ಮಾಹಿತಿಯನ್ನು ತಿಳಿಯಬಹುದು :

ಸರ್ಕಾರಿ ನೌಕರರು ತಮ್ಮ ರಜೆಯ ಮಾಹಿತಿಯನ್ನು ತಾವೇ ಈ ಪೋರ್ಟಲ್ ನ ಮೂಲಕ ಲಾಗಿನ್ ಮಾಡಿಕೊಂಡು ತಿಳಿದುಕೊಳ್ಳಬಹುದು.

  • ಸಾಲ ಮತ್ತು ಮುಂಗಡದ ವಿವರ ತಿಳಿಯಬಹುದು :

ಸರ್ಕಾರಿ ನೌಕರರ ಸಾಲ ಮತ್ತು ಮುಂಗಡದ ಎಲ್ಲಾ ಮಾಹಿತಿಯನ್ನು ಪಡೆಯಬಹುದು. ಕೆಜಿಐಡಿ ಮೂಲಕ ಪಡೆದಿರುವ ಸಾಲ ಮತ್ತು ಮುಂಗಡದ ವಿವರಗಳನ್ನು ತಿಳಿದುಕೊಳ್ಳಬಹುದು.

  • ಕಡಿತದ ವಿವರ ತಿಳಿಯಬಹುದು :

ನೌಕರರು ತಮ್ಮ ವೇತನದಲ್ಲಿ ಎಷ್ಟು ಹಣ ಕಡಿತವಾಗಿದೆ ಎಂದು ಚೆಕ್ ಮಾಡಿಕೊಳ್ಳಬಹುದು. ನೌಕರರು ತಮ್ಮ ಕಡಿತಗಳಾದ ಆದಾಯ ತೆರಿಗೆ (IT), ಕೆ ಜಿ ಐ ಡಿ (KGID ), ಸಾಮಾನ್ಯ ಭವಿಷ್ಯ ನಿಧಿ (GPF), NPS ಮುಂತಾದ ಕಡಿತಗಳ ಬಗ್ಗೆ ಮಾಹಿತಿಯನ್ನು ತಿಳಿಯಬಹುದು.

  • ವಿಮೆ ವಿವರ ತಿಳಿಯಬಹುದು :

ಸರ್ಕಾರಿ ನೌಕರರು ತಮ್ಮ ವಿಮೆಯ ಕಡಿತದ ಮಾಹಿತಿ ಪಡೆಯಬಹುದು. ಯಾವ ದಿನಾಂಕದಂದು ವಿಮೆ ಮೊತ್ತ ಕಟ್ಟಾಗುತ್ತದೆ. ಎಂಬ ಮಾಹಿತಿಯನ್ನು ಪಡೆಯಬಹುದು.

  • ಇ ಸೇವಾ ಪುಸ್ತಕ ವೀಕ್ಷಿಸಬಹುದು :

ಸರ್ಕಾರಿ ನೌಕರರು ತಮ್ಮ ಸೇವಾ ವಹಿಯನ್ನು ವಿದ್ಯುನ್ಮಾನ ಸೇವಾ ವಹಿ (ESR) ಯಲ್ಲಿ ಅಪ್ಲೋಡ್ ಮಾಡಿ,ಪಬ್ಲಿಷ್ ಮಾಡಿದ ಇ ಸೇವಾ ಪುಸ್ತಕವನ್ನು ವೀಕ್ಷಿಸಬಹುದು.

  • HRMS ಟಿಕೆಟ್ : ನೌಕರರು ಹೆಚ್ ಆರ್ ಎಂ ಎಸ್ ನಲ್ಲಿ ಸೃಜಿಸಿದ ಟಿಕೆಟ್ ವಿವರಗಳನ್ನು ವೀಕ್ಷಿಸಬಹುದು.
  • PMJJBY ಮತ್ತು PMSBY ಮಾಹಿತಿ ಪಡೆಯಬಹುದು :

ESS ಪೋರ್ಟಲ್ ನಲ್ಲಿ ಎಂಟ್ರಿ ಮಾಡಿರುವ ಪಿಎಂಜೆಜೆವೈ ಮತ್ತು ಪಿಎಂಎಸ್ ಬಿವೈ ವಿಮಾ ಮಾಹಿತಿಯನ್ನು ಪಡೆಯಬಹುದು.

  • KGID ವಿಮಾ ಪತ್ರಗಳನ್ನು ಪರಿಶೀಲನೆ ಮಾಡಬಹುದು :

ಈ ಪೋರ್ಟಲ್ ನಲ್ಲಿ ಸಿಬ್ಬಂದಿಗಳು ತಮ್ಮ KGID ವಿಮಾ ಪತ್ರಗಳ HRMS ನ ಮಾಹಿತಿಯನ್ನು ತಿಳಿಯಬಹುದು. ಸರಿಯಾಗಿದ್ದರೆ ಮಾಹಿತಿಯನ್ನು ಉಳಿಸುಕೊಳ್ಳಬಹುದು. ತಪ್ಪಿದ್ದರೆ ಸರಿಪಡಿಸಿಕೊಳ್ಳಬಹುದು.ಹೀಗೆ ಸರ್ಕಾರಿ ನೌಕರರು ಈ ಪೋರ್ಟಲ್ ನಿಂದ ಅನೇಕ ಸೌಲಭ್ಯವನ್ನು ಪಡೆದುಕೊಳ್ಳಬಹುದು.

ಸರ್ಕಾರಿ ನೌಕರರು ತಮ್ಮ ಕೆ ಜಿ ಐ ಡಿ (KGID) ಮೂಲಕ ಲಾಗಿನ್ ಆಗಿ ತಮ್ಮ ವೇತನ ಚೀಟಿಯನ್ನು ( pay slip) ಪಡೆಯಬಹುದು. ಸರ್ಕಾರಿ ಆದೇಶದಲ್ಲಿ ಉಲ್ಲೇಖ ಮಾಡಿರುವಂತೆ, ಸರ್ಕಾರಿ ನೌಕರರು, ಸರ್ಕಾರಿ ಸೇವೆಯಲ್ಲಿ ಇರುವ ಎಲ್ಲಾ ಕರ್ತವ್ಯ ನಿರತ ಸಿಬ್ಬಂದಿಗಳು ಪ್ರಧಾನಮಂತ್ರಿ ಜನ ಸುರಕ್ಷಾ ಯೋಜನೆ ಗೆ ಬರುವ ಪ್ರಧಾನಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ (PMJJBY) ಮತ್ತು ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ (PMSBY), ಈ ಯೋಜನೆಗಳ ಅಡಿಯಲ್ಲಿ ಮಾಡಿಸಿರುವ ವಿಮಾ ಪಾಲಿಸಿಗಳ ಮಾಹಿತಿಯನ್ನು HRMS ESS ( Employee Self Service) ಪೋರ್ಟಲ್ ನಲ್ಲಿ ಭರ್ತಿ ಮಾಡಬೇಕು ಎಂದು ತಿಳಿಸಲಾಗಿದೆ. ರಾಜ್ಯ ಸರ್ಕಾರಿ ನೌಕರರು, ಎಲ್ಲಾ ಸಿಬ್ಬಂದಿಗಳು ಸಹ ಈ ಪೋರ್ಟಲ್ ನಲ್ಲಿ ನೊಂದಣಿ ಮಾಡಿ, ತಮ್ಮ ಮಾಹಿತಿಯನ್ನು ಅಂದರೆ,ವೇತನ ಚೀಟಿ, ರಜೆ ವಿವರ, ಕಡಿತದ ಎಲ್ಲಾ ವಿವರಗಳನ್ನು ಚೆಕ್ ಮಾಡಿಕೊಳ್ಳಲು ಮತ್ತು ಡೌನ್ಲೋಡ್ ಮಾಡಿಕೊಳ್ಳಲು ಹೆಚ್ ಆರ್ ಎಂ ಎಸ್ ನ ನೌಕರರ ಸ್ವಯಂ ಸೇವಾ ಪೋರ್ಟಲ್ ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಸರ್ಕಾರಿ ನೌಕರರಿಗೆ ಈ ಪೋರ್ಟಲ್ ಒಂದು ಮಹತ್ವದ ಆಧಾರವಾಗಿದೆ. ತಾವೇ ತಮ್ಮ ಎಲ್ಲಾ ಮಾಹಿತಿಗಳನ್ನು ಪಡೆದುಕೊಳ್ಳಬಹುದು.

 

 

Leave a Reply

Your email address will not be published. Required fields are marked *