Tharak7star

NERGA : ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ.

NERGA

NERGA : ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ. ಈ ಲೇಖನದಲ್ಲಿ ನಾವು ನರೇಗಾ ಯೋಜನೆಯ ಬಗೆಗಿನ ಸಂಪೂರ್ಣ ಮಾಹಿತಿಯನ್ನು ನೋಡೋಣ.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNERGA). ಈ ಯೋಜನೆ ಗ್ರಾಮೀಣ ಪ್ರದೇಶದ ಜನರಿಗೆ ಒಂದು ವರ್ಷದಲ್ಲಿ ನೂರು ದಿನಗಳ ಉದ್ಯೋಗವನ್ನು ನೀಡುವ ಯೋಜನೆಯಾಗಿದೆ. ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯ ಕೂಲಿಯನ್ನು ಹೆಚ್ಚಿಸಿ ಆದೇಶವನ್ನು ಹೊರಡಿಸಿದೆ. ಹೊಸ ಕೂಲಿಯ ದರದಂತೆ ಕರ್ನಾಟಕದಲ್ಲಿ ರೂ.349 ಒಂದು ದಿನಕ್ಕೆ ಸಿಗಲಿದೆ. ಉದ್ಯೋಗ ಖಾತ್ರಿ ಯೋಜನೆಯ ಕಾರ್ಮಿಕರಿಗೆ ಇದು ತುಂಬಾ ಸಿಹಿ ಸುದ್ದಿಯಾಗಿದೆ. ಗ್ರಾಮೀಣ ಅಭಿವೃದ್ಧಿ ಸಚಿವಾಲಯವು ಹೊಸ ಕೋಳಿಯನ್ನು ಇದೆ ಏಪ್ರಿಲ್ ಒಂದರಿಂದ ಜಾರಿಯಾಗುವಂತೆ ಆದೇಶ ಹೊರಡಿಸಿದೆ.

ಕರ್ನಾಟಕದಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಕಾರ್ಮಿಕರಿಗೆ ದಿನಕ್ಕೆ 316 ರೂ ಈ ಮೊದಲು ಕೂಲಿ ನೀಡುತ್ತಿದ್ದರು. ಆದರೆ ಈಗ ಹೊಸ ಆದೇಶದಂತೆ ದಿನದ ಕೂಲಿಯನ್ನು  ರೂ. 349  ಗೆ ಹೆಚ್ಚಿಸಲಾಗಿದೆ. ಭಾರತ ಸರ್ಕಾರವು ಸೆಪ್ಟೆಂಬರ್ 25 ರಲ್ಲಿ ಯೋಜನೆಯನ್ನು ಜಾರಿಗೆ ತಂದಿತ್ತು. ಈ ಯೋಜನೆಯಲ್ಲಿ ಪ್ರತಿವರ್ಷ ನೂರು ದಿನಗಳ ವರೆಗೆ ಒಬ್ಬ ವ್ಯಕ್ತಿಗೆ ಉದ್ಯೋಗವನ್ನು ನೀಡಲಾಗುತ್ತದೆ.

NERGA : ಉದ್ಯೋಗ ಖಾತ್ರಿ ಯೋಜನೆ ಎಂದರೇನು?. ಮಾಹಿತಿ.

NERGA : ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ. ಎಂದರೇನು ಎಂಬುದರ ಬಗ್ಗೆ  ಮಾಹಿತಿಯನ್ನು ನೋಡೋಣ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಎಂದರೆ ಗ್ರಾಮೀಣ ಪ್ರದೇಶದ ಜನರಿಗೆ ಒಂದು ವರ್ಷದಲ್ಲಿ 100 ದಿನಗಳ ಉದ್ಯೋಗ ನೀಡಿ, ಕೂಲಿಯನ್ನು ನೀಡುವ ಯೋಜನೆಯಾಗಿದೆ, ಅಂದರೆ ಉದ್ಯೋಗ ರಹಿತ ಕಾರ್ಮಿಕರಿಗೆ ಉದ್ಯೋಗ ನೀಡುವುದು ಇದರ ಪ್ರಮುಖ ಉದ್ದೇಶವಾಗಿದೆ. ಜೊತೆಗೆ ಆರ್ಥಿಕ ಸಹಾಯ ನೀಡುವ ದೃಷ್ಟಿಯಿಂದ ನೂರು ದಿನಗಳ ಕೆಲಸಕ್ಕೆ ಕನಿಷ್ಠ ಕೂಲಿಯನ್ನು ನೀಡುವುದು ಇದರ ಉದ್ದೇಶವಾಗಿದೆ.

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (NERGA ).ಅಥವಾ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ  ಉದ್ಯೋಗ ಖಾತರಿ ಯೋಜನೆ (MGNERGA ) ಎಂಬ ಹೆಸರುಗಳಿಂದ ಈ ಯೋಜನೆಯನ್ನು ಕರೆಯುತ್ತಾರೆ. ಈ ಯೋಜನೆಯನ್ನು ಸೆಪ್ಟೆಂಬರ್ 7 2006ರಲ್ಲಿ ಜಾರಿಗೆ ತರಲಾಯಿತು.ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯ ಮತ್ತು ರಾಜ್ಯ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಇಲಾಖೆಯು ಯೋಜನೆಯ ಸಂಪೂರ್ಣ ಅಧಿಕಾರವನ್ನು ಹೊಂದಿರುತ್ತದೆ.

ಈ ಯೋಜನೆಯ ಪ್ರಮುಖ ಉದ್ದೇಶವೆಂದರೆ ಗ್ರಾಮೀಣ ಪ್ರದೇಶದ ಜನರಿಗೆ ಕನಿಷ್ಠ ನೂರು ದಿನಗಳ ಕೆಲಸವನ್ನು ನೀಡುವುದು. ಬಡವರ ಜೀವನಧಾರವನ್ನು ಬಲಪಡಿಸುವುದು ಮತ್ತು ಆರ್ಥಿಕ ಸಹಾಯ ನೀಡುವುದು. ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡುವುದು. ಇದರ ಜೊತೆಗೆ ಪಂಚಾಯತ್ ರಾಜ್ ಸಂಸ್ಥೆಯನ್ನು ಬಲಪಡಿಸುವುದು. ಇದು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದ ಕುಟುಂಬಗಳಿಗೆ, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ, ಉದ್ಯೋಗ ರೈತ ವಹಿಸ್ಕರಿಗೆ, 100 ದಿನಗಳ ಕೆಲಸವನ್ನು ನೀಡುವುದು ಮತ್ತು ಕೂಲಿಯನ್ನು ನೀಡುವುದು.

NERGA : ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸೌಲಭ್ಯ ಪಡೆಯಲು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು.

NERGA

NERGA : ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸೌಲಭ್ಯವನ್ನು ಪಡೆಯಲು ಈ ಕೆಳಗಿನ ಅರ್ಹತೆ ಹೊಂದಿರಬೇಕು.

  •  ಮೊದಲನೆಯದಾಗಿ ಉದ್ಯೋಗ ಖಾತ್ರಿ ಯೋಜನೆಯ ಜಾಬ್ ಕಾರ್ಡ್ ಹೊಂದಿರಬೇಕು.
  •  18 ವರ್ಷಕ್ಕಿಂತ ಮೇಲ್ಪಟ್ಟ ಇರಬೇಕು.
  •  ಆಧಾರ್ ಕಾರ್ಡ್ ಹೊಂದಿರಬೇಕು.
  •  ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರಬೇಕು.

ಈ ಮೇಲಿನ ಅರ್ಹತೆ ಹೊಂದಿರುವ ವ್ಯಕ್ತಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸಿ, ಉದ್ಯೋಗ ಖಾತ್ರಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ, ಜಾಬ್ ಕಾರ್ಡನ್ನು ಪಡೆದು, ಕೆಲಸವನ್ನು ಪಡೆಯಬಹುದು.

NERGA : ಯೋಜನೆಯ ಜಾಬ್ ಕಾರ್ಡ್ ಪಡೆಯುವ ವಿಧಾನ.

NERGA : ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸೌಲಭ್ಯವನ್ನು ಪಡೆಯಲು ಮುಖ್ಯವಾಗಿ ಜಾಬ್ ಕಾರ್ಡ್ ಇರಬೇಕು. ಈ ಜಾಬ್ ಕಾರ್ಡಿಗೆ ಅರ್ಜಿ ಸಲ್ಲಿಸಿ ಪಡೆಯುವ ವಿಧಾನವನ್ನು ಈ ಕೆಳಗೆ ನೀಡಲಾಗಿದೆ.

  1.  ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಭೇಟಿ ನೀಡಬೇಕು.
  2.  ಗ್ರಾಮ ಪಂಚಾಯತಿ ಅಧಿಕಾರಿಯ ಮಾರ್ಗ ಸೂಚಿಯಂತೆ ಉದ್ಯೋಗ ಖಾತ್ರಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕು.
  3.  ಉದ್ಯೋಗ ಖಾತ್ರಿ ಯೋಜನೆಗೆ ಅರ್ಜಿ ಸಲ್ಲಿಸುವ ವ್ಯಕ್ತಿಯು 18 ವರ್ಷಕ್ಕಿಂತ ಮೇಲ್ಪಟ್ಟಿರುವವರಾಗಿರಬೇಕು.
  4.  ಅರ್ಜಿ ಸಲ್ಲಿಸುವಾಗ  ಕೇಳಿರುವ ದಾಖಲೆಗಳನ್ನು ನೀಡಬೇಕು.
  5.  ಆಧಾರ್ ಕಾರ್ಡನ್ನು ನೀಡಬೇಕು.
  6.  ಇತ್ತೀಚಿಗಿನ ಭಾವಚಿತ್ರವನ್ನು ನೀಡಬೇಕು.
  7.  ಅರ್ಜಿ ಸಲ್ಲಿಸಿದ 15 ದಿನಗಳ ಒಳಗಾಗಿ, ಅರ್ಜಿಯನ್ನು ಪರಿಶೀಲಿಸಿ, ಗ್ರಾಮ ಪಂಚಾಯಿತಿ ಅಧಿಕಾರಿಯ ಜಾಬ್ ಕಾರ್ಡನ್ನು ನೀಡುತ್ತಾರೆ.
  8.  ಜಾಬ್ ಕಾರ್ಡ್ ಕಡ್ಡಾಯವಾಗಿ ಫಲಾನುಭವಿಯ ಹತ್ತಿರ ಇಟ್ಟುಕೊಂಡಿರಬೇಕು.
  9.  ಪ್ರತಿ 15 ದಿನಕ್ಕೊಮ್ಮೆ, ಉದ್ಯೋಗ ಮಾಡಿರುವ ವಿವರವನ್ನು ನಮೂದಿಸಬೇಕು.
  10.  ಕೆಲಸ ಮಾಡಿದ ದಿನಗಳು ಮತ್ತು ಪಾವತಿಸಿದ ಕೂಲಿಯನ್ನು ಜಾಬ್ ಕಾರ್ಡ್ ನಲ್ಲಿ ಎಂಟ್ರಿ ಮಾಡಬೇಕು.

ಹೀಗೆ ಗ್ರಾಮೀಣ ಪ್ರದೇಶದ ಜನರು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಹಾಜರಾಗುವ ಮೊದಲು ಜಾಬ್ ಗಾರ್ಡನ್ನು, ತಮ್ಮ ಗ್ರಾಮ ಪಂಚಾಯಿತಿಯಿಂದ ಪಡೆದುಕೊಂಡಿರಬೇಕು.

ಉದ್ಯೋಗ ಖಾತ್ರಿ ಯೋಜನೆ

NERGA : ಜಾಬ್ ಕಾರ್ಡ್ ಯಾವಾಗ ರದ್ದುಪಡಿಸಬಹುದು.

NERGA : ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಉದ್ಯೋಗ ಮಾಡಲು ಪಡೆದುಕೊಂಡಿರುವ ಜಾಬ್ ಕಾರ್ಡನ್ನು ಈ ಕೆಳಗಿನ ಸಂದರ್ಭಗಳಲ್ಲಿ ರದ್ದುಪಡಿಸಬಹುದು.

  •  ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಕುಟುಂಬವು, ನಗರ ಪ್ರದೇಶಕ್ಕೆ ಶಾಶ್ವತವಾಗಿ ವಲಸೆ ಹೋದ ಸಂದರ್ಭದಲ್ಲಿ.
  •  ನಕಲಿ ಜಾಬ್ ಕಾರ್ಡ್ ಹೊಂದಿದ ಸಂದರ್ಭದಲ್ಲಿ.
  •  ನಕಲಿ ದಾಖಲೆಗಳನ್ನು ಸಲ್ಲಿಸಿ ಜಾಬ್ ಕಾರ್ಡ್ ಅನ್ನು ಪಡೆದಿದ್ದ ಪಕ್ಷದಲ್ಲಿ ಜಾಬ್ಕಾರ್ಡನ್ನು ರದ್ದುಪಡಿಸಬಹುದು.
  •  ಕುಟುಂಬವು ಗ್ರಾಮಪಂಚಾಯಿತಿ ವ್ಯಾಪ್ತಿಯಿಂದ ಶಾಶ್ವತವಾಗಿ ಬೇರೆ ಕಡೆಗೆ ಹೊರಹೋದ ಪಕ್ಷದಲ್ಲಿ.

ಈ ಸಂದರ್ಭಗಳಲ್ಲಿ ಪಡೆದಂತಹ ಜಾಬ್ ಕಾರ್ಡ್ಗಳನ್ನು ರದ್ದುಪಡಿಸಬಹುದು.

NERGA : ಉದ್ಯೋಗ ಖಾತ್ರಿ ಯೋಜನೆಯ ಕೆಲಸಕ್ಕೆ ಅರ್ಜಿ ಸಲ್ಲಿಸುವ ವಿಧಾನ.

NERGA

NERGA : ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಕೆಲಸವನ್ನು ಪಡೆಯಲು ಅರ್ಜಿ ಸಲ್ಲಿಸುವ ವಿಧಾನವನ್ನು ನೋಡೋಣ.

  1.  ಜಾಬ್ ಕಾರ್ಡ್ ಹೊಂದಿರುವ ಯಾವುದೇ ಕುಟುಂಬವು ಗ್ರಾಮ ಪಂಚಾಯಿತಿಯ ಅಧಿಕಾರಿಗಳಿಗೆ ನಮೂನೆ ಆರರಲ್ಲಿ ಉದ್ಯೋಗ ಕ್ಕಾಗಿ ಅರ್ಜಿಯನ್ನು ಸಲ್ಲಿಸಬಹುದು.
  2.  ಅನಕ್ಷರಸ್ಥ ವ್ಯಕ್ತಿಗಳು ಕೆಲಸಕ್ಕಾಗಿ ಅರ್ಜಿಯನ್ನು ಸಲ್ಲಿಸುವ ಸಂದರ್ಭದಲ್ಲಿ ಅವರು ಮೌಖಿಕವಾಗಿ ಹೇಳಿದಂತಹ ಅರ್ಜಿಯನ್ನು ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಅದನ್ನು ಲಿಖಿತವಾಗಿ ದೃಢೀಕರಣ ಮಾಡಬೇಕು.
  3.  ಸಹಾಯವಾಣಿಯ ಮೂಲಕ ಸಲ್ಲಿಸಬಹುದು ಸಹಾಯವಾಣಿ ಸಂಖ್ಯೆ : 1800-4258-666.
  4.  ಕೂಲಿಕಾರರು ಬಿಳಿ ಹಾಳೆಯಲ್ಲಿಯೂ ಸಹ ಅರ್ಜಿಯನ್ನು ಸಲ್ಲಿಸಬಹುದು.
  5.  ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ 15 ದಿನಗಳ ಒಳಗೆ, ಗ್ರಾಮ ಪಂಚಾಯಿತಿಯು ಅರ್ಜಿದಾರರಿಗೆ ಕೆಲಸವನ್ನು ಒದಗಿಸಬೇಕು.
  6.  ತಪ್ಪಿದ್ದಲ್ಲಿ ಅರ್ಜಿದಾರರು ನಿರುದ್ಯೋಗ ಭತ್ಯೆ ಪಡೆಯಲು ಅರ್ಹರಾಗಿರುತ್ತಾರೆ.

ಹೀಗೆ ಅರ್ಜಿಗಳನ್ನು ಸಲ್ಲಿಸಿ ಕೆಲಸವನ್ನು ಗ್ರಾಮ ಪಂಚಾಯಿತಿಯಿಂದ ಪಡೆದುಕೊಳ್ಳಬಹುದು.

NERGA : ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿ ಕೈಗೊಳ್ಳಬಹುದಾದ ಕಾಮಗಾರಿಗಳು.

NERGA : ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ  ಕೈಗೊಳ್ಳುವ ಕಾಮಗಾರಿ ಕೆಲಸ ಕಾರ್ಯಗಳನ್ನು ನೋಡೋಣ.

1. ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ ಕಾಮಗಾರಿಗಳು : ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ ಕಾಮಗಾರಿಗಳನ್ನು ಕೈಗೊಳ್ಳಬಹುದು. ಉದಾಹರಣೆಗೆ,

  •  ಅಂತರ್ಜಲವನ್ನು ಹೆಚ್ಚಿಸುವ ಕಾಮಗಾರಿಗಳು, ಅಂದರೆ ನೀರು ಸಂಗ್ರಹಣೆ ಮಾಡುವಂತಹ ಡ್ಯಾಮ್, ಮಳೆ ನೀರನ್ನು ಸಂಗ್ರಹಿಸಿರುವ ಡ್ಯಾಮ್, ನಿರ್ಮಾಣ ಮಾಡಬಹುದು.
  •  ಜಲ ಸಂರಕ್ಷಣೆ ಮತ್ತು ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದ ಕಾಮಗಾರಿಗಳು.
  •  ಜಲನಯನ ಅಭಿವೃದ್ಧಿ ಮತ್ತು ನಿರ್ವಹಣೆ ಕಾಮಗಾರಿಗಳು
  •  ಸೂಕ್ಷ್ಮ ಮತ್ತು ಸಣ್ಣ ನೀರಾವರಿ ಕಾಮಗಾರಿಗಳು.
  •  ಜಲ ಮೂಲಗಳ ಪುನರ್ಚೇತನ ಕಾಮಗಾರಿಗಳು. ಉದಾಹರಣೆಗೆ  ಕೆರೆ, ನಾಲೆಗಳು, ಗೋ ಕಟ್ಟೆಗಳು, ಇತ್ಯಾದಿ ಕಾಮಗಾರಿಗಳು.
  •  ಅರಣ್ಯೀಕರಣ ಕಾಮಗಾರಿಗಳು.

2. ದುರ್ಬಲ ವರ್ಗಗಳಿಗೆ ವೈಯಕ್ತಿಕ ಮತ್ತು ಸಮುದಾಯದ ಆಸ್ತಿಗಳ ನಿರ್ಮಾಣ ಕಾಮಗಾರಿಗಳು.

  •  ಕೃಷಿ ಹೊಂಡ ನಿರ್ಮಾಣ.
  •  ತೆರೆದ ಬಾವಿಗಳ ನಿರ್ಮಾಣ.
  •  ಕೃಷಿ ಜಮೀನಿಗೆ ಫಲವತ್ತತೆಯನ್ನು ಹೆಚ್ಚಿಸುವ ಕಾಮಗಾರಿಗಳು.
  •  ಕೃಷಿ ಜಮೀನಿಗೆ ನೀರಾವರಿ ಸೌಲಭ್ಯವನ್ನು ಒದಗಿಸುವ ಕಾಮಗಾರಿಗಳು.
  •  ತೋಟಗಾರಿಕಾ ಬೆಳೆಗಳು, ಕೃಷಿ ಜಮೀನಿನಲ್ಲಿ ಅರಣ್ಯ ಸಸಿ ಬೆಳೆಸುವ ಕಾಮಗಾರಿಗಳು.
  •  ನಿರುಪಯುಕ್ತ ಜಮೀನನ್ನು ಅಭಿವೃದ್ಧಿಪಡಿಸುವುದು.
  •  ವಸತಿ ಯೋಜನೆಯಲ್ಲಿ ಮಂಜೂರಾದ ಮನೆಗಳ ನಿರ್ಮಾಣಕ್ಕೆ ಸಂಬಂಧಿಸಿದ ಕಾಮಗಾರಿಗಳು.
  •  ದನ, ಕುರಿ,ಮೇಕೆ ಮತ್ತು ಜಾನುವಾರುಗಳ ಸಾಕಾಣಿಕೆ ಶೆಡ್ ನಿರ್ಮಾಣ.
  •  ಮೀನುಗಾರಿಕೆ ಕಾಮಗಾರಿಗಳು.
  •  ಜೈವಿಕ ಗೊಬ್ಬರ ತಯಾರಿಕಾ ಕಾಮಗಾರಿಗಳು.

3. ಸ್ವಸಹಾಯ ಗುಂಪುಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಾಮಗಾರಿಗಳು.

  •  ಕೃಷಿ ಉತ್ಪನ್ನ ಸಂಗ್ರಹಣೆಗೆ ಗೋಧಾಮಗಳ ನಿರ್ಮಾಣ.
  •  ಜೈವಿಕ ಗೊಬ್ಬರ ತಯಾರಿಕ  ಮತ್ತು ಸೌಲಭ್ಯಗಳಂತ ಕೃಷಿ ಉತ್ಪಾದನೆ ಹೆಚ್ಚಿಸುವಂತಹ ಕಾಮಗಾರಿಗಳು.

4. ಗ್ರಾಮೀಣ ಮೂಲ ಸೌಕರ್ಯ ಕಾಮಗಾರಿಗಳು.

  •  ನೈರ್ಮಲ್ಯ ಕಾಮಗಾರಿಗಳು.
  •  ವೈಯಕ್ತಿಕ ಶೌಚಾಲಯಗಳು.
  •  ಶಾಲಾ ಶೌಚಾಲಯಗಳು.
  •  ಅಂಗನವಾಡಿ ಶೌಚಾಲಯಗಳು.
  •  ದ್ರವ್ಯ ಮತ್ತು ಘನ ತ್ಯಾಜ್ಯ ವಿಲೇವಾರಿ ಕಾಮಗಾರಿಗಳು.
  •  ಗ್ರಾಮೀಣ ರಸ್ತೆ ಮತ್ತು ಚರಂಡಿ ಕಾಮಗಾರಿಗಳು.
  •  ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್ ಮತ್ತು ಆಟದ ಮೈದಾನ ನಿರ್ಮಾಣ ಕಾಮಗಾರಿಗಳು.
  •  ಪ್ರವಾಹ ನಿಯಂತ್ರಣ ಕಾಮಗಾರಿಗಳು.
  •  ಗ್ರಾಮ ಪಂಚಾಯಿತಿ ಕಟ್ಟಡ, ಅಂಗನವಾಡಿ ಕಟ್ಟಡ, ಕಾಮಗಾರಿಗಳು.
  •  ಗ್ರಾಮೀಣ ಮಾರುಕಟ್ಟೆ ಮತ್ತು ಸ್ಮಶಾಣ ನಿರ್ಮಾಣ ಕಾಮಗಾರಿಗಳು.
  •  ಗ್ರಾಮೀಣ ಗೋಧಾಮುಗಳ ನಿರ್ಮಾಣ.

 

Leave a Reply

Your email address will not be published. Required fields are marked *