ಪ್ರಧಾನಮಂತ್ರಿ ಕಿಸಾನ್ ಯೋಜನೆ (pm-kissan yojane ) ಯು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ನಮ್ಮ ದೇಶದ ರೈತರ ಹಿತದೃಷ್ಟಿಯಿಂದ ಈ ಯೋಜನೆ ಜಾರಿಗೆ ಬಂದಿದೆ. ಈ ಯೋಜನೆಯು ದೇಶದ ರೈತರ ಸಬಲೀಕರಣಕ್ಕೆ ಬುನಾಧಿಯಾಗಿದೆ.
ಭಾರತ ಸರ್ಕಾರ ಪ್ರಾರಂಭ ಮಾಡಿರುವ ಈ ಯೋಜನೆ ರೈತರ ಅನುಕೂಲಕ್ಕೆ ಸಹಾಯವಾಗಿದೆ. ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ವಾರ್ಷಿಕ 6000 ರೂಪಾಯಿ ಸಹಾಯಧನ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ.
ರೈತರಿಗೆ ಆರ್ಥಿಕ ಸಹಾಯ ಮಾಡಲು ಕೇಂದ್ರ ಸರ್ಕಾರ ತಂದಿರುವ ಒಂದು ಮಹತ್ವದ ಯೋಜನೆಯಾಗಿದೆ. ಇದರಿಂದ ರೈತರಿಗೆ ಬೆಳೆ ಬೆಳೆಯಲು ಹಣಕಾಸಿನ ನೆರವು ನೀಡಿದಂತಾಗಿದೆ. ಪ್ರತಿ ನಾಲ್ಕು ತಿಂಗಳಿಗೊಮ್ಮೆ ಈ ಯೋಜನೆ ಯ ಕಂತಿನ ಹಣ ನೇರವಾಗಿ ರೈತರ ಖಾತೆಗೆ ಜಮಾ ಆಗುತ್ತದೆ.
ಪ್ರಧಾನಮಂತ್ರಿ ಕಿಸಾನ್ ಯೋಜನೆ (pm- kisan yojane) ಯು ರೈತರ ಕಲ್ಯಾಣ ಯೋಜನೆಯಾಗಿದೆ. ದೇಶದ ಎಲ್ಲಾ ಭೂಹಿಡುವಳಿ ಕುಟುಂಬಗಳಿಗೆ ಕೃಷಿ ಚಟುವಟಿಕೆಗೆ ನೆರವು ನೀಡಲು ಜಾರಿಗೆ ತಂದ ಒಂದು ಮಹತ್ವದ ಯೋಜನೆ.
ಈ ಲೇಖನದಲ್ಲಿ ನಾವು ಪಿಎಂ ಕಿಸಾನ್ ಯೋಜನೆ ಯ ಬಗೆಗಿನ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ. ಅಂದರೆ ಪ್ರಧಾನಮಂತ್ರಿ ಕಿಸಾನ್ ಯೋಜನೆ ಎಂದರೇನು?, ಯಾರು ಅರ್ಜಿ ಸಲ್ಲಿಸಬಹುದು, ಈ ಯೋಜನೆಯ ಉದ್ದೇಶ, ಎಲ್ಲಿ ಅರ್ಜಿ ಸಲ್ಲಿಸಬೇಕು, ಯಾವ ಯಾವ ದಾಖಲೆಗಳು ಬೇಕು ಎಂಬ ಮಾಹಿತಿಯನ್ನು ಸಂಪೂರ್ಣವಾಗಿ ವಿವರಿಸಲಾಗಿದೆ. ಈ ಲೇಖನವನ್ನು ಪೂರ್ತಿಯಾಗಿ ಓದಿ ಯೋಜನೆಯ ಲಾಭವನ್ನು ಪಡೆದುಕೊಳ್ಳಿ.
ಪ್ರಧಾನಮಂತ್ರಿ ಕಿಸಾನ್ ಯೋಜನೆ ಎಂದರೇನು?.
ಪ್ರಧಾನಮಂತ್ರಿ ಕಿಸಾನ್ ಯೋಜನೆ (pradhanamantri kisan yojane) ಭಾರತ ಸರ್ಕಾರ ಸಣ್ಣ ಮತ್ತು ಅತೀ ಸಣ್ಣ ರೈತರ ಕೃಷಿ ಚಟುವಟಿಕೆಗೆ ಅನುಕೂಲಕ್ಕೆ ಆರ್ಥಿಕ ಸಹಾಯ ನೀಡುವ ಒಂದು ಯೋಜನೆ. ಅಂದರೆ ರೈತರಿಗೆ ವಾರ್ಷಿಕವಾಗಿ 6000 ರೂಪಾಯಿ 3 ಕಂತುಗಳಲ್ಲಿ ನೀಡಲಾಗುವುದು.
ಪ್ರಧಾನಮಂತ್ರಿ ಕಿಸಾನ್ ಯೋಜನೆ (PM-Kisan ) ದೇಶದ ಅನ್ನಧಾತರ ನೆರವಿಗೆ ಸಹಾಯ ಮಾಡುವ ಸಲುವಾಗಿ ಬಂದ ಮಹತ್ವದ ಯೋಜನೆ. ಈ ಯೋಜನೆ 2018 ರ ಡಿಸೆಂಬರ್ ರಿಂದ ಆರಂಭವಾಗಿದ್ದು, ರೈತರ ಕುಟುಂಬಗಳಿಗೆ ಆರ್ಥಿಕ ಸಹಾಯ ನೀಡಿದೆ.
ಈ ಯೋಜನೆ ಯ ಹಣ ನೇರವಾಗಿ ರೈತರ ಖಾತೆಗೆ ಜಮಾ ಮಾಡಲಾಗುತ್ತದೆ. ಆಯ್ಕೆಯಾದ ಫಲಾನುಭವಿಗಳಿಗೆ ನೇರವಾಗಿ ಅವರ ಖಾತೆಗೆ ಜಮಾ ಮಾಡಲಾಗುವುದು
ಪ್ರಧಾನಮಂತ್ರಿ ಕಿಸಾನ್ ಯೋಜನೆ (Pm-kissan ) ಗೆ ಅರ್ಜಿ ಸಲ್ಲಿಸುವುದು ಹೇಗೆ.?
ಭಾರತ ಸರ್ಕಾರ ಜಾರಿಗೆ ತಂದ ಕಿಸಾನ್ ನಿಧಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಎಲ್ಲಿ ಅರ್ಜಿಗಳನ್ನು ಸಲ್ಲಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ. ನಿಮ್ಮ ತಾಲೂಕು ವ್ಯಾಪ್ತಿಯ ಕಂದಾಯ ಅಧಿಕಾರಿಗಳು ಅಥವಾ ಪಿಎಂ ಕಿಸಾನ್ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಿ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.ಕೇಂದ್ರ ಸರ್ಕಾರದ https://pmkisan.gov.in. ಗೆ ಭೇಟಿ ನೀಡಿ ಅರ್ಜಿಗಳನ್ನು ಸಲ್ಲಿಸಬಹುದು.ಭೇಟಿ ನೀಡಿದ ನಂತರ ವೆಬ್ಸೈಟ್ ನಲ್ಲಿ ಹೊಸ ಫಾರ್ಮರ್ ರಿಜಿಸ್ಟ್ರೇಷನ್ ಫಾರಂ (New Former Registration Form) ಭರ್ತಿ ಮಾಡಿ ನಿಮ್ಮ ಎಲ್ಲಾ ವಿವರಗಳನ್ನು ನೀಡಿ ನೋಂದಾಯಿಸಿಕೊಳ್ಳಬೇಕು.
ಹಾಗೆಯೇ ಕಾಮನ್ ಸರ್ವಿಸ್ ಸೆಂಟರ್ (CSC ) ಕೇಂದ್ರದಲ್ಲಿ ಸಹ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.ರೈತರೂ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಿ.
ಪ್ರಧಾನಮಂತ್ರಿ ಕಿಸಾನ್ ಯೋಜನೆಗೆ (Pm-kisan) ಬೇಕಾಗಿರುವ ದಾಖಲೆಗಳು.
ಪ್ರಧಾನಮಂತ್ರಿ ಕಿಸಾನ್ ಯೋಜನೆ ಗೆ ಅರ್ಜಿಗಳನ್ನು ಸಲ್ಲಿಸಲು ಈ ದಾಖಲೆಗಳು ಕಡ್ಡಾಯವಾಗಿ ಬೇಕು.
ಆಧಾರ್ ಕಾರ್ಡ್
RTC ಅಂದರೆ ಭೂಮಿಯ ದಾಖಲೆ.
ಪೌರಾತ್ವ ದಾಖಲೆ
ವಾಸಸ್ಥಳ ದೃಡೀಕರಣ ಪತ್ರ.
ಬ್ಯಾಂಕ್ ಖಾತೆಯ ವಿವರ
ಮೊಬೈಲ್ ಸಂಖ್ಯೆ.
ಈ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗೆ ತೆರಳಿ ಅರ್ಜಿಗಳನ್ನು ಸಲ್ಲಿಸಿ. ಈ ಸೌಲಭ್ಯ ಪಡೆಯಲು ಕಡ್ಡಾಯವಾಗಿ ನಿಮ್ಮ ಬ್ಯಾಂಕ್ ಖಾತೆ ಗೆ ಆಧಾರ್ ಲಿಂಕ್ ಆಗಿರಬೇಕು ಮತ್ತು ಮೊಬೈಲ್ ನಂಬರ್ ಲಿಂಕ್ ಆಗಿರಬೇಕು.
ಪ್ರಧಾನಮಂತ್ರಿ ಕಿಸಾನ್ ಯೋಜನೆ ಯ ಉದ್ದೇಶ.
ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಪ್ರಮುಖ ಉದ್ದೇಶ ನಮ್ಮ ದೇಶದ ರೈತರ ಕೃಷಿ ಚಟುವಟಿಕೆಗೆ ಆರ್ಥಿಕ ಸಹಾಯ ನೀಡುವುದು. ದೇಶದ ಅನ್ನಧಾತರ ನೆರವಿಗೆ ಹಣ ಸಹಾಯ ಮಾಡುವುದು. ರೈತರನ್ನು ಆರ್ಥಿಕ ಸಂಕಷ್ಟದಿಂದ ದೂರ ಮಾಡುವುದು.
ರೈತರಿಗೆ ಧನಸಹಾಯ ನೀಡುವುದು. ಪ್ರತಿ ವರ್ಷ 3 ಕಂತುಗಳಲ್ಲಿ ತಲಾ 2000 ದಂತೆ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾ ಮಾಡುವುದು. ಒಂದು ವರ್ಷಕ್ಕೆ 6000 ರೂಪಾಯಿ ಸಹಾಯ ಮಾಡುವುದು.
ನಮ್ಮ ದೇಶದ ರೈತರನ್ನು ಪ್ರೊಸ್ತಾಹಿಸುವುದು. ದೇಶದ ಅನ್ನ ನೀಡುವ ರೈತರ ಕುಟುಂಬಕ್ಕೆ ನೆರವು ನೀಡುವುದು.
ಈ ಯೋಜನೆಯು ಕೃಷಿ ಕ್ಷೇತ್ರದ ಮೇಲೆ ಒಲವು ಮತ್ತು ರೈತರ ಕಲ್ಯಾಣವನ್ನು ಬಯಸುವ ಒಂದು ಮಹತ್ವದ ಉದ್ದೇಶ ಹೊಂದಿದೆ. ಕೃಷಿ ಚಟುವಟಿಕೆಯನ್ನು ಪ್ರೋಸ್ತಾಹಿಸುವುದು. ಕೃಷಿ ಸಮುದಾಯದ ಆರ್ಥಿಕ ಹೊರೆ ಕಡಿಮೆ ಮಾಡುವುದು ಪ್ರಮುಖ ಉದ್ದೇಶವಾಗಿದೆ.
ದೇಶದ್ಯಂತ ಭೂಡುವಳೀಧರರ, ರೈತರ ಕುಟುಂಬಕ್ಕೆ ಆದಾಯದ ಬೆಂಬಲ ನೀಡುವುದು.ಒಟ್ಟಾರೆಯಾಗಿ ಕೃಷಿ ಚಟುವಟಿಕೆ ಯಲ್ಲಿ ತೋಡಾಗಿದ ರೈತರಿಗೆ ಆರ್ಥಿಕ ಸಹಾಯ ನೀಡುವುದು
ಪ್ರಧಾನಮಂತ್ರಿ ಕಿಸಾನ್ ಯೋಜನೆ (pm-kisan ) ಗೆ ಯಾರು ಅರ್ಹರು.
ಈ ಪಿಎಂ ಕಿಸಾನ್ ಯೋಜನೆಯ ಸೌಲಭ ಪಡೆಯಲು ಯಾರು ಅರ್ಹರು ಎಂಬುದನ್ನು ತಿಳಿಯೋಣ. ಪ್ರಧಾನಮಂತ್ರಿ ಕಿಸಾನ್ ಯೋಜನೆ ಯ ಸೌಲಭ್ಯ ಪಡೆಯಲು ಕೃಷಿ ಚಟುವಟಿಕೆಯಲ್ಲಿ ನಿರತರಾಗಿರುವ ರೈತರು ಅರ್ಹರು.
ಸಣ್ಣ ಮತ್ತು ಅತೀ ಸಣ್ಣ ರೈತರು ಈ ಯೋಜನೆಗೆ (Pm-kisan) ಅರ್ಹರು ಅಂದರೆ ಸಣ್ಣ ಪ್ರಮಾಣದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡವರು.
ಕೃಷಿ ಚಟುವಟಿಕೆಯಲ್ಲಿ ನಿರತರಾಗಿರುವ ರೈತರ ಕುಟುಂಬ ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಸೌಲಭ್ಯ ಪಡೆಯಲು ಅರ್ಹತೆ ಹೊಂದಿರುತ್ತಾರೆ.
ಭಾರತೀಯ ಪ್ರಜೆ ಆಗಿರಬೇಕು.
ಪ್ರಧಾನಮಂತ್ರಿ ಕಿಸಾನ್ ಯೋಜನೆ (pm-kisan) ಗೆ ಯಾರು ಅರ್ಜಿ ಸಲ್ಲಿಸಬಾರದು.
ಈ ಯೋಜನೆಗೆ ಈ ಕೆಳಗಿನವರು ಅರ್ಜಿಗಳನ್ನು ಸಲ್ಲಿಸಲು ಅರ್ಹತೆ ಹೊಂದಿರುವುದಿಲ್ಲ.
ಯಾವುದೇ ಸರ್ಕಾರಿ ಉದ್ಯೋಗದಲ್ಲಿ ಇರುವವರು ಈ ಯೋಜನೆಗೆ ಅರ್ಜಿಗಳನ್ನು ಸಲ್ಲಿಸಬಾರದು.
ಸ್ಥಳೀಯ ಸರ್ಕಾರಿ ಸೌಮ್ಯ ದ ಹುದ್ದೆ ಹೊಂದಿರುವವರು.
ಕೇಂದ್ರ ಮತ್ತು ರಾಜ್ಯದ ಮಾಜಿ ಸಚಿವರು.
ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರು.
ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಸದಸ್ಯರು.
ಆದಾಯ ತೆರಿಗೆ ಸಲ್ಲಿಸುವ ವ್ಯಕ್ತಿಗಳು.
ಸರ್ಕಾರಿ ಪಿಂಚಣಿ ಪಡೆಯುವವರು ಅಂದರೆ ತಿಂಗಳಿಗೆ 10.000 ರೂಪಾಯಿ ಗಿಂತ ಹೆಚ್ಚು ಪಡೆಯುವವರು.
ವೈದ್ಯರು, ವಕೀಲರು ಹಾಗೂ ಇತರೆ ಸರ್ಕಾರಿ ಹುದ್ದೆಯಲ್ಲಿ ಇರುವವರು. ಈ ಮೇಲಿನ ಎಲ್ಲಾ ಉದ್ಯೋಗದಲ್ಲಿ ಇರುವವರು ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹತೆ ಹೊಂದಿರುವುದಿಲ್ಲ.
ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಹಣ ಜಮಾ ಆಗಿರುವುದನ್ನು ಹೇಗೆ ಚೆಕ್ ಮಾಡುವ ವಿಧಾನ.
ಪ್ರಧಾನಮಂತ್ರಿ ಕಿಸಾನ್ ಯೋಜನೆ ಯ ಹಣ ಜಮಾ ಆಗಿರುವುದನ್ನು ಹೇಗೆ ತಿಳಿದುಕೊಳ್ಳಬಹುದು ಎಂಬುದನ್ನು ನೋಡೋಣ. ಅರ್ಜಿಗಳನ್ನು ಸಲ್ಲಿಸಿ, ಪರಿಶೀಲನೆ ಮಾಡಿದ ನಂತರ ಅರ್ಹ ಫಲಾನುಭವಿಗಳಿಗೆ ಕಂತು ಹೇಗೆ ಜಮಾ ಆಗುತ್ತದೆ ಎಂದರೆ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.
ಹಣ ಜಮಾ ಆಗಿರುವುದನ್ನು ತಿಳಿಯಲು ಅಧಿಕೃತ ವೆಬ್ಸೈಟ್ https://pmkisan.gov. in ಗೆ ಭೇಟಿ ನೀಡಿ ತಿಳಿದುಕೊಳ್ಳಿ. ಅಥವಾ ನಿಮ್ಮ ಬ್ಯಾಂಕ್ ಖಾತೆಯನ್ನು ಚೆಕ್ ಮಾಡಿ ತಿಳಿದುಕೊಳ್ಳಬಹುದು.
ದೇಶದ ರೈತ ಕುಟುಂಬದ ಆರ್ಥಿಕ ಸಹಾಯಕ್ಕಾಗಿ ತಂದಿರುವ ಈ ಯೋಜನೆ ಒಂದು ಮಹತ್ವದ ಯೋಜನೆಯಾಗಿದೆ. ಕೃಷಿ ಚಟುವಟಿಕೆ ಯಲ್ಲಿ ತೊಡಗಿದ ರೈತ ಕುಟುಂಬಕ್ಕೆ ಆಧಾರವಾಗಿದೆ. ಸರಿಯಾದ ಮಾಹಿತಿಯನ್ನು ನೀಡಿ ಈ ಯೋಜನೆಯ ಸೌಲಭ್ಯವನ್ನು ಪಡೆಯಿರಿ.