Tharak7star

Voter ID Download ಮಾಡುವ ಸುಲಭ ವಿಧಾನ.

Voter ID

Voter ID Download ಮಾಡುವ ಸುಲಭ ವಿಧಾನ. ಈ ಲೇಖನದಲ್ಲಿ ನಾವು ವೋಟರ್ ಐಡಿ, ಡೌನ್ಲೋಡ್ ಮಾಡುವ ಸುಲಭ ವಿಧಾನದ ಬಗ್ಗೆ ತಿಳಿಯೋಣ.

ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ, ಮತದಾನ ಮಾಡಲು ವೋಟರ್ ಐಡಿ (Voter ID) ಕಡ್ಡಾಯವಾಗಿ ಬೇಕು. ಚುನಾವಣೆಯಲ್ಲಿ ಮತದಾನವನ್ನು ಮಾಡಲು ಚುನಾವಣಾ ಗುರುತಿನ ಚೀಟಿಯ ಅವಶ್ಯಕತೆ ಇದ್ದೇ ಇರುತ್ತದೆ. ವೋಟರ್ ಐ ಡಿ ಇಲ್ಲದೇ ಇರುವವರು, ಚುನಾವಣೆ ಹತ್ತಿರದಲ್ಲಿ ಇರುವುದರಿಂದ ಐಡಿ ಕಾರ್ಡನ್ನು ಈಗ ಸುಲಭವಾಗಿ ಮಾಡಿಸಿಕೊಳ್ಳಬಹುದು. ನೀವು ಮತದಾರ ಚೀಟಿಯನ್ನು ಡೌನ್ಲೋಡ್ ಮಾಡಿಕೊಳ್ಳಲು ನಿಮ್ಮ ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ಬೇಕು.

ಮತದಾನದ ಗುರುತಿನ ಚೀಟಿಯನ್ನು ಚುನಾವಣಾ ಆಯೋಗವು ಕನಿಷ್ಠ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ನೀಡುತ್ತದೆ. ಇದು ನಿಮ್ಮ ಮತದಾನದ ಹಕ್ಕನ್ನು ಖಾತ್ರಿಪಡಿಸುತ್ತದೆ. ಚುನಾವಣಾ ಆಯೋಗದಿಂದ ನೀಡುವ ಈ ಗುರುತಿನ ಚೀಟಿಯಲ್ಲಿ  ನಿಮ್ಮ ಭಾವಚಿತ್ರ ಹೆಸರು, ವಿಳಾಸ, ಜನ್ಮ ದಿನಾಂಕ ಇವೆಲ್ಲ ಮಾಹಿತಿಗಳು ಇದ್ದು ಜೊತೆಗೆ ಚುನಾವಣಾ ಅಧಿಕಾರಿಗಳ ಸಹಿ ಸಹ ಇರುತ್ತದೆ. ಮತದಾನದ ಭದ್ರತೆಯನ್ನು ಕಾಪಾಡುವ ದೃಷ್ಟಿಯಿಂದ ಈ ಕಾಡು ತುಂಬಾನೇ ಅನುಕೂಲವಾಗಿದೆ.

Voter ID ಎಂದರೇನು?.

Voter ID : ಚುನಾವಣಾ ಗುರುತಿನ ಚೀಟಿ ಎಂದರೆ 18 ವರ್ಷ ಮೇಲ್ಪಟ್ಟ ಎಲ್ಲಾ ಜನತೆಗೆ ಚುನಾವಣಾ ಆಯೋಗದಿಂದ ಮತದಾನ ಮಾಡಲು ನೀಡುವ ಒಂದು ವಿಶಿಷ್ಟ ಗುರುತಿನ ಚೀಟಿಯಾಗಿದೆ. ಭಾರತೀಯ ಚುನಾವಣಾ ಆಯೋಗದಿಂದ  ಈ ಗುರುತಿನ ಚೀಟಿಯನ್ನು ನೀಡಲಾಗುತ್ತದೆ. ಇದು ನಿಮ್ಮ ಮತದಾನದ ಹಕ್ಕನ್ನು ಖಾತ್ರಿಪಡಿಸುತ್ತದೆ. ಮತದಾನ ಮಾಡಲು ಹೋಗುವಾಗ ನೀವು ಈ ಗ್ರೂಪಿನ ಚೀಟಿಯನ್ನು ಕಡ್ಡಾಯವಾಗಿ  ತೆಗೆದುಕೊಂಡು ಹೋಗಬೇಕು. ಮತದಾನ ಮಾಡುವ ಮೊದಲು ಚುನಾವಣಾ ಅಧಿಕಾರಿಗಳು ಇದನ್ನು ಪರಿಶೀಲಿಸಿ. ಮತದಾನ ಮಾಡಲು ಅವಕಾಶವನ್ನು ನೀಡುತ್ತಾರೆ.

ಚುನಾವಣಾ ಗುರುತಿನ ಚೀಟಿ ಮತದಾನದ ಸಂದರ್ಭದಲ್ಲಿ ನಡೆಯುವ ವಂಚನೆಯನ್ನು ತಡೆಗಟ್ಟುವ ಮುಖ್ಯ ಕೆಲಸವನ್ನು ನಿರ್ವಹಿಸುತ್ತದೆ. ಒಂದು ಕಡೆ ಮತದಾನ ಮಾಡಿರುವ ವ್ಯಕ್ತಿ ಇನ್ನೊಂದು ಕಡೆ ಮತದಾನ ಮಾಡಲು ಸಾಧ್ಯವಾಗುವುದಿಲ್ಲ. ಈ ಗುರುತಿನ ಚೀಟಿಯ ಒಂದು ಅಧಿಕೃತ ಗುರುತಿನ ಚೀಟಿಯಾಗಿದ್ದು, ಯಾವುದೇ ಸರ್ಕಾರಿ ಸೌಲಭ್ಯವನ್ನು ಪಡೆಯಲು ಒಂದು ಮುಖ್ಯ ಗುರುತಿನ ಚೀಟಿಯಾಗಿ ಕಾರ್ಯವನ್ನು ನಿರ್ವಹಿಸುತ್ತದೆ. ಇತರೆ ಯಾವುದೇ ಸಂದರ್ಭದಲ್ಲಿ ಗುರುತಿನ ಚೀಟಿಯಾಗಿಯೂ ಸಹ ಮತ್ತು ವಿಳಾಸದ ಪುರಾಣಿಯಾಗಿಯೂ ಸಹ ಈ ಗುರುತಿನ ಚೀಟಿಯನ್ನು ಬಳಸಬಹುದು.

Voter ID ಡೌನ್ಲೋಡ್ ಮಾಡುವ ಸುಲಭ ವಿಧಾನವನ್ನು ನೋಡೋಣ.

Voter ID

Voter ID ಕಾರ್ಡನ್ನು ಆನ್ಲೈನ್ ಮೂಲಕ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು. ಚುನಾವಣಾ ಆಯೋಗದ ಅಧಿಕೃತ ವೆಬ್ಸೈಟ್ ಮೂಲಕ ಮತದಾರರ ಗುರುತಿನ ಚೀಟಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಚುನಾವಣಾ ಗುರುತಿನ ಚೀಟಿಯನ್ನು ಡೌನ್ಲೋಡ್ ಮಾಡಿಕೊಳ್ಳಲು ಚುನಾವಣಾ ಆಯೋಗವು ಅನುಕೂಲ ಮಾಡಿಕೊಟ್ಟಿದೆ.

  •  ಮೊದಲಿಗೆ ನೀವು ಚುನಾವಣಾ ಆಯೋಗದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. ವೆಬ್ ಸೈಟ್ ವಿಳಾಸ
  •  ಚುನಾವಣಾ ಆಯೋಗದ ಅಧಿಕೃತ ವೆಬ್ಸೈಟ್ ಮುಖಪುಟ ತೆರೆದ ನಂತರ ಡೌನ್ಲೋಡ್ ಎಪಿಕ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು.
  • ಎ ಪಿಕ್ ಮಾಡಿದ ನಂತರ ಮುಖಪುಟ ತೆರೆದುಕೊಳ್ಳುತ್ತದೆ.
  •  ಅದರಲ್ಲಿ ಚುನಾವಣಾ  ಆಯೋಗ ಹಲವು ಮಾಹಿತಿಗಳನ್ನು ನೀಡಿರುತ್ತದೆ. ನೀವು ಈ ಎಪಿಕ್ ಡೌನ್ಲೋಡ್ ಆಪ್ಷನ್ ಅನ್ನು ಕ್ಲಿಕ್ ಮಾಡಬೇಕು.
  •  ನಂತರ ನೀವು ನಿಮ್ಮ ಮೊಬೈಲ್ ಸಂಖ್ಯೆಯನ್ನು ಎಂಟ್ರಿ ಮಾಡಬೇಕು.
  •  ಜೊತೆಗೆ ನಿಮ್ಮ ಇಮೇಲ್ ವಿಳಾಸವನ್ನು ನೀಡಬೇಕು. ನಂತರ ಎಪಿಕ್ ಸಂಖ್ಯೆಯನ್ನು ನೀಡಬೇಕು.
  •  ಈ ಎಲ್ಲಾ ಮಾಹಿತಿಯನ್ನು ನೀಡಿದ ನಂತರ ಕ್ಯಾಪ್ಚರ್ ಅನ್ನು ಎಂಟ್ರಿ ಮಾಡಬೇಕು.
  •  ನಿಮ್ಮ ಮೊಬೈಲ್ ನಂಬರ್ ಗೆ OTP ವಿನಂತಿಯನ್ನು ಮಾಡಬೇಕು. ನಂತರ ನಿಮ್ಮ ನೊಂದಾಯಿತ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ. ಅದನ್ನು ಎಂಟ್ರಿ ಮಾಡಿ.
  •  ನಂತರ ನಿಮ್ಮ ಎಪಿಕ್ ಸಂಖ್ಯೆ ಮತ್ತು ರಾಜ್ಯವನ್ನು ಎಂಟ್ರಿ ಮಾಡಬೇಕು.
  •  ಮತದಾರರ ಗುರುತಿನ ಚೀಟಿಯನ್ನು ಡೌನ್ಲೋಡ್ ಮಾಡುವ ಮುಖಪುಟ ತೆರೆಯುತ್ತದೆ.
  •  ನಂತರ ಡಿಜಿಟಲ್ ಎಪಿಕ್ ಕಾರ್ಡನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

ಹೀಗೆ ಚುನಾವಣಾ ಆಯೋಗದ ಅಧಿಕೃತ ವೆಬ್ಸೈಟ್ನ ಮೂಲಕ ನಿಮ್ಮ ಮತದಾರರ ಗುರುತಿನ ಚೀಟಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಈ ಗುರುತಿನ ಚೀಟಿಯೋ ನಿಮ್ಮ ಹೆಸರು ವಿಳಾಸ ಜನ್ಮ ದಿನಾಂಕ ಹೀಗೆ ನಿಮ್ಮ ಸಂಪೂರ್ಣ ವಿವರವನ್ನು ನೀಡುತ್ತದೆ.

Voter ID ಪಡೆಯಲು ಅರ್ಜಿ ಸಲ್ಲಿಸುವ ವಿಧಾನ.

Voter ID : ಚುನಾವಣಾ ಗುರುತಿಚ ಚೀಟಿಯನ್ನು ಪಡೆಯಲು ಅರ್ಜಿ ಸಲ್ಲಿಸುವ ವಿಧಾನ ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

  1.  ಚುನಾವಣಾ ಆಯೋಗದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು
  2.  ನಂತರ ಅಲ್ಲಿ ಅನೇಕರೀತಿಯ ಅರ್ಜಿ ಫಾರಂ ಗಳು ದೊರೆಯುತ್ತವೆ.
  3.  ನಿಮಗೆ ಬೇಕಾದ ಅರ್ಜಿ ಫಾರಂ ಅನ್ನು ಭರ್ತಿ ಮಾಡಬೇಕು ಅಂದರೆ ಹೊಸದಾಗಿ ಮಾಡುವುದಕ್ಕೆ ಬೇರೆ ಫಾರಂ, ತಿದ್ದುಪಡಿ ಮಾಡಲು ಬೇರೆ ಫಾರಂ, ಹೀಗೆ ಬೇರೆ ಬೇರೆ ವಿಧಾನಗಳಿಗೆ ಬೇರೆ ಬೇರೆ ಫಾರಂ ಗಳು ಲಭ್ಯವಿರುತ್ತವೆ.
  4.  ಅರ್ಜಿ ಫಾರಂನಲ್ಲಿ ಕೇಳಿರುವ ಎಲ್ಲಾ ದಾಖಲಿಗಳನ್ನು ಸರಿಯಾಗಿ ಎಂಟ್ರಿ ಮಾಡಬೇಕು.
  5.  ಅರ್ಜಿ ಫಾರಂ ನನ್ನು ಸಂಪೂರ್ಣವಾಗಿ ಎಂಟ್ರಿ ಮಾಡಿದ ನಂತರ ಫೋಟೋ ಅಪ್ಲೋಡ್ ಮಾಡಬೇಕು.
  6.  ನಂತರ ಚುನಾವಣಾ ಆಯೋಗವು ಕೇಳಿರುವ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು.
  7.  ಎಲ್ಲಾ ಮಾಹಿತಿಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಿದ ಮೇಲೆ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಹೀಗೆ ಚುನಾವಣಾ ಆಯೋಗದ ಅಧಿಕೃತ ವೆಬ್ಸೈಟ್ನ ಮೂಲಕ ಆನ್ಲೈನ್ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು. ಹಾಗೆಯೇ ಆಫ್ಲೈನ್ ಮೂಲಕವೂ ಸಹ ಅರ್ಜಿಗಳನ್ನ ಸಲ್ಲಿಸಬಹುದು. ಅದಕ್ಕಾಗಿ ನೀವು ನಿಮ್ಮ ಹತ್ತಿರದ ಚುನಾವಣಾ ಕಚೇರಿಗೆ ಭೇಟಿ ನೀಡಬೇಕು.

  •  ಮೊದಲಿಗೆ ನೀವು ನಿಮ್ಮ ಹತ್ತಿರದ ಚುನಾವಣಾ ಕಚೇರಿಗೆ ಭೇಟಿ ನೀಡಬೇಕು.
  •  ನಂತರ ಚುನಾವಣಾ ಅಧಿಕಾರಿ ನೀಡುವ ಫಾರಂ 6 ಅನ್ನು ಬತ್ತಿ ಮಾಡಬೇಕು.
  •  ಚುನಾವಣೆ ಕಚೇರಿಯಲ್ಲಿ ಯಾವುದೇ ಶುಲ್ಕ ನೀಡುವ ಅಗತ್ಯ ಇಲ್ಲ. ಫಾರಂ ಉಚಿತವಾಗಿ ದೊರೆಯುತ್ತದೆ.
  •  ನೀವು ಸಂಪೂರ್ಣ ಭರ್ತಿ ಮಾಡಿದ ಅರ್ಜಿ ಫಾರಂ ಅನ್ನು ಚುನಾವಣಾ ಅಧಿಕಾರಿಗೆ ನೀಡಬೇಕು.
  •  ಕೇಳಿರುವ ಎಲ್ಲಾ ಮಾಹಿತಿಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಬೇಕು.
  •  ಅರ್ಜಿಗಳನ್ನು ಸಲ್ಲಿಸುವಾಗ ಭರ್ತಿ ಮಾಡಿದ ಫಾರ್ಮ್ ಜೊತೆಯಲ್ಲಿ, ನಿಮ್ಮ ಆಧಾರ್ ಕಾರ್ಡ್ ಮತ್ತು ಶಾಲಾ ದಾಖಲಾತಿಯನ್ನು ಸಲ್ಲಿಸಬೇಕು.
  •  ಜೊತೆಗೆ ಅಗತ್ಯವಿರುವ ನಿಮ್ಮ ಇತ್ತೀಚಿಗಿನ ಭಾವಚಿತ್ರವನ್ನು ನೀಡಬೇಕು.

ಹೆಚ್ಚಿನ ಮಾಹಿತಿಗಾಗಿ ಚುನಾವಣಾ ಆಯೋಗದ ಅಧಿಕೃತ ವೆಬ್ಸೈಟ್ ಅನ್ನು ಸಂಪರ್ಕಿಸಬಹುದು ಅಥವಾ ಸಹಾಯವಾಣಿ 1950 ಗೆ ಕರೆ ಮಾಡಿ ಮಾಹಿತಿಯನ್ನು ತಿಳಿದುಕೊಳ್ಳಬಹುದು.

ಭಾರತೀಯ ಚುನಾವಣಾ ಆಯೋಗವು ನೀಡುವ ಮತದಾರರ ಗುರುತಿನ ಚೀಟಿಯಲ್ಲಿ EPIC ನಂಬರ್ ಇರುತ್ತದೆ. ಇದು ಚುನಾವಣಾ ಆಯೋಗವು ನೀಡುವ ಒಂದು ವಿಶಿಷ್ಟ ಗುರುತಿನ ಚೀಟಿಯಾಗಿದೆ. ಇದು ಮತದಾರರ ಗುರುತಿನ ಸಂಖ್ಯೆ ಆಗಿರುತ್ತದೆ ಇದರಲ್ಲಿ ಸಂಖ್ಯೆ ಮತ್ತು  ಅಕ್ಷರಗಳನ್ನು ಒಳಗೊಂಡಿರುತ್ತವೆ. ಚುನಾವಣಾ ಸಂದರ್ಭದಲ್ಲಿ ಮತದಾನ ಮಾಡುವ ಸಮಯದಲ್ಲಿ ಈ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು.

Voter ID ಪಡೆಯಲು ಅರ್ಜಿ ಸಲ್ಲಿಸುವ ಫಾರಂ ಗಳ ವಿವರ.

Voter ID ಪಡೆಯುವ ಸಂದರ್ಭದಲ್ಲಿ ಅನೇಕ ರೀತಿಯ ಅರ್ಜಿ ಫಾರಂಗಳು ದೊರೆಯುತ್ತವೆ. ಈ ಅರ್ಜಿ ಫಾರಂ ಗಳ ವಿವರಗಳು ಹೀಗಿವೆ. ಯಾವುದಕ್ಕೆ ಯಾವ ಅರ್ಜಿ ಫಾರಂ ಅನ್ನು ಭರ್ತಿ ಮಾಡಿ ಚುನಾವಣಾ ಅಧಿಕಾರಿಗೆ ಸಲ್ಲಿಸಬೇಕು ಎಂಬ ವಿವರ ಇಲ್ಲಿದೆ.

  1. FORM.No.06 : ಈ ಅರ್ಜಿ ಫಾರಂ ಅನ್ನು ಹೊಸದಾಗಿ ಚುನಾವಣಾ ಗುರುತಿನ ಚೀಟಿಯನ್ನು ಪಡೆಯುವವರು ಭರ್ತಿ ಮಾಡಬೇಕು.
  2. FORM. ನೋ.07 : ಈ ಅರ್ಜಿ ಫಾರಂ ಅನ್ನು ಮತದಾರ ಪಟ್ಟಿಯಲ್ಲಿ ಹೆಸರು ನೋಂದಾವಣೆ ಮಾಡಲು ಭರ್ತಿ ಮಾಡಬೇಕು.
  3. FORM. No.08 : ಈ ಅರ್ಜಿ ಫಾರಂ ಅನ್ನು ಯಾವುದೇ ತಿದ್ದುಪಡಿ ಮಾಡುವ ಸಂದರ್ಭದಲ್ಲಿ ಭರ್ತಿ ಮಾಡಬೇಕು.

ಹೀಗೆ ಮೇಲೆ ವಿವರಿಸಿರುವ ಅರ್ಜಿ ಫಾರಂ ಮಾಹಿತಿಯನ್ನು ನೋಡಿ ಅವಶ್ಯಕತೆ ಇರುವವರು ಆ ನಮೂನೆಯಲ್ಲಿ ಅರ್ಜಿಯನ್ನು ಸಲ್ಲಿಸಬೇಕು. ಈಗ ಚುನಾವಣಾ ಸಂದರ್ಭದಲ್ಲಿ ಅರ್ಜಿಗಳನ್ನು ಸಲ್ಲಿಸಿ, ಗುರುತಿನ ಚೀಟಿಯನ್ನು ಪಡೆಯಲು, ಅತಿ ಕಡಿಮೆ ಸಮಯದಲ್ಲಿ, ಗುರುತಿನ ಚೀಟಿಗಳನ್ನು ಪಡೆದುಕೊಳ್ಳಬಹುದು. ಅರ್ಜಿ ಸಲ್ಲಿಸಲು ಚುನಾವಣಾ ಆಯೋಗದ ಅಧಿಕೃತ ವೆಬ್ಸೈಟ್ನಲ್ಲಿ ನೀಡಿರುವ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಗಮನಿಸಿ ಅರ್ಜಿಗಳನ್ನು ಸಲ್ಲಿಸಬೇಕು.

Leave a Reply

Your email address will not be published. Required fields are marked *