Tharak7star

Butter milk Health Benefits

Butter milk

Butter milk Health Benefits : ಮಜ್ಜಿಗೆ ಕುಡಿಯುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು ಯಾವುವು  ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

Summer tips : ಬೇಸಿಗೆ ಕಾಲದಲ್ಲಿ ಮಜ್ಜಿಗೆ ಕುಡಿಯುವುದರಿಂದ ಆರೋಗ್ಯವು ತಂಪಾಗಿ ಇರುವುದಲ್ಲದೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಸಹ ನೀಡುತ್ತದೆ. ದಿನೇ ದಿನೇ ಬಿಸಿಲು  ಅತಿ ಹೆಚ್ಚು ಆಗುತ್ತಿರುವುದರಿಂದ ದೇಹವನ್ನು ತಂಪಾಗಿ ಇಟ್ಟುಕೊಳ್ಳುವುದು ತುಂಬಾನೇ ಮುಖ್ಯ. ಬಿಸಿಲಿನ ಬೇಟೆಯನ್ನು ತಡೆಯಲು ಜನರು ತಂಪು ಪಾನೀಯಗಳ ಮೊರೆ ಹೋಗುವುದು ಸಹಜವಾಗಿದೆ. ಆದರೆ ತಪ್ಪು ಪಾನಿಯಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಆದರೂ ಕೆಮಿಕಲ್ಗಳು ಇರುತ್ತವೆ. ಇದು ಆರೋಗ್ಯಕ್ಕೆ ತುಂಬಾನೆ ಅಪಾಯಕಾರಿ.

ನೈಸರ್ಗಿಕವಾಗಿ ಸಿಗುವಂತಹ ತಂಪು ಪಾನೀಯಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಯಾವುದೇ ತೊಂದರೆ ಆಗೋದಿಲ್ಲ. ದೇಹವು ತಂಪಾಗುವ ಜೊತೆಗೆ ಆರೋಗ್ಯ ಲಾಭಗಳು ಸಹ ಸಿಗುತ್ತವೆ. ನೈಸರ್ಗಿಕವಾಗಿ ಸಿಗುವ ತಂಪು ಪಾನೀಯಗಳಲ್ಲಿ ಮುಖ್ಯವಾಗಿ ಎಳೆನೀರು, ಮಜ್ಜಿಗೆ ಹಾಗೂ ರಾಗಿಯ ಪದಾರ್ಥಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಜೊತೆಗೆ ಅನೇಕ ಆರೋಗ್ಯ ಲಾಭಗಳನ್ನು ಪಡೆದುಕೊಳ್ಳಬಹುದು. ಇವುಗಳು ನೈಸರ್ಗಿಕವಾಗಿ ಸಿಗುವುದರಿಂದ  ಇವುಗಳಲ್ಲಿ ಅಪಾಯಕಾರಿ ಕೆಮಿಕಲ್ ಗಳು ಇರುವುದಿಲ್ಲ ಹಾಗಾಗಿ ದೇಹಕ್ಕೆ ತಂಪು ನೀಡುವ ಜೊತೆಗೆ ಪೌಷ್ಟಿಕಾಂಶವನ್ನು ಸಹ ನೀಡುತ್ತವೆ.

Butter milk Health Benefits : ಮಜ್ಜಿಗೆ ಕುಡಿಯುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು ಯಾವುವು .

Butter milk

Butter milk Health Benefits : ಮಜ್ಜಿಗೆ ಕುಡಿಯುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ. ಮಜ್ಜಿಗೆಯು ಅನೇಕ ರೀತಿಯ ಪೌಷ್ಟಿಕಾಂಶವನ್ನು ಹೊಂದಿರುತ್ತದೆ. ಇದನ್ನು ಬೇಸಿಗೆಯಲ್ಲಿ ಕುಡಿಯುವುದರಿಂದ ದೇಹಕ್ಕೆ ತಂಪು ದುರಕುವುದಲ್ಲದೆ, ದೇಹಕ್ಕೆ ಬೇಕಾಗುವ ಪೌಷ್ಟಿಕಾಂಶವನ್ನು ನೀಡುತ್ತದೆ.

ಮಜ್ಜಿಗೆಯು ಅಗತ್ಯ ಪೌಷ್ಟಿಕಾಂಶಗಳ ಶಕ್ತಿ ಕೇಂದ್ರವಾಗಿದೆ. ಪ್ರೋಟೀನ್ ಕಡಿಮೆ ಇರುವ ಕೊಬ್ಬಿನ ಆಹಾರವಾಗಿದೆ.

1. ದೇಹಕ್ಕೆ ತಂಪು ನೀಡುತ್ತದೆ: ಬಿಸಿಲಿನ ತಾಪಮಾನ ದಿನೇ ದಿನೇ ಹೆಚ್ಚುತ್ತಿರುವುದರಿಂದ ದೇಹವನ್ನು ತಂಪಾಗಿ ಇಡುವುದು ತುಂಬಾನೇ ಮುಖ್ಯ. ದೇಹವನ್ನು ತಂಪಾಗಿಡಲು ನೈಸರ್ಗಿಕವಾಗಿ ಸಿಗುವ ಮಜ್ಜಿಗೆಯನ್ನು ಕುಡಿಯುವುದು ತುಂಬಾನೇ ಅನುಕೂಲ.

2. ನೈಸರ್ಗಿಕ ಉತ್ಪನ್ನವಾಗಿದೆ : ಮಜ್ಜಿಗೆಯು ನೈಸರ್ಗಿಕ ಉತ್ಪನ್ನವಾಗಿದೆ. ಇದನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಯಾವುದೇ ತೊಂದರೆ ಆಗುವುದಿಲ್ಲ.

3. ಪೌಷ್ಟಿಕಾಂಶವು ಸಿಗುತ್ತದೆ : ಮಜ್ಜಿಗೆಯನ್ನು ಕುಡಿಯುವುದರಿಂದ ಮಜ್ಜಿಗೆಯಲ್ಲಿರುವ ಪೌಷ್ಟಿಕಾಂಶವು ದೇಹಕ್ಕೆ ಸಿಗುತ್ತದೆ. ಮಜ್ಜಿಗೆಯಲ್ಲಿರುವ ಪೌಷ್ಟಿಕಾಂಶವು ದೇಹಕ್ಕೆ ತುಂಬಾನೇ ಒಳ್ಳೆಯದು.

4. ಜೀರ್ಣಕ್ರಿಯೆ ಸಹಕಾರಿಯಾಗಿದೆ : ಮಜ್ಜಿಗೆಯೂ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಮಜ್ಜಿಗೆಯಲ್ಲಿ ಮಸಾಲೆಗಳನ್ನು ಸೇರಿಸಿ ಸೇವಿಸುವುದರಿಂದ ಚೀನಕ್ರಿಯೆಗೆ ತುಂಬಾನೇ ಸಹಕಾರಿಯಾಗಿದೆ.

5. ಮೂಳೆಗಳ  ಬಲವರ್ಧನೆಗೆ ಸಹಾಯಕವಾಗಿದೆ : ಮಜ್ಜಿಗೆ ಕುಡಿಯುವುದರಿಂದ ಮೂಲೆಗಳು ಬಲವರ್ಧನೆ ಆಗುತ್ತದೆ. ಮಜ್ಜಿಗೆಯಲ್ಲಿ ಕ್ಯಾಲ್ಸಿಯಂ ಅಂಶವಿದ್ದು, ಅದು ಮೂಳೆಗಳ ಬಲ ವರ್ತನೆಗೆ ಸಹಕರಿಸುತ್ತದೆ.

6. ಜೀವಕೋಶದ ದುರಸ್ತಿ ಮತ್ತು ಬೆಳವಣಿಗೆ : ಮಜ್ಜಿಗೆ ಕುಡಿಯುವುದರಿಂದ ಅಮೈನೋ ಆಮ್ಲಗಳು ದೇಹಕ್ಕೆ ಸಿಗುತ್ತದೆ. ಇವು ಜೀವಕೋಶದ ದುರಸ್ತಿ ಮತ್ತು ಬೆಳವಣಿಗೆಗೆ ಸಹಕರಿಸುತ್ತವೆ.

7. ವಿಟಮಿನ್ ಗಳು ಸಿಗುತ್ತವೆ : ಮಜ್ಜಿಗೆ ಕುಡಿಯುವುದರಿಂದ ದೇಹಕ್ಕೆ ಬೇಕಾಗುವ ಕೆಲವು ಉಪಯುಕ್ತ ವಿಟಮಿನ್ ಗಳು ಸಿಗುತ್ತವೆ. ಕ್ಯಾಲ್ಸಿಯಂ ಮತ್ತು ರಿಬೋ ಪ್ಲಾಮಿನ್ ನಂತಹ ವಿಟಮಿನ್ ಗಳು ದೊರಕುತ್ತವೆ.

8. ದೇಹದಲ್ಲಿ ಶಕ್ತಿ ಉತ್ಪಾದನೆಯನ್ನು ಉತ್ತೇಜಿಸುತ್ತದೆ.: ಮಜ್ಜಿಗೆ ಸೇವನೆ ಮಾಡುವುದರಿಂದ ದೇಹವು ಅತಿಯಾಗಿ ಸುಸ್ತಾಗುವುದನ್ನು ತಡೆಯುತ್ತದೆ.

9. ಹೃದಯದ ಆರೋಗ್ಯಕ್ಕೆ ಸಹಕಾರಿ : ಮಜ್ಜಿಗೆಯನ್ನು ಕುಡಿಯುವುದರಿಂದ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಮಜ್ಜಿಗೆಯಲ್ಲಿ ಪೊಟಾಸಿಯಂ ಅಂಶವಿದ್ದು ಅದು ಹೃದಯಕ್ಕೆ ಸಹಕಾರಿಯಾಗಿದೆ.

10. ರಕ್ತದ ಒತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ: ಮಜ್ಜಿಗೆ ಸೇವನೆ ಮಾಡುವುದರಿಂದ ಅತಿಯಾದ ರಕ್ತದ ಒತ್ತಡವನ್ನು ತಡೆಯುತ್ತದೆ.

Butter milk

11. ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯಮಾಡುತ್ತದೆ. ಕರುಳನ್ನು ಶುದ್ಧಿ ಮಾಡುತ್ತದೆ.

12. ಮಲಬದ್ಧತೆಯನ್ನು ನಿವಾರಿಸಲು ಸಹಕಾರಿಯಾಗಿದೆ: ಮಜ್ಜಿಗೆಯನ್ನು ಕುಡಿಯುವುದರಿಂದ ಮಜ್ಜಿಗೆಯಲ್ಲಿ ಅತಿಯಾದ ನೀರಿನ ಅಂಶ ಇರುವುದರಿಂದ, ದೇಹಕ್ಕೆ ಬೇಕಾಗುವಷ್ಟು ನೀರಿನ ಅಂಶ ಸಿಗುವುದರಿಂದ, ಮಲಬದ್ಧತೆ ನಿವಾರಣೆಯಾಗುತ್ತದೆ.

13. ಅಜೀರ್ಣ ಸಮಸ್ಯೆಯನ್ನು ಪರಿಹರಿಸುತ್ತದೆ : ಊಟ ಮುಗಿದ ನಂತರ ಸ್ವಲ್ಪ ಹೊತ್ತು ಬಿಟ್ಟು ಒಂದು ಲೋಟ ಮಜ್ಜಿಗೆ ಕುಡಿಯುವುದರಿಂದ ಅಜೀರ್ಣ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು.

14. ಬಾಯಾರಿಕೆಯನ್ನು ತಣಿಸುತ್ತದೆ : ಬಿಸಿಲಿನ ಬೇಸಿಗೆಯಲ್ಲಿ ತುಂಬಾನೇ ಬಾಯಾರಿಕೆ ಉಂಟಾಗುತ್ತದೆ. ಮಜ್ಜಿಗೆ ಕುಡಿಯುವುದರಿಂದ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಅಂಶ ಸಿಗುವುದರಿಂದ, ಬಾಯಾರಿಕೆಯನ್ನು ಕಡಿಮೆ ಮಾಡುತ್ತದೆ.

15. ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ : ಚರ್ಮವನ್ನು ಕಾಂತಿಯುತವಾಗಿರಲು ಸಹಾಯ ಮಾಡುತ್ತದೆ.ದೇಹಕ್ಕೆ ತಂಪು ನೀಡುವ ಜೊತೆಗೆ ಚರ್ಮದ ಆರೋಗ್ಯಕ್ಕೂ ಸಹ ಸಹಕಾರಿಯಾಗಿದೆ. ಮಜ್ಜಿಗೆಯಲ್ಲಿರುವ ಲ್ಯಾಕ್ಟಿಸ್ ಆಮ್ಲವು ಚರ್ಮದ ಆರೈಕೆಗೆ ಸಹಾಯ ಮಾಡುತ್ತದೆ. ಚರ್ಮವನ್ನು ಕೋಮಲವಾಗಿಡಲು ಸಹಕರಿಸುತ್ತದೆ.

16. ಮೊಡವೆಗಳನ್ನು ನಿವಾರಿಸುವಲ್ಲಿ ಸಹಕರಿಸುತ್ತದೆ : ಪ್ರತಿನಿತ್ಯ ಮಜ್ಜಿಗೆ ಕುಡಿಯುವುದರಿಂದ ಮೊಡವೆಗಳು ನಿವಾರಣೆಯಾಗುತ್ತವೆ. ಚರ್ಮಕ್ಕೆ ನೇಸರ್ಗಿಕ ಹೊಳಪು ನೀಡುವುದಲ್ಲದೆ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.

17. ತೂಕ ಕಡಿಮೆ ಮಾಡಿಕೊಳ್ಳಲು ಸಹಕಾರಿಯಾಗಿದೆ : ಮಜ್ಜಿಗೆಯನ್ನು ಪ್ರತಿನಿತ್ಯ ಕುಡಿಯುವುದರಿಂದ ತೂಕ ಹೇಳಿಕೆಗೆ ಸಹಕಾರಿಯಾಗಿದೆ. ಮಜ್ಜಿಗೆಯಲ್ಲಿರುವ ಕಡಿಮೆ ಕೊಬ್ಬಿನ ಅಂಶ ಮತ್ತು ಕ್ಯಾಲರಿ ದೇಹದ ತೂಕ ಕಡಿಮೆ ಮಾಡುವಲ್ಲಿ ಸಹಕರಿಸುತ್ತವೆ. ಇದರಲ್ಲಿರುವ ಪ್ರೊಟೀನ್ ಅಂಶವು ಸಹ ಹೊಟ್ಟೆಯ  ಹಸಿವನ್ನು ಕಡಿಮೆ ಮಾಡುತ್ತದೆ.

ಮಜ್ಜಿಗೆಯಲ್ಲಿ ಕ್ಯಾಲ್ಸಿಯಂ ಅಂಶ ಮತ್ತು ವಿಟಮಿನ್ ಡಿ ಅಂಶವು ಇರುವುದರಿಂದ ಆರೋಗ್ಯಕ್ಕೆ ಗಟ್ಟಿತನವನ್ನು ತಂದುಕೊಡುತ್ತದೆ. ಮೂಳೆಗಳು ಶಕ್ತಿಯುತವಾಗಿ ಇರಲು ಸಹಾಯ ಮಾಡುತ್ತದೆ. ಆರೋಗ್ಯಕರವಾದ ಮತ್ತು ಶಕ್ತಿಯುತವಾದ ಮೂಳೆ ಬೆಳವಣಿಗೆಗೆ ಸಹಕರಿಸುತ್ತದೆ.

How To Make Butter milk.

ಮಜ್ಜಿಗೆಯಲ್ಲಿ ಅನೇಕ ಪೌಷ್ಟಿಕಾಂಶಗಳು ಇದ್ದು, ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಸಹಕರಿಸುತ್ತವೆ. 500 ಲೀ.ಮಜ್ಜಿಗೆಯಲ್ಲಿ 189% ಅಷ್ಟು ಕ್ಯಾಲೋರಿಗಳು ಇರುತ್ತವೆ. 16 ಗ್ರಾಂ ಪ್ರೋಟೀನ್ ಸಹಾಯ ಇರುತ್ತದೆ. ಸುಮಾರು 22 ಕ್ಯಾಲ್ಸಿಯಂ ಮತ್ತು ವಿಟಮಿನ್ ಗಳು ಇರುತ್ತವೆ. ಇವುಗಳು ದೇಹಕ್ಕೆ ಬೇಕಾಗುವ ಪೌಷ್ಟಿಕಾಂಶವನ್ನು ನೀಡುತ್ತವೆ. ಇದರಿಂದ ಆರೋಗ್ಯಕ್ಕೆ ತುಂಬಾನೇ ಲಾಭ ದೊರಕುತ್ತದೆ.

ಒಟ್ಟಾರೆಯಾಗಿ ನೋಡುವುದಾದರೆ ನೈಸರ್ಗಿಕವಾಗಿ ಸಿಗುವಂತಹ ತಂಪು ಪಾನೀಯಗಳಲ್ಲಿ ಮಜ್ಜಿಗೆ ಒಂದು. ಈ ಮಜ್ಜಿಗೆಯಲ್ಲಿ ಅನೇಕ ರೀತಿಯ ಪೋಷಕಾಂಶಗಳು ಇರುವುದರಿಂದ, ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ಸಹಕರಿಸುತ್ತದೆ. ದೇಹಕ್ಕೆ ಬೇಕಾಗುವ ನೀರಿನ ಅಂಶವನ್ನು ನೀಡುತ್ತದೆ. ಇದರಿಂದ ಈಗಿನ ಬಿಸಿಲಿನ ತಾಪಮಾನದಲ್ಲಿ ಬಾಯಾರಿಕೆ ಹೆಚ್ಚಿಗೆ ಆಗುವುದರಿಂದ ಬಾಯಾರಿಕೆ ತಡೆಯುವಲ್ಲಿ ಸಹಕರಿಸುತ್ತದೆ.

ಬೇಸಿಗೆ ಬಿಸಿಲಿನಲ್ಲಿ ಮಜ್ಜಿಗೆ ಕುಡಿಯುವುದರಿಂದ ದೇಹಕ್ಕೆ ಶಕ್ತಿ ದೊರಕುತ್ತದೆ ಅಂದರೆ ದೇಹ ಸುಸ್ತಾಗದಂತೆ ತಡೆಯುತ್ತದೆ. ಮುಖ್ಯವಾಗಿ ಹೇಳುವುದಾದರೆ ಮಜ್ಜಿಗೆ ಸೇವನೆ ಮಾಡುವುದರಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು., ಬಾಯಾರಿಕೆ ಕಡಿಮೆ ಮಾಡಿಕೊಳ್ಳಬಹುದು. ಜೀರ್ಣಕ್ರಿಯೆ, ಮಲಬದ್ಧತೆ ನಿವಾರಣೆ ಮಾಡಿಕೊಳ್ಳಬಹುದು.

ಮಜ್ಜಿಗೆಯು ನೈಸರ್ಗಿಕವಾಗಿ ದೊರಕುವುದರಿಂದ ಅದರಲ್ಲಿ ಯಾವುದೇ ರೀತಿಯ ಕೆಮಿಕಲ್ಗಳು ಇರುವುದಿಲ್ಲ. ಇದರ ಸೇವನೆಯಿಂದ ದೇಹಕ್ಕೆ ಮತ್ತು ಆರೋಗ್ಯಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ದೇಹಕ್ಕೆ ತಂಪು ನೀಡುತ್ತದೆ. ಆರೋಗ್ಯವನ್ನು ಕಾಪಾಡುತ್ತದೆ. ಬೇಸಿಗೆಕಾಲದಲ್ಲಿ ಅನೇಕ ರೆಸ್ಟೋರೆಂಟ್ ಗಳಲ್ಲಿ, ಅಂಗಡಿಗಳಲ್ಲಿ, ಮಜ್ಜಿಗೆಯನ್ನು ಮಾರಾಟ ಮಾಡುತ್ತಾರೆ. ಮಜ್ಜಿಗೆಗೆ ಮಸಾಲೆಗಳನ್ನು ಬೆರೆಸಿ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಮೂದ ನೀಡುತ್ತದೆ. ಆರೋಗ್ಯಕ್ಕೆ ಯಾವುದೇ ರೀತಿಯ ಅಡ್ಡ ಪರಿಣಾಮಗಳನ್ನು ಬೀರುವುದಿಲ್ಲ.

Leave a Reply

Your email address will not be published. Required fields are marked *