ಭಾರತೀಯ ರೈಲ್ವೆ ನೇಮಕಾತಿ 2024 ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಭಾರತೀಯ ರೈಲ್ವೆ ಇಲಾಖೆಯಿಂದ ವಿವಿಧ ಹುದ್ದೆಗಳ ಭರ್ತಿ ಗೆ ಅಧಿಸೂಚನೆ ಹೊರಡಿಸಲಾಗಿದೆ. ರೈಲ್ವೆ ಇಲಾಖೆಯಿಂದ ಭರ್ಜರಿ ನೇಮಕಾತಿ 9000 ಹುದ್ದೆಗಳ ಭರ್ತಿಗೆ ಅನುಮತಿ ದೊರಕಿದೆ. ಭಾರತೀಯ ರೈಲ್ವೆ ಇಲಾಖೆಯು ಕೆಲವು ವರ್ಷ ಗಳಿಂದ ಹಲವು ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದಾರೆ.
ರೈಲ್ವೆ ಇಲಾಖೆ ಯ ಸೇವೆ ಗೆ ಕಾಯುತಿರುವವರಿಗೆ ಇದು ಖುಷಿಯ ವಿಚಾರವಾಗಿದೆ. ರೈಲ್ವೆ ಇಲಾಖೆ 2024 ರಲ್ಲಿ ಅತೀ ಹೆಚ್ಚು ಹುದ್ದೆಗೆ ಅವಕಾಶ ಕಲ್ಪಿಸಿದೆ.ಈ ಲೇಖನದಲ್ಲಿ ಭಾರತೀಯ ರೈಲ್ವೆ ಇಲಾಖೆ ಹೊರಡಿಸಿದ ಅಧಿಸೂಚನೆ ಮತ್ತು ರೈಲ್ವೆ ಇಲಾಖೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ, ಯಾವ ಯಾವ ದಾಖಲೆಗಳು ಬೇಕು, ವಿದ್ಯಾರ್ಹತೆ, ವಯೋಮಿತಿ, ಶುಲ್ಕ, ಪ್ರಾರಂಭ ಮತ್ತು ಕೊನೆಯ ದಿನಾಂಕಗಳ ಬಗ್ಗೆ ವಿವರಿಸಲಾಗಿದೆ.
ಈ ಲೇಖನವನ್ನು ಪೂರ್ತಿಯಾಗಿ ಓದಿಕೊಂಡು ಎಲ್ಲಾ ಮಾಹಿತಿಯನ್ನು ಸರಿಯಾಗಿ ತಿಳಿದುಕೊಂಡು ನಂತರ ಭಾರತೀಯ ರೈಲ್ವೆ ಇಲಾಖೆ ಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.
ಭಾರತೀಯ ರೈಲ್ವೆ ನೇಮಕಾತಿ 2024.9000 ಹುದ್ದೆಗಳಿಗೆ ಅರ್ಜಿ ಅಹ್ವಾನ.2024.Indian Railway Requirtment 2024
ಭಾರತೀಯ ರೈಲ್ವೆ ಇಲಾಖೆಯು ಪ್ರತಿ ವರ್ಷದಂತೆ ಈ ವರ್ಷವು ಸುಮಾರು 9000 ಹುದ್ದೆಗಳ ಭರ್ತಿಗೆ ಅರ್ಜಿ ಅಹ್ವಾನ ಮಾಡಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸುಮಾರು ಒಂಬತ್ತು ಸಾವಿರ ಟೆಚ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಇದು ರೈಲ್ವೆ ಇಲಾಖೆಯಿಂದ 2024 ಕ್ಕೆ ಕರೆದ ಮೊದಲ ಅಧಿಸೂಚನೆಯಾಗಿದ್ದು ನಿರುದ್ಯೋಗಿ ಯುವಕರಲ್ಲಿ ಸಂತಸದ ವಾತಾವರಣ ಕಂಡುಬಂದಿದೆ.
ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಅರ್ಜಿಗಳನ್ನು ಸಲ್ಲಿಸುವುದು ಹೇಗೆ, ಅರ್ಜಿಗಳನ್ನು ಸಲ್ಲಿಸುವುದು ಯಾವಾಗ, ಯಾವ ಯಾವ ದಾಖಲೆಗಳು ಬೇಕು, ಹುದ್ದೆಗೆ ಯಾವ ವಿದ್ಯಾರ್ಹತೆ ಬೇಕು, ಎಷ್ಟು ವರ್ಷದವರು ಅರ್ಜಿಗಳನ್ನು ಸಲ್ಲಿಸಬೇಕು, ವಯೋಮಿತಿ ಹೇಗಿದೆ, ಕಡ್ಡಾಯವಾಗಿ ಯಾವ ಯಾವ ದಾಖಲೆಗಳು ಬೇಕು ಎಂಬ ಪೂರ್ಣ ಮಾಹಿತಿಯನ್ನು ವಿವರಿಸಲಾಗಿದೆ.
ಭಾರತೀಯ ರೈಲ್ವೆ ನೇಮಕಾತಿ 2024. ಹುದ್ದೆಯ ವಿವರ ಮತ್ತು ವಿದ್ಯಾರ್ಹತೆ.Indian Railway Requirtment 2024
ಭಾರತೀಯ ರೈಲ್ವೆ ಇಲಾಖೆಯು 2024 ರ ಸಾಲಿನಲ್ಲಿ ಸುಮಾರು ಒಂಬತ್ತು ಸಾವಿರ ಟೆಚ್ನಿಷಿಯನ್ ಹುದ್ದೆಗೆ ಅರ್ಜಿಗಳನ್ನು ಅಹ್ವಾನ ಮಾಡಿದ್ದು, ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳು ಟೆಚ್ನಿಷಿಯನ್ ಹುದ್ದೆಗೆ ಮಾತ್ರ ಅರ್ಜಿಗಳನ್ನು ಸಲ್ಲಿಸಬಹುದು.
ರೈಲ್ವೆ ಇಲಾಖೆಯ ಎಲ್ಲಾ ಹುದ್ದೆಗಳು ಟೆಚ್ನಿಷಿಯನ್ ಹುದ್ದೆಯಾಗಿರುತ್ತವೆ. ಎಸ್ ಎಸ್ ಎಲ್ ಸಿ ಮತ್ತು ಐ ಟಿ ಐ ವಿದ್ಯಾರ್ಹತೆ ಹೊಂದಿದಿರುವ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದು. ಡಿಪ್ಲೋಮ ವಿದ್ಯಾರ್ಹತೆ ಹೊಂದಿರುವವರು ಅಂದರೆ ಐ ಟಿ ಐ ಮತ್ತು ಡಿಪ್ಲೋಮ ದಲ್ಲಿ ಟೆಚ್ನಿಷಿಯನ್ ಗೆ ಸಂಬಂಧಿಸಿದ ವಿಷಯದಲ್ಲಿ ತೇರ್ಗಡೆ ಹೊಂದಿರಬೇಕು.
ಡಿಪ್ಲೋಮ ಇನ್ ಇಂಜಿನಿಯರಿಂಗ್ ಮತ್ತು ಯಾವುದೇ ತಾಂತ್ರಿಕ ವಿಷಯದಲ್ಲಿ ಪದವಿ ಪಡೆದವರು ರೈಲ್ವೆ ಇಲಾಖೆ ಯ ಟೆಚ್ನಿಷಿಯನ್ ಹುದ್ದೆಗೆ ಅರ್ಜಿಗಳನ್ನು ಸಲ್ಲಿಸಲು ಅರ್ಹತೆ ಹೊಂದಿರುತ್ತಾರೆ.
ಭಾರತೀಯ ರೈಲ್ವೆ ಇಲಾಖೆ ಹುದ್ದೆಗೆ ಅರ್ಜಿ ಶುಲ್ಕ ಎಷ್ಟು?, ವಯೋಮಿತಿ ಮತ್ತು ವೇತನ ಎಷ್ಟು.
ಭಾರತೀಯ ರೈಲ್ವೆ ಇಲಾಖೆ ಯ ಟೆಚ್ನಿಷಿಯನ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಷ್ಟು ವಯೋಮಿತಿ ಹೊಂದಿರಬೇಕು, ಅರ್ಜಿ ಶುಲ್ಕ ಹಾಗೂ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಎಷ್ಟು ವೇತನ ಸಿಗಲಿದೆ ಎಂಬ ಎಲ್ಲಾ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.
ರೈಲ್ವೆ ಇಲಾಖೆ ಯ ಟೆಚ್ನಿಷಿಯನ್ ಹುದ್ದೆಗೆ ವಯೋಮಿತಿ 18 ವರ್ಷದಿಂದ 36 ವರ್ಷ ದ ಒಳಗೆ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. 18 ವರ್ಷಕ್ಕಿಂತ ಕಡಿಮೆ ಮತ್ತು 36 ವರ್ಷಕ್ಕಿಂತ ಮೇಲ್ಪಟ್ಟವರು ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುವದಿಲ್ಲ.
ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಎಷ್ಟು ಅರ್ಜಿ ಶುಲ್ಕ ನೀಡಬೇಕು ಮತ್ತು ವೇತನ ಎಷ್ಟು ಎಂಬ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.
ರೈಲ್ವೆ ಇಲಾಖೆಯ ಟೆಚ್ನಿಷಿಯನ್ ಹುದ್ದೆಗೆ ಅರ್ಜಿ ಶುಲ್ಕ.
ಜನರಲ್ /ಓ. ಬಿ. ಸಿ / ಇ. ಡಬ್ಲ್ಯೂ. ಎಸ್ ( GENERAL, OBC, EWS ) ಅಭ್ಯರ್ಥಿಗಳು ರೂ.500. ಹಾಗೂ ಎಸ್ ಸಿ / ಎಸ್ ಟಿ ಮತ್ತು ಮಹಿಳಾ ಅಭ್ಯರ್ಥಿಗಳು ರೂ.250 ಶುಲ್ಕ ಭರಿಸಬೇಕು. ಶುಲ್ಕವನ್ನು ಆನ್ಲೈನ್ ನಲ್ಲಿ ಪಾವತಿಸಬೇಕು.
ರೈಲ್ವೆ ಇಲಾಖೆಯ ಟೆಚ್ನಿಷಿಯನ್ ಹುದ್ದೆಗೆ ಎಷ್ಟು ವೇತನವನ್ನು ನೀಡಲಾಗುವುದು ಎಂಬ ಮಾಹಿತಿ ಹೀಗಿದೆ.
ಟೆಚ್ನಿಷಿಯನ್ ಗ್ರೇಡ್ 1 ಹುದ್ದೆಗೆ ರೂ.29.200. ಮತ್ತು ಟೆಚ್ನಿಷಿಯನ್ ಗ್ರೇಡ್ 2 ಹುದ್ದೆಗೆ ರೂ.19. 200 ವೇತನವನ್ನು ನೀಡಲಾಗುವುದು.
Indian Railway Requirtment 2024.ಭಾರತೀಯ ರೈಲ್ವೆ ಇಲಾಖೆ ಯ ಹುದ್ದೆಗೆ ಅರ್ಜಿ ಸಲ್ಲಿಸುವುದು ಹೇಗೆ?.
ಭಾರತೀಯ ರೈಲ್ವೆ ಇಲಾಖೆ ಯು ಅಧಿಸೂಚನೆ ಹೋರಾಡಿಸಿರುವ ಟೆಚ್ನಿಷಿಯನ್ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ರೈಲ್ವೆ ಇಲಾಖೆಯ ಅಧಿಕೃತ ವೆಬ್ಸೈಟ್ ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ. ನಂತರ ಅರ್ಜಿಯನ್ನು ಸರಿಯಾದ ಕ್ರಮದಲ್ಲಿ ಆನ್ಲೈನ್ ಮೂಲಕ ಸಲ್ಲಿಸಿ.
ಭಾರತೀಯ ರೈಲ್ವೆ ಇಲಾಖೆ ಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ರೈಲ್ವೆ ಇಲಾಖೆಯ ಅಧಿಕೃತ ವೆಬ್ಸೈಟ್ ವಿಳಾಸ ಹೀಗಿದೆ.https://indianrailway.gov.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸುವ ಮೊದಲು ಹುದ್ದೆಯ ಬಗೆಗಿನ ಎಲ್ಲಾ ಮಾಹಿತಿಯನ್ನು ಸರಿಯಾಗಿ ಓದಿಕೊಳ್ಳಿ. ನಂತರ ಅರ್ಜಿಯನ್ನು ಸರಿಯಾದ ಕ್ರಮದಲ್ಲಿ ಸಲ್ಲಿಸಬೇಕು.
ಭಾರತೀಯ ರೈಲ್ವೆ ಇಲಾಖೆ ಹುದ್ದೆಗೆ ಅರ್ಜಿ ಸಲ್ಲಿಸುವ ದಿನಾಂಕ.
ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 9000 ಟೆಚ್ನಿಷಿಯನ್ ಹುದ್ದೆಗೆ ಅರ್ಜಿ ಅಹ್ವಾಸಿದ್ದು ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿಗಳನ್ನು ರೈಲ್ವೆ ಇಲಾಖೆಯ ಅಧಿಕೃತ ವೆಬ್ಸೈಟ್ ಮೂಲಕ ಮಾತ್ರ ಸಲ್ಲಿಸಬೇಕು.
ಅರ್ಜಿಗಳನ್ನು ಸಲ್ಲಿಕೆ ಪ್ರಾರಂಭ ದಿನಾಂಕ : 09/03/2024.
ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ : 08/04/2024.
ಅಭ್ಯರ್ಥಿಗಳು ಆನ್ಲೈನ್ ಮೂಲಕ ಸರಿಯಾದ ಕ್ರಮದಲ್ಲಿ ಅರ್ಜಿಗಳನ್ನು ಸಲ್ಲಿಸಬೇಕು. ಭಾರತೀಯ ರೈಲ್ವೆ ಇಲಾಖೆ ಅಹ್ವಾನ ಮಾಡಿರುವ ಟೆಚ್ನಿಷಿಯನ್ ಹುದ್ದೆಗೆ ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿದ ನಂತರ ಒಮ್ಮೆ ಅರ್ಜಿಯನ್ನು ಸರಿಯಾಗಿ ಪರಿಶೀಲನೆ ಮಾಡಿ ಕೊನೆಯದಾಗಿ ಶುಭಾಶಯಗಳು ಸಬ್ಮೀ ಟ್ ಮಾಡಿ.
ಕೊನೆಯ ದಿನಾಂಕದ ವರೆಗೆ ಕಾಯುವುದರ ಬದಲು ಮುಂಚಿತವಾಗಿ ಅರ್ಜಿ ಸಲ್ಲಿಸಿ.
ರೈಲ್ವೆ ಇಲಾಖೆಯ ಹುದ್ದೆಯ ಆಯ್ಕೆ ವಿಧಾನ.
ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಸುಮಾರು ಒಂಬತ್ತು ಸಾವಿರ ಟೆಚ್ನಿಷಿಯನ್ ಹುದ್ದೆ ಭರ್ತಿಗೆ ಅರ್ಜಿಗಳನ್ನು ಅಹ್ವಾನಿಸಿದ್ದು, ಅರ್ಜಿ ಸಲ್ಲಿಸಿದ ನಂತರ ರೈಲ್ವೆ ಇಲಾಖೆಯಿಂದ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುವುದು. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಹಲವು ಹಂತಗಳಲ್ಲಿ ನಡೆಯಲಿದೆ.
- ಕಂಪ್ಯೂಟರ್ ಪರೀಕ್ಷೆ.
- PET
- PST
- ವೈದ್ಯಕೀಯ ಪರೀಕ್ಷೆ.
- ದಾಖಲೆಗಳ ಪರಿಶೀಲನೆ.