ಕೇಂದ್ರ ಸರ್ಕಾರವು ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ದೃಷ್ಟಿಯಿಂದ E-Shram Card : ಇ -ಶ್ರಮ ಕಾರ್ಡ್ ಜಾರಿಗೆ ತಂದಿದೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ E-Shram Card : ಇ -ಶ್ರಮ ಕಾರ್ಡ್ ನಿಂದ ಕಾರ್ಮಿಕರಿಗೆ ಹಲವಾರು ಸೌಲಭ್ಯ ದೊರೆಯುತ್ತದೆ.ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ದೃಷ್ಟಿಯಿಂದ ಈ ಯೋಜನೆಯನ್ನು ಜಾರಿಗೆ ತಂದಿದೆ. 2021 ರಲ್ಲಿ ಈ ಯೋಜನೆ ಜಾರಿಗೆ ಬಂದಿದೆ. ದೇಶದಲ್ಲಿ ವಾಸಿಸುವ ಅಸಂಘಟಿತ ಕಾರ್ಮಿಕರ ಜೀವನಕ್ಕೆ ಆಧಾರವಾಗುವ ದೃಷ್ಟಿಯಿಂದ ಈ ಯೋಜನೆ ಒಂದು ಮಹತ್ವದಾಗಿದೆ. ರಾಜ್ಯದಲ್ಲಿ ವಾಸಿಸುವ ಕಾರ್ಮಿಕರಿಗೆ ಈ ಯೋಜನೆಯಿಂದ ಹಲವು ಪ್ರಯೋಜನ ದೊರಕಿದೆ. ಶ್ರಮ ಜೀವಿಗಳು ಈ ಸೌಲಭ್ಯ ಪಡೆಯಬಹುದು. ಈ ಕಾರ್ಡ್ ಮಾಡಿಸುವುದರಿಂದ ಕಾರ್ಮಿಕರು ಸರ್ಕಾರದಿಂದ ಅನೇಕ ಸೌಲಭ್ಯ ಪಡೆಯಬಹುದು.ಈ ಲೇಖನದಲ್ಲಿ ನಾವು ಇ -ಶ್ರಮ ಕಾರ್ಡ್ ಎಂದರೇನು?, ಕಾರ್ಡ್ ಪಡೆಯುವುದು ಹೇಗೆ?, ಯಾವ ಯಾವ ದಾಖಲೆಗಳು ಬೇಕು?, ಯಾರು ಅರ್ಜಿಗಳನ್ನು ಸಲ್ಲಿಸಬಹುದು ಮತ್ತು ಇದರ ಪ್ರಯೋಜನವನ್ನು ಸಂಪೂರ್ಣವಾಗಿ ವಿವರಿಸಲಾಗಿದೆ.
E-Shram Card : ಇ -ಶ್ರಮ ಕಾರ್ಡ್ ಎಂದರೇನು?.
ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ದೃಷ್ಟಿಯಿಂದ ಜಾರಿಗೆ ತಂದಿರುವ ಒಂದು ಮಹತ್ವದ ಕಾರ್ಡ್ ಆಗಿದೆ. ಕಾರ್ಮಿಕರಿಗೆ ವಿವಿಧ ಸೌಲಭ್ಯ ಒದಗಿಸಲು ಸರ್ಕಾರ ಪ್ರಾರಂಭ ಮಾಡಿರುವ ಒಂದು ಡಿಜಿಟಲ್ ವೇದಿಕೆಯಾಗಿದೆ. ಈ ಕಾರ್ಡ್ ಕಾರ್ಮಿಕರ ಎಲ್ಲಾ ಮಾಹಿತಿಯನ್ನು ಹೊಂದಿರುತ್ತದೆ. ಅಂದರೆ ಕಾರ್ಮಿಕರ ಹೆಸರು, ವಿಳಾಸ, ಮೊಬೈಲ್ ನಂಬರ್, ಉದ್ಯೋಗ ಮತ್ತು ಕಾರ್ಮಿಕರಿಗೆ ಸಂಬಂದಿಸಿದ ಎಲ್ಲಾ ಮಾಹಿತಿಯನ್ನು ಒಳಗೊಂಡಿರುತ್ತದೆ. ಈ ಕಾರ್ಡ್ ಹೊಂದಿರುವ ಕಾರ್ಮಿಕರು ಸರ್ಕಾರದಿಂದ ಸಿಗುವ ಹಲವು ಸೌಲಭ್ಯ ಪಡೆಯಬಹುದು.
E-Shram Card : ಇ -ಶ್ರಮ ಕಾರ್ಡ್ ಯಾರು ಪಡೆಯಬಹುದು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ E-Shram Card : ಇ -ಶ್ರಮ ಕಾರ್ಡ್ಅನ್ನು ದೇಶದಲ್ಲಿ ವಾಸಿಸುವ ಅಸಂಘಟಿತ ಕಾರ್ಮಿಕ ವರ್ಗ ಪಡೆಯಲು ಅರ್ಹರಾಗಿರುತ್ತಾರೆ. ಅಂದರೆ ಶ್ರಮಿಕ ವರ್ಗ, ಕಟ್ಟಡ ಕಾರ್ಮಿಕರು, ಕೃಷಿ ಕಾರ್ಮಿಕರು, ವಾಹನ ಚಾಲಕರು, ಬಟ್ಟೆ ಹೋಲಿಯುವ ಕಾರ್ಮಿಕರು, ಬೀದಿ ಬದಿ ವ್ಯಾಪಾರ ಮಾಡುವ ಕಾರ್ಮಿಕರು, ಇಟ್ಟಿಗೆ ಕಾರ್ಮಿಕರು,ವಲಸೆ ಕಾರ್ಮಿಕರು ಹೀಗೆ ಅನೇಕ ರೀತಿಯಲ್ಲಿ ಶ್ರಮವಹಿಸಿ ಕೆಲಸ ಮಾಡುವ ಕಾರ್ಮಿಕರು ಈ ಕಾರ್ಡ್ ಪಡೆಯಬಹುದು.
ಈ ಕಾರ್ಡನ್ನು ಪಡೆದಿರುವ ಕಾರ್ಮಿಕರು ಸರ್ಕಾರದಿಂದ ಸಿಗುವ ಅನೇಕ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಮಕ್ಕಳ ವಿದ್ಯಾಭ್ಯಾಸಕ್ಕೆ, ಕಾರ್ಮಿಕರ ಸಾಮಾಜಿಕ ಭದ್ರತೆ, ಮತ್ತು ಆರ್ಥಿಕ ಭದ್ರತೆಗೆ ಸಹಾಯವಾಗುವ ಹಲವಾರು ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಈ ಸೌಲಭ್ಯಗಳನ್ನು ಕಾರ್ಮಿಕರು ಪಡೆದುಕೊಳ್ಳಬಹುದು. ಉದಾಹರಣೆಗೆ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸ ಗೋಸ್ಕರ ವಿದ್ಯಾರ್ಥಿ ವೇತನ ಯೋಜನೆಯನ್ನು ಜಾರಿಗೆ ತಂದಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯ ನೀಡುವ ದೃಷ್ಟಿಯಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಕಾರ್ಮಿಕರಿಗೆ ಆರೋಗ್ಯ ವಿಮೆ ಯೋಜನೆಯನ್ನು ಜಾರಿಗೆ ತರಲಾಗಿದೆ. ಯೋಜನೆಯ ಕಾರ್ಮಿಕರ ಕುಟುಂಬಕ್ಕೆ ಆಧಾರ ಸ್ತಂಭವಾಗಿದೆ.
E-Shram Card : ಇ -ಶ್ರಮ ಕಾರ್ಡ್ ಪಡೆಯಲು ಯಾವ ದಾಖಲೆಗಳು ಬೇಕು?.
- ಆಧಾರ್ ಕಾರ್ಡ್.
- ರೇಷನ್ ಕಾರ್ಡ್.
- ಮೊಬೈಲ್ ನಂಬರ್
- ಚುನಾವಣಾ ಗುರುತಿನ ಚೀಟಿ.
- ಸ್ವಯಂ ದೃಡೀಕರಣ ಪತ್ರ.
- ನೋಂದಾಯಿತಾ ಗುತ್ತಿಗೆದಾರರ ಸಹಿ ಇರುವ ಪತ್ರ.
- ಭಾವಚಿತ್ರ.
ಹೀಗೆ ಈ ಮೇಲಿನ ದಾಖಲೆಗಳನ್ನು ಹೊಂದಿರುವ ಅಸಂಘಟಿತ ವಲಯದ ಕಾರ್ಮಿಕರು ಈ ಕಾರ್ಡನ್ನು ಪಡೆದುಕೊಳ್ಳಬಹುದು. ಈ ಕಾರ್ಡನ್ನು ಹೇಗೆ ಪಡೆದುಕೊಳ್ಳುವುದು, ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು ಎಂಬ ವಿಧಾನವನ್ನು ನೋಡೋಣ.
E-Shram Card : ಇ -ಶ್ರಮ ಕಾರ್ಡ್ ಗೆ ಅರ್ಜಿ ಸಲ್ಲಿಸುವ ವಿಧಾನ.
ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ದೃಷ್ಟಿಯಿಂದ ಜಾರಿಗೆ ತಂದಿರುವ ಒಂದು ಮಹತ್ವದ ಕಾರ್ಡ್ ಇ -ಶ್ರಮ. ಈ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸುವ ವಿಧಾನವನ್ನು ನೋಡೋಣ.
- ಮೊದಲಿಗೆ ಸರ್ಕಾರದ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು. ಅಧಿಕೃತ ಲಿಂಕ್ E-Shram
- ಮುಖಪುಟ ತೆರೆದ ನಂತರ, “ಸ್ವಯಂ ದೃಢೀಕರಣ ” ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
- ಆ ಲಿಂಕ್ ತೆರೆದುಕೊಂಡ ನಂತರ, ನಿಮ್ಮ ಮೊಬೈಲ್ ನಂಬರ್ ಅನ್ನು ಎಂಟ್ರಿ ಮಾಡಬೇಕು.
- ನಂತರ ನಿಮ್ಮ ಆಧಾರ್ ಕಾರ್ಡನ್ನು ಎಂಟ್ರಿ ಮಾಡಬೇಕು.
- ನಂತರ ವೆಬ್ ಸೈಟ್ ನಲ್ಲಿ ನೀಡಿರುವ ಕ್ಯಾಪ್ಟನ್ ಕೋಡ್ ಅನ್ನು ಎಂಟ್ರಿ ಮಾಡಬೇಕು.
- ನಂತರ ನಿಮ್ಮ ಮೊಬೈಲಿಗೆ ಒಟಿಪಿ ಬರುತ್ತದೆ. ಆ ಓಟಿಪಿಯನ್ನು ಎಂಟ್ರಿ ಮಾಡಬೇಕು.
- OTP ಎಂಟ್ರಿ ಮಾಡಿದ ಮೇಲೆ ಸಬ್ಮಿಟ್ ಮಟನ್ ಮೇಲೆ ಕ್ಲಿಕ್ ಮಾಡ ಬೇಕು.
- ನಂತರ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ. ಅರ್ಜಿ ನಮೂನೆಯಲ್ಲಿ ಕೇಳಿರುವ ಎಲ್ಲಾ ವಿವರಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಬೇಕು.
- ಭರ್ತಿ ಮಾಡಿರುವ ಎಲ್ಲಾ ವಿವರಗಳು ಸರಿಯಾಗಿದೆಯೇ ಎಂದು ಒಮ್ಮೆ ಖಚಿತಪಡಿಸಿಕೊಳ್ಳಬೇಕು.
- ನಂತರ ಅರ್ಜಿ ನಮೂನೆಯನ್ನು ಸಬ್ಮಿಟ್ ಮಾಡಬೇಕು.
- ಅರ್ಜಿ ನಮೂನೆಯನ್ನು ಸಬ್ಮಿಟ್ ಮಾಡಿದ ನಂತರ, ಕೇಳಿರುವ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
- ಎಲ್ಲಾ ದಾಖಲೆಗಳನ್ನು ಎಂಟ್ರಿ ಮಾಡಿದ ನಂತರ ಕೊನೆಯದಾಗಿ ಅರ್ಜಿ ನಮೂನೆಯನ್ನು ಸಬ್ಮಿಟ್ ಮಾಡಬೇಕು.
- ನಂತರ ಅರ್ಜಿ ನಮೂನೆಯನ್ನು ಸಲ್ಲಿಸಿದ ದಾಖಲೆಗಳನ್ನು ಪ್ರಿಂಟ್ ಔಟ್ ತೆಗೆದುಕೊಳ್ಳಬೇಕು.
- ನಂತರ ಇಲಾಖೆಯು ಅರ್ಚನಮೂನೆಯನ್ನು ಪರಿಶೀಲಿಸಿದ ನಂತರ 15 ದಿನಗಳ ಒಳಗಾಗಿ ಈ ಶ್ರಮ ಕಾರ್ಡನ್ನು ನೀಡಲಾಗುವುದು.
ಹೀಗೆ ಈ ವಿಧಾನಗಳ ಮೂಲಕ ಅರ್ಜಿ ಸಲ್ಲಿಸಿ, ಇ – ಶ್ರಮ ಕಾರ್ಡನ್ನು ಪಡೆದುಕೊಳ್ಳಬಹುದು. ಈ ಕಾರ್ಡನ್ನು ಪಡೆದುಕೊಂಡಿರುವ ಕಾರ್ಮಿಕರು ಸರ್ಕಾರದಿಂದ ಸಿಗುವ ಅನೇಕ ಸೌಲಭ್ಯಗಳನ್ನು ಪಡೆಯಲು ಅರ್ಜಿಗಳನ್ನು ಸಲ್ಲಿಸಬಹುದು.
E-Shram Card : ಇ -ಶ್ರಮ ಕಾರ್ಡ್ ನ ಪ್ರಯೋಜನಗಳು.
ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಇ – ಶ್ರಮ ಕಾರ್ಡನ್ನು ಪಡೆದಿರುವ ಕಾರ್ಮಿಕರಿಗೆ ಸರ್ಕಾರದಿಂದ ಅನೇಕ ಸೌಲಭ್ಯಗಳು ದೊರೆಯುತ್ತವೆ. ಈ ಕಾರಣ ಮುಖ್ಯ ಉದ್ದೇಶವೇ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಮತ್ತು ಆರ್ಥಿಕ ಭದ್ರತೆ ಒದಗಿಸುವುದಾಗಿದೆ. ಈ ದೃಷ್ಟಿಯಿಂದ ಸರ್ಕಾರವು ಇವರಿಗೆ ಅನೇಕ ರೀತಿಯ ಸೌಲಭ್ಯಗಳನ್ನು ನೀಡಲು ಕೆಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಈ ಕಾರ್ಡನ್ನು ಮಾಡಿಸುವ ಮೂಲಕ ಕಾರ್ಮಿಕರು ಸರ್ಕಾರವು ಜಾರಿಗೆ ತಂದಿರುವ ಅನೇಕ ಸೌಲಭ್ಯಗಳನ್ನು ಪಡೆಯಬಹುದು. ಈ ಕಾರ್ಡ್ ನ ಪ್ರಯೋಜನಗಳನ್ನು ನೋಡೋಣ.
- ಸಾಮಾಜಿಕ ಭದ್ರತೆ: ಇ -ಶ್ರಮ ಕಾರ್ಡ್ ಹೊಂದಿರುವ ಕಾರ್ಮಿಕರು ಸರ್ಕಾರದಿಂದ ಸಿಗುವ ಸಾಮಾಜಿಕ ಭದ್ರತೆ ಪಿಂಚಣಿಯನ್ನು ಪಡೆದುಕೊಳ್ಳಬಹುದು. ತಿಂಗಳಿಗೆ 3000ಗಳ ಪಿಂಚಣಿ ದೊರೆಯುತ್ತದೆ.
- ಆರೋಗ್ಯವೇ ಸೌಲಭ್ಯ ದೊರೆಯುತ್ತದೆ : ಕಾರ್ಮಿಕರು ಈ ಕಾರ್ಡ್ ಹೊಂದಿರುವುದರಿಂದ ಆರೋಗ್ಯ ವಿಮೆಯನ್ನು ಪಡೆಯಲು ಅರ್ಹರಾಗಿರುತ್ತಾರೆ.
- ಈ ಕಾರ್ಡನ್ನು ಪಡೆದಿರುವ ಕಾರ್ಮಿಕರು ಕೆಲಸ ಮಾಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಅಪಘಾತಕ್ಕೆ ಈಡಾದರೆ, ಅಂಗವೈಕಲ್ಯಾ ಹೊಂದಿದರೆ ಒಂದು ಲಕ್ಷ ರೂಪಾಯಿಗಳ ಪರಿಹಾರವನ್ನು ಪಡೆಯಬಹುದು.
- ಕಾರ್ಮಿಕರು ಆಕಸ್ಮಿಕವಾಗಿ ಮೃತಪಟ್ಟರೆ ಕುಟುಂಬಕ್ಕೆ ಎರಡು ಲಕ್ಷ ರೂಪಾಯಿಗಳ ಪರಿಹಾರ ಹಣ ದೊರೆಯುತ್ತದೆ.
- ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸ ಗೋಸ್ಕರ ವಿದ್ಯಾರ್ಥಿ ವೇತನ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಕಾರ್ಡನ್ನು ಹೊಂದಿರುವ ಕಾರ್ಮಿಕರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು.
ಹೀಗೆ ಕಾರ್ಮಿಕರ ಅನೇಕ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಯೋಜನೆ ಕಾರ್ಮಿಕರಿಗೆ ಸಾಮಾಜಿಕ ಮತ್ತು ಆರ್ಥಿಕ ಭದ್ರತೆಯನ್ನು ಒದಗಿಸಿದೆ.