Tharak7star

Akshaya Trutiya 2024 : ಅಕ್ಷಯ ತೃತೀಯ

Akshaya Trutiya

ಭಾರತೀಯರು ಪ್ರತಿವರ್ಷ ಅಕ್ಷಯ ತೃತೀಯ(Akshaya Trutiya) ವನ್ನು ಆಚರಣೆ ಮಾಡುತ್ತಾರೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.

ಭಾರತ ದೇಶದಲ್ಲಿ ಹಿಂದೂ ಸಂಪ್ರದಾಯದ ಎಲ್ಲ ರೀತಿಯ  ಹಬ್ಬ,ಆಚರಣೆಗಳನ್ನು, ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ಹಿಂದೂ ಸಂಪ್ರದಾಯದಲ್ಲಿ ” ಅಕ್ಷಯ ತೃತೀಯ ” ಹಬ್ಬಕ್ಕೆ ವಿಶೇಷ ಮಹತ್ವವಿದೆ. ಇದು ಹಲವು ಪೌರಾಣಿಕ ಮಹತ್ವವನ್ನು ಹೊಂದಿರುವ ಹಬ್ಬ. ಸಂಸ್ಕೃತದಲ್ಲಿ ” ಅಕ್ಷಯ ” ಎಂಬ ಪದವು ಅನಂತ ಅಥವಾ ಶಾಶ್ವತ ಎಂಬ ಅರ್ಥವನ್ನು ಸೂಚಿಸುತ್ತದೆ. ಹಿಂದೂ ಧರ್ಮ ಗ್ರಂಥಗಳ ಪ್ರಕಾರ ಈ ಹಬ್ಬದ ದಿನದಂದು ಲಕ್ಷ್ಮೀದೇವಿ, ಗಣೇಶ ಮತ್ತು ವಿಷ್ಣು ದೇವರನ್ನು ಪೂಜಿಸಲಾಗುತ್ತದೆ. ಈ ದಿನವೂ ಅದೃಷ್ಟ ಮತ್ತು ಸಮೃದ್ಧಿಯ ಸಂಕೇತವಾಗಿದೆ.ಭಾರತೀಯರು ಹೊಸದಾಗಿ ಯಾವುದೇ ಉದ್ಯೋಗವನ್ನು ಪ್ರಾರಂಭಿಸುವುದು ಈ ದಿನದಿಂದಲೇ. ಯಾವುದೇ ರೀತಿಯ ವ್ಯಾಪಾರ ಮತ್ತು ಉದ್ಯೋಗ ಪ್ರಾರಂಭಿಸುವುದಕ್ಕೆ ಈ ದಿನ ಸೂಕ್ತವಾಗಿದೆ ಮತ್ತು ಈ ಸಮಯ ಯಶಸ್ಸನ್ನು ತಂದುಕೊಡುತ್ತದೆ ಹಿಂದೂ ಧರ್ಮದಲ್ಲಿದೆ. ಈ ಲೇಖನದಲ್ಲಿ ನಾವು ” ಅಕ್ಷಯ ತೃತೀಯ”(Akshaya Trutiya) ಹಬ್ಬದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ. ಇದರ ಮಹತ್ವ ಮತ್ತು ಏಕೆ ಆಚರಣೆ ಮಾಡಬೇಕು, ಹಿನ್ನೆಲೆ, ಸಂಪ್ರದಾಯ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.

Akshaya Trutiya 2024 : ಅಕ್ಷಯ ತೃತೀಯ ಹಬ್ಬದ ಹಿನ್ನೆಲೆ ಮತ್ತು ಮಹತ್ವ.

Akshaya Trutiya
Akshaya Trutiya

ಭಾರತೀಯ ಸಂಪ್ರದಾಯದ ಪ್ರಕಾರ  ” ಅಕ್ಷಯ ತೃತೀಯ”(Akshaya Trutiya) ಹಬ್ಬವನ್ನು ಅತ್ಯಂತ ಸಂಭ್ರಮಣೆಯಿಂದ ಆಚರಣೆ ಮಾಡುತ್ತಾರೆ. ಈ ದಿನ ಮತ್ತು ಸಮಯ, ಯಾವುದೇ ರೀತಿಯ ಹೊಸ ಉದ್ಯಮವನ್ನು ಅಥವಾ ವ್ಯಾಪಾರವನ್ನು ಮಾಡುವುದಕ್ಕೆ ಸೂಕ್ತ ಸಮಯ ಎನ್ನಲಾಗಿದೆ. ಈ ದಿನದಂದು ಪ್ರಾರಂಭ ಮಾಡುವ ಉದ್ಯೋಗ  ಮತ್ತು ವ್ಯಾಪಾರ ಬಹುಬೇಗ ಯಶಸ್ಸನ್ನು ತಂದುಕೊಡುತ್ತದೆ ಎಂಬ ನಂಬಿಕೆ ಇದೆ.

ಹಿಂದೂ ಸಂಪ್ರದಾಯದ ಪ್ರಕಾರ ಈ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಅಕ್ಷಯ ಎಂಬ ಪದವು ಅದೃಷ್ಟ ಮತ್ತು ಶಾಶ್ವತ ಎಂಬ ಅರ್ಥವನ್ನು ನೀಡುತ್ತದೆ.ನಮ್ಮ ಜೀವನದಲ್ಲಿ ಪ್ರಗತಿಯನ್ನು ಕಾಣಲು ಯಾವುದೇ ರೀತಿಯ ಹೊಸ ಉದ್ಯೋಗವನ್ನು ಪ್ರಾರಂಭಿಸಲು, ಈ ದಿನ ಬಹಳ  ಸೂಕ್ತ ಮತ್ತು ಅತ್ಯಂತ ಮಹತ್ವದ ದಿನವಾಗಿದೆ. ಏಕೆಂದರೆ ಈ ದಿನದಂದು ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ. ಯಾವುದೇ ವ್ಯಾಪಾರ ಮತ್ತು ಉದ್ಯೋಗದಲ್ಲಿ ಯಶಸ್ಸು ಕಾಣಬೇಕಾದರೆ ಲಕ್ಷ್ಮಿ ದೇವಿಯ ಆಶೀರ್ವಾದ ಮುಖ್ಯ ಹಾಗಾಗಿ ಈ ದಿನದಂದು ಕೊಚ ಉದ್ಯೋಗವನ್ನು ಪ್ರಾರಂಭಿಸುತ್ತಾರೆ.

ಅಕ್ಷಯ ತೃತೀಯ ಹಬ್ಬದಂದು ವಿಷ್ಣು ಮತ್ತು ಲಕ್ಷ್ಮೀದೇವಿಯನ್ನು ಹಾಗೂ ಗಣೇಶನನ್ನು ಪೂಜೆ ಮಾಡಲಾಗುತ್ತದೆ. ಹಿಂದೂ ಸಂಪ್ರದಾಯದಲ್ಲಿ ಈ ಹಬ್ಬಕ್ಕೆ ಮಹತ್ವದ ಸ್ಥಾನವಿದೆ. ಹೊಸದನ್ನು ಪ್ರಾರಂಭಿಸಲು ಇದು ಸೂಕ್ತ ಸಮಯವಾಗಿರುವುದರಿಂದ ಜನರು ಈ ದಿನದಂದು ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸುತ್ತಾರೆ. ಈ ದಿನ ಅದೃಷ್ಟ, ಸಮೃದ್ಧಿ ಮತ್ತು ಶಾಶ್ವತ ಕ್ಕೆ ಒಳ್ಳೆಯ ದಿನವಾಗಿರುವುದರಿಂದ ಈ ದಿನದಂದು ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸಿದರೆ ಸಮೃದ್ಧಿಯಾಗುತ್ತದೆ ಎಂದು ನಂಬಿದ್ದಾರೆ. ಅದೃಷ್ಟ ತರುತ್ತದೆ ಎಂದು ನಂಬಲಾಗಿದೆ.

ಸಂಸ್ಕೃತದಲ್ಲಿ ಅಕ್ಷಯ ಎಂಬ ಪದಕ್ಕೆ ಯಾವತ್ತೂ ಕಡಿಮೆಯಾಗುವುದಿಲ್ಲ ಎಂಬ ಅರ್ಥ ಇದೆ. ಅಂದರೆ ಸಮೃದ್ಧಿ ಹೊಂದುತ್ತಾರೆ ಎಂಬ ಅರ್ಥ ಇದೆ. ಹಾಗಾಗಿ ಈ ದಿನದಂದು ಹೊಸ ಉದ್ಯಮ ಮತ್ತು ವ್ಯಾಪಾರವನ್ನು ಪ್ರಾರಂಭಿಸುತ್ತಾರೆ. ಈ ದಿನದಂದು ಪ್ರಾರಂಭಿಸುವ ಉದ್ಯಮವು ಸಮೃದ್ಧಿ ಮತ್ತು ಯಶಸ್ಸನ್ನು ತಂದುಕೊಡುತ್ತದೆ ಎಂಬ ನಂಬಿಕೆ ಇದೆ.

ಅಕ್ಷಯ ತೃತೀಯ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Akshaya Trutiya : “ಅಕ್ಷಯ ತೃತೀಯ ” ಹಬ್ಬವನ್ನು ಏಕೆ ಆಚರಣೆ ಮಾಡಲಾಗುತ್ತದೆ.

Akshaya Trutiya : ಅಕ್ಷಯ ತೃತೀಯ ಹಬ್ಬವನ್ನು ಸಮೃದ್ಧಿಯ ಸಂಕೇತವಾಗಿ ಆಚರಣೆ ಮಾಡಲಾಗುತ್ತದೆ. ಈ ದಿನದಂದು ಕೈಗೊಳ್ಳುವ ಯಾವುದೇ ಕೆಲಸವು ಯಶಸ್ಸು ಮತ್ತು ಸಮೃದ್ಧಿಯನ್ನು ತಂದುಕೊಡುತ್ತದೆ ಹಾಗೂ ಶಾಶ್ವತವಾಗಿ ನಮ್ಮಲ್ಲಿ ನೆಲೆಸುತ್ತದೆ ಎಂಬ ನಂಬಿಕೆ ಇದೆ. ಅಂದರೆ ಈ ದಿನದಂದು ಲಕ್ಷ್ಮಿ ದೇವಿಯನ್ನು ಮತ್ತು ವಿಷ್ಣು ದೇವರನ್ನು ಪೂಜಿಸುವುದರಿಂದ  ಸಂಪತ್ತು ಸಮೃದ್ಧಿ ಸಿಗಲಿದೆ ಎಂಬ ನಂಬಿಕೆ ಇದೆ.

ಯಾವುದೇ ರೀತಿಯ ಹೊಸ ಉದ್ಯೋಗವನ್ನು ಈ ದಿನದಂದು ಪ್ರಾರಂಭಿಸಲು ಸೂಕ್ತವಾದ ಸಮಯವಾಗಿರುವುದರಿಂದ ಅಕ್ಷಯ ತೃತೀಯವನ್ನು ಅತ್ಯಂತ ವಿಕ್ರಮಣೆಯಿಂದ ಆಚರಣೆ ಮಾಡಲಾಗುತ್ತದೆ. ಅಕ್ಷಯ ಎಂಬ ಪದದಲ್ಲಿ  ಸಮೃದ್ಧಿ, ಸಂಪತ್ತು, ಶಾಶ್ವತ, ಅದೃಷ್ಟ ಎಂಬ ಎಲ್ಲಾ ಅಂಶಗಳು ಅಡಗಿರುವುದರಿಂದ ಅಕ್ಷಯ ತೃತೀಯ ದಿನದಂದು ಪ್ರಾರಂಭಿಸುವ ಯಾವುದೇ ಕೆಲಸ ಮತ್ತು ವ್ಯಾಪಾರ ಸಮೃದ್ಧಿ ಮತ್ತು ಸಂಪತ್ತನ್ನು ತಂದುಕೊಡುತ್ತದೆ.

ಈ ದಿನದಂದು ನೀವು ಯಾವುದೇ ರೀತಿಯ ಒಳ್ಳೆಯ ಕಾರ್ಯವನ್ನು ಮಾಡಿದರೆ, ಪುಣ್ಯಕಾರ್ಯವನ್ನು ಮಾಡಿದರೆ, ಅದಕ್ಕೆ ತಕ್ಕ ಪ್ರತಿಫಲ ಖಂಡಿತವಾಗಿಯೂ ಸಿಗುತ್ತದೆ ಎಂಬ ನಂಬಿಕೆ ಇದೆ ಹಿಂದೂ ಪುರಾಣದ ಪ್ರಕಾರ ಶ್ರೀ ಕೃಷ್ಣದೇವರು ಇದನ್ನು ಹೇಳಿದರು ಎಂಬ ನಂಬಿಕೆ ಇದೆ. ಈ ದಿನದಂದು ಅನೇಕ ಪ್ರಖ್ಯಾತ ದೇವಾಲಯಗಳು ಭಕ್ತರಿಗೆ  ದರ್ಶನವನ್ನು ನೀಡುತ್ತವೆ.

ಅಕ್ಷಯ ತೃತೀಯ (Akshaya Trutiya)ದಿನದಂದು ಕೆಲವು ವಸ್ತುಗಳನ್ನು ಖರೀದಿಸಿದರೆ ನಮಗೆ ಅದೃಷ್ಟ ಮತ್ತು ಸಮೃದ್ಧಿ ದೊರೆಯುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ ಈ ದಿನದಂದು ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸುತ್ತಾರೆ. ಆದರೆ ಭಾರತ ದೇಶದಲ್ಲಿ ಎಲ್ಲಾ ರೀತಿಯ ವರ್ಗಗಳು ಇದೆ. ಕಡುಬಡತನದಲ್ಲಿ ಇರುವಂತಹ ವರ್ಗಗಳು ಇರುವುದರಿಂದ ಅವರಿಗೆ ಚಿನ್ನ ಬೆಳ್ಳಿಯನ್ನು ಕಳುಹಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಬೀರೇ ಕೆಲವು ವಸ್ತುಗಳನ್ನು ಖರೀದಿಸುವುದರಿಂದ ಅದೇ ರೀತಿಯ ಸಮೃದ್ಧಿ ಯಶಸ್ಸು ಸಿಗುತ್ತದೆ ಎಂಬ ನಂಬಿಕೆ ಇದೆ.

ಹಿಂದೂ ಸಂಪ್ರದಾಯದ ಧರ್ಮ ಗ್ರಂಥಗಳು ಮತ್ತು ಹಲವು ಜ್ಯೋತಿಷಿಗಳ ಪ್ರಕಾರ ಈ ದಿನದಂದು ನೀವು ಚಿನ್ನ ಖರೀದಿಸಲು ಸಾಧ್ಯವಾಗದೇ ಇದ್ದರೆ ಲಕ್ಷ್ಮಿ ದೇವಿಗೆ ಪ್ರಿಯವಾಗಿರುವಂತಹ ವಸ್ತುಗಳನ್ನು ಖರೀದಿ ಮಾಡಿದರೆ, ಅದೇ ರೀತಿಯ ಸಮೃದ್ಧಿ ಮತ್ತು ಅದೃಷ್ಟ ಸಂಪತ್ತನ್ನು ಪಡೆಯಬಹುದು ಎಂಬ ನಂಬಿಕೆ ಇದೆ. ಹಾಗಾಗಿ ಈ ದಿನದಂದು ಲಕ್ಷ್ಮಿ ದೇವಿಗೆ ಪ್ರಿಯವಾಗಿರುವಂತಹ ಹಳದಿ ಸಾಸಿವೆ ಮತ್ತು ಬಾರ್ಲಿ ಅನ್ನು ಖರೀದಿಸಲಾಗುತ್ತದೆ.ಅಕ್ಷಯ ತೃತೀಯ ದಿನದಂದು ಈ ವಸ್ತುಗಳನ್ನು ಖರೀದಿಸುವುದರಿಂದ ಮಂಗಳಕರ ವಾಗಲಿದೆ ಎಂಬ ನಂಬಿಕೆ ಇದೆ.

ಅಕ್ಷಯ ತೃತೀಯ ದಿನದಂದು ಬೆಲ್ಲವನ್ನು ಖರೀದಿಸಿದರೆ, ಮನೆಯಲ್ಲಿ ಯಾವಾಗಲೂ ಸಂತೋಷ ನೆಲೆಸುತ್ತದೆ ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ. ಹಾಗೆ ಹುಣಸೆ ಹಣ್ಣುಗಳನ್ನು ಖರೀದಿಸುವುದರಿಂದ ಮನೆಯಲ್ಲಿ ನೆಲೆಸಿರುವ ದಾರಿತ್ಯವನ್ನು ಓಡಿಸಬಹುದು ಮತ್ತು ಕಲ್ಲು ಉಪ್ಪು ಖರೀದಿಸುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ. ಮನೆಯಲ್ಲಿರುವ ಧಾನ್ಯ ಸಮೃದ್ಧಿಯಾಗುತ್ತದೆ.

ಭಾರತೀಯ ಹಿಂದೂ ಸಂಪ್ರದಾಯದ ಪ್ರಕಾರ ತುಪ್ಪಕ್ಕೆ ಹೆಚ್ಚಿನ ಮಹತ್ವ ಇದೆ. ಇದು ಬಹಳ ಪವಿತ್ರ. ಏಕೆಂದರೆ ಆರೋಗ್ಯದ ಅನೇಕ ಸಮಸ್ಯೆಗಳನ್ನು ಬಗೆಹರಿಸುವುದಲ್ಲದೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮನೆಯಲ್ಲಿ ಧನಾತ್ಮಕ ಬದಲಾವಣೆಯನ್ನು ತರುತ್ತದೆ. ಹಾಗಾಗಿ ಅಕ್ಷಯ ತೃತೀಯ ದಿನದಂದು ತಪ್ಪುವನ್ನು ಖರೀದಿಸಬಹುದು. ಇದರಿಂದ ಮನೆಯಲ್ಲಿ ಆರೋಗ್ಯ ಐಶ್ವರ್ಯ ವೃದ್ಧಿಯಾಗುತ್ತದೆ. ಮನೆಯಲ್ಲಿ ಸಕಾರಾತ್ಮಕ ಬದಲಾವಣೆಗಳು ಉಂಟಾಗುತ್ತವೆ. ಒಟ್ಟಾರೆಯಾಗಿ ಹೇಳುವುದಾದರೆ ಅಕ್ಷಯ ತೃತೀಯದ ಹಿನ್ನೆಲೆ ಮತ್ತು ಮಹತ್ವ ಹಾಗೂ ಸಂಪ್ರದಾಯಗಳ ಪ್ರಕಾರ ಈ ದಿನ ಒಂದು ಮಹತ್ವದ ದಿನವಾಗಿದೆ. ಈ ದಿನದಂದು ಒಳ್ಳೆಯ ಕಾರ್ಯಗಳನ್ನು ಮಾಡುವುದರಿಂದ ಮತ್ತು ಪುಣ್ಯ ಕಾರ್ಯಗಳನ್ನು ಕೈಗೊಳ್ಳುವುದರಿಂದ ನಮಗೆ ಆರೋಗ್ಯ, ಐಶ್ವರ್ಯ, ಸಂಪತ್ತು ಮತ್ತು ಅದೃಷ್ಟದ ಫಲವು ದೊರಕುತ್ತದೆ.

Leave a Reply

Your email address will not be published. Required fields are marked *