ಪ್ರಧಾನಮಂತ್ರಿ ಉಜ್ವಲ ಯೋಜನೆ PMUY ಕೇಂದ್ರ ಸರ್ಕಾರದ ಒಂದು ಯೋಜನೆ.ಈ ಯೋಜನೆಯಡಿಯಲ್ಲಿ ಸರ್ಕಾರ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಅಡಿಗೆ ಮಾಡಲು ಅನಿಲ ಸಂಪರ್ಕ ನೀಡುವ ಯೋಜನೆಯಾಗಿದೆ. ಇದನ್ನು ಭಾರತ ಸರ್ಕಾರ ಪೆಟ್ರೋಲಿಯುಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಸಹಯೋಗದಲ್ಲಿ ಜಾರಿಗೆ ತರಲಾಗಿದೆ.ಅಂದರೆ LPG ಗ್ಯಾಸ್ ನೀಡಲಾಗುತ್ತದೆ. ಈ ಸಂಪರ್ಕವನ್ನು ಉಚಿತವಾಗಿ ನೀಡಲಾಗುತ್ತದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈ ಯೋಜನೆಯನ್ನು 2026 ಮೇ 01 ರಂದು ಜಾರಿಗೆ ತಂದರು. ಪ್ರಾರಂಭದಲ್ಲಿ ಈ ಯೋಜನೆಯು ಐದು ಕೋಟಿ ಅನಿಲ ಸಂಪರ್ಕ ನೀಡುವ ಗುರಿಯನ್ನು ಹೊಂದಿತ್ತು. 2021 ರಲ್ಲಿ ಉಜ್ವಲ ಯೋಜನೆ 2.0 ಅನ್ನು ಜಾರಿಗೆ ತರಲಾಗಿದೆ.ಈ ಯೋಜನೆಯನ್ನು ಆರ್ಥಿಕ ವರ್ಷದಲ್ಲಿ ಒಂದು ಕೋಟಿ ಅನಿಲ ಸಂಪರ್ಕ ನೀಡುವ ಗುರಿಯನ್ನು ಹೊಂದಿದೆ.
ಈ ಲೇಖನದಲ್ಲಿ ನಾವು PMUY ಯೋಜನೆ ಎಂದರೇನು?, ಅರ್ಜಿ ಸಲ್ಲಿಸುವುದು ಹೇಗೆ?, ಅರ್ಹತೆ, ಯಾವ ಯಾವ ದಾಖಲೆಗಳು ಬೇಕು, ಎಲ್ಲಿ ಅರ್ಜಿ ಸಲ್ಲಿಸಬೇಕು, ಪ್ರಯೋಜನ ಏನು ಎಂಬುದರ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.
ಪ್ರಧಾನಮಂತ್ರಿ ಉಜ್ವಲ ಯೋಜನೆ ಗೆ ಅರ್ಜಿ ಸಲ್ಲಿಸೋದು ಹೇಗೆ?.
ಪ್ರಧಾನಮಂತ್ರಿ ಉಜ್ವಲ ಯೋಜನೆ ಯ ಲಾಭ ಪಡೆಯಲು ಅರ್ಜಿಗಳನ್ನು ಎಲ್ಲಿ ಸಲ್ಲಿಸಬೇಕು, ಹೇಗೆ ಸಲ್ಲಿಸಬೇಕು ಎಂಬುದನ್ನು ತಿಳಿಯೋಣ. ಕೇಂದ್ರ ಸರ್ಕಾರದ ಒಂದು ಮಹತ್ವದ ಯೋಜನೆ ಉಜ್ವಲ ಯೋಜನೆ. ಈ ಯೋಜನೆ ಪಡೆಯಲು ಅರ್ಜಿಗಳನ್ನು ನಿಮ್ಮ ಹತ್ತಿರದ LPG ಗ್ಯಾಸ್ ವಿತರಣಾ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅಥವಾ ಈ ಯೋಜನೆಯ ಅಧಿಕೃತ ವೆಬ್ಸೈಟ್ https://www.pmuy.gov.in ಗೆ ಭೇಟಿ ನೀಡಿ ಸಲ್ಲಿಸಬಹುದು.
ಈ ಯೋಜನೆಗೆ ಅರ್ಜಿಗಳನ್ನು ಸಲ್ಲಿಸಲು ಹೆಚ್ಚಿನ ದಾಖಲೆಗಳೇನು ಬೇಡ ಆಧಾರ್ ಕಾರ್ಡ್ ಮತ್ತು ಮೊಬೈಲ್ ನಂಬರ್ ಹಾಗೂ ವಿಳಾಸದ ಪುರಾವೆ ಸಾಕು. ಈ ಯೋಜನೆಗೆ ಅರ್ಜಿಗಳನ್ನು ಮಹಿಳೆಯರ ಹೆಸರಿನಲ್ಲಿ ಸಲ್ಲಿಸಬೇಕು. ಅವರ ಕುಟುಂಬದ ಸದಸ್ಯರು ಯಾವುದೇ ಅನಿಲ ಸಂಪರ್ಕ ಪಡೆದಿರಬಾರದು. BPL ರೇಷನ್ ಕಾರ್ಡ್ ಹೊಂದಿರಬೇಕು.
ಹೆಚ್ಚಿನ ಮಾಹಿತಿಯನ್ನು ಪಡೆಯಲು ಯೋಜನೆಯ ಅಧಿಕೃತ ವೆಬ್ಸೈಟ್ ಅಥವಾ ನಿಮ್ಮ ಹತ್ತಿರದ ಗ್ಯಾಸ್ ಆಫೀಸ್ ಗೆ ಭೇಟಿ ಮಾಡಬಹುದು.
ಪ್ರಧಾನಮಂತ್ರಿ ಉಜ್ವಲ ಯೋಜನೆ ಎಂದರೇನು?.
ಪ್ರಧಾನಮಂತ್ರಿ ಉಜ್ವಲ ಯೋಜನೆ ಎಂದರೆ ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ಉಚಿತವಾಗಿ ಅನಿಲ ಸಂಪರ್ಕ ನೀಡುವ ಯೋಜನೆಯಗಿದೆ. ಈ ಯೋಜನೆಯಡಿಯಲ್ಲಿ ಸುಮಾರು ಎಂಟು ಕೋಟಿ ಕುಟುಂಬಗಳಿಗೆ ಅನಿಲ ಸಂಪರ್ಕ ನೀಡುವ ಗುರಿಯನ್ನು ಹೊಂದಲಾಗಿದೆ.
ಉಚಿತವಾಗಿ LPG ಗ್ಯಾಸ್ ಸಿಲಿಂಡರ್ ಮತ್ತು ಸ್ಟವ್ ಸಹ ನೀಡುವುದು ಯೋಜನೆಯ ಪ್ರಮುಖ ಗುರಿಯಾಗಿದೆ.ಯಾವುದೇ ಹಣ ಪಡೆಯದೇ ಅನಿಲ ಸಂಪರ್ಕ ನೀಡುವ ಯೋಜನೆ ಇದಾಗಿದೆ.ಮೊದಲ ಸಂಪರ್ಕ ಪಡೆಯುವಾಗ ಉಚಿತವಾಗಿ ಸಿಲಿಂಡರ್, ಸ್ಟವ್, ಪಾಸ್ ಬುಕ್ ಎಲ್ಲವನ್ನು ನೀಡಲಾಗುತ್ತದೆ.ದೇಶದ ಎಲ್ಲಾ BPL ಕುಟುಂಬಕ್ಕೆ ಗ್ಯಾಸ್ ಕನೆಕ್ಷನ್ ನೀಡುವ ಗುರಿಯನ್ನು ಹೊಂದಲಾಗಿದೆ.
ಈ ಯೋಜನೆಯನ್ನು ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಯವರು 2016 ರಲ್ಲಿ ಸಮಾಜ ಕಲ್ಯಾಣ ಯೋಜನೆಯಾದ ಈ ಯೋಜನೆಯನ್ನು ಜಾರಿಗೆ ತಂದರು. ಈ ಯೋಜನೆಯು ಹೋಗೆ ಮುಕ್ತ ಗ್ರಾಮೀಣ ಭಾರತವನ್ನು ಸೃಷ್ಟಿಸುತ್ತದೆ.ವಿಶೇಷವಾಗಿ ಬಡತನ ರೇಖೆಗಿಂತ ಕೆಳಗಿನ ಜನರ ಅರೋಗ್ಯ ದೃಷ್ಟಿಯಿಂದ, ಅವರ ಅರೋಗ್ಯವನ್ನು ಗಮನದಲ್ಲಿ ಇಟ್ಟುಕೊಂಡು ಈ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ.
ವಾಯುಮಾಲಿನ್ಯ ಮತ್ತು ಅರಣ್ಯ ನಾಶ ಕಡಿಮೆ ಮಾಡುವ ಗುರಿಯನ್ನು ಈ ಯೋಜನೆ ಹೊಂದಿದೆ. ಮಹಿಳೆಯರ ಅರೋಗ್ಯ ಕಾಪಾಡಲು ಸಹಾಯವಾಗಿದೆ. ಮೊದಲ ಹಂತದಲ್ಲಿ ಬಡತನ ರೇಖೆಗಿಂತ ಕೆಳಗಿನ ಐದು ಕೋಟಿ ಕುಟುಂಬಗಳಿಗೆ ಅನಿಲ ಸಂಪರ್ಕ ನೀಡುವ ಗುರಿಯನ್ನು ಹೊಂದಲಾಗಿದೆ.
ಪ್ರಧಾನಮಂತ್ರಿ ಉಜ್ವಲ ಯೋಜನೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು.
ಪ್ರಧಾನಮಂತ್ರಿ ಉಜ್ವಲ ಯೋಜನಗೆ ಅರ್ಜಿಗಳನ್ನು ಸಲ್ಲಿಸಲು ಈ ಕೆಳಗಿನ ದಾಖಲೆಗಳು ಕಡ್ಡಾಯವಾಗಿ ಇರಬೇಕು.
1.ಆಧಾರ್ ಕಾರ್ಡ್ (Aadhaar card).
2.ಮೊಬೈಲ್ ನಂಬರ್ (Mobil number ).
3.ಬ್ಯಾಂಕ್ ಪಾಸ್ ಬುಕ್ (Bank pass book).
4.ಅರ್ಜಿಧಾರರು ಮಹಿಳೆಯರು ಆಗಿರಬೇಕು.
5.BPL ರೇಷನ್ ಕಾರ್ಡ್ ಹೊಂದಿರಬೇಕು.
6.ವಿಳಾಸದ ಪುರಾವೆ ( ಅಂದರೆ ಉದ್ಯೋಗಕ್ಕಾಗಿ ಬೇರೆ ಕಡೆ ವಾಸವಿದ್ದರೆ ).
ಈ ಎಲ್ಲಾ ದಾಖಲೆ ನೀಡಿ ಉಚಿತವಾಗಿ LPG ಗ್ಯಾಸ್ ಕನೆಕ್ಷನ್ ಪಡೆಯಬಹುದು. ಅರ್ಜಿಗಳನ್ನು ನಿಮ್ಮ ಹತ್ತಿರದ ಗ್ಯಾಸ್ ವಿತರಣಾ ಕೇಂದ್ರಕ್ಕೆ ಭೇಟಿ ನೀಡಿ ಆನ್ಲೈನ್ ನಲ್ಲಿ ಸಲ್ಲಿಸಬೇಕು.
ಪ್ರಧಾನಮಂತ್ರಿ ಉಜ್ವಲ ಯೋಜನೆ ಯ ಲಾಭಗಳು.
ಪ್ರಧಾನಮಂತ್ರಿ ಉಜ್ವಲ ಯೋಜನೆ ಒಂದು ಮಹತ್ವದ ಯೋಜನೆಯಾಗಿದೆ. BPL ಕುಟುಂಬಗಳಿಗೆ ಉಚಿತವಾಗಿ ಅನಿಲ ಸಂಪರ್ಕ ನೀಡುವ ಯೋಜನೆ. ಈ ಯೋಜನೆಯಿಂದ ಹಲವಾರು ಕುಟುಂಬಗಳಿಗೆ ಸಹಾಯವಾಗಿದೆ. ಬಡತನ ರೇಖೆಗಿಂತ ಕೆಳಗಿನ ಕುಟುಂಬ ಗ್ಯಾಸ್ ಕನೆಕ್ಷನ್ ಪಡೆದಿದೆ. ಈ ಯೋಜನೆಯ ಲಾಭಗಳನ್ನು ನೋಡೋಣ.
ಈ ಯೋಜನೆಗೆ ಕೇಂದ್ರ ಸರ್ಕಾರ ಆರ್ಥಿಕ ಸಹಾಯ ನೀಡುತ್ತದೆ.ಅಂದರೆ ಸರ್ಕಾರ ನಗದು ಠೇವಣಿ ಇಡುತ್ತದೆ. BPL ಮತ್ತು ಅಂಥತ್ಯೋದಯ ರೇಷನ್ ಕಾರ್ಡ್ ಇರುವ ಕುಟುಂಬಗಳು ಈ ಸೌಲಭ್ಯ ಪಡೆಯಬಹುದು. ಹೋಗೆ ಮುಕ್ತ ಗ್ರಾಮೀಣ ಪ್ರದೇಶ ನಿರ್ಮಿಸಲು ಈ ಯೋಜನೆ ಸಹಾಯವಾಗಲಿದೆ. ಗ್ರಾಮೀಣ ಮಹಿಳೆಯರ ಅರೋಗ್ಯ ಸುಧಾರಿಸುವಲ್ಲಿ ಮಹತ್ವದ ಕೆಲಸ ನಿರ್ವಹಿಸುತ್ತದೆ.
ಸಿಲಿಂಡರ್ ಭದ್ರಾತಾ ಠೇವಣಿ ರೂ 1250. ಹಾಗೂ 5ಕೆಜಿ ಗೆ ರೂ 800 ಸರ್ಕಾರ ಭರಿಸುತ್ತದೆ. ಹಾಗೆ ರೆಗ್ಯುಲಟರ್, ಪಾಸ್ ಬುಕ್ ಎಲ್ಲಾ ರೀತಿಯ ಸಹಾಯವನ್ನು ಸರ್ಕಾರ ಮಾಡುತ್ತದೆ.
ಹೆಚ್ಚಿನ ಮಾಹಿತಿಯನ್ನು ಪಡೆಯಲು https://www.pmuy.gov.in ಗೆ ಭೇಟಿ ಮಾಡಿ.
ಈ ಯೋಜನೆ 2016 ರಲ್ಲಿ ಪ್ರಾರಂಭ ಮಾಡಿ. 2017 ರ ಹೊತ್ತಿಗೆ ಎಪ್ಪತ್ತು ಲಕ್ಷ ಕುಟುಂಬಗಳಿಗೆ ಅನಿಲ ಸಂಪರ್ಕ ಕಲ್ಪಿಸಲಾಗಿದೆ.
ಪ್ರಧಾನಮಂತ್ರಿ ಉಜ್ವಲ ಯೋಜನೆ ಬಗ್ಗೆ ಕೇಳಲಾದ ಪ್ರಶ್ನೆಗಳು FAQs.
ಪ್ರಧಾನಮಂತ್ರಿ ಉಜ್ವಲ ಯೋಜನೆ ಗೆ ಯಾರು ಅರ್ಹರು?.
ದೇಶದಲ್ಲಿ ವಾಸಿಸುವ, ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳು ಅಂದರೆ BPL ರೇಷನ್ ಕಾರ್ಡ್ ಹೊಂದಿರುವ ಕುಟುಂಬಗಳು ಈ ಯೋಜನೆ ಲಾಭ ಪಡೆಯಬಹುದು. ಮಹಿಳೆಯರು ಅರ್ಜಿಗಳನ್ನು ಸಲ್ಲಿಸಿ ಈ ಯೋಜನೆಯನ್ನು ಪಡೆಯಬಹುದು
ಪ್ರಧಾನಮಂತ್ರಿ ಉಜ್ವಲ ಯೋಜನೆ ಯ ಪಯೋಜನ ಏನು?.
ಈ ಯೋಜನೆಯ ಮುಖ್ಯ ಗುರಿ BPL ಕುಟುಂಬಗಳಿಗೆ ಅನಿಲ ಸಂಪರ್ಕ ನೀಡುವುದು. ಪ್ರಯೋಜನ ಎಂದರೆ ಉಚಿತವಾಗಿ ಗ್ಯಾಸ್ ಕನೆಕ್ಷನ್ ಪಡೆಯಬಹುದು.
ಪ್ರಧಾನಮಂತ್ರಿ ಉಜ್ವಲ ಯೋಜನೆ ಗೆ ಅರ್ಜಿಗಳನ್ನು ಸಲ್ಲಿಸುವುದು ಹೇಗೆ?.
ಈ ಯೋಜನೆಗೆ ಅರ್ಜಿಗಳನ್ನು ಸಲ್ಲಿಸಲು ನಿಮ್ಮ ಹತ್ತಿರದ ಗ್ಯಾಸ್ ವಿತರಣಾ ಆಫೀಸ್ ಗೆ ಭೇಟಿ ಮಾಡಬಹುದು ಅಥವಾ ಅಧಿಕೃತ ವೆಬ್ಸೈಟ್ https://pmuy. gov. in ಗೆ ಭೇಟಿ ಮಾಡಿ.
ಒಟ್ಟಾರೆಯಾಗಿ ಈ ಯೋಜನೆ ಒಂದು ಮಹತ್ವದ ಗ್ರಾಮೀಣ ಯೋಜನೆಯಾಗಿದೆ. ಗ್ರಾಮೀಣ ಮಹಿಳೆಯರು ಮತ್ತು ಮಕ್ಕಳು ಅರೋಗ್ಯದಿಂದ ಇರಲು ಇದು ಸಹಾಯವಾಗಿದೆ.