eid mubarak : what is ramzan eid 2024. ಈದ್ ಮುಬಾರಕ್ : ರಂಜಾನ್ ಎಂದರೇನು?, ಇತಿಹಾಸ ಮತ್ತು ಮಹತ್ವದ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ.
ಈ ಲೇಖನದಲ್ಲಿ ನಾವು ಈದ್ ಮುಬಾರಕ್ : ರಂಜಾನ್ ಎಂದರೇನು?, ಅದರ ಹಿಂದಿನ ಇತಿಹಾಸ ಏನು?, ಮತ್ತು ರಂಜಾನ್ ಆಚರಣೆಯ ಹಿನ್ನೆಲೆ ಮತ್ತು ಮಹತ್ವದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ. ಇಸ್ಲಾಂ ಧರ್ಮೀಯರ ಪ್ರಮುಖ ಹಬ್ಬಗಳಲ್ಲಿ ರಂಜಾನ್ ಹಬ್ಬವೂ ಒಂದು ಮಹತ್ವದ ಹಬ್ಬವಾಗಿದೆ. ಇದನ್ನು ಈದ್ ಮುಬಾರಕ್,ಈದ್ ಉಲ್ ಫಿತರ್, ರಂಜಾನ್( ರಮದಾನ್) ಎಂಬ ಹೆಸರುಗಳಿಂದ ಕರೆಯುತ್ತಾರೆ.
ಈದ್ ಮುಬಾರಕ್ : ರಂಜಾನ್ ಹಬ್ಬದ ಮುಖ್ಯ ವಿಧಿ ವಿಧಾನಗಳಲ್ಲಿ ಒಂದು ತಿಂಗಳ ಕಾಲ ಉಪವಾಸ ಇರುವುದು ಒಂದು ಮಹತ್ವದ ವ್ರತಚಾರಣೆಯಾಗಿದೆ. ಈ ಸಮಯದಲ್ಲಿ ದಿನವಿಡೀ ಉಪವಾಸವಿದ್ದು ಕಟ್ಟುನಿಟ್ಟಿನಿಂದ ತಮ್ಮ ಧರ್ಮದ ಸಂಪ್ರದಾಯಕ್ಕೆ ತಲೆಬಾಗಿ ನಡೆಯುತ್ತಾರೆ. ಬಡವ – ಶ್ರೀಮಂತ ಎನ್ನದೆ ಎಲ್ಲರೂ ಸಹ ಕಟ್ಟುನಿಟ್ಟಾಗಿ ಉಪವಾಸ ಇರುತ್ತಾರೆ. ಕಠಿಣ ವ್ರತದ ಮೂಲಕ ಹಸಿವಿನ ಆಳವನ್ನು ಅರಿಯುತ್ತಾರೆ. ಸೂರ್ಯನ ಆಗಮನದಿಂದ ಸೂರ್ಯ ಮುಳುಗುವವರೆಗೂ ಒಂದು ಹನಿ ನೀರು ಸಹ ಕುಡಿಯದೆ ಉಪವಾಸ ಇರುತ್ತಾರೆ. ಈ ಸಮಯದಲ್ಲಿ ಅಲ್ಹಾನನ್ನು ಪ್ರಾರ್ಥಿಸುತ್ತಾ ಇರುತ್ತಾರೆ.
eid mubarak : what is ramzan eid 2024. ರಂಜಾನ್ಎಂದರೇನು?.
eid mubarak : what is ramzan eid 2024. ರಂಜಾನ್ ಎಂದರೇನು ಎಂಬ ಬಗ್ಗೆ ತಿಳಿಯೋಣ. ರಂಜಾನ್ ಅಥವಾ ಈದ್ ಮುಬಾರಕ್ ಎಂದರೆ ಇಸ್ಲಾಂ ಧರ್ಮಿಯರಿಗೆ ಒಂದು ಮಹತ್ವದ ತಿಂಗಳು ಅಂದರೆ ಈ ತಿಂಗಳಿನಲ್ಲಿ ಬೆಳಿಗ್ಗೆ ಸೂರ್ಯೋದಯದ ನಂತರ ಹಾಗೂ ಸಂಜೆ ಸೂರ್ಯ ಮುಳುಗುವವರೆಗೆ ಒಂದು ಹನಿ ನೀರು ಕುಡಿಯದೆ ಉಪವಾಸವನ್ನು ಆಚರಣೆ ಮಾಡುತ್ತಾರೆ. ಬಡವರು ಶ್ರೀಮಂತರು ಎನ್ನದೆ ಎಲ್ಲರೂ ಸಮನಾಗಿ ಒಂದು ತಿಂಗಳ ಕಾಲ ಉಪವಾಸವಿದ್ದು, ಕಠಿಣ ವ್ರತವನ್ನು ಆಚರಣೆ ಮಾಡಿ ಈದ್ ಮುಬಾರಕ್, ರಂಜಾನ್ ಹಬ್ಬವನ್ನು ಆಚರಿಸುತ್ತಾರೆ.
ಈ ಉಪವಾಸದ ತಿಂಗಳಿನಲ್ಲಿ ಇಸ್ಲಾಂ ಧರ್ಮೀಯರು ದಾನ ಧರ್ಮಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಪ್ರತಿಯೊಬ್ಬರೂ ದಾನ ಧರ್ಮವನ್ನು ಮಾಡುತ್ತಾರೆ. ಯಾರು ಸಹ ಹಸಿವಿನಿಂದ ಬಳಲಬಾರದು ಎಂಬುದು ಇದರ ಮುಖ್ಯ ಉದ್ದೇಶ. ಅಲ್ಲಾಹ ನಾ ಪ್ರಾರ್ಥನೆಯೊಂದಿಗೆ ದಿನವನ್ನು ಕಳೆಯುತ್ತಾರೆ. ಈ ತಿಂಗಳನ್ನು ಅಲ್ಲಾಹನ ಭಕ್ತಿಯ ತಿಂಗಳು ಎಂದು ಕರೆಯುತ್ತಾರೆ. ಪರಿಗಣಿಸಲಾಗಿದೆ. ಪ್ರಪಂಚದಾದ್ಯಂತ ಮುಸ್ಲಿಮರು ಉಪವಾಸ, ಪ್ರಾರ್ಥನೆ, ದಾನ, ದಯೆ, ಧರ್ಮಗಳಲ್ಲಿ ತೊಡಗಿ ಕಠಿಣ ವ್ರತವನ್ನು ಆಚರಿಸುತ್ತಾರೆ.
eid mubarak : ramzan eid 2024. ಇತಿಹಾಸದ ವಿವರ.
eid mubarak : what is ramzan eid 2024. ರಂಜಾನ್ : ಈದ್ ಮುಬಾರಕ್ ನಾ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿದುಕೊಳ್ಳೋಣ. ರಂಜಾನ್ ತಿಂಗಳಿನಲ್ಲಿ ಉಪವಾಸದ ಮಹತ್ವದ ಬಗ್ಗೆ ತಿಳಿದುಕೊಳ್ಳೋಣ. ಉಪವಾಸದ ತಿಂಗಳು ಇಸ್ಲಾಂ ಧರ್ಮಿಯರಿಗೆ ಮಹಾ ಪವಿತ್ರ ತಿಂಗಳು. ಒಂದು ತಿಂಗಳುಗಳ ಕಾಲ ಉಪವಾಸವಿದ್ದು, ಅಲ್ಲಾಹನ ಪ್ರಾರ್ಥನೆಯಲ್ಲಿ ತೊಡಗಿರುತ್ತಾರೆ. ದಾನ ಧರ್ಮದ, ಮುಂತಾದ ಪವಿತ್ರ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ.
ಉಪವಾಸ ಒಂದು ಮಹತ್ವದ ಆಚರಣೆ,ಇದು ಅಲ್ಲಾಹನನ್ನು ಹತ್ತಿರದಿಂದ ನೋಡುವ ಒಂದು ಪದ್ಧತಿಯಾಗಿದೆ.ಬಡವರ ಕಷ್ಟಗಳನ್ನು, ಹಸಿವನ್ನು ಅರ್ಥ ಮಾಡಿಕೊಳ್ಳುವ ದಿನವಾಗಿದೆ. ಹಸಿವು ಮತ್ತು ಬಾಯಾರಿಕೆಯನ್ನು ಅನುಭವಿಸುವ ಮೂಲಕ ಬಡವರ ಹಸಿವು ಮತ್ತು ಕಷ್ಟಗಳನ್ನು ಅರ್ಥಮಾಡಿಕೊಳ್ಳುವ ಆಚರಣೆ ಆಗಿದೆ. ದಾನ ಧರ್ಮ ಮಾಡುವುದು ಪ್ರತಿ ಮುಸ್ಲಿಮರ ಕರ್ತವ್ಯವಾಗಿದೆ. ಈದ್ ದಿನದಂದು ಯಾರು ಹಸಿವಿನಿಂದ ಇರಬಾರದು ಎಂಬುದು ಇದರ ಮುಖ್ಯ ಉದ್ದೇಶವಾಗಿದೆ.
ಅಲ್ಲಾಹನೊಂದಿಗಿನ ತಮ್ಮ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳುವುದು, ಹತ್ತಿರವಾಗುವುದು, ಉಪವಾಸ ಎನ್ನುವುದು ಆತ್ಮ ಧೈರ್ಯವನ್ನು ಹೆಚ್ಚಿಸಲು ಮತ್ತು ಹಸಿವು ಹಸಿವಿನ ಅರಿವಿಯನ್ನು ಅರಿತುಕೊಳ್ಳಲು ಮತ್ತು ಅದೃಷ್ಟವನ್ನು ಸಂಪಾದನೆ ಮಾಡಲು ಈ ಉಪವಾಸದ ಆಚರಣೆಯನ್ನು ಮಾಡುತ್ತಾರೆ. ದೇವರ ಪ್ರಾರ್ಥನೆ, ದಾನ ಧರ್ಮ, ಉಪವಾಸದಲ್ಲಿ ತೊಡಗಿಕೊಂಡಿರುತ್ತಾರೆ.
ಈ ತಿಂಗಳಿನಲ್ಲಿ ಸೂರ್ಯೋದಯಕ್ಕಿಂತ ಮುಂಚೆ ಎದ್ದು, ಕುಟುಂಬ ಸದಸ್ಯರೊಂದಿಗೆ ಆಹಾರವನ್ನು ಸೇವಿಸುತ್ತಾರೆ ಮತ್ತು ಸೂರ್ಯಾಸ್ತವಾಗುವ ಸಮಯದಲ್ಲಿ ಉಪವಾಸ ಮುರಿಯುವ ವೇಳೆ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಎಲ್ಲರೂ ಒಂದೆಡೆ ಸೇರಿಕೊಂಡು,ಸಾಮೂಹಿಕವಾಗಿಹಣ್ಣು ಹಂಪಲುಗಳನ್ನು, ಖರ್ಜೂರ, ತಂದು ಎಲ್ಲರೂ ಸೇವಿಸುವ ಮೂಲಕ ವ್ರತವನ್ನು ಮುಗಿಸುತ್ತಾರೆ. ಈ ಮೂಲಕ ಬಡವ ಶ್ರೀಮಂತ ಎನ್ನದೆ ಎಲ್ಲರೂ ಸಮಾನವಾಗಿ ಆಚರಣೆ ಮಾಡುತ್ತಾರೆ.
eid mubarak : ramzan eid 2024 ಮಹತ್ವ.
eid mubarak : what is ramzan eid 2024 ಈದ್ ಮುಬಾರಕ್ ಅಥವಾ ರಂಜಾನ್ ಹಬ್ಬದ ಮಹತ್ವವನ್ನು ತಿಳಿಯೋಣ. ಈ ಹಬ್ಬದ ಒಂದು ಪ್ರಮುಖ ಅಂಶವೆಂದರೆ ಉಪವಾಸ. ಒಂದು ತಿಂಗಳು ಕಾಲ ಸೂರ್ಯ ಆಗಮನದಿಂದ ಸೂರ್ಯ ಮುಳುಗುವವರೆಗೂ ಒಂದು ಹನಿ ನೀರು ಸಹ ಕುಡಿಯದೆ ಉಪವಾಸವನ್ನು ಆಚರಣೆ ಮಾಡುತ್ತಾರೆ.
ಈದ್ ಮುಬಾರಕ್ ರಂಜಾನ್ ಹಬ್ಬದ ಪ್ರಮುಖ ಮಹತ್ವದ ಬಗ್ಗೆ ತಿಳಿದುಕೊಳ್ಳೋಣ.
1. ದಾನ ಧರ್ಮಕ್ಕೆ ಪ್ರಾಧಾನ್ಯತೆ : ಈದ್ ಮುಬಾರಕ್ ಅಥವಾ ರಂಜಾನ್ ಹಬ್ಬದ ಮುಖ್ಯ ಉದ್ದೇಶವೆಂದರೆ ದಾನ ಧರ್ಮ ಮಾಡುವುದು. ಇದರಿಂದ ಇತರರ ಕಷ್ಟಗಳನ್ನು ಅರಿಯುವುದು.
2. ಹಸಿವನ್ನು ನೀಗಿಸುವ ಕೆಲಸ: ಮುಖ್ಯವಾಗಿ ಈ ತಿಂಗಳಿನಲ್ಲಿ ಉಪವಾಸ ಇರುವುದರಿಂದ ಹಸಿವಿನ ಅರಿವು ಮತ್ತು ಮಹತ್ವವನ್ನು ತಿಳಿದುಕೊಂಡು, ಕಡು ಬಡವರಿಗೆ ಸಹಾಯ ಮಾಡುವ ಮೂಲಕ ಅವರ ಹಸಿವನ್ನು ನೀಗಿಸುವ ಕೆಲಸ ಮಾಡುತ್ತಾರೆ.
3. ಸಮಾನತೆ ಮತ್ತು ಸಹಬಾಳ್ವೆ : ಈ ತಿಂಗಳಿನಲ್ಲಿ ಬಡವ ಶ್ರೀಮಂತ ಎನ್ನದೆ, ಎಲ್ಲರೂ ಸಹ ಉಪವಾಸವನ್ನು ಆಚರಣೆ ಮಾಡುತ್ತಾರೆ. ಉಪವಾಸವನ್ನು ಮುಗಿಸುವ ವೇಳೆ ಎಲ್ಲರೂ ಸಾಮೂಹಿಕವಾಗಿ ಹಣ್ಣು ಹಂಪಲುಗಳನ್ನು ತಿನ್ನುವ ಮೂಲಕ ಸಮಾನತೆ ಮತ್ತು ಸಹಬಾಳ್ವೆಗೆ ಪಾತ್ರ ಆಗುತ್ತಾರೆ.
4. ಸಾಮೂಹಿಕ ಪ್ರಾರ್ಥನೆ: ಎಲ್ಲರೂ ಸಾಮೂಹಿಕವಾಗಿ ಒಂದೆಡೆ ಸೇರಿಕೊಂಡು, ಮಸೀದಿಗಳಲ್ಲಿ ಅಥವಾ ಅವರ ಮನೆಗಳಲ್ಲಿ, ಕುಟುಂಬದ ಎಲ್ಲಾ ಸದಸ್ಯರು ಸೇರಿಕೊಂಡು ಅಲ್ಲಾಹನನ್ನು ಸಾಮೂಹಿಕವಾಗಿ ಪ್ರಾರ್ಥನೆ ಮಾಡುತ್ತಾರೆ.
5. ಧಾರ್ಮಿಕ ಬಾಂಧವ್ಯವನ್ನು ಬೆಳೆಸುವುದು : ಸಾಮೂಹಿಕವಾಗಿ ಪ್ರಾರ್ಥನೆ ಮಾಡುವುದರಿಂದ ಮತ್ತು ಕುಟುಂಬ ಸದಸ್ಯರೊಂದಿಗೆ ಸೇರಿಕೊಂಡು, ಸ್ನೇಹಿತರೊಂದಿಗೆ ಸೇರಿಕೊಂಡು, ಸಾಮೂಹಿಕವಾಗಿ ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ತೊಡಗುವ ಮೂಲಕ ಬಾಂಧವ್ಯವನ್ನು ಬೆಳೆಸುವುದು.
6. ಪವಿತ್ರ ಗ್ರಂಥ ಖುರಾನ್ ಪಠಣೆ ಮಾಡುವುದು : ಇಸ್ಲಾಂ ಧಾರ್ಮಿಕ ಗ್ರಂಥ ಖುರಾನನ್ನು ಪಠಣೆ ಮಾಡುವುದು.
7. ಆತ್ಮ ಶುದ್ಧೀಕರಣ: ಉಪವಾಸವಿದ್ದು, ದೇವರ ಪ್ರಾರ್ಥನೆ ಮಾಡುವ ಮೂಲಕ ಆತ್ಮವನ್ನು ಶುದ್ಧೀಕರಣ ಮಾಡಿಕೊಳ್ಳುವುದು ಪ್ರಮುಖ ಉದ್ದೇಶವಾಗಿದೆ.
8. ಕುಟುಂಬ ಮತ್ತು ಸಮುದಾಯದ ಸಂಬಂಧವನ್ನು ಗಟ್ಟಿ ಮಾಡಿಕೊಳ್ಳುವುದು : ಎಲ್ಲರೂ ಒಟ್ಟಾಗಿ ಸಾಮೂಹಿಕ ಪ್ರಾರ್ಥನೆ ಮಾಡುವ ಮೂಲಕ ಮತ್ತು ಸಾಮೂಹಿಕವಾಗಿ ಹಣ್ಣು ಹಂಪಲುಗಳನ್ನು ಸೇವಿಸುವ ಮೂಲಕ ಕುಟುಂಬದ ಮತ್ತು ಸಮುದಾಯದ ಬಾಂಧವ್ಯವನ್ನು ಗಟ್ಟಿಗೊಳಿಸಿಕೊಳ್ಳುವುದು.
ಈದ್ ಮುಬಾರಕ್ ಅಥವಾ ರಂಜಾನ್ ಹಬ್ಬದ ಆಚರಣೆಯು ಮುಖ್ಯವಾಗಿ ಚಂದ್ರ ದರ್ಶನದ ಮೂಲಕ ಆಚರಿಸುತ್ತಾರೆ. ಇಸ್ಲಾಮ್ ಧರ್ಮಿಯರ ಪ್ರಕಾರ, ಪವಿತ್ರ ರಂಜಾನ್ ತಿಂಗಳಲ್ಲಿ ಉಪವಾಸವಿದ್ದು, ಚಂದ್ರದರ್ಶನದ ನಂತರ ಹಬ್ಬವನ್ನು ಆಚರಣೆ ಮಾಡುತ್ತಾರೆ.
ಬಡವರ ಕಷ್ಟಗಳನ್ನು ಅರ್ಥ ಮಾಡಿಕೊಳ್ಳುವ ದಿನ. ಹಸಿವನ್ನು ಅರಿತುಕೊಳ್ಳುವ ದಿನ, ಪವಿತ್ರ ದಿನವಾಗಿ ಹಬ್ಬವನ್ನು ಆಚರಣೆ ಮಾಡುತ್ತಾರೆ.
ಪವಿತ್ರ ಉಪವಾಸದ ತಿಂಗಳಲ್ಲಿ, ಕುಟುಂಬ, ತಂದೆ ತಾಯಿ,ಅಣ್ಣ ತಮ್ಮ, ಅಕ್ಕ-ತಂಗಿ, ಸ್ನೇಹಿತರು ಹೀಗೆ ಎಲ್ಲರೂ ಒಗ್ಗಟ್ಟಿನಿಂದ ಇರುವುದನ್ನು ಕಲಿಯಬಹುದು. ಉಪವಾಸವಿದ್ದು ಹಸಿವು, ಬಡತನ, ಕಷ್ಟ ಸುಖಗಳನ್ನು ಅರಿತು ಇನ್ನೊಬ್ಬರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡುವ ಮೂಲಕ ಅವರ ಹಸಿವನ್ನು ನೀಗಿಸುವ ಕೆಲಸ ಮಾಡುವುದು ಹಾಗೂ ದಾನ ಧರ್ಮಗಳನ್ನು ಮಾಡುವುದು ಈ ಉಪವಾಸ ತಿಂಗಳಿನ ಮುಖ್ಯ ಉದ್ದೇಶವಾಗಿದೆ.