ರೇಷನ್ ಕಾರ್ಡ್ ಗಾಗಿ ಕಾಯುತ್ತಿರುವವರಿಗೆ ಕರ್ನಾಟಕ ಕಾಂಗ್ರೆಸ್ ಸರ್ಕಾರದಿಂದ ಶುಭ ಸುದ್ದಿ ಹೊರಬಿದ್ದಿದೆ. ಅಂದರೆ 2024 ರ ಸಾಲಿನಲ್ಲಿ ಹೊಸ ರೇಷನ್ ಕಾರ್ಡ್ ಮತ್ತು ತಿದ್ದುಪಡಿಗೆ ಅನುಮೋದನೆ ಸಿಕ್ಕಿದೆ. ಇದೇ ಏಪ್ರಿಲ್ 2024 ರಿಂದ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಹೊಸ ಕಾರ್ಡ್ ಗೆ ಅರ್ಜಿ ಸಲ್ಲಿಸಿರುವವರಿಗೆ ಹೊಸ ಕಾರ್ಡ್ ನೀಡಲು . ಹಾಗೂ ಯಾವುದೇ ತಿದ್ದುಪಡಿ ಇದ್ದರು ಮಾಡಿಕೊಳ್ಳಬಹುದು.
ಸದ್ಯದಲ್ಲಿ 2.95 ಲಕ್ಷ ಅರ್ಜಿ ಸಲ್ಲಿಕೆಯಾಗಿದ್ದು, ಅಧಿಕಾರಿಗಳು ಪರಿಶೀಲನೆ ಮಾಡಿ ಹೊಸ ಕಾರ್ಡ್ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಪರಿಶೀಲನೆ ನಂತರ ಅರ್ಹರಿಗೆ ಹೊಸ ಕಾರ್ಡ್ ನೀಡಲಾಗುವುದು. ರಾಜ್ಯ ದ್ಯಂತ ತಾತ್ಕಾಲಿಕವಾಗಿ ಸದ್ಯಕ್ಕೆ ಸ್ಥಾಗಿತವಾಗಿರುವ ಬಿ ಪಿ ಎಲ್ ಮತ್ತು ಎ ಪಿ ಎಲ್ ಕಾರ್ಡ್ (Ration card ) ಅನ್ನು ಏಪ್ರಿಲ್ 01.2024 ರಿಂದ ವಿತರಿಸುವ ಕಾರ್ಯ ನಡೆಯಲಿದೆ.
ಈ ಲೇಖನದಲ್ಲಿ ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಹೊಸ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ, ಯಾವಾಗ, ಎಲ್ಲಿ, ಯಾವ ಯಾವ ದಾಖಲೆಗಳು ಬೇಕು, ಯಾರು ಅರ್ಜಿ ಸಲ್ಲಿಸಬಹುದು ಎಂಬ ಸಂಪೂರ್ಣ ಮಾಹಿತಿಯನ್ನು ವಿವರಿಸಲಾಗಿದೆ.
ರೇಷನ್ ಕಾರ್ಡ್ (RationCard )ಗೆ ಅರ್ಜಿ ಸಲ್ಲಿಸುವುದು ಹೇಗೆ?.
ರೇಷನ್ ಕಾರ್ಡ್ ಗೆ 01 ಏಪ್ರಿಲ್ 2024 ರಿಂದ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಹೊಸ ಕಾರ್ಡ್ ಪಡೆಯಲು ಕಾಯುತ್ತಿರುವವರಿಗೆ ಇದು ಒಂದು ಸಿಹಿ ಸುದ್ದಿಯಾಗಿದೆ.ಈ ಕಾರ್ಡ್ ಒಂದು ಬಹು ಮುಖ್ಯವಾದ ದಾಖಲೆಯಾಗಿದೆ. ಸರ್ಕಾರದಿಂದ ಸಿಗುವ ಅನೇಕ ಸೌಲಭ್ಯ ಪಡೆಯಲು ಈ ಕಾರ್ಡ್ (ಪಡಿತರ ಚೀಟಿ ) ಕಡ್ಡಾಯವಾಗಿ ಬೇಕು.
ಈ ಕಾರ್ಡ್ ಗೆ ಅರ್ಜಿಗಳನ್ನು ಸಲ್ಲಿಸುವವರು 01 ಏಪ್ರಿಲ್ 2024 ರಿಂದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಯ ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು. ಜೊತೆಗೆ ಸೇವಾ ಸಿಂಧೂ ಕೇಂದ್ರ, ಕರ್ನಾಟಕ ಒನ್, ಬೆಂಗಳೂರು ಒನ್, ಬಪೂಜಿ ಸೇವಾ ಕೇಂದ್ರ ಹಾಗೂ ನಾಡ ಕಚೇರಿಗಳ್ಳಲ್ಲಿ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗುವುದು.
ಹೆಚ್ಚಿನ ಮಾಹಿತಿಯನ್ನು ಪಡೆಯಲು ಕರ್ನಾಟಕ ಸರ್ಕಾರ ದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. ವೆಬ್ಸೈಟ್ ವಿಳಾಸ ಹೀಗಿದೆ https://ahara.kar.nic. in
ಹೊಸ ರೇಷನ್ ಕಾರ್ಡ್ (Ration Card)ಗೆ ಅರ್ಜಿಗಳನ್ನು ಸಲ್ಲಿಸಲು ಯಾವ ದಾಖಲೆಗಳು ಬೇಕು.
ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯಿಂದ ಈ ಕಾರ್ಡ್ ಪಡೆದುಕೊಳ್ಳಲು ಕೆಲವು ದಾಖಲೆಗಳು ಬೇಕು. ಹೊಸ ರೇಷನ್ ಕಾರ್ಡ್ ಗೆ ಅರ್ಜಿಗಳನ್ನು ಸಲ್ಲಿಸಲು ಮತ್ತು ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಈ ಕೆಳಗೆ ತಿಳಿಸಿರುವ ದಾಖಲೆಗಳು ಕಡ್ಡಾಯವಾಗಿ ಬೇಕು.
ಈ ಕಾರ್ಡ್ (ration card )ಅನ್ನು ಮೂರು ವಿಧವಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ ಎ ಪಿ ಎಲ್, ಬಿ ಪಿ ಎಲ್ ಮತ್ತು ಅಂಥತ್ಯೋದಯ ಎಂಬುದಾಗಿ ವಿಂಗಡಿಸಲಾಗಿದೆ. ಇವುಗಳ್ಳನ್ನು ಪಡೆಯಲು ಕೆಲವು ದಾಖಲೆ ಗಳು ಬೇಕು.
ಹೊಸ ಕಾರ್ಡ್ ಪಡೆಯಲು ಈ ದಾಖಲೆಗಳು ಬೇಕು. ಆಧಾರ್ ಕಾರ್ಡ್, ಚುನಾವಣೆ ಗುರುತಿನ ಚೀಟಿ, ವಾಸಸ್ಥಳ ಧೃಡೀಕರಣ, ಮೊಬೈಲ್ ಸಂಖ್ಯೆ, ಆದಾಯ ಮತ್ತು ಜಾತಿ ದೃಡೀಕರಣ ಪತ್ರ ಬೇಕು.
ರೇಷನ್ ಕಾರ್ಡ್ ಹೊಸ ಎ ಪಿ ಎಲ್ (APL)ಕಾರ್ಡ್ ಪಡೆಯಲು ಬೇಕಾದ ದಾಖಲೆಗಳು.
ಹೊಸ ಎ ಪಿ ಎಲ್ ರೇಷನ್ ಕಾರ್ಡ್ ಪಡೆಯಲು ಆಧಾರ್ ಕಾರ್ಡ್, ಮೊಬೈಲ್ ನಂಬರ್, ವಾಸಸ್ಥಳ ದೃಡೀಕರಣ ಪತ್ರ ಕಡ್ಡಾಯವಾಗಿ ಬೇಕು. ಈ ಎಲ್ಲಾ ದಾಖಲೆ ಗಳನ್ನು ನೀಡಬೇಕು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಯಿಂದ ಹೊಸ ಎ ಪಿ ಎಲ್ ಕಾರ್ಡ್ ಪಡೆಯಲು ಈ ದಾಖಲೆಗಳು ಬೇಕು.
ಹೆಚ್ಚಿನ ಮಾಹಿತಿಯನ್ನು ಪಡೆಯಲು https://ahara.kar.nic.in/WebForms/Show_RationCard. ಗೆ ಭೇಟಿ ನೀಡಿ.
ಹೊಸ BPL (ಬಿ ಪಿ ಎಲ್ ) ರೇಷನ್ ಕಾರ್ಡ್ ಪಡೆಯಲು ಈ ದಾಖಲೆಗಳು ಬೇಕು.
ಕರ್ನಾಟಕ ಸರ್ಕಾರದಿಂದ ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿಗಳನ್ನು ಅಹ್ವಾನ ಮಾಡಿದ್ದು, ಅರ್ಜಿಗಳನ್ನು ಸಲ್ಲಿಸಲು ಕೆಲವು ದಾಖಲೆಗಳು ಬೇಕು. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯಿಂದ ಹೊಸ ಬಿ ಪಿ ಎಲ್ (BPL) ಕಾರ್ಡ್ ಪಡೆಯಲು ಈ ಕೆಳಗಿನ ದಾಖಲೆಗಳು ಕಡ್ಡಾಯವಾಗಿ ಸಲ್ಲಿಸಬೇಕು.
ಹೊಸ ಬಿ ಪಿ ಎಲ್ (BPL) ಕಾರ್ಡ್ (Rationcard) ಪಡೆಯಲು ಕೆಲವು ನಿಯಮಗಳು ಮತ್ತು ಕಂಡೀಷನ್ ಗಳನ್ನು ಕೇಳಲಾಗಿದೆ. ಯಾವ ದಾಖಲೆಗಳು ಮತ್ತು ನಿಯಮ ಇದೆ ಎಂಬುದನ್ನು ತಿಳಿದುಕೊಳ್ಳೋಣ.
ಹೊಸ ಬಿ ಪಿ ಎಲ್ (BPL) ಕಾರ್ಡ್ ಅರ್ಜಿಗಳನ್ನು ಸಲ್ಲಿಸಲು ಈ ದಾಖಲೆಗಳು ಬೇಕು
ಆಧಾರ್ ಕಾರ್ಡ್ : ಹೊಸ ಕಾರ್ಡ್ ಗೆ ಅರ್ಜಿಗಳನ್ನು ಸಲ್ಲಿಸಲು ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಬೇಕು. ಜೊತೆಗೆ ಆದಾಯ ಮತ್ತು ಜಾತಿ ದೃಡೀಕರಣ ಪತ್ರ ಕಡ್ಡಾಯವಾಗಿ ಬೇಕು. ಕುಟುಂಬದ ಎಲ್ಲಾ ಸದಸ್ಯರು ಒಟ್ಟಿಗೆ ಹೋಗಿ ಅರ್ಜಿಗಳನ್ನು ಸಲ್ಲಿಸಬೇಕು ಏಕೆಂದರೆ ಎಲ್ಲಾ ಸದಸ್ಯರ ಬಯೋಮೆಟ್ರಿಕ್ ನೀಡಬೇಕು. ಎಲ್ಲರ ಆಧಾರ್ ಕಾರ್ಡ್ ಗೆ ಮೊಬೈಲ್ ಲಿಂಕ್ ಆಗಿರೋದು ಕಡ್ಡಾಯ.
ಹೊಸ ಬಿ ಪಿ ಎಲ್ ರೇಷನ್ ಕಾರ್ಡ್ (BPL) ಪಡೆಯಲು ಷರತ್ತುಗಳು ಹೀಗಿವೆ.
ಹೊಸ ಬಿ ಪಿ ಎಲ್ ಕಾರ್ಡ್ ಪಡೆಯಲು ಕೆಲವು ಷರತ್ತುಗಳನ್ನು ನೀಡಲಾಗಿದೆ.
ಆದಾಯ 1.20 ಸಾವಿರ ದ ಮೇಲೆ ಇರಬಾರದು.
ಸರ್ಕಾರಿ ಹುದ್ದೆಯಲ್ಲಿ ಇರಬಾರದು.
ಮೂರು ಎಕ್ಕರೆ ಖಾತೆ ಜಮೀನು ಇರಬಾರದು.
ಒಟ್ಟಾರೆ ಯಾವುದೇ ಸರ್ಕಾರಿ ಹುದ್ದೆ ಮತ್ತು ಸರ್ಕಾರಿ ಸೌಲಭ್ಯ ಪಡೆಯದೇ ಇರುವವರು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಯಿಂದ ಬಿ ಪಿ ಎಲ್ BPL ಕಾರ್ಡ್ ಪಡೆಯಲು ಅರ್ಹತೆ ಹೊಂದಿರುತ್ತಾರೆ.
ತಿದ್ದುಪಡಿಗೂ ಅವಕಾಶ.
ಹೊಸ ಕಾರ್ಡ್ ನೀಡುವುದರ ಜೊತೆಗೆ ತಿದ್ದುಪಡಿಗೂ ಸಹ ಅವಕಾಶ ಕಲ್ಪಿಸಲಾಗಿದೆ. ಇದೇ ಏಪ್ರಿಲ್ 01 ರಿಂದ ತಿದ್ದುಪಡಿ ಕಾರ್ಯವು ನಡೆಯುತ್ತದೆ. ಈಗಾಗಲೇ ರೇಷನ್ ಕಾರ್ಡ್ ಹೊಂದಿರುವ ವವರು ಏನಾದರು ತಿದ್ದುಪಡಿ ಇದ್ದರೆ ಮಾಡಿಕೊಳ್ಳಬಹುದು.
ಅಂದರೆ ಮನೆಯ ಸದಸ್ಯರ ಹೆಸರು ಸೇರ್ಪಡೆ ಇದ್ದರೆ ಮಾಡಿಕೊಳ್ಳಬಹುದು. ಅವರ ಆಧಾರ್ ಕಾರ್ಡ್ ಬೇಕು ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಲಿಂಕ್ ಆಗಿರಬೇಕು. ಜೊತೆಗೆ ಬಯೋಮೆಟ್ರಿಕ್ ಸಹ ನೀಡಬೇಕು. ರೇಷನ್ ಕಾರ್ಡ್ ತಿದ್ದುಪಡಿ ಮತ್ತು ಹೊಸ ಕಾರ್ಡ್ ಪಡೆಯಲು ಕಾಯುತ್ತಿರುವವವರು ಆನ್ಲೈನ್ ಸೆಂಟರ್ ಗೆ ತೆರಳಿ ಅರ್ಜಿಯನ್ನು ಸಲ್ಲಿಸಬಹುದು.
ಈ ಕಾರ್ಡ್ಒಂದು ತುಂಬಾನೇ ಮುಖ್ಯ ದಾಖಲೆಯಾಗಿದೆ. ಸರ್ಕಾರದ ಯಾವುದೇ ಯೋಜನೆಯ ಸೌಲಭ್ಯ ಪಡೆಯಲು ಮತ್ತು ಒಂದು ಮಹತ್ವದ ಗುರುತಿನ ಚೀಟಿಯಾಗಿಯೂ ಸಹ ಈ Rationcard ಬೇಕು. ವಂದನೆಗಳು.