Tharak7star

ಪ್ರಧಾನಮಂತ್ರಿ ಆವಾಸ್ ಯೋಜನೆ (PMAY) 2024.Free

ಪ್ರಧಾನಮಂತ್ರಿ ಆವಾಸ್ ಯೋಜನೆ

ಪ್ರಧಾನಮಂತ್ರಿ ಆವಾಸ್ ಯೋಜನೆ ನಗರ ಮತ್ತು ಗ್ರಾಮೀಣ ಎಂಬ ಎರಡು ವಿಧದಲ್ಲಿ ಜನರಿಗೆ ವಸತಿ ಕಲ್ಪಿಸಲಾಗುವುದು. ಈ ಯೋಜನೆಯನ್ನು 2022 ರ ವೇಳೆಗೆ ಎಲ್ಲರಿಗೂ ಮನೆಗಳನ್ನು ಒದಗಿಸುವ ಗುರಿಯೊಂದಿಗೆ 2015 ರಲ್ಲಿ ಪ್ರಾರಂಭಿಸಲದ ವಸತಿ ಯೋಜನೆಯಾಗಿದೆ. ಇದು ವಿಶ್ವದ ದೊಡ್ಡ ವಸತಿ ಯೋಜನೆಯಾಗಿ ಪ್ರಸಿದ್ದಿಯಾಗಿದೆ. ಭಾರತದಂತ ವಿಶಾಲ ಮತ್ತು ವೈವಿಧ್ಯಮಯ ದೇಶದಲ್ಲಿ ಎಲ್ಲರಿಗೂ ವಸತಿ ಕಲ್ಪಿಸುವುದು ಕಷ್ಟದ ಕೆಲಸವೇ ಆಗಿದೆ.

ಮೂಲಭೂತ ಮಾನವನ ಅಗತ್ಯ ಮತ್ತು ಸಾಮಾಜಿಕ, ಆರ್ಥಿಕ, ಅಭಿವೃದ್ಧಿಗೆ ಮೂಲಧಾರವಾಗಿ ಆಶ್ರಯದ ಪ್ರಾಮುಖ್ಯತೆಯನ್ನು ಗುರುತಿಸಿ, ಭಾರತ ಸರ್ಕಾರವು 2015 ರಲ್ಲಿ ಪ್ರಧಾನಮಂತ್ರಿ ಆವಾಸ್ (PMAY) ಯೋಜನೆಯನ್ನು ಪ್ರಾರಂಭಿಸಲಾಯಿತು.ಈ ಮಹತ್ವಕಾಂಕ್ಷೆ ಯೋಜನೆಯು ಎಲ್ಲಾ ಅರ್ಹ ಫಲಾನುಭವಿಗಳಿಗೆ ವರ್ಷದೊಳಗೆ ವಸತಿ ಕಲ್ಪಿಸುವ ಗುರಿಯನ್ನು ಹೊಂದಿದೆ.

ಭಾರತದಲ್ಲಿ ವಸತಿ ಸಮಸ್ಯೆಯನ್ನು ಪರಿಹರಿಸುವಲ್ಲಿ ಈ ಯೋಜನೆಯ ಕಾರ್ಯವನ್ನು ನೋಡೋಣ. ಈ ಲೇಖನದಲ್ಲಿ ನಾವು PMAY ( ನಗರ ಮತ್ತು ಗ್ರಾಮೀಣ ) ಎಂದರೇನು?, ಅದರ ಪ್ರಯೋಜನ, ಅರ್ಜಿ ಸಲ್ಲಿಸುವುದು ಹೇಗೆ?, ಎಲ್ಲಿ, ಯಾವ ಯಾವ ದಾಖಲೆಗಳು ಬೇಕು, ಯಾರು ಅರ್ಹರು ಎಂಬುದನ್ನು ತಿಳಿದುಕೊಳ್ಳೋಣ.

ಪ್ರಧಾನಮಂತ್ರಿ ಆವಾಸ್ ಯೋಜನೆ (PMAY) ಎಂದರೇನು?.

ಪ್ರಧಾನಮಂತ್ರಿ ಆವಾಸ್ ಯೋಜನೆ ಎಂದರೆ ಇದು ಒಂದು ವಸತಿ ಯೋಜನೆಯಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶದ ಜನರಿಗೆ ಕೈಗೆಟುಕುವ ಹಾಗೆ ಮನೆಗಳನ್ನು ನಿರ್ಮಿಸಿ ಕೊಡುವುದು ಅಂದರೆ ಆರ್ಥಿಕ ಸಹಾಯ ಮಾಡುವುದು ಇದರ ಪ್ರಮುಖ ಗುರಿಯಾಗಿದೆ. ಈ ಯೋಜನೆಯು ಎರಡು ಘಟಕಗಳಲ್ಲಿ ಕೆಲಸ ಮಾಡುತ್ತದೆ.

PMAY ನಗರ ಮತ್ತು PMAY ಗ್ರಾಮೀಣ ಎಂಬ ಎರಡು ಘಟಕಗಳಿದ್ದು, ಗ್ರಾಮೀಣ ಘಟಕವು ಗ್ರಾಮೀಣ ಪ್ರದೇಶದ ಜನರಿಗೆ ವಸತಿ ಕಲ್ಪಿಸುವ ಗುರಿಯನ್ನು ಹೊಂದಿದೆ ಹಾಗೂ ನಗರ ಘಟಕವು ನಗರ ಪ್ರದೇಶದ ಜನರಿಗೆ ವಸತಿ ಕಲ್ಪಿಸುವ ಗುರಿಯನ್ನು ಹೊಂದಿದೆ. ಸಮಾಜದ ಆರ್ಥಿಕ ದುರ್ಬಲ ವರ್ಗಗಳು (EWS), ಕಡಿಮೆ ಆದಾಯ ಗುಂಪುಗಳು (LIG) ಮತ್ತು ಮಾಧ್ಯಮ ಆದಾಯ ಗುಂಪುಗಳು (MIG) ಈ ಎಲ್ಲಾ ವರ್ಗದ ಜನರಿಗೂ ವಸತಿ ಕಲ್ಪಿಸುವ ಗುರಿಯನ್ನು ಹೊಂದಲಾಗಿದೆ.

ಪ್ರಧಾನಮಂತ್ರಿ ಆವಾಸ್ ಯೋಜನೆ (ನಗರ ) PMAY-U ಬಗ್ಗೆ ಮಾಹಿತಿ.

ಪ್ರಧಾನಮಂತ್ರಿ ಆವಾಸ್ ಯೋಜನೆ (PMAY-U) ನಗರ ಘಟಕದ ಬಗ್ಗೆ ತಿಳಿಯೋಣ. ಈ ಘಟಕದ ಮುಖ್ಯ ಉದ್ದೇಶ ನಗರ ಪ್ರದೇಶದ ಜನರಿಗೆ ವಸತಿ ಕಲ್ಪಿಸುವುದು. 2015 ರಲ್ಲಿ ಪ್ರಾರಂಭವಾಯಿತು. ಇದರಲ್ಲಿ ನಗರ ಪ್ರದೇಶದ ಜನರಿಗೆ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸ್ಕೀಮ್ (Credit Linked subsidy scheme ) CLSS ಮೂಲಕ 2.65 ಲಕ್ಷ ರೂಪಾಯಿಗಳನ್ನು ಮನೆ ನಿರ್ಮಿಸಲು, ಖರೀದಿಸಲು ಅಥವಾ ಮರು ನಿರ್ಮಿಸಲು ಆರ್ಥಿಕ ಸಹಾಯ ನೀಡಲಾಗುತ್ತದೆ.

ಈ ಯೋಜನೆಯ ಅರ್ಹ ಫಲಾನುಭವಿಗಳೆಂದರೆ, ಸಮಾಜದ ಆರ್ಥಿಕ ದುರ್ಬಲ ವರ್ಗ (EWS), ಕಡಿಮೆ ಆದಾಯದ ವರ್ಗ (LIG) ಮತ್ತು ಮಾಧ್ಯಮ ಆದಾಯದ ವರ್ಗ (MIG) ಹೀಗೆ ಈ ವರ್ಗದ ಜನರಿಗೆ ವಸತಿ ಕಲ್ಪಿಸುವ ಗುರಿಯನ್ನು ಹೊಂದಲಾಗಿದೆ.

ಪ್ರಧಾನಮಂತ್ರಿ ಆವಾಸ್ ಯೋಜನೆ ( PMAY-G ) ಗ್ರಾಮೀಣ ಬಗ್ಗೆ ಮಾಹಿತಿ.

ಪ್ರಧಾನಮಂತ್ರಿ ಆವಾಸ್ ಯೋಜನೆ (PMAY-G) ಯ ಇನೊಂದು ಘಟಕವಾಗಿ ಕೆಲಸ ನಿರ್ವಹಿಸುತ್ತದೆ. ಈ ಘಟಕವು ಗ್ರಾಮೀಣ ಪ್ರದೇಶದ ಜನರಿಗೆ ವಸತಿ ಕಲ್ಪಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯನ್ನು ಹಿಂದೆ ಇಂದಿರಾ ಆವಾಸ್ ಯೋಜನೆ ಎಂದು ಕರೆಯಲಾಗಿದೆ. 2016 ರಲ್ಲಿ ಮರು ನಾಮಕರಣ ಮಾಡಲಾಗಿದೆ. ಇದು ಭಾರತ ದೇಶದ ಎಲ್ಲಾ ಗ್ರಾಮೀಣ ಪ್ರದೇಶದ ಜನರಿಗೆ ವಸತಿ ಕಲ್ಪಿಸಿ ಕೊಡಲು ನೇರವಾಗುತ್ತದೆ.

ಈ ಯೋಜನೆ ಪ್ರಮುಖ ಉದ್ದೇಶ ಸಮಾಜದ ವಸತಿ ರಹಿತ ಮತ್ತು ಮರು ನಿರ್ಮಾಣ ಮಾಡುವ ವರ್ಗಗಳಿಗೆ ಆರ್ಥಿಕ ಸಹಾಯ ನೀಡುವುದು.ಇದರಲ್ಲಿ 1.20 ರಿಂದ 1.30 ಲಕ್ಷ ರೂಪಾಯಿ ವರೆಗೆ ಸಹಾಯಧನ ನೀಡಲಾಗುವುದು.

ಪ್ರಧಾನಮಂತ್ರಿ ಆವಾಸ್ ಯೋಜನೆ ಗೆ ಅರ್ಜಿ ಸಲ್ಲಿಸುವ ವಿಧಾನ ಮತ್ತು ಯಾರು ಅರ್ಹರು.

ಪ್ರಧಾನಮಂತ್ರಿ ಆವಾಸ್ ಯೋಜನೆ ಗೆ ಅರ್ಜಿ ಸಲ್ಲಿಸುವ ವಿಧಾನವನ್ನು ತಿಳಿದುಕೊಳ್ಳೋಣ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಸರ್ಕಾರದ ಅಧಿಕೃತ ವೆಬ್ಸೈಟ್ https://pmay.gov.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮೊದಲು ಬೇಕಾಗಿರುವ ದಾಖಲೆಗಳನ್ನು ರೆಡಿಮಾಡಿಕೊಂಡು ಇರಬೇಕು.

ಈ ಯೋಜನೆಗೆ ಅರ್ಜಿ ಸಲ್ಲಿಸಲು ನಗರ ಪ್ರದೇಶದ ಜನರು ಸರ್ಕಾರದ ಅಧಿಕೃತ ವೆಬ್ಸೈಟ್ https://pmayurban.gov. in ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.

ಗ್ರಾಮೀಣ ಪ್ರದೇಶದ ಜನರು ಅರ್ಜಿಗಳನ್ನು ಸಲ್ಲಿಸಲು ಸರ್ಕಾರದ ಅಧಿಕೃತ ವೆಬ್ಸೈಟ್ https://pmayg.nic.in ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.

ಈ ಯೋಜನೆ ಗೆ ಅರ್ಜಿಗಳನ್ನು ಸಲ್ಲಿಸಲು ಯಾರು ಅರ್ಹರು ಎಂದರೆ, ಸಮಾಜದ ಆರ್ಥಿಕ ದುರ್ಬಲ ವರ್ಗಗಳು (EWS), ಕಡಿಮೆ ಆದಾಯ ವರ್ಗಗಳು (LIG) ಮತ್ತು ಮಾಧ್ಯಮ ಆದಾಯ ವರ್ಗಗಳು (MIG) ಇವರು ಅರ್ಹತೆಯನ್ನು ಹೊಂದಿರುತ್ತಾರೆ. ವಸತಿ ರಹಿತ ಮತ್ತು ಮರು ನಿರ್ಮಾಣ ಮಾಡುವ ಎಲ್ಲಾ ವರ್ಗದ ಜನರು ಈ ಸೌಲಭ್ಯ ಪಡೆಯಬಹುದು.

PMAY ಅರ್ಹತಾ ಮಾನದಂಡಗಳು ಆದಾಯದ ವರ್ಗಗಳು, ಪೌರತ್ವ, ಕುಟುಂಬದ ಮನೆಯ ಮಾಲೀಕತ್ವ, ಇತ್ಯಾದಿ ಗಳನ್ನು ಹೊಂದಿರುತ್ತದೆ. ಯಾವುದೇ ಸರ್ಕಾರಿ ವಸತಿ ಯೋಜನೆ ಪಡೆದಿರಬಾರದು.

ಪ್ರಧಾನಮಂತ್ರಿ ಆವಾಸ್ ಯೋಜನೆ ಗೆ ಅರ್ಜಿಗಳನ್ನು ಸಲ್ಲಿಸಲು ಬೇಕಾಗುವ ದಾಖಲೆಗಳು.

ಪ್ರಧಾನಮಂತ್ರಿ ಆವಾಸ್ ಯೋಜನೆ ಗೆ ಅರ್ಜಿಗಳನ್ನು ಸಲ್ಲಿಸಲು ಕೆಲವು ದಾಖಲೆಗಳು ಕಡ್ಡಾಯವಾಗಿ ಇರಬೇಕು. ವಸತಿ ಸೌಲಭ್ಯ ಪಡೆಯಲು ಈ ದಾಖಲೆಗಳು ಬೇಕು.

1.ಆಧಾರ್ ಕಾರ್ಡ್ (Aadhaar card).

2.ರೇಷನ್ ಕಾರ್ಡ್ (Ration card ).

3.ಚುನಾವಣಾ ಗುರುತಿನ ಚೀಟಿ (Election card).

4.ಬ್ಯಾಂಕ್ ಪಾಸ್ ಬುಕ್ (Bank pass book).

5.ಆದಾಯ ಪ್ರಮಾಣ ಪತ್ರ. (Income certificate ).

PAMY ಯೋಜನೆಯಿಂದ ವಸತಿ ಸಹಾಯಧನ ಪಡೆಯಲು ಈ ದಾಖಲೆಗಳು ಹೊಂದಿರಬೇಕು.

ಪ್ರಧಾನಮಂತ್ರಿ ಆವಾಸ್ ಯೋಜನೆ ಯ ಪ್ರಮುಖ ಉದ್ದೇಶಗಳು.

ಪ್ರಧಾನಮಂತ್ರಿ ಆವಾಸ್ ಯೋಜನೆ ಯ ಪ್ರಮುಖ ಉದ್ದೇಶ ವಸತಿ ಕಲ್ಪಿಸುವುದು ಸಮಾಜದ ವಸತಿ ರಹಿತರಿಗೆ ಮತ್ತು ಮನೆ ಮರು ನಿರ್ಮಾಣ ಮಾಡುವವರಿಗೆ ಆರ್ಥಿಕ ಸಹಾಯ ನೀಡುವುದು.

1. “ಅಂತರ್ಗತ ವಸತಿ”.

ಈ ಯೋಜನೆಯು ಸಮಾಜದ ಎಲ್ಲಾ ವರ್ಗಗಳಿಗೆ, ವಿಶೇಷವಾಗಿ ಆರ್ಥಿಕವಾಗಿ ದುರ್ಬಲ ಹೊಂದಿರುವ ಜನರಿಗೆ, ಕಡಿಮೆ ಆದಾಯ ಹೊಂದಿದ ಜನರಿಗೆ ವಸತಿ ನೀಡುವ ಗುರಿಯನ್ನು ಹೊಂದಿದೆ.

2.”ಕೈಗೆಟುಕುವ ದರದಲ್ಲಿ ವಸತಿ”.

ಈ ಯೋಜನೆಯು ಸರ್ಕಾರದ ಆರ್ಥಿಕ ನೆರವಿನ ಮೂಲಕ ಅರ್ಹ ಫಲಾನುಭವಿಗಳಿಗೆ ಕೈಗೆಟುಕುವ ವಸತಿ ಪರಿಹಾರಗಳನ್ನು ನೀಡುವ ಗುರಿಯನ್ನು ಹೊಂದಿದೆ.

3.”ನಗರ ನವೀಕರಣ”.

ನಗರ ಪ್ರದೇಶದಲ್ಲಿ ಕೈಗೆಟುಕುವ ವಸತಿ ಮತ್ತು ಮುಲಾಸೌಕರ್ಯ ಒದಗಿಸುವ ಮೂಲಕ ನಗರ ಪ್ರದೇಶದ ಅಭಿವೃದ್ಧಿಯ ಗುರಿಯನ್ನು ಹೊಂದಿದೆ.

4.”ಎಲ್ಲರಿಗೂ ವಸತಿ”.

ಪ್ರತಿಯೊಬ್ಬ ಭಾರತೀಯ ನಾಗರೀಕರಿಗೂ ಯೋಗ್ಯ ಮತ್ತು ಕೈಗೆಟುಕುವ ವಸತಿ ನೀಡುವುದು ಅಂದರೆ ಸಹಾಯದನ ನೀಡುವುದು.

5.”ಸ್ಲಮ್ ಪುನರ್ವಸತಿ”.

ಅರ್ಹ ಕೊಳಗೇರಿ ನಿವಾಸಿಗಳಿಗೆ ಪಕ್ಕಾ ಮನೆ ನಿರ್ಮಾಣಕ್ಕೆ ಹಣಕಾಸಿನ ನೆರವು ನೀಡುವ ಮೂಲಕ ಸ್ಲಮ್ ಪ್ರಸರಣ ಸಮಸ್ಯೆ ಪರಿಹರಿಸುವುದು.

6.”ಆರ್ಥಿಕ ದುರ್ಬಲ ವರ್ಗಗಳಿಗೆ ವಸತಿ”.

ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ EWS, ಕಡಿಮೆ ಆದಾಯ ವರ್ಗ ಮತ್ತು ಮಾಧ್ಯಮ ಆದಾಯದ ವರ್ಗಗಳಿಗೆ ವಸತಿ ನಿರ್ಮಿಸಲು ಸಹಾಯದನ ನೀಡುವುದು.

7.”ಪಾಲುಧಾರಿಕೆ (AHP ) ಮತ್ತು ಫಲಾನುಭವಿ ನೇತೃತ್ವದ ನಿರ್ಮಾಣ (BLC) ಗಳಲ್ಲಿ ಕೈಗೆಟುಕುವ ವಸತಿ ಪ್ರಚಾರ”.

ಫಾಲುದಾರಿಕೆ ಮತ್ತು ಫಲಾನುಭವಿ ನೇತೃತ್ವದ ನಿರ್ಮಾಣದ ಮಾದರಿಗಳ ಮೂಲಕ ವಸತಿ ಯೋಜನೆಯಲ್ಲಿ ಸಾರ್ವಜನಿಕ ಮತ್ತು ಖಾಸಗಿ ವಲಯದ ಜನರಿಗೆ ಉತ್ತೇಜನ ನೀಡುವುದು.

ಹೆಚ್ಚಿನ ಮಾಹಿತಿ ಪಡೆಯಲು https://pmay.gov.in ಭೇಟಿ ನೀಡಿ.

ಪ್ರಧಾನಮಂತ್ರಿ ಆವಾಸ್ ಯೋಜನೆ ಯ ಅರ್ಹತ ಮಾನದಂಡಗಳು.

ಪ್ರಧಾನಮಂತ್ರಿ ಆವಾಸ್ ಯೋಜನೆ ಗಾಗಿ ಅರ್ಹತ ಮಾನದಂಡಗಳು ಫಲಾನುಭವಿಯ ಆದಾಯ ವರ್ಗವನ್ನು ಅವಲಂಬಿಸಿ ಬದಲಾಗುತ್ತದೆ.

  • ಆರ್ಥಿಕವಾಗಿ ದುರ್ಬಲ ವರ್ಗಗಳು (EWS): ಮನೆಯ ಆದಾಯ ವರ್ಷಕ್ಕೆ 3 ಲಕ್ಷ.
  • ಕಡಿಮೆ ಆದಾಯ ಗುಂಪುಗಳು (LIG): ಮನೆಯ ಆದಾಯ 6 ಲಕ್ಷ.
  • ಮಾಧ್ಯಮ ಆದಾಯದ ಗುಂಪುಗಳು (MIG): ಮನೆಯ ಆದಾಯ 18 ಲಕ್ಷ.

ಪಲಾನುಭವಿಗೆ 18 ವರ್ಷ ಆಗಿರಬೇಕು.

ಪ್ರಧಾನಮಂತ್ರಿ ಆವಾಸ್ ಯೋಜನೆ ಯ ಪರಿಣಾಮಗಳು.

ಈ ಯೋಜನೆ ಕೆಲವು ಪ್ರಮುಖ ಪರಿಣಾಮಗಳನ್ನು ನೋಡೋಣ.

1. “ಮನೆಯಿಲ್ಲದವರ ಕಡಿತ” : ಲಕ್ಷಾಂತರ ಕುಟುಂಬಗಳಿಗೆ ಕೈಗೆಟುಕುವ ದರದಲ್ಲಿ ವಸತಿ ಒದಗಿಸುವ ಮೂಲಕ ಭಾರತದಲ್ಲಿ ಮನೆ ಎಲ್ಲದವರನ್ನು ಕಡಿಮೆ ಮಾಡಲು ಗಣನೀಯ ಕೊಡುಗೆ ನೀಡುತ್ತದೆ.

2.”ಜೀವನ ಪರಿಸ್ಥಿತಿಗಳಲ್ಲಿ ಸುಧಾರಣೆ” : ಯೋಜನೆಯು ಫಲಾನುಭವಿಗಳಿಗೆ ಮೂಲ ಸೌಕರ್ಯ ಒದಗಿಸುವ ಮೂಲಕ ಜೀವನ ಮಟ್ಟದಲ್ಲಿ ಸುಧಾರಣೆ ಮಾಡಲು ಸಹಾಯವಾಗಿದೆ. ಪಕ್ಕಾ ಮನೆಯ ನಿರ್ಮಾಣದಿಂದ ಜೀವನ ಸುಧಾರಣೆ ಹೊಂದಿದೆ.

3. “ಮಹಿಳಾ ಸಬಲೀಕರಣ” :  ಮಹಿಳಾ ಸಬಲೀಕರಣಕ್ಕೆ ಸಹಾಯವಾಗಿದೆ. ಮಹಿಳಾ ಕುಟುಂಬಗಳಿಗೆ ವಸತಿ ಕಲ್ಪಿಸುವ ಮೂಲಕ ಅವರ ಅಭಿವೃದ್ಧಿ ಗೆ ಕಾರಣವಾಗಿದೆ.

4. “ಆರ್ಥಿಕ ಬೆಳವಣಿಗೆ “:ಮನೆ ನಿರ್ಮಾಣ ಕ್ಷೇತ್ರದಲ್ಲಿ ಉದ್ಯೋಗ ಒದಗಿಸಿ ಆರ್ಥಿಕ ಸಹಾಯ ಮಾಡಿದ ಹಾಗೆ ಆಗಿದೆ.

5.”ಗ್ರಾಮೀಣಭಿವೃದ್ಧಿ” : ಗ್ರಾಮೀಣ ಜನರಿಗೆ ವಸತಿ ಕಲ್ಪಿಸಿ ಗ್ರಾಮದ ಅಭಿವೃದ್ಧಿಗೆ ಸಹಾಯ ಮಾಡಿದ ಹಾಗೆ ಆಗಿದೆ. ಇದರಿಂದ ಗ್ರಾಮ ಪ್ರದೇಶದ ಅಭಿವೃದ್ಧಿಯಾಗಿದೆ.

ಒಟ್ಟಾರೆ ಸಾರಾಂಶ ನೋಡುವುದಾದರೆ, ಈ ಯೋಜನೆ ಒಂದು ಮಹತ್ವದ ಯೋಜನೆಯಾಗಿದೆ. ವಸತಿ ರಹಿತರಿಗೆ ಮತ್ತು ಮನೆ ದುರಸ್ತಿ ಮಾಡುವವರಿಗೆ ಆರ್ಥಿಕ ಸಹಾಯ ಮಾಡಿ, ಸಮಾಜದ ಅಭಿವೃದ್ಧಿಗೆ, ದೇಶದ ಅಭಿವೃದ್ಧಿಗೆ, ಗ್ರಾಮದ ಅಭಿವೃದ್ಧಿಗೆ ಸಹಾಯ ಮಾಡಿದ ಹಾಗೆ ಆಗಿದೆ. ಪ್ರಾರಂಭದಿಂದಲೂ PMAY ಲಕ್ಷಾಂತರ ಭಾರತೀಯರ ವಸತಿ ಅಗತ್ಯಗಳನ್ನು ಪರಿಹರಿಸುವಲ್ಲಿ ಗಮನರ್ಹ ಬೆಳವಣಿಗೆ ಮಾಡಿದಂತಾಗಿದೆ.

ಹಣಕಾಸಿನ ನೆರವು ಮತ್ತು ಸಬ್ಸಿಡಿ ಒದಗಿಸುವ ಮೂಲಕ ಯೋಜನೆಯು ಕಡಿಮೆ ಆದಾಯದ ಕುಟುಂಬಗಳಿಗೆ ಮನೆ ಒಡೆತನದ ಹಕ್ಕು ನೀಡಲಾಗಿದೆ.

ಪ್ರಧಾನಮಂತ್ರಿ ಆವಾಸ್ ಯೋಜನೆ ಯ FAQs ಪ್ರಶ್ನೆಗಳು.

ಪ್ರಧಾನಮಂತ್ರಿ ಆವಾಸ್ ಯೋಜನೆಯ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು.

1.PMAY ಎಂದರೇನು?.

PMAY ಒಂದು ವಸತಿ ಯೋಜನೆಯಾಗಿದ್ದು. ಭಾರತ ದೇಶದಲ್ಲಿ ಮನೆ ಇಲ್ಲದವರಿಗೆ ಪಕ್ಕಾ ಮನೆ ನಿರ್ಮಾಣ ಮಾಡಿ ಕೊಡುವ ಯೋಜನೆಯಾಗಿದೆ. ಸಮಾಜದ ಆರ್ಥಿಕ ಹಿಂದುಳಿದ ಕುಟುಂಬಗಳಿಗೆ ವಸತಿ ನಿರ್ಮಿಸಲು ಸಹಾಯಧನ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ.

2.PMAY ಯೋಜನೆ ಲಾಭ ಯಾರು ಪಡೆಯಬಹುದು?.

PMAY ಯೋಜನೆ ಆರ್ಥಿಕ ಹಿಂದುಳಿದ ವರ್ಗ, ಕಡಿಮೆ ಆದಾಯ ವರ್ಗ ಮತ್ತು ಮಾಧ್ಯಮ ಆದಾಯ ವರ್ಗಗಳು ಈ ಯೋಜನೆಯ ಲಾಭ ಪಡೆಯಲು ಅರ್ಹರು.

3.PMAY ಯೋಜನೆಯ ಎರಡು ಘಟಕಗಳು ಯಾವುವು?.

PMAY ಯೋಜನೆಯು ಎರಡು ಘಟಕಗಳಲ್ಲಿ ಕೆಲಸ ನಿರ್ವಹಿಸುತ್ತದೆ. 1. PMAY- U ಅಂದರೆ ನಗರ ಪ್ರದೇಶ ವಸತಿ ಯೋಜನೆ. 2. PMAY-G ಅಂದರೆ ಗ್ರಾಮೀಣ ಪ್ರದೇಶದ ವಸತಿ ಯೋಜನೆ.

4.PMAY ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು?.

PMAY ಯೋಜನೆಗೆ ಅರ್ಜಿಗಳನ್ನು ಸಲ್ಲಿಸಲು ಸರ್ಕಾರದ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.

ಲಿಂಕ್ ಹೀಗಿದೆ https:// pmay. gov. in ಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು. ಸಂಪೂರ್ಣ ಮಾಹಿತಿ ಓದಿ ಸರಿಯಾದ ಕ್ರಮದಲ್ಲಿ ಅರ್ಜಿಗಳನ್ನು ಸಲ್ಲಿಸಿ. ಈ ಯೋಜನೆ ವಸತಿ ಗೆ ಸಹಾಯಧನ ನೀಡುವ ಮೂಲಕ ಸಮಾಜದ ಪ್ರಗತಿ ಮತ್ತು ದೇಶದ ಪ್ರಗತಿಯಲ್ಲಿ ಭಾಗವಹಿಸಿದೆ. ಪಕ್ಕಾ ಮನೆ ನಿರ್ಮಾಣದ ಗುರಿಯನ್ನು ಹೊಂದಿದೆ.

Leave a Reply

Your email address will not be published. Required fields are marked *