ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ಮೊಬೈಲ್ ಬಳಕೆದಾರರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ TRAI New Rules ಜಾರಿಗೆ ತಂದಿದೆ.
ಭಾರತದಲ್ಲಿ ಜನಸಾಮಾನ್ಯರಿಗೆ ( ಮೊಬೈಲ್ ಬಳಕೆದಾರರು ) ಸಮಸ್ಯೆಯಾಗದಂತೆ ತಡೆಯಲು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರವು ಹೊಸ ನಿಯಮವನ್ನು ಜಾರಿಗೆ ತಂದಿದೆ. ಯಾವುದೇ ಅಪರಿಚಿತ ವ್ಯಕ್ತಿಯಿಂದ ಕರೆ ಬಂದರೆ ಹೆದರುವ ಅವಶ್ಯಕತೆ ಇಲ್ಲ, ಹೊಸ ನಿಯಮದ ಪ್ರಕಾರ unknow call ಬಂದರೆ ಕರೆ ಮಾಡಿದವರ ಹೆಸರು ಗೋಚರವಾಗುತ್ತದೆ. ಇದರಿಂದ ಯಾರೂ ಕರೆ ಮಾಡಿರುವುದು ಎಂಬುದು ತಿಳಿಯುತ್ತದೆ. ಕರೆ ಎತ್ತುವ ಮುಂಚೆ (call recieve ) ಯಾರಿಂದ ಕರೆ ಬಂದಿದೆ ಎಂದು ತಿಳಿಯುತ್ತದೆ. ಇದರಿಂದ ಮೊಬೈಲ್ ಬಳಕೆದಾರರಿಗೆ ಮುಂಚೆ ಇದ್ದ ಹಾಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಟೆಲಿಕಾಂ ಕಂಪನಿಗಳಿಗೆ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರವು ಈ ಕುರಿತು ಆದೇಶವನ್ನು ನೀಡಿದೆ. ಕರೆ ಮಾಡಿದವರ ಹೆಸರನ್ನು ಸೂಚಿಸುವಂತೆ TRAI ಆದೇಶ ಮಾಡಿದೆ. ಮೊಬೈಲ್ ಕರೆ ಮಾಡುವವರ ಹೆಸರನ್ನು ಗೋಚರಿಸುವಂತೆ ಮಾಡಲು ಟೆಲಿಕಾಂ ಕಂಪನಿಗಳಿಗೆ ಆದೇಶವನ್ನು ನೀಡಲಾಗಿದೆ. ಮೊಬೈಲ್ ಬಳಕೆದಾರರ ತಲೆ ನೋವನ್ನು ಕಡಿಮೆ ಮಾಡಿದಂತಾಗಿದೆ.
TRAI New Rules in 2024: ಹೊಸ ನಿಯಮ ಜಾರಿ.
TRAI New Rules in 2024 : ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರವು ಮೊಬೈಲ್ ಬಳಕೆದಾರರಿಗೆ ಅನುಕೂಲ ವಾಗುವಂತೆ ಹೊಸ ನಿಯಮವನ್ನು ಜಾರಿ ಕೊಡಿಸಲು ಟೆಲಿಕಾಂ ಕಂಪನಿಗಳಿಗೆ ಆದೇಶವನ್ನು ನೀಡಿದೆ. ಯಾವುದೇ ಅಪರಿಚಿತ ವ್ಯಕ್ತಿಯಿಂದ ಕರೆ ಬಂದರೆ, ಕರೆ ಮಾಡಿದವರ ಹೆಸರನ್ನು ಗೋಚರಿಸುವಂತೆ ಮಾಡಬೇಕು ಎಂದು ಆದೇಶವನ್ನು ನೀಡಿದೆ. ಈ ನಿಯಮವು ಮೊಬೈಲ್ ಬಳಕೆದಾರರಿಗೆ ತುಂಬಾನೇ ಅನುಕೂಲ ಮಾಡಲಿದೆ. ಯಾವುದೇ ಕರೆ ಬಂದರೂ ಸಹ, ಕರೆ ಮಾಡಿದವರ ಹೆಸರನ್ನು ಸೂಚಿಸಲಾಗುತ್ತದೆ.
ಈ ಮೊದಲು ಕರೆ ಮಾಡಿದ ಅಪರಿಚಿತ ವ್ಯಕ್ತಿಯ ಹೆಸರನ್ನು ತಿಳಿಯಲು ಥರ್ಡ್ ಪಾರ್ಟಿ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿಕೊಳ್ಳಬೇಕಿತ್ತು. ಇದರಿಂದ ಮೊಬೈಲ್ ಬಳಕೆದಾರರ ವೈಯಕ್ತಿಕ ವಿವರಗಳು ಮತ್ತು ಮಾಹಿತಿಗಳು ಸೋರಿಕೆಯಾಗುವ ಸಾಧ್ಯತೆ ಹೆಚ್ಚಾಗಿತ್ತು. ಇದರಿಂದ ಮೊಬೈಲ್ ಬಳಕೆದಾರರಿಗೆ ತುಂಬಾನೇ ತೊಂದರೆಯಾಗುತ್ತಿತ್ತು. ಇದರ ಮೇಲೆ ಗಮನಹರಿಸಿದ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರವು ಈ ಹೊಸ ನಿಯಮವನ್ನು ಜಾರಿಗೆ ತರಲು ಆದೇಶಿಸಿದೆ. ಇದರಿಂದ ಟೆಲಿಕಾಂ ಕಂಪನಿ ಗಳಿಂದಲೇ ಕರೆ ಮಾಡಿದವರ ಹೆಸರನ್ನು ಸೂಚಿಸಲಾಗುತ್ತದೆ.
ಈ ಹಿಂದೆ ನಿಮಗೆ ಯಾವುದಾದರೂ ವ್ಯಕ್ತಿಯಿಂದ ಕಾಲ್ ಬಂದರೆ, ಅವರ ನಂಬರನ್ನು ನಿಮ್ಮ ಮೊಬೈಲ್ ನಲ್ಲಿ ಸೇವ್ ಮಾಡಿದರೆ ಮಾತ್ರ ನಿಮಗೆ ಹೆಸರು ಗೋಚರವಾಗುತ್ತಿತ್ತು. ಮೊಬೈಲ್ ನಲ್ಲಿ ಅವರ ಹೆಸರನ್ನು ಸೇವ್ ಮಾಡಿಲ್ಲ ಎಂದರೆ ನಿಮಗೆ ಬರೆ ನಂಬರ್ ಮಾತ್ರ ಬರುತ್ತಿತ್ತು. ಆದರೆ ಈಗ TRAI ಹೊಸ ನಿಯಮದ ಪ್ರಕಾರ ಕರೆ ಮಾಡುವವರ ಹೆಸರನ್ನು ಗೋಚರ ಮಾಡುವಂತೆ ಆದೇಶಿಸಲಾಗಿದೆ. ಕರೆ ಮಾಡುವವರ ಹೆಸರನ್ನು ಟೆಲಿಕಾಂ ಕಂಪನಿಯು ಗೋಚರ ಮಾಡುತ್ತದೆ. ಇದರಿಂದ ಯಾರೂ ಕರೆ ಮಾಡಿರುವುದು ಎಂಬುದನ್ನು ತಿಳಿಯಲು ಸುಲಭವಾಗುತ್ತದೆ. ಈ ನಿಯಮವು ಜನರಿಗೆ ತುಂಬಾನೇ ಅನುಕೂಲವಾಗಿದೆ.
ಹೆಚ್ಚಿನ ಮಾಹಿತಿಗಾಗಿ TRAI ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬಹುದು
TRAI New Rules in 2024 ನಿಂದ ಆಗುವ ಪ್ರಯೋಜನ.
ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರವು ಜಾರಿಗೆ ತಂದಿರುವ ಹೊಸ ನಿಯಮದಿಂದ ಮೊಬೈಲ್ ಬಳಕೆದಾರರಿಗೆ ತುಂಬಾನೇ ಅನುಕೂಲವಾಗಿದೆ.
- ಕರೆ ಮಾಡುವವರ ಹೆಸರು ಗೋಚರವಾಗುತ್ತದೆ : ಮೊಬೈಲ್ ಬಳಕೆದಾರರಿಗೆ ಯಾರಿಂದ ಕರೆ ಬಂದಿದೆ ಎಂಬುದು ಮೊದಲೇ ತಿಳಿಯುತ್ತದೆ. ಟೆಲಿಕಾಂ ಕಂಪನಿಯಿಂದ ಕರೆಯನ್ನು ಎತ್ತುವ ಮೊದಲೇ ಅವರ ಹೆಸರು ತಿಳಿಯುತ್ತದೆ.
- ವೈಯಕ್ತಿಕ ಮಾಹಿತಿ ಸೋರಿಕೆ ಕಡಿಮೆಯಾಗುತ್ತದೆ : ಈ ಹೊಸ ನಿಯಮದ ಪ್ರಕಾರ, ಕರೆ ಮಾಡುವವರ ಹೆಸರನ್ನು ತಿಳಿಯಲು ಯಾವುದೇ ಥರ್ಡ್ ಪಾರ್ಟಿ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡುವ ಅವಶ್ಯಕತೆ ಇಲ್ಲ. ಇದರಿಂದ ನಮ್ಮ ವೈಯಕ್ತಿಕ ಮಾಹಿತಿ ಸೋರಿಕೆಯಾಗುವುದು ಕಡಿಮೆಯಾಗುತ್ತದೆ.
- ಟೆಲಿಕಾಂ ಕಂಪನಿಯಿಂದಲೇ ಮೊಬೈಲ್ ಕರೆ ಮಾಡುವವರ ಹೆಸರು ಸೂಚಿಸುತ್ತದೆ.
- ಮೊಬೈಲಿಗೆ ಕರೆ ಮಾಡುವವರ ಮೊಬೈಲ್ ನಂಬರ್ ಮುಂಚಿತವಾಗಿ ನಮ್ಮ ಮೊಬೈಲ್ ನಲ್ಲಿ ಸೇವ್ ಮಾಡಿಲ್ಲ ಎಲ್ಲರೂ ಸಹ ಅವರ ಹೆಸರನ್ನು ಟೆಲಿಕಾಂ ಕಂಪನಿ ಗೋಚರಿಸುತ್ತದೆ.
- ಮೋಸಗಳು ಕಡಿಮೆಯಾಗುತ್ತವೆ : ಟೆಲಿಕಾಂ ಕಂಪನಿಯಿಂದಲೇ ಕರೆ ಮಾಡುವವರ ಹೆಸರು ಸೂಚನೆ ಮಾಡುವುದರಿಂದ ಅಪರಿಚಿತ ವ್ಯಕ್ತಿಯಿಂದ ಕರೆ ಮಾಡಿ ಮೋಸ ಮಾಡುವಂತಹ ಪ್ರಕರಣಗಳು ಕಡಿಮೆಯಾಗುತ್ತವೆ. ಏಕೆಂದರೆ ಟೆಲಿಕಾಂ ಕಂಪನಿಯ ಮೊಬೈಲ್ ಬಳಕೆದಾರರಿಗೆ, ಕರೆ ಮಾಡುವವರ ಹೆಸರನ್ನು ಗೋಚರಿಸುತ್ತದೆ.
- ಜನಸಾಮಾನ್ಯರ ಸುರಕ್ಷತೆ: ಜನಸಾಮಾನ್ಯರು ಯಾವುದೇ ಮೋಸಕ್ಕೆ ಒಳಗಾಗದೆ, ಸುರಕ್ಷತೆಯಿಂದ ಇರಲು ಇದು ಸಹಾಯವಾಗಿದೆ.
ಹೀಗೆ ಹೊಸ ನಿಯಮದ ಪ್ರಕಾರ, ಹೊಸ ನಿಯಮದಿಂದ ಮೊಬೈಲ್ ಬಳಕೆದಾರರಿಗೆ ಹಲವು ಅನುಕೂಲಗಳು ಆಗುತ್ತವೆ. ದೇಶದಲ್ಲಿ ನಡೆಯುತ್ತಿದ್ದ ಮೋಸದ ಪ್ರಕರಣಗಳು ಕಡಿಮೆಯಾಗುತ್ತವೆ. ಟೆಲಿಕಾಂ ಕಂಪನಿಯಿಂದಲೇ ಮೊಬೈಲ್ ಗೆ ಕರೆ ಮಾಡುವವರ ಹೆಸರು ಗೋಚರವಾಗುವುದರಿಂದ ಮೋಸಗಳು ಕಡಿಮೆಯಾಗುತ್ತವೆ. ಜನಸಾಮಾನ್ಯರಿಂದ ಯಾವುದೇ ಕಾರಣಕ್ಕೂ ಹಣ ವಸೂಲಿ ಮಾಡುವುದು ಕಡಿಮೆಯಾಗುತ್ತದೆ. ಈ ಹೊಸ ನಿಯಮದಿಂದ ತುಂಬಾನೇ ಸುರಕ್ಷತೆ ಇರುತ್ತದೆ.
ಮೊಬೈಲ್ ಬಳಕೆದಾರರು ಕರೆ ಮಾಡುವವರ ಹೆಸರನ್ನು ತಿಳಿಯಲು, ಯಾವುದೇ ರೀತಿಯಾದ ಪಾರ್ಟಿ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡುವ ಅವಶ್ಯಕತೆ ಇರುವುದಿಲ್ಲ. ಇದರಿಂದ ವೈಯಕ್ತಿಕ ಮಾಹಿತಿ ಸೋರಿಕೆಯಾಗುವುದು ಕಡಿಮೆಯಾಗುತ್ತದೆ. ಜನಸಾಮಾನ್ಯರು ಸುರಕ್ಷಿತವಾಗಿರುತ್ತಾರೆ.
ಥರ್ಡ್ ಪಾರ್ಟಿ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿಕೊಳ್ಳುವುದರಿಂದ ಮೊದಲಿಗೆ ಅಪ್ಲಿಕೇಶನ್ ಎಲ್ಲಾ ರೀತಿಯ ಪರ್ಮಿಷನ್ ಗಳನ್ನು ಅಲೋ ಮಾಡುವುದರಿಂದ, ನಮ್ಮ ಮೊಬೈಲ್ ನಲ್ಲಿ ಇರುವಂತಹ ವಯಕ್ತಿಕ ಮಾಹಿತಿಗಳು, ಫೋಟೋಗಳು, ಎಲ್ಲಾ ರೀತಿಯ ಡಾಟಾಗಳು ಸೋರಿಕೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ಹೊಸ ನಿಯಮದಿಂದ ಈ ರೀತಿಯ ಪ್ರಕರಣಗಳು ಕಡಿಮೆಯಾಗುತ್ತವೆ.