ಆಧಾರ್ ಕಾರ್ಡ್ ತಿದ್ದುಪಡಿ ಹೇಗೆ ಮಾಡುವುದು. Free 2024.
ಆಧಾರ್ ಕಾರ್ಡ್ ಮಾಹಿತಿ. ನಮಸ್ಕಾರ ಸ್ನೇಹಿತರೆ, ಈ ಲೇಖನದಲ್ಲಿ ನಾವು ಈ ಕಾರ್ಡ್ ಬಗ್ಗೆ ಇರುವ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳೋಣ. ಅಂದರೆ ಆಧಾರ್ ಕಾರ್ಡ್ ತಿದ್ದುಪಡಿ ಮಾಡೋದು ಹೇಗೆ?, ಈ ಕಾರ್ಡ್ ತಿದ್ದುಪಡಿಗೆ ಬೇಕಾಗುವ ದಾಖಾಲೆಗಳು, ಯಾಕೆ ಈ ಕಾರ್ಡ್ ತುಂಬಾ ಮುಖ್ಯ, PVC ಕಾರ್ಡ್ ಪಡೆಯೋದು ಹೇಗೆ?, ಈ ಕಾರ್ಡ್ ನ ಪ್ರಯೋಜನಗಳು ಹೀಗೆ ಎಲ್ಲಾ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
ಈ ಕಾರ್ಡ್ ಬಹು ಮುಖ್ಯ ದಾಖಲೆಗಳಲ್ಲಿ ಒಂದು, ಈ ಒಂದು ವಿಶಿಷ್ಟ ಗುರುತಿನ ಚೀಟಿ ಯಾಗಿದೆ. ಭಾರತ ದೇಶದ ವಿಶಿಷ್ಟ ಗುರುತಿನ ಚೀಟಿ. ಈ ಕಾರ್ಡ್ ಅನ್ನು ನಾವು ಒಂದು identity card ಆಗಿ ಬಳಸಬಹುದು.
ಪ್ರಸ್ತುತ ದಿನಗಳಲ್ಲಿ ಈ ಕಾರ್ಡ್ ಇಲ್ಲದಿದ್ದರೆ ಯಾವುದೇ ಕೆಲಸ ನಡೆಯೋದಿಲ್ಲ. ಈ ಕಾರ್ಡ್ ತಿದ್ದುಪಡಿಗೆ ಹೊಸ ಲಿಂಕ್ ಬಿಡುಗಡೆ ಮಾಡಲಾಗಿದೆ. ಸಾರ್ವಜನಿಕರು ತಾವು ಬಳಸುವ ಮೊಬೈಲ್ ನಿಂದಾನೆ ಈ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಬಹುದು.
ಆಧಾರ್ ಕಾರ್ಡ್ ಏಕೆ ಅಪ್ ಡೇಟ್ ಮಾಡಬೇಕು.
ಆಧಾರ್ ಕಾರ್ಡ್ ಭಾರತದ ಒಂದು ವಿಶಿಷ್ಟ ಗುರುತಿನ ಚೀಟಿಯಾಗಿದ್ದು ಬಹು ಮುಖ್ಯವಾಗಿದೆ.ಈ ಗುರುತಿನ ಚೀಟಿ ಪಡೆದು ಸಮಾರು 10 ವರ್ಷದ ಮೇಲೆ ಆಗಿರುವವರು ಅಪ್ ಡೇಟ್ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.
ತಿದ್ದುಪಡಿ ಮಾಡಲು ಸರ್ಕಾರದಿಂದ ಆಧಾರ್ ನ ಅಧಿಕೃತ ವೆಬ್ಸೈಟ್ ನಲ್ಲಿ ಹೊಸ ಲಿಂಕ್ ಬಿಡುಗಡೆ ಮಾಡಲಾಗಿದೆ. ಅಧಿಕೃತ ವೆಬ್ಸೈಟ್ ಲಿಂಕ್ https://myaadhaar.uidai. gov.in ಆಗಿದ್ದು ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು.
ಈ ಕಾರ್ಡ್ ಏಕೆ ತಿದ್ದುಪಡಿ ಮಾಡಬೇಕೆಂದರೆ ಸರ್ಕಾರದಿಂದ ಸಿಗುವ ಯಾವುದೇ ಸೌಲಭ್ಯ ಪಡೆಯಲು ಕಡ್ಡಾಯವಾಗಿ ತಿದ್ದುಪಡಿ ಮಾಡಲೇಬೇಕು. ಈ ಕಾರ್ಡ್ ಮಾಡಿಸುವಾಗ ನೀಡಿರುವ ಎಲ್ಲಾ ದಾಖಲೆಗಳನ್ನು ಮತ್ತೆ ನೀಡಿ ಅಪ್ ಡೇಟ್ ಮಾಡಬೇಕು. ಆಗ ನಿಮ್ಮ ಕಾರ್ಡ್ ಅಪ್ ಡೇಟ್ ಆಗಿ ನವೀಕರಣ ಆಗುತ್ತದೆ. ಇದರಿಂದ ಸರ್ಕಾರಕ್ಕೆ ಈ ಗುರುತಿನ ಚೀಟಿದಾರರು ಜೀವಂತ ಇರುವ ಬಗ್ಗೆ ಮತ್ತು ಈಗಿನ ಅವರ ಎಲ್ಲಾ ಮಾಹಿತಿ ತಿಳಿಯುತ್ತದೆ.
14 ಮಾರ್ಚ್ 2024 ರ ಒಳಗೆ ಉಚಿತವಾಗಿ ಅಧಿಕೃತ ವೆಬ್ಸೈಟ್ ಮೂಲಕ ತಿದ್ದುಪಡಿ ಮಾಡಿಕೊಳ್ಳಬಹುದು.ನೀವು ಆಧಾರ್ ಕಾರ್ಡ್ ಅನ್ನು ತಿದ್ದುಪಡಿ ಮಾಡದೇ ಹೋದರೆ ಸರ್ಕಾರದಿಂದ ಸಿಗುವ ಸೌಲಭ್ಯದಿಂದ ವಂಚಿತರಾಗುವುದು ಗ್ಯಾರಂಟಿ.ಹಾಗಾಗಿ ಈ ಕಾರ್ಡ್ ಹೊಂದಿ ಈಗಾಗಲೇ 10 ವರ್ಷ ಆಗಿರುವವರು ಈ ಕೂಡಲೇ ತಿದ್ದುಪಡಿ (Up Date) ಮಾಡಿಕೊಳ್ಳಬೇಕು.
ತಮ್ಮ ವೈಯಕ್ತಿಕ ದಾಖಲೆ ಮತ್ತು ವಿಳಾಸದ ದಾಖಲೆಗಳೊಂದಿಗೆ ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ (aadhaar card centre ) ಗೆ ಹೋಗಿ ಅಪ್ ಡೇಟ್ ಮಾಡಿಸಿ. ಕೊನೆಯ ದಿನಾಂಕ 14 ಮಾರ್ಚ್ 2024 ಆಗಿದೆ.
ಆಧಾರ್ ಕಾರ್ಡ್ ತಿದ್ದುಪಡಿಗೆ ಬೇಕಾಗುವ ದಾಖಲೆಗಳು.
ಆಧಾರ್ ಕಾರ್ಡ್ ಭಾರತೀಯ ವಿಶಿಷ್ಟ ಗುರುತಿನ ಚೀಟಿಯ ತಿದ್ದುಪಡಿಗೆ ಈ ಕೆಳಗಿನ ದಾಖಲೆಗಳು ಬೇಕು.
1. ರೇಷನ್ ಕಾರ್ಡ್ (Ration card).
2. ಚುನಾವಣಾ ಗುರುತಿನ ಚೀಟಿ ( Election card).
3.ಪಾಸ್ ಪೋರ್ಟ್ (Pass port).
4. ಸರ್ಕಾರದಿಂದ ಪಡೆದ ಯಾವುದೇ ಗುರುತಿನ ಚೀಟಿ ಅಂದರೆ ಗೆಜೆಟೆಡ್ ಆಫೀಸರ್ ಸಹಿ ಇರುವ ಗುರುತಿನ ಚೀಟಿ ಉದಾಹರಣೆಗೆ ಉದ್ಯೋಗ ಖಾತ್ರಿ ಕಾರ್ಡ್ ಇತ್ಯಾದಿ.
5. ಪ್ಯಾನ್ ಕಾರ್ಡ್ (Pan card ).
6. ಶಾಲಾ ದೃಡೀಕರಣ ಪತ್ರ.
7. ಅಂಕಪಟ್ಟಿ (Marks card).
8. ಡ್ರೈವಿಂಗ್ ಲೇಸೆನ್ಸ್.
ವಿಳಾಸದ ದಾಖಲೆಗಳಾಗಿ ನೀರು ಬಿಲ್ (water bill), ಕರೆಂಟ್ ಬಿಲ್ (electricity bill), ಗ್ಯಾಸ್ ಬಿಲ್ (ಗ್ಯಾಸ್ bill ),ಪೋಸ್ಟ್ ಆಫೀಸ್ ಪಾಸ್ ಬುಕ್ (post office pass book) ಗಳು ಕಾರ್ಯ ನಿರ್ವಹಿಸುತ್ತವೆ.
ಈ ಮೇಲಿನ ಯಾವುದೇ 2 ದಾಖಲೆಗಳನ್ನು ನೀಡಿ ತಿದ್ದುಪಡಿ ಮಾಡಿಕೊಳ್ಳಬಹುದು. ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ ಅಪ್ ಡೇಟ್ ಮಾಡಿಸಬೇಕು.
ಹೆಚ್ಚಿನ ಮಾಹಿತಿ ಪಡೆಯಲು ಭೇಟಿ ನೀಡಿ.https://timesofhindu.co. in
ಆಧಾರ್ ಕಾರ್ಡ್ (PVC Card )ಹೆಚ್ಚು ಸುರಕ್ಷಿತವೇ?, ಹೇಗೆ ಪಡೆದುಕೊಳ್ಳೋದು.
ಆಧಾರ್ ಕಾರ್ಡ್ ಒಂದು ಭಾರತೀಯ ವಿಶಿಷ್ಟ ಗುರುತಿನ ಚೀಟಿಯಾಗಿದ್ದು ಬಹು ಮುಖ್ಯ ದಾಖಲೆಯಾಗಿ ಕಾರ್ಯ ನಿರ್ವಹಿಸುತ್ತದೆ.ಈ ಕಾರ್ಡ್ ಗೆ ಭಾರತ ಸರ್ಕಾರವು ಮಹತ್ವದ ಸ್ಥಾನ ನೀಡಿದೆ.ಯಾವುದೇ ಸರ್ಕಾರಿ ಅಥವಾ ಖಾಸಗಿ ಕಚೇರಿಗಳಲ್ಲಿ ಇದು ಮಹತ್ವದ ಗುರುತಿನ ಚೀಟಿಯಾಗಿ ಕಾರ್ಯ ನಿರ್ವಹಿಸುತ್ತದೆ.
ಈ ಚೀಟಿ ಕಳೆದುಹೋದರೆ ಚಿಂತಿಸುವ ಅವಶ್ಯಕತೆ ಇಲ್ಲ. ನಿಮ್ಮ ಹತ್ತಿರದ Uidai ಕೇಂದ್ರಕ್ಕೆ ತೆರಳಿ 50 ರೂಪಾಯಿ ನೀಡಿ ಇನ್ನೊಂದು ಪ್ರಿಂಟ್ ತೆಗೆದುಕೊಳ್ಳಬಹುದು. ಅದರಲ್ಲಿ ಸ್ಮಾರ್ಟ್ ಕಾರ್ಡ್ PVC card) ತುಂಬಾ ಸುರಕ್ಷಿತವಾಗಿದೆ. ಏಕೆಂದರೆ ನೀವು ಅದನ್ನು ಸೇಫ್ ಆಗಿ ಇರಿಸಿಕೊಳ್ಳಬಹುದು.
ನೀವು ನಿಮ್ಮ ಹತ್ತಿರದ ಯಾವುದೇ ಆನ್ಲೈನ್ ಸೆಂಟರ್ ಗೆ ಹೋಗಿ ಈ ಕಾರ್ಡ್ ಪ್ರಿಂಟ್ ಪಡೆಯಬಹುದು. ಕಡ್ಡಾಯವಾಗಿ ಮೊಬೈಲ್ ನಂಬರ್ ಹೊಂದಿರಬೇಕು ಏಕೆಂದರೆ ನಿಮ್ಮ ಮೊಬೈಲ್ ನಂಬರ್ ಗೆ ಒಂದು OTP ಬರುತ್ತದೆ ಅದನ್ನು ನೀಡಿದ ಮೇಲೆ ಮಾತ್ರ ಪ್ರಿಂಟ್ ತೆಗೆಯಲು ಸಾಧ್ಯ. ಅಥವಾ ನೀವೇ ಖಾದ್ದಾಗಿ uidai ಕೇಂದ್ರಕ್ಕೆ ಭೇಟಿ ನೀಡಿ ನಿಮ್ಮ ಬಯೋಮೆಟ್ರಿಕ್ ನೀಡಿಯು ಸಹ ಕಾರ್ಡ್ ಪ್ರಿಂಟ್ ತೆಗೆದುಕೊಳ್ಳಬಹುದು.
ಹೊಸ ರೇಷನ್ ಕಾರ್ಡ್ ಸಂಪೂರ್ಣ ಮಾಹಿತಿಗಾಗಿ https://tharak7star.com/ರೇಷನ್ ಕಾರ್ಡ್ ಸಂಪರ್ಕಿಸಿ.
ಆಧಾರ್ ಕಾರ್ಡ್ ಮತ್ತು ಮೊಬೈಲ್ ನಂಬರ್ ಲಿಂಕ್ ಮಾಡುವುದು ಹೇಗೆ?. ದಾಖಲೆಗಳು ಮತ್ತು ಪ್ರಯೋಜನ.
ಆಧಾರ್ ಕಾರ್ಡ್ ನೊಂದಿಗೆ ಮೊಬೈಲ್ ನಂಬರ್ ಲಿಂಕ್ ಮಾಡುವುದು ಹೇಗೆ, ಯಾವ ದಾಖಲೆಗಳು ಬೇಕು ಮತ್ತೆ ಪ್ರಯೋಜನಗಳನ್ನು ತಿಳಿಯೋಣ.
ನಿಮ್ಮ ಹತ್ತಿರದ ಆಧಾರ್ ಕೇಂದ್ರಕ್ಕೆ ಹೋಗಿ ಮೊಬೈಲ್ ನಂಬರ್ ಲಿಂಕ್ ಮಾಡಿಸಬಹುದು. ಆಧಾರ್ ನ ಅಧಿಕೃತ ವೆಬ್ಸೈಟ್ ಮೂಲಕ ಲಿಂಕ್ ಮಾಡಿಸಿ.
ಮೊಬೈಲ್ ನಂಬರ್ ಲಿಂಕ್ ಮಾಡಲು ಯಾವ ದಾಖಲೆಗಳು ಬೇಕು ಎಂದರೆ ನಿಮ್ಮ Aadhaar card ಪ್ರತಿ.
ಮೊಬೈಲ್ ನಂಬರ್ ಲಿಂಕ್ ಮಾಡುವುದರಿಂದ ಆಗುವ ಪ್ರಯೋಜನಗಳೆಂದರೆ…
1. ಸರ್ಕಾರಿ ಸೌಲಭ್ಯ ಪಡೆಯಲು ಅಂದರೆ ಯಾವುದೇ ರೀತಿಯ ಸಹಾಯಧನ ಪಡೆಯಲು, OTP ಸೇವೆ ಇತ್ಯಾದಿ.
2. ರೇಷನ್ ಪಡೆಯಲು.
3. ಇ ಆಧಾರಿತ ಸೇವೆ ಪಡೆಯಲು, AEPS ಹಣ ಪಡೆಯಲು, ಹಣ ವರ್ಗಯಿಸಲು ಮೊಬೈಲ್ ನಂಬರ್ ಲಿಂಕ್ ಆಗಿರಬೇಕು. ಈ ಎಲ್ಲಾ ಸೇವೆಗಳನ್ನು ಪಡೆಯಲು ನಿಮ್ಮ ಆಧಾರ್ ಗೆ ಮೊಬೈಲ್ ನಂಬರ್ ಲಿಂಕ್ ಆಗಿರಬೇಕು.
ಒಟ್ಟಾರೆಯಾಗಿ ಭಾರತದಲ್ಲಿ ಈ ಗುರುತಿನ ಚೀಟಿ ಒಂದು ಮಹತ್ವದ ದಾಖಲೆಯಾಗಿ ಕಾರ್ಯ ನಿರ್ವಹಿಸುತ್ತದೆ.ಮತ್ತು ವಿಶಿಷ್ಟ ಗುರುತಿನ ಚೀಟಿಯಾಗಿಯೂ ಕೆಲಸ ಮಾಡುತ್ತದೆ. ವಂದನೆಗಳು