KPSC Requirments Group B in 2024. ಕರ್ನಾಟಕ ಲೋಕಸೇವಾ ಆಯೋಗವು ಗ್ರೂಪ್ ಬಿ ಹುದ್ದೆಗಳ ನೇಮಕಾತಿಗೆ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿದೆ.
ಕರ್ನಾಟಕ ಲೋಕಸೇವಾ ಆಯೋಗವು ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಗ್ರೂಪ್ ಬಿ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಜಲ ಸಂಪನ್ಮೂಲ ಇಲಾಖೆ, ಕಂದಾಯ, ಭೂಮಾಪನ ಮತ್ತು ಭೂ ದಾಖಲೆಗಳ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಕಾರ್ಖಾನೆಗಳು, ಬಾಯ್ಲರ್ ಗಳು, ಕೈಗಾರಿಕಾ ಸಂರಕ್ಷತೆ ಇಲಾಖೆ, ಅಂತರ್ಜಲ ನಿರ್ದೇಶನಾಲಯ ಈ ಇಲಾಖೆಗಳಲ್ಲಿ ಖಾಲಿ ಇರುವ 277 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ.
ಆಸಕ್ತಿಯುಳ್ಳ ಅಭ್ಯರ್ಥಿಗಳು ಏಪ್ರಿಲ್ 15, 2024. ರಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15 ಮೇ 2024 ಆಗಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳು ಜೂನ್ 11,2024. ರಿಂದ ಪ್ರಾರಂಭವಾಗುತ್ತದೆ. ಅಭ್ಯರ್ಥಿಗಳು ಆನ್ಲೈನ್ ನಲ್ಲಿ ಅರ್ಜಿಯನ್ನು ಭರ್ತಿ ಮಾಡುವ ಮೊದಲು ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಓದಿಕೊಳ್ಳಬೇಕು. ಏಕೆಂದರೆ ಒಮ್ಮೆ ಅರ್ಜಿ ಸಲ್ಲಿಸಿದ ನಂತರ ತಿದ್ದುಪಡಿಗೆ ಅವಕಾಶ ಇರುವುದಿಲ್ಲ.
KPSC Requirments Group B in 2024 ಇಲಾಖೆವಾರು ಹುದ್ದೆಗಳ ವಿವರ ಹೇಗಿದೆ.
1. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ: ಸಹಾಯಕ ಇಂಜಿನಿಯರ್ ( ಸಿವಿಲ್) ಹುದ್ದೆಗಳು : 92.
2. ಜಲ ಸಂಪನ್ಮೂಲ ಇಲಾಖೆ : ಸಹಾಯಕ ಇಂಜಿನಿಯರ್ ( ಸಿವಿಲ್) ಹುದ್ದೆಗಳು :90.
3. ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ : ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ಹುದ್ದೆಗಳು : 24.
4. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ: ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳು, ಹುದ್ದೆಗಳು :21.
5. ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ : ಸಹಾಯಕ ನಿರ್ದೇಶಕರು, ಹುದ್ದೆಗಳು : 20.
6. ಜಲಸಂಪನ್ಮೂಲ ಇಲಾಖೆ : ಸಹಾಯಕ ನಿರ್ದೇಶಕರು ( ಮೆಕ್ಯಾನಿಕಲ್ ) ಹುದ್ದೆಗಳು :10.
7. ಕಾರ್ಖಾನೆಗಳು, ಬಾಯ್ಲರ್ ಗಳು, ಕೈಗಾರಿಕಾ ಸಂರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ: ಕಾರ್ಖಾನೆಗಳ ಸಹಾಯಕ ನಿರ್ದೇಶಕರು, ಹುದ್ದೆಗಳು : 07. ಹಾಗೂ ಬಾಯ್ಲರ್ಗಳ ಸಹಾಯಕ ನಿರ್ದೇಶಕರು, ಹುದ್ದೆಗಳು : 03.
8. ಅಂತರ್ಜಲ ನಿರ್ದೇಶನಾಲಯ : ಭೂ ವಿಜ್ಞಾನಿ : ಹುದ್ದೆಗಳು : 10.
ಈ ಮೇಲಿನ ಇಲಾಖೆಗಳಲ್ಲಿ ಖಾಲಿ ಇರುವ ಗ್ರೂಪ್ ಬಿ ಹುದ್ದೆಗಳ ಬರ್ತಿಗೆ ಕರ್ನಾಟಕ ಲೋಕಸೇವಾ ಆಯೋಗದಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಕರೆಯಲಾಗಿದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ಆನ್ಲೈನ್ ಮೂಲಕ ಇದೇ ತಿಂಗಳು 15ರಿಂದ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮುಂದಿನ ತಿಂಗಳು ಅಂದರೆ 15 ಮೇ 2024 ಆಗಿರುತ್ತದೆ.
KPSC Requirments Group B in 2024. ಪ್ರಮುಖ ದಿನಾಂಕಗಳು.
KPSC Requirments Group B in 2024 ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳನ್ನು ಈ ಕೆಳಗೆ ನೀಡಲಾಗಿದೆ.
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 15/04/2024.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15/05/2024.
- ಶುಲ್ಕ ಪಾವತಿಗೆ ಕೊನೆಯ ದಿನಾಂಕ : 15/05/2024.
- ಸ್ಪರ್ಧಾತ್ಮಕ ಪರೀಕ್ಷಾ ದಿನಾಂಕ ( ತಾತ್ಕಾಲಿಕ ): 11/06/2024.
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಹುದ್ದೆಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಓದಿಕೊಂಡು, ಸರಿಯಾದ ಕ್ರಮದಲ್ಲಿ ಅರ್ಜಿಗಳನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು.ಏಕೆಂದರೆ ಒಮ್ಮೆ ಅರ್ಜಿ ಸಲ್ಲಿಸಿದ ನಂತರ ಅರ್ಜಿಯನ್ನು ತಿದ್ದುಪಡಿ ಮಾಡಲು ಯಾವುದೇ ಅವಕಾಶ ಇರುವುದಿಲ್ಲ.
KPSC Requirments Group B in 2024 ಅರ್ಜಿ ಸಲ್ಲಿಸುವ ವಿಧಾನ.
KPSC Requirments Group B in 2024 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನವನ್ನು ಈ ಕೆಳಕಂಡಂತೆ ವಿವರಿಸಲಾಗಿದೆ. ಕರ್ನಾಟಕ ಲೋಕಸೇವಾ ಆಯೋಗವು ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಗ್ರೂಪಿಗೆ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ಕರ್ನಾಟಕ ಲೋಕಸೇವಾ ಆಯೋಗದ ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ ನಲ್ಲಿ ಅರ್ಜಿಗಳನ್ನು ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ವಿಧಾನ :
Step 1: ಆಸಕ್ತಿಯುಳ್ಳ ಅಭ್ಯರ್ಥಿಗಳು ಕರ್ನಾಟಕ ಲೋಕಸೇವಾ ಆಯೋಗದ ಅಧಿಕೃತ ವೆಬ್ಸೈಟ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. KPSC ಅಧಿಕೃತ ವೆಬ್ಸೈಟ್ ವಿಳಾಸ ಹೀಗಿದೆ. KPSC Website
Step 2: ಹೊಸದಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲಿಗೆ KPSC ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಬೇಕು. ನಂತರ ” ಹೊಸ ಅರ್ಜಿದಾರರ ನೋಂದಣಿ(new registration ) ” ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
Step3: ಲಿಂಕ್ ಕರೆದುಕೊಂಡ ಮೇಲೆ, ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಎಂಟ್ರಿ ಮಾಡಿ, ನಾನ್ ರೆಡಿ ಮಾಡಿಕೊಳ್ಳಬೇಕು. ನೊಂದಣಿ ಮಾಡುವಾಗ ನೀಡಿರುವ ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿಯನ್ನು ಸೇವ್ ಮಾಡಿ ಇಟ್ಟುಕೊಳ್ಳಿ. ಅಥವಾ ಬೇರೆ ಕಡೆ ಬರೆದು ಇಟ್ಟುಕೊಳ್ಳಿ.
Step 4: ನೋಂದಾಯಿಸಿಕೊಂಡ ನಂತರ ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಅನ್ನು ಬಳಸಿ ಲಾಗಿನ್ ಮಾಡಿಕೊಳ್ಳಬೇಕು.
Step 5: ಲಾಗಿನ್ ಮಾಡಿಕೊಂಡ ನಂತರ ಅರ್ಜಿಯನ್ನು ಸರಿಯಾದ ಕ್ರಮದಲ್ಲಿ ಭರ್ತಿ ಮಾಡಬೇಕು. ಅಂದರೆ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಬೇಕು.
Step 6: ಅರ್ಜಿಯನ್ನು ಭರ್ತಿ ಮಾಡಿದ ನಂತರ, ಒಮ್ಮೆ ಅರ್ಜಿಯನ್ನು, ನೀಡಿರುವ ವಿವರಗಳು ಸರಿಯಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು. ಸರಿಯಾಗಿದ್ದರೆ ಸಬ್ಮಿಟ್ ಮಾಡಬೇಕು.
Step 7: ಅರ್ಜಿಗಳನ್ನು ಭರ್ತಿ ಮಾಡುವ ಸಮಯದಲ್ಲಿ ಹೇಳಲಾಗಿರುವ ದಾಖಲೆಗಳನ್ನು ಸ್ಕ್ಯಾನ್ ಮಾಡಿ, ಅಪ್ಲೋಡ್ ಮಾಡಬೇಕು.
Step 8: ಅರ್ಜಿಗಳನ್ನು ಸಲ್ಲಿಸಿದ ನಂತರ, ಸಲ್ಲಿಸಿದ ಅರ್ಜಿಗಳನ್ನು ಪ್ರಿಂಟ್ ಔಟ್ ತೆಗೆದುಕೊಳ್ಳಬೇಕು.
Step 9: ಶುಲ್ಕ ಪಾವತಿ ಮಾಡುವಾಗ ಸರಿಯಾದ ಕ್ರಮವನ್ನು ಅನುಸರಿಸಬೇಕು. ಶುಲ್ಕಗಳನ್ನು ಪಾವತಿಸಲು,ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್,ನೆಟ್ ಬ್ಯಾಂಕಿಂಗ್ ಮತ್ತು ಯುಪಿಐ (UPI) ಪಾವತಿ ವಿಧಾನಗಳನ್ನು ಅನುಸರಿಸಬೇಕು.
Step 10: ಶುಲ್ಕ ಪಾವತಿಸಿದ ನಂತರ, ನೀವು ಅರ್ಜಿಗಳನ್ನು ಪ್ರಿಂಟ್ ಔಟ್ ತೆಗೆದುಕೊಳ್ಳಬಹುದು.
Step 11: ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿ ಮಾಡಿರುವುದು ಯಶಸ್ವಿಯಾದರೆ, ಕರ್ನಾಟಕ ಲೋಕಸೇವಾ ಆಯೋಗದಿಂದ ನೀವು ರಿಜಿಸ್ಟರ್ ಮಾಡುವಾಗ ಕೊಟ್ಟಂತಹ ಮೊಬೈಲ್ ಸಂಖ್ಯೆಗೆ SMS ಮೂಲಕ ಮಾಹಿತಿಯನ್ನು ಒದಗಿಸಲಾಗುತ್ತದೆ.
ನೀವು ಅರ್ಜಿಗಳನ್ನು ಸಲ್ಲಿಸುವ ಸಂದರ್ಭದಲ್ಲಿ ಯಾವುದೇ ತೊಂದರೆ ಆದರೆ, ತಾಂತ್ರಿಕ ತೊಂದರೆ ಆದರೆ, ಕರ್ನಾಟಕ ಲೋಕಸೇವಾ ಆಯೋಗದ ಸಹಾಯವಾಣಿಯನ್ನು ಸಂಪರ್ಕಿಸಬಹುದು.
- ಕರ್ನಾಟಕ ಲೋಕಸೇವಾ ಆಯೋಗದ ಸಹಾಯವಾಣಿ ಸಂಖ್ಯೆಗಳು ಹೇಗಿದೆ.
- ಸಹಾಯವಾಣಿ ಸಂಖ್ಯೆ : 080-30574957.
- ಸಹಾಯವಾಣಿ ಸಂಖ್ಯೆ : 080-30574901.
ಈ ಮೇಲಿನ ಸಹಾಯವಾಣಿಗಳನ್ನು ಸಂಪರ್ಕಿಸಬಹುದು.
ವಿಶೇಷ ಸೂಚನೆಗಳು: ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಸರಿಯಾದ ಕ್ರಮದಲ್ಲಿ ಮಾರ್ಗಸೂಚಿಗಳನ್ನು ಓದಿಕೊಂಡು ವರದಿಗಳನ್ನು ಸಲ್ಲಿಸಬೇಕು. ಒಮ್ಮೆ ಅರ್ಜಿ ಸಲ್ಲಿಸಿದ ನಂತರ ಯಾವುದೇ ತಿದ್ದುಪಡಿಗೆ ಅವಕಾಶ ಇರುವುದಿಲ್ಲ.
ಆದರೆ ಅಭ್ಯರ್ಥಿಗಳು ಸಲ್ಲಿಸಿರುವ ಅರ್ಜಿಯಲ್ಲಿ ತುಂಬಾ ತಿದ್ದುಪಡಿ ಇದ್ದರೆ, ಅರ್ಜಿಯನ್ನು ಡಿಲೀಟ್ ಮಾಡಿ, ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ, ಆದರೆ ಶುಲ್ಕವನ್ನು ಮರುಪಾವತಿ ಮಾಡಲಾಗುವುದಿಲ್ಲ. ಹೊಸದಾಗಿ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು,ಶುಲ್ಕವನ್ನು ಮತ್ತೊಮ್ಮೆ ಪಾವತಿಸಬೇಕು.
KPSC Requirments Group B in 2024 ಅರ್ಜಿ ಶುಲ್ಕಗಳು ಹೀಗಿವೆ.
KPSC Requirments Group B in 2024 ಅರ್ಜಿ ಶುಲ್ಕಗಳನ್ನು ಈ ಕೆಳಕಂಡಂತೆ ನೀಡಲಾಗಿದೆ.
- ಸಾಮಾನ್ಯ ಅಭ್ಯರ್ಥಿಗಳು : ಅರ್ಜಿ ಶುಲ್ಕ : ರೂ.300.
- ಪ್ರವರ್ಗ – 2A, 2B, 3A, 3B ಅಭ್ಯರ್ಥಿಗಳು : ಅರ್ಜಿ ಶುಲ್ಕ : ರೂ.150.
- ಮಾಜಿ ಸೈನಿಕ ಅಭ್ಯರ್ಥಿಗಳು: ಅರ್ಜಿ ಶುಲ್ಕ : ರೂ.50.
- SC/ST, ಪ್ರವರ್ಗ -1, ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
- ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಪ್ರತಿ ಹುದ್ದೆಗೂ ಶುಲ್ಕವನ್ನು ಪಾವತಿ ಮಾಡಬೇಕು.
- ಒಮ್ಮೆ ಪಾವತಿ ಮಾಡಿರುವ ಶುಲ್ಕವನ್ನು ಯಾವುದೇ ಕಾರಣಕ್ಕೂ ಹಿಂತಿರುಗಿಸುವುದಿಲ್ಲ. ಅಥವಾ ಬೇರೆ ಹುದ್ದೆಗಳಿಗೆ ವರ್ಗಾಯಿಸುವುದಿಲ್ಲ.
KPSC Requirments Group B in 2024 ವಿದ್ಯಾರ್ಹತೆ ಮತ್ತು ವಯೋಮಿತಿ.
KPSC Requirments Group B in 2024 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆಳಗಿನ ವಿದ್ಯಾರ್ಥಿ ಮತ್ತು ವಯೋಮಿತಿಯನ್ನು ಹೊಂದಿರಬೇಕು.
ವಿದ್ಯಾರ್ಹತೆ :
1. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ : ಸಹಾಯಕ ಇಂಜಿನಿಯರ್ ಸಿವಿಲ್ ಹುದ್ದೆಗಳು: ಕಡ್ಡಾಯವಾಗಿ ಸಿವಿಲ್ ಇಂಜಿನಿಯರಿಂಗ್ ಪದವಿಯನ್ನು ಪಡೆದಿರಬೇಕು.
2. ಜಲಸಂಪನ್ಮೂಲ ಇಲಾಖೆ : ಸಹಾಯಕ ಇಂಜಿನಿಯರ್ ಸಿವಿಲ್ ಹುದ್ದೆಗಳು: ಸಿವಿಲ್ ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದಿರಬೇಕು.
3. ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ : ಸಹಾಯಕ ನಿರ್ದೇಶಕರು ಹುದ್ದೆಗಳು : ಸಿವಿಲ್ ಇಂಜಿನಿಯರಿಂಗ್ ನಲ್ಲಿ ಪದವಿ or B. Tech (civil), or AIME (civil).
4. ಹಿಂದುಳಿದ ವರ್ಗಗಳ ಇಲಾಖೆ : ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳು ಹುದ್ದೆಗಳು : ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.
5. ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ: ಸಹಾಯಕ ನಿರ್ದೇಶಕರ ಹುದ್ದೆಗಳು : B.E ಡಿಗ್ರಿ ಅಥವಾ ಮಾಸ್ಟರ್ ಡಿಗ್ರಿ ಇನ್ ಬಿಸಿನೆಸ್ ಮ್ಯಾನೇಜ್ಮೆಂಟ್.
6. ಜಲ ಸಂಪನ್ಮೂಲ ಇಲಾಖೆ : ಸಹಾಯಕ ನಿರ್ದೇಶಕರು ಮೆಕಾನಿಕಲ್ ಹುದ್ದೆಗಳು : ಮೆಕಾನಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದಿರಬೇಕು.
7. ಕಾರ್ಖಾನೆಗಳು, ಬಾಯ್ಲರ್ ಗಳು ಮತ್ತು ಕೈಗಾರಿಕಾ ಸಂರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ : ಕಾರ್ಖಾನೆಗಳ ಸಹಾಯಕ ನಿರ್ದೇಶಕರು ಹುದ್ದೆಗಳು : ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಅಥವಾ ಕೆಮಿಕಲ್ ಇಂಜಿನಿಯರಿಂಗ್ ಅಥವಾ ಇಂಡಸ್ಟ್ರಿಯಲ್ ಪ್ರೊಡಕ್ಷನ್ ಪದವಿ ಪಡೆದಿರಬೇಕು.
8. ಅಂತರ್ಜಲ ಇಲಾಖೆ : ಭೂ ವಿಜ್ಞಾನಿ ಹುದ್ದೆಗಳು : ಸ್ನಾತ್ತಕೋತರ ಪದವಿ ಇನ್ನು ಜಿಒಲಜಿ ( Geology ).ಅಥವಾ M. Sc ಯಲ್ಲಿ Earth science and research management.
ಹೀಗೆ ಈ ವಿದ್ಯಾರ್ಥಿಯನ್ನು ಹೊಂದಿರುವ ಪದವೀಧರರು, ಅಭ್ಯರ್ಥಿಗಳು ಈ ಮೇಲಿನ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಬಹುದು.
ವಯೋಮಿತಿ :
- ಕನಿಷ್ಠ 18 ವರ್ಷಗಳು.
- ಗರಿಷ್ಠ 35 ವರ್ಷಗಳು.
- ಪ್ರವರ್ಗ -2A, 2B, 3A, 3B: 38 ವರ್ಷಗಳು.
- SC/ST ಮತ್ತು ಪ್ರವರ್ಗ -1 : 40 ವರ್ಷಗಳು.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ವಯೋಮಿತಿ ಕ್ರಮಗಳನ್ನು ಪಡೆದುಕೊಳ್ಳಬಹುದು.