Tharak7star

ಯುವನಿಧಿ (Yuvanidhi) ಯೋಜನೆಗೆ ಹೇಗೆ ಅರ್ಜಿ ಸಲ್ಲಿಸುವುದು.ಸಂಪೂರ್ಣ ಮಾಹಿತಿ.

ಕರ್ನಾಟಕ ಸರ್ಕಾರ ನೀಡಿರುವ 5 ಗ್ಯಾರಂಟಿ ಯೋಜನೆಯಲ್ಲಿ “ಯುವನಿಧಿ (Yuvanidhi) ಯೋಜನೆ” ಯು ಒಂದಾಗಿದೆ. ಯುವನಿಧಿ ಯೋಜನೆ ಯ ಸಂಪೂರ್ಣ ಮಾಹಿತಿಯನ್ನು ಈ ಲೇಖನ ದಲ್ಲಿ ತಿಳಿಯೋಣ. ಯುವನಿಧಿ ಯೋಜನೆಯ ಅರ್ಜಿ ಪ್ರಾರಂಭವಾಗಿದ್ದು ಯುವ ಜನತೆಗೆ ತುಂಬಾ ಸಂತೋಷಧಾಯಕ ವಿಷಯವಾಗಿದೆ. ಈ ಯೋಜನೆ ಗೆ ಅರ್ಜಿ ಸಲ್ಲಿಸುವುದು ಹೇಗೆ?, ಎಲ್ಲಿ ಅರ್ಜಿ ಸಲ್ಲಿಸಬಹುದು, ಯಾವ ಯಾವ ದಾಖಲೆಗಳು ಬೇಕು?. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವ ಯಾವ ಕ್ರಮಗಳನ್ನು ಅನುಸರಿಸಬೇಕು ಎಂಬ ಕುರಿತು ಸರಿಯಾದ ಮಾಹಿತಿಯನ್ನು ನೋಡೋಣ.

ಯುವನಿಧಿ (Yuvanidhi ) ಯೋಜನೆ ಎಂದರೆ ಏನು?.

ಯುವನಿಧಿ ಯೋಜನೆ ಯ ಬಗ್ಗೆ ತಿಳಿಯೋಣ. ಕರ್ನಾಟಕ ಕಾಂಗ್ರೆಸ್ ಸರ್ಕಾರ ದ 5 ಗ್ಯಾರಂಟಿ ಯೋಜನೆಯ್ಲಲಿ ಈ ಯೋಜನೆಯು ಒಂದು. ಯುವನಿಧಿ ಯೋಜನೆ ಎಂದರೆ ರಾಜ್ಯದಲ್ಲಿರುವ ನಿರುದ್ಯೋಗಿ ಯುವ ಜನತೆಗೆ ನಿರುದ್ಯೋಗ ಭತ್ಯೆ ನೀಡುವ ಯೋಜನೆಯಾಗಿದೆ. ರಾಜ್ಯದಲ್ಲಿ ಪದವಿ ಹಾಗೂ ಡಿಪ್ಲೋಮ ಪದವೀಧರರಿಗೆ ಉದ್ಯೋಗ ಸಿಗುವ ವರೆಗೆ ಸರ್ಕಾರದಿಂದ ನಿರುದ್ಯೋಗಭತ್ಯೆ ನೀಡಲಾಗುವುದು.

ಕರ್ನಾಟಕ ಕಾಂಗ್ರೆಸ್ ಸರ್ಕಾರವು ರಾಜ್ಯದ ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಆರ್ಥಿಕ ನೆರವು ನೀಡಲು ಯುವನಿಧಿ ಯೋಜನೆಯನ್ನು ಜಾರಿಗೆ ತಂದಿದೆ. ಅವರ ಹಣಕಾಸಿನ ನೆರವಿಗಾಗಿ, ಬೇರೆಯವರ ಮೇಲೆ ಅವಲಂಬನೆ ಹೊಂಡುವುದನ್ನು ತಪ್ಪಿಸಲು ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ.

ರಾಜ್ಯ ಸರ್ಕಾರವು ಪ್ರಾರಂಭಿಸಿರುವ ಯುವನಿಧಿ ಯೋಜನೆ ಪದವಿ ಹಾಗೂ ಡಿಪ್ಲೋಮ ನಿರುದ್ಯೋಗಿಗಳಿಗೆ ಆರ್ಥಿಕ ನೆರವು ನೀಡಿದಂತಾಗಿದೆ. ಉದ್ಯೋಗ ಸಿಗುವ ವರೆಗೆ ಯುವ ನಿರುದ್ಯೋಗಿ ಗಳಿಗೆ ಹಣಕಾಸಿನ ನೆರವು ನೀಡಿದಂತಾಗಿದೆ.

ಈ ಯೋಜನೆಯಲ್ಲಿ 2022-23 ರಲ್ಲಿ ತೇರ್ಗಡೆಯಾದ ಪದವೀಧರ ನಿರುದ್ಯೋಗ ಯುವ ಜನತೆಗೆ ರೂ.3000 ಹಾಗೂ ಡಿಪ್ಲೋಮ ಪಾಸಾದ ಯುವ ಜನರಿಗೆ ರೂ.1500 ರಂತೆ ನಿರುದ್ಯೋಗ ಭತ್ಯೆ ನೀಡಲಾಗುವುದು ಎಂದು ಕರ್ನಾಟಕ ಸರ್ಕಾರ ದ ಅಧಿಸೂಚನೆ ಯಲ್ಲಿ ತಿಳಿಸಲಾಗಿದೆ.

ಯುವನಿಧಿ (Yuvanidhi) ಯೋಜನೆ ಗೆ ಯಾರು ಅರ್ಜಿ ಸಲ್ಲಿಸಬಹುದು.

ಕಾಂಗ್ರೆಸ್ ಸರ್ಕಾರ ದ ಯುವನಿಧಿ (Yuvanidhi ) ಯೋಜನೆಗೆ 2022-23 ರಲ್ಲಿ ಪದವಿ ಹಾಗೂ ಡಿಪ್ಲೋಮ ತೇರ್ಗದೆಯಾದ ಯುವ ಜನರು ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿಗಳನ್ನು ಸಲ್ಲಿಸುವಾಗ ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ಸರಿಯಾದ ಕ್ರಮ ಅನುಸರಿಸದೆ ತಪ್ಪು ಮಾಹಿತಿಯನ್ನು ನೀಡಿ, ಸರ್ಕಾರಕ್ಕೆ ವಂಚಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು.

ಯುವನಿಧಿ (Yuvanidhi ಯೋಜನೆ ಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು.

ಕರ್ನಾಟಕ ಕಾಂಗ್ರೆಸ್ ಸರ್ಕಾರ ಘೋಷಿಸಿದ yuvanidhi (ಯುವನಿಧಿ ) ಯೋಜನೆ ಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು ಈ ಕೆಳಗೆ ತಿಳಿಸಲಾಗಿದೆ.

ಈ ಯೋಜನೆ ಗೆ ಅರ್ಜಿ ಸಲ್ಲಿವ ಅಭ್ಯರ್ಥಿಗಳು ಪದವಿ ಅಥವಾ ಡಿಪ್ಲೋಮ ಮುಗಿಸಿ ಕನಿಷ್ಠ 6 ತಿಂಗಳು ಕಳೆದಿರಾಬೇಕು. ಅಂದರೆ ಪದವಿ ಅಥವಾ ಡಿಪ್ಲೋಮ ತೇರ್ಗಡೆಯಾಗಿ 6 ತಿಂಗಳು ಯಾವುದೇ ಉದ್ಯೋಗ ದೊರಕದೆ ಇರುವ ಯುವಜನರು ಅರ್ಜಿ ಸಲ್ಲಿಸಬಹುದು.

ಪದವಿ ಅಂಕಪಟ್ಟಿ

ಡಿಪ್ಲೋಮ ಅಂಕಪಟ್ಟಿ

ಆಧಾರ್ ಕಾರ್ಡ್

ಮೊಬೈಲ್ ಸಂಖ್ಯೆ

ರೇಷನ್ ಕಾರ್ಡ್.

ಯುವನಿಧಿ (Yuvanidhi ) ಯೋಜನೆ ಗೆ ಅರ್ಜಿ ಸಲ್ಲಿವ ವಿಧಾನ.

ಈ ಯೋಜನೆ ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಸೇವಾ ಸಿಂಧು ನಲ್ಲಿ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಸರ್ಕಾರ ನೀಡಿರುವ ಷರತ್ತು ಹಾಗೂ ನಿಬಂದನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇಲ್ಲದಿದ್ದರೆ, ತಪ್ಪು ಮಾಹಿತಿಯನ್ನು ನೀಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಆನ್ಲೈನ್ ಲಿಂಕ್ : https://sevasindhuservices.karnataka.gov.in

ಷರತ್ತು ಮತ್ತು ನಿಬಂದನೆಗಳು ಹೀಗಿವೆ.

  1. ಕನಿಷ್ಠ ತೇರ್ಗಡೆ ಯಾಗಿ 6 ತಿಂಗಳು ಯಾವುದೇ ಉದ್ಯೋಗ ಪಡೆದಿರಬಾರದು.
  2. ಈ ಯೋಜನೆ ಕೇವಲ 2 ವರ್ಷ ನೀಡಲಾಗುವುದು.
  3. ಭತ್ಯೆ ಯನ್ನು ನೇರವಾಗಿ ಬ್ಯಾಂಕ್ ಖಾತೆ ಗೆ ಜಮಾ ಮಾಡಲಾಗುವುದು.
  4. ನಿರುದ್ಯೋಗಿ ಎನ್ನುವ ಬಗ್ಗೆ ಸ್ವಯಂ ದೃಡೀಕರಣ ನೀಡಬೇಕು.
  5. ಉನ್ನತ ವ್ಯಾಸಂಗ ಮಾಡುತ್ತಿರುವವರು ಅರ್ಜಿ ಸಲ್ಲಿಸುವಂತಿಲ್ಲ.

HSRP ನಂಬರ್ ಪ್ಲೇಟ್ ಪಡೆಯುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು https://tharak7star.com/hsrp-ನಂಬರ್-ಪ್ಲೇಟ್-ಅಂದ್ರೆ-ಏನು-ಹ/

Leave a Reply

Your email address will not be published. Required fields are marked *