Tharak7star

Vidhyalakshmi:ವಿದ್ಯಾಲಕ್ಷ್ಮಿ ಶಿಕ್ಷಣ ಸಾಲ ಸಂಪೂರ್ಣ ಮಾಹಿತಿ.

ವಿದ್ಯಾಲಕ್ಷ್ಮಿ ಶಿಕ್ಷಣ ಸಾಲ ಪಡೆಯುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ಶಿಕ್ಷಣ ಸಾಲ ಪಡೆಯೋದು ಹೇಗೆ?. ಅರ್ಜಿ ಎಲ್ಲಿ ಸಲ್ಲಿಸಬೇಕು, ಯಾವ ಯಾವ ದಾಖಲೆಗಳು ಬೇಕು, ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ಹೆಸರೇ ಹೇಳುವಂತೆ ಶಿಕ್ಷಣ ಪಡೆಯಲು ಈ ಸಾಲವನ್ನು ನೀಡಲಾಗುತ್ತದೆ. ಅಂದರೆ ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕಾಗಿ ನೀಡುವ ಸಾಲ ಇದಾಗಿದೆ. ಈ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಪ್ರಧಾನಮಂತ್ರಿ ವಿದ್ಯಾಲಕ್ಷ್ಮಿ ಯೋಜನೆ ತುಂಬಾ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿದೆ.

ಈ ಶಿಕ್ಷಣ ಸಾಲ ಪಡೆದು ಅನೇಕ ವಿದ್ಯಾರ್ಥಿಗಳು ತಮ್ಮ ಉನ್ನತ ವಿದ್ಯಾಭ್ಯಾಸ ಮುಗಿಸಿಕೊಂಡಿದ್ದಾರೆ.ಈ ಶಿಕ್ಷಣ ಸಾಲವನ್ನು ದೇಶದ ಎಲ್ಲಾ ಬ್ಯಾಂಕ್ ಗಳಿಂದ ಪಡೆಯಬಹುದು. ಶಿಕ್ಷಣ ಸಾಲ ಪಡೆಯಲು ಪ್ರಧಾನಮಂತ್ರಿ ವಿದ್ಯಾಲಕ್ಷ್ಮಿ ಪೋರ್ಟಲ್ ಅನ್ನು ಬಳಸಬಹುದು.

ಉತ್ತಮ ವಿದ್ಯಾಭ್ಯಾಸ ಪಡೆಯಲು ವಿದ್ಯಾರ್ಥಿಗಳಿಗೆ ಹೆಚ್ಚಿನ ಹಣವನ್ನು ನೀಡಬೇಕು. ಇಂತಹ ಸಮಯದಲ್ಲಿ ವಿದ್ಯಾರ್ಥಿಗಳಿಗೆ ತಾವು ಬಯಸಿದ ಶಿಕ್ಷಣ ಪಡೆಯಲು ಹಣದ ನೆರವು ಬೇಕಾಗುತ್ತದೆ. ಈ ಯೋಜನೆಯಿಂದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಅನುಕೂಲವಾಗಿದೆ.

ಪ್ರಸ್ತುತ ದಿನಗಳಲ್ಲಿ ಶಿಕ್ಷಣಕ್ಕೆ ಲಕ್ಷಗಟ್ಟಲೆ ಹಣ ನೀಡಬೇಕು. ಪಠ್ಯ ಪುಸ್ತಕ, ಯುನಿಫಾರ್ಮ್, ಐ ಡಿ ಕಾರ್ಡ್, ವಾಹನ ವೆಚ್ಚ ಹೀಗೆ ತುಂಬಾ ಹಣ ಕಟ್ಟಬೇಕು. ಹಾಗಾಗಿ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡಲು ಕೇಂದ್ರ ಸರ್ಕಾರ ಮತ್ತು ಹಣಕಾಸು ಸಂಸ್ಥೆ ಸೇರಿ ಈ ಪೋರ್ಟಲ್ ಅನ್ನು ಅಭಿರುದ್ದಿ ಪಡಿಸಿದೆ.

ಹೆಚ್ಚಿನ ಮಾಹಿತಿಯನ್ನು ಪಡೆಯಲು: https://www.vidyalakshmi.co.in ಗೆ ಭೇಟಿ ನೀಡಿ.

ವಿದ್ಯಾಲಕ್ಷ್ಮಿ ಶಿಕ್ಷಣ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?.

ವಿದ್ಯಾಲಕ್ಷ್ಮಿ ಶಿಕ್ಷಣ ಸಾಲ”ಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ತಿಳಿಯೋಣ. ಈ ಶಿಕ್ಷಣ ಸಾಲ ಪಡೆಯಲು ಕೇಂದ್ರ ಸರ್ಕಾರದ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು. ವಿದ್ಯಾಲಕ್ಷ್ಮಿ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿ, ಶಿಕ್ಷಣ ಸಾಲ ಪಡೆಯಬಹುದು.

ಶೈಕ್ಷಣಿಕ ಸಾಲಕ್ಕಾಗಿ ಇರುವ ವೆಬ್ಸೈಟ್ ಇದಾಗಿದ್ದು, ಭಾರತ ಸರ್ಕಾರ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲು ಈ ಎಜುಕೇಶನ್ ಲೋನ್ ಪೋರ್ಟಲ್ ಜಾರಿಗೆ ತಂದಿದೆ. ಈ ಪೋರ್ಟಲ್ ಹಣಕಾಸು ಸಚಿವಾಲಯ ದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ.

ಈ ಶಿಕ್ಷಣ ಸಾಲ ಪಡೆಯಲು ನೀವು ಮೊದಲು ವಿದ್ಯಾಲಕ್ಷ್ಮಿ ಪೋರ್ಟಲ್ ಗೆ ಭೇಟಿ ನೀಡಬೇಕು. ಲಿಂಕ್ http://www.vidyalakshmi.co.in ಹೀಗಿದೆ. ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ನಂತರ ಅರ್ಜಿಗಳನ್ನು ಸಲ್ಲಿಸಬೇಕು.

ನಿಮ್ಮ ಹೆಸರು. ವಿಳಾಸ, ಮೊಬೈಲ್ ನಂಬರ್, ಇಮೇಲ್ ಐ ಡಿ ಎಲ್ಲಾ ಮಾಹಿತಿಯನ್ನು ಸರಿಯಾಗಿ ಎಂಟ್ರಿ ಮಾಡಬೇಕು. ಅರ್ಜಿ ಫಾರಂ ಗಳಲ್ಲಿ ಕೇಳಿದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಬೇಕು. ವಿದ್ಯಾರ್ಥಿಗಳು ಯಾವ ಕೋರ್ಸ್ ಪಡೆಯಲು ಅರ್ಜಿ ಸಲ್ಲಿಸಿರುತ್ತಾನೋ ಅದೇ ದಾಖಲಾತಿಗಳನ್ನು ಅಪ್ಲೋಡ್ ಮಾಡಬೇಕು.

ಅರ್ಜಿ ಸಲ್ಲಿಸುವಾಗ ಬ್ಯಾಂಕ್, ಶಾಖೆ ಮತ್ತು ಲೋನ್ ಯೋಜನೆಯನ್ನು ಸರಿಯಾಗಿ ಭರ್ತಿ ಮಾಡಬೇಕು.ಎಲ್ಲಾ ಮಾಹಿತಿಯನ್ನು ನೀಡಿ ಅರ್ಜಿ ಸಲ್ಲಿಸಿ. ನಂತರ ಅರ್ಜಿ ಪರಿಶೀಲನೆ ಮಾಡಿ ಬ್ಯಾಂಕ್ ಕಡೆಯಿಂದ ನಿಮ್ಮನ್ನು ಸಂಪರ್ಕಿಸಲಾಗುವುದು ಅಥವಾ ನೀವೇ 15 ದಿನಗಳ ನಂತರ ಭೇಟಿ ಮಾಡಬಹುದು.

ವಿದ್ಯಾರ್ಥಿಗಳು ಒಂದೇ ಅರ್ಜಿಯಲ್ಲಿ ಮೂರು ಬ್ಯಾಂಕ್ ಗಳಿಗೆ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಎಲ್ಲಾ ನಿಯಮ ಮತ್ತು ಷರತ್ತು ಸರಿಯಾಗಿ ಓದಿಕೊಂಡು ಅರ್ಜಿಗಳನ್ನು ಸಲ್ಲಿಸಬೇಕು. ಕೇಳಿರುವ ದಾಖಲೆಗಳನ್ನು ಸರಿಯಾಗಿ ಅಪ್ಲೋಡ್ ಮಾಡಬೇಕು.

ಅರ್ಜಿಗಳನ್ನು ಸಲ್ಲಿಸಿದ ಮೇಲೆ ಸರಿಯಾಗಿದೆ ಎಂದು ಖಾತ್ರಿ ಪಡಿಸಿಕೊಂಡು ಅಪ್ಲೋಡ್ ಮಾಡಿ ನಂತರ ಅರ್ಜಿಯ ಪ್ರಿಂಟ್ ಔಟ್ ತೆಗೆದುಕೊಳ್ಳಬೇಕು. ಯಾವುದೇ ಮಾಹಿತಿಯನ್ನು ಕೇಳಿದರೆ ನಿಮ್ಮ ಇಮೇಲ್ ಗೆ ಮೆಸೇಜ್ ಬರುತ್ತದೆ.

ವಿದ್ಯಾಲಕ್ಷ್ಮಿ ಶಿಕ್ಷಣ ಸಾಲ ಪಡೆಯಲು ಬೇಕಾಗುವ ದಾಖಲೆಗಳು.

ವಿದ್ಯಾಲಕ್ಷ್ಮಿ ಶಿಕ್ಷಣ ಸಾಲವನ್ನು ಪಡೆಯಲು ಈ ಕೆಳಗಿನ ದಾಖಲೆಗಳು ಬೇಕು.

ಈ ಪೋರ್ಟಲ್ ಅನ್ನು ಉನ್ನತ ಶಿಕ್ಷಣ ಇಲಾಖೆ ಮತ್ತು ಇಂಡಿಯನ್ ಬ್ಯಾಂಕ್ ಅಸೋಶಿಯಷನ್ (IBA) ಹಾಗೂ ಹಣಕಾಸು ಇಲಾಖೆ ಅಡಿಯಲ್ಲಿ ಜಾರಿಗೆ ತರಲಾಗಿದೆ. ಇದು ದೇಶದಲ್ಲಿ ಲಭ್ಯವಿರುವ ಶಿಕ್ಷಣ ಸಾಲಗಳಲ್ಲಿ ತುಂಬಾ ಮಹತ್ವದ ಯೋಜನೆಯಾಗಿದೆ.

ಪ್ರಧಾನಮಂತ್ರಿ ವಿದ್ಯಾಲಕ್ಷ್ಮಿ ಯೋಜನೆಯು ವಿದ್ಯಾಭ್ಯಾಸಕ್ಕೆ ನೇರವಾಗಲೂ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಒಂದು ಯೋಜನೆಯಾಗಿದೆ. ಈ ಶಿಕ್ಷಣ ಸಾಲವನ್ನು ಪಡೆಯಲು ಕೆಲವು ದಾಖಲೆಗಳ ಅವಶ್ಯಕತೆ ಇದೆ. ಅವುಗಳೆಂದರೆ,

ಆಧಾರ್ ಕಾರ್ಡ್.

ಬ್ಯಾಂಕ್ ಖಾತೆಯ ಸಂಪೂರ್ಣ ಮಾಹಿತಿ.

ಮೊಬೈಲ್ ನಂಬರ್.

ಇಮೇಲ್ ಐ ಡಿ.

ಪ್ರವೇಶ ಪಡೆದ ಶಿಕ್ಷಣ ಸಂಸ್ಥೆ ಯ ಅಧಿಕೃತ ಪತ್ರ.

ಹಿಂದಿನ ಶಿಕ್ಷಣದ ಮಾಹಿತಿ. ಅಂಕಪಟ್ಟಿ, ವರ್ಗಾವಣೆ ಪತ್ರ.ಇತ್ಯಾದಿ.

ಆದಾಯ ಪ್ರಮಾಣ ಪತ್ರ.

KYC ದಾಖಲೆಗಳು ಮತ್ತು ಗ್ಯಾರಂಟಿ ಫಾರ್ಮ್.

ಇನ್ನು ಉಳಿದ ಕೆಲವು ದಾಖಲೆಗಳನ್ನು ಬ್ಯಾಂಕ್ ಕೇಳಿದರೆ ನೀಡಬೇಕು. ಈ ಸಾಲದಿಂದ ಹಲವಾರು ಜನರು ತಮ್ಮ ಉನ್ನತ ವಿದ್ಯಾಭ್ಯಾಸ ಮಾಡಿಕೊಂಡಿದ್ದಾರೆ. ಈ ಸಾಲ ಶಿಕ್ಷಣ ಕ್ಷೇತ್ರದಲ್ಲಿ ಒಂದು ಪ್ರಗತಿಪರ ಯೋಜನೆಯಾಗಿದೆ.

ಅರ್ಜಿ ಸಲ್ಲಿಕೆ ಸಂಪೂರ್ಣ ಆನ್ಲೈನ್ ಆಗಿರುವುದರಿಂದ ತುಂಬಾ ಸಹಾಯವಾಗಿದೆ. ಸರಿಯಾದ ದಾಖಲಾತಿ ನೀಡಿ ಅರ್ಜಿ ಸಲ್ಲಿಸಿ, ಸಾಲ ಪಡೆಯಬಹುದು.

ವಿದ್ಯಾಲಕ್ಷ್ಮಿ ಶಿಕ್ಷಣ ಸಾಲ ಪಡೆಯಲು ನೀಡಬೇಕಾದ ಶುಲ್ಕ ಎಷ್ಟು?.

ವಿದ್ಯಾಲಕ್ಷ್ಮಿ ಶಿಕ್ಷಣ ಸಾಲ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿರುವುದರಿಂದ ಯಾವುದೇ ಶುಲ್ಕ ಇರುವುದಿಲ್ಲ. ವಿದ್ಯಾಭ್ಯಾಸ ದ ಸಲುವಾಗಿ ಈ ಯೋಜನೆ ಜಾರಿಗೆ ಬಂದಿದ್ದು, ಸರ್ಕಾರ ಉಚಿತವಾಗಿ ಸೌಲಭ್ಯ ನೀಡುತ್ತದೆ. ಅಂದರೆ ವಿದ್ಯಾರ್ಥಿಗಳಿಗೆ ಅನುಕೂಲ ಆಗಲೆಂದು ಜಾರಿಗೆ ಬಂದ ಯೋಜನೆಯಾಗಿರುವುದರಿಂದ ಯಾವುದೇ ಶುಲ್ಕ ಇರುವುದಿಲ್ಲ.

ಈ ಯೋಜನೆ ನೀಡುವ ಬ್ಯಾಂಕ್ ಗಳು ಯಾವುವು.

ಈ ಯೋಜನೆ ಮೂಲಕ ಅರ್ಜಿ ಸಲ್ಲಿಸಿ ಶಿಕ್ಷಣ ಸಾಲವನ್ನು ಪಡೆಯಲು ನೀವು ಭಾರತ ದೇಶದ ಯಾವುದೇ ಬ್ಯಾಂಕ್ ಗೆ ಭೇಟಿ ನೀಡಬಹುದು. ಅಂದರೆ RBI ಅಧಿನದಲ್ಲಿರುವ ಯಾವುದೇ ಹಣಕಾಸು ಸಂಸ್ಥೆಯಿಂದ ಶಿಕ್ಷಣ ಸಾಲ ಪಡೆಯಬಹುದು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ. ಅಕ್ಸಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಕೆನರಾ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಐ ಡಿ ಬಿ ಐ ಬ್ಯಾಂಕ್, ಇಂಡಿಯಾನ್ ಬ್ಯಾಂಕ್, ಹೆಚ್ಎ ಡಿ ಎಫ್ಲ್ಲಾ ಸಿ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ವಿಜಯ ಬ್ಯಾಂಕ್, ಕರ್ಪೂರೇಷನ್ ಬ್ಯಾಂಕ್, ಒಟ್ಟಾರೆಯಾಗಿ ಭಾರತ ದೇಶದ ಎಲ್ಲಾ ಬ್ಯಾಂಕ್ ಗಳ ಮೂಲಕ ಈ ಸಾಲವನ್ನು ಪಡೆಯಬಹುದು.

ಶಿಕ್ಷಣ ಸಾಲದ ಬಡ್ಡಿ ದರ ವನ್ನು ಬ್ಯಾಂಕ್ ನೀಡುತ್ತವೆ. ಸಂಪೂರ್ಣ ಮಾಹಿತಿಯನ್ನು ಬ್ಯಾಂಕ್ ನಿಂದ ಪಡೆಯಲು ಬಹುದು. ಹೀಗೆ ಉನ್ನತ ಶಿಕ್ಷಣ ಪಡೆಯಲು ಅನುಕೂಲ ಮಾಡಲು ಈ ಯೋಜನೆ ಜಾರಿಗೆ ಬಂದಿದೆ.

ಆಸಕ್ತ ವಿದ್ಯಾರ್ಥಿಗಳಿಗೆ ಇದು ಅನುಕೂಲವಾಗಿದೆ. ಉನ್ನತ ವಿದ್ಯಾಭ್ಯಾಸ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಈ ಯೋಜನೆ ತುಂಬಾ ಸಹಾಯವಾಗಿದೆ.

Leave a Reply

Your email address will not be published. Required fields are marked *