instagram features. ಇನ್ಸ್ಟಾಗ್ರಾಮ್ ನ ವೈಶಿಷ್ಟಗಳು. ಈ ಲೇಖನದಲ್ಲಿ ನಾವು ಇನ್ಸ್ಟಾಗ್ರಾಮ್ ನ ವೈಶಿಷ್ಟ್ಯಗಳ ಬಗ್ಗೆ ತಿಳಿದುಕೊಳ್ಳೋಣ.
ಈಗಿನ ಕಾಲದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ಜನಪ್ರಿಯ ಆಪ್ ಇನ್ಸ್ಟಾಗ್ರಾಮ್ ಆಗಿದೆ. ಹೆಚ್ಚಿನ ಜನರು ಇದರ ಬಳಕೆದಾರರಾಗಿದ್ದಾರೆ. ಇದರಲ್ಲಿ ಫೋಟೋ, ವಿಡಿಯೋ ಗಳನ್ನು ಶೇರ್ ಮಾಡುವ ಮೂಲಕ ಹಲವಾರು ಜನರು ಅತ್ಯಂತ ಜನಪ್ರಿಯನ್ನು ಹೊಂದಿದ್ದಾರೆ. ಯಾವುದೇ ವಿಷಯವಾಗಲಿ ಬಹುಬೇಗ ಜನಪ್ರಿಯತೆ ಹೊಂದಬೇಕಾದರೆ ಸೋಶಿಯಲ್ ಮೀಡಿಯಾದ ಅವಶ್ಯಕತೆ ಇದೆ.
ಈಗಿನ ಕಾಲದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಹೊಂದಿದ ಹಾಗೆ, ಬೇರೆ ಯಾವ ಮಾಧ್ಯಮದಲ್ಲಿಯೂ ಸಹ ಬೇಗ ಜನಪ್ರಿಯತೆ ಹೊಂದಲು ಸಾಧ್ಯವಿಲ್ಲ. ಈ ಇನ್ಸ್ಟಾಗ್ರಾಮ್ನಲ್ಲಿ ಅನೇಕ ಫ್ಯೂಚರ್ ಗಳನ್ನು ಹೊಂದಿದೆ. ಮುಖ್ಯವಾಗಿ ಇದರಲ್ಲಿ ಯಾವುದೇ ಭಯೋತ್ಪಾದಕ ಕೃತ್ಯಗಳ ನಡೆಸುವಂತಹ ಮೆಸೇಜುಗಳು, ಲೈಂಗಿಕತೆಗೆ ಸಂಬಂಧಿಸಿದ ವಿಷಯಗಳು, ಒಟ್ಟಾರೆಯಾಗಿ ಹೇಳುವುದಾದರೆ ಕೆಟ್ಟ ವಿಷಯಗಳನ್ನು ಶೇರ್ ಮಾಡುವುದನ್ನು ನಿಷೇಧಿಸಲಾಗಿದೆ. ಅಂತಹ ವಿಷಯಗಳನ್ನು ಶೇರ್ ಮಾಡಿದ ಬಳಕೆದಾರರ ಮೇಲೆ ಕಾನೂನು ರೀತಿಯ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಮತ್ತು ಖಾತೆಯನ್ನು ನಿಷ್ಕ್ರಿಯಗೊಳಿಸಲಾಗುವುದು.
What is instagram plus features?. ಇನ್ಸ್ಟಾಗ್ರಾಮ್ ಪ್ಲಸ್ ನ ವೈಶಿಷ್ಟ್ಯಗಳು.
Instagram ಒಂದು ಜನಪ್ರಿಯತೆ ಹೊಂದಿರುವ ಸೋಶಿಯಲ್ ಮೀಡಿಯಾದ ಮಾಧ್ಯಮವಾಗಿದೆ. ಇದರಲ್ಲಿ ನೀವು ನಿಮ್ಮ ಸ್ನೇಹಿತರೊಂದಿಗೆ ವಿಡಿಯೋ, ಫೋಟೋ, ಕಥೆಗಳು, ಕವನಗಳು, ಜನಪ್ರಿಯತೆ ಹೊಂದಿದ ವಿಷಯಗಳ ಬಗ್ಗೆ ಮಾಹಿತಿಗಳನ್ನು ಹಂಚಿಕೊಳ್ಳಬಹುದು. ಮನೋರಂಜನಿಗೆ ಸಂಬಂಧಿಸಿದ ವಿಡಿಯೋಗಳನ್ನು ಹಂಚಿಕೊಳ್ಳಬಹುದು. ಒಟ್ಟಾರೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಹೊಂದಿರುವ ಒಂದು ಮಾಧ್ಯಮವಾಗಿದೆ.
- ಇನ್ಸ್ಟಾಗ್ರಾಮ್ ಪ್ಲಸ್ ನಲ್ಲಿ ನಿಮ್ಮ ಫೋಟೋಗಳನ್ನು ಅನೇಕ ರೀತಿಯಲ್ಲಿ ಡಿಸೈನ್ ಮಾಡಿ ಸೆಂಡ್ ಮಾಡಬಹುದು.
- ಫೋಟೋವನ್ನು ಡಬಲ್ ಟ್ಯಾಪ್ ಮಾಡುವ ಮೂಲಕ ಜೂಮ್ ಮಾಡುವ ವೈಶಿಷ್ಟವನ್ನು ಹೊಂದಿದೆ.
- ನಿಮ್ಮ ಸ್ನೇಹಿತರಿಗೆ ಕಳಿಸುವ ಫೋಟೋಗಳನ್ನು, ಅವರು ನಿಮಗೆ ಕಳಿಸಿರುವ ಫೋಟೋಗಳನ್ನು ಅತಿ ಹೆಚ್ಚು ಜೂಮ್ ಮಾಡಿ ನೋಡಿಕೊಳ್ಳಬಹುದು.
- ನೀವು ಯಾವುದೇ ಫೋಟೋಗಳನ್ನು ವಿಡಿಯೋಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.
- ಲಿಂಕ್ ಗಳನ್ನು ಶೇರ್ ಮಾಡಬಹುದು.
- ಆಸಕ್ತಿದಾಯಕ ವಿಷಯಗಳ ಬಗ್ಗೆ ಫೋಟೋ ಮತ್ತು ವಿಡಿಯೋಗಳನ್ನು, ಆಕರ್ಷಣೆ ಮಾಡುವ ರೀತಿಯಲ್ಲಿ ರಚಿಸಿ, ಶೇರ್ ಮಾಡಬಹುದು.
- ನಿಮ್ಮ ಸ್ನೇಹಿತರಿಗೆ ನಿಮ್ಮ ಯು ಆರ್ ಎಲ್ ಅನ್ನೋ ಶೇರ್ ಮಾಡಬಹುದು.
- ಇದರಿಂದ ಅನೇಕ ಫಾಲೋವರ್ಸ್ ಗಳನ್ನು ಹೊಂದಬಹುದು.
ಹೀಗೆ ಇನ್ಸ್ಟಾಗ್ರಾಮ್ ನಲ್ಲಿ ಇನ್ಸ್ಟಾಗ್ರಾಮ್ ಪ್ಲಸ್ ಅನೇಕ ರೀತಿಯ ವೈಶಿಷ್ಟಗಳನ್ನು ಬಳಕೆದಾರರಿಗೆ ನೀಡಿದೆ. ಯಾವುದೇ ರೀತಿಯ ವಿಷಯಗಳು ಅತಿ ಬೇಗ ಜನಪ್ರಿಯತೆ ಹೊಂದಲು ಈ ಮಾಧ್ಯಮದಲ್ಲಿ ಅವಕಾಶವಿದೆ. ಬಹುಬೇಗ ಸಾವಿರಾರು ಬಳಕೆದಾರರನ್ನು ತಲುಪುತ್ತದೆ.
What exactly is instagram used for?. ಇನ್ಸ್ಟಾಗ್ರಾಮ್ ಅನ್ನು ಯಾವುದಕ್ಕೆ ನಿಖರವಾಗಿ ಬಳಸಲಾಗುತ್ತದೆ.
Instagram ಒಂದು ಸೋಶಿಯಲ್ ಮೀಡಿಯಾ ಮಾಧ್ಯಮವಾಗಿರುವುದರಿಂದ ಅತಿ ಹೆಚ್ಚಿನದಾಗಿ ಫೋಟೋ ಮತ್ತು ವಿಡಿಯೋಗಳನ್ನು, ಒಬ್ಬರಿಂದ ಇನ್ನೊಬ್ಬರಿಗೆ ಹಂಚಿಕೊಳ್ಳಲು ಬಳಸಲಾಗುವ ಮಾಧ್ಯಮವಾಗಿದೆ. ಸ್ನೇಹಿತರೊಂದಿಗೆ ಫೋಟೋ ಮತ್ತು ವಿಡಿಯೋಗಳನ್ನು ಹಾಗೂ ಅನೇಕ ವಿಷಯಗಳನ್ನು ಹಂಚಿಕೊಳ್ಳಲು ಈ ಮಾಧ್ಯಮವನ್ನು ಸೂಕ್ತವಾದ ಮಾಧ್ಯಮವಾಗಿದೆ.
ಬಳಕೆದಾರರು ತಮ್ಮ ಪ್ರೊಫೈಲನ್ನು ಕ್ರಿಯೇಟ್ ಮಾಡಿಕೊಳ್ಳುವುದರ ಜೊತೆಗೆ, ಫೋಟೋ ಮತ್ತು ವಿಡಿಯೋಗಳನ್ನು ರಚಿಸಿ, ಸ್ನೇಹಿತರೊಂದಿಗೆ ಹಂಚಿಕೊಳ್ಳಬಹುದು. ಒಂದು ಗುಂಪುಗಳನ್ನು ರಚನೆ ಮಾಡಿ, ಅದರಲ್ಲಿ ಸ್ನೇಹಿತರೊಂದಿಗೆ ಅನೇಕ ವಿಷಯಗಳ ಬಗ್ಗೆ ಚರ್ಚಿಸಬಹುದು.
Instagram ನ ಪ್ರಯೋಜನಗಳು.
Instagram ಸೋಶಿಯಲ್ ವಿಡಿಯೋದಲ್ಲಿ ಜನಪ್ರಿಯತೆ ಹೊಂದಿರುವ ಒಂದು ಮಾಧ್ಯಮವಾಗಿದೆ. ಈ ಮಾಧ್ಯಮದಿಂದ ಅನೇಕ ಪ್ರಯೋಜನಗಳನ್ನು ಬಳಕೆದಾರರು ಪಡೆದುಕೊಳ್ಳಬಹುದು. ಯಾವ ಯಾವ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂಬುದನ್ನು ಈ ಕೆಳಗೆ ವಿವರಿಸಲಾಗಿದೆ.
- ಜಾಹೀರಾತುಗಳನ್ನು ಹಂಚಿಕೊಳ್ಳಬಹುದು : ಇನ್ಸ್ಟಾಗ್ರಾಮ್ ನ ಒಂದು ಬಹು ಮುಖ್ಯ ಪ್ರಯೋಜನವೆಂದರೆ, ಇದರಲ್ಲಿ ನೀವು ಜಾಹೀರಾತುಗಳನ್ನು ಹಂಚಿಕೊಳ್ಳಬಹುದು. ಫೋಟೋ, ವಿಡಿಯೋ ಮೂಲಕ ಜಾಹೀರಾತುಗಳನ್ನು ಹಂಚಿಕೊಳ್ಳಬಹುದು. ಆಕರ್ಷಕದಾಯಕವಾಗಿರುವಂತಹ ಚಿತ್ರಗಳ ದೃಶ್ಯಗಳನ್ನು ನಿಮ್ಮ ಯಾವುದೇ ಬ್ರಾಂಡ್ ಜಾಹಿರಾತುಗಳನ್ನು ಹಂಚಿಕೊಳ್ಳಬಹುದು.
- ವಿಡಿಯೋ ಜಾಹೀರಾತುಗಳನ್ನು ಹಂಚಿಕೊಳ್ಳಬಹುದು : instagram ನಲ್ಲಿ ನೀವು ನಿಮ್ಮ ಯಾವುದೇ ಪ್ರಾಡಕ್ಟ್ ಗಳ ಬಗ್ಗೆ ವೀಡಿಯೋಗಳನ್ನು ತಯಾರಿಸಿ ಜಾಹಿರಾತುಗಳನ್ನು ಹಂಚಿಕೊಳ್ಳಬಹುದು. ಯಾವುದೇ ಒಂದು ಒಳ್ಳೆಯ ವಿಷಯಗಳ ಬಗ್ಗೆ ಸಹ ಮಾಹಿತಿಯನ್ನು ಹಂಚಿಕೊಳ್ಳಬಹುದು.
- ಜನಪ್ರಿಯತೆ ಹೊಂದಿದ ಸ್ಟೋರಿಗಳನ್ನು ಹಂಚಿಕೊಳ್ಳಬಹುದು : ಕಥೆಗಳು, ವಿಷಯಗಳು ಬಗ್ಗೆ ಸ್ಟೋರಿಗಳನ್ನು ರಚಿಸಿ ಹಂಚಿಕೊಳ್ಳಬಹುದು.
- ಜನಪ್ರಿಯತೆ ಹೊಂದಬಹುದು : instagram ನ ಮೂಲಕ ಯಾವುದೇ ಒಂದು ಒಳ್ಳೆಯ ವಿಷಯಗಳ ಬಗ್ಗೆ ಮಾಹಿತಿಗಳನ್ನು ಹಂಚಿಕೊಂಡರೆ, ಬಹುಬೇಗ ಜನರನ್ನು ತಲುಪಿ ಜನಪ್ರಿಯತೆಯನ್ನು ಗಳಿಸಿಕೊಳ್ಳಬಹುದು.
- ಫಾಲೋವರ್ಸ್ ಹೊಂದಬಹುದು : ಟ್ರೆಂಡಿಂಗ್ ನಲ್ಲಿರುವ ವಿಷಯಗಳ ಬಗ್ಗೆ ಪ್ರಸ್ತಾಪ ಮಾಡುವುದರಿಂದ, ವಿಷಯಗಳನ್ನು ಹಂಚಿಕೊಳ್ಳುವುದರಿಂದ, ನಿಮ್ಮ ಪ್ರೊಫೈಲ್ ಗೆ ಅನೇಕ ಫಾಲೋವರ್ಸ್ ಹೊಂದಬಹುದು.
- ಯಾವುದೇ ಮತ, ಲಿಂಗ ಭೇದ ಇಲ್ಲದೆ ಪರಸ್ಪರ ಒಬ್ಬರಿಂದ ಇನ್ನೊಬ್ಬರಿಗೆ ಅನುಕೂಲ ವಾಗುವಂತಹ ಎಲ್ಲಾ ವಿಷಯಗಳ ಬಗ್ಗೆ ಚರ್ಚಿಸಬಹುದು. ಮಾಹಿತಿಗಳನ್ನು ಸಂಗ್ರಹಿಸಿಕೊಳ್ಳಬಹುದು.
- ಉದ್ಯೋಗ ಮಾಹಿತಿಯನ್ನು ಪಡೆಯಬಹುದು: ಅನೇಕ ರೀತಿಯ ಸ್ಪರ್ದಾತ್ಮಕ ಸಂಸ್ಥೆಗಳು, ಉದ್ಯೋಗ ಜಾಹಿರಾತುಗಳು, ಸರ್ಕಾರಿ ಉದ್ಯೋಗದ ಬಗ್ಗೆ ಮಾಹಿತಿಗಳನ್ನು ಪಡೆಯಬಹುದು.
- ಸ್ವಂತ ಬ್ರಾಂಡ್ಗಳ ಪ್ರಮೋಷನ್ ಮಾಡಬಹುದು : ನೀವು ಯಾವುದೇ ರೀತಿಯ ಒಂದು ಪ್ರಾಡಕ್ಟ್ ಅನ್ನು ತಯಾರಿಸಿ, ಅದಕ್ಕೆ ಒಂದು ಬ್ರಾಂಡ್ ನೇಮ್ ಇಟ್ಟು, ಈ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಬಹುದು.
- ಉತ್ಪನ್ನಗಳ ಮಾರಾಟ : ಗ್ರಾಮೀಣ ಮತ್ತು ನಗರ ಪ್ರದೇಶದ ಜನರು ಅನೇಕ ರೀತಿಯ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಯಶಸ್ಸನ್ನು ಗಳಿಸಬಹುದು.
- ಆದಾಯ ಗಳಿಕೆ : ಆದಾಯ ಗಳಿಕೆಯನ್ನು ಸಹ ಮಾಡಬಹುದು. ಒಂದು ಒಳ್ಳೆಯ ಕಂಪನಿಯ ಪ್ರಾಡಕ್ಟ್ ಗಳನ್ನು ಪ್ರಮೋಷನ್ ಮಾಡುವ ಮೂಲಕ ನಿಮ್ಮ ಆದಾಯವನ್ನು ಗಳಿಸಿಕೊಳ್ಳಬಹುದು.
ಹೀಗೆ instagram ಅನ್ನು ಬಳಸುವುದರಿಂದ ಅನೇಕ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.
What is not allowed on Instagram?. instagram ನಲ್ಲಿ ಯಾವುದಕ್ಕೆ ಅನುಮತಿ ಇಲ್ಲ.
Instagram ಒಂದು ಸೋಶಿಯಲ್ ಮೀಡಿಯಾ ಆಗಿರುವುದರಿಂದ ಇದರಲ್ಲಿ ಅನೇಕ ವಿಷಯಗಳ ಬಗ್ಗೆ ಪ್ರಚಾರ ಮತ್ತು ಮಾಹಿತಿಯನ್ನು ನೀಡುವ ಹಾಗೆ ಇಲ್ಲ. ಉದಾಹರಣೆಗೆ ಭಯೋತ್ಪಾದನೆಗೆ ಸಂಬಂಧಿಸಿದ ವಿಷಯಗಳು, ಕೋಮುವಾದಿ ವಿಷಯಗಳು, ಅಪರಾಧಗಳ ಬಗ್ಗೆ, ದೇಶದ ಗುಂಪುಗಳ ಬಗ್ಗೆ, ಯಾವುದೇ ರೀತಿಯ ವಿಷಯಗಳನ್ನು ಹಂಚಿಕೊಳ್ಳಲು ಅನುಮತಿ ಇಲ್ಲ.
ಲೈಂಗಿಕ ವಿಷಯಗಳ ಬಗ್ಗೆ ಹಂಚಿಕೊಳ್ಳುವುದು ದೊಡ್ಡ ಅಪರಾಧಕ್ಕೆ ಕಾರಣವಾಗಬಹುದು, ಈ ವಿಷಯಗಳ ಬಗ್ಗೆ ಹಂಚಿಕೊಳ್ಳುವುದಕ್ಕೆ ಅನುಮತಿ ಇರುವುದಿಲ್ಲ. ಮಧ್ಯ ಮತ್ತು ತಂಬಾಕು ವಿಷಯಗಳ ಬಗ್ಗೆ ಮಾಹಿತಿ ಮತ್ತು ಮಾರಾಟ ಮಾಡುವ ಪ್ರಕ್ರಿಯೆಯನ್ನು ನಿಷೇಧಿಸಲಾಗಿದೆ. ಜಾರು ಸಹ ಈ ವಿಷಯಗಳ ಬಗ್ಗೆ ಚರ್ಚಿಸುವಂತಿಲ್ಲ ಮತ್ತು ಮಾರಾಟ ಮಾಡುವಂತಿಲ್ಲ. ಅಂತಹ ಯಾವುದಾದರೂ ಪ್ರಕರಣಗಳು ಕಂಡು ಬಂದಲ್ಲಿ, ಕಾನೂನು ರೀತಿಯ ಕಠಿಣ ಶಿಕ್ಷೆಯನ್ನು ನೀಡಲಾಗುತ್ತದೆ.
ವೈದ್ಯಕೀಯ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಔಷಧಿಗಳನ್ನು ಮಾರಾಟ ಮಾಡಲು ಅವಕಾಶ ಇರುವುದಿಲ್ಲ. ಉದಾಹರಣೆಗೆ ಅನೇಕ ಕಾಯಿಲೆಗಳಿಗೆ ಔಷಧಿಗಳು ಲಭ್ಯವಿದೆ. ಅದನ್ನು ಪಡೆದುಕೊಳ್ಳುವುದು. ಮಾರಾಟ ಮಾಡುವುದು. ನಿಷೇಧಿಸಲಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ ಸೋಶಿಯಲ್ ಮೀಡಿಯಾ ಒಂದು ಜನಪ್ರಿಯತೆ ಹೊಂದಿರುವ ಮಾಧ್ಯಮವಾಗಿದೆ. ಇದರಲ್ಲಿ ಒಳ್ಳೆಯ ವಿಷಯಗಳ ಬಗ್ಗೆ ಚರ್ಚಿಸಿ ಮಾಹಿತಿಗಳನ್ನು ಹಂಚಿಕೊಳ್ಳಬೇಕು. ಇದರಿಂದ ಅನೇಕ ಜನರಿಗೆ ಮಾಹಿತಿಗಳು ಸಿಗುತ್ತವೆ.
Instagram ನಿಂದ ಹಣವನ್ನು ಗಳಿಸುವ ವಿಧಾನಗಳು.
Instagram ಒಂದು ಬಹು ಸಂಖ್ಯಾತ ಜನರನ್ನು ಹೊಂದಿರುವ ಸಾಮಾಜಿಕ ಜಾಲತಾಣ ( ಸೋಶಿಯಲ್ ಮೀಡಿಯಾ) ವಾಗಿದೆ. ಸುಮಾರು ಒಂದು ಬಿಲಿಯನ್ ಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿದೆ. ಮೊಟ್ಟಮೊದಲಿಗೆ ಫೋಟೋ ಹಂಚಿಕೆ ಅಪ್ಲಿಕೇಶನ್ ಆಗಿ ಪರಿಚಯ ಹೊಂದಿದ ಇನ್‌ಸ್ಟಾಗ್ರಾಂ ಈಗ ಅನೇಕ ಕಾರ್ಯಗಳನ್ನು ನಡೆಸುತ್ತಿದೆ. ಇನ್ಸ್ಟಾಗ್ರಾಮ್ ಇಂದ ಹಣಗಳಿಸುವ ವಿಧಾನಗಳನ್ನು ನೋಡೋಣ .
- ಬ್ರಾಂಡ್ ಪ್ರಮೋಷನ್ : ಇನ್ಸ್ಟಾಗ್ರಾಮ್ ಖಾತೆಯಲ್ಲಿ ನೀವು ಬಹು ಸಂಖ್ಯಾತ ಫಾಲೋವರ್ಸ್ ಅನ್ನು ಹೊಂದಿದ್ದರೆ, ಹಲವಾರು ಕಂಪನಿಗಳು ತಮ್ಮ ಪ್ರಾಡಕ್ಟ್ ಗಳನ್ನು ರಿವೀವ್ ಮಾಡಲು ನಿಮಗೆ ಹಣವನ್ನು ನೀಡುತ್ತಾರೆ.
- ಬೋನಸ್ : ಅತಿ ಹೆಚ್ಚಿನ ಫಲವರ್ಸ್ ಹೊಂದಿದ್ದಾರೆ, ನೀವು ಹಾಕುವಂತಹ ರಿಯಲ್ ಅಥವಾ ಫೋಟೋಗಳು ಹೆಚ್ಚಿನ ಲೈಕ್ ಮತ್ತು ಇವುಗಳನ್ನು ಪಡೆದುಕೊಂಡರೆ, ನಿಮಗೆ ಬೋನಸ್ ರೂಪದಲ್ಲಿ ಹಣವನ್ನು ನೀಡುವ ಪದ್ಧತಿಯನ್ನು ಇನ್ಸ್ಟಾಗ್ರಾಮ್ ಇತ್ತೀಚೆಗೆ ಜಾರಿಗೆ ತಂದಿದೆ.
- ಪ್ರಾಡಕ್ಟ್ಗಳನ್ನು ಸೇಲ್ ಮಾಡಬಹುದು : ನೀವು ಒಂದು ಒಳ್ಳೆಯ ಪ್ರಾಡಕ್ಟ್ ಅನ್ನು ರಿವೀವ್ ಮಾಡುವ ಮೂಲಕ ಬಳಕೆದಾರರಿಗೆ ಪರಿಚಯ ಮಾಡಿಕೊಟ್ಟರೆ, ಅವರು ಅದನ್ನು ನಿಮ್ಮ ಲಿಂಕ್ ಮೂಲಕ ಪಡೆದುಕೊಂಡರೆ, ಕಂಪನಿಯಿಂದ ನಿಮಗೆ ಕಮಿಷನ್ ರೂಪದಲ್ಲಿ ಹಣ ಸಿಗುತ್ತದೆ.
ಹೀಗೆ instagram ಇಂದ ನೀವು ಹಣವನ್ನು ಗಳಿಸಲು ನಿಮ್ಮ ಖಾತೆಯನ್ನು ಡಿಸ್ನೆಸ್ ಕಥೆಯಾಗಿ ಪರಿವರ್ತನೆ ಮಾಡಿಕೊಂಡಿರಬೇಕು. ಖಾಸಗಿ ಖಾತೆಯನ್ನು ಹೊಂದಿದ್ದರೆ ಯಾವುದೇ ಪ್ರಯೋಜನ ಇಲ್ಲ. ಬಿಜಿನೆಸ್ ಖಾತೆಯಾಗಿ ಪರಿವರ್ತನೆ ಮಾಡಿಕೊಂಡು ಅನೇಕ ಜನ ಫಾಲೋವರ್ಸ್ ಅನ್ನು ಹೊಂದಿರಬೇಕು.
Instagram ಸ್ಟಿಕರ್ ನ ವೈಶಿಷ್ಟವೇನು?.
Instagram ನ ಪೋಸ್ಟ್ ಗಳಲ್ಲಿ ನೀವು ಲಿಂಕ್ ಸ್ಟಿಕ್ಕರನ್ನು ಬಳಸಬಹುದು. ಇದರಿಂದ ನೀವು ಬೇರೆಯ ಲಿಂಕ್ ಗಳನ್ನು ಶೇರ್ ಮಾಡಬಹುದು. ಲಿಂಕ್ ಗಳನ್ನು ಶೇರ್ ಮಾಡಲು ಇದು ಒಂದು ವಿಶಿಷ್ಟ ರೀತಿಯ ಮಾರ್ಗವಾಗಿದೆ. ಮತ್ತು ಲಿಂಕ್ ಗಳನ್ನು ನಿಮ್ಮ ಬಯೋದ ಮೂಲಕ ಬಳಕೆದಾರರಿಗೆ ನೀಡಬಹುದು. ಇನ್ಸ್ಟಾಗ್ರಾಮ್ ಖಾತೆಯಲ್ಲಿ ನೀವು ಕಥೆ ಕವನಗಳನ್ನು ಬರೆಯುತ್ತಿದ್ದರೆ, ಅವುಗಳನ್ನು ವಿಶಿಷ್ಟ ರೀತಿಯಲ್ಲಿ ಕಾಣುವಂತೆ ಮಾಡಲು ಈ ಸ್ಟಿಕರ್ಗಳನ್ನು ಬಳಸಬಹುದು.
ವಿಷಯಗಳನ್ನು ಚರ್ಚಿಸಲು, ಅನೇಕ ಗ್ರಾಹಕರನ್ನು ಆಕರ್ಷಿಸಲು ಈ ಸ್ಟಿಕರ್ಗಳು ಉಪಯೋಗವಾಗುತ್ತವೆ. ಯಾವುದೋ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಲು ಮತ್ತು ಉತ್ತರಗಳನ್ನು ಹುಡುಕಲು, ಆ ವಿಷಯದ ಬಗ್ಗೆ ಜನರಿಂದ ಮಾಹಿತಿಗಳನ್ನು ತಿಳಿಯಲು ವೋಟ್ ಬಳಸಲು ಈ ಸ್ಟಿಕರ್ಗಳು ಸಹಾಯಕವಾಗಿವೆ. ಹೀಗೆ ಅನೇಕ ವೈಶಿಷ್ಟಗಳನ್ನು ನೀಡುತ್ತಾ ಬಂದಿದೆ. ಅನೇಕ ರೀತಿಯ ಫ್ಯೂಚರ್ಸ್ ಗಳನ್ನು ಜನ ಬಳಕೆದಾರರಿಗೆ ನೀಡುತ್ತಾ ಬಂದಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಇನ್ಸ್ಟಾಗ್ರಾಮ್ ಒಂದು ಸಾಮಾಜಿಕ ಜಾಲತಾಣವಾಗಿ ಅತ್ಯಂತ ಜನಪ್ರಿಯತೆಯನ್ನು ಹೊಂದಿರುವ ಒಂದು ಮಾಧ್ಯಮವಾಗಿ ಹೊರಹೊಮ್ಮಿದೆ.
FAQs ಪ್ರಶ್ನೆಗಳು.
1. instagram ಅನ್ನು ಹೇಗೆ ಡೌನ್ಲೋಡ್ ಮಾಡಬಹುದು?.
ಆಂಡ್ರಾಯ್ಡ್ ಮತ್ತು ಸ್ಮಾರ್ಟ್ ಫೋನ್ ಬಳಕೆದಾರರು ಇನ್ಸ್ಟಾಗ್ರಾಮ್ ಆಪ್ ಅನ್ನು ಪ್ಲೇ ಸ್ಟೋರ್ ನ ಮೂಲಕ ಡೌನ್ಲೋಡ್ ಮಾಡಿಕೊಳ್ಳ ಬಹುದು.
2. instagram ಅಲ್ಲಿ ಎಷ್ಟು ನಿಮಿಷದ ವಿಡಿಯೋವನ್ನು ಹಂಚಿಕೊಳ್ಳಬಹುದು?.
15,30,60 ನಿಮಿಷದ ವಿಡಿಯೋಗಳನ್ನು ಹಂಚಿಕೊಳ್ಳಬಹುದು.
3. instagram ನಲ್ಲಿ ಫಾಲೋವರ್ಸ್ ಅನ್ನು ಹೇಗೆ ಪಡೆಯುವುದು?.
ನೀವು ನಿಮ್ಮ ಪ್ರೊಫೈಲ್ ಅನ್ನು ಕ್ರಿಯೇಟ್ ಮಾಡುವ ಮೂಲಕ instagram ನ ಬಳಕೆದಾರರಾಗಬೇಕು. ನಂತರ ನೀವು ನಿಮ್ಮ ಪ್ರೊಫೈಲ್ ಲಿಂಕ್ ಅನ್ನು ಶೇರ್ ಮಾಡುವ ಮೂಲಕ ಫಾಲೋವರ್ಸ್ ಹೊಂದಬಹುದು. ಅಥವಾ ನೀವು ಒಳ್ಳೆಯ ವಿಷಯಗಳ ಬಗ್ಗೆ ಮಾಹಿತಿಗಳನ್ನು ನೀಡುತ್ತಿದ್ದರೆ ಅನೇಕ ಜನ ನಿಮ್ಮ ಪ್ರೊಫೈಲ್ ಅನ್ನು ಫಾಲೋ ಮಾಡುತ್ತಾರೆ. ಉದ್ಯೋಗಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೀಡುತ್ತಿದ್ದಾರೆ ಬಹುಬೇಗ ಫಾಲೋವರ್ಸ್ ಪಡೆದುಕೊಳ್ಳಬಹುದು.
4. How do I delete my instagram account on my phone 2024?. ಇನ್ಸ್ಟಾಗ್ರಾಮ್ ಅಕೌಂಟನ್ನು ಡಿಲೀಟ್ ಮಾಡೋದು ಹೇಗೆ.
ಇನ್ಸ್ಟಾಗ್ರಾಮ್ ಖಾತೆಯನ್ನು ಡಿಲೀಟ್ ಮಾಡಲು ನೀವು ಮೊದಲು ನಿಮ್ಮ ಪ್ರೊಫೈಲನ್ನು ಓಪನ್ ಮಾಡಬೇಕು. ನಂತರ ನೀವು ಸೆಟ್ಟಿಂಗ್ ಅನ್ನು ಓಪನ್ ಮಾಡಬೇಕು. ನಂತರ ನೀವು ವೈಯಕ್ತಿಕ ವಿವರಗಳಿಗೆ ಹೋಗಬೇಕು.ನಂತರ ಖಾತೆಯ ವಿವರಗಳನ್ನು ಓಪನ್ ಮಾಡಬೇಕು. ಡಿಲೀಟ್ ಬಟನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಅದು ನಿಮಗೆ ಖಚಿತವಾಗಿಸಲು ಮಾಹಿತಿಯನ್ನು ಕೇಳುತ್ತದೆ. ಆಗ ನೀವು ಓಕೆ ಎಂದು ಟೈಪ್ ಮಾಡಬೇಕು. ಡಿಲೀಟ್ ಬಟನ್ ಮೇಲೆ ಕ್ಲಿಕ್ ಮಾಡಿ. ಹೀಗೆ ಮಾಡುವುದರಿಂದ ನಿಮ್ಮ instagram ಖಾತೆಯೂ ಡಿಲೀಟ್ ಆಗುತ್ತದೆ.