Tharak7star

Ayushman bharath yojane : ಅಯುಷ್ಮಾನ್ ಯೋಜನೆ 

Ayushman bharath yojane

Ayushman bharath yojane : ಅಯುಷ್ಮಾನ್ ಯೋಜನೆ. ಈ ಲೇಖನದಲ್ಲಿ ನಾವು ಆಯುಷ್ಮಾನ್ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೋಡೋಣ.

PMJAY : ಆಯುಷ್ಮಾನ್ ಭಾರತ್ ಯೋಜನೆಯು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಆರೋಗ್ಯ ವಿಮಾ ಯೋಜನೆಯಾಗಿದೆ. ಈ ಯೋಜನೆಯ ಫಲಾನುಭವಿಗಳಿಗೆ ವಾರ್ಷಿಕ 5 ಲಕ್ಷದವರೆಗೆ ಆರೋಗ್ಯ ವಿಮೆಯನ್ನು ನೀಡಲಾಗುವುದು. ಈ ಯೋಜನೆಗೆ ಮಾನ್ಯತೆ ಪಡೆದ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವುದೇ ಶುಲ್ಕ ಪಾವತಿಸದೆ ಚಿಕಿತ್ಸೆಯನ್ನು ಪಡೆಯಬಹುದು. ಭಾರತದಲ್ಲಿನ ಸರ್ಕಾರಿ ಆರೋಗ್ಯ ವಿಮಾ ಯೋಜನೆಯಾಗಿದೆ.

ಈ ಲೇಖನದಲ್ಲಿ ನಾವು ಆಯುಷ್ಮಾನ್ ಭಾರತ್ ಯೋಜನೆ ಎಂದರೇನು?. ಅದರ ಉಪಯೋಗಗಳೇನು?., ಅರ್ಜಿ ಸಲ್ಲಿಸುವುದು ಹೇಗೆ?., ಆಯುಷ್ಮಾನ್ ಕಾರ್ಡನ್ನು ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ?., ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ. PMJAY : ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಎಂದು ಸಹ ಕರೆಯುತ್ತಾರೆ.ಈ ಯೋಜನೆಯ ಸೌಲಭ್ಯವನ್ನು ಪಡೆಯಲು ” ಆಯುಷ್ಮಾನ್ ಕಾರ್ಡ್ “ ಮುಖ್ಯವಾಗಿದೆ. ಆಯುಷ್ಮಾನ್ ಭಾರತ್ ಕಾರ್ಡನ್ನು ಹೇಗೆ ಆನ್ಲೈನ್ ಮೂಲಕ ಪಡೆದುಕೊಳ್ಳುವುದು ಎಂಬುದರ ಮಾಹಿತಿಯೂ ಸಹ ಈ ಲೇಖನದಲ್ಲಿ ಇದೆ.ಸಂಪೂರ್ಣ ಮಾಹಿತಿಯನ್ನು ನೋಡೋಣ.

Ayushman bharath yojane : ಅಯುಷ್ಮಾನ್ ಯೋಜನೆ ಎಂದರೇನು?.

Ayushman bharath yojane : ಅಯುಷ್ಮಾನ್ ಯೋಜನೆ ಎಂದರೆ ಸರ್ಕಾರದಿಂದ ಸಿಗುವ ಆರೋಗ್ಯ ವಿಮೆ ಯೋಜನೆಯಾಗಿದೆ. ಇದರಲ್ಲಿ ಒಂದು ಕುಟುಂಬ ವರ್ಷದಲ್ಲಿ 5 ಲಕ್ಷದವರೆಗೆ ಆರೋಗ್ಯ ವಿಮೆಯನ್ನು ಪಡೆಯಬಹುದು. ಈ ಯೋಜನೆಯಿಂದ ಹಿಂದುಳಿದ ವರ್ಗಗಳಿಗೆ ತುಂಬಾನೇ ಸಹಾಯವಾಗಿದೆ. PMJAY ನೋಂದಣಿಯ ಮಾನ್ಯತೆ ಪಡೆದ ಖಾಸಗಿ ಮತ್ತು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಈ ಯೋಜನೆ ನಗದು ರಹಿತ ವೈದ್ಯಕೀಯ ಸೌಲಭ್ಯವನ್ನು ನೀಡುತ್ತದೆ. ದುಬಾರಿ ಆಪರೇಷನ್ ಗಳನ್ನು ಸಹ ಇದರ ಒಳಗೆ ಮಾಡಿಸಿಕೊಳ್ಳಬಹುದು.

Ayushman bharath yojane : ಅಯುಷ್ಮಾನ್ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ.

Ayushman bharath yojane

Ayushman bharath yojane : ಅಯುಷ್ಮಾನ್ ಯೋಜನೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಒಂದು ತರಕಾರಿ ಆರೋಗ್ಯ ವಿಮಾ ಯೋಜನೆಯಾಗಿದೆ. ಇದರಿಂದ ಆರ್ಥಿಕವಾಗಿ ಹಿಂದುಳಿದ ವರ್ಗದ ಕುಟುಂಬಗಳು ವಾರ್ಷಿಕವಾಗಿ 5 ಲಕ್ಷಗಳವರೆಗೆ ವೈದ್ಯಕೀಯ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಈ ಸಲ ಬೆನ್ನು ಪಡೆಯಲು ಮೊದಲು ನೀವು ಆಯುಷ್ಮಾನ್ ಭಾರತ್ ಯೋಜನೆಯಿಂದ ಒಂದು ಕಾರ್ಡನ್ನು ಪಡೆದುಕೊಳ್ಳಬೇಕು. ಆಯುಷ್ಮಾನ್ ಭಾರತ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸುವ ವಿಧಾನವನ್ನು ನೋಡೋಣ.

ಆಯುಷ್ಮಾನ್ ಭಾರತ್ ಯೋಜನೆ ಅಧಿಕೃತ ವೆಬ್ಸೈಟ್ನ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಆಯುಷ್ಮಾನ್ ಭಾರತ್ ಯೋಜನೆ ಯ ಅಧಿಕೃತ ವೆಬ್ಸೈಟ್ ವಿಳಾಸ ಹೀಗಿದೆ.ಕ್ಲಿಕ್ ಮಾಡಿ

  •  ನಿಮ್ಮ ಹತ್ತಿರದ csc ಸೇವ ಕೇಂದ್ರ ಮೂಲಕವೂ ಸಹ ಆಯುಷ್ಮಾನ್ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಕಾರ್ಡನ್ನು ಪಡೆದುಕೊಳ್ಳಬಹುದು.
  •  ಕರ್ನಾಟಕ ಒನ್, ಬೆಂಗಳೂರು ಒನ್, ಸರ್ಕಾರದ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕವೂ ಸಹ ಅರ್ಜಿಯನ್ನು ಸಲ್ಲಿಸಬಹುದು.

ಹೀಗೆ ಈ ವಿಧಾನಗಳ ಮೂಲಕ ಆನ್ಲೈನ್ ನಲ್ಲಿ ಅರ್ಜಿಗಳನ್ನು ಸಲ್ಲಿಸಿ, ಆಯುಷ್ಮಾನ್ ಭಾರತ್ ಯೋಜನೆಗೆ ನೋಂದಾಯಿಸಿಕೊಳ್ಳಬಹುದು.

Ayushman bharath yojane : ಅಯುಷ್ಮಾನ್ ಯೋಜನೆಗೆ ಬೇಕಾಗುವ ದಾಖಲೆಗಳು.

Ayushman bharath yojane : ಅಯುಷ್ಮಾನ್ ಯೋಜನೆಯ ಸೌಲಭ್ಯ ಪಡೆಯಲು ಈ ಕೆಳಗಿನ ದಾಖಲೆಗಳು ಬೇಕು.

  1.  ಆಧಾರ್ ಕಾರ್ಡ್: ಆಯುಷ್ಮಾನ್ ಭಾರತ್ ಯೋಜನೆಯ ಸೌಲಭ್ಯವನ್ನು ಪಡೆಯಲು ಮುಖ್ಯವಾಗಿ ಆಧಾರ್ ಕಾರ್ಡ್ ಬೇಕು.
  2.  ಚುನಾವಣಾ ಗುರುತಿನ ಚೀಟಿ :
  3.  ಮೊಬೈಲ್ ಸಂಖ್ಯೆ.
  4.  ಆದಾಯ ಪ್ರಮಾಣ ಪತ್ರ.
  5.  ಜಾತಿ ಪ್ರಮಾಣ ಪತ್ರ ( ನಿರ್ದಿಷ್ಟ ಜಾತಿಗೆ ಸೇರಿದರೆ ಮಾತ್ರ ).
  6.  ಬ್ಯಾಂಕ್ ಖಾತೆಯ ವಿವರ: ಹೆಸರು, ಖಾತೆ ಸಂಖ್ಯೆ, ಬ್ಯಾಂಕಿನ ಐಎಫ್‌ಎಸ್‌ಸಿ ಕೋಡ್, ಬ್ಯಾಂಕಿನ ಸಂಪೂರ್ಣ ವಿವರ.
  7.  ಅರ್ಜಿದಾರರ ಭಾವಚಿತ್ರ.

ಮುಖ್ಯವಾಗಿ, ಗುರುತಿನ ಚೀಟಿ ಮತ್ತು ವಿಳಾಸಕ್ಕೆ ಸಂಬಂಧಿಸಿದ ಒಂದು ಪುರಾವೆ, ಮೊಬೈಲ್ ನಂಬರ್ ಕಡ್ಡಾಯವಾಗಿ ಬೇಕು.

Ayushman bharath yojane : ಅಯುಷ್ಮಾನ್ ಭಾರತ್  ಕಾರ್ಡನ್ನು ಡೌನ್ಲೋಡ್ ಮಾಡಿಕೊಳ್ಳುವ ವಿಧಾನ.

Ayushman bharath yojane : ಅಯುಷ್ಮಾನ್ ಯೋಜನೆ ಯಿಂದ ಸೌಲಭ್ಯವನ್ನು ಪಡೆಯಲು, ಅರ್ಜಿದಾರರು ಮೊದಲು ನೊಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ನೊಂದಣಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಆಯುಷ್ಮಾನ್ ಭಾರತ್ ಕಾರ್ಡನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಈ ಕಾರ್ಡನ್ನು ಡೌನ್ಲೋಡ್ ಮಾಡಿಕೊಳ್ಳೋ ವಿಧಾನವನ್ನು ನೋಡೋಣ.

  •  ಮೊದಲಿಗೆ ನೀವು ಆಯುಷ್ಮಾನ್ ಭಾರತ್ ಯೋಜನೆಯ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಬೇಕು.
  •  ಆಯುಷ್ಮಾನ್ ಭಾರತ್ ಯೋಜನೆಯ ಅಧಿಕೃತ ವೆಬ್ ಸೈಟ್ ವಿಳಾಸ ಹೀಗಿದೆ.
  •  ಮುಖಪುಟ ತೆರೆದ ನಂತರ ” Am I eligible ” ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
  •  ಆ ಲಿಂಕ್ ತೆರೆದುಕೊಂಡ ನಂತರ ನಿಮ್ಮ ಮೊಬೈಲ್ ನಂಬರ್ ಅನ್ನು ಎಂಟ್ರಿ ಮಾಡಬೇಕು.( ಆಯುಷ್ಮಾನ್ ಭಾರತ್ ಯೋಜನೆಗೆ ನೀಡಿರುವ ಮೊಬೈಲ್ ನಂಬರ್).
  •  ನಿಮ್ಮ ಮೊಬೈಲ್ ನಂಬರ್ ಗೆ ಓಟಿಪಿ (OTP) ಬರುತ್ತದೆ. ಆ ಓಟಿಪಿ ನಂಬರನ್ನು ಎಂಟ್ರಿ ಮಾಡಬೇಕು.
  • OTP ನಮೂದಿಸಿದ ನಂತರ ಆಯುಷ್ಮಾನ್ ಭಾರತ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳುವ ಮುಖಪುಟ ತೆರೆಯುತ್ತದೆ.
  •  ನಂತರ ನೀವು ಡೌನ್ಲೋಡ್ ಬಟನ್ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು.
  •  ಆಗ ನಿಮ್ಮ “ಆಯುಷ್ಮಾನ್ ಭಾರತ್ ಕಾರ್ಡ್ ಡೌನ್ಲೋಡ್” ಆಗುತ್ತದೆ.
  •   ಆಯುಷ್ಮಾನ್ ಭಾರತ್ ಕಾರ್ಡನ್ನು ಆನ್ಲೈನ್ ನ ಮೂಲಕ PDF ಅಥವಾ ಸಿಎಸ್ಸಿ ಕೇಂದ್ರಗಳ ಮೂಲಕ ಕಾರ್ಡುಗಳ ಫಾರ್ಮೆಟ್ ಅಲ್ಲಿ ಡೌನ್ಲೋಡ್ ಮಾಡಿಕೊಳ್ಳ ಬಹುದು.
Ayushman bharath yojane : ಅಯುಷ್ಮಾನ್ ಯೋಜನೆಯ ಉಪಯೋಗಗಳು.

Ayushman bharath yojane

Ayushman bharath yojane : ಅಯುಷ್ಮಾನ್ ಯೋಜನೆಯ ಉಪಯೋಗಗಳನ್ನು ತಿಳಿಯೋಣ. ಆಯುಷ್ಮಾನ್ ಭಾರತ್ ಯೋಜನೆಯು ಒಂದು ಆರೋಗ್ಯ ವಿಮಾ ಯೋಜನೆಯಾಗಿದ್ದು, ಇದರಿಂದ ವಾರ್ಷಿಕವಾಗಿ ಒಂದು ಕುಟುಂಬ ಐದು ಲಕ್ಷದವರೆಗೆ ಆರೋಗ್ಯ ವಿಮೆಯನ್ನು ಪಡೆದುಕೊಳ್ಳಬಹುದು.

  1. 5 ಲಕ್ಷ ಆರೋಗ್ಯ ವಿಮೆ : ಭಾರತ ಸರ್ಕಾರದ ಈ ಯೋಜನೆಯಿಂದ ಒಂದು ಕುಟುಂಬ ವಾರ್ಷಿಕವಾಗಿ 5 ಲಕ್ಷಗಳವರೆಗೆ ವೈದ್ಯಕೀಯ ಸಲಹೆವನ್ನು ಪಡೆದುಕೊಳ್ಳಬಹುದು. ಆರೋಗ್ಯ ವಿಮೆಯನ್ನು ಪಡೆದುಕೊಳ್ಳಬಹುದು.
  2. PMJAY ನಗದು ರಹಿತ ಪ್ರವೇಶಗಳನ್ನು ಪಡೆದುಕೊಳ್ಳಬಹುದು.
  3.  ಆಸ್ಪತ್ರೆಯಿಂದ ರೋಗಿಗೆ ವೈದ್ಯಕೀಯ ಸಲಹೆ ನೀಡುವಾಗ ಹೇಳಲಾಗಿರುವ ಎಲ್ಲಾ ವೆಚ್ಚಗಳನ್ನು ಈ ಯೋಜನೆ ಬರಿಸುತ್ತದೆ.
  4.  ವೈದ್ಯಕೀಯ ಸಮಾಲೋಚನೆಯನ್ನು ಪಡೆದುಕೊಳ್ಳಬಹುದು.
  5.  ಶಸ್ತ್ರ ಚಿಕಿತ್ಸೆ ಮತ್ತು ದುಬಾರಿ ವೆಚ್ಚದ ಚಿಕಿತ್ಸೆಗಳನ್ನು ಸಹ ಪಡೆಯಬಹುದು.
  6.  ವಸತಿ ಅನುಕೂಲಗಳು ಸಹ ದೊರೆಯುತ್ತವೆ.
  7.  ಉಚಿತವಾಗಿ ಮೆಡಿಸನ್ಗಳು ಸಹ ದೊರೆಯುತ್ತವೆ.
  8.  ಈ ಯೋಜನೆಯಿಂದ ದಾಖಲಾದ ರೋಗಿಗೆ ಉಚಿತವಾಗಿ ಆಹಾರವನ್ನು ನೀಡಲಾಗುವುದು.

ಭಾರತ ಸರ್ಕಾರವು ಜಾರಿಗೆ ತಂದಿರುವ ಆಯುಷ್ಮಾನ್ ಭಾರತ್ ಯೋಜನೆ, ಹಿಂದುಳಿದ ಮತ್ತು ಬಡ ಕುಟುಂಬಗಳಿಗೆ ತುಂಬಾನೇ ಅನುಕೂಲವಾಗಿದೆ. ಯೋಚನೆಯಿಂದ ವಾರ್ಷಿಕವಾಗಿ 5 ಲಕ್ಷಗಳವರೆಗೆ ವೈದ್ಯಕೀಯ ಸೌಲಭ್ಯವನ್ನು ಪಡೆಯಬಹುದು. ಇದರಿಂದ ಅನೇಕ ಕುಟುಂಬಗಳಿಗೆ ಸಹಾಯವಾಗಿದೆ.ಇದು ಸರ್ಕಾರದ ಒಂದು ಮಹತ್ವದ ಯೋಜನೆಯಾಗಿದೆ. ಅರೋಗ್ಯ ವಿಮೆ ಸೌಲಭ್ಯವನ್ನು ಪಡೆದು, ಅನೇಕ ಜನರು ಅನುಕೂಲ ಪಡೆದುಕೊಂಡು ತಮ್ಮ ವೈದ್ಯಕೀಯ ನೆರವು ಪಡೆದುಕೊಂಡಿದ್ದಾರೆ.

FAQ s. ಪ್ರಶ್ನೆಗಳು.

  1.  ಆಯುಷ್ಮಾನ್ ಭಾರತ್ ಯೋಜನೆಯ ಆರೋಗ್ಯ ವಿಮೆ ಎಷ್ಟು?.

ಆಯುಷ್ಮಾನ್ ಭಾರತ್ ಯೋಜನೆ ವಾರ್ಷಿಕ ಆರೋಗ್ಯವೇ ಮುತ್ತ 5 ಲಕ್ಷ ರೂಪಾಯಿಗಳು.

2. ಆಯುಷ್ಮಾನ್ ಯೋಜನೆ ಎಂದರೇನು?.

ಆಯುಷ್ಮಾನ್ ಯೋಜನೆ ಎಂದರೆ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಅಂತಹ ವೈದ್ಯಕೀಯ ಆರೋಗ್ಯ ವಿಮೆ ನೀಡುವ ಒಂದು ಯೋಜನೆಯಾಗಿದೆ.

3. ಆಯುಷ್ಮಾನ್ ಯೋಜನೆಯಲ್ಲೇ ಶಸ್ತ್ರ ಚಿಕಿತ್ಸೆ  ಉಚಿತವಾಗಿದೆಯೇ?.

ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ಐದು ಲಕ್ಷದ ಒಳಗಿನ ಶಾಸ್ತ್ರ ಚಿಕಿತ್ಸೆ ಉಚಿತವಾಗಿದೆ.

4. ಆಯುಷ್ಮಾನ್ ಸೌಲಭ್ಯ ಪಡೆಯಲು ಬ್ಯಾಂಕ್ ಖಾತೆ ಅವಶ್ಯಕತೆ ಇದೆಯೇ?.

ಆಯುಷ್ಮಾನ್ ಭಾರತ್ ಯೋಜನೆಯ ಸೌಲಭ್ಯವನ್ನು ಪಡೆಯಲು, ಆಯುಷ್ಮಾನ್ ಕಾರ್ಡ್ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಬ್ಯಾಂಕ್ ಖಾತೆಯ ವಿವರಗಳನ್ನು ನೀಡಬೇಕು. ಈ ಕಾರ್ಡ್ ನ ಮೂಲಕ ಆರೋಗ್ಯವೇ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು.

5. ಆಯುಷ್ಮಾನ್ ಭಾರತ್ ಕಾರ್ಡನ್ನು ಎಲ್ಲಿ ಪಡೆಯಬಹುದು?.

ಆಯುಷ್ಮಾನ್ ಭಾರತ್ ಯೋಜನೆಯ ಅಧಿಕೃತ ವೆಬ್ಸೈಟ್ನ ಮೂಲಕ ಅರ್ಜಿ ಸಲ್ಲಿಸಿ ಆಯುಷ್ಮಾನ್ ಭಾರತ್ ಕಾರ್ಡನ್ನು ಪಡೆಯಬಹುದು.

 

Leave a Reply

Your email address will not be published. Required fields are marked *